Tag: Shraddhanjali

  • ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಆರು ವರ್ಷ ಪ್ರೀತಿ ತೋರಿದ್ದ ಬ್ಲ್ಯಾಕಿ ನೆನಪಿಗೆ ಶ್ರದ್ಧಾಂಜಲಿ ಕಟೌಟ್

    ಉಡುಪಿ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಸಾಕಿದವರಿಗೆ, ಪ್ರೀತಿ ತೋರಿದವರ ಜೊತೆ ಶ್ವಾನ ಕೊನೆಯ ಕ್ಷಣದವರೆಗೂ ನಿಯತ್ತಿನಿಂದ ಇರುತ್ತದೆ. ಐದಾರು ವರ್ಷಗಳ ಕಾಲ ಜೊತೆಗಿದ್ದ ಬ್ಲ್ಯಾಕಿ ಮೃತಪಟ್ಟಾಗ ಸಾಸ್ತಾನ ಪಾಂಡೇಶ್ವರದ ಮಂದಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    ಬೀದಿ ನಾಯಿಯೊಂದು ಗ್ರಾಮ ಸಿಂಹವಾಗಿ ಮೆರೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಸ್ತಾನ ಪಾಂಡೇಶ್ವರದ ಜನಕ್ಕೆ ಬ್ಲ್ಯಾಕಿ ಎಂದರೆ ಅಚ್ಚುಮೆಚ್ಚು. ಊರಿನ ಕಾವಲುಗಾರನಾಗಿ, ಗೆಳೆಯರ ಬಳಗದ ಸದಸ್ಯರಂತೆ ಬ್ಲ್ಯಾಕಿ ಓಡಾಡಿಕೊಂಡಿತ್ತು. ವಾರದ ಹಿಂದೆ ಅನಾರೋಗ್ಯದಿಂದ ಶ್ವಾನ ಮೃತಪಟ್ಟಿದೆ. ನಾಯಿಯ ಮೇಲಿನ ಪ್ರೀತಿಗೆ ಗೆಳೆಯರ ಬಳಗ ಶ್ರದ್ಧಾಂಜಲಿ ಅರ್ಪಿಸಿ, ದೊಡ್ಡ ಕಟೌಟ್‍ನ್ನು ಊರಿನಲ್ಲಿ ಹಾಕಲಾಗಿದೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ತಂಡದ ಯುವಕ ನಿತೇಶ್ ಮಾತನಾಡಿ, ಮಲ್ಪೆಯಿಂದ ಸಾಸ್ತಾನಕ್ಕೆ ನಾಯಿ ಮರಿಯನ್ನು ತಂದಿದ್ದರು. ಬ್ಲ್ಯಾಕೀ ಎಲ್ಲರ ಜೊತೆ ಓಡಾಡಿಕೊಂಡು ಗೆಳೆಯನಂತೆಯೇ ಆಗಿಬಿಟ್ಟಿತ್ತು. ಬ್ಲ್ಯಾಕಿ ಸಾವನ್ನಪ್ಪಿದ್ದು ಬಹಳ ಬೇಸರವಾಗಿದೆ ಎಂದರು. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಪಾಂಡೇಶ್ವರಕ್ಕೆ ಹೋಗುವ ಹೆದ್ದಾರಿ ಪಕ್ಕದಲ್ಲೇ ಕಟೌಟ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಲಾಗಿದೆ. ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಅವುಗಳು ಎಂದೂ ಮರೆಯುವುದಿಲ್ಲ. ನಾವು ಊರವರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ದಿನೇಶ್ ಬಾಂಧವ್ಯ ಹೇಳಿದರು.

  • ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಪುನೀತ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ರೈತ

    ಮಂಡ್ಯ: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅಗಲಿ 3 ತಿಂಗಳುಗಳು ಕಳೆದಿವೆ. ಮಂಡ್ಯ ಜಿಲ್ಲೆಯ ರೈತನೊಬ್ಬ ಪುನೀತ್‌ಗೆ ಅಂದು ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಇದೀಗ ಚಿಗುರು ಬಂದಿದೆ.

    ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಪುನೀತ್ ಅವರ ಅಗಲಿಕೆಯ ಬಳಿಕ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ತಮ್ಮ ಭತ್ತದ ಗದ್ದೆಯಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂದು ಭತ್ತದಲ್ಲೇ ಬರೆದು ನಾಟಿ ಮಾಡಿದ್ದರು. ಇದೀಗ ನಾಟಿ ಮಾಡಿರುವ ಭತ್ತ ಚಿಗುರಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ

    ರೈತ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ರೈತ ತಮ್ಮ ಗದ್ದೆಯಲ್ಲಿ ಬಿಡಿಸಿರುವ ಶ್ರದ್ಧಾಂಜಲಿ ಚಿತ್ತಾರದ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್: ಪ್ರಮೋದ್ ಮುತಾಲಿಕ್

  • ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಬೆಂಗಳೂರು: ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥರು ಅಪಾರ ಭಕ್ತರನ್ನ, ಶಿಷ್ಯ ವೃಂದವನ್ನ ಅಗಲಿ ಬೃಂದಾವನದಲ್ಲಿ ಕೃಷ್ಣೈಕ್ಯರಾಗಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀಗಳು ದೇಹತ್ಯಾಗ ಮಾಡಿ ಶ್ರೀಕೃಷ್ಣನ ಪಾದ ಸೇರಿದ್ದಾರೆ.

    ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡಪರ ಸಂಘಟನೆಗಳು ಇಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಶ್ರೀಗಳ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ, ದೀಪ ಬೆಳಗಿ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಇಂದು ಬೆಳಗ್ಗೆ ಕರುನಾಡ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ಶ್ರೀಗಳ ಭಕ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೃಷ್ಣೈಕ್ಯರಾದ ಶ್ರೀ ವಿಶ್ವೇಶತೀರ್ಥರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮ ಶಾಂತಿ ನೀಡಲಿ ಎಂದು ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.

  • ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಡುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪಕ್ಕದಲ್ಲಿ ಅರಳಿ ಹಾಗೂ ಬೇವಿನ ಗಿಡ ನೆಟ್ಟು ವಿಷ ದುರಂತದಲ್ಲಿ ಮಡಿದವರಿಗಾಗಿ ಹಾಲು ತುಪ್ಪ ಎರೆದು ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

    ಡಿಸೆಂಬರ್ 14, 2018 ರಲ್ಲಿ ಸುಳ್ವಾಡಿ ಮಾರಮ್ಮನ ವಿಷ ದುರಂತದಲ್ಲಿ 17 ಜನ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸಾವನ್ನಪ್ಪಿದ ಎಲ್ಲರಿಗೂ ಮೃತರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

  • ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

    ಏನಿದು ಪ್ರಕರಣ?
    ಸುಳ್ವಾಡಿ ಮಾರಮ್ಮನ ವಿಷ ದುರಂತ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷವಾಗಿದೆ. ದೇವಾಲಯದ ಆಡಳಿತ ಚುಕ್ಕಾಣಿಗೋಸ್ಕರ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಜನ ಸಾವನ್ನಪ್ಪಿದ್ದು, 120 ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣ ಸಂಬಂಧ ಇಮ್ಮಡಿ ಮಹದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ್ ಎಂಬ ಆರೋಪಿಗಳ ಬಂಧನವಾಗಿತ್ತು.

    ಕಳೆದ ಬಾರಿಯೂ ಸಹ ಮೃತಪಟ್ಟ ಎಲ್ಲಾ ಕುಟುಂಬಸ್ಥರು ಸೇರಿ ಸುಳ್ವಾಡಿ ಗ್ರಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿದರು. ಅದೇ ರೀತಿ ಈ ಬಾರಿಯೂ ಸಹ ಸುಳ್ವಾಡಿ ದೇವಾಲಯದ ಮುಂಭಾಗ ವಿಷ ಪ್ರಸಾದ ತಿಂದು ಮಡಿದವರ ಆತ್ಮಕ್ಕೆ ಶಾಂತಿ ಕೋರಲು ಸಾಮೂಹಿಕ ಶ್ರದ್ಧಾಂಜಲಿ ನಡೆಸಲಾಯಿತು. ಈ ಸಭೆ ನಡೆಯುವಾಗ ಕೆಲವರು ತಮ್ಮ ಮನೆಯವರನ್ನು ನೆನೆದು ಕಣ್ಣೀರು ಹಾಕಿದರು.

    ಈ ಸಭೆಯಲ್ಲಿ ಸ್ಥಳೀಯ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಇತರರು ಸೇರಿದ್ದು, ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.