Tag: Showik chakraborthy

  • ರಿಯಾ, ಶೌವಿಕ್ ನ್ಯಾಯಾಂಗ ಬಂಧನ ಅಕ್ಟೋಬರ್ 20ರವರೆಗೆ ವಿಸ್ತರಣೆ

    ರಿಯಾ, ಶೌವಿಕ್ ನ್ಯಾಯಾಂಗ ಬಂಧನ ಅಕ್ಟೋಬರ್ 20ರವರೆಗೆ ವಿಸ್ತರಣೆ

    ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಸೋದರ ಶೌವಿಕ್ ಚಕ್ರವರ್ತಿ ಇಬ್ಬರ ನ್ಯಾಯಾಂಗ ಬಂಧನವನ್ನ ಅಕ್ಟೋಬರ್ 20ರವರೆಗೆ ವಿಸ್ತರಿಸಿ ಮುಂವೈ ವಿಶೇಷ ನ್ಯಾಯಾಲಯ ಆದೇಶಿಸಿದೆ.

    ಇಂದು ಇಬ್ಬರ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಮತ್ತೆ ಇಬ್ಬರನ್ನು ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಯಿಂದ ಬಂಧನಕ್ಕೊಳಗಾಗಿರುವ ರಿಯಾ ಮತ್ತು ಶೌವಿಕ್ ಜೈಲಿನಲ್ಲಿದ್ದಾರೆ. ರಿಯಾ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರೂ ಬೇಲ್ ಸಿಕ್ಕಿಲ್ಲ.

    ಸೆಪ್ಟೆಂಬರ್ 8ರಂದು ವಿಚಾರಣೆಗೆ ಹಾಜರಾಗಿದ್ದ ನಟಿ ರಿಯಾ ಚಕ್ರವರ್ತಿಯನ್ನು ಎನ್‍ಸಿಬಿ ಬಂಧಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ ಇದುವವರೆಗೂ 20 ಆರೋಪಿಗಳನ್ನ ಬಂಧಿಸಿದೆ. ರಿಯಾ ಮತ್ತು ಶೌವಿಕ್ ಇಬ್ಬರು ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರೋ ವಿಷಯ ಸಿಬಿಐ ತನಿಖೆ ವೇಳೆ ತಿಳಿದು ಬಂದಿತ್ತು. ಸಿಬಿಐ ಶಿಫಾರಸ್ಸಿನ ಮೇರೆಗೆ ಎನ್‍ಸಿಬಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

    ಡ್ರಗ್ಸ್ ಪೆಡ್ಲರ್ ಜೊತೆ ರಿಯಾ ನಡೆಸಿದ್ದ ವಾಟ್ಸಪ್ ಸಂಭಾಷಣೆಯನ್ನ ಖಾಸಗಿ ಮಾಧ್ಯಮ ವರದಿ ಮಾಡಿತ್ತು. ಅಕ್ಕ ರಿಯಾ ಸೂಚನೆಯ ಮೇರೆಗೆ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಶೌವಿಕ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಎನ್‍ಸಿಬಿಯ ವಿಚಾರಣೆ ಎದುರಿಸಿದ್ದಾರೆ.  ಇದನ್ನೂ ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

    ಸುಶಾಂತ್ ಪ್ರಕರಣದಲ್ಲಿ ಕೇಳಿ ಬಂದಿರುವ ಕೊಲೆ ಆರೋಪಗಳನ್ನು ಏಮ್ಸ್ ವೈದ್ಯ ಸುಧೀರ್ ಗುಪ್ತಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಪದಾರ್ಥ ಅಥವಾ ಕೆಮಿಕಲ್ ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಬನಮ್ಮ ವರದಿಯನ್ನು ಸೆಪ್ಟೆಂಬರ್ 28ರಂದು ಸಿಬಿಐಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ಸಲ್ಮಾನ್ ಟ್ವೀಟ್- ನೆಟ್ಟಿಗರಿಂದ ಆಕ್ರೋಶ

    ಮೊದಲಿಗೆ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಿ ಮುಂಬೈನ ಕೂಪರ್ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವೈದ್ಯಕೀಯ ವರದಿ ನೀಡುವಂತೆ ಡಾ.ಸುಧೀರ್ ಗುಪ್ತಾ ನೇತೃತ್ವದ ಐವರು ಏಮ್ಸ್ ವೈದ್ಯರ ತಂಡಕ್ಕೆ ನೀಡಲಾಗಿತ್ತು. ಏಮ್ಸ್ ವೈದ್ಯರ ತಂಡಕ್ಕೆ ಸೆಪ್ಟೆಂಬರ್ 20ಕ್ಕೆ ವರದಿ ಸೂಚಿಸುವಂತೆ ಸಿಬಿಐ ಸೂಚಿಸಿತ್ತು. ಆದ್ರೆ ವೈದ್ಯರು ಸೆಪ್ಟೆಂಬರ್ 28ರಂದು ವರದಿ ನೀಡಿದ್ದರು.

  • ಅಕ್ಟೋಬರ್ 6ರವರೆಗೆ ರಿಯಾಗೆ ನ್ಯಾಯಾಂಗ ಬಂಧನ

    ಅಕ್ಟೋಬರ್ 6ರವರೆಗೆ ರಿಯಾಗೆ ನ್ಯಾಯಾಂಗ ಬಂಧನ

    ಮುಂಬೈ: ನಟಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಚಕ್ರವರ್ತಿಯನ್ನ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನವನ್ನ ಮುಂದುವರಿಸಿ ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈಗಾಗಲೇ 14 ದಿನಗಳ ಮುಂಬೈನ ಬೈಖುಲ್ಲಾ ಜೈಲಿನಲ್ಲಿರುವ ರಿಯಾ ಸೆರೆವಾಸ ಮುಂದುವರಿಯಲಿದೆ. ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನ ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ನ್ಯಾಯಾಲಯ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

    ರಿಯಾ ಮತ್ತು ಅವರ ಸೋದರ ಶೌವಿಕ್ ಚಕ್ರವರ್ತಿ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಇದಕ್ಕೂ ಮೊದಲು ಸೆಪ್ಟೆಂಬರ್ 11ರಂದು ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ರಿಯಾ, ಶೌವಿಕ್ ಸೇರಿದಂತೆ ನಾಲ್ವರ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು. ಈ ಪ್ರಕರಣದ ಜಾಮೀನು ಅರ್ಜಿ ನಾಳೆ ಬಾಂಬೆ ಹೈಕೋರ್ಟ್ ಮುಂದೆ ಬರಲಿದೆ.

    ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಡ್ರಗ್ಸ್ ಆಯಾಮ ಪಡೆದುಕೊಂಡಿತ್ತು. ಈ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಮತ್ತು ಶೌವಿಕ್ ಬಂಧನವಾಗಿದೆ. ಎನ್‍ಸಿಬಿ ವಿಚಾರಣೆ ವೇಳೆ ಸುಶಾಂತ್ ಗಾಗಿ ಡ್ರಗ್ಸ್ ಖರೀದಿ ಮಾಡುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಶೌವಿಕ್ ಅಕ್ಕನ ಸೂಚನೆ ಮೇರೆಗೆ ಪೆಡ್ಲರ್ ಗಳನ್ನು ಸಂಪರ್ಕಿಸಿ ಡ್ರಗ್ಸ್ ಖರೀದಿ ಮಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್‍ಸಿಬಿ ಹೇಳಿದೆ. ಇತ್ತ ರಿಯಾ ಡ್ರಗ್ಸ್ ಖರೀದಿಗಾಗಿ ನಡೆಸಿರುವ ಕೆಲ ವಾಟ್ಸಪ್ ಚಾಟ್ ಫೋಟೋಗಳು ವೈರಲ್ ಆಗಿದ್ದವು.

    ಡ್ರಗ್ಸ್ ಪ್ರಕರಣದಲ್ಲಿ ಪ್ರತಿನಿತ್ಯ ಹೊಸ ಹೆಸರುಗಳು ಕೇಳಿ ಬರುತ್ತಿವೆ. ವಿಚಾರಣೆಯಲ್ಲಿ ರಿಯಾ ಒಟ್ಟು 25 ರಿಂದ 26 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಇದುವರೆಗೂ ಎನ್‍ಸಿಬಿ ಈ ಪ್ರಕರಣದಲ್ಲಿ 18 ಜನರನ್ನ ಬಂಧಿಸಿದೆ. ಈ ನಡುವೆ ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪೀತ್ ಸಿಂಗ್ ಸೇರಿದಂತೆ ಹಲವರು ಡ್ರಗ್ಸ್ ನಶೆಯ ಪಟ್ಟಿಯಲ್ಲಿದ್ದಾರೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ.

    ರಿಯಾ, ಸಾರಾ ಮತ್ತು ರಕುಲ್ ಒಂದೇ ಜಿಮ್ ಗೆ ತೆರಳುತ್ತಿದ್ದರು. ಹೀಗಾಗಿ ಮೂವರ ಮಧ್ಯೆ ಸ್ನೇಹ ಗಾಢವಾಗಿತ್ತು. ತನಿಖೆ ವೇಳೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದ್ದರಿಂದ ಸಾರಾ, ರಕುಲ್ ಜೊತೆಗೆ ಶ್ರದ್ಧಾ ಕಪೂರ್ ಅವರಿಗೂ ಸಮನ್ಸ್ ಹೋಗುವ ಸಾಧ್ಯತೆಗಳಿವೆ. ಡ್ರಗ್ ಪೆಡ್ಲರ್ ರಾಹಿಲ್ ವಿಶ್ರಾಮ್ ಎಂಬಾತನ ಬಂಧನವಾಗಿದ್ದು, ಈತನಿಂದಲೂ ಸಾಕಷ್ಟು ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಧು ಮಾಂಟೇನಾ ವರ್ಮಾ ಹೆಸರು ಡ್ರಗ್ಸ್ ನಶೆಯಲ್ಲಿ ಕೇಳಿ ಬಂದಿದೆ. ಇನ್ನು ಕರೀಷ್ಮಾ ಕೆಲಸ ಮಾಡುತ್ತಿದ್ದ ಕಂಪನಿಯ ನಿರ್ದೇಶಕ ಧೃವ ಎಂಬವರಿಗೆ ಎನ್‍ಸಿಬಿ ಸಮನ್ಸ್ ನೀಡಿದೆ.

  • ಡ್ರಗ್ಸ್ ಪೆಡ್ಲರ್​ಗಳ ಜೊತೆ ರಿಯಾ ಸೋದರನಿಗೆ ಲಿಂಕ್

    ಡ್ರಗ್ಸ್ ಪೆಡ್ಲರ್​ಗಳ ಜೊತೆ ರಿಯಾ ಸೋದರನಿಗೆ ಲಿಂಕ್

    ಮುಂಬೈ: ನಟಿ ರಿಯಾ ಚಕ್ರವರ್ತಿ ಸೋದರ ಶೌವಿಕ್ ಚಕ್ರವರ್ತಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ವರದಿಗಳು ಪ್ರಕಟವಾಗಿದೆ. ಎನ್‍ಸಿಬಿ ಅಧಿಕಾರಿಗಳು ಓರ್ವನನ್ನ ಬಂಧಿಸಿದ್ದು, ಆತನ ಜೊತೆ ಶೌವಿಕ್ ಸಂಪರ್ಕ ಹೊಂದಿರುವ ಕುರಿತು ಸಾಕ್ಷ್ಯ ಲಭ್ಯವಾಗಿದೆ.

    ಸುಶಾಂತ್ ಪ್ರಕರಣ ಡ್ರಗ್ಸ್ ಆಯಾಮ ಪಡೆದುಕೊಂಡಿದ್ದು, ಇಡಿ ನೀಡಿದ ಮಾಹಿತಿ ಮೇರೆ ಎನ್‍ಸಿಬಿ ರಿಯಾ ಚಕ್ರವರ್ತಿ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ ರಿವೀಲ್ ಆಗಿದ್ದು, ಅದರಲ್ಲಿ ಸುಶ್ (ಸುಶಾಂತ್ ಸಿಂಗ್ ರಜಪೂತ್) ಎಂಬವರಿಗೆ ಡ್ರಗ್ಸ್ ಕೇಳುತ್ತಿರೋ ಬಗ್ಗೆ ಮಾತುಕತೆ ನಡೆದಿದೆ. ಹಾಗೆ ಪಡೆಯುತ್ತಿರೋ ಡ್ರಗ್ಸ್ ಹೇಗೆ ಬಳಸಬೇಕು ಮತ್ತು ಅದರ ಪ್ರಭಾವದ ಬಗ್ಗೆ ಮಾಹಿತಿ ಕೇಳಲಾಗಿದೆ.

    ಇಂದು ದೆಹಲಿಯಲ್ಲಿ ಎನ್‍ಸಿಬಿ ಗೋವಾ ಮೂಲದ ಓರ್ವ ಡ್ರಗ್ಸ್ ಪೂರೈಕೆದಾರನನ್ನು ಬಂಧಿಸಿದ್ದು, ಆತನಿಂದ 3.5 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದೆ. ಈತನ ಬಳಿಯಲ್ಲಿದ್ದ ಗಾಂಜಾ ಒಂದು ಗ್ರಾಂಗೆ 5 ಸಾವಿರ ರೂ. ಮೌಲ್ಯದಾಗಿದೆ. ಎರಡು ದಿನಗಳ ಹಿಂದೆಯೂ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರನ್ನ ಬಂಧಿಸಲಾಗಿತ್ತು.

  • ರಿಯಾ ಸೋದರನ ಖಾತೆಗೆ ಸುಶಾಂತ್ ಅಕೌಂಟ್‍ನಿಂದ ಹಣ ವರ್ಗಾವಣೆ

    ರಿಯಾ ಸೋದರನ ಖಾತೆಗೆ ಸುಶಾಂತ್ ಅಕೌಂಟ್‍ನಿಂದ ಹಣ ವರ್ಗಾವಣೆ

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ನಟಿ ರಿಯಾ ಸೋದರ ಶೌವಿಕ್ ಚಕ್ರವರ್ತಿ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

    ಶೌವಿಕ್ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿಲ್ಲ. ಆದ್ರೆ ಹಲವು ಬಾರಿ ಹಣ ಟಾನ್ಸಫರ್ ಆಗಿದೆ. ಜೂನ್ 10, 2019ರಂದು ಶೌವಿಕ್ ಖಾತೆಗೆ 40 ಸಾವಿರ ರೂ. ವರ್ಗಾವಣೆ ಆಗಿದೆ. ತದನಂತರ ಹಲವು ಬಾರಿ ಕಡಿಮೆ ಮೊತ್ತದ ವ್ಯವಹಾರಗಳು ನಡೆದಿವೆ. ಸುಶಾಂತ್ ತನ್ನ ಮೂರು ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡಿ ಹೊಸ ಅಕೌಂಟ್ ತೆರೆಯಲು ತೀರ್ಮಾನಿಸಿದ್ದರು. ಇದನ್ನೂ ಓದಿ: ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಆಪ್ತ ಗೆಳೆಯ ಸಿದ್ಧಾರ್ಥ್ ಪಿಠಾಣಿ

    ಸುಶಾಂತ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ರಿಯಾ ಬಳಸುತ್ತಿದ್ದರು. ರಿಯಾ ಮಾಡುತ್ತಿದ್ದ ಅತ್ಯಧಿಕ ಖರ್ಚುಗಳಿಂದ ಸುಶಾಂತ್ ಚಿಂತೆಯಲ್ಲಿದ್ದರು. ಬಣ್ಣದ ಲೋಕದಿಂದ ದೂರ ಉಳಿಯಲು ಗೆಳೆಯ ನಿರ್ಧರಿಸಿದ್ದ ಎಂದು ಸುಶಾಂತ್ ಆಪ್ತ ಸಿದ್ಧಾರ್ಥ್ ಪಿಠಾಣಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಶುಕ್ರವಾರ ರಿಯಾ ಮತ್ತು ಶೌವಿಕ್ ಇಬ್ಬರನ್ನು ವಿಚಾರಣೆಗೆ ಒಳಪಡಿಸಿತ್ತು. ಇದನ್ನೂ ಓದಿ: ಸುಶಾಂತ್ ಕೇಸ್- ಸಿಬಿಐ ತನಿಖೆಗೆ ಕೇಂದ್ರ ಸಮ್ಮತಿ

    ಸುಶಾಂತ್ ಖಾತೆಯಿಂದ ರಿಯಾ ಬರೋಬ್ಬರಿ 15 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಆರೋಪ ನಟಿ ವಿರುದ್ಧ ಕೇಳಿ ಬಂದಿದೆ. ಹಣ ವರ್ಗಾವಣೆ ಶೌವಿಕ್ ಖಾತೆಯ ಮೂಲಕ ನಡೆದಿದೆ ಎನ್ನಲಾಗಿದೆ.