Tag: Shraddha Srinath

  • ಶ್ರದ್ಧಾ ಶ್ರೀನಾಥ್ ಹಾಟಪ್ಪೋ ಹಾಟ್ – ಅಬ್ಬಬ್ಬಾ ಪಡ್ಡೆಗಳು ಕಂಗಾಲು

    ಶ್ರದ್ಧಾ ಶ್ರೀನಾಥ್ ಹಾಟಪ್ಪೋ ಹಾಟ್ – ಅಬ್ಬಬ್ಬಾ ಪಡ್ಡೆಗಳು ಕಂಗಾಲು

    ಬಹುಭಾಷಾ ನಟಿ.. ಯೂಟರ್ನ್ ಬೆಡಗಿ, ಮೂಗುತಿ ಸುಂದ್ರಿ ಶ್ರದ್ಧಾ ಶ್ರೀನಾಥ್ (Shraddha Srinath) ಯಾವಾಗಲೂ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಇನ್‌ಸ್ಟಾದಲ್ಲೇ ತಮ್ಮಲ್ಲ ಅಪ್‌ಡೇಟ್ ಕೊಡ್ತಾನೆ ಇರ್ತಾರೆ. ಇದೀಗ ಸಖತ್ ಹಾಟ್ ಅಂಡ್ ಬೋಲ್ಡ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ “ಇಟ್ ವಾಸ್ ನಾಟ್ ಎ ಡ್ರೀಮ್” ಅಂತಾ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

    ಸದ್ಯ ಶ್ರದ್ಧಾ ಶ್ರೀನಾಥ್ ಅವ್ರ ಹಾಟ್ ಬ್ಯೂಟಿಫುಲ್ ಫೋಟೋಗಳು ಸಖತ್ ವೈರಲ್ ಆಗ್ತಿವೆ. ಫೋಟೋ ನೋಡಿ ಫ್ಯಾನ್ಸ್ ವೆರೈಟಿ ವೆರೈಟಿ ಕಮೆಂಟ್ ಮಾಡುತ್ತಿದ್ದಾರೆ. ಮಲಯಾಳಂನ ನ್ಯಾನ್ಸಿ ಹಾಗೂ ಕನ್ನಡ ಯೂ ಟರ್ನ್ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನೇಮಿನ ಜೊತೆಗೆ ಫೇಮ್ ಗಿಟ್ಟಿಸಿಕೊಂಡಿದ್ದ ನಟಿ ಶ್ರದ್ದಾ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೇ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

    10 ವರ್ಷದ ಸಿನಿಮಾ ಜರ್ನಿಯಲ್ಲಿ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಲ್ಲದೇ ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಒಂದು ಮಿಲಿಯನ್ ಪಾಲೋವರ್ಸ್‌ ಹೊಂದಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್. ಇದೇ ವರ್ಷ ಶ್ರದ್ಧಾ ಶ್ರೀನಾಥ್ ನಟಿಸಿದ ತೆಲುಗಿನ ಡಾಕು ಮಹಾರಾಜ್ ಹಾಗೂ ತಮಿಳಿನ ಕಲಿಯುಗಮ್ ಸಿನಿಮಾ ತೆರೆಕಂಡಿವೆ. ಇದನ್ನೂ ಓದಿ: ಸ್ಕಿನ್ ಕಲರ್ ಬಟ್ಟೆಯಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿದ ಸಮಂತಾ

    ನಟಿ ಶ್ರದ್ಧಾ ಶ್ರೀನಾಥ್ ಬಿಕಿನಿ ತೊಟ್ಟ ಫೋಟೋಗಳು, ಬೀಚ್‌ನಲ್ಲಿ ಮಸ್ತ್ ಎಂಜಾಯ್ ಮಾಡ್ತಿರುವ ಸುಮಾರು 20 ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

  • ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!

    ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!

    `ಯೂಟರ್ನ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಮುಗೂತಿ ಸುಂದರಿ ಶ್ರದ್ಧಾ ಶ್ರೀನಾಥ್. `ಯೂಟರ್ನ್’ ಸಿನಿಮಾ ಕೊಟ್ಟ ಸಕ್ಸಸ್‌ನಿಂದ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೇ ಪರಭಾಷೆಯಲ್ಲೂ ವಿಭಿನ್ನ ರೀತಿಯ ಸಿನಿಮಾ ಮಾಡಿದ ಚೆಲುವೆ ಶ್ರದ್ಧಾ ಶ್ರೀನಾಥ್. ಸದ್ಯ ದಕ್ಷಿಣ ಭಾರತದಲ್ಲಿ ಸದ್ದು ಮಾಡ್ತಿರುವ ಹೇಮಾ ವರದಿ ಬಗ್ಗೆ ನಟ-ನಟಿಯರು ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಹೀಗಿರುವಾಗ ಈ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ (Shraddha Srinath) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ ಶ್ರದ್ಧಾ ಮೀಟೂ ಹಾಗೂ ಹೇಮಾ ವರದಿ ಬಗ್ಗೆ ಮೌನ ಮುರಿದಿದ್ದಾರೆ. `ನಾನು ಕೆಲಸ ಮಾಡುವ ಸ್ಥಳದಲ್ಲಿ ಅಂದ್ರೆ ಶೂಟಿಂಗ್ ಸೆಟ್‌ನಲ್ಲಿ ಮುಜುಗುರ ಪಡುವಂತಹ ಯಾವ ಸಂದರ್ಭ ಬಂದಿಲ್ಲ. ಆದರೆ ಕೆಲಸದ ನಂತರ ಅಂದರೆ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ಡ್ರೈವರ್ ನೋಡುವ ರೀತಿ, ಬೇರೆ ಜನರು ನೋಡುವ ರೀತಿ ಮುಜುಗುರ ತರಿಸುತ್ತೆ’ ಎಂದಿದ್ದಾರೆ. ಇದನ್ನೂ ಓದಿ: ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ 

    ಜೊತೆಗೆ `ನಾನು ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಟೆಕ್ನಿಷಿಯನ್‌ಗಳಿಗೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಅಂತಹ ಸೌಕರ್ಯಗಳನ್ನ ಮಹಿಳಾ ಟೆಕ್ನಿಷಿಯನ್ಸ್ ಅಂದ್ರೆ ಹೇರ್‌ಸ್ಟೈಲಿಸ್ಟ್, ಮೇಕಪ್ ವಿಭಾಗದ ಮಹಿಳೆಯರಿಗೆ ಒದಗಿಸಿಕೊಡಬೇಕು’ ಎಂದು ಮಾತಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಅಂಗಳದಲ್ಲಿ ಕಾಂತಾರ ಬೆಡಗಿ ಸಖತ್ ಜಾಲಿ

    ಒಟ್ಟಿನಲ್ಲಿ ಹೇಮಾ ಮಾದರಿಯ ಕಮಿಟಿ ಕನ್ನಡದಲ್ಲೂ ಬೇಕು ಅನ್ನೋದನ್ನ ಖಡಾಖಂಡಿತವಾಗಿ ಹೇಳದೇ, ಒಟ್ಟಾರೆ ಚಿತ್ರರಂಗದಲ್ಲಿ ಶೂಟಿಂಗ್ ಸೆಟ್‌ನಲ್ಲಿ ಮಹಿಳಾ ಟೆಕ್ನಿಷಿಯನ್ಸ್ ಎದುರಿಸುವಂತಹ ಮೂಲಭೂತ ಸೌಕರ್ಯದ ಬಗ್ಗೆ ಧನಿ ಎತ್ತಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್. ಇದನ್ನೂ ಓದಿ: ಮಾಲಾಶ್ರೀ ನಟನೆಯ ಹೊಸ ಸಿನಿಮಾಗೆ ಮುಹೂರ್ತ

  • ವಿಶ್ವಕ್ ಸೇನ್‌ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್‌ ಹೀರೋಯಿನ್

    ವಿಶ್ವಕ್ ಸೇನ್‌ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್‌ ಹೀರೋಯಿನ್

    ನ್ನಡದ ಬ್ಯೂಟಿ ಶ್ರದ್ಧಾ ಶ್ರೀನಾಥ್ (Shraddha Srinath) ಸದ್ಯ ದಕ್ಷಿಣದ ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ಇದೀಗ ನಟಿ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ವಿಶ್ವಕ್ ಸೇನ್ ನಟನೆಯ ಹೊಸ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಶಿವಸೈನ್ಯಕ್ಕೆ ಗುಡ್ ನ್ಯೂಸ್- 131ನೇ ಚಿತ್ರದ ಶೂಟಿಂಗ್‌ಗೆ ಹೊರಡಲು ರೆಡಿಯಾದ್ರು ಶಿವಣ್ಣ

    ಪ್ರತಿಭಾನ್ವಿತ ನಟಿ ಶ್ರದ್ಧಾ ಶ್ರೀನಾಥ್ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ವಿಶ್ವಕ್ ಸೇನ್ (Vishwak Sen) ನಟನೆಯ ‘ಮೆಕಾನಿಕ್ ರಾಕಿ’ (Mechanic Rocky) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ವಿಭಿನ್ನ ಪಾತ್ರ ಇದಾಗಿದೆ.

    ಇನ್ನೂ ಈ ಸಿನಿಮಾದಲ್ಲಿ ವಿಶ್ವಕ್ ಸೇನ್ ಜೊತೆ ಶ್ರದ್ಧಾ ಶ್ರೀನಾಥ್, ಮೀನಾಕ್ಷಿ ಚೌಧರಿ, ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಇದೇ ಅಕ್ಟೋಬರ್ 31ರಂದು ‘ಮೆಕಾನಿಕ್ ರಾಕಿ’ ಚಿತ್ರ ರಿಲೀಸ್ ಆಗಲಿದೆ.

    ಅಂದಹಾಗೆ, ಕನ್ನಡದ ಆಪರೇಷನ್ ಅಲಮೇಲಮ್ಮ, ಯೂ ಟರ್ನ್, ರುಸ್ತುಂ, ಡಿಯರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  • ಕಾಶ್ಮೀರದ ಆಸ್ಪತ್ರೆ ಮುಂದೆ ನಟಿ ಶ್ರದ್ಧಾ ಶ್ರೀನಾಥ್

    ಕಾಶ್ಮೀರದ ಆಸ್ಪತ್ರೆ ಮುಂದೆ ನಟಿ ಶ್ರದ್ಧಾ ಶ್ರೀನಾಥ್

    ಕಾಶ್ಮೀರದ (Kashmir) ಉದಮ್ ಪುರನಲ್ಲಿನ (Udampur) ಕಮಾಂಡ್ ಆಸ್ಪತ್ರೆಯ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ (Shraddha Srinath). ಈ ಆಸ್ಪತ್ರೆಗೆ (Hospital() ಭೇಟಿ ನೀಡುವುದಕ್ಕೆ ಅವರು ಕೊಟ್ಟ ಕಾರಣ ನಿಜಕ್ಕೂ ಥ್ರಿಲ್ ಆಗಿದೆ. ಯೂಟರ್ನ್ ಸುಂದರಿಯ ಹುಟ್ಟಿನ ರಹಸ್ಯ ಬಯಲಾಗಿದೆ.

    ಹೌದು, ಕನ್ನಡತಿ ಶ್ರದ್ಧಾ ಶ್ರೀನಾಥ್ ಹುಟ್ಟಿದ್ದ ಕಾಶ್ಮೀರದ ಉದಮ್ ಪುರದಲ್ಲಿರುವ ಕಮಾಂಡ್ ಆಸ್ಪತ್ರೆಯಲ್ಲಿ ಎನ್ನುವ ವಿಚಾರವನ್ನು ಅವರೇ ಬಯಲು ಮಾಡಿದ್ದಾರೆ. ಜೊತೆಗೆ ಬಾಲ್ಯದಲ್ಲಿ ಬೆಳೆದ ಮನೆಗೂ ಅವರು ಭೇಟಿ ನೀಡಿ, ಹಳೆಯ ನೆನಪುಗಳನ್ನು ಕೆದಕಿದ್ದಾರೆ. ಮತ್ತೆ ಹಳೆಯ ದಿನಗಳಿಗೆ ಮರಳಿದ್ದಾರೆ.

     

    ನಾನು ಹುಟ್ಟಿದ ಈ ಸ್ಥಳಕ್ಕೆ ಭೇಟಿ ಕೊಡಬೇಕು ಎನ್ನುವುದು ಹಲವು ವರ್ಷಗಳ ಆಸೆಯಾಗಿತ್ತು. ಅದು ಈಗ ಈಡೇರಿದೆ. ಸಾಕಷ್ಟು ನೆನಪುಗಳನ್ನು ಈ ಪ್ರದೇಶ ಮತ್ತೆ ನನಗೆ ಮರುಕಳಿಸಿತು ಎಂದು ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.

  • ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ’ಯೂಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್

    ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ’ಯೂಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್

    ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ (Shraddha Srinath) ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ಧಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್ ನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಎಂಟ್ರಿ ಕೊಟ್ಟಿದ್ದಾರೆ. ವಿಕ್ಟರಿಗೆ ವೆಂಕಟೇಶ್ ಗೆ ಜೋಡಿಯಾಗಿ ನಟಿಸ್ತಿರುವ ಮೂಗುತಿ ಸುಂದರಿಯ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

    ಸೈಂಧವ್ ಸಿನಿಮಾದಲ್ಲಿ ಶ್ರದ್ಧಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅವರ ಫಸ್ಟ್ ಲುಕ್ ನೋಡುಗರ ಗಮನಸೆಳೆಯುತ್ತಿದೆ. ಸೀರೆಯುಟ್ಟು ಹೋಮ್ಲಿ ಲುಕ್ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನದ ಪ್ರದರ್ಶಿಸಿದ್ದ ಶ್ರದ್ದಾ ಶ್ರೀನಾಥ್, ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಗಮನಸೆಳೆಯಲಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇತರ ಪಾತ್ರವರ್ಗ ರಿವೀಲ್ ಮಾಡಲಿರುವ ಚಿತ್ರತಂಡ, ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

  • ಕನ್ನಡತಿ ಶ್ರದ್ಧಾ ಶ್ರೀನಾಥ್‌ಗೆ ಬಾಲಿವುಡ್‌ನಿಂದ ಬಂತು ಬಿಗ್ ಆಫರ್

    ಕನ್ನಡತಿ ಶ್ರದ್ಧಾ ಶ್ರೀನಾಥ್‌ಗೆ ಬಾಲಿವುಡ್‌ನಿಂದ ಬಂತು ಬಿಗ್ ಆಫರ್

    ಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಇದೀಗ ಮತ್ತೊಂದು ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ರದ್ಧಾ ಇದೀಗ ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ.

    ಯೂ ಟರ್ನ್, ಆಪರೇಷನ್ ಅಲಮೇಲಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಶ್ರದ್ಧಾ ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಬಾಲಿವುಡ್‌ನ `ಮಿಲನ್ ಟಾಕೀಸ್’ ಚಿತ್ರದಲ್ಲಿ ಶ್ರದ್ಧಾ ಈ ಹಿಂದೆ ನಟಿಸಿದ್ದರು. ಮಿಲಿಂದ್ ಧೈಮಡೆ ನಿರ್ದೇಶನದ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ರಣ್‌ಬೀರ್‌ ಕಪೂರ್‌ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜೊತೆ ಶ್ರದ್ಧಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ತೆಗೆದ ಫೋಟೋ ಸಖತ್ ವೈರಲ್ ಆಗುತ್ತಿದೆ.

    ತಾಯಿ ಮತ್ತು ಮಗನ ಬಂಧ ಸಾರುವಂತಹ ಕಥೆಯಲ್ಲಿ ನೀತು ಕಪೂರ್ ಜೊತೆ ಶ್ರದ್ಧಾ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ರೋಲ್‌ನಲ್ಲಿ ಯೂ ಟರ್ನ್ ಬೆಡಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲಯನ್ಸ್‌ಗೇಟ್‌ ಇಂಡಿಯಾ ಸ್ಟುಡಿಯೋ ಸಾಥ್ ನೀಡುತ್ತಿದೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್‌ಡೇಟ್ ಅನ್ನ ಚಿತ್ರತಂಡ ಕೊಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    `ಯೂ ಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್ ಫುಲ್ ಗರಂ ಆಗಿದ್ದಾರೆ. ತನ್ನ ಹೆಸರನ್ನು ತಪ್ಪಾಗಿ ಬರೆಯುವವರಿಗೆ ಕರೆದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

    ಕನ್ನಡತಿ ಶ್ರದ್ಧಾ ಶ್ರೀನಾಥ್ `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಈಗ ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಇನ್ನು ಚಿತ್ರರಂಗದಲ್ಲಿ ಶ್ರದ್ಧಾ ದಾಸ್, ಶ್ರದ್ಧಾ ಕಪೂರ್ ಅಂತಾ ಸಾಕಷ್ಟು ನಟಿಯರಿದ್ದಾರೆ. ಹೀಗಿರುವಾಗ ಮಾಧ್ಯಮವೊಂದು ಶ್ರದ್ಧಾ ಶ್ರೀನಾಥ್ ಹೆಸರನ್ನ ತಪ್ಪಾಗಿ ಬರೆಯಲಾಗಿದೆ. ಹಾಗಾಗಿ ಶ್ರದ್ಧಾ ಅಪ್‌ಸೆಟ್ ಆಗಿ ತಮ್ಮ ಹೆಸರನ್ನೇ ಬದಲಿಸಿ, ತಪ್ಪಾಗಿ ತಮ್ಮ ಹೆಸರನ್ನು ಹೇಳುವವರಿಗೆ ಟ್ವಿಟ್ಟರ್‌ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ನನ್ನ ಹೆಸರನ್ನು ಯಾರೆಲ್ಲಾ ಸರಿಯಾಗಿ ಹೇಳುತ್ತಿದ್ದಾರೋ ಅವರಿಗೆಲ್ಲಾ ಧನ್ಯವಾದಗಳು. ದಾಸ್ ಅಥವಾ ಕಪೂರ್ ಅಂತ ಕೀ ಬೋರ್ಡ್ ತೋರಿಸುತ್ತಿದ್ದರೂ ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿರುವವರಿಗೆ ಧನ್ಯವಾದಗಳು. ಶ್ರೀನಾಥ್ ಅನ್ನುವುದು ಸರಿಯಾದ ಹೆಸರು ಎಂದು ನಿಮ್ಮ ಮನಸ್ಸಿಗೆ ಬರುತ್ತಿದ್ದರೆ ಅಷ್ಟೇ ಸಾಕು. ಅದೇ ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ. ಇನ್ನು ಇನ್ಸ್ಟಾಗ್ರಾಂನಲ್ಲಿ ಹೆಸರು ಬದಲಿಸಿಕೊಂಡಿರುವುದನ್ನು ಟ್ವೀಟ್ ಮಾಡಿ ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ನನ್ನ ಹೆಸರನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಬದಲಿಸಿಕೊಂಡಿದ್ದೇನೆ. ಟ್ವಿಟ್ಟರ್‌ನಲ್ಲೂ ಇದೇ ರೀತಿ ಬದಲಿಸಿಕೊಂಡರೆ ಸರಿ ಅನ್ನಿಸುತ್ತೆ. ರಮಾ ನನ್ನ ತಾಯಿಯ ಹೆಸರು. ಹಾಗಾಗಿ ಇನ್ನು ಮುಂದೆ ನನ್ನನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಪರಿಚಯಿಸಿಕೊಳ್ಳುತ್ತೇನೆ. ನೀವೇ ನೋಡುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

    ನನ್ನನ್ನು ಶ್ರದ್ಧಾ ದಾಸ್ ಅಂತ ಶ್ರದ್ಧಾ ಕಪೂರ್ ಅಂತ ಅಲ್ಲದೇ ಶ್ರದ್ಧಾ ಶ್ರೀನಾಥ್ ಎಂದು ಕರೆದರೆ ಸಾಕು. ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿಲ್ಲ. ಆದರೆ ಇನ್ನಾದರೂ ನನ್ನ ಹೆಸರನ್ನು ಸರಿಯಾಗಿ ಬರೆಯಿರಿ ಅಂತ ತಿರುಗೇಟು ಕೊಟ್ಟಿದ್ದಾರೆ. ಇನ್ನು ಶ್ರದ್ಧಾ ಟ್ವಿಟ್‌ಗೆ ನೆಟ್ಟಿಗರಿಂದ ಉತ್ತಮ ಬೆಂಬಲ ಸಿಕ್ಕಿದೆ. ಒಟ್ನಲ್ಲಿ ನಟಿಯ ನಡೆ ನೋಡಿ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ‘ಡಿಯರ್ ವಿಕ್ರಮ್’ ಸಿನಿಮಾ ನೋಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

    ನಾಳೆ ‘ಡಿಯರ್ ವಿಕ್ರಮ್’ ಸಿನಿಮಾ ನೋಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

    ತೀಶ್ ನೀನಾಸಂ ನಟನೆಯ ಡಿಯರ್ ವಿಕ್ರಮ್ ಸಿನಿಮಾ ಇದೇ ಜೂನ್ 30 ರಂದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಪೂರ್ವಿಭಾವಿಯಾಗಿ ಸಿನಿಮಾ ತಂಡವು ಹಲವು ಗಣ್ಯರಿಗೆ ಈ ಚಿತ್ರವನ್ನು ವೀಕ್ಷಿಸಲು ಸಿದ್ಧತೆ ಮಾಡಿಕೊಂಡಿದ್ದು ನಾಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಇದೊಂದು ಜೀವಪರ ಕಥೆಯನ್ನು ಹೊಂದಿರುವ ಚಿತ್ರವಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಸಿನಿಮಾ ತಂಡ ಆಹ್ವಾನಿಸಿದೆ.

    ನಿನ್ನೆಯಷ್ಟೇ ಸಿದ್ದರಾಮಯ್ಯ ಅವರನ್ನು ನಟ ಸತೀಶ್ ನೀನಾಸಂ, ನಿರ್ದೇಶಕ ನಂದೀಶ್ ಮತ್ತು ಲೇಖಕ ನಟರಾಜ್ ಹುಳಿಯಾರ್ ಭೇಟಿಯಾಗಿ ಸಿನಿಮಾ ವೀಕ್ಷಿಸುವಂತೆ ಆಹ್ವಾನಿಸಿದ್ದಾರೆ. ಈ ಕುರಿತು ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್‌ ಮಾಡಿದ್ದು, ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ. ರಾಜಕೀಯ ಚಟುವಟಿಕೆಗಳ ನಡುವೆ ಅವರು ಡಿಯರ್ ವಿಕ್ರಮ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.  ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸತೀಶ್ ನಾಯಕನಾಗಿ ನಟಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ನಾಯಕಿ. ವಸಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ವ್ಯವಸ್ಥೆಯ ವಿರುದ್ಧದ ಹೋರಾಟಗಾರನೊಬ್ಬನ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ.

    Live Tv

  • ಸತೀಶ್ ನೀನಾಸಂ ನಟನೆಯ ‘ಡಿಯರ್ ವಿಕ್ರಮ್’ ಸಿನಿಮಾ ಟ್ರೇಲರ್ ರಿಲೀಸ್ : ಓಟಿಟಿಯಲ್ಲಿ ಜೂ.30ಕ್ಕೆ ಬಿಡುಗಡೆ

    ಸತೀಶ್ ನೀನಾಸಂ ನಟನೆಯ ‘ಡಿಯರ್ ವಿಕ್ರಮ್’ ಸಿನಿಮಾ ಟ್ರೇಲರ್ ರಿಲೀಸ್ : ಓಟಿಟಿಯಲ್ಲಿ ಜೂ.30ಕ್ಕೆ ಬಿಡುಗಡೆ

    ತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ, ಕ್ರಾಂತಿಕಾರಿಯೊಬ್ಬನ ಪ್ರೇಮಕತೆಯನ್ನೊಳಗೊಂಡ ವಿಭಿನ್ನ ಸಿನಿಮಾ ‘ಡಿಯರ್ ವಿಕ್ರಮ್’ ನ ಟ್ರೇಲರ್ ಬಿಡುಗಡೆಯಾಗಿದ್ದು, ಜೂನ್ ಮೂವತ್ತರಂದು ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.  ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರ ‘ಡಿಯರ್ ವಿಕ್ರಮ್’ ನಲ್ಲಿ ಹೆಸರಾಂತ ನಟ ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ಆ ಕುತೂಹಲವನ್ನು ಇಮ್ಮಡಿಗೊಳಿಸಿದೆ.

    ಬಿಗಿಯಾದ ಚಿತ್ರಕತೆ ಹಾಗೂ ಮನಮುಟ್ಟುವ ಅಭಿನಯದಿಂದಾಗಿ ಈ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರಿನಲ್ಲಿ ಸೂಚನೆಗಳಿವೆ. ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಜೇಕಬ್ ವರ್ಗೀಸ್ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕೆ ಎಸ್ ನಂದೀಶ್ ‘ಡಿಯರ್ ವಿಕ್ರಮ್’ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ತಮ್ಮ ಹೊಸ ಸಿನಿಮಾದ ಬಗ್ಗೆ ಉತ್ಸುಕರಾಗಿ ಮಾತಾಡಿದ ನಟ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ ’ ಎಂದರು. ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು’ ಎಂದರು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ ಎಂದೂ ಅವರು ತಿಳಿಸಿದರು.

    ನಿರ್ದೇಶಕ ನಂದೀಶ್ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನು ಬಿಚ್ಚಿಟ್ಟರು. ಶೂಟಿಂಗಿಗೆ ಹೋಗುವಾಗ ಮೊಣಕಾಲೆತ್ತರ ಇದ್ದ ನದಿ ನೀರು ವಾಪಾಸ್ ಬರುವಾಗ ಎದೆ ಮಟ್ಟಕ್ಕೆ ಏರಿದಾಗ ಚಿತ್ರತಂಡಕ್ಕಾದ ಆತಂಕವನ್ನು ಅವರು ನೆನಪಿಸಿಕೊಂಡರು. ಆಗ ಭಯವಾಗಿದ್ದರೂ ಈಗದು ಹಿತವಾದ ನೆನಪು ಎಂದು ಅವರು ಹೇಳಿದರು. ಈಗ ಬಿಡುಗಡೆಯಾಗಿರುವ ಟ್ರೇಲರನ್ನು ನೀವು ಸವಿದು ಮುಗಿಸುವುದರೊಳಗೇ ಡಿಯರ್ ವಿಕ್ರಮ್ ಸಿನಿಮಾ ವೂಟ್ ಸೆಲೆಕ್ಟ್  ನಲ್ಲಿ ನೇರವಾಗಿ ಇದೇ ಜೂನ್ 30ರಂದು ಬರಲಿದೆ.

    Live Tv

  • ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ಬದಲಾಯಿತು ‘ಗೋಧ್ರಾ’ ಟೈಟಲ್ : ಡಿಯರ್ ವಿಕ್ರಂ ಆದ ನೀನಾಸಂ ಸತೀಶ್

    ನ್ನಡದ ಹೆಸರಾಂತ ನಟ ಸತೀಶ್ ನೀನಾಂಸ ನಟನೆಯ ನಿರೀಕ್ಷಿತ ‘ಗೋಧ್ರಾ’ ಸಿನಿಮಾದ ಹೆಸರು ಬದಲಾಗಿದೆ. ಈ ಚಿತ್ರಕ್ಕೆ ಈಗ ‘ಡಿಯರ್ ವಿಕ್ರಂ’ ಎಂದು ಹೆಸರಿಡಲಾಗಿದೆ. ಶ್ರದ್ಧಾ ಶ್ರೀನಾಥ್ ಮತ್ತು ಸತೀಶ್ ಕಾಂಬಿನೇಷನ್ನ ಸಿನಿಮಾ ಇದಾಗಿದ್ದು, ನಂದೀಶ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲ ಸಿನಿಮಾ ಇದಾಗಿದ್ದರೂ, ಈಗಾಗಲೇ ಟ್ರೇಲರ್ ನಿಂದಾಗಿ ಭಾರೀ ಸದ್ದು ಮಾಡಿದೆ.

    ಸಿನಿಮಾದ ಟೈಟಲ್ ಬದಲಾವಣೆ ಕುರಿತು ಸತೀಶ್ ಮಾತನಾಡಿದ್ದಾರೆ, “ಈ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಗೋಧ್ರಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈ ಗನ್ನಡಿ ಆಗಿದೆ. ಆದರೀಗ ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿದೆ. ನಿಜ ಹೇಳುವುದಾದರೇ ನಮ್ಮ ಸಿನಿಮಾ ಯಾವುದೇ ನೈಜ ಘಟನೆಗೆ, ಪ್ರದೇಶವನ್ನು ಆಧರಿಸಿದ ಸಿನಿಮಾವಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಅನ್ನೋ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ಯೋಚಿಸಿದೆ. ಇಂದಿನಿಂದ ಗೋಧ್ರಾ.. ‘ಡಿಯರ್ ವಿಕ್ರಂ’ ಆಗಿ ಪ್ರೇಕ್ಷಕರೆದುರು ಬರಲಿದೆ” ಎಂದಿದ್ದಾರೆ.

    ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಸಿನಿಮಾದ ನಾಯಕ- ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, KP ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕಾಡಲಿದೆ. ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣದ ಜುಗಲ್ ಬಂಧಿ ಖಂಡಿತಾ ಇಷ್ಟವಾಗಲಿದೆ. ಈ ಸಿನಿಮಾ ಮೂಲಕ ನಂದೀಶ ಭರವಸೆಯ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಅಂದಹಾಗೆ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗದೇ ನೇರವಾಗಿ VOOT Select OTT ವೇದಿಕೆಯಲ್ಲಿ ಬಿಡುಗಡೆ ಆಗಲಿದೆಯಂತೆ. ಯಾವತ್ತಿನಿಂದ ಈ ಸಿನಿಮಾ ನೋಡಬಹುದು ಎನ್ನುವ ಕುರಿತು ಇನ್ನೂ ಡೇಟ್ ಅನೌನ್ಸ್ ಆಗಿಲ್ಲ. ಆದರೆ, ಅತೀ ಶೀಘ್ರದಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ.