Tag: Shree Kshetra Dharmasthala

  • ಧರ್ಮಸ್ಥಳದಲ್ಲಿ ಮೋದಿ ದೀರ್ಘಾಯಸ್ಸು, ಆರೋಗ್ಯ ವೃದ್ಧಿಗಾಗಿ ಮಹಾಮೃತ್ಯುಂಜಯ ಯಾಗ

    ಧರ್ಮಸ್ಥಳದಲ್ಲಿ ಮೋದಿ ದೀರ್ಘಾಯಸ್ಸು, ಆರೋಗ್ಯ ವೃದ್ಧಿಗಾಗಿ ಮಹಾಮೃತ್ಯುಂಜಯ ಯಾಗ

    ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಮಹಾಮೃತ್ಯುಂಜಯ ಯಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ನಡೆಯಿತು.

    ಧರ್ಮಸ್ಥಳದ ದೇವಸ್ಥಾನದ ಅಮೃತ ವರ್ಷಿಣಿ ಸಂಭಾಗಣದಲ್ಲಿ ನಡೆದ ಯಾಗದ ನೇತೃತ್ವವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಹಿಸಿದ್ದರು. ಯಾಗ ಕರ್ತೃಗಳಾಗಿ ಹರೀಶ್ ಪೂಂಜಾ ದಂಪತಿ ಕುಳಿತು, ಪೂಜಾ ಕಾರ್ಯದಲ್ಲಿ ತೊಡಗಿದ್ದರು. 80 ಅರ್ಚಕರು ಏಕಕಂಠದಲ್ಲಿ ರುದ್ರ ಪಾರಾಯಣ ನಡೆಸಿದ್ದು, ಮೋದಿ ಹೆಸರಿನಲ್ಲಿ ವಿವಿಧ ವಿಧಿಗಳನ್ನು ನಡೆಸಲಾಗಿದೆ. ಮೋದಿಯ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಒಂದು ಲಕ್ಷ ಮೃತ್ಯುಂಜಯ ಜಪ ಪಾರಾಯಣ ಕೂಡ ಮಾಡಲಾಯಿತು. ಇದನ್ನೂ ಓದಿ: ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು

    ಇಂದು ಬೆಳಗ್ಗೆ ಚತುರ್ವೇದ ಪಾರಾಯಣ, ಗೋಪೂಜೆ, ಮಹಾಗಣಪತಿ ಹೋಮ, ಸಪ್ತ ಕುಂಡಗಳಲ್ಲಿ ಮಹಾ ಮೃತ್ಯುಂಜಯ ಹೋಮ ನಡೆದಿದೆ. ಈ ಎಲ್ಲಾ ಕಾರ್ಯಗಳಲ್ಲಿ ಹರೀಶ್ ಪೂಂಜ ದಂಪತಿ ಯಾಗ ಕರ್ತೃಗಳಾಗಿ ಕುಳಿತು, ಗೋ, ಗಜ ಹಾಗೂ ಅಶ್ವ ಪೂಜೆಗಳನ್ನು ನೆರವೇರಿಸಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್

    ಈ ಯಾಗದಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಶಶಿಕಲಾ ಜೊಲ್ಲೆ, ಸಿಸಿ ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ