Tag: Shravana

  • ನಾನ್‌ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್- ಚಿಕನ್ ಬೆಲೆಯಲ್ಲಿಯೂ ಏರಿಕೆ!

    ನಾನ್‌ವೆಜ್ ಪ್ರಿಯರಿಗೆ ಬ್ಯಾಡ್ ನ್ಯೂಸ್- ಚಿಕನ್ ಬೆಲೆಯಲ್ಲಿಯೂ ಏರಿಕೆ!

    ಬೆಂಗಳೂರು: ಟೊಮೆಟೋ, ಬೆಳ್ಳುಳ್ಳಿ, ಬಾಳೆಹಣ್ಣು ಹೀಗೆ ತರಕಾರಿಗಳ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಕಾದಿದೆ. ಕೋಳಿ (Chicken) ರೇಟ್ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ.

    ನಾನ್‌ವೆಜ್ ಪ್ರೀಯರ ಫೇವೆರೆಟ್ ಪುಡ್‌ಗಳಲ್ಲಿ ಒಂದು ಚಿಕನ್. ಆದರೆ ಕೋಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರೋದು ನಾನ್ ವೆಜ್ ಪ್ರೀಯರಿಗೆ ನುಂಗಲಾರದ ತುತ್ತಾಗಿದೆ. ಆಷಾಢ ಕಳೆದು ಶ್ರಾವಣ (Shravana) ಆರಂಭವಾದ ಹಿನ್ನೆಲೆ, ಕೋಳಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶ್ರಾವಣದಲ್ಲಿ ನಾನ್‌ವೆಜ್ ತಿನ್ನುವವರ ಸಂಖ್ಯೆಯೂ ಕಡಿಮೆಯಿರುವುದರಿಂದ ರೈತರು ಹಾಗೂ ಕಂಪನಿಗಳು ಮರಿಗಳ ಸಾಕಾಣಿಕೆಯನ್ನು ಕಡಿಮೆ ಮಾಡುತ್ತಿದ್ದಾರೆ.

    ಈ ಹಿನ್ನೆಲೆ ಶ್ರಾವಣ ಆರಂಭವಾಗಿರುವುದರಿಂದ ಕೋಳಿಗಳು ಡಿಮ್ಯಾಂಡ್‌ಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಜೊತೆಗೆ ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಕಡಲೆಕಾಯಿ ಹಿಂಡಿ, ಸೋಯಾ ಬೆಲೆಯಲ್ಲೂ 25% ರಿಂದ 30% ರಷ್ಟು ಏರಿಕೆಯಾಗಿದೆ. ಇಂಧನ ಬೆಲೆ ಹೆಚ್ಚಳದಿಂದಾಗಿ ಸಾಗಣೆ ವೆಚ್ಚವೂ ಅಧಿಕವಾಗಿರುವುದರಿಂದ ಕೋಳಿಗಳ ಬೆಲೆಯೂ ಹೆಚ್ಚಳವಾಗಿದೆ.

    ಕೋಳಿಗಳ ಬೆಲೆ(1 ಕೆಜಿಗೆ):
    ಬಾಯ್ಲರ್ ಕೋಳಿ – 170 ರೂ.
    ಫಾರಂ ಕೋಳಿ- 140 ರೂ.
    ನಾಟಿ ಕೋಳಿ (ಫಾರಂ) -350 ರೂ.
    ಜವಾರಿ ನಾಟಿ ಕೋಳಿ – 550 ರೂ. ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ

    ಈಗಷ್ಟೇ ಶ್ರಾವಣ ಆರಂಭವಾಗಿದ್ದು, ದಿನಕಳೆದಂತೆ ಕೋಳಿಗಳ ಬೆಲೆ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ಕೋಳಿಗಳ ಬೆಲೆ ಹೆಚ್ಚಾಗಿರೋದ್ರಿಂದ ಮಾಂಸದ ರೇಟ್ ಸಹ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಇದನ್ನೂ ಓದಿ: ಆಪರೇಷನ್ ಬಿಪಿಎಲ್ ಕಾರ್ಡ್- ಸತ್ತವರ ಹೆಸ್ರಲ್ಲೂ ಅಕ್ಕಿ ಪಡೆಯುತ್ತಿದ್ದ ಕುಟುಂಬಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

    ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

    ಲಕ್ನೋ: ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿ ಆವರಣದಲ್ಲಿ ಇತ್ತೀಚೆಗೆ ಶಿವಲಿಂಗ ಪತ್ತೆಯಾಗಿದ್ದು, ಅಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಲಾಗಿದೆ.

    ವರದಿಗಳ ಪ್ರಕಾರ, ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಸ್ಥಳದ ಅಧ್ಯಕ್ಷ ರಾಜೇಶ್ ಮಣಿ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದಾರೆ. ಶ್ರಾವಣ ಮಾಸ ಪ್ರಾರಂಭವಾಗುತ್ತಿರುವುದರಿಂದ ಹಿಂದೂಗಳಿಗೆ ಪೂಜೆ ಸಲ್ಲಿಸಲು ಹಾಗೂ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಬೇಕು ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಇಂದು ಒಟ್ಟು 977 ಕೇಸ್ – ಬೆಂಗ್ಳೂರಲ್ಲಿ 927 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಭಾರತ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಜನರು ತಮ್ಮದೇ ಆದ ಧಾರ್ಮಿಕ ಆಚರಣೆಗಳನ್ನು ನಡೆಸುವ ಹಕ್ಕಿದೆ. ಶ್ರಾವಣ ಮಾಸದಲ್ಲಿ ಶಿವನಿಗೆ ಪೂಜೆ ಮಾಡುವ ಪದ್ಧತಿಯಿರುವುದು ನಿಜ. ಹೀಗಾಗಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಶ್ರಾವಣ ಮಾಸದಲ್ಲಿ ಪ್ರಾರ್ಥನೆ, ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ ನೀಡಬೇಕಾಗಿ ತ್ರಿಪಾಠಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಸ್ಥಳೀಯ ನ್ಯಾಯಾಲಯದ ಆದೇಶದಿಂದ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ರಕ್ಷಿಸಲಾಗಿದೆಯಾದರೂ, ಭಕ್ತರಿಗೆ ಅಲ್ಲಿ ಪೂಜೆ ಸಲ್ಲಿಸಲು ಹಾಗೂ ಆಚರಣೆಗಳನ್ನು ನಡೆಸಲು ನಿರ್ಬಂಧಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಚಿಕ್ಕಬಳ್ಳಾಪುರ: ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ ಚಿಕ್ಕಬಳ್ಳಾಪುರದ ಹೂ ಬೆಳೆಗಾರರಿಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳು ಸಂತಸ ತಂದಿದೆ. ಮದುವೆ-ಮುಂಜಿ, ಸಭೆ ಸಮಾರಂಭಗಳ ಸೇರಿದಂತೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಹೂ ಗಳಿಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಬಂದಿದೆ.

    ಸಾಲ ಮಾಡಿದ್ದ ರೈತರಿಗೆ ಈಗ ಕೈ ತುಂಬಾ ಕಾಸು ಸಿಗುತ್ತಿದ್ದು, ಹೂ ಬೆಳೆಗಾರರು ಸಖತ್ ಖುಷಿ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬರದನಾಡಾದರೂ ಇಲ್ಲಿನ ರೈತರು ಹೂ ಹಣ್ಣು ತರಕಾರಿ ಬೆಳೆಯೋದರಲ್ಲಿ ಫೇಮಸ್. ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ ರೈತರಿಗೆ ಕೈ ತುಂಬಾ ಕಾಸು ನೋಡೋದು ಕಷ್ಟವಾಗಿತ್ತು. ಈ ಬಾರಿ ಚಿಕ್ಕಬಳ್ಳಾಪುರ ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಗ್ಲಾಡಿಯೋಲಸ್ ಬೆಳೆದಿದ್ದಾರೆ. ಈ ಗ್ಲಾಡಿಯೋಲಸ್ ಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಭಾರೀ ಬೇಡಿಕೆ ಬಂದಿದೆ.

    ಈ ಗ್ಲಾಡಿಯೋಲಸ್ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ ದೆಹಲಿಗೂ ಸಹ ರವಾನೆ ಮಾಡಲಾಗುತ್ತಿದೆ. 5 ಹೂವಿನ ಒಂದು ಕಟ್ಟು 50 ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ಲಾಡಿಯೋಲಸ್ ಬೆಳೆದ ರೈತರು ಕೈ ತುಂಬಾ ಕಾಸು ಎಣಿಸುವಂತಾಗಿದೆ ಅಂತ ರೈತ ಗಂಗರಾಜು ಹಾಗೂ ಮಂಜುನಾಥ್ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

    ಕೇವಲ ಗ್ಲಾಡಿಯೋಲಸ್ ಅಷ್ಟೇ ಅಲ್ಲದೆ ಅಲಂಕಾರಕ್ಕೆ ಅತಿ ಹೆಚ್ಚಾಗಿ ಬಳಸೋ ಜರ್ಬೇರಾವನ್ನ ಸಹ ಚಿಕ್ಕಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್ ಎಂಬವರು ಬೆಳೆದಿದ್ದು, ಈ ಜರ್ಬೇರಾಗೂ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಫಾಲಿ ಹೌಸ್ ನಲ್ಲಿ ಬೆಳೆದಿರೋ ಬಣ್ಣ ಬಣ್ಣದ ತರಹೇವಾರಿ ಜರ್ಬೇರಾ ಒಂದು ಹೂ 20 ರೂಪಾಯಿಗೆ ಬಿಕರಿಯಾಗುತ್ತಿದ್ದು, 10 ಹೂವಿನ ಕಟ್ಟು 200 ರೂಪಾಯಿಗೆ ಸೇಲ್ ಆಗುತ್ತಿದೆ. ಕೆಲ ವ್ಯಾಪಾರಸ್ಥರೇ ತೋಟಕ್ಕೆ ಭೇಟಿ ನೀಡಿ ಕೇಳಿದಷ್ಟು ಹಣ ನೀಡಿ ಹೂ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಸಾಲ ಸೋಲ ಮಾಡಿ ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಈಗ ಪ್ರತಿಫಲ ಸಿಕ್ತು ಅಂತ ರೈತ ವಿಜಯ್ ಕುಮಾರ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

    ಗ್ಲಾಡಿಯೋಲಸ್ -ಜರ್ಬೇರಾ ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರದ ರೈತರು ಗುಲಾಬಿ, ಸೇವಂತಿಗೆ, ಚೆಂಡು ಹೂವನ್ನ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 1 ಕೆಜಿ ಗುಲಾಬಿ 120 ರಿಂದ 150 ರೂ.ಗೆ, ಸೇವಂತಿಗೆ 120 ರಿಂದ 160 ರೂ.ಗೂ ಹಾಗೂ ಚೆಂಡು ಹೂ ಸಹ 50-60 ರೂ.ಗಳಿಗೆ ಮಾರಾಟವಾಗ್ತಿದ್ದು ಹೂ ಬೆಳೆದ ರೈತರ ಜೇಬು ತುಂಬುವಂತಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್