Tag: Shreyas Gopal

  • ಗೆಳತಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ ಶ್ರೇಯಸ್ ಗೋಪಾಲ್

    ಗೆಳತಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ ಶ್ರೇಯಸ್ ಗೋಪಾಲ್

    ನವದೆಹಲಿ: ಕರ್ನಾಟಕ ಕ್ರಿಕೆಟ್ ತಂಡದ ಸ್ಟಾರ್ ಆಲ್‍ರೌಂಡರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಶ್ರೇಯಸ್ ಗೋಪಾಲ್ ತನ್ನ ಗೆಳತಿ ನಿಖಿತಾರನ್ನು ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶ್ರೇಯಸ್ ಅವರ ಪತ್ನಿ ನಿಖಿತಾ ಶಿವ್ ದಿ ಮನ್ ನೆಟವರ್ಕ್‍ನ ಸ್ಥಾಪಕರು ಮತ್ತು ಅದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಖಿತಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದು, ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಶ್ರೇಯಸ್ ಗೋಪಾಲ್ ಜೊತೆಗಿನ ಹಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದೀಗ ಶ್ರೇಯಸ್ ಗೋಪಾಲ್ ಜೊತೆಗೆ ಮದುವೆ ಸಂಭ್ರಮದ ಹಲವು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ರಾಜಸ್ಥಾನ ರಾಯಲ್ಸ್ ತಂಡವು ಈ ನವ ವಧುವರರಿಗೆ ಟ್ವಿಟರ್‍ ನಲ್ಲಿ ಅಭಿನಂದಿಸಿದೆ. ಇದನ್ನೂ ಓದಿ: ಗಿಲ್, ಅಯ್ಯರ್, ಜಡೇಜಾ ಅರ್ಧಶತಕ – ಮೊದಲ ದಿನದ ಗೌರವ ಪಡೆದ ಟೀಂ ಇಂಡಿಯಾ

     

    View this post on Instagram

     

    A post shared by Shreyas Gopal (@shreyasg0519)

    ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ ಶ್ರೇಯಸ್ ಒಟ್ಟು 3 ಪಂದ್ಯಗಳನ್ನು ಮಾತ್ರ ಆಡಿದ್ದರು. ರಾಜಸ್ಥಾನ ತಂಡ ಕೂಡ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿತ್ತು. ಇದೀಗ 15ನೇ ಆವೃತ್ತಿಯ ಐಪಿಎಲ್‍ಗಾಗಿ ಭಾರತದಲ್ಲಿ ಸಿದ್ಧತೆ ನಡೆಯುತ್ತಿದ್ದು, ಆಟಗಾರರ ಮೆಗಾ ಹರಾಜು ಕೆಲ ತಿಂಗಳಲ್ಲಿ ನಡೆಯಲಿದೆ. ಇದನ್ನೂ ಓದಿ: UAE T20 ಲೀಗ್‍ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್