Tag: Shravan

  • ಶ್ರಾವಣ ಸೋಮವಾರ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ – 7 ಭಕ್ತರು ಸಾವು

    ಶ್ರಾವಣ ಸೋಮವಾರ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ – 7 ಭಕ್ತರು ಸಾವು

    ಪಾಟ್ನಾ: ಕೆಲ ದಿನಗಳ ಹಿಂದೆಯಷ್ಟೇ ಹತ್ರಾಸ್‌ನ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಅದೇ ರೀತಿಯ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಜಿಹಾನಾಬಾದ್‌ ಜಿಲ್ಲೆಯ ದೇವಸ್ಥಾನವೊಂದರಲ್ಲಿ (Bihar Temple) ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ಮಾಡಿದ ಪರಿಣಾಮ ಕಾಲ್ತುಳಿತ (Stampede) ಉಂಟಾಗಿ 3 ಮಹಿಳೆಯರು ಸೇರಿ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಶ್ರಾವಣ ಮಾಸದ 4ನೇ ಸೋಮವಾರದಂದು ಬರಾವರ್ ಬೆಟ್ಟದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ (Baba Sidheshwar Nath temple) ಕಾಲ್ತುಳಿತ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ಅವಘಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಸುಮಾರು 35 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ

    ಜೆಹಾನಾಬಾದ್‌ನ ಟೌನ್ ಇನ್ಸ್‌ಪೆಕ್ಟರ್ ದಿವಾಕರ್ ಕುಮಾರ್ ವಿಶ್ವಕರ್ಮ ಹೇಳುವಂತೆ, 7 ಮೃತದೇಹಗಳನ್ನು ಜೆಹಾನಾಬಾದ್‌ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ( Devotees) ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅದೇ ರೀತಿ ಭಾನುವಾರ ತಡರಾತ್ರಿಯಿಂದಲೇ ಭಕ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕ ಅರ್ಪಿಸಲು ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂಕುನುಗ್ಗಲು ಶುರುವಾಗಿತ್ತು. ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಬಲಪ್ರಯೋಗ ನಡೆಸಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿರುವುದಾಗಿ ಹೇಳಿದ್ದಾರೆ.

    ಈ ವೇಳೆ ಆಡಳಿತದ ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ದೇವಾಲಯದಲ್ಲಿ ಹಾಜರಿದ್ದವರು ದೂರಿದ್ದಾರೆ. ಕೆಲವು ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಸ್ವಯಂಸೇವಕರು ಕ್ರೌಡ್ ಮ್ಯಾನೇಜ್‌ಮೆಂಟ್‌ನಲ್ಲಿ ತೊಡಗಿರುವ ಭಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದರು. ಇದು ನೂಕುನುಗ್ಗಲಿಗೆ ಕಾರಣವಾಯಿತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರಿಂದ ಹೋರಾಟ – ಸರ್ಕಾರಿ ಶಾಲೆಗಳಲ್ಲಿ ತರಗತಿ ವ್ಯತ್ಯಯ?

  • ರಮೇಶ್ ಜಾರಕಿಹೊಳಿ, ಎಸ್‍ಐಟಿಗೆ ಹೈಕೋರ್ಟ್ ತುರ್ತು ನೋಟಿಸ್

    ರಮೇಶ್ ಜಾರಕಿಹೊಳಿ, ಎಸ್‍ಐಟಿಗೆ ಹೈಕೋರ್ಟ್ ತುರ್ತು ನೋಟಿಸ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಎಸ್‍ಐಟಿಗೆ ಹೈಕೋರ್ಟ್ ತುರ್ತು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಸ್‍ಐಟಿ ತನಿಖೆಯನ್ನು ರದ್ದು ಮಾಡುವಂತೆ ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇವತ್ತು ಉಚ್ಛ ನ್ಯಾಯಾಲಯದಲ್ಲಿ ನಡೆಯಿತು.

    ಎಸ್‍ಐಟಿಯ ಬದ್ಧತೆ ಮತ್ತು ತನಿಖೆಯ ವೈಖರಿಯನ್ನು ಪ್ರಶ್ನಿಸಿ ಸಂತ್ರಸ್ತ ಯುವತಿ ಅರ್ಜಿ ಸಲ್ಲಿಸಿದ್ದರು. ಎಸ್‍ಐಟಿ ಅತ್ಯಾಚಾರ ಕೇಸ್ ಮರೆಮಾಚಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡೋಕೆ ಹೊರಟಿದೆ. ಹೀಗಾಗಿಯೇ ಸದಾಶಿವನಗರದ ಕ್ರೈಂ ನಂ. 21 /2021 ನಮೂದಿಸಲಾಗಿದೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದರು. ಎಸ್‍ಐಟಿ ತನಿಖೆಯ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಎಸ್‍ಐಟಿ ತನಿಖೆ ರದ್ದು ಮಾಡಬೇಕು ಎಂದು ಯುವತಿ ಅರ್ಜಿ ಸಲ್ಲಿಸಿದ್ದರು. ಇಂದು ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಘನ ಉಚ್ಚ ನ್ಯಾಯಾಲಯ, ಎಸ್‍ಐಟಿಗೆ ಹಾಗೂ ರಮೇಶ್ ಜಾರಕಿಹೊಳಿಗೆ ತುರ್ತು ಹಾಜರಾಗಲು ನೋಟಿಸ್ ಗೆ ಆದೇಶಿಸಿದೆ.

    ಸಂತ್ರಸ್ತೆಯ ಅರ್ಜಿಯ ಮುಂದಿನ ವಿಚಾರಣೆ ಜೂನ್ 21ಕ್ಕೆ ನ್ಯಾಯಾಲಯ ಮುಂದೂಡಿದೆ. ಸಂತ್ರಸ್ತೆಯ ಪರ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಸಂಕೇತ್ ಏಣಗಿ ವಾದ ಮಂಡಿಸಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

    ಎಸ್‍ಐಟಿ ಮುಂದೆ ಹಾಜರಾದ ನರೇಶ್, ಶ್ರವಣ್: ಸಿಡಿ ಪ್ರಕರಣದಲ್ಲಿ ಶಂಕಿತ ಯುವಕರ ವಿಚಾರಣೆ ನಡೆಯುತ್ತಿದೆ. ಪೊಲೀಸರ ವಿಚಾರಣೆ ವೇಳೆ ಕೆಲ ಮಾಹಿತಿ ನೀಡಿರುವ ನರೇಶ್ ಮತ್ತು ಶ್ರವಣ್ ಎಸ್‍ಐಟಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ನಾವೇ ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೀಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿ ಇದೆಯಾ?
    ಸ್ಟಿಂಗ್ ಆದ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ. ಸ್ಟಿಂಗ್ ಕ್ಯಾಮೆರಾದಲ್ಲಿ ವೀಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ. ಸದ್ಯ ವೈರಲ್ ವೀಡಿಯೋದಲ್ಲೂ ಜಾರಕಿಹೊಳಿ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ಎಸ್‍ಐಟಿಗೆ ಹೇಳಿದ್ದಾನೆ. ಆ ವೀಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿದೆ, ಬೇಕಿದ್ರೆ ಚೆಕ್ ಮಾಡಿ. ಯುವತಿಗೆ ಬಲವಂತವಾಗಿ ಮತ್ತು ಬೆದರಸಿ ಲೈಂಗಿಕ ಸಂಪರ್ಕ ಬೆಳಸಿದ್ದಾರೆ. ವೈರಲ್ ಆಗಿರೋ ವೀಡಿಯೋ ಬಿಟ್ಟು ಬೇರೆ ಯುವತಿಯರ ಜೊತೆಗಿರೋ ವಿಡಿಯೋ ಸಹ ಸಾಹುಕಾರ್ ಮೊಬೈಲ್ ನಲ್ಲಿದೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಾಳೆ. ಆಕೆಗೆ ಅವಾಚ್ಯವಾಗಿ ಬೈದು ಕಿರುಕುಳ ಕೊಡ್ತಿದ್ದಾಗಿ ಯುವತಿ ಹೇಳಿದ್ರಿಂದ ಸ್ಟಿಂಗ್ ಮಾಡೋಕೆ ಹೇಳಿದ್ದೀವಿ. ಆದ್ರೆ ವೀಡಿಯೋ ಆದ್ಮೇಲೆ ನಾವು ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೂ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ ಎಂದು ಶ್ರವಣ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸಲ್ಲಿ ಕೋರ್ಟಿಗೆ 3 ಪ್ರತ್ಯೇಕ ವರದಿ 

    ಕೊಲೆ ಬೆದರಿಕೆ:
    ವೀಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಲಾಗಿತ್ತು. ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ ಎಂದು ತಿಳಿಸಲಾಗಿತ್ತು. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದರು. ಸಿಡಿ ವೈರಲ್ ಆದ ದಿನ ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ರು. ನಿನ್ನ ಹಾಗೂ ನಿನಗೆ ಸಪೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು ಎಂದು ಶ್ರವಣ್ ಹೇಳಿರುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

    ಜೀವ ಭಯದಿಂದ ನಾವೂ ಊರು ಬಿಡಬೇಕಾಯ್ತು. ಹೆಚ್ಚಾಗಿ ರೈಲು, ಬಸ್ ಪ್ರಯಾಣ ಮಾಡಿದ್ದೀವಿ. ಜಾರಕಿಹೊಳಿ ಪಿಎ ನಾಗರಾಜ್ ಅವರ ಬಿಎಸ್‍ಎನ್‍ಎಲ್ ನಂಬರ್ ನಿಂದ ಯುವತಿಗೆ ಕರೆ ಬರುತ್ತಿತ್ತು. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ ರ್ಮೆಂಟ್ ಗೆ ಕರೆದೊಕೊಂಡು ಹೋಗಿದ್ದರು ಎಂದು ಶ್ರವಣ್ ಎಸಿಪಿ ಧರ್ಮೇಂದ್ರ ಮುಂದೆ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ:ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

  • ಸಾಹುಕಾರ್ ಸಿಡಿ ಪ್ರಕರಣ – ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ಒಪ್ಪಿಕೊಂಡ ಶಂಕಿತರು!

    ಸಾಹುಕಾರ್ ಸಿಡಿ ಪ್ರಕರಣ – ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ಒಪ್ಪಿಕೊಂಡ ಶಂಕಿತರು!

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಶಂಕಿತ ಯುವಕರ ವಿಚಾರಣೆ ನಡೆಯುತ್ತಿದೆ. ಪೊಲೀಸರ ವಿಚಾರಣೆ ವೇಳೆ ಕೆಲ ಮಾಹಿತಿ ನೀಡಿರುವ ನರೇಶ್ ಮತ್ತು ಶ್ರವಣ್ ಎಸ್‍ಐಟಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಚಾರಣೆ ವೇಳೆ ಯುವತಿ ಮತ್ತು ಜಾರಕಿಹೊಳಿ ಬಗೆಗಿನ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ನಾವೇ ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸ್ಟಿಂಗ್ ಆದ ನಂತರ ಯುವತಿ ನನಗೆ ಕಾಲ್ ಮಾಡಿದ್ದು ನಿಜ. ಸ್ಟಿಂಗ್ ಕ್ಯಾಮೆರಾದಲ್ಲಿ ವೀಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ. ಸದ್ಯ ವೈರಲ್ ವೀಡಿಯೋದಲ್ಲೂ ಜಾರಕಿಹೊಳಿ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ಎಸ್‍ಐಟಿಗೆ ಹೇಳಿದ್ದಾನೆ. ಆ ವೀಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿದೆ, ಬೇಕಿದ್ರೆ ಚೆಕ್ ಮಾಡಿ. ಯುವತಿಗೆ ಬಲವಂತವಾಗಿ ಮತ್ತು ಬೆದರಸಿ ಲೈಂಗಿಕ ಸಂಪರ್ಕ ಬೆಳಸಿದ್ದಾರೆ. ವೈರಲ್ ಆಗಿರೋ ವೀಡಿಯೋ ಬಿಟ್ಟು ಬೇರೆ ಯುವತಿಯರ ಜೊತೆಗಿರೋ ವಿಡಿಯೋ ಸಹ ಸಾಹುಕಾರ್ ಮೊಬೈಲ್ ನಲ್ಲಿದೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಾಳೆ. ಆಕೆಗೆ ಅವಾಚ್ಯವಾಗಿ ಬೈದು ಕಿರುಕುಳ ಕೊಡ್ತಿದ್ದಾಗಿ ಯುವತಿ ಹೇಳಿದ್ರಿಂದ ಸ್ಟಿಂಗ್ ಮಾಡೋಕೆ ಹೇಳಿದ್ದೀವಿ. ಆದ್ರೆ ವೀಡಿಯೋ ಆದ್ಮೇಲೆ ನಾವು ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೂ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ ಎಂದು ಶ್ರವಣ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ:ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ವೀಡಿಯೋ ನಂತರ ಯುವತಿಗೆ ಅವರ ಮನೆಯವರಿಗೆ ತಿಳಿಸುವುದಾಗಿ ಹೇಳಲಾಗಿತ್ತು. ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ ಎಂದು ತಿಳಿಸಲಾಗಿತ್ತು. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದರು. ಸಿಡಿ ವೈರಲ್ ಆದ ದಿನ ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ರು. ನಿನ್ನ ಹಾಗೂ ನಿನಗೆ ಸಪೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು ಎಂದು ಶ್ರವಣ್ ಹೇಳಿರುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಸಾಹುಕಾರ್ ಬಚಾವ್ ಆಗ್ತಾರಾ? ಒಪ್ಪಿತ ಸೆಕ್ಸ್ ಅಂತ ಬಿ ರಿಪೋರ್ಟ್ ಹಾಕ್ತಾರಾ?

    ಜೀವ ಭಯದಿಂದ ನಾವೂ ಊರು ಬಿಡಬೇಕಾಯ್ತು. ಹೆಚ್ಚಾಗಿ ರೈಲು, ಬಸ್ ಪ್ರಯಾಣ ಮಾಡಿದ್ದೀವಿ. ಜಾರಕಿಹೊಳಿ ಪಿಎ ನಾಗರಾಜ್ ಅವರ ಬಿಎಸ್‍ಎನ್‍ಎಲ್ ನಂಬರ್ ನಿಂದ ಯುವತಿಗೆ ಕರೆ ಬರುತ್ತಿತ್ತು. ಇದೇ ನಾಗರಾಜ್ ಮೊದಲು ಜಾರಕಿಹೊಳಿ ಅಪಾರ್ಟ್ ರ್ಮೆಂಟ್ ಗೆ ಕರೆದೊಕೊಂಡು ಹೋಗಿದ್ದರು ಎಂದು ಶ್ರವಣ್ ಎಸಿಪಿ ಧರ್ಮೇಂದ್ರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಸೋಮವಾರ 11 ಗಂಟೆ ವಿಚಾರಣೆಗೆ ಹಾಜರಾಗುವಂತೆ ನರೇಶ್ ಗೆ ನೋಟಿಸ್ ನೀಡಿದ್ರೆ, ಮಂಗಳವಾರ 11 ಗಂಟೆಗೆ ಹಾಜರಾಗುವಂತೆ ಶ್ರವಣ್ ಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಟ್ವಿಸ್ಟ್ – ಸಮ್ಮತಿಯಿಂದಲೇ ನಡೆದಿತ್ತಾ ಇಬ್ಬರ ನಡುವೆ ಸೆಕ್ಸ್?

  • ಜಾಮೀನು ಸಿಕ್ಕರೂ ಬಂಧನದ ಭೀತಿಯಲ್ಲಿ ಸಿಡಿ ಗ್ಯಾಂಗ್!

    ಜಾಮೀನು ಸಿಕ್ಕರೂ ಬಂಧನದ ಭೀತಿಯಲ್ಲಿ ಸಿಡಿ ಗ್ಯಾಂಗ್!

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಪಡೆದ ಆರೋಪಿಗಳಿಗೆ ಈಗ ನಡುಕ ಶುರುವಾಗಿದೆ. ಕೋರ್ಟ್ ನೀಡಿದ ಆದೇಶ ಪ್ರತಿಯಿಂದ ಗಾಬರಿಯಾಗಿರೋ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹೋಗಬೇಕಾ ಎಂದು ಯೋಚಿಸುತ್ತಿದ್ದಾರೆ.

    ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕರೂ ತನಿಖಾಧಿಕಾರಿಗೆ ಅಗತ್ಯ ಬಿದ್ದರೆ ಬಂಧಿಸಲು ಸ್ವತಂತ್ರ ನೀಡಿ ಕೋರ್ಟ್ ಆದೇಶವನ್ನು ನೀಡಿದೆ. ಈ ಮೂಲಕ ಜೂನ್ 12ರೊಳಗೆ ಬರಲು ಶುರುವಾಗಿದೆ ಭಯ. ಮತ್ತೊಂದೆಡೆ ತನಿಖಾಧಿಕಾರಿ ಮುಂದೆ ಹಾಜರಾಗಲೇ ಬೇಕು ಅಂದಿದೆ. ಇನ್ನೊಂದು ಕಡೆ ತನಿಖಾಧಿಕಾರಿಯ ಸ್ವತಂತ್ರವನ್ನು ನೀಡಿದೆ. ಈ ಎರಡು ವಿಚಾರಗಳಿಂದ ಗೊಂದಲದಲ್ಲಿ ಆರೋಪಿಗಳಾದ ನರೇಶ್ ಗೌಡ & ಶ್ರವಣ್ ವಿಚಾರಣೆಗೆ ಹಾಜರಾಗಬೇಕು ಅನ್ನೋ ಅನಿವಾರ್ಯ ಎದುರಾಗಿದೆ.

    ವಿಚಾರಣೆಗೆ ಬರುವ ಆರೋಪಿಗಳ ವಿಚಾರಣೆಗೆ ತನಿಖಾಧಿಕಾರಿಗಳು ತಯಾರಿಯನ್ನು ನಡೆಸಿಕೊಂಡಿದ್ದಾರೆ. ತನಿಖಾಧಿಕಾರಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಯಲಿದೆ ಮೊದಲ ದಿನ ಏನನ್ನು ಕೇಳಬೇಕು ಅಂತಾ ಎಸ್‍ಐಟಿ ರೆಡಿ ಮಾಡಿಕೊಂಡಿದೆ. ಇದನ್ನೂ ಓದಿ: ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು. ಇದನ್ನೂ ಓದಿ: ಸಿಡಿ ಗ್ಯಾಂಗ್‌ – ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?

  • ಹರಕೆಗಾಗಿ ದೇವರ ವಿಗ್ರಹಕ್ಕೆ ಸೀಬೆಹಣ್ಣು ತಿಕ್ಕುವ ವಿಶೇಷ ಜಾತ್ರೆ

    ಹರಕೆಗಾಗಿ ದೇವರ ವಿಗ್ರಹಕ್ಕೆ ಸೀಬೆಹಣ್ಣು ತಿಕ್ಕುವ ವಿಶೇಷ ಜಾತ್ರೆ

    ಗದಗ: ಜಾತ್ರೆ ಎಂದ ತಕ್ಷಣ ಬೆಂಡು, ಬೆತ್ತಾಸು, ಕಬ್ಬು, ಉತ್ತತ್ತಿ, ಬಾಳೆಹಣ್ಣು ಎಸೆದು ತೇರು ಎಳೆದು ಸಂಭ್ರಮಿಸುತ್ತಾರೆ. ಆದರೆ ಗದಗ ಜಿಲ್ಲೆಯ ಕಪೋತಗಿರಿಯಲ್ಲಿ ನಡೆಯುವ ಜಾತ್ರೆನೇ ಡಿಫರೆಂಟ್ ಆಗಿದೆ. ಅಲ್ಲಿ ದೇವರಿಗೆ ಪೇರಳೆ ಹಣ್ಣು (ಸೀಬೆ ಹಣ್ಣು) ತಿಕ್ಕುವುದೇ ಒಂದು ವೈಶಿಷ್ಟ್ಯತೆ.

    ಗದಗ ಜಿಲ್ಲೆ ಡೋಣಿ ಬಳಿಯ ಕಪೋತಗಿರಿ ಗಾಳಿಗುಂಡಿ ಬಸವೇಶ್ವರ ಸನ್ನಿದಾನದಲ್ಲಿ ಶ್ರಾವಣಮಾಸದ ಮೂರನೇ ಗುರುವಾರ ದಿನ ಈ ಜಾತ್ರೆ ವೈಭವದಿಂದ ನಡೆಯುತ್ತದೆ. ಮಾಡಿದ ಪಾಪ, ಕರ್ಮಗಳು ದೂರವಾಗಲೆಂದು ಬಸವಣ್ಣನ ವಿಗ್ರಹಕ್ಕೆ ಪೇರಳೆ ಹಣ್ಣು ತಿಕ್ಕುತ್ತಾರೆ. ಇದು ಬೇಡಿದ ವರಗಳನ್ನ ನೀಡುವ ದೇವರಾಗಿರುವುದರಿಂದ, ಇಲ್ಲಿಗೆ ಭಕ್ತಿಯಿಂದ ನಡೆದುಕೊಳ್ಳುವುದರಿಂದ ಒಳ್ಳೆದಾಗುತ್ತೆ ಎಂದು ದೇವಾಲಯದ ಅರ್ಚಕ ರೇವಣ್ಣ ಸಿದ್ದಯ್ಯ ಹೇಳುತ್ತಾರೆ.

    ಶ್ರಾವಣಮಾಸದಲ್ಲಿ ಕಪ್ಪತ್ತಗಿರಿಯ ಗಾಳಿಗುಂಡಿ ಬಸವಣ್ಣನ ಜಾತ್ರೆಗೆ ಜನಸಾಗರವೇ ಹರಿದು ಬರುತ್ತದೆ. ದೇವಾಲಯ ಬೆಟ್ಟದ ಮೇಲಿದ್ದರೂ ಡೋಣಿ ಗ್ರಾಮದ ಸುತ್ತಮುತ್ತಲಿನ ಹಾಗೂ ಕೊಪ್ಪಳ, ಹಾವೇರಿ, ಬಳ್ಳಾರಿ ಜಿಲ್ಲೆಯ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಗೆ ‘ಹರಕೆ ಜಾತ್ರೆ’ ಎಂತಾನೆ ಕರೆಯುತ್ತಾರೆ. ಇಲ್ಲಿ ಮದುವೆ ಆಗದವರು ಕಂಕಣ ಕಟ್ಟಿದ್ರೆ ಮದುವೆಯಾಗುತ್ತೆ, ಮಕ್ಕಳಾಗದವರು ತೊಟ್ಟಿಲು ಕಟ್ಟಿದ್ರೆ ಮಕ್ಕಳಾಗುತ್ತವೆ. ಮನೆ ಬೇಕಾದವರು ಕಲ್ಲಿನ ಮನೆ ನಿರ್ಮಿಸಿದ್ರೆ ಮನೆಗಳಾಗುತ್ತವೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ.

    ಇಲ್ಲಿ ಯಾವುದೇ ಜಾತಿ ಮತದ ಭೇದವಿಲ್ಲದೇ ಎಲ್ಲರು ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾರೆ. ಬಂದ ಭಕ್ತರು ಪೇರಳೆಹಣ್ಣು ತಿಕ್ಕುವುದು ತುಂಬಾ ವೈಶಿಷ್ಟ್ಯತೆ ಹೊಂದಿದೆ. ಜಗತ್ತು ಇಷ್ಟೆಲ್ಲ ಮುಂದುವರಿದಿದ್ದರೂ, ಕಂಪ್ಯೂಟರ್ ಯುಗದಲ್ಲಿ ದೇವರ ಮೇಲಿನ ನಂಬಿಕೆಗಳು, ಆಚರಣೆಗಳು ಮಾತ್ರ ಮುಂದುವರಿಯುತ್ತಲೇ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಖ್ಯಮಂತ್ರಿ ಆದ ಬಳಿಕ ತವರಿಗೆ ಸಿಎಂ ಭೇಟಿ – ಸ್ವಗ್ರಾಮದ ಈಶ್ವರನಿಗೆ ವಿಶೇಷ ಪೂಜೆ

    ಮುಖ್ಯಮಂತ್ರಿ ಆದ ಬಳಿಕ ತವರಿಗೆ ಸಿಎಂ ಭೇಟಿ – ಸ್ವಗ್ರಾಮದ ಈಶ್ವರನಿಗೆ ವಿಶೇಷ ಪೂಜೆ

    ಹಾಸನ: ಮಂಡ್ಯದಲ್ಲಿ ಗದ್ದೆನಾಟಿ ಮಾಡಿ ಸದ್ದು ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇದೀಗ ತವರು ಜಿಲ್ಲೆ ಹಾಸನಕ್ಕೆ ಶ್ರಾವಣ ಸೋಮವಾರದ ಪೂಜೆಗಾಗಿ ಎಂಟ್ರಿಕೊಟ್ಟಿದ್ದಾರೆ.

    ಶ್ರಾವಣ ಮಾಸ ಹಿನ್ನಲೆಯಲ್ಲಿ ಅವರ ಮನೆ ದೇವರು ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯ, ಅವರ ತಂದೆಯ ಮೆಚ್ಚಿನ ದೈವ ಮಾವಿನ ಕೆರೆ ಬೆಟ್ಟದ ರಂಗನಾಥಸ್ವಾಮಿ ಸೇರಿದಂತೆ ಅವರ ಕುಲದೈವದ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಪೂಜೆಗೆ ಸಿಎಂ ಕುಮಾರಸ್ವಾಮಿ ತೆರಳಲಿದ್ದಾರೆ. ಸಂಜೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಕೂಡ ಭೇಟಿ ನೀಡಲಿದ್ದಾರೆ. ತಡ ರಾತ್ರಿ ಹಾಸನದ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿರುವ ಎಚ್ ಡಿ ಕುಮಾರಸ್ವಾಮಿ 7 ಗಂಟೆಯಿಂದ ಹರದನಹಳ್ಳಿಯಲ್ಲಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

    ಕುಮಾರಸ್ವಾಮಿ ಸ್ವಾಮಿ ಜೊತೆ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಸಹೋದರ ಸಚಿವ ಹೆಚ್ ಡಿ ರೇವಣ್ಣ ಭಾಗಿಯಾಗಲಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಗೂ ತಮ್ಮ ಕುಮಾರ ಪರ್ವ ಯಾತ್ರೆಯನ್ನು ಆರಂಭಿಸುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ರಂಗನಾಥಸ್ವಾಮಿ ದೇವಾಲಯ ಬಳಿ ಕುಳಿತು ದೇವೇಗೌಡರು ತಮ್ಮ ಮಗ ಸಿಎಂ ಆಗಿಯೇ ಆಗುತ್ತಾನೆ ಅಂತ ಭವಿಷ್ಯ ನುಡಿದಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews