Tag: Showik Chakraborty

  • ರಿಯಾ ಸೋದರ ಶೌವಿಕ್ ಚಕ್ರವರ್ತಿಗೆ ಜಾಮೀನು

    ರಿಯಾ ಸೋದರ ಶೌವಿಕ್ ಚಕ್ರವರ್ತಿಗೆ ಜಾಮೀನು

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಈ ಮೂಲಕ ಕಳೆದ ಮೂರು ತಿಂಗಳ ಬಳಿಕ ಶೌವಿಕ್ ಜೈಲಿನಿಂದ ಬಿಡುಗಡೆಯಾದಂತಾಗಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ರಿಯಾ ಚಕ್ರವರ್ತಿ ಹಾಗೂ ಶೌವಿಕ್ ಚಕ್ರವರ್ತಿ ಇಬ್ಬರನ್ನು ಬಂಧಿಸಿತ್ತು. ಈ ಹಿಂದೆ ರಿಯಾ ಚಕ್ರವರ್ತಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಇದೀಗ ಅವರ ಸಹೋದರ ಶೌವಿಕ್ ಚಕ್ರವರ್ತಿಗೆ ವಿಶೇಷ ನ್ಯಾಯಾಲಯ ಜಾಮೀನು ಪ್ರಕಟಿಸಿದೆ.

    ಸೆಪ್ಟೆಂಬರ್ 4ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಜೊತೆಗೆ ಶೌವಿಕ್ ಚಕ್ರವರ್ತಿಯನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರನ್ನೂ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜೂನ್‍ನಲ್ಲಿ ಸುಶಾಂತ್ ಸಿಂಗ್ ಸಾವಿನ ಸುತ್ತ ಡ್ರಗ್ಸ್ ಸೇವನೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಎನ್‍ಸಿಬಿ ವಿವಿಧ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಿತ್ತು.

    ಮುಂಬೈ ಕೋರ್ಟ್ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಎನ್‍ಸಿಬಿ ಅಧಿಕಾಗಳ ಮುಂದೆ ಹೇಳಿಕೆ ನೀಡಿರುವುದು ಹಾಗೂ ತಪ್ಪೊಪ್ಪಿಕೊಂಡಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಚಕ್ರವರ್ತಿ ನವೆಂಬರ್ ಮೊದಲ ವಾರದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ ನಲ್ಲಿ ಶೌವಿಕ್ ಚಕ್ರವರ್ತಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಆದರೆ ಈ ವೇಳೆ ಸಹೋದರಿ, ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಲಾಗಿತ್ತು.

  • ಅಕ್ಕ ರಿಯಾಗೆ ಜಾಮೀನು ಸಿಕ್ಕರೂ ಶೌವಿಕ್ ಬೇಲ್ ರಿಜೆಕ್ಟ್

    ಅಕ್ಕ ರಿಯಾಗೆ ಜಾಮೀನು ಸಿಕ್ಕರೂ ಶೌವಿಕ್ ಬೇಲ್ ರಿಜೆಕ್ಟ್

    -ರಿಯಾ ಸೇರಿದಂತೆ ಮೂವರಿಗೆ ಬೇಲ್
    -ರಿಯಾಗೆ ಕೋರ್ಟ್ ಹಾಕಿದ ಷರತ್ತುಗಳೇನು?

    ಮುಂಬೈ: ಒಂದು ತಿಂಗಳ ಬಳಿಕ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದ್ದು, ಇಂದು ಸಂಜೆಯೊಳಗಾಗಿ ಜೈಲಿನಿಂದ ಹೊರ ಬರುವ ಸಾಧ್ಯತೆಗಳಿವೆ. ಆದ್ರೆ ರಿಯಾ ಬಂಧನಕ್ಕೂ ಎರಡು ದಿನ ಮುಂಚೆಯೇ ಜೈಲು ಸೇರಿದ್ದ ಸೋದರ ಶೌವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನ ಬಾಂಬೈ ಹೈಕೋರ್ಟ್ ವಜಾಗೊಳಿಸಿದೆ.

    ಸೆಪ್ಟೆಂಬರ್ 8ರಂದು ಎನ್‍ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನ ಬಂಧಿಸಿ, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಎನ್‍ಸಿಬಿ ಮನವಿಗೆ ಸ್ಪಂದಿಸಿದ್ದ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇತ್ತ ರಿಯಾ ಚಕ್ರವರ್ತಿ ವಕೀಲರ ಮೂಲಕ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

    ಮಂಗಳವಾರ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಅಕ್ಟೋಬರ್ 20ವರೆಗೆ ನ್ಯಾಯಾಂಗ ಬಂಧನವನ್ನ ವಿಸ್ತರಣೆ ಮಾಡಿತ್ತು. ಕಳೆದ ಕೆಲ ದಿನಗಳಿಂದ ಬಾಂಬೆ ಹೈಕೋರ್ಟ್ ನಲ್ಲಿ ರಿಯಾ ಜಾಮೀನು ಅರ್ಜಿ ಸಂಬಂಧ ವಾದ-ಪ್ರತಿವಾದ ನಡೆದಿತ್ತು. ಸುಮಾರು 8 ಗಂಟೆಗೂ ಅಧಿಕ ಕಾಲ ನ್ಯಾಯಾಲಯ ವಾದ-ಪ್ರತಿವಾದವನ್ನ ಆಲಿಸಿ ಇಂದು ರಿಯಾ, ಸ್ಯಾಮುಯೆಲ್ ಮಿರಂಡಾ, ದೀಪೇಶ್ ಸಾವಂತ್ ಗೆ ಜಾಮೀನು ನೀಡಿದೆ. ರಿಯಾ ಸೋದರ ಶೌವಿಕ್ ಮತ್ತು ಡ್ರಗ್ ಪೆಡ್ಲರ್ ಅಬ್ದುಲ್ ಬಸಿತ್ ಸೇರಿದಂತೆ ಇನ್ನುಳಿದ ಆರೋಪಿಗಳ ಅರ್ಜಿಯನ್ನ ವಜಾಗೊಳಿಸಲಾಗಿದೆ.ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್- ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

    ಶೌವಿಕ್ ಅರ್ಜಿ ವಜಾಗೊಂಡಿದ್ಯಾಕೆ?: ಡ್ರಗ್ಸ್ ಖರೀದಿ ಸಂಬಂಧ ಪೆಡ್ಲರ್ ಗಳ ಜೊತೆ ಶೌವಿಕ್ ನಡೆಸಿದ ಸಂಭಾಷಣೆಯ ತನಿಖೆ ಇನ್ನು ಮುಂದುವರಿದೆ. ಶೌವಿಕ್ ಹಲವರ ಜೊತೆ ಡ್ರಗ್ಸ್ ಖರೀದಿಸಿರುವ ಬಗ್ಗೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಶೌವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿದೆ ಎಂದು ವರದಿಯಾಗಿದೆ. . ಇದನ್ನೂ ಓದಿ: ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್

    ಷರತ್ತುಬದ್ಧ ಜಾಮೀನು: ರಿಯಾ ಒಂದು ಲಕ್ಷ ರೂ. ಬಾಂಡ್ ನ್ನು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ರಿಯಾ ತಮ್ಮ ಪಾಸ್‍ಪೋರ್ಟ್ ಪೊಲೀಸರ ವಶಕ್ಕೆ ನೀಡಬೇಕು ಮತ್ತು ಮುಂಬೈನಿಂದ ಹೊರ ಹೋಗಲು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಪ್ರತಿ 10 ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಆಗಮಿಸಿ ಹಾಜರಾತಿ ದಾಖಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    ರಿಯಾ ವಕೀಲರ ಪ್ರತಿಕ್ರಿಯೆ: ನನ್ನ ಕಕ್ಷಿದಾರರ ಮೇಲೆ ಅನಗತ್ಯವಾಗಿ 27ಎ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ರಿಯಾ ಪರಿಚಯಕ್ಕೂ ಮುನ್ನವೇ ಸುಶಾಂತ್ ಡ್ರಗ್ಸ್ ಸೇವಿಸುತ್ತಿರುವ ವಿಚಾರವನ್ನು ಮೂವರು ನಟಿಯರು ರಿವೀಲ್ ಮಾಡಿದ್ದಾರೆ. ನನ್ನ ಕಕ್ಷಿದಾರರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ರೂ ಅವರನ್ನ ಬಂಧನದಲ್ಲಿರಿಸಲಾಗಿತ್ತು. ಕೇಂದ್ರದ ಮೂರು ಏಜೆನ್ಸಿಗಳ ರಿಯಾ ವಿರುದ್ಧ ಅನಗತ್ಯವಾಗಿ ನಡೆಸುತ್ತಿರುವ ತನಿಖೆಗಳು ಅಂತ್ಯಗೊಳ್ಳಬೇಕಿದೆ. ನಾನು ಸತ್ಯಕ್ಕೆ ಬದ್ಧರಾಗಿದ್ದು, ಸತ್ಯಮೇವ ಜಯತೆ ಎಂದು ಸತೀಶ್ ಮನಶಿಂಧೆ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

  • ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಇಂದು ಜೈಲೂಟ

    ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಇಂದು ಜೈಲೂಟ

    -ನಾಳೆ ಜಾಮೀನು ಅರ್ಜಿ ವಿಚಾರಣೆ

    ಮುಂಬೈ: ಮಂಗಳವಾರ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ)ನಿಂದ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿಯನ್ನ ಇಂದು ಮುಂಬೈನ ಬೈಖಲಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಳೆ ರಿಯಾ ಮತ್ತು ಸೋದರ ಶೌವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

    https://www.instagram.com/p/CE34mbMnB_E/

    ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನ ಎನ್‍ಸಿಬಿ ಮಧ್ಯಾಹ್ನ 3.30ಕ್ಕೆ ಬಂಧಿಸಿತ್ತು. ನಂತರ ವೈದ್ಯಕೀಯ ತಪಾಸಣೆ ಬಳಿಕ ರಿಯಾರನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದ ಎನ್‍ಸಿಬಿ, ಆರೋಪಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿಕೊಂಡಿತ್ತು. ನ್ಯಾಯಾಧೀಶರು ಆರೋಪಿಗೆ 14 ದಿನದ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

    https://www.instagram.com/p/CE5z56OH2-5/

    ನ್ಯಾಯಾಂಗ ಬಂಧನದ ಬಳಿಕ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೋಶಿಂಧೆ, ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಾವ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ತಡರಾತ್ರಿಯಾದ ಹಿನ್ನೆಲೆ ರಿಯಾರನ್ನ ಎನ್‍ಸಿಬಿ ಕಚೇರಿಯಲ್ಲಿಯೇ ಇರಿಸಲಾಗಿತ್ತು. ಇಂದು ಬೆಳಗ್ಗೆ ನ್ಯಾಯಾಲಯದ ಆದೇಶದಂತೆ ಬೈಖಲಾ ಜೈಲಿಗೆ ರವಾನೆ ಮಾಡಲಾಗಿದೆ. ಹಾಗಾಗಿ ಇಂದು ರಿಯಾ ಚಕ್ರವರ್ತಿಯ ಜೈಲಿನಲ್ಲಿ ಕಳೆಯಲಿದ್ದು, ಅಲ್ಲಿ ನೀಡುವ ಊಟವನ್ನ ಸೇವಿಸಬೇಕಿದೆ.

    ರಿಯಾ ವಿರುದ್ಧ ಎನ್‍ಡಿಪಿಎಸ್ ಆ್ಯಕ್ಟ್ 8(ಸಿ), 20(ಬಿ), 22, 27ಎ, 28 ಮತ್ತು 29 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡ್ರಗ್ಸ್ ಖರೀದಿ ಮತ್ತು ವ್ಯಾಪಾರದ ಆರೋಪಗಳು ರಿಯಾ ಮೇಲಿವೆ. ಗೆಳತ ಸುಶಾಂತ್ ಸಿಂಗ್ ರಜಪೂತ್ ಹಣದಿಂದ ರಿಯಾ ಡ್ರಗ್ಸ್ ಖರೀದಿಸುತ್ತಿದ್ದರು. ಮೂರು ದಿನದ ವಿಚಾರಣೆಯಲ್ಲಿ ರಿಯಾ ನೀಡಿರುವ ಹೇಳಿಕೆಗಳು ಆಕೆಯ ಬಂಧನಕ್ಕೆ ಸಾಕ್ಷ್ಯಗಳಾಗಿವೆ ಎಂದು ಎನ್‍ಸಿಬಿ ಉಪನಿರ್ದೇಶಕ ಎಂ.ಎ.ಜೈನ್ ಹೇಳಿದ್ದಾರೆ. ಇದನ್ನೂ ಓದಿ: ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ-25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

    ಮಂಗಳವಾರ ರಿಯಾ ಬಂಧನದ ಬಳಿಕ ಮಾತನಾಡಿದ್ದ ವಕೀಲ ಸತೀಶ್ ಮನೋಶಿಂಧೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಪ್ರೀತಿಸಿದ ತಪ್ಪಿಗೆ ನನ್ನ ಕಕ್ಷಿದಾರ ರಿಯಾ ಚಕ್ರವರ್ತಿಯ ಬಂಧನವಾಗಿದೆ. ಮೂರು ತನಿಖಾ ಏಜೆನ್ಸಿಗಳು ಓರ್ವ ಮಹಿಳೆ ಹಿಂದೆ ಬಿದ್ದಿವೆ. ಕಾರಣ ಆಕೆ ಓರ್ವ ಡ್ರಗ್ಸ್ ಅಡಿಕ್ಟ್ ನನ್ನು ಪ್ರೀತಿಸುತ್ತಿದ್ದಳು. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಇದನ್ನೂ ಓದಿ: ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

    ಜೂನ್ 14ರಂದು ಸುಶಾಂತ್ ಮೃತದೇಹ ಅವರ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್, ಇದೊಂದು ಪಕ್ಕಾ ಪೂರ್ವಯೋಜಿತ ಕೊಲೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಮಹಾರೋಗಕ್ಕೆ ಸುಶಾಂತ್ ಬಲಿಯಾಗಿದ್ದಾರೆ ಎಂದು ಆರೋಪಿಸಿ ಧ್ವನಿ ಎತ್ತಿದ್ದರು. ತದನಂತರ ಸಾವಿನ ಬಗ್ಗೆ ಮತ್ತು ಮುಂಬೈ ಪೊಲೀಸರ ತನಿಖೆಯ ಕುರಿತು ಅನುಮಾನಗಳು ವ್ಯಕ್ತವಾಗಿದ್ದರು. ಇತ್ತ ಸುಶಾಂತ್ ನಿಧನದ ಒಂದೂವರೆ ತಿಂಗಳ ಬಳಿಕ ಸುಶಾಂತ್ ತಂದೆ ಕೆ.ಕೆ.ಸಿಂಗ್ ಬಿಹಾರದ ಪಾಟ್ನಾದಲ್ಲಿ ನಟಿ ರಿಯಾ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

    https://www.instagram.com/p/CE35YHCnVhY/

    ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ತನಿಖೆಯನ್ನ ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಇತ್ತ ನಟಿ ರಿಯಾ, ಪಾಟ್ನಾ ಪ್ರಕರಣವನ್ನ ಮುಂಬೈಗೆ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ತನಿಖೆ ಸಿಬಿಐಗೆ ವರ್ಗಾಯಿಸಿ ಅದೇಶ ನೀಡಿತ್ತು.

  • ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ

    ವಿಚಾರಣೆ ವೇಳೆ ತಮ್ಮನನ್ನ ನೋಡಿ ಕಣ್ಣೀರಿಟ್ಟ ರಿಯಾ ಚಕ್ರವರ್ತಿ

    -25 ಬಿಟೌನ್ ಸ್ಟಾರ್ ಗಳಿಗೆ ಢವಢವ ಶುರು

    ಮುಂಬೈ: ವಿಚಾರಣೆ ವೇಳೆ ಸೋದರ ಶೌವಿಕ್ ಚಕ್ರವರ್ತಿಯನ್ನ ನೋಡಿ ನಟಿ ರಿಯಾ ಚಕ್ರವರ್ತಿ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ. ಬಂಧನದ ಬಳಿಕ ಶೌವಿಕ್ ಸೋದರಿಗಾಗಿ ಡ್ರಗ್ಸ್ ಖರೀದಿಸುತ್ತಿರೋದಾಗಿ ತಪ್ಪೊಪ್ಪಿಕೊಂಡಿರುವ ಬಗ್ಗೆ ವರದಿಯಾಗಿತ್ತು.

    ಮೂರನೇ ದಿನ ವಿಚಾರಣೆಗೆ ರಿಯಾ ಹಾಜರಾಗಿದ್ದರು. ಈ ವೇಳೆ ರಿಯಾ ಮತ್ತು ಶೌವಿಕ್ ಇಬ್ಬರನ್ನ ಮುಖಾಮುಖಿ ಮಾಡಿ ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಸೋದರನನ್ನ ನೋಡುತ್ತಲೇ ರಿಯಾ ಕಣ್ಣೀರು ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ. ಇದನ್ನೂ ಓದಿ: ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

    ರಿಯಾ ಮನೆ ಮೇಲೆ ದಾಳಿ ನಡೆದಾಗಿ ಕೆಲ ಟೆಕ್ನಿಕಲ್ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದ್ದು, ಇನ್ನು ವಿಚಾರಣೆ ವೇಳೆ ರಿಯಾ ಕೆಲವು ಸಂದರ್ಭಗಳಲ್ಲಿ ಡ್ರಗ್ಸ್ ಸೇವನೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ರಿಯಾ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದರಿಂದ ಎನ್‍ಡಿಪಿಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಇತ್ತ ರಿಯಾ ವಿಚಾರಣೆ ವೇಳೆ 24 ಸ್ಟಾರ್ ಗಳ ಹೆಸರನ್ನ ಹೇಳಿದ್ದಾರೆ. ಈ ಸಂಬಂಧ 24 ಸ್ಟಾರ್ ಗಳಿಗೆ ನೋಟಿಸ್ ನೀಡಲು ಎನ್‍ಸಿಬಿ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ

    ಡ್ರಗ್ಸ್ ಎಲ್ಲಿ ಮತ್ತು ಯಾರಿಂದ ಖರೀದಿಸಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಕೇವಲ ಸುಶಾಂತ್‍ಗೆ ಮಾತ್ರವಲ್ಲದೇ ಹಲವರಿಗಾಗಿ ರಿಯಾ ಡ್ರಗ್ಸ್ ಖರೀದಿಸುತ್ತಿದ್ದರು. ಡ್ರಗ್ಸ್ ಖರೀದಿಗಾಗಿ ಸುಶಾಂತ್ ಖಾತೆಯಿಂದ ಹಣ ಪಾವತಿಸಲಾಗುತ್ತಿತ್ತು. ಡ್ರಗ್ಸ್ ಸಿಂಡಿಕೇಟ್ ನಲ್ಲಿ ರಿಯಾ ಸದಸ್ಯೆ ಆಗಿದ್ದರು ಎಂಬ ಆರೋಪಗಳನ್ನ ರಿಯಾ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಂಕಿತಾ ಲೋಖಂಡೆ ಪೋಸ್ಟ್ ಗೆ ರಮ್ಯಾ ಪ್ರತಿಕ್ರಿಯೆ

    ಆರಂಭದಲ್ಲಿ ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ರಿಯಾಗೆ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪಗಳು ಸಹ ಕೇಳಿಬಂದಿವೆ. ಈ ಹಿನ್ನೆಲೆ ರಿಯಾರನ್ನ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ

  • ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ: ಎನ್‍ಸಿಬಿ ಮುಂದೆ ಶೌವಿಕ್ ಹೇಳಿಕೆ

    ಅಕ್ಕ ರಿಯಾಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ: ಎನ್‍ಸಿಬಿ ಮುಂದೆ ಶೌವಿಕ್ ಹೇಳಿಕೆ

    ಮುಂಬೈ: ಅಕ್ಕ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಎನ್‍ಸಿಬಿ ಮುಂದೆ ಶೌವಿಕ್ ಚಕ್ರವರ್ತಿ ತಮ್ಮ ಹೇಳಿಕೆ ದಾಖಲಿಸಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಶೌವಿಕ್ ಚಕ್ರವರ್ತಿಯನ್ನು ಎನ್‍ಸಿಬಿ ಬಂಧಿಸಿದೆ. ಇತ್ತ ರಿಯಾ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ್ ನನ್ನ ಸಹ ಬಂಧಿಸಲಾಗಿದೆ.

    ಶೌವಿಕ್ ಡ್ರಗ್ಸ್ ಖರೀದಿಗಾಗಿ ಸಂಬಂಧಿ ಬಾಸಿತ್ ಪರಿಹಾರ್ ಮತ್ತು ಜೈದ್ ಜೊತೆ ಸಂಪರ್ಕದಲ್ಲಿದ್ದನು. ಶೌವಿಕ್ ಫುಟ್‍ಬಾಲ್ ಕ್ಲಬ್ ನಲ್ಲಿ ಬಾಸಿತ್ ನನ್ನ ಮೊದಲ ಬಾರಿಗೆ ಭೇಟಿಯಾಗಿದ್ದ. ನಂತರ ಡ್ರಗ್ ಪೆಡ್ಲರ್ ಸೋಹೆಲ್ ಎಂಬಾತನನ್ನ ಬಾಸಿತ್ ಮೂಲಕ ಶೌವಿಕ್ ಭೇಟಿಯಾಗಿದ್ದ. ಸೋಹೆಲ್ ಇವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಇದನ್ನೂ ಓದಿ: ರಿಯಾ ಚಕ್ರವರ್ತಿ ಹೊರ ನಡೆದ ಬಳಿಕ ಸುಶಾಂತ್ ಮನೆಯಲ್ಲಿ ಜೂನ್ 8 ರಿಂದ 14ರ ನಡುವೆ ನಡೆದಿದ್ದೇನು?

    ಶೌವಿಕ್ ಚಕ್ರವರ್ತಿಗಾಗಿ ನಾನು ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಬಾಸಿತ್ ಹೇಳಿದ್ದಾನೆ. ವಿಚಾರಣೆ ವೇಳೆ ಸ್ಯಾಮುಯೆಲ್ ಮಿರಂಡಾ ಸಹ ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸುತ್ತಿರೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸ್ಯಾಮುಯೆಲ್ ಜೈದ್ ಎಂಬವನ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸುಶಾಂತ್ ನಿಧನದ ಬಳಿಕ ಅಂದ್ರೆ ಜುಲೈ ಅಂತ್ಯದವರೆಗೂ ಸ್ಯಾಮುಯೆಲ್ ಮಿರಾಂಡಗೆ ಜೈದ್ ಡ್ರಗ್ಸ್ ಪೂರೈಕೆ ಮಾಡಿದ್ದ. ಶೌವಿಕ್ ಸಹ ನಗದು ನೀಡಿ ಜೈದ್ ಬಳಿ ಡ್ರಗ್ಸ್ ಪಡೆದುಕೊಂಡಿದ್ದನು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್- ಸ್ಪೋಟಕ ಆಡಿಯೋ ಕ್ಲಿಪ್ ಔಟ್

    ಶುಕ್ರವಾರ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್‍ಸಿಬಿ ಡೈರೆಕ್ಟರ್ ಎಂಕೆ ಜೈನ್, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ನೀಡಿದ ಮಾಹಿತಿ ಅನ್ವಯ ಸುಶಾಂತ್ ಸಿಂಗ್ ಮ್ಯಾನೇಜರ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ನಮಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಹಾಗೂ ಸ್ಯಾಮುಯೆಲ್‍ಗೆ ಸಮನ್ಸ್ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸ್ಯಾಮುಯೆಲ್‍ನನ್ನು ಸುಶಾಂತ್ ಸಿಂಗ್ ಮನೆಯಲ್ಲಿ ಮ್ಯಾನೇಜರ್ ಆಗಿ ರಿಯಾ ನೇಮಕ ಮಾಡಿದ್ದಳು. ಆಕೆಯಾ ಕಾರಣದಿಂದಲೇ ಸುಶಾಂತ್ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂಬ ಅನುಮಾನದ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ

  • ಸುಶಾಂತ್ ಕೇಸ್- ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟ್

    ಸುಶಾಂತ್ ಕೇಸ್- ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಅರೆಸ್ಟ್

    – ಸುಶಾಂತ್ ಮ್ಯಾನೇಜರ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

    ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ತನಿಖೆ ವೇಗ ಪಡೆದುಕೊಂಡಿದೆ. ಇತ್ತ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸಹೋದರನನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‍ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ.

    ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ಸಿಬಿಐ ಅಧಿಕಾರಿಗಳು ಮಗ್ನರಾಗಿದ್ದಾರೆ. ಇತ್ತ ರಿಯಾಗೆ ಡ್ರಗ್ಸ್ ಮಾಫಿಯಾ ಸಂಬಂಧವಿರುವ ಸಂಶಯದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಎನ್‍ಸಿಬಿ ಅಧಿಕಾರಗಳು ತನಿಖಾ ರಂಗಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಿಯಾ ನಿವಾಸದ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಿಯಾ ಸಹೋದರ ಶೋವಿಕ್ ವಿಚಾರಣೆಗ ಒಳಪಡಿಸಿದ ಅಧಿಕಾರಿಗಳು ಬಳಿಕ ಆತನನ್ನು ಬಂಧಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ತನಿಖೆಯ ಭಾಗವಾಗಿ ಇಂದು ಎನ್‍ಸಿಬಿ ಅಧಿಕಾರಿಗಳು ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಮತ್ತು ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ನಿವಾಸ ಮೇಲೆ ದಾಳಿ ನಡೆಸಿದ್ದರು. ಸುಮಾರು ನಾಲ್ಕೈದು ಗಂಟೆಗಳ ಶೋಧ ನಡೆಸಿದ ಅಧಿಕಾರಿಗಳ ತಂಡ ಬಳಿಕ ರಿಯಾ ಸಹೋದರ ಶೋವಿಕ್ ಹಾಗೂ ಮ್ಯಾನೇಜರ್ ಸ್ಯಾಮುಯೆಲ್‍ನನ್ನು ಬಂಧಿಸಿದರು. ಡ್ರಗ್ಸ್ ವಿಚಾರದ ಸಂಬಂಧದಲ್ಲಿ ಅಧಿಕಾರಿಗಳ ಪ್ರಶ್ನೆಗಳಿಗೆ ಇಬ್ಬರು ಸರಿಯಾದ ಉತ್ತರಗಳನ್ನು ನೀಡಲು ವಿಫಲರಾಗಿದ್ದ ಕಾರಣ ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಡ್ರಗ್ ಡೀಲರ್ ಮಿಲಾತ್ರಾ, ಬಾಸಿತ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ದಾಳಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್‍ಸಿಬಿ ಡೈರೆಕ್ಟರ್ ಎಂಕೆ ಜೈನ್, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ನೀಡಿದ ಮಾಹಿತಿ ಅನ್ವಯ ಸುಶಾಂತ್ ಸಿಂಗ್ ಮ್ಯಾನೇಜರ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ನಮಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಹಾಗೂ ಸ್ಯಾಮುಯೆಲ್‍ಗೆ ಸಮನ್ಸ್ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸ್ಯಾಮುಯೆಲ್‍ನನ್ನು ಸುಶಾಂತ್ ಸಿಂಗ್ ಮನೆಯಲ್ಲಿ ಮ್ಯಾನೇಜರ್ ಆಗಿ ರಿಯಾ ನೇಮಕ ಮಾಡಿದ್ದಳು. ಆಕೆಯಾ ಕಾರಣದಿಂದಲೇ ಸುಶಾಂತ್ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂಬ ಅನುಮಾನದ ಪ್ರಶ್ನೆ ಎದ್ದಿದೆ.