Tag: Shravanabelagola

  • ಕಾಯಿ ಆರಿಸುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

    ಕಾಯಿ ಆರಿಸುವಾಗ ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು

    ಹಾಸನ: ತೆಂಗಿನಕಾಯಿ ಗೊನೆ (Coconut Shell) ಬಿದ್ದು ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ಚನ್ನರಾಯಪಟ್ಟಣದ (Channarayapatna) ಬಿ.ಚೋಳೇನಹಳ್ಳಿಯಲ್ಲಿ ನಡೆದಿದೆ.

    ಪ್ರಜ್ವಲ್ (16) ಮೃತಪಟ್ಟ ಬಾಲಕ. ಗಾಳಿ, ಮಳೆಗೆ ಬಿದ್ದಿದ್ದ ಕಾಯಿಗಳನ್ನು ಒಂದೆಡೆ ಸಂಗ್ರಹಿಸುವಾಗ ಏಕಾಏಕಿ ಮರದಿಂದ ಕಾಯಿ ಗೊನೆ ಬಾಲಕನ ಮೇಲೆ ಬಿದ್ದಿದೆ. ತೀವ್ರವಾಗಿ ಪೆಟ್ಟಾಗಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.

    ಶ್ರವಣಬೆಳಗೊಳ (Shravanabelagola) ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಮಗ ಪ್ರಜ್ವಲ್‍ನೊಂದಿಗೆ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟಕ್ಕೆ ಹೋಗಿ ಕಾಯಿ ಎತ್ತಿ ಹಾಕಿ ಇತರೆ ಸಣ್ಣಪುಟ್ಟ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಭಾರೀ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ನೆಲಕ್ಕೆ ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ತೆಂಗಿನಮರದಿಂದ ಬಾಲಕನ ಮೇಲೆ ತೆಂಗಿನಕಾಯಿ ಗೊನೆಗಳು ಬಿದ್ದಿದ್ದವು. ಇದನ್ನೂ ಓದಿ: ಆಷಾಢದ ಮೊದಲ ಶುಕ್ರವಾರಕ್ಕೆ ತಾಯಿ ಚಾಮುಂಡಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

    ಪ್ರಜ್ವಲ್ ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

  • ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಫೈಟ್ – ಶ್ರವಣಬೆಳಗೊಳದಲ್ಲಿ ಯಾರಿಗೆ ಜಯ?

    ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಫೈಟ್ – ಶ್ರವಣಬೆಳಗೊಳದಲ್ಲಿ ಯಾರಿಗೆ ಜಯ?

    ತಿಹಾಸಿಕ ನಗರಿ ಶ್ರವಣಬೆಳಗೊಳ ರಾಜ್ಯದ ಪ್ರಮುಖ ಜೈನ ಧಾರ್ಮಿಕ ಕೇಂದ್ರಗಳಲ್ಲೊಂದು. ಇಲ್ಲಿನ ಗೊಮ್ಮಟೇಶ್ವರ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಇಂತಹ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟದ ಸಾಧ್ಯತೆಯಿದೆ. ಹೀಗಿದ್ದರೂ ಈ ಬಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯ ಹಾಗೂ ಭ್ರಷ್ಟಾಚಾರ ಆರೋಪ ಮುಖ್ಯ ವಿಷಯ ಆಗಲಿದೆ.

    ಶ್ರವಣಬೆಳಗೊಳ ಕ್ಷೇತ್ರದಲ್ಲಿ ಈವರೆಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್‍ಪಿ) 4 ಬಾರಿ, 5 ಬಾರಿ ಜೆಡಿಎಸ್, 4 ಬಾರಿ ಕಾಂಗ್ರೆಸ್, ಒಮ್ಮೆ ಜನತಾಪಾರ್ಟಿ ಗೆದ್ದಿದೆ.

    ಕಣದಲ್ಲಿರುವ ಅಭ್ಯರ್ಥಿಗಳು:
    ಸಿ.ಎನ್.ಬಾಲಕೃಷ್ಣ (ಜೆಡಿಎಸ್)
    ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್)
    ಚಿದಾನಂದ್ (ಬಿಜೆಪಿ)

    ಬಾಲಕೃಷ್ಣ: ಜೆಡಿಎಸ್ ಅಭ್ಯರ್ಥಿ ಬಾಲಕೃಷ್ಣ ಜನರ ಮಧ್ಯೆ ಬೆರೆಯುವ ಶಾಸಕರಾಗಿದ್ದಾರೆ. ಅವರು ಏತ ನೀರಾವರಿ, ಕೆರೆ ತುಂಬಿಸುವುದು, ಅಭಿವೃದ್ಧಿ ಸೇರಿದಂತೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಗೆಲುವಿಗೆ ಸಹಕಾರಿಯಾಗಿದೆ. ಅದೇ ರೀತಿ ಅವರ ಮೈನಸ್ ಪಾಯಿಂಟ್ ನೋಡುವುದಾದರೇ, ದ್ವೇಷ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆರೋಪಗಳಿರುವುದು ಹಿನ್ನಡೆಯಾಗುವ ಕಾರಣವಾಗುವ ಸಾಧ್ಯತೆಯಿದೆ.

    ಗೋಪಾಲಸ್ವಾಮಿ: ಕಾಂಗ್ರೆಸ್ ಅಭ್ಯರ್ಥಿ ಗೋಪಾಲಸ್ವಾಮಿ ಅವರು ಕಳೆದ ಬಾರಿ ಎಂಎಲ್‍ಸಿಯಾಗಿದ್ದರು. ಇವರು ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲ ಇರುವುದು ಚುನಾವಣೆಯಲ್ಲಿ ಸಹಾಯವಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಪಾಯಿಂಟ್ ನೋಡುವುದಾದರೇ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದಿಲ್ಲ. ಜೊತೆಗೆ ಖಡಕ್ ನಡೆ ಇಲ್ಲದೇ ಇರುವುದು ಇವರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಪಕ್ಷದೊಳಗಿನ ಬಂಡಾಯ ಎದ್ದಿರುವುದು ಇವರಿಗೆ ಹಿನ್ನಡೆಯಾಗುತ್ತದೆ.

    ಚಿದಾನಂದ: ಬಿಜೆಪಿ ಅಭ್ಯರ್ಥಿ ಚಿದಾನಂದ ಅವರು ಇನ್ನೂ ಯುವಕರಾಗಿರುವುದು ಇವರಿಗೆ ಪ್ಲಸ್ ಆಗಿದೆ. ಅಷ್ಟೇ ಅಲ್ಲದೇ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಹೊಸ ಮುಖವಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಗೆಲುವಿಗೆ ಸಹಕಾರಿಯಾಗುವ ಸಾಧ್ಯತೆಯಿದೆ. ಇನ್ನೂ ಮೈನಸ್ ಹೇಳುವುದಾದರೇ ಅಭ್ಯರ್ಥಿ ಕ್ಷೇತ್ರದಲ್ಲಿ ಪರಿಚಯ ಇಲ್ಲ ಜೊತೆಗೆ ಇಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿಲ್ಲದಿರುವುದು ಮೈನಸ್ ಆಗಿದೆ. ಇದರ ಜೊತೆಗೆ ಪೈಪೋಟಿ ಇಲ್ಲದೆ ಟಿಕೆಟ್ ಪಡೆದಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರಬಲವಾಗಿರುವುದು ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿ – 15 ಕ್ಕೂ ಅಧಿಕ ಜನರಿಗೆ ಗಾಯ

    ಜಾತಿ ಲೆಕ್ಕಾಚಾರ ಏನು?:
    ಈ ಕ್ಷೇತ್ರದಲ್ಲೂ ಒಕ್ಕಲಿಗ ಮತದಾರರ ಬರೋಬ್ಬರಿ 1,34,000 ಇದ್ದು, ಇವರೇ ನಿರ್ಣಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಪರಿಶಿಷ್ಟ ಜಾತಿ 21,000, ಎಸ್‍ಟಿ 10,000, ಲಿಂಗಾಯತ ಹಾಗೂ ಕುರುಬ 7,000 ಉಳಿದ ಸಮುದಾಯದವರು ನಾಲ್ಕೈದು ಸಾವಿರದ ಒಳಗಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,12,070. ಇವರಲ್ಲಿ 1,06,029 ಮಂದಿ ಪುರುಷರಿದ್ದರೆ, 1,06,041 ಮಂದಿ ಮಹಿಳೆಯರಿದ್ದಾರೆ. ಇದನ್ನೂ ಓದಿ: ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

  • ಶ್ರವಣಬೆಳಗೊಳದ ಚಿಕ್ಕಬೆಟ್ಟದ ತಪ್ಪಲಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಅಂತ್ಯಕ್ರಿಯೆ

    ಶ್ರವಣಬೆಳಗೊಳದ ಚಿಕ್ಕಬೆಟ್ಟದ ತಪ್ಪಲಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಅಂತ್ಯಕ್ರಿಯೆ

    ಹಾಸನ: ಶ್ರವಣಬೆಳಗೊಳದ (Shravanabelagola) ಖ್ಯಾತ ಜೈನ ಮುನಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukeerthi Bhattaraka Swamiji)  ಅವರ ಅಂತ್ಯಕ್ರಿಯೆ ಚಿಕ್ಕಬೆಟ್ಟದ ತಪ್ಪಲಿನಲ್ಲಿ ಜೈನ ಸಂಪ್ರದಾಯದ ಅನುಸಾರ ಕಿರಿಯ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಿತು.

    ಜೈನ ಮುನಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ನಸುಕಿನ ಜಾವ ಜೀನೈಕ್ಯರಾಗಿದ್ದಾರೆ. ಸ್ವಾಮೀಜಿ ಗುರುವಾರ ಬೆಳಗ್ಗೆ ನಿತ್ಯಕರ್ಮಗಳಿಗೆ ಎದ್ದಂತಹ ಸಮಯದಲ್ಲಿ ಕಾಲುಜಾರಿ ಕೆಳಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಸ್ವಾಮೀಜಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

    73 ವರ್ಷದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೀನೈಕ್ಯರಾಗಿರುವುದಾದಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ, ಆದಿಚುಂಚನಗಿರಿ ಸ್ವಾಮೀಜಿ, ಸುತ್ತೂರು ಶ್ರೀಗಳು ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ. ಶ್ರೀಮಠದ ಆವರಣದಲ್ಲಿ ಸ್ವಾಮೀಜಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಅಂತಿಮ ನಮನ ಸಲ್ಲಿಸಿದರು. ಶ್ರೀಗಳ ಗೌರವಾರ್ಥ ಶ್ರವಣಬೆಳಗೊಳದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಲಾಯಾಯಿತು.

    1949 ಮೇ 3 ರಂದು ರತ್ನವರ್ಮರಾಗಿ ಕಾರ್ಕಳದ (Karkala) ವರಂಗ ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿಯವರಿಗೆ 74 ವರ್ಷವಾಗಿತ್ತು. ಸಂಸ್ಕೃತ, ಪ್ರಾಕೃತ, ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ (Mysuru University) ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ (Bengaluru University) ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. 1969 ಡಿ.12 ರಂದು ಸ್ವಾಮೀಜಿಗಳಾದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    1970 ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೊಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದೆ. 1981,1993, 2006 ಹಾಗೂ 2018 ರ ಮಹಾಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಇದನ್ನೂ ಓದಿ: ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

  • ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

    ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

    ಹಾಸನ: ನಿತ್ಯಕರ್ಮಕ್ಕೆ ಎದ್ದಾಗ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದು ಶ್ರವಣಬೆಳಗೊಳ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukeerthi Bhattaraka Swamiji) ಮೃತಪಟ್ಟಿದ್ದಾರೆ ಎಂದು ಡಿಸಿ ಎಂ.ಎಸ್.ಅರ್ಚನಾ (M.S.Archana) ಮಾಹಿತಿ ನೀಡಿದ್ದಾರೆ.

    ಕಾಲು ನೋವಿನಿಂದ ಬಳಲುತ್ತಿದ್ದ ಶ್ರೀಗಳು ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ತೀವ್ರ ಗಾಯಗಳಿಂದ ಬಳಲಿದ್ದ ಶ್ರೀಗಳನ್ನು ಮಠದ ಸಿಬ್ಬಂದಿಗಳು ಆಸ್ಪತ್ರೆಗೆ ಸಾಗಿಸಿದ್ದರು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಶ್ರೀಗಳು ಮೃತಪಟ್ಟಿದ್ದಾರೆ. ಶ್ರವಣಬೆಳಗೊಳದ (Shravanabelagola) ಚಂದ್ರಗಿರಿ ಬೆಟ್ಟದ (Chandragiri Betta) ತಪ್ಪಲಿನಲ್ಲಿ ಸಂಜೆ ಆರು ಗಂಟೆಯೊಳಗಾಗಿ ಶ್ರೀಗಳ ಅಂತ್ಯಸಂಸ್ಕಾರ (Funeral) ನೆರವೇರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಕಾನೂನು ವಿದ್ಯಾರ್ಥಿ ಕಿಡ್ನಾಪ್‌ಗೈದು ಥಳಿತ – ಆರೋಪಿಗಳ ಬಂಧನ 

    1949 ಮೇ 3 ರಂದು ರತ್ನವರ್ಮರಾಗಿ ಕಾರ್ಕಳದ (Karkala) ವರಂಗ ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿಯವರಿಗೆ 74 ವರ್ಷವಾಗಿತ್ತು. ಸಂಸ್ಕೃತ, ಪ್ರಾಕೃತ, ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ (Mysuru University) ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ (Bengaluru University) ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು. 1969 ಡಿ.12 ರಂದು ಸ್ವಾಮೀಜಿಗಳಾದರು. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    1970 ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೊಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದೆ. 1981,1993, 2006 ಹಾಗೂ 2018 ರ ಮಹಾಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ – ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

  • ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶ್ರವಣಬೆಳಗೊಳದಲ್ಲಿ ಮೌನ ಪ್ರತಿಭಟನೆ

    ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶ್ರವಣಬೆಳಗೊಳದಲ್ಲಿ ಮೌನ ಪ್ರತಿಭಟನೆ

    ಹಾಸನ: ಮೈಸೂರಿನ ರಾಜಕಾರಣಿಯೊಬ್ಬರು ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದುದನ್ನು ವಿರೋಧಿಸಿ ಹಾಸನದಲ್ಲಿ ಮೌನ ಪ್ರತಿಭಟನೆ ನಡೆದಿದೆ.

    ಶ್ರವಣಬೆಳಗೊಳದ ದಿಗಂಬರ ಜೈನ ಸಮಾಜ, ಮಹಿಳಾ ಸಮಾಜ, ಬ್ರಾಹ್ಮಣ ಸಮಾಜ, ವರ್ತಕರ ಸಂಘ, ರೈತ ಸಂಘ ಹಾಗೂ ಕ್ಷೇತ್ರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಮೌನ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿರುವ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಮಾತುಗಳಿಂದ ಶ್ರವಣಬೆಳಗೊಳದ ಸಮಸ್ತ ಜನತೆಗೆ ಅಪಮಾನ ಮಾಡಿದಂತಾಗಿದೆ. ಆದ್ದರಿಂದ ಮೌನ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು ಹಾಗೂ ಮುಂದೆಂದೂ ಈ ರೀತಿಯ ಘಟನೆಗಳು ನಡೆಯದಿರಲಿ ಎಂದು ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

    ಶ್ರೀಕ್ಷೇತ್ರ ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ, ವಿಶ್ವಕ್ಕೆ ಶಾಂತಿ ಮತ್ತು ಹಿಂಸೆಯನ್ನು ಸಾರುತ್ತಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಜನಸಾಮಾನ್ಯರಿಗೆ ನೋವುಂಟುಮಾಡಿದೆ. ಇನ್ನೂ ಮುಂದೆ ಜೈನ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳು ಕೇಳಿಬರಬಾರದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ಗ್ರಾಮ ಪಂಚಾಯತ್ ಸದಸ್ಯ ಅಫ್ತಾಬ್ ಪಾಷಾ ಮಾತನಾಡಿ, ಯಾವುದೇ ಧರ್ಮದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಕುರಾನ್‍ನಲ್ಲೇ ಉಲ್ಲೇಖವಿದೆ. ಅವರು ಈ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

    ಶ್ರೀಜೈನ ಮಠದ ಆವರಣದಿಂದ ಸುಮಾರು 500ಕ್ಕೂ ಹೆಚ್ಚು ಜನರು ಮೌನ ಮೆರವಣಿಗೆ ಹೊರಟು ನಾಡಕಚೇರಿಗೆ ತೆರಳಿ ಉಪ ತಹಶೀಲ್ದಾರ್ ನಂಜೇಗೌಡ ಹಾಗೂ ಪೊಲೀಸ್ ಉಪ ನಿರೀಕ್ಷಕ ಸ್ವಾಮಿಯವರಿಗೆ ದೂರು ಪತ್ರ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎನ್.ಅಶೋಕ್ ಕುಮಾರ್, ಡಾ. ಬಿ.ಆರ್.ಯುವರಾಜ್, ದಮ್ಮನಿಂಗಳ ಶ್ರೀನಿವಾಸ್, ರೈತ ಸಂಘದ ಜಿಲ್ಲಾಧ್ಯಕ್ಷ ಮಂಜಣ್ಣ, ಎಸ್.ಆರ್.ಲೋಕೇಶ್, ಎಸ್.ಪಿ.ಭಾನುಕುಮಾರ್, ಯಶಸ್, ಜಿ.ಪಿ.ನೇಮಿಶ್ ಕುಮಾರ್, ಎಸ್.ಎಂ.ಕಿರಣ್, ಜಿ.ಪಿ.ಜಿನೇಶ್, ಎಸ್.ಎಸ್.ಶ್ರೇಯಸ್, ರಾಜು, ಪೂರ್ಣಿಮಾ ಅನಂತಪದ್ಮನಾಭ್, ಎಸ್.ಪಿ.ಮಹೇಶ್ ಮುಂತಾದವರಿದ್ದರು.

  • ಶ್ರವಣಬೆಳಗೊಳದಲ್ಲಿ ಮತ್ತೊಂದು ಶಿಲಾಶಾಸನ ಪತ್ತೆ

    ಶ್ರವಣಬೆಳಗೊಳದಲ್ಲಿ ಮತ್ತೊಂದು ಶಿಲಾಶಾಸನ ಪತ್ತೆ

    ಹಾಸನ: ಇಡೀ ರಾಜ್ಯದಲ್ಲಿ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಶಿಲಾ ಶಾಸನಗಳು ದೊರೆತಿರುವ ಶ್ರವಣಬೆಳಗೊಳದಲ್ಲಿ ಮತ್ತೊಂದು ಅಪ್ರಕಟಿತ ಶಿಲಾ ಶಾಸನ ಪತ್ತೆಯಾಗಿದೆ. ಸಂಶೋಧನೆಯಿಂದ ಶಾಸನದಲ್ಲಿರುವ ನಿಖರ ಮಾಹಿತಿ ತಿಳಿಯಬೇಕಿದೆ.

    ವಿಂಧ್ಯಗಿರಿ ಬೆಟ್ಟದ ಹಿಂಭಾಗದ ಸುಮಾರು 300 ಮೀಟರ್ ಅಂತರದಲ್ಲಿರುವ ಕಬ್ಬಾಳು ಸರ್ವೆ ನಂಬರ್ ವ್ಯಾಪ್ತಿಯ ನಾಗಯ್ಯನಕೊಪ್ಪಲು ಗ್ರಾಮದ ಸುಕುಮಾರ್ ಅವರ ಜಮೀನಿನಲ್ಲಿ ಪೂರ್ವಾಭಿಮುಖವಾಗಿರುವ ಬಂಡೆಕಲ್ಲಿನ ಮೇಲೆ ಕೆತ್ತಿರುವ ಸುಮಾರು 7 ಸಾಲುಗಳ ಹಳೆಗನ್ನಡ ಲಿಪಿಯಲ್ಲಿರುವ ಶಿಲಾಲೇಖ ಕುತೂಹಲ ಮೂಡಿಸಿದೆ.

    ಈ ಕುರಿತು ಶ್ರವಣಬೆಳಗೊಳದ ಎಸ್.ಎನ್.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಶಿಲಾಶಾಸನಗಳ ಸಂಶೋಧಕ ಡಾ.ಎಸ್.ದಿನೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಇದು ‘ಎಪಿಗ್ರಾಫಿಯ ಕರ್ನಾಟಿಕ’ ಸಂಪುಟದಲ್ಲಿ ಈವರೆಗೆ ಪ್ರಕಟವಾಗದ ಶಾಸನವಾಗಿದ್ದು, ಲಿಪಿಯ ಆಧಾರದ ಮೇಲೆ ಸುಮಾರು 10 ರಿಂದ 11 ನೇ ಶತಮಾನದಲ್ಲಿ ರಚಿಸಿರುವ ದತ್ತಿ ಶಾಸನ ಎಂದು ಅಂದಾಜಿಸಬಹುದು. ಇದೊಂದು ಮಹತ್ವದ ಶಾಸನವಾಗಿದ್ದು, ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಸಂಬಂಧಪಟ್ಟ ಉಪಕರಣಗಳಿಂದ ಶಾಸನದ ಅಚ್ಚನ್ನು ತೆಗೆದು ಪ್ರಕಟ ಮಾಡಿದ ನಂತರವಷ್ಟೇ ಈ ಶಾಸನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ಹೇಳಿದರು.

    ಶ್ರವಣಬೆಳಗೊಳ ಶಾಸನಗಳ ನೆಲೆಬೀಡಾಗಿದ್ದು, ಇಲ್ಲಿನ ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ 271, ವಿಂಧ್ಯಗಿರಿ ದೊಡ್ಡಬೆಟ್ಟದಲ್ಲಿ 172, ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯಲ್ಲಿ 80 ಹಾಗೂ ಅಕ್ಕ-ಪಕ್ಕದ ಗ್ರಾಮಗಳಲ್ಲಿ 50 ಶಾಸನಗಳು ಸೇರಿ ಒಟ್ಟು 573 ಶಿಲಾ ಶಾಸನಗಳು ದೊರಕಿದ್ದು, ಪ್ರತ್ಯೇಕ ಸಂಪುಟವನ್ನೇ ಒಳಗೊಂಡು ಪ್ರಕಟಗೊಂಡಿದೆ. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶಿಲಾ ಶಾಸನಗಳು, ತಾಳೆಗರಿ ಶಾಸನಗಳು ಹಾಗೂ ಇನ್ನಿತರ ಪುರಾತನ ಕುರುಹುಗಳನ್ನು ಸಂರಕ್ಷಿಸುವ ಕೈಂಕರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

    ಈ ಭಾಗದಲ್ಲಿ ಇನ್ನೂ ಹಲವಾರು ಶಿಲಾ ಶಾಸನಗಳು ದೊರಕುವ ಸಾಧ್ಯತೆಯಿದ್ದು, ಎಷ್ಟೋ ಶಾಸನಗಳು ತೆರೆಮರೆಯಲ್ಲಿವೆ. ಪುರಾತತ್ವ ಇಲಾಖೆ ತಂಡಗಳನ್ನು ರಚಿಸಿ ಮಣ್ಣಿನಲ್ಲೋ, ಪೊದೆಗಳಲ್ಲೋ ಹುದುಗಿರುವ ಬೆಳಕಿಗೆ ಬಾರದಿರುವ ಶಿಲಾಲೇಖಗಳನ್ನು ಹುಡುಕಿ ಸಂರಕ್ಷಣೆ ಮಾಡಿ, ಅದರಲ್ಲಿರುವ ಮೌಲಿಕ ವಿಷಯಗಳನ್ನು ಹೊರಜಗತ್ತಿಗೆ ತಿಳಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

  • ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಯೋಗೇಶ್ವರ್

    ಬೆಂಗಳೂರು: ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಲಾಗುತ್ತದೆ. ಅದೇ ರೀತಿ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಇದೇ ಮಾದರಿಯಲ್ಲಿ ಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‍ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರು ಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

    ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ ನಿರ್ಮಾಣ:
    ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಾಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಂದಿ ಬೆಟ್ಟಕ್ಕೆ ರೋಪ್ ವೇ: ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ನಿರ್ಧಾರ

    ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂದಾಜು 100.00ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ THE INDIA EXPO-2023 ಬೃಹತ್ ಮೇಳವನ್ನು ಆಯೋಜಿಸಲು ಕಾರ್ಯೋನ್ಮಖರಾಗುವಂತೆ ಯೋಗೇಶ್ವರ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತರ್ ರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸಬೇಕು ಎಂದರು.

    ಇದೇ ವೇಳೆ ONE IRIS ಕಂಪನಿಯವರು ಪ್ರವಾಸೋದ್ಯಮ ಮೇಳದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

  • ಪ್ರೇಯಸಿಗಾಗಿ ದುಬಾರಿ ಬೈಕ್ ಕದ್ದು ಪೊಲೀಸರ ಅತಿಥಿಯಾದ ಯುವಕ

    ಪ್ರೇಯಸಿಗಾಗಿ ದುಬಾರಿ ಬೈಕ್ ಕದ್ದು ಪೊಲೀಸರ ಅತಿಥಿಯಾದ ಯುವಕ

    – ಟೆಸ್ಟ್ ಡ್ರೈವ್‍ಗೆ ಬೈಕ್ ಪಡೆದು ನಾಪತ್ತೆಯಾಗಿದ್ದ ಆರೋಪಿ

    ಹಾಸನ: ಪ್ರೇಯಸಿಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಶೋಕಿ ಮಾಡಲು ದುಬಾರಿ ಬೈಕ್ ಕದ್ದ ಯುವಕನನ್ನು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೂಳದ ಪೊಲೀಸರು ಬಂಧಿಸಿದ್ದಾರೆ.

    ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ನಿವಾಸಿ ಪ್ರಮೋದ್ (19) ಬಂಧಿತ ಆರೋಪಿ. ಪ್ರಮೋದ್ ಶ್ರವಣಬೆಳಗೊಳದ ಪುನೀತ್ ಎಂಬವರ ಬೈಕ್ ಅನ್ನು ಫೆಬ್ರವರಿ 9ರಂದು ಎಗರಿಸಿಕೊಂಡು ಹೋಗಿದ್ದ. ಆರೋಪಿಗೆ ಬಲೆ ಬೀಸಿದ್ದ ಪೊಲೀಸರು 9 ದಿನಗಳ ಬಳಿಕ ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಶ್ರವಣಬೆಳಗೊಳದ ಪುನೀತ್ ಬೈಕನ್ನು ಮಾರಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತನ್ನು ಒಎಲ್‍ಎಕ್ಸ್ ನಲ್ಲಿ ನೋಡಿದ್ದ ಪ್ರಮೋದ್ ಕೂಡಲೇ ಪುನೀತ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದ. ನಂತರ ಪರಿಚಯ ಮಾಡಿಕೊಂಡು ಬೈಕನ್ನು ಖರೀದಿಸುವುದಾಗಿ ಹೇಳಿದ್ದ. ಶ್ರವಣಬೆಳಗೊಳ ಬಸ್ ನಿಲ್ದಾಣದ ಹತ್ತಿರ ಫೆಬ್ರವರಿ 9ರಂದು ಸಂಜೆ ಬಂದಿದ್ದ ಪ್ರಮೋದ್, ಪುನೀತ್ ಬಳಿಯಿದ್ದ ಬೈಕನ್ನು ಟೆಸ್ಟ್ ಡ್ರೈವ್ ಮಾಡುತ್ತೇನೆಂದು ನಂಬಿಸಿ ತೆಗೆದುಕೊಂಡು ಪರಾರಿಯಾಗಿದ್ದ. ನಂತರ ಫೋನ್ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

    ಈ ಸಂಬಂಧ ಪುನೀತ್ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂಬಿಕೆ ದ್ರೋಹ ಪ್ರಕರಣದ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗೆ ಬಲೆ ಬೀಸಿದ್ದರು. ಈ ನಿಟ್ಟಿನಲ್ಲಿ ಎಸ್‍ಪಿ ಶ್ರೀನಿವಾಸಗೌಡ ಹಾಗೂ ಎಎಸ್‍ಪಿ ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಚುರುಕುಗೊಳಿಸಿದ ತಂಡವು ಆರೋಪಿ ಪ್ರಮೋದ್‍ನನ್ನು ಇಂದು ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.

  • ಮೊದಲ ಏಕಾಂತ ಸ್ಥಿತಿಗೆ ತಲುಪಿದ ಏಕಶಿಲಾ ಮೂರ್ತಿ

    ಮೊದಲ ಏಕಾಂತ ಸ್ಥಿತಿಗೆ ತಲುಪಿದ ಏಕಶಿಲಾ ಮೂರ್ತಿ

    ಹಾಸನ: ಒಂದು ವರ್ಷದ ಹಿಂದೆ ಮಹಾ ಮಜ್ಜನದಿಂದ ಮಿಂದೆದ್ದಿದ್ದ ಜಿಲ್ಲೆಯ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಮಹಾಮೂರ್ತಿಯ ರಾಸಾಯನಿಕ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ವತಿಯಿಂದ ವಿರಾಟ್ ವಿರಾಗಿಗೆ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನ ಹಾಗೂ ಮಹಾ ಮಸ್ತಕಾಭಿಷೇಕದ ಅಂತಿಮ ಬಿಂಬಾಭಿಷೇಕ ನೆರವೇರಿಸಲಾಯಿತು. ಬಾಹುಬಲಿಯ ಸುತ್ತಲೂ ಇರುವ ಅಟ್ಟಣಿಗೆ ಬಿಚ್ಚಿ, ಸಣ್ಣಪುಟ್ಟ ಸ್ವಚ್ಛತಾ ಕಾರ್ಯ ಮುಗಿದರೆ, ಅತಿ ಎತ್ತರದ ಏಕಶಿಲಾ ಮೂರ್ತಿ, ಈಗ ಮೊದಲ ಏಕಾಂತ ಸ್ಥಿತಿಗೆ ಮರಳಿದ್ದಾನೆ.

    ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಮಹಾ ಮಸ್ತಕಾಭಿಷೇಕ ನಡೆದು ವರ್ಷ ಕಳೆದಿದೆ.ಲಕ್ಷಾಂತರ ಭಕ್ತರು, ಪ್ರವಾಸಿಗರ ಉಪಸ್ಥಿತಿಯಲ್ಲಿ 2018 ಫೆಬ್ರವರಿ 7 ರಿಂದ 26ರ ವರೆಗೆ ನಡೆದ ಅಂತಾರಾಷ್ಟ್ರೀಯ ಉತ್ಸವ ಮುಗಿದು ಎಂಟು ತಿಂಗಳ ನಂತರ ಮೂರ್ತಿ ಸ್ವಚ್ಚತಾ ಕಾರ್ಯ ಆರಂಭಿಸಲಾಗಿತ್ತು. ಬೃಹನ್ಮೂರ್ತಿಯನ್ನು ವಿವಿಧ ರಾಸಾಯನಿಕಗಳಿಂದ ಸ್ವಚ್ಛಗೊಳಿಸುವ ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ ರಾಸಾಯನಿಕ ವಿಭಾಗ ಆರಂಭಿಸಿತ್ತು. ಇದೀಗ ಇಡೀ ವಿಗ್ರಹವನ್ನು ಸ್ವಚ್ಛಗೊಳಿಸಲಾಗಿದ್ದು, ಸಂಪ್ರದಾಯದಂತೆ ಶ್ರೀ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವೈರಾಗಿಗೆ ಬಿಂಬಾಭಿಷೇಕ ನೆರವೇರಿಸಲಾಯಿತು.

    ಶ್ರವಣಬೆಳಗೊಳದ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಮಾರ್ಗದರ್ಶನದಂತೆ ಮಠದ ಪಂಡಿತರು ಪಂಚಕಳಶ ಸ್ಥಾಪಿಸಿ ಪೂಜಿಸಿದರು. ನಂತರ ಶುದ್ಧ ಜಲಕ್ಕೆ ಮಂತ್ರ ಪುರಸ್ಸರವಾಗಿ ಸಂಪ್ರೋಕ್ಷಣೆ ಮಾಡುವ ಮೂಲಕ ಮಹಾ ಮೂರ್ತಿಗೆ ಕೊನೆಯ ಅಭಿಷೇಕ ಮಾಡಿದರು. ಈ ವೇಳೆ ಮಾತನಾಡಿದ ಚಾರುಕೀರ್ತಿ ಸ್ವಾಮೀಜಿ, ಗೊಮ್ಮಟೇಶ್ವರ ಮೂರ್ತಿಯ ಸ್ವಚ್ಛತಾ ಕಾರ್ಯ ಪರಿಪೂರ್ಣಗೊಂಡಿದೆ. ಮಸ್ತಕ ಭಾಗದಿಂದ ಶೀಘ್ರವೇ ಅಟ್ಟಣಿಗೆ ಬಿಚ್ಚುವ ಕಾರ್ಯ ಆರಂಭವಾಗಲಿದೆ. ನಂತರ ಬಾಹುಬಲಿ ಪಾದದ ಸಂರಕ್ಷಣೆ ದೃಷ್ಟಿಯಿಂದ ಕೆಲವು ಲೇಪನಾ ಕಾರ್ಯ ನಡೆಯಲಿದೆ. ಆ ಸಂದರ್ಭದಲ್ಲಿ 15 ದಿನಗಳ ಕಾಲ ಗೊಮ್ಮಟೇಶನ ಪಾದಪೂಜೆ ಇರುವುದಿಲ್ಲ ಎಂದು ತಿಳಿಸಿದರು.

    ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಮೂರ್ತಿಯ ಮಸ್ತಕ ಭಾಗದಿಂದ ಸ್ವಚ್ಛತಾ ಕಾರ್ಯ ಈಗ ಸಮಾಪ್ತಿಗೊಂಡಿದೆ. ಅಟ್ಟಣಿಗೆ ತೆರವು ಮಾಡಿದ ನಂತರ, ಬಾಕಿ ಉಳಿದಿರುವ ಶಿಲಾಮೂರ್ತಿಯ ಪಾದ ಹಾಗೂ ಎಡ ಮತ್ತು ಬಲ ಭಾಗದ ಅಲ್ಪ ಸ್ವಲ್ಪ ಕ್ಲೀನಿಂಗ್ ಕಾರ್ಯವನ್ನು ಮುಗಿಸಲಾಗುವುದು. ಒಟ್ಟಿನಲ್ಲಿ ಎಲ್ಲಾ ಕೆಲಸ ಮುಗಿಯಲು ಕನಿಷ್ಟ 1 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಡಿ.ಅಂಬೇಡ್ಕರ್ ತಿಳಿಸಿದ್ದಾರೆ.

    ಈ ಎಲ್ಲಾ ಕಾರ್ಯ ಮುಗಿದ ಬಳಿಕ ವಿಂಧ್ಯಗಿರಿಯ ವಿರಾಗಮೂರ್ತಿ ಬಾಹುಬಲಿಯು ಮಳೆ-ಗಾಳಿ-ಬಿಸಿಲಿಗೆ ಮೈಯೊಡ್ಡಿ ಮೊದಲ ಸ್ಥಿತಿಯಲ್ಲಿ ವಿರಾಜಮಾನನಾಗಲಿದ್ದಾನೆ. ನೀರು, ಎಳನೀರು, ಕ್ಷೀರ, ಕಲಚೂರ್ಣ, ಅರಿಶಿನಿ, ಶ್ರೀಗಂಧ ಮೊದಲಾದ ದ್ರವ್ಯಗಳಿಂದ ಅಹಿಂಸಾ ಮೂರ್ತಿ ತೊಯ್ಯುವ ಅಪರೂಪದ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಅಗಣಿತ ಭಕ್ತ ಸಮೂಹ ಮುಂದಿನ 11 ವರ್ಷಗಳ ವರೆಗೆ ಕಾಯಲೇಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಹುಲ್ ಹೇಳಿದಂತೆ ಎಚ್‍ಡಿಕೆಯವರೇ 5 ವರ್ಷ ಸಿಎಂ ಆಗಿರ್ತಾರೆ- ವೀರಪ್ಪ ಮೊಯ್ಲಿ

    ರಾಹುಲ್ ಹೇಳಿದಂತೆ ಎಚ್‍ಡಿಕೆಯವರೇ 5 ವರ್ಷ ಸಿಎಂ ಆಗಿರ್ತಾರೆ- ವೀರಪ್ಪ ಮೊಯ್ಲಿ

    ಹಾಸನ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿಯವರೇ 5 ವರ್ಷ ಸಿಎಂ ಎಂದು ಹೇಳಿ ಆಗಿದೆ. ಅದರಂತೆ ಕುಮಾರಸ್ವಾಮಿ ಅಷ್ಟು ದಿನ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಮಾಜಿ ಸಿಎಂ ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ.

    ಜಿಲ್ಲೆ ಶ್ರವಣಬೆಳಗೊಳದಲ್ಲಿ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಕೊನೇ ದಿನದ ಅಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರು ಏನೇ ಮಾಡಿದ್ರೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಹೇಳಿದಂತೆ ಎಚ್‍ಡಿಕೆ ಅವರೇ 5 ವರ್ಷ ಸಿಎಂ ಆಗಿರುತ್ತಾರೆ. ಸರಕಾರ ಸುಭದ್ರವಾಗಿರಲಿದೆ ಎಂದರು.

    ಯಾರೋ ಒಬ್ಬಿಬ್ಬರಿಂದ ಸರಕಾರ ಉರುಳಿಸಲು ಸಾಧ್ಯವಿಲ್ಲ ಎಂದ ಮೊಯ್ಲಿ, ಸಮ್ಮಿಶ್ರ ಸರಕಾರ ಆಪತ್ತಿನಲ್ಲಿದೆ ಅನ್ನೋದು ಊಹಾಪೋಹ. ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ ಎಂದು ಎಚ್ಚರಿಸಿದರು.

    ಈ ಹಿಂದೆ ಯಡಿಯೂರಪ್ಪ ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿ, ಕಮಲ ಪಕ್ಷಕ್ಕೆ ಶಾಪ ಹಾಕಿ ಹೋಗಿದ್ರು. ನಮ್ಮಪ್ಪನಾಣೆ ಮತ್ತೆಂದೂ ಬಿಜೆಪಿಗೆ ಬರೋದಿಲ್ಲ ಎಂದು ಹೇಳಿದ್ರು. ಆದರೀಗ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಅವರು ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಯತ್ನಿಸಿದ್ರೆ ಅವರಿಗೆ ಮಾತ್ರವಲ್ಲ, ಬಿಜೆಪಿಗೂ ಕೆಟ್ಟ ಹೆಸರು ಬರಲಿದೆ. ವಾಮಾಚಾರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸಿದ್ರೆ ಅವರಿಗೇ ಒಳ್ಳೆದಾಗೋದಿಲ್ಲ ಎಂದು ಖಡಕ್ ಆಗಿ ನುಡಿದರು.

    ಮೋದಿ ವಿರುದ್ಧ ಟೀಕೆ:
    ಇದೇ ವೇಳೆ ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಕೇವಲ ಚುನಾವಣೆ ಬಂದಾಗ ಮಾತ್ರ ಅವರಿಗೆ ಕರ್ನಾಟಕ ನೆನಪಾಗಲಿದೆ. ಮೋದಿ ಒಬ್ಬ ಸರ್ವಾಧಿಕಾರಿ. ಕೇಂದ್ರ ಸರಕಾರದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿಪಕ್ಷಗಳನ್ನ ಬಗ್ಗು ಬಡಿಯೋ ಯತ್ನ ನಡೆಸುತ್ತಿದೆ. ಇದಕ್ಕೆ ಸಚಿವ ಡಿಕೆಶಿ ಅವರ ಮೇಲೆ ನಡೆದ ದಾಳಿ ಸಾಕ್ಷಿ. ಇದೆಲ್ಲವೂ ಭವಿಷ್ಯದಲ್ಲಿ ಬಿಜೆಪಿಗೇ ಮುಳುವಾಗಲಿದೆ ಎಂದು ಎಚ್ಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv