ನವದೆಹಲಿ: ದೆಹಲಿಯ ಮೆಹ್ರೌಲಿಯಲ್ಲಿ ಲಿವ್-ಇನ್ ಸಂಗಾತಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾ ವಾಕರ್ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಿಕಾಸ್ ವಾಕರ್ ಅವರು ಮಹಾರಾಷ್ಟ್ರದ ಪಾಲ್ಘರ್‌ನ ವಸೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗಳ ಸಾವಿನ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು. ತಮ್ಮ ಮಗಳ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದರು.
ಶ್ರದ್ಧಾ ಪ್ರಕರಣದಲ್ಲಿ ಆಫ್ತಾಬ್ ಜೈಲಿನಲ್ಲಿರುವ ಕೊಲೆ ವಿಚಾರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ವಿಕಾಸ್ ಅವರು ತನ್ನ ಮಗನೊಂದಿಗೆ ವಸೈನಲ್ಲಿ ವಾಸಿಸುತ್ತಿದ್ದರು. ಭಾನುವಾರ ಮುಂಜಾನೆ ಅವರ ಆರೋಗ್ಯ ಹದಗೆಟ್ಟಿದೆ. ಮಗ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ವಿಕಾಸ್ ಮೃತಪಟ್ಟಿದ್ದರು.
ವಸಾಯಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಹೃದಯಾಘಾತದಿಂದಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಮಗಳಿಗೆ ನ್ಯಾಯಕ್ಕಾಗಿ 2 ವರ್ಷಗಳಿಗೂ ಹೆಚ್ಚು ಕಾಲ ಹೋರಾಡುತ್ತಿದ್ದರು. ಮೆಹ್ರೌಲಿ ಕಾಡಿನಲ್ಲಿ ಪತ್ತೆಯಾಗಿರುವ ಶ್ರದ್ಧಾ ಅವರ ಮೂಳೆಗಳ ಅವಶೇಷಗಳನ್ನು ದೆಹಲಿ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಲಿರುವ ಕಾರಣ ಅವರ ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ.
ನವದೆಹಲಿ: 2022 ರಲ್ಲಿ ತನ್ನ ಲಿವ್ ಇನ್ ಪಾಲುದಾರ ಶ್ರದ್ಧಾ ವಾಕರ್ (Shraddha Walkar) ಅವರನ್ನು ಕೊಲೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi Gang) ಹಿಟ್ ಲಿಸ್ಟ್‌ನಲ್ಲಿದ್ದಾನೆ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ. ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯ ತನಿಖೆಯ ಸಮಯದಲ್ಲಿ ಈ ಮಾಹಿತಿ ಹೊರ ಬಂದಿದೆ.
ದೆಹಲಿಯಲ್ಲಿ 27 ವರ್ಷದ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದ. ಶ್ರದ್ಧಾ ಮದುವೆಯಾಗುವಂತೆ ಒತ್ತಡ ಹೇರಿದ ನಂತರ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಭಯಾನಕ ಘಟನೆಯು ದೇಶಾದ್ಯಂತ ಆಘಾತ ಮೂಡಿಸಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ತನ್ನ ಅಪರಾಧ ಚಟುವಟಿಕೆಗಳ ಭಾಗವಾಗಿ ಹಲವಾರು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದೆ. ಇದು ಸೇಡು ಮತ್ತು ಪೈಪೋಟಿಯಿಂದ ಪ್ರೇರೇಪಿಸಲ್ಪಟ್ಟಿದೆ. ಅವರ ಪ್ರಾಥಮಿಕ ಗುರಿಗಳಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸೇರಿದ್ದಾರೆ. ಇದನ್ನೂ ಓದಿ: ಡೆಹ್ರಾಡೂನ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ 6 ವಿದ್ಯಾರ್ಥಿಗಳು ಬಲಿ
ಇನ್ನು ಅಫ್ತಾಬ್ ಜೊತೆಗೆ ಹಿಟ್ ಲಿಸ್ಟ್‌ನಲ್ಲಿರುವ ಇತರರಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್ ಸೇರಿದ್ದಾರೆ. ಪ್ರಸ್ತುತ ಗುರುಗ್ರಾಮ್‌ನಲ್ಲಿ ಜೈಲಿನಲ್ಲಿರುವ ದರೋಡೆಕೋರ ಕೌಶಲ್ ಚೌಧರಿ ಮತ್ತು ಪ್ರತಿಸ್ಪರ್ಧಿ ದರೋಡೆಕೋರ ಅಮಿತ್ ದಾಗರ್ ಕೂಡ ಬಿಷ್ಣೋಯಿ ತನ್ನ ಶತ್ರುಗಳ ಲಿಸ್ಟ್‌ನಲ್ಲಿ ಇಟ್ಟುಕೊಂಡಿದೆ.
ನವದೆಹಲಿ: ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದ್ದ ಯುವತಿ ಶ್ರದ್ಧಾಳ (Shraddha Walkar) ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆಯ ಕುರಿತು 6,600 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಇನ್ನೂ ಅನೇಕ ಭಯಾನಕ ವಿವರಗಳು ಬಹಿರಂಗವಾಗಿದೆ.
ಶ್ರದ್ಧಾಳನ್ನು ಕೊಲೆ ಮಾಡಿದ್ದ ಆಕೆಯ ಲಿವ್‌ಇನ್ ಪಾರ್ಟ್‌ನರ್ ಅಫ್ತಾಬ್ ಪೂನಾವಾಲ (Aaftab Poonawala) ಆಕೆಯ ಮೂಳೆಗಳನ್ನು ಮಿಕ್ಸಿಯಲ್ಲಿ (Mixer) ಹಾಕಿ ಪುಡಿ ಮಾಡಿದ್ದ. ಮೇ 18 ರಂದು ಅಫ್ತಾಬ್ ಕೊಲೆ ಮಾಡಿದ ಬಳಿಕ ಝೊಮಾಟೋದಿಂದ ಚಿಕನ್ ರೋಲ್ ಅನ್ನು ತರಿಸಿಕೊಂಡು ಊಟ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ತಮ್ಮ ಖರ್ಚು ವೆಚ್ಚಗಳು ಹಾಗೂ ಅಫ್ತಾಬ್‌ಗೆ ಇತರ ಯುವತಿಯರೊಂದಿಗಿದ್ದ ಸಂಬಂಧದ ಬಗ್ಗೆ ಆಗಾಗ ಜಗಳವಾಗುತ್ತಿತ್ತು. ಆತನಿಗೆ ದೆಹಲಿಯಿಂದ ದುಬೈ ತನಕವೂ ಗೆಳತಿಯರಿದ್ದರು ಎನ್ನಲಾಗಿದೆ.
ಮೇ 18 ರಂದು ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರೂ ಮುಂಬೈಗೆ (Mumbai) ಹೋಗಲು ಯೋಜಿಸಿದ್ದರು. ಆದರೆ ಅಫ್ತಾಬ್ ಇದ್ದಕ್ಕಿದ್ದಂತೆ ಟಿಕೆಟ್ ಅನ್ನು ರದ್ದುಗೊಳಿಸಿದ್ದ. ಬಳಿಕ ಇಬ್ಬರ ನಡುವೆ ಮತ್ತೊಂದು ಖರ್ಚಿನ ವಿಚಾರವಾಗಿ ಜಗಳ ಏರ್ಪಟ್ಟಿತ್ತು. ಆ ಕ್ಷಣದ ಕೋಪದಲ್ಲಿ ಅಫ್ತಾಬ್ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ.
ಗೆಳತಿಯ ಕೊಲೆ ಮಾಡಿದ ಬಳಿಕ ಅಫ್ತಾಬ್ ಆಕೆಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಯೋಜಿಸಿದ್ದ. ಇದಕ್ಕಾಗಿ ಆತ ಒಂದು ಚೀಲವನ್ನೂ ಖರೀದಿಸಿದ್ದ. ಆದರೆ ಇದರಿಂದ ಆತ ತಕ್ಷಣ ಸಿಕ್ಕಿಬೀಳುತ್ತಾನೆ ಎಂದು ಭಾವಿಸಿ, ಈ ಯೋಜನೆಯನ್ನು ಕೈಬಿಟ್ಟಿದ್ದ. ಬಳಿಕ ಶ್ರದ್ಧಾಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಯೋಜಿಸಿ, ಇದಕ್ಕಾಗಿ ಗರಗಸ, ಸುತ್ತಿಗೆ, 3 ಚಾಕುಗಳು ಮಾತ್ರವಲ್ಲದೇ ಬ್ಲೋಟಾರ್ಚ್‌ಗಳನ್ನೂ ಖರೀದಿಸಿದ್ದ. ಇದನ್ನೂ ಓದಿ: ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಅಗ್ನಿ ಅವಘಡ – ಎದ್ನೋ ಬಿದ್ನೋ ಎಂದು ಹೊರ ಓಡಿದ ಸಿಬ್ಬಂದಿ
ಅಫ್ತಾಬ್ ಶ್ರದ್ಧಾಳ ದೇಹವನ್ನು 35 ತಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ. ಆತನ ಇತರ ಗೆಳತಿಯರು ಮನೆಗೆ ಭೇಟಿ ನೀಡುತ್ತಿದ್ದಾಗಲೆಲ್ಲಾ ಅವುಗಳನ್ನು ಅಲ್ಲಿಂದ ತೆಗೆದು ಅಡುಗೆ ಮನೆಯಲ್ಲಿ ಇಡುತ್ತಿದ್ದ. ಆಕೆಯ ಮೊಬೈಲ್ ಅನ್ನು ತಾನೇ ಇಟ್ಟುಕೊಂಡಿದ್ದು, ನಂತರ ಮುಂಬೈನಲ್ಲಿ ಅದನ್ನು ಎಸೆದಿದ್ದ. ಮೇ 18ರ ಬಳಿಕ ಶ್ರದ್ಧಾಳ ಸಾಮಾಜಿಕ ಮಾಧ್ಯಮಗಳ ಖಾತೆಗಳು ಆತನ ಫೋನ್‌ನಿಂದ ಚಾಲನೆಯಾಗುತ್ತಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
ಕೊಲೆಯಾದ ಶ್ರದ್ಧಾಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಹೇಳಿಕೆ ನೀಡಲಾಗಿದೆಯಾದರೂ ಇಲ್ಲಿಯವರೆಗೆ ಕೇವಲ 20 ದೇಹದ ಭಾಗಗಳು ಮಾತ್ರವೇ ಪತ್ತೆಯಾಗಿವೆ. ಆಕೆಯ ತಲೆ ಇನ್ನೂ ಪತ್ತೆಯಾಗಿಲ್ಲ. ಕಳೆದ ವರ್ಷಾಂತ್ಯದಲ್ಲಿ ಪಾಲಿಗ್ರಾಫ್ ಹಾಗೂ ನಾರ್ಕೋ-ಅನಾಲಿಸಿಸ್ ಪರೀಕ್ಷೆಗಳಲ್ಲಿ ಅಫ್ತಾಬ್ ತಾನು ಕೊಲೆ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾರು, ಟ್ಯಾಂಕರ್ ನಡುವೆ ಭೀಕರ ಅಪಘಾತ – ಪ್ರವಾಸಕ್ಕೆ ತೆರಳುತ್ತಿದ್ದ ಮೂವರು ಮಸಣಕ್ಕೆ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣಕ್ಕೆ (Shraddha Walkar Murder Case) ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ದೆಹಲಿ ಪೊಲೀಸರು (Delhi Police) 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಘಟನೆ?
ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿ ಶ್ರದ್ಧಾವಾಕರ್ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ (2022ರ ನವೆಂಬರ್ 12ರಂದು) ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನ (Aftab Amin Poonawala) ಪೊಲೀಸರು ಬಂಧಿಸಿದ್ದರು.
ಈ ತನಿಖೆಯಲ್ಲಿ ಛತ್ತರ್‌ಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆಗಳು ಶ್ರದ್ಧಾವಾಕರ್ ದೇಹದ್ದೇ ಎಂದು ಡಿಎನ್‌ಎ ವರದಿಗಳು ದೃಢಪಡಿಸಿದೆ. ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಹ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆದ್ರೆ ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ತಪ್ಪೊಪ್ಪಿಗೆಯೊಂದೆ ಅಪರಾಧ ನಿರ್ಣಯಕ್ಕೆ ಸಾಕಾಗಲ್ಲ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್
2022ರಲ್ಲಿ ಘಟನೆ ನಡೆದ ಬಳಿಕ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಕೊಲೆಗೆ ಬಳಸಿದ್ದ ಗರಗಸ, ಚಾಕುಗಳು ಮತ್ತು ಇತರ ಸಾಧನಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಲೀವ್ ಇನ್ ಗೆಳತಿ ಶ್ರದ್ಧಾ ವಾಲ್ಕರ್ (Shraddha Walkar) ಅನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲಾ (Aaftab Poonawala) ಇಂದು ತನ್ನ ವಕೀಲರೊಂದಿಗೆ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾನೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಫ್ತಾಬ್ ನ. 17ರಂದು ಜಾಮಿನು ಅರ್ಜಿ ಸಲ್ಲಿಸಿದ್ದ. ಆದರೆ ದೆಹಲಿ ನ್ಯಾಯಾಲಯ (Delhi Court) ವಿಚಾರಣೆಯನ್ನು ಮುಂದೂಡಿತ್ತು. ಈ ಮಧ್ಯೆ ಅಫ್ತಾಬ್ ಜಾಮೀನು ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ತನ್ನ ಒಪ್ಪಿಗೆಯಿಲ್ಲದೇ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾನೆ.
ಪ್ರಕರಣದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗದ ಕಾರಣ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವ ಉದ್ದೇಶವಿಲ್ಲ ಎಂದು ಜಾಮೀನು ಅರ್ಜಿಯನ್ನು ಸಲ್ಲಿಸುವ ಮೊದಲು ವಕೀಲರು ಆರೋಪಿಸಿದ್ದರು. ಅಫ್ತಾಬ್ ಪೂನಾವಾಲಾ ಆತನ ನ್ಯಾಯಾಂಗ ಬಂಧನವನ್ನು ಡಿ. 9ರಂದು 14 ದಿನಗಳವರೆಗೆ ವಿಸ್ತರಿಸಲಾಗಿತ್ತು. ಇದನ್ನೂ ಓದಿ: ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್ & ಕ್ಯಾರಿ ಶಾಪಿಂಗ್
ಘಟನೆಯೇನು?: ಅಫ್ತಾಬ್ ಅಮಿನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾವಾಕರ್ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಪೀಸ್ ಪೀಸ್ ಮಾಡಿ ದೆಹಲಿಯ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ಪೋಷಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಅಫ್ತಾಬ್ ಭೀಕರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭೀಕರ್ ಹತ್ಯೆಯ ಪ್ರಕರಣಕ್ಕೆ ಇದೀಗ ದೊಡ್ಡ ಸಾಕ್ಷ್ಯ ದೊರೆತಿದೆ. ಕೊಲೆಗಾರ ಅಫ್ತಾಬ್ ಪೂನಾವಾಲಾ (Aftab Poonawala) ದೆಹಲಿಯ (Delhi) ಮೆಹ್ರೌಲಿ ಹಾಗೂ ಗುರುಗ್ರಾಮದ ಕಾಡುಗಳಲ್ಲಿ ಪೊಲೀಸರನ್ನು ಕರೆದೊಯ್ದಾಗ ದೊರೆತಿರುವ ಮೂಳೆಗಳು ಯುವತಿ ಶ್ರದ್ಧಾ ವಾಕರ್‌ದು (Shraddha Walkar) ಎಂಬುದು ದೃಢವಾಗಿದೆ.
ಅಫ್ತಾಬ್ ಪೂನಾವಾಲಾ ಶ್ರದ್ಧಾ ಕೊಲೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಕಾಡುಗಳಲ್ಲಿ ಹೂತು ಹಾಕಿದ್ದ. ಈ ದೇಹದ ಭಾಗಗಳನ್ನು ತನಿಖೆಯ ವೇಳೆ ಪೊಲೀಸರು ಸಂಗ್ರಹಿಸಿದ್ದರು. ಅವುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಡಿಎನ್‌ಎಗೆ ಹೋಲಿಕೆಯಾಗುತ್ತದೆ ಎಂಬುದು ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.
ಅಫ್ತಾಬ್ ಮೇ ತಿಂಗಳಿನಲ್ಲಿ ತನ್ನ ಗೆಳತಿ ಶ್ರದ್ಧಾ ವಾಕರ್ ಹತ್ಯೆ ನಡೆಸಿ, 35 ತುಂಡುಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ಬಳಿಕ ದೇಹದ ತುಂಡುಗಳನ್ನು ಸುಮಾರು 18 ದಿನಗಳ ಕಾಲ ಒಂದೊಂದಾಗಿಯೇ ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ್ದ. ಕಳೆದ ಒಂದು ತಿಂಗಳ ಹಿಂದೆ ಶ್ರದ್ಧಾ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಫ್ತಾಬ್‌ನನ್ನು ಬಂಧಿಸಿದ್ದರು. ಬಳಿಕ ತನಿಖೆಯ ವೇಳೆ ಶ್ರದ್ಧಾ ಹತ್ಯೆಯ ಹಿಂದಿನ ಭಯಾನಕ ಸತ್ಯವನ್ನು ಒಂದೊಂದಾಗಿಯೇ ಪೊಲೀಸರು ಬಯಲಿಗೆಳೆದಿದ್ದಾರೆ.
ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರದ್ದೂ ಅಂತರ್ ಧರ್ಮೀಯ ಸಂಬಂಧ ಎಂಬ ಕಾರಣಕ್ಕೆ ಇಬ್ಬರ ಕುಟುಂಬದವರೂ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಜೋಡಿ ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡು ಮೆಹ್ರೌಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸವಿದ್ದರು. ಇತ್ತೀಚೆಗೆ ಶ್ರದ್ಧಾ ಹಲವು ತಿಂಗಳುಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಆಕೆಯ ತಂದೆ ದೆಹಲಿಗೆ ತೆರಳಿ ಆಕೆಯ ಹುಡುಕಾಟ ನಡೆಸಿದ್ದರು. ಆದರೆ ಆಕೆಯ ಪತ್ತೆಯಾಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕಾಸ್ ವಾಕರ್, 2 ವರ್ಷಗಳ ಹಿಂದೆ ನನ್ನ ಮಗಳು ಅಫ್ತಾಬ್‌ನಿಂದ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಅಂದೇ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದರೆ ಇಂದು ಆಕೆ ಬದುಕಿರುತ್ತಿದ್ದಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ
Live Tv
[brid partner=56869869 player=32851 video=960834 autoplay=true]
ಮುಂಬೈ: ನನ್ನ ಮಗಳನ್ನು ಕೊಂದ ಅಫ್ತಾಬ್ ಪೂನಾವಾಲಾನಿಗೆ (Aftab Poonawala) ಗಲ್ಲು ಶಿಕ್ಷೆ ನೀಡಿ. ಆತನ ಪೋಷಕರಿಗೂ ಕಠಿಣ ಶಿಕ್ಷೆ ನೀಡಿ ಎಂದು ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ (Delhi Murder) ಯುವತಿ ಶ್ರದ್ಧಾ ವಾಕರ್ (Shraddha Walkar) ತಂದೆ ವಿಕಾಸ್ ವಾಕರ್ (Vikas Walkar) ಒತ್ತಾಯಿಸಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆಯ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಸಾಕೇತ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಶ್ರದ್ಧಾ ತಂದೆ ವಿಕಾಸ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಗಳನ್ನು ಕಳೆದುಕೊಂಡ ದುಃಖದಲ್ಲಿ ವಿಕಾಸ್ ವಾಕರ್, ನನ್ನ ಮಗಳನ್ನು ಕೊಂದ ಅಫ್ತಾಬ್‌ಗೆ ಗಲ್ಲು ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರದ್ಧಾ ಅಫ್ತಾಬ್ ಬಗ್ಗೆ ಪೊಲೀಸರಿಗೆ ಈ ಮೊದಲೇ ದೂರು ನೀಡಿದ್ದಳು. ಪೊಲೀಸರು ನನ್ನ ಮಗಳ ದೂರನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಆಕೆ ಇಂದು ಬದುಕಿರುತ್ತಿದ್ದಳು. ಆಕೆಯ ದೂರಿನ ತನಿಖೆಯನ್ನು ವಿಳಂಬಗೊಳಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕು ಎಂದರು.
ಈ ಎಲ್ಲಾ ಘಟನೆಗಳಿಗೂ ಮೊದಲೇ ಕೊಲೆಗಾರನ ಕುಟುಂಬ ನನ್ನನ್ನು ಅವಮಾನಿಸಿ ತಮ್ಮ ಮನೆಯಿಂದ ಹೊರಹಾಕಿತ್ತು. ಅಫ್ತಾಬ್ ತಂದೆ ಸೇರಿದಂತೆ ಆತನ ಕುಟುಂಬದ ಸದಸ್ಯರನ್ನು ಈ ಅಪರಾಧಕ್ಕೆ ಸಂಬಂಧಿಸಿದ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ
ಮಕ್ಕಳ ಹಾದಿ ತಪ್ಪಿಸುತ್ತಿರುವ ಡೇಟಿಂಗ್ ಅಪ್ಲಿಕೇಶನ್‌ಗಳ ಮೇಲೆ ಆದಷ್ಟು ನಿರ್ಬಂಧ ಹೇರಬೇಕು. 18 ವರ್ಷ ಮೇಲ್ಪಟ್ಟ ಮಕ್ಕಳನ್ನು ಪೋಷಕರು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು. ಶ್ರದ್ಧಾ ಮನೆ ಬಿಟ್ಟು ಹೋಗುವುದಕ್ಕೂ ಮೊದಲು ನಾನು ಮಗುವಲ್ಲ, ನಾನು ವಯಸ್ಕಳು ಎಂದು ಹೇಳಿದ್ದಳು. ಆಕೆ ಹೊರಟು ಹೋದ ಮೇಲೆ ನಾನು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಕಳೆದ 2 ವರ್ಷ ನನ್ನ ಕರೆಗಳಿಗೆ ಆಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಆಕೆಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಆಕೆ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಭಾವನಾತ್ಮಕವಾಗಿ ವಿಕಾಸ್ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ
Live Tv
[brid partner=56869869 player=32851 video=960834 autoplay=true]
ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಪೂನಾವಾಲಾನನ್ನು (Aftab Ameen Poonawala) ಇತ್ತೀಚೆಗಷ್ಟೇ ನಾರ್ಕೋ ಅನಾಲಿಸಿಸ್ ಪರೀಕ್ಷೆ ಮತ್ತು ಪಾಲಿಗ್ರಾಫ್ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದಾದ ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ. ಈ ವೇಳೆ ಶ್ರದ್ಧಾಳ ಹತ್ಯೆಯ ಬಗ್ಗೆ ಕೆಲವು ಆಘಾತಕಾರಿ ವಿಷಯವನ್ನು ಪೊಲೀಸ್ ಮೂಲಗಳು ತಿಳಿಸಿದೆ.
ಮೇ 17 ರಂದು ಸಂಜೆ ಶ್ರದ್ಧಾ ಡೇಟಿಂಗ್ ಅಪ್ಲಿಕೇಶನ್ ಬಬಲ್‍ನಲ್ಲಿ ಸಿಕ್ಕ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗಿದ್ದಳು. ಅದಾದ ಬಳಿಕ ಮೇ 18ರಂದು ತಡರಾತ್ರಿ ಮಹ್ರಾಲಿಯಲ್ಲಿರುವ ಫ್ಲಾಟ್‍ಗೆ ಮರಳಿದ್ದಳು. ಅದಾದ ಬಳಿಕ ನನ್ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಷ್ಟೇ ಅಲ್ಲದೇ ಆಕೆ ತಾನು ಇನ್ನೊಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‍ಗೆ ಹೋಗುತ್ತಿರುವುದರ ಬಗ್ಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡು ನಾನು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದೇನೆ ಎಂದಿದ್ದಾನೆ.
ಅದಾದ ಬಳಿಕ ಅಫ್ತಾಬ್‍ನನ್ನು ವಿಚಾರಣೆ ನಡೆಸುವಾಗ ದೆಹಲಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅಫ್ತಾಬ್ ಕೊಲೆಯ ಆಯುಧ ಮತ್ತು ಶ್ರದ್ಧಾಳ ದೇಹದ ಭಾಗಗಳನ್ನು ಪತ್ತೆ ಮಾಡುವಂತೆ ಸವಾಲು ಹಾಕಿದ್ದ ಎಂಬ ವಿಷಯ ಇದೀಗ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸರು (Police) ಅಫ್ತಾಬ್‍ನನ್ನು ವಿಚಾರಣೆ ನಡೆಸಿದ್ದ ವೇಳೆ, ಆತ ಶ್ರದ್ಧಾಳನ್ನು ಕೊಂದಿರುವ ಬಗ್ಗೆ ಒಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ ಶ್ರದ್ಧಾಳ ದೇಹದ ಭಾಗಗಳು ಹಾಗೂ ಕೊಲೆ ಮಾಡಲು ಬಳಸಿದ್ದ ಆಯುಧವನ್ನು ಹುಡುಕಲು ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ ಎಂದು ಪೊಲೀಸರಿಗೆ ತಿಳಿಸಿದ್ದ. ಅಷ್ಟೇ ಅಲ್ಲದೇ ಅಫ್ತಾಬ್ ಕೊಲೆಯ ಆಯುಧವನ್ನು ತನ್ನ ಗುರುಗ್ರಾಮ್ ಕಚೇರಿಯ ಬಳಿಯ ಪೊದೆಗೆ ಎಸೆದಿದ್ದಾಗಿಯೂ ತಿಳಿಸಿದ್ದ ಎಂಬ ವಿಷಯಗಳು ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು
ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಬೇರೊಂದು ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ. ಅವನ ಹೊಸ ಗೆಳತಿ (Girl friend) ಗುರುಗ್ರಾಮದವಳಾಗಿದ್ದು, ವೈದ್ಯಳಾಗಿದ್ದಳು. ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾಗ ಕೊಲೆಯ ಬಗ್ಗೆ ಆಕೆ ಆಘಾತವನ್ನು ವ್ಯಕ್ತಪಡಿಸಿದ್ದಳು. ಇದನ್ನೂ ಓದಿ: ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶ್ರದ್ದಾ ವಾಕರ್ (Shraddha Walkar) ಹತ್ಯೆಯನ್ನು ನಾನೇ ಮಾಡಿದ್ದು, ಅವಳು ನನ್ನ ಬಿಟ್ಟು ಹೋಗುವ ಭೀತಿಯಲ್ಲಿ ಈ ಹತ್ಯೆ ನಡೆದುಹೋಗಿದೆ ಎಂದು ಅಫ್ತಾಬ್ ಅಮೀನ್ ಪೂನವಾಲಾ (Aftab) ತಪ್ಪೊಪ್ಪಿಕೊಂಡಿದ್ದಾನೆ. ಫಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಬಳಿಕ ಈಗ ಮಂಪರು ಪರೀಕ್ಷೆಯಲ್ಲೂ (Narco Test) ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.
ಮುಂಬೈ ಮೂಲದ ಯುವತಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆವರೆಗೂ ನಡೆದ ಪರೀಕ್ಷೆಯಲ್ಲಿ ಹತ್ಯೆಯ ಬಗೆಗಿನ ಹಲವು ಪ್ರಶ್ನೆಗಳಿಗೆ ಅಫ್ತಾಬ್ ಉತ್ತರಿಸಿದ್ದಾನೆ. ಇದನ್ನೂ ಓದಿ: ಲೂಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಭಯೋತ್ಪಾದಕ ಹರ್‌ಪ್ರೀತ್ ಸಿಂಗ್ ಬಂಧನ
ಹಣಕಾಸಿನ ವಿಚಾರಗಳಿಗೆ ನನ್ನ ಮತ್ತು ಶ್ರದ್ಧಾ ನಡುವೆ ಜಗಳಗಳಿತ್ತು. ದೆಹಲಿಗೆ ಬಂದ ಬಳಿಕ ಅವಳು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುವುದಾಗಿ ಹೇಳಿದಳು. ಡ್ರಗ್ಸ್ ಸೇವಿಸಿದ್ದ ನಾನು ನಶೆಯಲ್ಲಿ ಅವಳನ್ನು ಹತ್ಯೆ ಮಾಡಿದ್ದೇನೆ ಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ಹತ್ಯೆಯ ಬಳಿಕ ಅವಳ ಫೋನ್, ಬಟ್ಟೆ ಹಾಗೂ ದೇಹವನ್ನು ತುಂಡರಿಸಿದ ಗರಗಸವನ್ನು ಎಸೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ.
ಆದರೆ ಶ್ರದ್ದಾ ತಲೆಯನ್ನು ಎಲ್ಲಿ ಎಸೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅಫ್ತಾಬ್ ನಿಖರವಾಗಿ ಸ್ಥಳ ಪತ್ತೆ ಹಚ್ಚುವಲ್ಲಿ ವಿಫಲವಾದ ಎಂದು ಮೂಲಗಳು ಹೇಳಿವೆ. ಮಂಪರು ಪರೀಕ್ಷೆ ವೇಳೆ ನೀಡಿದ ಬಹುತೇಕ ಮಾಹಿತಿ ಭೌತಿಕ ಸಾಕ್ಷ್ಯಗಳೊಂದಿಗೆ ಸಾಮ್ಯತೆ ಹೊಂದುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪರಿಶೀಲಿಸಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ
ಫಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಯಲ್ಲಿ ನೀಡುವ ಹೇಳಿಕೆಗಳಿಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ ಸತ್ಯವನ್ನು ಅರಿಯುವ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ಪೊಲೀಸರು ನಡೆಸಿದ್ದಾರೆ. ಅಫ್ತಾಬ್ ಎರಡು ಪರೀಕ್ಷೆಯಲ್ಲೂ ತಪ್ಪೊಪ್ಪಿಕೊಂಡಿದ್ದು, ಹತ್ಯೆಯ ಬಳಿಕ ನಡೆದ ಹಲವು ಘಟನೆಗಳನ್ನು ವಿವರಿಸಿದ್ದಾನೆ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಮಾಡಿದ್ದು ನಾನೇ. ಆ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ (Aftab Poonawala) ಹೇಳಿದ್ದಾನೆ. ಪಾಲಿಗ್ರಾಫ್ ಪರೀಕ್ಷೆ (Polygraph Test) ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ಕೊಲೆಯ ಎಲ್ಲಾ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡಿದ್ದಾನೆ ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರದ್ಧಾ ಹತ್ಯೆ ಮಾಡಿದ್ದ ಅಫ್ತಾಬ್ ಪೂನವಾಲಾ ವಿಚಾರಣೆ ವೇಳೆ ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆ ಕೋರ್ಟ್ ಅನುಮತಿ ಮೇರೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದು, ಕೊಲೆ ಮಾಡಿ ದೇಹವನ್ನು ತುಂಡರಿಸಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಕೊಲೆಗೈದ ಪ್ರಿಯಕರ
ಮೂಲಗಳ ಪ್ರಕಾರ, ಅಫ್ತಾಬ್ ಮೇ 18 ರಂದು ಶ್ರದ್ಧಾಳ ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 3 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ ಬಳಿಕ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಕಾಡಿನಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದೇ ವೇಳೆ ಆತ ಡೇಟಿಂಗ್ ಆ್ಯಪ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾನೆ. ಅಫ್ತಾಬ್ ಹಲವು ಆ್ಯಪ್‌ಗಳನ್ನು ಬಳಸುತ್ತಿದ್ದು, ಅನೇಕ ಯುವತಿಯರ ಜೊತೆಗೆ ಸಂಪರ್ಕದಲ್ಲಿ ಇದ್ದೆ. ಅವರೊಂದಿಗೆ ಸಂಬಂಧವೂ ಹೊಂದಿದ್ದೆ ಎಂದು ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಗೆಳೆಯನ ವಿಚಾರಕ್ಕೆ ಹುಡುಗಿಯನ್ನು ಥಳಿಸಿದ ಯುವತಿಯರ ಗುಂಪು
Live Tv
[brid partner=56869869 player=32851 video=960834 autoplay=true]