Tag: Shreyas Iyer

  • Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಕ್ಯಾಚ್‌ ಹಿಡಿಯವ ವೇಳೆ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾ ಉಪನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಅಯ್ಯರ್ ಅವರನ್ನ ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    34ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಕ್ಯಾರಿ (Alex Carey) ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನ ತೊರಿದಿದ್ದರು. ಅಲ್ಲದೇ ಡ್ರೆಸ್ಸಿಂಗ್‌ ರೂಮ್‌ಗೆ ಬರ್ತಿದ್ದಂತೆ ಅಯ್ಯರ್‌ ಅವರನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ರಕ್ತಸ್ರಾವದಿಂದ ಸೋಂಕು ಹರಡುವುದನ್ನ ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಬಿಸಿಸಿಐ ಹೇಳೋದೇನು?
    ಸ್ಕ್ಯಾನ್‌ ವರದಿಯಲ್ಲಿ ಪಕ್ಕೆಲುಬು ಗಾಯವಾಗಿರುವುದು ಕಂಡುಬಂದಿದೆ. ಆದ್ರೆ ವೈದ್ಯಕೀಯವಾಗಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿ ಮತ್ತು ಭಾರತದ ತಜ್ಞರ ಸಮನ್ವಯದೊಂದಿಗೆ ಬಿಸಿಸಿಐ ವೈದ್ಯಕೀಯ ತಂಡವು ಅಯ್ಯರ್‌ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕಾಗಿ ವೈದ್ಯಕೀಯ ತಂಡವನ್ನ ಸಿಡ್ನಿಯಲ್ಲೇ ಇರಿಸಲಾಗಿದೆ ಎಂದು ಬಿಸಿಸಿಐ (BCCI) ಹೇಳಿದೆ.

    ಆರಂಭದಲ್ಲಿ ಅಯ್ಯ‌ರ್ ಸುಮಾರು 3 ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪರಿಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

  • ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

    ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

    ಮುಂಬೈ: 2025ರ ಟಿ20 ಏಷ್ಯಾಕಪ್‌ ಟೂರ್ನಿಗೆ ಇನ್ನೂ ಕೆಲ ದಿನಗಳು ಬಾಕಿಯಿರುವಾಗಲೇ ಟೀಂ ಇಂಡಿಯಾ (Team India) ಬಿಗ್‌ ಶಾಕ್‌ ಎದುರಾಗಿದೆ. ಈಗಾಗಲೇ ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಉಪನಾಯಕ ಶುಭಮನ್‌ ಗಿಲ್‌ (Shubman Gill) ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ ಸೆ.9 ರಿಂದ ಸೆ.28ರ ವರೆಗೆ ಯುಎಇನಲ್ಲಿ ಟಿ20 ಏಷ್ಯಾಕಪ್‌ (Asia Cup 2025) ಟೂರ್ನಿ ನಡೆಯಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಗಿಲ್‌, ಪ್ರಸ್ತುತ ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಫಿಸಿಕಲ್‌ ಫಿಟ್ನೆಸ್‌ ತಜ್ಞರು ಹೇಳುವಂತೆ ಗಿಲ್‌ ಅವರು ಏಷ್ಯಾಕಪ್‌ ಟೂರ್ನಿಗೆ ಫಿಟ್‌ ಆಗುವ ನಿರೀಕ್ಷೆಯಿದೆ. ಆದ್ರೆ ಇದೇ ಆಗಸ್ಟ್‌ 28ರಿಂದ ಸೆ.15ರ ವರೆಗೆ ನಡೆಯಲಿರುವ ಪ್ರತಿಷ್ಠಿತ ದುಲೀಪ್‌ ಟ್ರೋಫಿಯಿಂದ (Duleep Trophy 2025) ಹೊರಗುಳಿಯುವ ಸಾಧ್ಯತೆಗಳಿಗೆ ಎಂದು ವರದಿಯಾಗಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ಏಷ್ಯಾಕಪ್‌ಗೆ ಭಾರತ ತಂಡ ಹೀಗಿದೆ?
    ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್‌ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಹರ್ಷಿತ್‌ ರಾಣಾ, ರಿಂಕು ಸಿಂಗ್. ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

    ಶ್ರೇಯಸ್‌ಗೆ ಸಿಗುತ್ತಾ ಚಾನ್ಸ್‌?
    ಶುಭಮನ್‌ ಗಿಲ್‌ ಏಷ್ಯಾಕಪ್‌ ಟೂರ್ನಿ ಹೊತ್ತಿಗೆ ಸುಧಾರಣೆ ಆಗದಿದ್ದರೇ ಶ್ರೇಯಸ್‌ ಅಯ್ಯರ್‌ ಅವರಿಗೆ ಚಾನ್ಸ್‌ ಸಿಗಬಹುದಾ ಎನ್ನುವ ಪ್ರಶ್ನೆಯೂ ಎದ್ದಿದೆ. ಏಕೆಂದ್ರೆ ಸೂರ್ಯಕುಮಾರ್‌ ಯಾದವ್‌ ಕೂಡ ಶ್ರೇಯಸ್‌ ಅಯ್ಯರ್‌ ಆಯ್ಕೆ ಬಗ್ಗೆ ಆಸಕ್ತಿ ಹೊಂದಿದ್ದರು. ಆದ್ರೆ ಉತ್ತರ ವಲಯದ ಕ್ರಿಕೆಟ್‌ ಕಮಿಟಿ ಗಿಲ್‌ ಸ್ಥಾನಕ್ಕೆ ಸಂಭಾವ್ಯ ಆಟಗಾರರನ್ನಾಗಿ ಶುಭಮನ್‌ ರೊಹಿಲ್ಲಾ ಅಥವಾ ಅಂಕಿತ್‌ ಕುಮಾರ್‌ ರಣಜಿ ಆಟಗಾರರನ್ನ ಸೂಚಿಸಿದೆ ಎಂದು ತಿಳಿದುಬಂದಿದೆ.

    ಶ್ರೇಯಸ್‌ ಕ್ಯಾಪ್ಟನ್‌ ಎಂಬ ವದಂತಿ
    ಎರಡು ದಿನಗಳ ಹಿಂದಷ್ಟೇ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಒನ್‌ಡೇ ಕ್ಯಾಪ್ಟನ್ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ ತೆರೆ ಎಳೆದಿತ್ತು. ಇದನ್ನೂ ಓದಿ: Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

    ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಇದರಲ್ಲಿ ಶ್ರೇಯಸ್ ತಪ್ಪು ಏನೂ ಇಲ್ಲ, ನಮ್ಮದೂ ತಪ್ಪಿಲ್ಲ. ಟೂರ್ನಿಗೆ 15 ಜನರನ್ನಷ್ಟೇ ಆಯ್ಕೆ ಮಾಡಲು ಅವಕಾಶವಿದೆ. ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದರು. ಇದೀಗ ಗಿಲ್‌ ಅನಾರೋಗ್ಯದ ಬೆನ್ನಲ್ಲೇ ಅಯ್ಯರ್‌ ಅವರತ್ತ ಅಭಿಮಾನಿಗಳ ಚಿತ್ತ ಹರಿದಿದೆ.

  • ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

    ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

    – ಶುಭಮನ್‌ ಗಿಲ್‌ಗೆ ನಾಯಕತ್ವ ನೀಡುವ ಸಾಧ್ಯತೆ

    ಮುಂಬೈ: 2025ರ ಟಿ20 ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆಯಾದ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನ ಟೀಂ ಇಂಡಿಯಾದ ಒನ್‌ಡೇ ಕ್ಯಾಪ್ಟನ್‌ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ (BCCI) ತೆರೆ ಎಳೆದಿದೆ.

    ಹೌದು. ಏಷ್ಯಾಕಪ್‌ ಟೂರ್ನಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡದ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕ್ರಿಕೆಟ್‌ ತಜ್ಞರು ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದ್ರೆ ಒಂದು ದಿನದ ಹಿಂದಷ್ಟೇ ಅಯ್ಯರ್ ಅವರ ಬಗ್ಗೆ ಪ್ರತ್ಯೇಕ ಲೆಕ್ಕಾಚಾರ ಹಾಕಿದ್ದು, ಮಹತ್ತರ ಜವಾಬ್ದಾರಿ ನೀಡಲು ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ಬಿಸಿಸಿಐ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್ ಶರ್ಮಾ (Rohit Sharma) ಅವರು 2027ರ ವಿಶ್ವಕಪ್ ವರೆಗೆ ಲಭಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಏಷ್ಯಾಕಪ್‌ ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಲಿದ್ದು, ಅಯ್ಯರ್ ಅವರೇ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.

    ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ: Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

    ಇನ್ನೂ ಶ್ರೇಯಸ್‌ ಅಯ್ಯರ್‌ ಅವರನ್ನು ಟೂರ್ನಿಯಿಂದ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿ, ಇದರಲ್ಲಿ ಶ್ರೇಯಸ್‌ ತಪ್ಪು ಏನೂ ಇಲ್ಲ, ನಮ್ಮದೂ ತಪ್ಪಿಲ್ಲ. ಟೂರ್ನಿಗೆ 15 ಜನರನ್ನಷ್ಟೇ ಆಯ್ಕೆ ಮಾಡಲು ಅವಕಾಶವಿದೆ. ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ನಡುವೆ ಟೆಸ್ಟ್‌ ತಂಡದ ಯುವ ನಾಯಕ ಶುಭಮನ್‌ ಗಿಲ್‌ ಅವರಿಗೇ ಏಕದಿನ ಕ್ಯಾಪ್ಟೆನ್ಸಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಆಸೀಸ್‌ ಸರಣಿ ಬಳಿಕ ರೋಹಿತ್- ಕೊಹ್ಲಿಗೆ ವಿದಾಯ?
    ಇನ್ನೂ ಮುಂದಿನ ಅಕ್ಟೋಬರ್‌ 19ರಿಂದ ಅ.25ರ ವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್‌, ರೋಹಿತ್‌ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ಮತ್ತು ಟಿ20 ಮಾದರಿಗಳಿಗೆ ವಿದಾಯ ಹೇಳಿರುವ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇದನ್ನೂ ಓದಿ: 1,650 ಕೋಟಿ ವೆಚ್ಚ, 60,000 ಆಸನ ಸಾಮರ್ಥ್ಯ – ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಚಿನ್ನಸ್ವಾಮಿಗಿಂತಲೂ ಬೃಹತ್‌ ಸ್ಟೇಡಿಯಂ

    ಶ್ರೇಯಸ್ ನಾಯಕತ್ವದ ಅನುಭವ
    ಟೀಂ ಇಂಡಿಯಾ ಪರವಾಗಿ 70 ಏಕದಿನ ಪಂದ್ಯಗಳನ್ನು ಆಡಿರುವ ಶ್ರೇಯಸ್ ಅಯ್ಯರ್ ಅವರು ಒಟ್ಟು 2,845 ರನ್ ಗಳಿಸಿದ್ದಾರೆ. ಅದರಲ್ಲಿ 5 ಶತಕಗಳು ಸೇರಿವೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. 2024ರಲ್ಲಿ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ IPL ಪ್ರಶಸ್ತಿ ಗೆದ್ದುಕೊಂಡಿತು. ನಂತರ ಪಂಜಾಬ್ ಕಿಂಗ್ಸ್ ಯುವ ಪಡೆಯನ್ನ ಮುನ್ನಡೆಸಿದ ಶ್ರೇಯಸ್‌ ಅಯ್ಯರ್‌ ಫೈನಲ್‌ಗೇರಿಸಿದ್ದರು.

  • IPL Champions | ರಾಜ್ಯದೆಲ್ಲೆಡೆ ಊರ ಹಬ್ಬದಂತೆ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಫ್ಯಾನ್ಸ್‌

    IPL Champions | ರಾಜ್ಯದೆಲ್ಲೆಡೆ ಊರ ಹಬ್ಬದಂತೆ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಫ್ಯಾನ್ಸ್‌

    ಉಡುಪಿ/ರಾಯಚೂರು/ಬೀದರ್:‌ 18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿದ ಆರ್‌ಸಿಬಿ ಗೆಲುವನ್ನು ಇಡೀ ಕರ್ನಾಟಕವೇ ಊರ ಹಬ್ಬವಂತೆ ಸಂಭ್ರಮಿಸುತ್ತಿದೆ. ಪ್ರತಿ ಅಭಿಮಾನಿಗಳ ಮನೆಯಲ್ಲೂ ಸಂಭ್ರಮ ಮುಗಿಲು ಮುಟ್ಟಿದೆ. ಅದರ ಒಂದಿಷ್ಟು ಝಲಕ್‌ ಇಲ್ಲಿದೆ…

    ರಾಯಚೂರು:
    ಆರ್‌ಸಿಬಿ ಗೆಲುವಿನ ಸಂಭ್ರಮ ನಿಜಕ್ಕೂ ಮುಗಿಲು ಮುಟ್ಟಿತ್ತು. 9 ವರ್ಷಗಳ ಬಳಿಕ ಫೈನಲ್‌ಗೆ ತಲುಪಿದ್ದ ಆರ್‌ಸಿಬಿ ತಂಡ 6 ರನ್ ಗಳಿಂದ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಾಚರಣೆಗೆ ಪಾರವೇ ಇರಲಿಲ್ಲ. ನಗರದ ಮಹಿಳಾ ಸಮಾಜ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಆರ್‌ಸಿಬಿ ಅಭಿಮಾನಿಗಳು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ 18 ವರ್ಷಗಳ ನಿರೀಕ್ಷೆ ನಿಜವಾಗಿದ್ದಕ್ಕೆ ವಿಜಯೋತ್ಸವವನ್ನ ಆಚರಿಸಿದರು. ಇನ್ನೂ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಆರ್‌ಸಿಬಿ ಅಭಿಮಾನಿಗಳು ಬೈಕ್ ರ‍್ಯಾಲಿ ಮೂಲಕ ಸಂಭ್ರಮಾಚರಣೆ ಮಾಡಿದರು. ಕಾರಿನ ಮೇಲೆ ನಿಂತು ಶರ್ಟ್ ಬಿಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ. ಪೊಲೀಸರ ಲಘು ಲಾಠಿ ಪ್ರಹಾರದ ನಡುವೆಯೂ ಅಭಿಮಾನ ಮೆರೆದು ಸಂಭ್ರಮಾಚರಣೆ ಮಾಡಿದರು.

    ಉಡುಪಿ:
    ಆರ್‌ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಕಪ್ ಗೆದ್ದಿದೆ. ಉಡುಪಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಬ್ರಹ್ಮಾವರದ ರೆಸ್ಟೋರೆಂಟ್ ನಲ್ಲಿ ಬಿಗ್ ಸ್ಕ್ರೀನ್ ಮುಂದೆ ಶರ್ಟ್ ಬಿಚ್ಚಿ ಮನಸೋಯಿಚ್ಚೆ ಕುಣಿದಿದ್ದಾರೆ. ಉಡುಪಿ ಮಣಿಪಾಲದ ಬಾರ್, ಪಬ್ ನಲ್ಲಿ ಸೆಲೆಬ್ರೇಶನ್ ನಡೆದಿದ್ದು ಕೊಹ್ಲಿ ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿದ್ದಾರೆ.

    ಬೀದರ್:‌
    ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಗೆದ್ದ ಹಿನ್ನೆಲೆ ಗಡಿ ಜಿಲ್ಲೆ ಬೀದರ್ ನಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸಿ, ಭರ್ಜರಿ ಸ್ಟೆಪ್ ಹಾಕುತ್ತಾ ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಗರದ ಅಂಬೇಡ್ಕರ್ ವೃತದಲ್ಲಿ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುತ್ತಾ ಸಂಭ್ರಮಾಚರಣೆ ಮಾಡುತ್ತಿದ್ದು 18 ವರ್ಷದ ಬಳಿಕ ಮೊದಲ ಬಾರಿಗೆ ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡದ ಪರ ಘೋಷಣೆ ಕೂಗಿ ತಮ್ಮ ಸಂತೋಷವನ್ನು ಅಭಿಮಾನಿಗಳು ತೋರುತ್ತಿದ್ದಾರೆ. ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿರುವ ಕ್ರಿಕೆಟ್ ಅಭಿಮಾನಿಗಳು ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಭರ್ಜರಿ ಸ್ಟೆಪ್ ಹಾಕಿ ಕೊಹ್ಲಿ ಪರ ಘೋಷಣೆ ಕೂಗುತ್ತಿದ್ದಾರೆ.

    ಹುಬ್ಬಳ್ಳಿ:
    ಆರ್‌ಸಿಬಿ ಗೆಲುವು ಹಿನ್ನೆಲೆ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಆರ್‌ಸಿಬಿ ಪರ ಜೈಕಾರ ಹಾಕುತ್ತಾ ಎಲ್ಲೆಡೆ ಕುಣಿದು ಕುಪ್ಪಳಿಸಿದ್ದಾರೆ. ಅದರಂತೆ ಚಿಕ್ಕೋಡಿ, ಹಾಸನ, ದಾವಣಗೆರೆ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಮಂಡ್ಯ, ಕೊಡಗು, ಚಿಕ್ಕಬಳ್ಳಾಪುರ, ಹಾವೇರಿ ಕೋಲಾರ ಬೆಳಗಾವಿ ಸೇರಿದಂತೆ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

  • IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಅಹಮದಾಬಾದ್‌: ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ (RCB) ಟ್ರೋಫಿ ಗೆದ್ದ ಖುಷಿಯಲ್ಲಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೇಡಿಕೆ ಈಡೇರಿಸಿದ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ಕೊಹ್ಲಿಗೂ ಧನ್ಯವಾದ ಹೇಳ್ತಿದ್ದಾರೆ. ಈ ನಡುವೆ ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ (Virat Kohli) ಉತ್ತರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಗುಡ್‌ನ್ಯೂಸನ್ನೂ ಕೊಟ್ಟಿದ್ದಾರೆ.

    ನಿವೃತ್ತಿಯ ಕುರಿತು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ, ನನಗೆ ಈ ಆಟ ಆಡಲು ಇನ್ನೂ ಕೆಲ ವರ್ಷಗಳ ಅವಕಾಶವಿದೆ. ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಸಂಪೂರ್ಣ ಆಟ ಆಡಲು ಭಯಸುತ್ತೇನೆ. ಕೊನೆಗೂ ನನ್ನ ಮಡಿಲಿಗೆ ಕಪ್ ಕೊಟ್ಟಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    ಅಲ್ಲದೇ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು. ಇದನ್ನೂ ಓದಿ: ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

    ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ. ಇದನ್ನೂ ಓದಿ:  ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
    ಬಳಿಕ ಕಪ್‌ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

  • ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    ಅಹಮದಾಬಾದ್‌: ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ… ನಾನು ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ…. ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಅಭಿಮಾನಿಗಳ (RCB Fans) ಕೋಟೆ ಕಟ್ಟಿದ ಸಾಮ್ರಾಟ ವಿರಾಟ್‌ ಕೊಹ್ಲಿ (Virat Kohli) ಅವರು ಹೇಳಿದ ಮಾತುಗಳಿವು.

    ಚುಟುಕು ಸಂದರ್ಶನದಲ್ಲಿ ಮಾತನಾಡುತ್ತಾ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು.

    ಮುಂದುವರೆದು… ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ.

    ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
    ಬಳಿಕ ಕಪ್‌ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

  • IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೊಚ್ಚಲ ಚಾಂಪಿಯನ್‌ ಕಿರೀಟವನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ 17 ವರ್ಷ, 6,256 ದಿನಗಳು, 90,08,640 ನಿಮಿಷಗಳ ಕಾಯುವಿಕೆಗೆ ಅಂತ್ಯಹಾಡಿದೆ. 18 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…

    ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 8 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ 3 ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.

    18ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಚೊಚ್ಚಲ ಕಿರೀಟ
    2008ರಲ್ಲಿಂದಲೂ ʻಈ ಸಲ ಕಪ್‌ ನಮ್ದೇʼ ಅನ್ನೋ ಘೋಷವಾಕ್ಯದೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್‌ಸಿಬಿ, ಈ ಬಾರಿಯೂ ಅದೇ ಉತ್ಸಾಹದಲ್ಲಿತ್ತು. ಅಭಿಮಾನಿಗಳ ನಿರೀಕ್ಷೆಯಂತೆ ಕೊನೆಗೂ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

    ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್ಸ್‌
    2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್‌ ರಾಯಲ್ಸ್‌ ಚೊಚ್ಚಲ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್‌ ವಾರ್ನ್‌ ತಂಡದ ನಾಯಕತ್ವ ವಹಿಸಿದ್ದರು.

    2009ರಲ್ಲಿ ಡೆಕ್ಕನ್‌ ಚಾರ್ಜಸ್‌ಗೆ ಕಿರೀಟ
    2009ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್‌ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್‌ ಚಾರ್ಜಸ್‌ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್‌ ಪ್ರಶಸ್ತಿ ಗೆದ್ದುಕೊಂಡಿತು.

    5 ಬಾರಿ ಚೆನ್ನೈ ʻಸೂಪರ್‌ʼ ಚಾಂಪಿಯನ್‌
    ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್‌ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್‌ ಕಿಂಗ್ಸ್‌. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್‌ ಕ್ಯಾಪ್ಟನ್‌ ಎಂ.ಎಸ್‌ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್‌ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಮುಂಬೈಗೂ 5 ಬಾರಿ ಕಿರೀಟ:
    ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಂತೆ ಮುಂಬೈ ಇಂಡಿಯನ್ಸ್‌ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ನಾಯಕನಾಗಿದ್ದಾರೆ.

    ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 3 ಬಾರಿ ಪಟ್ಟ:
    2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್‌ ಆಗಿದೆ. 2012, 2014 ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್‌, 2024 ರಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್‌ ಆಗಿದ್ದು ಗೌತಮ್‌ ಗಂಭೀರ್‌ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಸನ್‌ ರೈಸರ್ಸ್‌ 2016ರ ಚಾಂಪಿಯನ್
    2016ರ ರೋಚಕ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್‌ ವಾರ್ನರ್‌ ತಂಡದ ನಾಯಕತ್ವ ವಹಿಸಿದ್ದರು.

    ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್‌
    ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್‌ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.

    ಈವರೆಗೆ 11 ವರ್ಷಗಳ ಬಳಿಕ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್‌ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.

  • ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

    ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವೇಳೆ ವಿರಾಟ್ ಕೊಹ್ಲಿ (Virat Kohli) ಅವರು, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರೊಡನೆ ʻಈ ಸಲ ಕಪ್ ನಮ್ದುʼ ಎಂದು ಹೇಳಿಸಿದ ಕ್ಷಣ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು.

    ಹೌದು. 20ನೇ ಓವರ್‌ನ 2ನೇ ಎಸೆತವನ್ನು ಮೇಡಿನ್‌ ಮಾಡುತ್ತಿದ್ದಂತೆ ಆರ್‌ಸಿಬಿಗೆ ಗೆಲುವು ಪಕ್ಕಾ ಎಂದು ಗೊತ್ತಾಯಿತು. ಇದು ತಿಳಿಯುತ್ತಿದ್ದಂತೆ ವಿರಾಟ್‌ ಕೊಹ್ಲಿ ಅವರು ಮೈದಾನದಲ್ಲಿ ಗಳಗಳನೆ ಅಳಲು ಶುರು ಮಾಡಿದ್ದರು. 18 ವರ್ಷಗಳ ನೆನಪನ್ನು ಒಮ್ಮೆಲೆ ನೆನೆದು ಭಾವುಕರಾದರು. ಅಲ್ಲದೇ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಹಳೆಯ ಟೀಮ್‌ಮೆಟ್‌ ಎಬಿಡಿ ವಿಲಿಯರ್ಸ್‌ ಮಗುವಿನಂತೆ ಓಡಿ ಬಂದು ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು. ಇದೇ ವೇಳೆ ಪತ್ನಿ ಅನುಷ್ಕಾ ಶರ್ಮಾ ಸಹ ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು ಇದು ಅಭಿಮಾನಿಗಳನ್ನೂ ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿತ್ತು. ಇದನ್ನೂ ಓದಿ: IPL 2025; ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎದ್ದು ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

    18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ ಆರ್‌ಸಿಬಿ ಅಭಿಮಾನಿಗಳ ಕೋಟೆಯ ಸಾಮ್ರಾಟ ಬೆಂಗಳೂರನ್ನು ಮರೆಯಲ್ಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಇದನ್ನೂ ಓದಿ: IPL Champions | 18 ವರ್ಷದಲ್ಲಿ ಆರ್‌ಸಿಬಿಯ ಟಾಪ್‌ ದಾಖಲೆಗಳ ಬಗ್ಗೆ ನೀವು ತಿಳಿಯಲೇಬೇಕು..

    ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು. ಇದನ್ನೂ ಓದಿ: 18 ಆವೃತ್ತಿಗಳಲ್ಲಿ ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್‌ಗಳ ಕಂಪ್ಲೀಟ್‌ ಲಿಸ್ಟ್‌ ನೋಡಿ…

  • 18 ಆವೃತ್ತಿಗಳಲ್ಲಿ ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್‌ಗಳ ಕಂಪ್ಲೀಟ್‌ ಲಿಸ್ಟ್‌ ನೋಡಿ…

    18 ಆವೃತ್ತಿಗಳಲ್ಲಿ ಆರೆಂಜ್‌, ಪರ್ಪಲ್‌ ಕ್ಯಾಪ್‌ ವಿನ್ನರ್‌ಗಳ ಕಂಪ್ಲೀಟ್‌ ಲಿಸ್ಟ್‌ ನೋಡಿ…

    18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಚೊಚ್ಚಲ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ. ಐಪಿಎಲ್‌ ಟ್ರೋಫಿ ಗೆದ್ದ ತಂಡ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್‌ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ. ಜೊತೆಗೆ ಆರಂಭದಿಂದಲೂ ಈ ಆವೃತ್ತಿಯಲ್ಲಿ ರನ್‌ ಹೊಳೆ ಹರಿಸಿದ ಹಾಗೂ ಮಾರಕ ದಾಳಿಯಿಂದ ವಿಕೆಟ್‌ ಉರುಳಿಸಿ ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡಿದ ಬೌಲರ್‌ಗಳೂ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ಪಡೆಯುವ ಮೂಲಕ ಲಕ್ಷ ಲಕ್ಷ ಬಹುಮಾನವನ್ನ ಬಾಚಿಕೊಂಡಿದ್ದಾರೆ. ಈ ಪೈಕಿ ಕಳೆದ 18 ಆವೃತ್ತಿಗಳಲ್ಲಿ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ವಿನ್ನರ್‌ಗಳ ಪಟ್ಟಿಯನ್ನ ನೋಡುವುದಾದ್ರೆ….

    ಆರೆಂಜ್‌ ಕ್ಯಾಪ್‌ ವಿನ್ನರ್ಸ್‌
    ಐಪಿಎಲ್‌ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ವಿನ್ನರ್ಸ್‌:
    2025 – ಗುಜರಾತ್‌ ಟೈಟಾನ್ಸ್‌ – ಸಾಯಿ ಸುದರ್ಶನ್‌ – 759 ರನ್‌
    2024 -ಆರ್‌ಸಿಬಿ – ವಿರಾಟ್‌ ಕೊಹ್ಲಿ – 741 ರನ್‌
    2023 – ಗುಜರಾತ್‌ ಟೈಟಾನ್ಸ್ – ಶುಭಮನ್‌ ಗಿಲ್‌ – 890 ರನ್‌
    2022 – ರಾಜಸ್ಥಾನ್‌ ರಾಯಲ್ಸ್‌ – ಜೋಸ್‌ ಬಟ್ಲರ್‌ – 863 ರನ್‌
    2021 – ಚೆನ್ನೈ ಸೂಪರ್‌ಕಿಂಗ್ಸ್‌ – ಋತುರಾಜ್‌ ಗಾಯಕ್ವಾಡ್‌ – 635 ರನ್‌
    2020 – ಕಿಂಗ್ಸ್‌ ಪಂಜಾಬ್‌ – ಕೆ.ಎಲ್‌ ರಾಹುಲ್‌ – 670 ರನ್‌
    2019 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 692 ರನ್‌
    2018 – ಸನ್‌ ರೈಸರ್ಸ್‌ ಹೈದರಾಬಾದ್‌ – ಕೇನ್‌ ವಿಲಿಯಮ್ಸನ್‌ – 735 ರನ್
    2017 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌‌ – 641 ರನ್‌
    2016 – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ವಿರಾಟ್‌ ಕೊಹ್ಲಿ – 973 ರನ್‌
    2015 – ಸನ್‌ ರೈಸರ್ಸ್‌ ಹೈದರಾಬಾದ್‌ – ಡೇವಿಡ್‌ ವಾರ್ನರ್‌ – 562 ರನ್‌
    2014 – ಕೋಲ್ಕತ್ತಾ ನೈಟ್‌ರೈಡರ್ಸ್‌ – ರಾಬಿನ್‌ ಉತ್ತಪ್ಪ – 660 ರನ್‌
    2013 – ಚೆನ್ನೈ ಸೂಪರ್‌ ಕಿಂಗ್ಸ್‌ – ಮೈಕಲ್ ಹಸ್ಸಿ – 733 ರನ್‌
    2012 – ಆರ್‌ಸಿಬಿ – ಕ್ರಿಸ್‌ ಗೇಲ್‌ – 733 ರನ್‌
    2011 – ಆರ್‌ಸಿಬಿ – ಕ್ರಿಸ್‌ ಗೇಲ್‌ – 608 ರನ್‌
    2010 – ಮುಂಬೈ ಇಂಡಿಯನ್ಸ್‌ – ಸಚಿನ್‌ ತೆಂಡೂಲ್ಕರ್‌ – 618 ರನ್‌
    2009 – ಸಿಎಸ್‌ಕೆ – ಮ್ತಾಥ್ಯೂ ಹೇಡನ್‌ – 572 ರನ್‌
    2008 – ಕಿಂಗ್ಸ್‌ ಪಂಜಾಬ್‌ – ಶಾನ್‌ ಮಾರ್ಷ್‌ – 616 ರನ್‌

    ಪರ್ಪಲ್‌ ಕ್ಯಾಪ್‌ – ಯಾವ ವರ್ಷ ಯಾರ ಮುಡಿಗೆ?
    2025 – ಗುಜರಾತ್‌ ಟೈಟಾನ್ಸ್‌ – ಪ್ರಸಿದ್ಧ್‌ ಕೃಷ್ಣ – 25 ವಿಕೆಟ್‌
    2024 – ಪಂಜಾಬ್‌ – ಹರ್ಷಲ್‌ ಪಟೇಲ್‌ – 24 ವಿಕೆಟ್‌
    2023 – ಜಿಟಿ – ಮೊಹಮ್ಮದ್‌ ಶಮಿ – 28 ವಿಕೆಟ್‌
    2022 – ಆರ್‌ಆರ್‌ – ಯಜ್ವೇಂದ್ರ ಚಾಹಲ್‌
    2021 – ಆರ್‌ಸಿಬಿ – ಹರ್ಷಲ್‌ ಪಟೇಲ್‌
    2020 – ಡೆಲ್ಲಿ ಕ್ಯಾಪಿಟಲ್ಸ್‌ – ರಬಾಡ
    2019 – ಸಿಎಸ್‌ಕೆ – ಇಮ್ರಾನ್‌ ತಾಹಿರ್‌
    2018 – ಪಂಜಾಬ್‌ – ಎ ತಾಯ್
    2017 – ಹೈದರಾಬಾದ್‌ – ಭುವನೇಶ್ವರ್‌ ಕುಮಾರ್
    2016 – ಹೈದರಾಬಾದ್‌ – ಭುವನೇಶ್ವರ್
    2015 – ಸಿಎಸ್‌ಕೆ – ಬ್ರಾವೋ
    2014 – ಸಿಎಸ್‌ಕೆ – ಮೋಹಿತ್‌ ಶರ್ಮ
    2013 – ಸಿಎಸ್‌ಕೆ – ಬ್ರಾವೋ
    2012 – ಡೆಲ್ಲಿ ಡೇರ್‌ಡೆವಿಲ್ಸ್ – ಮೊರ್ನೆ ಮಾರ್ಕೆಲ್‌
    2011 – ಮುಂಬೈ – ಲಸಿತ್‌ ಮಾಲಿಂಗ
    2010 – ಡೆಕ್ಕನ್‌ ಚಾರ್ಜಸ್‌ – ಪಿ. ಓಜಾ
    2009 – ಡೆಕ್ಕನ್‌ ಚಾರ್ಜಸ್‌ – ಆರ್‌ಪಿ ಸಿಂಗ್‌
    2008 – ಆರ್‌ಆರ್‌ – ಎಸ್‌. ತನ್ವೀರ್

  • IPL Champions | 18 ವರ್ಷದಲ್ಲಿ ಆರ್‌ಸಿಬಿಯ ಟಾಪ್‌ ದಾಖಲೆಗಳ ಬಗ್ಗೆ ನೀವು ತಿಳಿಯಲೇಬೇಕು..

    IPL Champions | 18 ವರ್ಷದಲ್ಲಿ ಆರ್‌ಸಿಬಿಯ ಟಾಪ್‌ ದಾಖಲೆಗಳ ಬಗ್ಗೆ ನೀವು ತಿಳಿಯಲೇಬೇಕು..

    ಅಹಮದಾಬಾದ್‌: ಅಭಿಮಾನಿಗಳು ಕಳೆದ 18 ವರ್ಷಗಳಿಂದ ಹಂಬಲಿಸುತ್ತಿದ್ದ ಐಪಿಎಲ್ ಟ್ರೋಫಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆದ್ದಿದೆ. 18ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು, 18ರ ನಂಟನ್ನು ಮುಂದುವರಿಸಿದೆ. ಮಂಗಳವಾರ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್‌ ಪಂದ್ಯದಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಬರೋಬ್ಬರಿ 20 ಕೋಟಿ ಬಹುಮಾನವನ್ನೂ ಬಾಚಿಕೊಂಡಿದೆ. ಆದ್ರೆ ಕಳೆದ 18 ವರ್ಷಗಳಲ್ಲಿ ಇಂದಿಗೂ ಸಹ ಯಾರೂ ಮುರಿಯದ ಒಂದಿಷ್ಟು ದಾಖಲೆಗಳನ್ನು ಆರ್‌ಸಿಬಿ ತಂಡದ ಆಟಗಾರರು ಮಾಡಿದ್ದಾರೆ. ಅವುಗಳ ಪಟ್ಟಿಯನ್ಜೊಮ್ಮೆ ನೋಡಿಬಿಡೋಣ ಬನ್ನಿ…

    ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಟಾಪ್‌-5 ಪ್ಲೇಯರ್ಸ್‌
    * ಕ್ರಿಸ್‌ ಗೇಲ್‌ – 2013ರಲ್ಲಿ – 175 ರನ್‌ – 66 ಎಸೆತ
    * ಬ್ರೆಂಡನ್‌ ಮೆಕಲಂ – 2008ರಲ್ಲಿ – 158 ರನ್‌ – 73 ಎಸೆತ
    * ಅಭಿಷೇಕ್‌ ಶರ್ಮಾ – 2025 – 141,
    * ಕ್ವಿಂಟನ್‌ ಡಿಕಾಕ್‌ – 2022 ರಲ್ಲಿ – 140 ರನ್‌ – 70 ಎಸೆತ
    * ಎಬಿ ಡಿವಿಲಿಯರ್ಸ್‌ – 2015 ರಲ್ಲಿ – 133 ರನ್‌ – 59 ಎಸೆತ

    ತೂಫಾನ್‌ ಶತಕ ಬಾರಿಸಿದ ಟಾಪ್‌-5 ಆಟಗಾರರು ನೋಡಿ
    * ಕ್ರಿಸ್‌ ಗೇಲ್‌ – 2013ರಲ್ಲಿ – 30 ಎಸೆತಗಳಲ್ಲಿ ಶತಕ
    * ವೈಭವ್‌ ಸೂರ್ಯವಂಶಿ – 35 ಎಸೆತಗಳಲ್ಲಿ ಶತಕ
    * ಹೆನ್ರಿಕ್‌ ಕ್ಲಾಸೆನ್‌ – 37 ಎಸೆತಗಳಲ್ಲಿ ಶತಕ
    * ಯೂಸುಫ್‌ ಪಠಾಣ್‌ – 2010 – 37 ಎಸೆತಗಳಲ್ಲಿ ಶತಕ
    * ಡೇವಿಡ್‌ ಮಿಲ್ಲರ್‌ – 2013ರಲ್ಲಿ – 38 ಎಸೆತಗಳಲ್ಲಿ ಶತಕ

    ಐಪಿಎಲ್‌ ಇತಿಹಾಸದಲ್ಲಿ ಹೆಚ್ಚು ರನ್‌ ಗಳಿಸಿದ ಟಾಪ್‌-5 ದೈತ್ಯ ಬ್ಯಾಟರ್ಸ್‌
    * ವಿರಾಟ್‌ ಕೊಹ್ಲಿ – 8,661 ರನ್‌ – 267 ಪಂದ್ಯ
    * ರೋಹಿತ್‌ ಶರ್ಮಾ – 7,046 ರನ್‌ – 272 ಪಂದ್ಯ
    * ಶಿಖರ್‌ ಧವನ್‌ – 6,769 ಪಂದ್ಯ – 222 ಪಂದ್ಯ
    * ಡೇವಿಡ್‌ ವಾರ್ನರ್‌ – 6,565 ರನ್‌ – 184 ಪಂದ್ಯ
    * ಸುರೇಶ್‌ ರೈನಾ – 5,528 ರನ್‌ – 264 ಪಂದ್ಯ

    ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಟಾಪ್‌-5 ಸಿಕ್ಸರ್‌ ವೀರರು
    * ಕ್ರಿಸ್‌ ಗೇಲ್‌ – 357 ಸಿಕ್ಸರ್‌ – 142 ಪಂದ್ಯ
    * ರೋಹಿತ್‌ ಶರ್ಮಾ – 302 ಸಿಕ್ಸರ್‌ – 272 ಪಂದ್ಯ
    * ವಿರಾಟ್‌ ಕೊಹ್ಲಿ – 291 ಸಿಕ್ಸರ್‌ – 266 ಒಂದ್ಯ
    * ಎಂ.ಎಸ್‌ ಧೋನಿ – 264 ಸಿಕ್ಸರ್‌ – 278 ಪಂದ್ಯ
    * ಎಬಿಡಿ ವಿಲಿಯರ್ಸ್‌ – 251 ಸಿಕ್ಸರ್‌ – 154 ಪಂದ್ಯ

    ಒಂದೇ ಆವೃತ್ತಿಯಲ್ಲಿ ವೈಯಕ್ತಿಕ ಗರಿಷ್ಠ ರನ್‌ ಹೊಳೆ ಹರಿಸಿದವರು
    * 2016 – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ವಿರಾಟ್‌ ಕೊಹ್ಲಿ – 973 ರನ್‌
    * 2023 – ಗುಜರಾತ್‌ ಟೈಟಾನ್ಸ್ – ಶುಭಮನ್‌ ಗಿಲ್‌ – 890 ರನ್‌
    * 2022 – ರಾಜಸ್ಥಾನ್‌ ರಾಯಲ್ಸ್‌ – ಜೋಸ್‌ ಬಟ್ಲರ್‌ – 863 ರನ್‌
    * 2025 – ಗುಜರಾತ್‌ ಟೈಟಾನ್ಸ್‌ – ಸಾಯಿ ಸುದರ್ಶನ್‌ – 759 ರನ್‌
    * 2024 -ಆರ್‌ಸಿಬಿ – ವಿರಾಟ್‌ ಕೊಹ್ಲಿ – 741 ರನ್‌