ಹಾಜಿಪುರದ ವಾರ್ಡ್ ನಂ.5 ರಲ್ಲಿ ಮೊದಲ ಬಾರಿಗೆ ಚುನಾಯಿತರಾದ ಕೌನ್ಸಿಲರ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಸದಸ್ಯ ರೈ ಆತ್ಮರಕ್ಷಣೆಗೆ ಮನೆ ಕಡೆ ಓಡಿದರು. ಆದಾಗ್ಯೂ, ದಾಳಿಕೋರರು ಹಿಂಬಾಲಿಸಿ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ಸದ್ದು ಕೇಳಿದ ಕೂಡಲೇ ಆತನ ಮನೆಯವರು ಮತ್ತು ಸ್ಥಳೀಯರು ಧಾವಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ರೈ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರ್‌ಜೆಡಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ
ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಗೂಂಡಾಗಳು ಹಾಜಿಪುರದಲ್ಲಿ ವಾರ್ಡ್ ಕೌನ್ಸಿಲರ್ ಪಂಕಜ್ ರೈ ಅವರನ್ನು ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಅವರ ಗೂಂಡಾಗಳು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿರುವಾಗ ಶಾಂತಿಯುತವಾಗಿ ನಿದ್ರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ತನ್ನೊಂದಿಗೆ ಚಾಟ್ ಮಾಡುವುದನ್ನು ನಿಲ್ಲಿಸಿದ್ದಕ್ಕಾಗಿ ಮೂವರು ಯುವಕರು ಪ್ಲ್ಯಾನ್ ಮಾಡಿ 16 ವರ್ಷದ ಬಾಲಕಿಗೆ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಘಟನೆ ನಡೆದ ಎರಡು ದಿನಗಳ ನಂತರ ಮೂವರನ್ನು ಬಂಧಿಸಲಾಗಿದೆ. ತನ್ನೊಂದಿಗೆ ಸ್ನೇಹ ಬೆಳೆಸಿದ್ದ ಒಬ್ಬನ ಸಂದೇಶಗಳಿಗೆ ಬಾಲಕಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾಳೆ. ಅದಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ
ಬಾಲಕಿ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಆರೋಪಿ ಅರ್ಮಾನ್ ಅಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಮತ್ತಿಬ್ಬರು ಆರೋಪಿಗಳಾದ ಬಾಬಿ ಹಾಗೂ ಪವನ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಪ್ರಮುಖ ಆರೋಪಿ ಅರ್ಮಾನ್ ಅಲಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ವಿಜಯ್ ದೇವರಕೊಂಡ ವಿರುದ್ಧ ಹಳೆಯ ಸೇಡು ತೀರಿಸಿಕೊಂಡ ನಿರೂಪಕಿ ಅನಸೂಯ
ಅರ್ಮಾನ್ ಅಲಿ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮದ ಮೂಲಕ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದನು. 6 ತಿಂಗಳ ಹಿಂದೆ ಹುಡುಗಿ ತನ್ನ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ನಂತರ ಅವನು ದಾಳಿಗೆ ಸಂಚು ರೂಪಿಸಿದ್ದಾನೆ. 11ನೇ ತರಗತಿ ಓದುತ್ತಿದ್ದ 16 ವರ್ಷದ ಬಾಲಕಿ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಸಂತ್ರಸ್ತೆಯ ಭುಜಕ್ಕೆ ಗುಂಡು ತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಗೆ ಹಿಂದಿನಿಂದ ಗುಂಡು ಹಾರಿಸಿದ್ದಾರೆ. ಅವರ ಮೇಲೆ ಕೊಲೆ ಪ್ರಯತ್ನ ಆರೋಪ ಹೊರಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಕಾನ್ಪುರ: ಸೊಸೆ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ಪೊಲೀಸರ ಮೇಲೆಯೇ 45 ಸುತ್ತು ಗುಂಡು ಹಾರಿಸುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದಲ್ಲಿ ತನ್ನ ಸೊಸೆಯೊಂದಿಗೆ ಕೋಪಗೊಂಡ ಮಾವ 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು. ಅದು ಕೂಡ ಕೇವಲ 300 ರೂ. ಗೆ ಪತ್ನಿ, ಮಗ ಮತ್ತು ಸೊಸೆಯನ್ನು ರೂಮ್‍ಗೆ ಹಾಕಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ. ಇದರಿಂದ ಗಾಬರಿಗೊಂಡ ಸೊಸೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಕೌಟುಂಬಿಕ ಕಲಹವೆಂದು ಪರಿಗಣಿಸಿ, ಒಬ್ಬ ಇನ್ಸ್‌ಪೆಕ್ಟರ್ ಮತ್ತು ಕೆಲವು ಕಾನ್‍ಸ್ಟೆಬಲ್‍ಗಳು ಜೀಪಿನಲ್ಲಿ ಸ್ಥಳಕ್ಕೆ ತಲುಪಿದರು.
ಪೊಲೀಸರನ್ನು ನೋಡಿದ ಆತ ಹೆದರಿ ಛಾವಣಿಯ ಮೇಲೆ ಹತ್ತಿದ್ದು, ಅಲ್ಲಿಂದ ಅವನು ತನ್ನ ಪರವಾನಗಿ ಪಡೆದ ಡಬಲ್ ಬ್ಯಾರೆಲ್ ಗನ್‍ನಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಸುಮಾರು ಮೂರು ಗಂಟೆಗಳ ಕಾಲ ಸುಮಾರು 45 ಸುತ್ತು ಗುಂಡು ಹಾರಿಸಿದರು. ಇದರಿಂದ ಇನ್ಸ್‍ಪೆಕ್ಟರ್ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ನಾಳೆ ಫಸ್ಟ್ ಡೇ ಕೆಲಸಕ್ಕೆ ಹೋಗಬೇಕಿದ್ದವ ಮಸಣಕ್ಕೆ – ಅಪಘಾತದಲ್ಲಿ ತಂದೆ, ಮಗ ಸ್ಥಳದಲ್ಲೇ ಮೃತ
3 ಗಂಟೆಗಳ ನಂತರ, ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಕ್ಯಾಂಟ್ ಮೃಗಾಂಕ್ ಶೇಖರ್ ಪಾಠಕ್, ಎಡಿಸಿಪಿ ರಾಹುಲ್ ಮಿಠಾಯಿ ಮತ್ತು ಆರು ಪೊಲೀಸ್ ಠಾಣೆಗಳ ಪಡೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.
ನಡೆದಿದ್ದೇನು?
ಶ್ಯಾಮನಗರದ ಸಿ-ಬ್ಲಾಕ್‍ನ ನಿವಾಸಿ ಆರ್‌ಕೆ ದುಬೆ(60) ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಕಿರಣ್ ದುಬೆ, ಹಿರಿಯ ಮಗ ಸಿದ್ಧಾರ್ಥ್, ಸೊಸೆ ಭಾವನಾ ಮತ್ತು ದಿವ್ಯಾಂಗ್ ಮಗಳು ಚಾಂದಿನಿ ಅವರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಕಿರಿಯ ಮಗ ರಾಹುಲ್ ಮತ್ತು ಸೊಸೆ ಜಯಶ್ರೀ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದುಬೆ ಅವರು ವಿದ್ಯುತ್ ಬಿಲ್ಲು 300 ರೂ. ನೀಡುವ ವಿಚಾರವಾಗಿ ಸೊಸೆಯೊಂದಿಗೆ ಜಗಳ ಪ್ರಾರಂಭವಾಗಿದೆ. ಇದರಿಂದ ಅತಿರೇಕವಾದ ದುಬೆ ಕೋಪ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆ ಎಂದು ಕಿರುಚಾಡಿದ್ದಾನೆ. ಈ ವೇಳೆ ರಕ್ಷಣೆಗೆ ಬಂದ ಪತ್ನಿ ಮತ್ತು ಮಗನನ್ನು ಸೊಸೆಯೊಂದಿಗೆ ಕೊಠಡಿಗೆ ತೆಳ್ಳಿ ಬೀಗ ಹಾಕಿದ್ದಾನೆ.
ಸೊಸೆ ಪೊಲೀಸರಿಗೆ ಕರೆ
ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದ ಸೊಸೆ ಭಾವನಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾವನಿಂದ ಕುಟುಂಬವನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಚಕೇರಿ ಪೊಲೀಸರು ಮನೆಗೆ ತಲುಪಿದಾಗ, 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು.
ಚಕೇರಿ ಪೊಲೀಸರು ಗುಂಡಿನ ದಾಳಿಯ ಬಗ್ಗೆ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಮೃಗಾಂಕ್ ಶೇಖರ್ ಪಾಠಕ್ ಮತ್ತು ಎಡಿಸಿಪಿ ರಾಹುಲ್ ಅವರು ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು. ಇದಾದ ನಂತರವೂ ದುಬೆ ಸುಮ್ಮನಾಗಿಲ್ಲ, ಬದಲಿಗೆ ಪ್ರತಿಯೊಬ್ಬರ ಮೇಲೆಯೂ ಗುಂಡು ಹಾರಿಸುತ್ತಲೇ ಇದ್ದ.
ಇನ್ಸ್‌ಪೆಕ್ಟರ್ ಅಮಾನತು ಮಾಡಿಸಿದ
ದುಬೆ ಸುಮಾರು 3 ಗಂಟೆಗಳಲ್ಲಿ ಪೊಲೀಸರ ಮೇಲೆ 40 ರಿಂದ 45 ಸುತ್ತು ಗುಂಡು ಹಾರಿಸಿದ್ದಾನೆ. ಡಿಸಿಪಿ ಪೂರ್ವ ಡಿಸಿಪಿ ಧ್ವನಿವರ್ಧಕದ ಸಹಾಯದಿಂದ ದುಬೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ದುಬೆ ಡಿಸಿಪಿಗೆ, ಪೊಲೀಸ್ ಇನ್ಸ್‍ಪೆಕ್ಟರ್‌ನನ್ನ ಮನೆಗೆ ಹೇಗೆ ಬಂದರು. ಅವರನ್ನು ಅಮಾನತು ಮಾಡುವವರೆಗೆ ಗುಂಡಿನ ದಾಳಿ ಮುಂದುವರಿಯಲಿದೆ ಎಂದಿದ್ದಾನೆ. ಅದಕ್ಕೆ ದುಬೆಗೆ ಟೈಪ್ ಮಾಡಿದ ಅಮಾನತು ಪತ್ರವನ್ನು ವಾಟ್ಸಾಪ್ ಸಂಖ್ಯೆಗೆ ಡಿಸಿಪಿ ಕಳುಹಿಸಿದ್ದಾರೆ. ಅದರ ನಂತರವೇ ಅವರು ಗುಂಡು ಹಾರಿಸುವುದನ್ನು ನಿಲ್ಲಿಸಿದರು. ಇದಾದ ಬಳಿಕ ಪೊಲೀಸ್ ತಂಡ ಆತನನ್ನು ಬಂಧಿಸಿದೆ.
ಡಬಲ್ ಬ್ಯಾರೆಲ್ ಗನ್, 45 ಖಾಲಿ ಚಿಪ್ಪುಗಳು, 60 ಕಾಟ್ರಿಡ್ಜ್‌ಗಳು ಪತ್ತೆ
ದುಬೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪೊಲೀಸರು ಆತನ ಡಬಲ್ ಬ್ಯಾರೆಲ್ ಗನ್ ವಶಪಡಿಸಿಕೊಂಡರು. ಮನೆಯನ್ನು ಪರಿಶೀಲಿದ ವೇಳೆ, ಛಾವಣಿ ಮೇಲೆ ಸುಮಾರು 45 ಖಾಲಿ ಚಿಪ್ಪುಗಳು ಮತ್ತು 60ಕ್ಕೂ ಹೆಚ್ಚು ಕಾಟ್ರಿಡ್ಜ್‌ಗಳು ಕಂಡುಬಂದಿವೆ. ದುಬೆ ಬಳಿಯೂ ರಿವಾಲ್ವರ್ ಇದೆ ಎಂದು ಮಗ ಮತ್ತು ಸೊಸೆ ಹೇಳಿದ್ದಾರೆ. ಪೊಲೀಸರು ಮನೆಯನ್ನೆಲ್ಲ ಹುಡುಕಿದರೂ ರಿವಾಲ್ವರ್ ಪತ್ತೆಯಾಗಿರಲಿಲ್ಲ. ಇದೀಗ ರಿವಾಲ್ವರ್ ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಅಂಗಡಿಗಳ ಮೇಲೆ ಪೊಲೀಸರ ದಾಳಿ: 50 ಕೆಜಿ ಗೋಮಾಂಸ ವಶ, 29 ಹಸುಗಳ ರಕ್ಷಣೆ
ಮೂರು ತಿಂಗಳಿಂದ ಹಿರಿಯ ಮಗ, ಸೊಸೆ ಜೊತೆ ಜಗಳ
ಆರೋಪಿ ದುಬೆ ಪೊಲೀಸರಿಗೆ, ಹಿರಿಯ ಮಗ ಸಿದ್ಧಾರ್ಥ್ ಪತ್ನಿ ಭಾವನಾ ನನಗೆ ಕಿರುಕುಳ ನೀಡುತ್ತಾಳೆ. ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಕೆಯ ಕುಟುಂಬದವರೂ ನನಗೆ ಕಿರುಕುಳ ನೀಡುತ್ತಾರೆ. ಮೂರು ತಿಂಗಳ ಹಿಂದೆ ನಾನು ಪೊಲೀಸರಿಗೆ ದೂರು ನೀಡಿದ್ದೆ ಆದರೆ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕೊಲಂಬೊ: ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುವ ಅಥವಾ ಇತರರಿಗೆ ಹಾನಿ ಮಾಡುವವರ ಮೇಲೆ ಗುಂಡು ಹಾರಿಸಲು ಶ್ರೀಲಂಕಾ ರಕ್ಷಣಾ ಸಚಿವಾಲಯವು ಸೇನಾಪಡೆಗಳಿಗೆ ಆದೇಶಿಸಿದೆ ಎಂದು ಸೇನಾ ವಕ್ತಾರರು ಡೈಲಿ ಮಿರರ್‌ಗೆ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಜನರು ರೋಷಾವೇಷಕ್ಕೆ ಬೆಚ್ಚಿದ ಮಹಿಂದಾ ರಾಜಪಕ್ಸ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಚಂಡೀಗಢ: ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಲಂಧರ್ ಜಿಲ್ಲೆಯ ಮಾಲಿಯನ್ ಗ್ರಾಮದಲ್ಲಿ ನಡೆದಿದೆ.
ಜಲಂಧರ್ ಡಿಎಸ್‌ಪಿ ಲಖ್ವಿಂದರ್ ಸಿಂಗ್ ಅವರು ಹತ್ಯೆ ವಿಚಾರವನ್ನು ದೃಢಪಡಿಸಿದ್ದಾರೆ. ಕಬಡ್ಡಿ ಆಟಗಾರನ ಮೇಲೆ ಸುಮಾರು 8ರಿಂದ 10 ಗುಂಡುಗಳನ್ನು ಹಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೂರದಿಂದ ಸರಣಿ ಬುಲೆಟ್‌ಗಳು ಹಾರುತ್ತಿರುವ ಆತಂಕಕಾರಿ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್
ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಸಂದೀಪ್ ಕಬಡ್ಡಿ ಫೆಡರೇಶನ್ ಅನ್ನು ನಿರ್ವಹಿಸುತ್ತಿದ್ದರು.
ಬೆಂಗಳೂರು: ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳಿಗೆ ಮಾದನಾಯಕನಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಗಳಾಗಿರುವ ಚಂದನ್ ಮತ್ತು ಶರಣ್ ಮೇಲೆ ಮಾದನಾಯಕನಹಳ್ಳಿ ಸಿಪಿಐ ಸತ್ಯನಾರಾಯಣ್ ಅವರು ಗುಂಡು ಹಾರಿಸಿದ್ದಾರೆ.
ಆರೋಪಿಗಳು ಕಳೆದ ಜುಲೈ 23 ರಂದು ಮಂಜುನಾಥ್ ಎಂಬುವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರನ್ನು ಕೊಲೆ ಮಾಡಿದ್ದರು. ಈ ಆರೋಪಿಗಳು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೇದೆ ಮನಗುಂಡಿ ಮತ್ತು ಪಿ.ಎಸ್.ಐ ಮುರಳಿ ಅವರು ಮೇಲೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಸತ್ಯನಾರಾಯಣ್ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಟ್ನಾ: ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏನಿದು ಪ್ರಕರಣ?
ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು. ವರ ಕುಮಾರ್ ಅಖಿಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷಮ್ ಚಕ್ ಗ್ರಾಮದನಾಗಿದ್ದು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ವಧುವಿನ ಮನೆಗೆ ಬಂದಿದ್ದನು. ನಂತರ ನವಜೋಡಿ ಹೂ ಮಾಲೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ವರನ ಸ್ನೇಹಿತರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಆಗ ವರನ ಸ್ನೇಹಿತರೊಬ್ಬ ವೇದಿಕೆ ಮೇಲೆ ಬಂದೂಕನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲಾರಂಭಿಸಿದನು.
ಈ ವೇಳೆ ಬಂದೂಕಿನಲ್ಲಿ ಸಿಲುಕಿದ್ದ ಮೂರು ಗುಂಡುಗಳನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಆಕಸ್ಮಿಕವಾಗಿ ಹಾರಿವೆ. ಅದರಲ್ಲಿ ಒಂದು ವರನಿಗೆ ಮತ್ತು ಆತನ ಸಹೋದರ ಗುಡ್ಡುವಿಗೆ ತಗುಲಿವೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ ಕುಮಾರ್ ಮೃತಪಟ್ಟಿದ್ದಾನೆ. ಸದ್ಯಕ್ಕೆ ವರನ ಸಹೋದರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸದ್ಯ ಅಪರಾಧಿ ಯಾರು ಎಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಭ್ರಮಾಚರಣೆ ನಡೆಸಿ ಗುಂಡು ಹಾರಿಸಿದ್ದ ವರನ ಸ್ನೇಹಿತ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿದೆ ಎಂದು ದಾನ್‍ಪುರದ ಸಹಾಯಕ ಪೊಲೀಸ್ ಕಮೀಷನರ್ ಅಶೋಕ್ ಮಿಶ್ರಾ ತಿಳಿಸಿದ್ದಾರೆ.
ಸದ್ಯ ಎಫ್‍ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಕುರಿತಂತೆ ವಿಡಿಯೋ ದೃಶ್ಯಾವಳಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಿಹಾರ ಪೊಲೀಸರು ಸಂಭ್ರಮಾಚರಣೆ ಫೈರಿಂಗ್‍ನ್ನು ನಿಷೇಧಿಸಿದ್ದರೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಗ್ರಾ: ಉತ್ತರ ಪ್ರದೇಶದ ವಕೀಲರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ 2 ದಿನಗಳ ಹಿಂದೆ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸಹೋದ್ಯೋಗಿ ವಕೀಲನೇ ಧರ್ವೆಶ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಆದೇ ಪಿಸ್ತೂಲಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಲೆ ಮಾಡಿದ ವಕೀಲನನ್ನು ಮನೀಶ್ ಶರ್ಮಾ ಎಂದು ಗುರುತಿಸಲಾಗಿದ್ದು ಕೊಲೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮನೀಶ್ ಶರ್ಮಾನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಗಂಭೀರವಾಗಿದೆ.
2 ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಧರ್ವೇಶ್ ಯಾದವ್ ಅವರು ಅಧ್ಯಕ್ಷೆಯಾಗಿ ಆಯ್ಕೆ ಆಗುವ ಮೂಲಕ ಉತ್ತರ ಪ್ರದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದರು. ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರಿಗೆ ಇಂದು ಆಗ್ರಾ ನ್ಯಾಯಾಲಯದ ಅವರಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮಕ್ಕೆ ಧರ್ವೇಶ್ ಯಾದವ್ ಅವರು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮಧ್ಯದಲ್ಲಿ ಎದ್ದುನಿಂತ ಮನೀಶ್ ಶರ್ಮಾ 3 ಸುತ್ತಿನ ಗುಂಡಿನ ದಾಳಿ ಮಾಡಿದ್ದಾನೆ. ನಂತರ ಅವನು ಕೂಡ ಗುಂಡು ಹಾರಿಸಿಕೊಂಡಿದ್ದಾನೆ.
ಕೂಡಲೇ ಧರ್ವೆಶ್ ಅವರನ್ನು ಹತ್ತಿರದ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಧರ್ವೇಶ್ ಯಾದವ್ ಅವರು ಸಾವನ್ನಪ್ಪಿದ್ದಾರೆ.
Bar Council of India condemns the murder of President of UP Bar Council Darvesh Yadav, demands security for its members, and minimum compensation of Rs 50 lakh from UP govt to her family. https://t.co/44z4ER2Gg2
ಮನೀಶ್ ಶರ್ಮಾ ಅನುಮತಿ ಪಡೆದ ರಿವಾಲ್ವರ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾರ್ ಕೌನ್ಸಿಲ್ ಕೃತ್ಯವನ್ನು ಖಂಡಿಸಿದ್ದು 50 ಲಕ್ಷ ರೂ. ಹಣವನ್ನು ಉತ್ತರ ಪ್ರದೇಶ ಸರ್ಕಾರ ಧರ್ವೇಶ್ ಯಾದವ್ ಅವರ ಕುಟುಂಬಕ್ಕೆ ನೀಡಬೇಕೆಂದು ಆಗ್ರಹಿಸಿದೆ.
ನವದೆಹಲಿ: ವಿವಾಹ ಸಮಾರಂಭವೊಂದರಲ್ಲಿ ಡಿಜೆ ಮ್ಯೂಸಿಕ್ ಗಲಾಟೆಯಿಂದಾಗಿ ಪತಿಯ ಜೀವವನ್ನು ಉಳಿಸಲು ಹೋಗಿ ಗುಂಡೇಟು ತಿಂದು ಪತ್ನಿ ಮೃತಪಟ್ಟಿರುವ ಘಟನೆ ದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ನಡೆದಿದೆ.
ಸುನಿತಾ ರಾಣಿ ಮೃತ ದುರ್ದೈವಿ. ಈ ಘಟನೆ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಸಂದೀಪ್ ಮತ್ತು ಆತನ ಸಹೋದರ ಆಕಾಶ್ ಇಬ್ಬರು ಆರೋಪಿಗಳನ್ನು ಶನಿವಾರ ಚಂಡೀಗಢದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸುನಿತಾ ರಾಣಿ ಮತ್ತು ಸಾಜನ್ ರಹಿ ಮದುವೆಯಾಗಿದ್ದು, ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಸುನಿತಾ ಸಂಬಂಧಿಯ ಮದುವೆಗೆಂದು ಮಂಗೊಲ್ಪುರಿಯಲ್ಲಿ ರಾಮಲೀಲಾ ಮೈದಾನಕ್ಕೆ ಹೋಗಿದ್ದರು. ಮದುವೆ ಸಂದರ್ಭದಲ್ಲಿ ಸುನಿತಾ ಪತಿ ಸಾಜನ್ ಅವರು ಡಿಜೆ ಸಂದೀಪ್ ಜೊತೆ ಮ್ಯೂಸಿಕ್‍ಗೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಸಂದೀಪ್ ಮತ್ತು ಸಹೋದರ ಆಕಾಶ್ ಇಬ್ಬರು ಸುನಿತಾ ಮತ್ತು ಸಾಜನ್ ಊಟ ಮಾಡುತ್ತಿದ್ದ ಟೇಬಲ್ ಬಳಿ ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮಧ್ಯೆ ಒಬ್ಬ ಗನ್ ತೆಗೆದುಕೊಂಡು ಅದನ್ನು ಸಾಜನ್‍ಗೆ ಗುರಿಯಿಟ್ಟಿದ್ದಾನೆ. ಅಷ್ಟರಲ್ಲಿ ಸುನಿತಾ ಮಧ್ಯಪ್ರವೇಶಿಸಿದ್ದಾಳೆ. ಇದರಿಂದಾಗಿ ಪತಿಗೆ ಬೀಳುವ ಗುಂಡು ಸುನಿತಾಗೆ ಬಿದ್ದಿದೆ ಎಂದು ಸುನೀತಾ ಸಹೋದರ ವಿಷ್ಣು ಕುಮಾರ್ ಹೇಳಿದ್ದಾರೆ.
ತಕ್ಷಣ ಸುನಿತಾರನ್ನು ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುನಿತಾ ಮೃತಪಟ್ಟಿದ್ದಾರೆ. ದಂಪತಿ ಶಾಹದಾರಾ ನಿವಾಸಿಗಳಾಗಿದ್ದು, ಮೃತ ಸುನಿತಾ ಗೃಹಿಣಿಯಾಗಿದ್ದಾರೆ. ಸಾಜನ್ ಆಸ್ತಿಯ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಸೆಜು ಪಿ ಕರುವಿಲ್ಲಾ ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನೇಕ ಬಾರಿ ಅವರನ್ನು ಬಂಧಿಸಲು ಹೋದಾಗ ಪರಾರಿಯಾಗುತ್ತಿದ್ದರು. ಅವರಿಗಾಗಿ ತಂಡಗಳನ್ನು ಕೂಡ ರಚಿಸಲಾಗಿತ್ತು. ಈಗ ಚಂಡೀಗಢದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಾಸನ: ಮದ್ಯಪಾನ ಮಾಡಿದ ಅಪ್ಪನಿಂದಲೇ ಮಗನಿಗೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಸುಲಗಳಲೆ ಗ್ರಾಮದಲ್ಲಿ ನಡೆದಿದೆ.
ಮಗ ಉಮೇಶ್ ಮೃತ ದುರ್ದೈವಿ. ಆರೋಪಿ ಅಪ್ಪ ಬಸಪ್ಪಗೌಡ ಕಾಫಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಉಮೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಗುಂಡು ಮಗನ ಎದೆ ಸೀಳಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಇಂದು ಬೆಳಗ್ಗೆ ಮೃತ ಉಮೇಶ್ ಮನೆ ಮುಂದಿನ ಆವರಣದಲ್ಲಿ ಒಣಗಿಸುತ್ತಿದ್ದ ಕಾಫಿಯನ್ನು ಚೀಲಕ್ಕೆ ಕೆಲಸಗಾರರ ಸಹಾಯದಿಂದ ತುಂಬುತ್ತಿದ್ದನು. ಈ ವೇಳೆ ಕುಡಿದು ಬಂದಿದ್ದ ಅಪ್ಪ ಕಾಫಿ ಮಾರಾಟಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೋಪಗೊಂಡ ಆರೋಪಿ ಬಸಪ್ಪಗೌಡ ಮನೆಯಲ್ಲಿದ್ದ ಲೈಸೆನ್ಸ್ ಗನ್ ತಂದು ಮಗನ ಎದೆಗೆ ಗುಂಡು ಹಾರಿಸಿದ್ದಾನೆ.
ಈ ಸಂದರ್ಭದಲ್ಲಿ ಮೃತ ಉಮೇಶ್ ತಾಯಿ ಕಾಫಿ ತೋಟದೊಳಗೆ ಕೆಲಸ ಮಾಡುತ್ತಿದ್ದರು. ತಕ್ಷಣ ಕೆಲಸಗಾರರು ತಾಲೂಕಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಉಮೇಶ್ ಎದೆಗೆ ಗುಂಡೇಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಬಗ್ಗೆ ತಿಳಿದು ಘಟನೆ ನಡೆದ ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತ ಘಟನೆಯ ಬಳಿಕ ಆರೋಪಿ ತಂದೆ ಬಸಪ್ಪಗೌಡ ಪರಾರಿಯಾಗಿದ್ದಾನೆ.