Tag: Shreya Sharan

  • ‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ : ಬ್ರೇಕಿಂಗ್ ನ್ಯೂಸ್ ಕೊಟ್ಟ ಚಂದ್ರು

    ‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ : ಬ್ರೇಕಿಂಗ್ ನ್ಯೂಸ್ ಕೊಟ್ಟ ಚಂದ್ರು

    ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾದಲ್ಲಿ ಶಿವರಾಜಕುಮಾರ್ (Shivarajkumar)ನಟಿಸಿದ್ದಾರೆ ಎನ್ನುವ ವಿಚಾರ ಆಗಾಗ್ಗೆ ಸುದ್ದಿ ಆಗುತ್ತಲೇ ಇತ್ತು. ಚಂದ್ರು ಸಿನಿಮಾ ಎಂದರೆ ಅಲ್ಲಿ ಶಿವಣ್ಣ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರದವರು. ಹಾಗಾಗಿ ಈ ಸಿನಿಮಾದಲ್ಲೂ ಶಿವರಾಜಕುಮಾರ್ ಇರುವುದು ಪಕ್ಕಾ ಎಂದು ಹೇಳಲಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಶಿವಣ್ಣ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಪೋಸ್ಟರ್ ಅನ್ನುವ ಚಂದ್ರು ಹಂಚಿಕೊಂಡಿದ್ದಾರೆ.

    ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ‘ಕಬ್ಜ’ ಸಿನಿಮಾ ಟೀಮ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮಾರ್ಚ್ 4ರಂದು ಚಿತ್ರದ ಟ್ರೈಲರ್ (Trailer) ರಿಲೀಸ್ ಮಾಡುತ್ತಿದ್ದು, ಟ್ರೈಲರ್ ನೋಡುವುದಕ್ಕಾಗಿಯೇ ಹಲವು ತಿಂಗಳುಗಳಿಂದ ಅಭಿಮಾನಿಗಳು ಕಾದಿದ್ದಾರೆ. ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಹಾಡು ಈಗಾಗಲೇ ಕೋಟ್ಯಾಂತರ ಕೇಳುಗರನ್ನು ತಲುಪಿದೆ. ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕರು. ಶನಿವಾರ (ಮಾ.4) ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಏಕಕಾಲಕ್ಕೆ ಎಲ್ಲ ಭಾಷೆಯ ಟ್ರೈಲರ್ ಗಳು ರಿಲೀಸ್ ಆಗಲಿವೆ.

    ನಿರ್ದೇಶಕ ಆರ್.ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಶ್ರೀಯಾ ಶರಣ್ (Shreya Sharan) ನಾಯಕಿಯಾಗಿದ್ದಾರೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹೊಂದಿರುವ ಚಿತ್ರ ಇದಾಗಿದೆ. ಅಲ್ಲದೇ, ಅಚ್ಚರಿ ಮೂಡಿಸುವಂತ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಯಾರೆಲ್ಲ ನಟಿಸಿದ್ದಾರೆ ಎನ್ನುವ ವಿಷಯವನ್ನು ಸದ್ಯಕ್ಕೆ ಹೇಳುವುದಿಲ್ಲ ಎನ್ನುತ್ತಾರೆ ಚಂದ್ರು.

    ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ನಿರ್ದೇಶಕರದ್ದು. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗುತ್ತಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲೂ ಏಕಕಾಲಕ್ಕೆ ಕಬ್ಜ ಬಿಡುಗಡೆ ಆಗಲಿದೆ.

  • ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಭಾರತೀಯ ಚಿತ್ರ ರಂಗದಲ್ಲೇ ಹೊಸ ಮನ್ವಂತರಕ್ಕೆ ಕಾರಣವಾಗುತ್ತಿದೆ. ಭಾರೀ ಬಜೆಟ್ ಮತ್ತು ಸಿನಿಮಾ ತಾರೆಯರಿಂದಾಗಿಯೇ ಚಿತ್ರ ನಿರೀಕ್ಷೆ ಮೂಡಿಸಿದೆ. ಉಪೇಂದ್ರ ಅವರಿಂದ ಶುರುವಾಗಿ ಕಲಾವಿದರ ಆಯ್ಕೆ, ಒಂದೊಂದೇ ತಿರುವು ಪಡೆದುಕೊಳ್ಳುತ್ತಿದೆ.

    ಉಪೇಂದ್ರ ನಂತರ ಮತ್ತೊಬ್ಬ ಸ್ಟಾರ್ ಈ ಸಿನಿಮಾಗೆ ಎಂಟ್ರಿ ಕೊಟ್ಟರು. ಅವರೇ ಕಿಚ್ಚ ಸುದೀಪ್. ಕಿಚ್ಚ ಮತ್ತು ಉಪ್ಪಿ ಕಾಂಬಿನೇಷನ್ ನ ಚಿತ್ರಗಳು ಈಗಾಗಲೇ ಗೆದ್ದಿರುವುದರಿಂದ ಮತ್ತಷ್ಟು ಕುತೂಹಲಕ್ಕೆ ಕಬ್ಜ ಕಾರಣವಾಯಿತು. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಮೊನ್ನೆಯಷ್ಟೇ ಒಬ್ಬ ನಾಯಕಿಯನ್ನು ಚಂದ್ರು ಪರಿಚಯಿಸಿದರು. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಹೌದು, ಉಪ್ಪಿ ಮತ್ತು ಸುದೀಪ್ ನಂತರ  ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ಶ್ರೀಯಾ ಶರಣ್ ತಾರಾಗಣದಲ್ಲಿ ಕಾಣಿಸಿಕೊಂಡ ಪ್ರಮುಖ ಕಲಾವಿದೆ. ಈ ಸಿನಿಮಾದಲ್ಲಿ ಶ್ರೀಯಾ ನಾಯಕಿಯಾಗಿ ನಟಿಸುತ್ತಿದ್ದು, ಹೊಸ ಬಗೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶ್ರೀಯಾ  ದೃಶ್ಯಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಮೊನ್ನೆಯಷ್ಟೇ ಶ್ರೀಯಾ ಅವರನ್ನು ಪರಿಚಯಿಸಿದ್ದ ನಿರ್ದೇಶಕ ಚಂದ್ರು, ಇದೀಗ ದಕ್ಷಿಣ ಸಿನಿಮಾ ರಂಗದಿಂದ ಮತ್ತಿಬ್ಬರು ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವತ್ತೇ ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮುರಳಿ ಶರ್ಮಾ ಮತ್ತು ಪೊಸನಿ ಕೃಷ್ಣ ಮುರಳಿ ಕಬ್ಜ ಸಿನಿಮಾದ ಮಹತ್ವದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  • ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಶ್ರೀಯಾ ಶರಣ್ ನಟಿಸಲಿದ್ದಾರೆ ಎಂದು ಎರಡು ಗಂಟೆಗಳ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಅದು ಅಧಿಕೃತವಾಗಿದ್ದು, ಈ ಸಿನಿಮಾದಲ್ಲಿ ಶ್ರೀಯಾ ಅವರು ಮಧುಮತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.

  • ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಕ್ಷಿಣದ ಖ್ಯಾತ ನಟಿ ಶ್ರೀಯಾ ಶರಣ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಪುನೀತ್ ರಾಜ್ ಕುಮಾರ್ ನಟನೆಯ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು, ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಇದೀಗ ಆರ್.ಚಂದ್ರು ನಿರ್ದೇಶನದ ಕಬ್ಜ ಅಡ್ದದಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ

    ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

    ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.

  • ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ನಟಿ ಶ್ರೇಯಾ ಪತಿಗೆ ಕೊರೊನಾ ಲಕ್ಷಣ- ಆಸ್ಪತ್ರೆಗೆ ಬರಬೇಡಿ ಎಂದ ವೈದ್ಯರು

    ಮ್ಯಾಡ್ರಿಡ್: ನಟಿ ಶ್ರೇಯಾ ಶರಣ್ ಪತಿ ಆಂಡ್ರೆ ಅವರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಶ್ರೇಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್‍ನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್‍ನಲ್ಲಿಯೇ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಶ್ರೇಯಾ ಪತಿ ಆಂಡ್ರೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಶ್ರೇಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

    ಆಂಡ್ರೆಗೆ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಆದ್ದರಿಂದ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

    ಕೊನೆಗೆ ನಾವು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿದ್ದೆವು. ನಾವಿಬ್ಬರು ಬೇರೆ ಬೇರೆ ರೂಂಗಳಲ್ಲಿ ಮಲಗುತ್ತಿದ್ದೆವು. ಅಷ್ಟೇ ಅಲ್ಲದೇ ಪರಸ್ಪರ ಅಂತರವನ್ನು ಕಾಯ್ದುಕೊಂಡಿದ್ದೆವು. ಸದ್ಯ ಆಂಡ್ರೆ ಈಗ ಚೇತರಿಸಿಕೊಳ್ಳತ್ತಿದ್ದಾರೆ ಎಂದು ಶ್ರೇಯಾ ತಿಳಿಸಿದ್ದಾರೆ.

    ಶ್ರೇಯಾ ಮತ್ತು ಆಂಡ್ರೆ ಅವರು ಮದುವೆಯಾಗಿ ಎರಡು ವರ್ಷಗಳಾಗಿದ್ದು, ಮಾರ್ಚ್ 13 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಇತ್ತು. ನಾವಿಬ್ಬರು ಈ ಖುಷಿಯನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದು, ಅದರಂತೆಯೇ ಸ್ಪೇನ್ ಹೋಟೆಲ್ ಸಹ ಬುಕ್ ಮಾಡಿದೆವು. ಆದರೆ ಅಷ್ಟರಲ್ಲೇ ಕೊರೊನಾ ವ್ಯಾಪಿಸಿದ ಕಾರಣ ಇಡೀ ಸ್ಪೇನ್ ದೇಶವೇ ಲಾಕ್‍ಡೌನ್ ಆಗಿತ್ತು. ಆಗಲೇ ನಮಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು. ಪೊಲೀಸರು ಕೂಡ ಮನೆಯಿಂದ ಹೊರಬಾರದೆಂದು ಸೂಚಿಸಿದ್ದರು ಎಂದು ಹೇಳಿದ್ದಾರೆ.

  • ಮದುವೆ ಸುದ್ದಿ ನಿರಾಕರಿಸುತ್ತಲೇ ರಷ್ಯಾ ಯುವಕನೊಂದಿಗೆ ಸಪ್ತಪದಿ ತುಳಿದ ಶ್ರೇಯಾ ಶರಣ್

    ಮದುವೆ ಸುದ್ದಿ ನಿರಾಕರಿಸುತ್ತಲೇ ರಷ್ಯಾ ಯುವಕನೊಂದಿಗೆ ಸಪ್ತಪದಿ ತುಳಿದ ಶ್ರೇಯಾ ಶರಣ್

    ನವದೆಹಲಿ: ಬಹುಭಾಷಾ ನಟಿ ಶ್ರೇಯಾ ಶರಣ್ ತಮ್ಮ ಬಹು ಕಾಲದ ಗೆಳೆಯ ರಷ್ಯಾದ ಟೆನಿಸ್ ಆಟಗಾರ ಹಾಗೂ ಉದ್ಯಮಿಯಾಗಿರುವ ಆ್ಯಂಡ್ರಿ ಕೊಸ್ಚೆವೆವ್ ಅವರೊಂದಿಗೆ ಮದುವೆಯಾಗಿದ್ದಾರೆ.

    ಮಾರ್ಚ್ 12 ರಂದು ಮುಂಬೈನ ನಿವಾಸದಲ್ಲಿ ಶ್ರೇಯಾ, ಆ್ಯಂಡ್ರಿ ಜೋಡಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ತೀರ ಆಪ್ತವರ್ಗಕ್ಕೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    2001ರಲ್ಲಿ ತೆಲುಗು `ಇಷ್ಟಂ’ ಚಿತ್ರದ ಮೂಲಕ ಶ್ರೇಯಾ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪುನೀತ್ ರಾಜ್‍ಕುಮಾರ್ ಅಭಿನಯದ `ಅರಸು’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣವಾಗಿದ್ದ `ಚಂದ್ರ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲದೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸಿದ್ದ `ಶಿವಾಜಿ’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

    ಕಳೆದ ವರ್ಷವೇ ಶ್ರೇಯಾ ರಷ್ಯಾ ಯುವಕನೊಂದಿಗೆ ಡೇಟಿಂಗ್ ನಡೆಸುತ್ತಿರುವ ಕುರಿತ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈ ಸುದ್ದಿಯನ್ನು ಶ್ರೇಯಾ ಅವರ ತಾಯಿ ನಿರಾಕರಿಸಿದ್ದರು. ಅಲ್ಲದೇ ಶ್ರೇಯಾ ಅವರು ಸಹ ಇದು ಕೇವಲ ಗಾಸಿಪ್ ಎಂದು ಹೇಳಿದ್ದರು. ಆದರೆ ಸದ್ಯ ರಷ್ಯಾ ಯುವಕನೊಂದಿಗೆ ಮದುವೆಯಾಗುವುದರೊಂದಿಗೆ ಮಾಧ್ಯಮದ ಸುದ್ದಿಗಳು ನಿಜವಾಗಿದೆ. ಆದರೆ ಇದುವರೆಗೂ ಈ ಸುದ್ದಿಯ ಕುರಿತು ಶ್ರೇಯಾ ಅವರಿಂದ ಯಾವುದೇ ಸ್ಪಷ್ಟನೆ ಲಭಿಸಿಲ್ಲ.