Tag: showroom

  • ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಮುಂಬೈ: ಶೋರೂಮ್‍ನಲ್ಲಿ ಎಲೆಕ್ಟ್ರಿಕಲ್ ಬೈಕ್‍ಗಳನ್ನು ಚಾರ್ಚಿಂಗ್ ಮಾಡುತ್ತಿದ್ದ ವೇಳೆ ಔಟ್‍ಲೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡು 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು

    ಈ ಬಗ್ಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು, ಬೈಕ್‍ಗಳಿಗೆ ಪ್ಲಗ್ ಹಾಕಿ ಚಾರ್ಚಿಂಗ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಬೈಕ್‍ಗಳಿಗೆ ಬೆಂಕಿ ಹೊತ್ತಿಕೊಂಡಿರಬಹುದು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್

    ಈ ಘಟನೆ ಕುರಿತಂತೆ ನಮಗೆ ರಾತ್ರಿ 8 ಗಂಟೆ ಸುಮಾರಿಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿಯನ್ನು ನಂದಿಸಲಾಗಿದೆ ಎಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮುನ್ನ ಮಾರ್ಚ್‍ನಲ್ಲಿಯೂ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿತ್ತು. ಹೀಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಪರಿಶೀಲನೆ ನಡೆಸಲು 1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಬೆಂಕಿಗಾಹುತಿ

    ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಬೆಂಕಿಗಾಹುತಿ

    ಮಂಗಳೂರು: ಎಲೆಕ್ಟ್ರಿಕ್ ಸ್ಕೂಟರ್‌ಗಳ ಶೋರೂಂ ಒಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ನಾಗುರಿಯಲ್ಲಿದ್ದ ಒಕಿನಾವ ಕಂಪನಿಯ ಸ್ಕೂಟರ್ ಶೋ ರೂಂನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.

    ಬೆಂಕಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡಿದೆ ಎನ್ನಲಾಗುತ್ತಿದ್ದು, ಶೋ ರೂಂನಲ್ಲಿದ್ದ 10ಕ್ಕೂ ಹೆಚ್ಚು ಸ್ಕೂಟರ್‌ಗಳು ಸುಟ್ಟು ಹೋಗಿವೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಬುಲ್ಡೋಜರ್ ಮೇಲೆ ವರ ಬಂದಿದ್ದಕ್ಕೆ ಡ್ರೈವರ್‌ಗೆ ಬಿತ್ತು ಫೈನ್

    ನಿನ್ನೆ ರಾತ್ರಿ ಸ್ಕೂಟರ್‌ಗಳ ಬ್ಯಾಟರಿಯನ್ನು ಶೋರೂಮ್ ಸಿಬ್ಬಂದಿ ಚಾರ್ಜ್ ಮಾಡಲು ಇಟ್ಟಿದ್ದರು. ಅದರಲ್ಲಿ ಕಿಡಿ ಉಂಟಾಗಿ ಇಡೀ ಶೋರೂಮ್ ಹೊತ್ತಿ ಉರಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    Live Tv

  • ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ಚಂಡೀಗಢ: ಹೊಸದಾಗಿ ನಿರ್ಮಾಣವಾಗುತ್ತಿರುವ ಶೋರೂಂ ಒಂದರಲ್ಲಿ ನವವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಸೋನಿಪತ್‍ನ ಗೋಕುಲ್ ನಗರದಲ್ಲಿ ನಡೆದಿದೆ.

    ಮೃತಳನ್ನು ರೇಣು ಎಂದು ಗುರುತಿಸಲಾಗಿದ್ದು, ವಿಕಾಸ್ ಅವರನ್ನು ಮದುವೆಯಾಗಿದ್ದರು. ಆದರೆ ವರದಕ್ಷಿಣೆಗಾಗಿ ಆಕೆಯ ಅತ್ತೆಯಂದಿರು ಕಿರುಕುಳ ನೀಡಿ ಆಕೆಯನ್ನು ಅತ್ತೆಯಂದಿರೇ ಕೊಂದಿರಬಹುದು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮಾಹಿತಿ ಪಡೆದ ಸೋನಿಪತ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

    POLICE JEEP

    ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜಯ್ ಕುಮಾರ್, ಶೋ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಆಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • ಶೋರೂಂಗೆ ನುಗ್ಗಿದ್ರು, ಆ ಕಡೆ ಈ ಕಡೆ ನೋಡಿದ್ರು – ಅಲ್ಮೇರಾ ಒಡೆದು ದೋಚಿದ್ರು

    ಶೋರೂಂಗೆ ನುಗ್ಗಿದ್ರು, ಆ ಕಡೆ ಈ ಕಡೆ ನೋಡಿದ್ರು – ಅಲ್ಮೇರಾ ಒಡೆದು ದೋಚಿದ್ರು

    ಬೀದರ್: ಶೋರೂಂ ಶಟರ್ ಮುರಿದು, ಗ್ಲಾಸ್ ಒಡೆದು ಅಲ್ಮೇರಾದಲ್ಲಿದ್ದ 24,500 ರೂ.ಗಳನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನಿರಂಜನ ಅಷ್ಟೂರೆ ಅವರ ಮಾಲೀಕತ್ವದ ಮಹಾಲಕ್ಷ್ಮಿ ಮೋಟಾರ್ಸ್ ಶೋರೂಮಿನಲ್ಲಿ ನಸುಕಿನ ಜಾವ ಕಳ್ಳತನ ನಡೆದಿದೆ. ಕಳ್ಳರು 24,500 ರೂ.ಗಳನ್ನು ದೋಚಿರುವುದು ಮಾತ್ರವಲ್ಲದೆ 33 ಸಾವಿರ ರೂ. ಬೆಲೆ ಬಾಳುವ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಒಟ್ಟು ನಾಲ್ವರು ಕಳ್ಳರು ರಾಜಾರೋಷವಾಗಿ ಒಳಗೆ ನುಗ್ಗಿದ್ದು, ಇಬ್ಬರು ರೂಮಿನ ಎರಡೂ ಬಾಗಿಲುಗಳನ್ನು ಕಾಯುತ್ತಿದ್ದರೆ, ಇನ್ನಿಬ್ಬರು ಅಲ್ಮೇರಾ ಒಡೆದು ಹಣ ದೋಚುವುದಲ್ಲಿ ನಿರತರಾಗಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಶೋರೂಮಿನಲ್ಲಿ ಕಳ್ಳತನ ಮಾಡಿದ ನಂತರ ಭಾಲ್ಕಿ ಪಟ್ಟಣದ ಶಿವಾಜಿ ವೃತ್ತದಲ್ಲಿರುವ ವೈನ್‍ಶಾಪ್‍ಗೂ ಕಳ್ಳರು ನುಗ್ಗಿದ್ದು, ಬರಿಗೈಯಿಂದ ವಾಪಸಾಗಿದ್ದಾರೆ ಎಂದು ಪೊಲೀಸರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕಳ್ಳರು ಕೈಚಳಕ ತೋರಿಸಿದ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆ ಸಿಪಿಐ ರಮೇಶಕುಮಾರ್ ಮೈಲೂರಕರ್ ಸ್ಥಳಕ್ಕೆ ಧಾವಿಸಿ ಶೋರೂಮ್ ಪರಿಶೀಲನೆ ನಡೆಸಿದ್ದಾರೆ. ನಂತರ ಶ್ವಾನ ದಳವನ್ನು ಕರೆಸಿ ತಪಾಸಣೆ ಮಾಡಿಸಿದ್ದಾರೆ. ಈ ಕುರಿತು ಭಾಲ್ಕಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸೆ ಹುಟ್ಟಿಸಿ ಕಾರು ಖರೀದಿಸದ ತಂದೆ – ಜೈಲು ಸೇರಿದ ಮಗ

    ಆಸೆ ಹುಟ್ಟಿಸಿ ಕಾರು ಖರೀದಿಸದ ತಂದೆ – ಜೈಲು ಸೇರಿದ ಮಗ

    ಬೀಜಿಂಗ್: ತಂದೆ ಕಾರ್ ಖರೀದಿಸದ ಹಿನ್ನೆಲೆಯಲ್ಲಿ ಪುತ್ರ ಜೈಲು ಸೇರಿರುವ ವಿಚಿತ್ರ ಘಟನೆ ಚೀನಾದ ಜಿಯಾಂಗ್ ನಗರದಲ್ಲಿ ನಡೆದಿದೆ.

    ಜಿಯಾಂಗ್ ನಗರದ ಬಿಎಂಡಬ್ಲ್ಯೂ ಕಾರ್ ಶೋ ರೂಂನಲ್ಲಿ 22 ವರ್ಷದ ಯುವಕನೊಬ್ಬ ಕಾರನ್ನು ಗೀಚಿದ್ದಾನೆ. ಆದರೆ ತಂದೆ ಕಾರು ಖರೀದಿಸದೆ ಇರುವುದರಿಂದ ಶೋ ರೂಂ ವ್ಯವಸ್ಥಾಪಕರ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಯುವಕನ ಹೆಸರು ಜಿ ಮೌಬಿಂಗ್ ಎಂದು ಜಿಯಾಂಗ್ ನಗರದ ಪೊಲೀಸರು ತಿಳಿಸಿದ್ದಾರೆ. ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಗನಿಗೆ ಐಷಾರಾಮಿ ಕಾರು ಸಿಗುತ್ತದೆ ಎಂದು ತಂದೆ ಭರವಸೆ ನೀಡಿದ್ದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಒಂದು ವರ್ಷ ಕಳೆದರೂ ತಂದೆ ಕಾರು ಖರೀದಿಸಲಿಲ್ಲ. ಇದರ ಕೋಪಗೊಂಡ ಯುವಕ ಬಿಎಂಡಬ್ಲ್ಯೂ ಕಾರ್ ಶೋ ರೂಂಗೆ ಬಂದು ಕಾರಿನ ಮೇಲೆ ಗೀಚಿದ್ದಾನೆ.

    ತಾನು ಗೀಚಿದ ಐಷಾರಾಮಿ ಕಾರು ತುಂಬಾ ಇಷ್ಟವಾಗಿದ್ದು, ಅದನ್ನು ಖರೀದಿಸಲು ಸ್ವಲ್ಪ ಹಣವನ್ನು ಕೂಡಿಸಿ ಇಟ್ಟಿದ್ದಾಗಿ ಜಿ ಮೌಬಿಂಗ್‍ಗೆ ಹೇಳಿಕೊಂಡಿದ್ದಾನೆ. ಘಟನೆಯ ದೃಶ್ಯವು ಶೋ ರೂಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋ ರೂಂ ಮ್ಯಾನೇಜರ್ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಆದರೆ ತಂದೆ ಯುವಕನಿಗೆ ಕಾರು ಖರೀದಿಸಿದ್ದಾರೋ ಇಲ್ಲವೋ ಎಂಬುದು ತಿಳಿದು ಬಂದಿಲ್ಲ.

  • ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗದಲ್ಲಿ ಧ್ರುವ ಸರ್ಜಾ- ಕಿಕ್ಕಿರಿದ ಅಭಿಮಾನಿಗಳು

    ಶಿವಮೊಗ್ಗ: ಜಿಲ್ಲೆಯ ನವೀಕೃತ ಜೋಯಾಲುಕ್ಕಾಸ್ ಮಳಿಗೆಯನ್ನು ಖ್ಯಾತ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಿಕ್ಕಿರಿದ ಅಭಿಮಾನಿಗಳ ನಡುವೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಕಾಸ್ ಇನ್ನಿತರರು ಉಪಸ್ಥಿತರಿದ್ದರು.

    ಧ್ರುವ ಸರ್ಜಾ ಮಳಿಗೆ ಉದ್ಘಾಟಿಸಿ ಚಿನ್ನಾಭರಣ, ವಜ್ರ, ವಾಚ್ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ವೈವಿಧ್ಯಮಯ ಶ್ರೇಣಿ ಹಾಗೂ ವಿನ್ಯಾಸಗಳಿಗೆ ಮೆಚ್ಚುಗೆ ಸೂಚಿಸಿದರು. ಈ ಮಳಿಗೆಯಲ್ಲಿನ ಪ್ರಾಚೀನ ಸಂಗ್ರಹಗಳನ್ನು ಒಳಗೊಂಡ ಹರಳುಗಳ ವಿಭಾಗ ಅಪೂರ್ವ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ವಿವಿಧತೆಗೆ ಸಂತಸ ವ್ಯಕ್ತಪಡಿಸಿದರು.

    ನವೀಕೃತ ಮಳಿಗೆ ಆರಂಭಗೊಂಡ ಬೆನ್ನಲ್ಲೇ ಜೋಯಾಲುಕ್ಕಾಸ್ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಪ್ರತಿ ಖರೀದಿಯ ಮೇಲೆ ಖಚಿತವಾದ ಗೃಹ ಬಳಕೆ ವಸ್ತುಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಬೆಳಗ್ಗಿನಿಂದಲೇ ತಮ್ಮ ಪ್ರೀತಿಯ ನಟ ಧ್ರುವ ಸರ್ಜಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

    ವೇದಿಕೆ ಮೇಲೆ ಬಂದ ಧ್ರುವ ಸರ್ಜಾ ಶಿವಮೊಗ್ಗ ಅಭಿಮಾನಿಗಳಿಗಾಗಿ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ಅಲ್ಲದೇ ಜೋಯಾಲುಕ್ಕಾಸ್ ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧ್ರುವ ಸರ್ಜಾ ಹಿಂತಿರುಗುವಾಗ ಅವರಿಗೆ ಅಡ್ಡಲಾದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರು ಶೋರೂಂ ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಪ್ರತಿಭಟನೆ!

    ಬೆಂಗ್ಳೂರು ಶೋರೂಂ ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಪ್ರತಿಭಟನೆ!

    ಬೆಂಗಳೂರು: ಕಾರಿನ ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿದೆ. ಹೀಗಾಗಿ ಕಾರನ್ನು ಬದಲಾಯಿಸಿ ಕೊಡುವಂತೆ ಗ್ರಾಹಕರೊಬ್ಬರು ಮಲ್ಲೇಶ್ವರಂದ ವರುಣ್ ಮೋಟರ್ಸ್ ಶೋರೂಂ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಏಪ್ರಿಲ್ 17 ರಂದು ನಾಗರಬಾವಿ ನಿವಾಸಿ ನಾಗರಾಜ್ ಅವರು ವರುಣ್ ಮೋಟರ್ಸ್ ಶೋ ರೂಂನಲ್ಲಿ ವಿಟರಾ ಬ್ರೆಜಾ ಕಾರನ್ನು ಖರೀದಿಸಿದ್ದರು. ಸುಮಾರು ದಿನಗಳಿಂದ ಎಂಜಿನ್ ನಿಂದ ಇಂಧನ ಸೋರಿಕೆ ಆಗುತ್ತಿದೆ ಅಂತಾ ಪರೀಕ್ಷೆ ಮಾಡಿಸಲು ಶೋರೂಂಗೆ ಹೋಗಿದ್ದರು.

    ಈ ವೇಳೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿ ಶೋರೂಂ ಸಿಬ್ಬಂದಿ ಕಾರನ್ನು ಕೊಟ್ಟಿದ್ದಾರೆ.ಆದರೆ ಸಂದೇಹ ವ್ಯಕ್ತವಾಗಿದ್ದರಿಂದ ನಾಗರಾಜ್ ಅವರು ನಾಗದೇವನಹಳ್ಳಿಯ ಕಲ್ಯಾಣಿ ಮೋಟಾರ್ಸ್ಗೆ ಹೋಗಿ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಪರೀಕ್ಷಿಸಿದ ಕಲ್ಯಾಣಿ ಮೋಟಾರ್ಸ್ ಅವರು ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿರುವುದನ್ನು ದೃಢಪಡಿಸಿದ್ದರು.

    ನಾಗರಾಜ್ ಅವರು ವರುಣ್ ಮೋಟಾರ್ಸ್ ಮರಳಿ ಬಂದು, ರಿಪೇರಿ ಮಾಡಿಸಿಕೊಂಡು ಹೋಗಿದ್ದರು. ಆದರೆ, ರೀಪೆರಿ ಆಗಿ ಮೂರು ದಿನಕ್ಕೆ ಮತ್ತೇ ಅದೇ ಸಮಸ್ಯೆ ಉಂಟಾಗಿದ್ದರಿಂದ ವರುಣ್ ಮೋಟಾರ್ಸ್ ಅವರಿಗೆ ಸುಮಾರು 70 ರಿಂದ 80 ಇಮೇಲ್ ಕಳಿಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೇ ಶೋರೂಂ ಸಿಬ್ಬಂದಿ ಸತಾಯಿಸಿದ್ದರು. ಇದರಿಂದ ಕೋಪಗೊಂಡ ನಾಗರಾಜ್ ಅವರು ಶೋರೂಂ ಎದುರು ಕಾರು ನಿಲ್ಲಿಸಿ, ಕಾರನ್ನು ಬದಲಾಯಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

  • ಮಂಡ್ಯ: ರಾತ್ರೋರಾತ್ರಿ ಗೋಡೆಗೆ ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ

    ಮಂಡ್ಯ: ರಾತ್ರೋರಾತ್ರಿ ಗೋಡೆಗೆ ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ

    ಮಂಡ್ಯ: ಗೋಡೆಗೆ ಕಿಂಡಿ ಕೊರೆದು ಮೊಬೈಲ್ ಶೋ ರೂಂಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಕಳ್ಳರ ಕೃತ್ಯ ಶೋರೂಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮದ್ದೂರು ಪೇಟೆಬೀದಿಯ ಷರೀಫ್ ಎಂಬವರಿಗೆ ಸೇರಿದ ಮಹಾರಾಜ ಮೊಬೈಲ್ ಶೋಂನಲ್ಲಿ ಭಾನುವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿದೆ. ಶೋರೂಂನ ಹಿಂಬದಿ ಗೋಡೆ ಕೊರೆದಿರುವ ಕಳ್ಳರು, ಒಳ್ಳನುಗ್ಗಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‍ಗಳು, ಬ್ಯಾಟರಿ, ಮೆಮೊರಿ ಕಾರ್ಡ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

    ಇಂದು ಬೆಳಗ್ಗೆ ಸಾರ್ವಜನಿಕರು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮೂವರು ಈ ಕಳ್ಳತನದಲ್ಲಿ ಭಾಗಿಯಾಗಿರುವಂತೆ ತಿಳಿದುಬಂದಿದೆ. ಅಂಗಡಿ ಹೊರಗೆ ಒಬ್ಬ ಮತ್ತು ಒಳಗೆ ಇಬ್ಬರು ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡುತ್ತಿರುವ ದೃಶ್ಯ ಶೋಂನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿವನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.