Tag: Shreyas Iyer

  • ಮುಂಬೈ ವಿರುದ್ಧ ಪಂಜಾಬ್‌ಗೆ ಜಯ – ನಾಳೆ ಆರ್‌ಸಿಬಿ Vs ಕಿಂಗ್ಸ್‌ ಫೈನಲ್‌

    ಮುಂಬೈ ವಿರುದ್ಧ ಪಂಜಾಬ್‌ಗೆ ಜಯ – ನಾಳೆ ಆರ್‌ಸಿಬಿ Vs ಕಿಂಗ್ಸ್‌ ಫೈನಲ್‌

    – ಶ್ರೇಯಸ್‌ ಅಯ್ಯರ್‌ ಸ್ಫೋಟಕ ಅರ್ಧಶತಕ
    – 2ನೇ ಬಾರಿ ಫೈನಲ್‌ ಪ್ರವೇಶಿಸಿದ ಪಂಜಾಬ್‌

    ಅಹಮಾದಾಬಾದ್‌: ಕ್ವಾಲಿಫೈಯರ್‌-2ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ರೋಚಕ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಂಜಾಬ್‌ (Punjab Kings) ಐಪಿಎಲ್‌ ಫೈನಲ್‌ಗೆ (IPL Final) ಪ್ರವೇಶಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಬಗ್ಗು ಬಡಿದ ಪಂಜಾಬ್‌ 2ನೇ ಬಾರಿ ಫೈನಲ್‌ಗೆ ತಲುಪಿದ್ದು ನಾಳೆ ಆರ್‌ಸಿಬಿಯನ್ನು (RCB) ಎದುರಿಸಲಿದೆ

    ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ಜಯ ಸಾಧಿಸಿತು.

    ಪ್ರಿಯಾಂಶ್‌ ಆರ್ಯ 20 ರನ್‌, ಪ್ರಭುಸಿಮ್ರಾನ್‌ ಸಿಂಗ್‌ 6 ರನ್‌, ಬುಮ್ರಾ ಮೊದಲ ಓವರ್‌ನಲ್ಲಿ 20 ರನ್‌ ಹೊಡೆದ ಜೋಶ್‌ ಇಂಗ್ಲಿಸ್‌ 38 ರನ್‌(21 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದಾಗ ಪಂಜಾಬ್‌ ಸ್ಕೋರ್‌ 3 ವಿಕಟ್‌ ನಷ್ಟಕ್ಕೆ 72 ರನ್‌ ಗಳಿಸಿತ್ತು. ಇದನ್ನೂ ಓದಿ: ಮುಂಬೈ ಸಂಘಟಿತ ಬ್ಯಾಟಿಂಗ್‌ – ಪಂಜಾಬ್‌ಗೆ 204 ರನ್‌ ಗುರಿ

    ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಶ್ರೇಯಸ್‌ ಅಯ್ಯರ್‌ ಮತ್ತು ನೆಹಲ್‌ ವಧೇರಾ 47 ಎಸೆತಗಳಲ್ಲಿ 84 ರನ್‌ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ವಧೇರಾ 48 ರನ್‌(29 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ನಾಯಕನ ಆಟವಾಡಿದ ಶ್ರೇಯಸ್‌ ಅಯ್ಯರ್‌ ಔಟಾಗದೇ 87 ರನ್‌(41 ಎಸೆತ, 5 ಬೌಂಡರಿ, 8 ಸಿಕ್ಸ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು. ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟ ಶ್ರೇಯಸ್‌ ಅಯ್ಯರ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

     

    11 ವರ್ಷಗಳ ಬಳಿಕ ಫೈನಲ್‌:
    ಪಂಜಾಬ್ ಐಪಿಎಲ್‌ನಲ್ಲಿಎರಡನೇ ಬಾರಿ ಫೈನಲ್‌ ಪ್ರವೇಶಿಸಿದೆ. 11 ವರ್ಷಗಳ ಹಿಂದೆ 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಅಗಿತ್ತು.

  • ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಅಹಮದಾಬಾದ್‌: ಪಂಜಾಬ್‌ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಇಂದು ಕ್ವಾಲಿಫೈಯರ್‌-2 ಕದನ ನಡೆಯಲಿದೆ. ಗೆದ್ದ ತಂಡ ಜೂನ್‌ 3ರಂದು ಆರ್‌ಸಿಬಿ (RCB) ವಿರುದ್ಧ ಟ್ರೋಫಿಗಾಗಿ ಗುದ್ದಾಡಲಿದೆ.

    ಇಂದು ಅಹಮದಾಬಾದ್‌ನಲ್ಲಿ 2ನೇ ಕ್ವಾಲಿಫೈಯರ್ (Qualifier 2 IPL) ಪಂದ್ಯ ನಡೆಯಲಿದ್ದು, ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲಿದೆ. ಈ ನಡುವೆ ಟ್ರೋಫಿ ಗೆಲ್ಲುವ ಲೆಕ್ಕಾಚಾರವೂ ಶುರುವಾಗಿದೆ. ಇದನ್ನೂ ಓದಿ: ರೋ’ಹಿಟ್‌’ ಆಟಕ್ಕೆ ಗಿಲ್‌ ಪಡೆ ಡಲ್‌; ಮುಂಬೈಗೆ 20 ರನ್‌ಗಳ ಜಯ – ಫೈನಲ್‌ ಸ್ಥಾನಕ್ಕೆ ಪಂಜಾಬ್‌ ವಿರುದ್ಧ ಫೈಟ್‌

    ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿವೆ. ಪಂಜಾಬ್‌ ಹಾಗೂ ಮುಂಬೈ ಒಟ್ಟಾರೆ ಐಪಿಎಲ್‌ನಲ್ಲಿ 33 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್‌ 16 ಬಾರಿ ಗೆಲುವು ಸಾಧಿಸಿದೆ. ಆದ್ರೆ 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ ಪಂಜಾಬ್‌ ಕಿಂಗ್ಸ್‌ ಬಲಿಷ್ಠ ಪಡೆಯನ್ನ ಹೊಂದಿದ್ದು, ಪ್ರಶಸ್ತಿಗೆ ಮುತ್ತಿಡುವ ಕನಸು ಕಂಡಿದೆ.

    ಇತ್ತ ಆರಂಭಿಕ 5 ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್‌ ನಿರೀಕ್ಷೆಗೂ ಮೀರಿದ ಪ್ರದರ್ಶನದೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಎಲಿಮಿನೇಟರ್‌-1ನಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನ ಹೊರದಬ್ಬಿ, ಕ್ವಾಲಿಫೈಯರ್‌-2ಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ – ವೈರಲ್‌ ಆಯ್ತು ಅಭಿಮಾನಿಯ ಪೋಸ್ಟರ್‌

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ 42 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ವೇಳೆ ಮೊದಲು ಹಾಗೂ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡಗಳು ತಲಾ 21 ಬಾರಿ ಗೆದ್ದಿವೆ. ಈ ಮೈದಾನದಲ್ಲಿ 243 ರನ್‌ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಈ ಅಂಗಳದಲ್ಲಿ 204 ರನ್‌ವರೆಗೆ ಚೇಸಿಂಗ್‌ ಆಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಬ್ಯಾಟಿಂಗ್ ಮೊದಲ ಬಾರಿಗೆ ತಂಡ 6 ಪಂದ್ಯಗಳನ್ನು ಗೆದ್ದಿದೆ.

    2023ರ ಆವೃತ್ತಿಯಲ್ಲಿ ಇದೇ ಪಿಚ್‌ನಲ್ಲಿ ಚೆನ್ನೈ 15 ಓವರ್‌ಗಳಲ್ಲಿ 170 ರನ್‌ ಚೇಸ್‌ ಮಾಡಿ 5ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

    ಸ್ಟಾರ್‌ ಬ್ಯಾಟರ್‌ಗಳೇ ಬಲ:
    ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಒಡ್ಡುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಈ ಬಾರಿ ಫಾರ್ಮ್‌ ಸಾಬೀತು ಮಾಡಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ ದೊಡ್ಡ ಮೊತ್ತ ಕಲೆಹಾಕಿದ್ರೆ ಗೆಲುವು ಸಾಧ್ಯತೆಯಿದೆ. ಜಸ್ಪ್ರಿತ್ ಬುಮ್ರಾ, ಟ್ರೆಂಟ್‌ ಬೌಲ್ಟ್‌, ಅಶ್ವನಿ ಕುಮಾರ್‌ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲಿದ್ದು, ಮಿಚೆಲ್‌ ಸ್ಯಾಂಟ್ನರ್ ಸ್ಪಿನ್ ಜಾದು ಸಹ ವರ್ಕೌಟ್‌ ಆಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇನ್ನೂ ಪಂಜಾಬ್‌ನಲ್ಲೂ ಶ್ರೇಯಸ್‌ ಅಯ್ಯರ್‌, ಪ್ರಿಯಾಂಶ್‌ ಆರ್ಯ, ಸ್ಟೋಯಿನಿಸ್‌, ಶಶಾಂಕ್‌ ಸಿಂಗ್‌ ಅವರಂತಹ ಬ್ಯಾಟಿಂಗ್‌ ಪಡೆಯೇ ಇದೆ.

    ಮುಂಬೈ ಸಂಭಾವ್ಯ ಪ್ಲೇಯಿಂಗ್‌-11
    ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ರಿಚರ್ಡ್ ಗ್ಲೀಸನ್/ರೀಸ್ ಟಾಪ್ಲೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್. ಇದನ್ನೂ ಓದಿ: IPL: ದೊಡ್ಡ ಅಂತರದ ಗೆಲುವು ಸಾಧಿಸಿ ಇತಿಹಾಸ ಬರೆದ ಆರ್‌ಸಿಬಿ – ಕೆಕೆಆರ್‌ ರೆಕಾರ್ಡ್‌ ಉಡೀಸ್‌

    ಪಂಜಾವ್‌ ಸಂಭಾವ್ಯ ಪ್ಲೇಯಿಂಗ್‌-11
    ಪ್ರಭ್‌ಸಿಮ್ರನ್‌ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೈಮಿಸನ್, ಯುಜುವೇಂದ್ರ ಚಾಹಲ್, ವಿಜಯಕುಮಾರ್ ವೈಶಾಖ್.

  • ಪಂಜಾಬ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್

    ಪಂಜಾಬ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್

    ಪಂಜಾಬ್‌ ವಿರುದ್ಧ ಭರ್ಜರಿ ಗೆಲವು ಸಾಧಿಸಿ ಫೈನಲ್‌ ಪ್ರವೇಶಿಸಿದ ಆರ್‌ಸಿಬಿ ತಂಡಕ್ಕೆ ಉದ್ಯಮಿ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಆರ್‌ಸಿಬಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ನೀಡಿದೆ. ಧೈರ್ಯದಿಂದ ಆಟವಾಡಿ, ಕಪ್‌ ಗೆಲ್ಲಿ ಎಂದು ಶುಭ ಹಾರೈಸಿದ್ದಾರೆ.

    ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು.

    ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿಲ್‌ ಸಾಲ್ಟ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. 27 ಬಾಲ್‌ಗಳಿಗೆ 6 ಫೋರ್‌, 3 ಸಿಕ್ಸರ್‌ನೊಂದಿಗೆ 56 ರನ್‌ (ಔಟಾಗದೇ) ಗಳಿಸಿ ಮಿಂಚಿದರು. ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19, ರಜತ್‌ ಪಾಟೀದಾರ್‌ 15 ರನ್‌ (ಔಟಾಗದೇ) ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಜಯ ಸಾಧಿಸಿತು.

    ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8 ರನ್‌ನ ಒಂದಂಕಿ ಆಟದಿಂದ ನಿರಾಸೆ ಮೂಡಿಸಿದರು. ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಕೊನೆಗೆ ಪಂಜಾಬ್‌ 14.1 ಓವರ್‌ಗೆ 101 ರನ್‌ ಗಳಿಸಿ ಆಲೌಟ್‌ ಆಯಿತು.

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • IPL – ಆರ್‌ಸಿಬಿ ಫೈನಲ್‌ ಪಂದ್ಯಗಳ ಹಾದಿ ಹೇಗಿತ್ತು?

    IPL – ಆರ್‌ಸಿಬಿ ಫೈನಲ್‌ ಪಂದ್ಯಗಳ ಹಾದಿ ಹೇಗಿತ್ತು?

    ಲ್ಲನ್‌ಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಬಾರಿಯೂ ಸೇರಿ, ಆರ್‌ಸಿಬಿ ನಾಲ್ಕು ಬಾರಿ ಫೈನಲ್‌ ಪ್ರವೇಶಿಸಿದೆ. ತಂಡದ ಹಿಂದಿನ ಫೈನಲ್‌ ಪ್ರವೇಶದ ಹಾದಿ ಹೇಗಿತ್ತು ಎಂದು ಇಲ್ಲಿ ವಿವರಿಸಲಾಗಿದೆ.

    2009 – ಫೈನಲ್‌ನಲ್ಲಿ ವಿರೋಚಿತ ಸೋಲು
    2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.

    2011 ಚೆನ್ನೈ ವಿರುದ್ಧ ಎರಡೆರಡುಬಾರಿ ಸೋಲು
    2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

    2016 – 8 ರನ್‌ಗಳಿಂದ ಕೈತಪ್ಪಿದ ಟ್ರೋಫಿ
    2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.

    2025 – ಪಂಜಾಬ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಜಯ, 4ನೇ ಬಾರಿಗೆ ಫೈನಲ್‌ಗೆ ಲಗ್ಗೆ
    ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು. ಈ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಆರ್‌ಸಿಬಿ ಕಪ್‌ ಗೆಲ್ಲುವ ಉತ್ಸಾಹದಲ್ಲಿದೆ.

  • ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಚಂಡೀಗಢ: ಮಲ್ಲನ್‌ಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 102 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ 4ನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ.

    2009, 2011, 2016ರ ಬಳಿಕ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಯಾವ ವರ್ಷ – ಯಾವ ತಂಡ?
    2018 – CSK.
    2019 – MI.
    2020 – MI.
    2021 – CSK.
    2022 – GT.
    2023 – CSK.
    2024 – KKR
    2025 – ….?

    2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • IPL 2025: ಪಂಜಾಬ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ – 4ನೇ ಬಾರಿಗೆ ಫೈನಲ್‌ಗೆ ಲಗ್ಗೆ

    IPL 2025: ಪಂಜಾಬ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ – 4ನೇ ಬಾರಿಗೆ ಫೈನಲ್‌ಗೆ ಲಗ್ಗೆ

    ಚಂಡೀಗಢ: ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

    ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿಲ್‌ ಸಾಲ್ಟ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. 27 ಬಾಲ್‌ಗಳಿಗೆ 6 ಫೋರ್‌, 3 ಸಿಕ್ಸರ್‌ನೊಂದಿಗೆ 56 ರನ್‌ (ಔಟಾಗದೇ) ಗಳಿಸಿ ಮಿಂಚಿದರು. ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19, ರಜತ್‌ ಪಾಟೀದಾರ್‌ 15 ರನ್‌ (ಔಟಾಗದೇ) ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಜಯ ಸಾಧಿಸಿತು.

    ಕ್ವಾಲಿಫೈಯರ್‌ 1 ಮ್ಯಾಚ್‌ನಲ್ಲಿ ಪಂಜಾಬ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಶ್ರೇಯಸ್‌ ಅಯ್ಯರ್‌ ಪಡೆ ಮೊದಲ ಪವರ್‌ಪ್ಲೇನಲ್ಲೇ ಪ್ರಮುಖ 48 ರನ್‌ ಇದ್ದಾಗ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಇದನ್ನೂ ಓದಿ: ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

    ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8 ರನ್‌ನ ಒಂದಂಕಿ ಆಟದಿಂದ ನಿರಾಸೆ ಮೂಡಿಸಿದರು. ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಕೊನೆಗೆ ಪಂಜಾಬ್‌ 14.1 ಓವರ್‌ಗೆ 101 ರನ್‌ ಗಳಿಸಿ ಆಲೌಟ್‌ ಆಯಿತು.

    ಆರ್‌ಸಿಬಿ ಪರ ಬೌಲರ್‌ಗಳು ಮಿಂಚಿದರು. ತಂಡಕ್ಕೆ ಮತ್ತೆ ಮರಳಿದ ಜೋಶ್‌ ಹ್ಯಾಜಲ್‌ವುಡ್‌ ತಮ್ಮ ಮಾರಕ ಬೌಲಿಂಗ್‌ ಪ್ರದರ್ಶನ ತೋರಿದರು. ಹ್ಯಾಜಲ್‌ವುಡ್‌ ಮತ್ತು ಸುಯೇಶ್‌ ಶರ್ಮಾ ತಲಾ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಯಶ್‌ ದಯಾಳ್‌ 2, ಭುವನೇಶ್ವರ್‌ ಕುಮಾರ್‌ ಮತ್ತು ರೊಮಾರಿಯೊ ಶೆಫರ್ಡ್ ತಲಾ 1 ವಿಕೆಟ್‌ ಕಿತ್ತರು.

  • ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಮತ್ತೊಂದು ಕೆಟ್ಟ ದಾಖಲೆ ಬರೆದ ಪಂಜಾಬ್‌

    ಚಂಡೀಗಢ: ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ (RCB) ವಿರುದ್ಧ ಪಂಜಾಬ್‌ (PBKS) ಮತ್ತೊಂದು ಕೆಟ್ಟ ದಾಖಲೆ ಬರೆದಿದೆ.

    ಚಂಡೀಗಢದ ಮುಲ್ಲನಪುರದಲ್ಲಿ ನಡೆಯುತ್ತಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ ಆಯಿತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲೇ 6 ನೇ ಬಾರಿಗೆ ಅಲ್ಪ ಮೊತ್ತದ ಕೆಟ್ಟ ದಾಖಲೆ ಬರೆಯಿತು. ಆರ್‌ಸಿಬಿ ವಿರುದ್ಧವೇ ಮೂರನೇ ಬಾರಿಗೆ ಅಲ್ಪ ಮೊತ್ತದ ಕೆಟ್ಟ ದಾಖಲೆಯನ್ನು ಪಂಜಾಬ್‌ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    2015 ರಲ್ಲಿ (13.4 ಓವರ್‌) ಮತ್ತು 2018ರಲ್ಲಿ ಆರ್‌ಸಿಬಿ ವಿರುದ್ಧ 88 ರನ್‌ಗೆ (15.1 ಓವರ್‌ಗೆ) ಪಂಜಾಬ್‌ ಆಲೌಟ್‌ ಆಗಿತ್ತು.

    ಗುರುವಾರದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಪರಾಕ್ರಮ ಮೆರೆದಿದ್ದಾರೆ. ಪಂಜಾಬ್‌ ತಂಡ 14.1 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್‌ ಆಗಿದೆ.

    ಜೋಶ್ ಹ್ಯಾಜಲ್‌ವುಡ್ ಮತ್ತು ಸುಯಾಶ್ ಶರ್ಮಾ ತಲಾ ಮೂರು ವಿಕೆಟ್ ಪಡೆದರೆ, ಯಶ್ ದಯಾಳ್ ಎರಡು ವಿಕೆಟ್ ಪಡೆದು ಪಂಜಾಬ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

    ಪಂಜಾಬ್‌ ಕಿಂಗ್ಸ್‌ ಅಲ್ಪಮೊತ್ತದ ಕೆಟ್ಟ ದಾಖಲೆ ಪಟ್ಟಿ ಹೀಗಿದೆ..
    15.5 ಓವರ್‌ಗಳಲ್ಲಿ 73/10 vs RPSG (ಪುಣೆ, 2017)
    13.4 ಓವರ್‌ಗಳಲ್ಲಿ 88/10 vs RCB (ಬೆಂಗಳೂರು, 2015)
    15.1 ಓವರ್‌ಗಳಲ್ಲಿ 88/10 vs RCB (ಇಂದೋರ್, 2018)
    20 ಓವರ್‌ಗಳಲ್ಲಿ 92/8 vs CSK (ಡರ್ಬನ್, 2009)
    20 ಓವರ್‌ಗಳಲ್ಲಿ 95/9 vs CSK (ಚೆನ್ನೈ, 2015)

  • RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    RCB vs PBKS | 101 ರನ್‌ಗಳಿಗೆ ಪಂಜಾಬ್‌ ಆಲೌಟ್‌ – ಆರ್‌ಸಿಬಿ ಫೈನಲ್‌ಗೇರಲು 102 ರನ್‌ ಗುರಿ

    ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ವು (Punjab Kings) ಕ್ವಾಲಿಫೈಯರ್‌-1ನಲ್ಲಿ 14.1 ಓವರ್‌ಗಳಲ್ಲೇ 101‌ ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ (RCB) 102 ರನ್‌ಗಳ ಗುರಿ ನೀಡಿದೆ.

    ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಮೊದಲು‌ ಫೀಲ್ಡಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು.

    ಉತ್ತಮ ರನ್‌ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಪಂಜಾಬ್‌ ಕಿಂಗ್ಸ್‌ಗೆ  ಆರಂಭದಲ್ಲೇ ಮರ್ಮಾಘಾತವಾಯಿತು. 1.2 ಓವರ್‌ಗಳಲ್ಲಿ 9 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಬಳಿಕ ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿತು. ಪವರ್‌ ಪ್ಲೇನಲ್ಲಿ ಒಂದೆಡೆ ರನ್‌ ಹರಿಯುತ್ತಿದ್ದರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ಗಳು ತರಗೆಲೆಗಳಂತೆ ಉದುರುತ್ತಿದ್ದವು. ಇದರಿಂದ ಪವರ್‌ ಪ್ಲೇನಲ್ಲಿ 48 ರನ್‌ ಗಳಿಸುವ ಹೊತ್ತಿಗೆ ಪಂಜಾಬ್‌ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು.

    ಆರ್‌ಸಿಬಿ ಬೌಲರ್‌ಗಳ ಬಿಗಿ ಹಿಡಿತ:
    ಮೊದಲ ಓವರ್‌ನಲ್ಲಿ ನಿರಾಸೆಗೊಂಡಿದ್ದ ಆರ್‌ಸಿಬಿ ಬೌಲಿಂಗ್‌ ಪಡೆ 2ನೇ ಓವರ್‌ನಿಂದಲೇ ಪಂಜಾಬ್‌ ಬ್ಯಾಟರ್‌ಗಳ ಮೇಲುಗೈ ಸಾಧಿಸಿತು. ಈ ಆವೃತ್ತಿಯಲ್ಲಿ ಮೆರೆದಾಡಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್‌ ಹಾದಿ ತೋರುವಲ್ಲಿ ಯಶಸ್ವಿಯಾದರು. ಸೂಯಶ್‌ ಶರ್ಮಾ (Suyash Sharma) ಸ್ಪಿನ್‌ ಮೋಡಿ, ಜೋಶ್‌ ಹೇಜಲ್ವುಡ್‌, ಯಶ್‌ ದಯಾಳ್‌, ಭುವನೇಶ್ವರ್‌ ಕುಮಾರ್‌ ಅವರ ಉರಿ ಚೆಂಡಿನ ದಾಳಿಗೆ ಪಂಜಾಬ್‌ ರನ್‌ ಕದಿಯಲು ತಿಣುಕಾಡಿತು. ಮಾರ್ಕಸ್‌ ಸ್ಟೋಯ್ನಿಸ್‌, ನೇಹಾಲ್‌ ವಧೇರಾ ಹೊರತುಪಡಿಸಿದ್ರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಂದಂಕಿಯ ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಪಂಜಾಬ್‌ ಕಿಂಗ್ಸ್‌ ಪರ ಮಾರ್ಕಸ್‌ ಸ್ಟೋಯ್ನಿಸ್‌ 26 ರನ್‌, ಅಜ್ಮತುಲ್ಲಾ ಒಮರ್ಜೈ, ಪ್ರಭ್‌ಸಿಮ್ರನ್‌ ತಲಾ 18 ರನ್‌, ಪ್ರಿಯಾಂಶ್‌ ಆರ್ಯ 7 ರನ್‌, ಜೋಶ್‌ ಇಂಗ್ಲಿಸ್‌ 4 ರನ್‌. ಶ್ರೇಯಸ್‌ ಅಯ್ಯರ್‌ 2 ರನ್‌, ನೇಹಾಲ್‌ ವಧೇರಾ 8 ರನ್‌, ಶಶಾಂಕ್‌ ಸಿಂಗ್‌ 3, ಹರ್ಪ್ರೀತ್‌ ಬ್ರಾರ್‌ 4 ರನ್‌ ಗಳಿಸಿದ್ರೆ ಮುಶೀರ್‌ ಖಾನ್‌ ಶೂನ್ಯ ಸುತ್ತಿದರು.

    ಆರ್‌ಸಿಬಿ ಪರ ಸೂಯಶ್‌ ಶರ್ಮಾ, ಜೋಶ್‌ ಹೇಜಲ್ವುಡ್‌ ತಲಾ 3 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌, ರೊಮಾರಿಯೊ ಶೆಫರ್ಡ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

  • ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

    ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

    ಚಂಡೀಗಢ: 18ನೇ ಆವೃತ್ತಿ ಐಪಿಎಲ್‌ ಟೂರ್ನಿಯ ಕ್ವಾಲಿಫೈಯರ್‌-1 (IPL Qualifier 1) ಪಂದ್ಯ ಇಂದು ನಡೆಯುತ್ತಿದ್ದು, ಆರ್‌ಸಿಬಿ-ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸಲಿವೆ. ಟಾಸ್‌ ಗೆದ್ದ ಆರ್‌ಸಿಬಿ (RCB) ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿದೆ.

    ಚಂಡೀಗಢದ ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ಸರಿಯಾಗಿ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಇನ್ನೂ ಸೋತ ತಂಡ ಕ್ವಾಲಿಫೈಯರ್‌ 2ನಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ. ಗಾಯದ ಸಮಸ್ಯೆ ಎದುರಿಸುತ್ತಿದ್ದ ಜೋಶ್‌ ಹೇಜಲ್ವುಡ್‌ ಮತ್ತೆ ಆರ್‌ಸಿಬಿಗೆ ಕಂಬ್ಯಾಕ್‌ ಮಾಡಿದ್ದಾರೆ. ಇನ್ನೂ ಬೆರಳು ಗಾಯದ ಸಮಸ್ಯೆಯಿಂದ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿಯುತ್ತಿದ್ದ ರಜತ್‌ ಪಾಟಿದಾರ್‌ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಆರ್‌ಸಿಬಿ ಫಲಿತಾಂಶದಲ್ಲಿ ಬದಲಾವಣೆ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

    ಪಂಜಾಬ್‌ ಕಿಂಗ್ಸ್‌ ಪ್ಲೇಯಿಂಗ್‌-11
    ಪ್ರಿಯಾಂಶ್‌ ಆರ್ಯ, ಪ್ರಭ್‌ಸಿಮ್ರನ್‌ ಸಿಂಗ್‌, ಜೋಶ್‌ ಇಂಗ್ಲಿಷ್‌, ಶ್ರೇಯಸ್‌ ಅಯ್ಯರ್‌ (ನಾಯಕ), ನೇಹಾಲ್‌ ವಧೇರಾ, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಝ್ಮತುಲ್ಲಾ ಒಮರ್ಝೈ, ಹರ್ಪ್ರೀತ್‌ ಬ್ರಾರ್‌, ಕೈಲ್‌ ಜೇಮಿಸನ್‌, ಅರ್ಷ್‌ದೀಪ್‌ ಸಿಂಗ್‌.

    ಆರ್‌ಸಿಬಿ ಪ್ಲೇಯಿಂಗ್‌-11
    ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ, ರೊಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೋಶ್‌ ಹೇಜಲ್ವುಡ್‌, ಸೂಯಶ್‌ ಶರ್ಮಾ, ಯಶ್‌ ದಯಾಳ್‌.

  • RCBಗೆ ಮೂರು ಬಾರಿಯೂ ಫೈನಲ್‌ನಲ್ಲಿ ವಿರೋಚಿತ ಸೋಲು – ಹೇಗಿದೆ ರೋಚಕ ಇತಿಹಾಸ?

    RCBಗೆ ಮೂರು ಬಾರಿಯೂ ಫೈನಲ್‌ನಲ್ಲಿ ವಿರೋಚಿತ ಸೋಲು – ಹೇಗಿದೆ ರೋಚಕ ಇತಿಹಾಸ?

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ (IPL 2025) ಇನ್ನೇನು ಕೊನೆಯ ಹಂತ ತಲುಪಿದೆ. ಲೀಗ್‌ ಸುತ್ತಿನ ಎಲ್ಲಾ ಪಂದ್ಯಗಳು ಮುಕ್ತಾಯಗೊಂಡಿದ್ದು,‌ ಇಂದು ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಸೆಣಸಲು ಸಜ್ಜಾಗಿವೆ.

    11 ವರ್ಷಗಳ ಬಳಿಕ ಪ್ಲೇ ಆಫ್‌ ಪ್ರವೇಶಿಸಿರುವ ಪಂಜಾಬ್‌ ಕಿಂಗ್ಸ್‌ ಈ ಬಾರಿ ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದೆ. 2011ರಲ್ಲಿ ಮೊದಲ ಬಾರಿಗೆ ಜಾರ್ಜ್ ಬೈಲಿ ನಾಯಕತ್ವದಲ್ಲಿ ಫೈನಲ್‌ ಪ್ರವೇಶಿಸಿದ್ದ ಪಂಜಾಬ್‌ ತಂಡ ಕೆಕೆಆರ್‌ ವಿರುದ್ಧ 3 ವಿಕೆಟ್‌ಗಳ ವಿರೋಚಿತ ಸೋಲು ಕಂಡಿತ್ತು. ಇನ್ನೂ ಐಪಿಎಲ್‌ನ ಜನಪ್ರಿಯ ತಂಡವಾಗಿ ಗುರುತಿಸಿಕೊಂಡಿರುವ ಆರ್‌ಸಿಬಿ ಮೂರು ಬಾರಿ ಫೈನಲ್‌ ಪ್ರವೇಶಿಸಿಯೂ ಸೋಲು ಕಂಡಿತ್ತು. ಈ ಸಲ 10ನೇ ಬಾರಿಗೆ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದು, 18ನೇ ಆವೃತ್ತಿಯಲ್ಲಾದರೂ ಟ್ರೋಫಿ ಗೆಲ್ಲುವ ಕನಸು ನನಸು ಮಾಡಿಕೊಳ್ಳುತ್ತಾ ಅನ್ನೋದನ್ನು ಕಾದುನೋಡಬೇಕಿದೆ. ಹಾಗಾದ್ರೆ ಮೂರು ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಹೋರಾಟ ಹೇಗಿತ್ತು ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ… ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    ಫೈನಲ್‌ನಲ್ಲಿ ವಿರೋಚಿತ ಸೋಲು
    2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು. ಇದನ್ನೂ ಓದಿ: ಆರ್‌ಸಿಬಿ ಕ್ವಾಲಿಫೈಯರ್‌ 1 ಎಂಟ್ರಿಗೆ ಕೊಡುಗೆ ನೀಡಿದ ಕೊಹ್ಲಿಗೆ ದಿನೇಶ್‌ ಕಾರ್ತಿಕ್‌ ವಿಶೇಷ ಗೌರವ

    ಚೆನ್ನೈ ವಿರುದ್ಧ ಎರಡೆರಡುಬಾರಿ ಸೋಲು
    2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದನ್ನೂ ಓದಿ: 9 ವರ್ಷಗಳ ಬಳಿಕ ಕ್ವಾಲಿಫೈಯರ್‌ 1ಗೆ ಲಗ್ಗೆಯಿಟ್ಟ ಆರ್‌ಸಿಬಿ

    8 ರನ್‌ಗಳಿಂದ ಕೈತಪ್ಪಿದ ಟ್ರೋಫಿ 
    2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.

    18ನೇ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ 9 ಪಂದ್ಯ ಗೆದ್ದಿರುವ ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿಯಲೇಬೇಕೆಂದು ಪಣ ತೊಟ್ಟಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ