Tag: Shraddha Walker

  • ಶ್ರದ್ಧಾ ತಲೆ ಶೋಧಕ್ಕಾಗಿ ಕೆರೆಯ ನೀರನ್ನೇ ಖಾಲಿ ಮಾಡಿಸಲು ಮುಂದಾದ ಪೊಲೀಸರು

    ಶ್ರದ್ಧಾ ತಲೆ ಶೋಧಕ್ಕಾಗಿ ಕೆರೆಯ ನೀರನ್ನೇ ಖಾಲಿ ಮಾಡಿಸಲು ಮುಂದಾದ ಪೊಲೀಸರು

    ನವದೆಹಲಿ: ಶ್ರದ್ಧಾ ವಾಕರ್ (Shraddha Walker) ಕೊಲೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಶ್ರದ್ಧಾ ತಲೆಯ ಶೋಧಕ್ಕಾಗಿ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿರುವ ಕೆರೆಯ ನೀರನ್ನೇ ಖಾಲಿ ಮಾಡುವ ಸಾಹಸಕ್ಕೆ ಪೊಲೀಸರು ಕೈ ಹಾಕಿದ್ದಾರೆ.

    ಇಂದಿನಿಂದ ಕೆರೆಯ ನೀರನ್ನು ಖಾಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಶ್ರದ್ಧಾ ತಲೆಯನ್ನು ಕೆರೆಗೆ ಎಸೆದಿದ್ದಾಗಿ ಸೈಕೋ ಕಿಲ್ಲರ್ ಅಫ್ತಾಬ್ (Aftad) ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್

    ಅಫ್ತಾಬ್ ಹೇಳಿಕೆ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿಯೊಂದಿಗೆ ದೆಹಲಿ ಪೊಲೀಸ್ ಅಧಿಕಾರಿಗಳ ತಂಡವು ಇಂದು ಮೆಹ್ರೌಲಿ ಕೆರೆಯಿಂದ ನೀರನ್ನು ಖಾಲಿ ಮಾಡಲು ಪ್ರಾರಂಭಿಸಿತು.

    ಶ್ರದ್ಧಾ ಮತ್ತು ಅಫ್ತಾಬ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಅಫ್ತಾಬ್, ಶ್ರದ್ಧಾಳನ್ನು ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳಾಗಿಸಿ ವಿವಿಧ ಸ್ಥಳಗಳಿಗೆ ಎಸೆದಿದ್ದ. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    Live Tv
    [brid partner=56869869 player=32851 video=960834 autoplay=true]

  • ಗೆಳತಿ ಕೊಂದು, ಮೃತದೇಹವನ್ನು 4 ದಿನ ಮೆಡಿಕಲ್ ಸ್ಟೋರ್‌ನಲ್ಲೇ ಇಟ್ಕೊಂಡಿದ್ದ ಕಿಲ್ಲರ್

    ಗೆಳತಿ ಕೊಂದು, ಮೃತದೇಹವನ್ನು 4 ದಿನ ಮೆಡಿಕಲ್ ಸ್ಟೋರ್‌ನಲ್ಲೇ ಇಟ್ಕೊಂಡಿದ್ದ ಕಿಲ್ಲರ್

    ರಾಯಪುರ: ದೆಹಲಿಯ ಶ್ರದ್ಧಾ ವಾಕರ್ (Shraddha Walker) ಹತ್ಯೆ ಮಾದರಿಯಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಗೆಳತಿಯನ್ನ ಕೊಂದು ನಾಲ್ಕು ದಿನಗಳ ಕಾಲ ಮೆಡಿಕಲ್ ಸ್ಟೋರ್‌ನಲ್ಲಿ (Medical Store) ಇಟ್ಟಿದ್ದ ಘಟನೆ ಛತ್ತೀಸಘಡದ (Chhattisgarh) ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಮೆಡಿಕಲ್ ಸ್ಟೋರ್ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ತನ್ನ ಗೆಳತಿ ಪ್ರಿಯಾಂಕಾಳನ್ನು ಕೊಂದು ಶವವನ್ನು 4 ದಿನಗಳ ಕಾಲ ತನ್ನ ಅಂಗಡಿಯಲ್ಲಿಟ್ಟು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

    ಪೊಲೀಸರ ಪ್ರಕಾರ, ಸಾಹು ಮತ್ತು ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಕೊಲೆಗೆ ಇದೇ ಕಾರಣ ಇರಬಹುದು ಎಂದು ಹೇಳಿದ್ದಾರೆ.

    ಪ್ರಿಯಾಂಕಾ ಬಿಲಾಸ್‌ಪುರದ ಹಾಸ್ಟೆಲ್‌ನಲ್ಲಿ ಕೆಪಿಎಸ್‌ಸಿ (KPSC) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಈ ವೇಳೆ ಆಶಿಶ್ ಸಾಹು ಜೊತೆಗೆ ಆತ್ಮೀಯತೆ ಬೆಳೆದಿದೆ. ನಂತರ ಇಬ್ಬರು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ (Share Market) ಹಣ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿನ ನಷ್ಟದ ನಂತರ ತನ್ನಿಂದ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಶಿಶ್‌ಗೆ ಒತ್ತಡ ಹೇರುತ್ತಿದ್ದಳು ಎಂದು ಬಿಲಾಸ್‌ಪುರದ ಎಸ್ಪಿ ಪಾರುಲ್ ಮಾಥುರ್ ತಿಳಿಸಿದ್ದಾರೆ. ಇದನ್ನೂ ಓದಿ: 3 ದಶಕಗಳ ಕಾಲ ನರ್ಮದಾ ಅಣೆಕಟ್ಟು ಯೋಜನೆ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಯಾತ್ರೆ ಮಾಡ್ತಿದ್ದೀರಾ: ರಾಗಾ ವಿರುದ್ಧ ಮೋದಿ ಕಿಡಿ

    ಕೆಲ ದಿನಗಳ ಹಿಂದೆ ಬಿಲಾಸ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಸಾಹುವನ್ನು ಪ್ರಮುಖ ಆರೋಪಿ ಎಂದು ಶಂಕಿಸಿದ್ದು, ಆತನ ಮೇಲೆ ಕಣ್ಣಿಟ್ಟಿತ್ತು. ಕುಟುಂಬದ ಸದಸ್ಯರೊಬ್ಬರು ಪ್ರಿಯಾಂಕಾ ಮತ್ತು ಸಾಹು ಇಬ್ಬರು ಪರಿಚಿತರು. ಅಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಹಿರಂಗಪಡಿಸಿದರು. ಆದ್ದರಿಂದ ಆರೋಪಿಯನ್ನು ಪ್ರಮುಖ ಶಂಕಿತನಾಗಿ ಗುರುತಿಸಲಾಗಿತ್ತು.

    ಸಾಹು ಅಂಗಡಿ ಮತ್ತು ನಿವಾಸದ ಸುತ್ತಮುತ್ತಲಿನ ಸಿಸಿಟಿವಿಯ (CCTV) ದೃಶ್ಯಗಳ ಜೊತೆಗೆ ಅವನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ನವೆಂಬರ್ 14ರಂದು ಪ್ರಿಯಾಂಕಾಳನ್ನು ಕೊಂದ ಸಾಹು ದೇಹವನ್ನು 4 ದಿನ ಮೆಡಿಕಲ್ ಶಾಪ್‌ನಲ್ಲಿ ಇಟ್ಟಿದ್ದು. ಶವ ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಆತ ದೇಹವನ್ನು ಸಾಗಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಆರ್ಯ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ನವದೆಹಲಿ: ಯುವತಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಫ್ತಾಬ್‌ನನ್ನು (Aftab) ಮಂಪರು ಪರೀಕ್ಷೆಗೆ ಒಳಪಡಿಸಲು ದೆಹಲಿಯ ಸಾಕೇತ್ ಕೋರ್ಟ್‌ ಅನುಮತಿ ನೀಡಿದೆ. ಪರೀಕ್ಷೆಗೆ ಅನುಮತಿ ಕೋರಿ ದೆಹಲಿ ಪೊಲೀಸರು (Delhi Police) ಕೋರ್ಟ್‌ಗೆ ಮನವಿ ಮಾಡಿದ್ದರು.

    ಪ್ರಕರಣದಲ್ಲಿ ಅಫ್ತಾಬ್ ಕೆಲವು ಸಂಗತಿಗಳನ್ನು ಮುಚ್ಚಿಡುತ್ತಿರುವ ಅನುಮಾನಗಳು ಪೊಲೀಸರಿಗೆ ವ್ಯಕ್ತವಾಗಿದೆ. ಪದೇ ಪದೇ ಅಫ್ತಾಬ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಈ ಹಿನ್ನೆಲೆ ನಿಖರ ಮಾಹಿತಿ ಪಡೆಯುವ ಉದ್ದೇಶದಿಂದ ಮಂಪರು ಪರೀಕ್ಷೆಗೆ ಒಳಪಡಿಸುವ ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಸಾಧ್ಯತೆ

    ಅಫ್ತಾಬ್ ಮಾನಸಿಕ ಸ್ಥಿತಿ, ಶ್ರದ್ಧಾ ಜೊತೆಗಿನ ಸಂಬಂಧ, ಹತ್ಯೆಯ ಹಿಂದಿನ ನಿರ್ದಿಷ್ಟ ಉದ್ದೇಶ ಎಲ್ಲವನ್ನು ಖಚಿತಪಡಿಸಿಕೊಳ್ಳುವುದು ಮಂಪರು ಪರೀಕ್ಷೆಯ ಮತ್ತೊಂದು ಉದ್ದೇಶವಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ. ಈ ಪರೀಕ್ಷೆಯು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲದಿದ್ದರೂ ಸಾಕ್ಷಿಗಳನ್ನು ಬೆಂಬಲಿಸುವ ದೃಷ್ಟಿಯಿಂದ ಪರೀಕ್ಷೆ ಅಗತ್ಯ ಎನ್ನಲಾಗುತ್ತಿದೆ.

    ಮಂಪರು ಪರೀಕ್ಷೆಯಲ್ಲಿ ಅಪರಾಧಿಗೆ ತಜ್ಞರು ಸೋಡಿಯಂ ಪೆಂಟೋಥಾಲ್ ಅಥವಾ ಸೋಡಿಯಂ ಅಮಿಟಾಲ್ನೊಂದಿಗೆ ಇಂಜೆಕ್ಷನ್ ನೀಡಲಾಗುತ್ತೆ. ಇಂಜೆಕ್ಷನ್ ಬಳಿಕ ಅರೆ ಪ್ರಜ್ಞಾಸ್ಥಿತಿಗೆ ತೆರಳಲಿದ್ದು, ಬಳಿಕ ಅವರಿಂದ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತೆ. ಅರೆಪ್ರಜ್ಞೆ ಸ್ಥಿತಿಯಲ್ಲಿ ಅಪರಾಧಿ ಸುಳ್ಳು ಹೇಳಲು ಕಷ್ಟ ಆಗಬಹುದು. ಪೊಲೀಸರಿಗೆ ಕೋರ್ಟ್‌ನಿಂದ ಅನುಮತಿ ಸಿಕ್ಕಿದೆಯಾದರೂ, ನಿಯಮಗಳ ಪ್ರಕಾರ ಆರೋಪಿ ಅಫ್ತಾಬ್‌ ಅನುಮತಿಯನ್ನು ಪೊಲೀಸರು ಪಡೆಯಬೇಕಾಗಿದೆ. ಇದನ್ನೂ ಓದಿ: ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಸಾಧ್ಯತೆ

    ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಸಿಬಿಐಗೆ ವರ್ಗಾವಣೆ ಸಾಧ್ಯತೆ

    ನವದೆಹಲಿ: ಕ್ರೂರವಾಗಿ ಹತ್ಯೆಗೀಡಾಗಿದ್ದ ಶ್ರದ್ಧಾ ವಾಕರ್ (Shraddha Walker) ಪ್ರಕರಣ ಸಿಬಿಐಗೆ (Central Bureau of Investigation) ವರ್ಗಾವಣೆಯಾಗುವ ಸಾಧ್ಯತೆಗಳಿದೆ. ಈ ಬಗ್ಗೆ ದೆಹಲಿ (Delhi) ಪೊಲೀಸರು ಸುಳಿವು ಕೊಟ್ಟಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಕೃತ ಆದೇಶ ಹೊರ ಬರುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

    ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ದೇಶದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ದೇಶದ್ಯಾಂತ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿದೆ, ಶೀಘ್ರ ತನಿಖೆಗೆ ಒತ್ತಡ ಕೇಳಿ ಬರುತ್ತಿದೆ. ಈ ಹಿನ್ನೆಲೆ ದೆಹಲಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಬೈಕ್ ಅಡ್ಡ ಹಾಕಿದ ಪೊಲೀಸ್ರು – ನಡುರಸ್ತೆಯಲ್ಲಿ ಗನ್ ಹಿಡಿದು ಓಡುತ್ತಾ, ಶಾಲೆಗೆ ನುಗ್ಗಿದ ಸರಗಳ್ಳರು

    ಈಗಾಗಲೇ ಸಿಬಿಐ ಅಧಿಕಾರಿಗಳು ಮೆಹ್ರೋಲಿ ಕಾಡಿನಲ್ಲಿ ಪತ್ತೆಯಾದ ಶ್ರದ್ಧಾ ಮೃತ ದೇಹದ ತುಂಡುಗಳನ್ನು ಪರಿಶೀಲನೆ ಮಾಡಿದ್ದಾರೆ. ಪ್ರಕರಣದ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು ಅಧಿಕೃತ ಆದೇಶದ ಬಳಿಕ ಅಧಿಕಾರಿಗಳು ತನಿಖೆ ಆರಂಭಿಸುವ ಸಾಧ್ಯತೆಗಳಿದೆ.

    ಮೇ 18 ರಂದು ದೆಹಲಿಯ ಮೆಹ್ರೋಲಿಯಲ್ಲಿ ಶ್ರದ್ಧಾ ವಾಕರ್ (26) ಅನ್ನು ಆಕೆಯ ಗೆಳೆಯ ಅಫ್ತಾಬ್ ಹತ್ಯೆ ಮಾಡಿದ್ದ, ಹತ್ಯೆಯ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ತಂದೆ ನಾಪತ್ತೆ ದೂರು ದಾಖಲಿಸಿದ ಬಳಿಕ ಕಳೆದ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: Dating App ಬಳಸೋ ಮುನ್ನ ಎಚ್ಚರ- ಒಂಟಿ ಜೀವಗಳನ್ನೇ ಟಾರ್ಗೆಟ್ ಮಾಡಿ ಮೋಸ

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ (NewDelhi) ಲೀವಿಂಗ್ ರಿಲೇಶನ್ ಶಿಪ್ (Live-In Partner) ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಬಯಲಾಗುತ್ತಿವೆ. ಪಾಗಲ್ ಪ್ರೇಮಿ ಅಫ್ತಾಬ್ (Aaftab), ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಆ ತಲೆ ಬುರುಡೆಯನ್ನು ತನಲ್ಲೆ ಇಟ್ಟುಕೊಂಡು ವಿಕೃತಿ ಪ್ರೀತಿಯನ್ನು ತೋರಿಸಿದ್ದ ಎಂಬುದು ಬೆಳಕಿಗೆ ಬಂದಿದೆ.

    ಡೇಟಿಂಗ್ ಆ್ಯಪ್‍ನ ಮೂಲಕ ಪರಿಚಯವಾಗಿದ್ದ ಶ್ರದ್ಧಾ ಹಾಗೂ ಅಫ್ತಾಬ್ ಇಬ್ಬರು 3 ವರ್ಷಗಳ ಕಾಲ ಲೀವಿಂಗ್ ರಿಲೇಶನ್ ಶಿಪ್‍ನಲ್ಲಿದ್ದರು. ಮದುವೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ ಅಫ್ತಾಬ್ ಬಳಿಕ ಆಕೆಯ ದೇಹವನ್ನು 35 ಪೀಸ್‍ಗಳಾಗಿ ಮಾಡಿದ್ದ. ಆದರೆ ಶ್ರದ್ಧಾಳ ತಲೆಯ ಭಾಗಕ್ಕೆ ಒಂದು ಸ್ವಲ್ಪವೂ ಹಾನಿಯಾಗದಂತೆ ನೋಡಿಕೊಂಡಿದ್ದ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರೂ ತಲೆ ಬುರುಡೆಯನ್ನು ಫ್ರಿಡ್ಜ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದ. ಇನ್ನೂ ಶ್ರದ್ಧಾಳ ನೆನಪಾದಾಗಲೆಲ್ಲ ಫ್ರಿಡ್ಜ್‌ನ್ನು ತೆಗೆದು ಆ ತಲೆ ಬುರುಡೆಯನ್ನು ನೋಡಿ ಅವಳೊಂದಿಗೆ ಕ್ಷಣಗಳನ್ನು ನೆನಪಿಸಿಕೊಳ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.

    ಇನ್ನೂ ಹತ್ಯೆಯ ಬಳಿಕ ಶ್ರದ್ಧಾ ತಲೆ ಭಾಗಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದ ಅಫ್ತಾಬ್ ಶ್ರದ್ಧಾ ದೇಹದ ಎಲ್ಲ ಭಾಗಗಳನ್ನು ಎಸೆದ ಬಳಿಕ ಕೊನೆಯಲ್ಲಿ ಆಕೆಯ ತಲೆ ಬುರುಡೆಯನ್ನು ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

    ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಹಲವು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ವಶ ಪಡಿಸಿಕೊಂಡಿರುವ ಮೂಳೆಗಳನ್ನು ಡಿಎನ್‍ಎ ಟೆಸ್ಟ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಜೊತೆಗೆ ಅಫ್ತಾಬ್ ನೀಡಿರುವ ಮಾಹಿತಿ ಆಧರಿಸಿ ತಲೆ ಬುರುಡೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಲೆ ಬುರುಡೆ ಸಿಕ್ಕಲ್ಲಿ ಕೇಸ್‍ಗೆ ಮತ್ತಷ್ಟು ಬಲ ಬರುವ ಹಿನ್ನಲೆಯಲ್ಲಿ ತಲೆ ಬುರುಡೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    Live Tv
    [brid partner=56869869 player=32851 video=960834 autoplay=true]