Tag: shorts

  • ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಹಿಂದಿನ ಕಾಲದಿಂದಲೂ ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅಜ್ಜಂದಿರು ಪಟಾಪಟಿ ಚಡ್ಡಿ ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಪುರುಷರಿಗೆಂದೇ ಕಲರ್‌ಫುಲ್, ವೆಸ್ಟ್ರನ್, ಸ್ಟೈಲಿಷ್, ವೆರೈಟಿ ಡಿಸೈನರ್ ಚಡ್ಡಿಗಳು ಮಾರುಕಟ್ಟೆಗೆ ಬಂದಿದೆ. ಅಲ್ಲದೇ ಇವುಗಳಿಗೆ ಹೆಚ್ಚಾಗಿ ಬೇಡಿಕೆ ಇದೆ. ಈ ಮಧ್ಯೆ ಆನ್‍ಲೈನ್‍ನಲ್ಲಿ ಪಟ್ಟಾಪಟ್ಟಿ ಚಡ್ಡಿ ಬೆಲೆ ಸಖತ್ ಸದ್ದು ಮಾಡುತ್ತಿದೆ.

    ಹೌದು, ಒಂದು ಸ್ಮಾರ್ಟ್ ಫೋನ್‍ನಷ್ಟೇ ದುಬಾರಿ ಬೆಲೆ ಇರುವ ಪಟ್ಟಾಪಟ್ಟಿ ಚಡ್ಡಿಯನ್ನು ಆನ್‍ಲೈನ್‍ನಲ್ಲಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಒಂದು ಪಟಾಪಟಿ ಚಡ್ಡಿಯ ಬೆಲೆ 200-300 ರೂಪಾಯಿಯಷ್ಟಿರುತ್ತದೆ. ಆದರೆ ಆನ್‍ಲೈನ್‍ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಈ ವಿಚಾರ ಇದೀಗ ಭಾರೀ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!

    ಪಟ್ಟಾಪಟ್ಟಿ ಚಡ್ಡಿ ಬೆಲೆಯ ಸ್ಕ್ರೀನ್‍ಶಾಟ್ ಅನ್ನು ಅರ್ಷದ್ ವಹೀದ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ. ಫೋಟೋದಲ್ಲಿ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳಿದ್ದು, ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೇ ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ರ್ ನೊಂದಿಗೂ ಲಭ್ಯವಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಖತ್ ಟ್ರೋಲ್ ಆಗುತ್ತಿದೆ. ಅನೇಕ ಮಂದಿ ಇದಕ್ಕೆ 15 ಸಾವಿರ ರೂಪಾಯಿ ಕೊಟ್ಟು ಖರೀದಿಸುವುದು ಹುಚ್ಚುತನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    Live Tv
    [brid partner=56869869 player=32851 video=960834 autoplay=true]

  • ಮದುವೆ ವೇಳೆ ವಧು ಪಕ್ಕ ಶಾರ್ಟ್ಸ್ ಧರಿಸಿ ಕುಳಿತ ವರ

    ಮದುವೆ ವೇಳೆ ವಧು ಪಕ್ಕ ಶಾರ್ಟ್ಸ್ ಧರಿಸಿ ಕುಳಿತ ವರ

    ಜಕಾರ್ತಾ: ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುದು ಬಹಳ ಮುಖ್ಯ. ಎಲ್ಲರೂ ಅವರ ಮದುವೆಯ ವಿಶೇಷ ದಿನದಂದು ಬಹಳ ಸುಂದರವಾಗಿ ಕಾಣಿಸಲು ಇಷ್ಟಪಡುತ್ತಾರೆ ಮತ್ತು ತಾವು ಧರಿಸುವ ಬಟ್ಟೆ ಎಲ್ಲರಿಗಿಂತಲೂ ಕಂಗೋಳಿಸಬೇಕೆಂದು ಇಚ್ಛಿಸುತ್ತಾರೆ.

    ಅಲ್ಲದೆ ಮದುವೆಯ ದಿನ ಆಪ್ತರು, ಕುಟುಂಬಸ್ಥರು ಮತ್ತು ದೂರದ ಸಂಬಂಧಿಗಳು ಎಲ್ಲರ ಗಮನವನ್ನು ವಧುವರರು ತಮ್ಮ ಡ್ರೆಸ್ ಮೂಲಕವೇ ಸೆಳೆಯುತ್ತಾರೆ. ಆದರೆ ಇಂಡೋನೇಷ್ಯಾದ ನವ ದಂಪತಿಯೊಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಈ ಫೋಟೋದಲ್ಲಿ ವರ ಶಾರ್ಟ್ಸ್ ಹೊರತುಪಡಿಸಿ ಬೇರೆ ಯಾವುದನ್ನು ಧರಿಸದೇ ವಧುವಿನ ಪಕ್ಕ ಕುಳಿತುಕೊಂಡಿದ್ದಾನೆ.

    ಹೌದು ಮದುವೆಯೊಂದರಲ್ಲಿ ವಧು ಸಂಪ್ರಾದಾಯಿಕ ಉಡುಗೆ ತೊಟ್ಟು ಕುಳಿತುಕೊಂಡರೆ, ವರ ಮೊಣಕಾಲು ಪ್ಲಾಸ್ಟರ್ ಅಂಟಿಸಿಕೊಂಡು, ತೋಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಕುಳಿತುಕೊಂಡಿರುತ್ತಾನೆ. ಈ ಫೋಟೋವನ್ನು ದಂಪತಿ ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವಧು, ನನ್ನ ಪತಿ ಪೆಟ್ರೋಲ್ ತರಲು ಹೋಗಿದ್ದು ದಾರಿಯಲ್ಲಿ ಬರುವಾಗ ಇದ್ದಕ್ಕಿದಂತೆ ಪ್ರಜ್ಞೆ ತಪ್ಪಿ ಮೋಟಾರ್ ಸೈಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಹಲವು ಕಡೆ ಗಾಯಗೊಂಡಿದ್ದಾರೆ. ಹೀಗಾಗಿ ಮದುವೆಯ ಸಮಯದಲ್ಲಿ ಅವರು ಉಡುಪನ್ನು ಧರಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ 3000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದ್ದು, ನೂರಾರು ಕಮೆಂಟ್‍ಗಳ ಸುರಿ ಮಳೆ ಹರಿದುಬರುತ್ತಿದೆ.

  • ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    – ವೀಡಿಯೋ ವೈರಲ್, ನಟಿ ವಿರುದ್ಧ ನೆಟ್ಟಿಗರ ಕಿಡಿ

    ಮುಂಬೈ: ನಟಿ, ಗಾಯಕಿ ಜಸ್ಲೀನ್ ಮಾಥಾರೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ.

    ವಧು ರೀತಿಯಲ್ಲಿ ಡ್ರೆಸ್ ಮಾಡಿಕೊಂಡ ನಟಿ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಪೋಸ್ ನೀಡಿರುವ ವೀಡಿಯೋವನ್ನ ಜಸ್ಲೀನ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನಂತೆ ರೆಡ್ ದುಪ್ಪಟಾ, ರೆಡ್ ಟಾಪ್, ಬಿಂದಿ, ಆಭರಣ ಧರಿಸಿರುವ ಜಸ್ಲೀನ್, ಲೆಹೆಂಗಾ ಬದಲು ತಿಳಿ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಅತ್ತೆಯ ಮನೆಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರಕ್ಕಾಗಿ ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ. ಹಾಗಾಗಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಹಲವರು ನಟಿಯ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಬಿಗ್‍ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

  • ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ತೆರೆಳಿದ್ದ ಅಜಯ್ ದೇವಗನ್ ಟ್ರೋಲ್

    ಮುಂಬೈ: ಶಾರ್ಟ್ಸ್ ಧರಸಿ ದೇಗುಲಕ್ಕೆ ತೆರಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ಕಾಲೆಳೆದು ಮಜಾ ಪಡೆಯುತ್ತಿದ್ದಾರೆ.

    ಹೌದು. ದೇವರ ದರ್ಶಕ್ಕೆ ದೇವಾಲಯಗಳಿಗೆ ತೆರೆಳುವಾಗ ಸಾಮಾನ್ಯವಾಗಿ ಸಾಪ್ರದಾಯಿಕವಾಗಿ ಹೋಗುತ್ತಾರೆ. ಆದರೆ ನಟ ಅಜಯ್ ಅವರು ಶಾರ್ಟ್ಸ್​​ನಲ್ಲಿ ದೇಗುಲಕ್ಕೆ ಹೋಗಿ ಟ್ರೋಲ್ ಆಗುತ್ತಿದ್ದಾರೆ. ಮಾಂಧ್ವಿಯ ಶ್ರೀ ರಂಗನಾಥ ಮಹಾದೇವ ದೇವಾಲಯಕ್ಕೆ ಅಜಯ್ ಅವರು ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರಿಸಿ ದೇವರ ದರ್ಶನ ಪಡೆದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಅವರು ಶಾರ್ಟ್ಸ್​​ ಹಾಕಿಕೊಂಡು ದೇವರ ದರ್ಶನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಅಲ್ಲದೆ ನೆಟ್ಟಿಗರಿಗೂ ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಿದಂತಾಗಿದೆ.

    ನೀಲಿ ಟೀ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್​​ ಧರಿಸಿ ಶಿವ ಲಿಂಗದ ಮುಂದೆ ಕುಳಿತು ಅಜಯ್ ಪೂಜೆ ನೆರವೇರಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಅಜಯ್ ಅವರ ಈ ನಡೆಗೆ ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಅಜಯ್ ದೇವಗನ್ ಅವರು ಯಾವುದೇ ಉಡುಪು ಧರಿಸಿ ಕುಳಿತು ಪೂಜೆ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಇದೇ ದೇವಾಲಯದಲ್ಲಿ ಜನಸಾಮಾನ್ಯರಿಗೆ ಇಂತಹ ಹಕ್ಕು ಇರುವುದಿಲ್ಲ. ಇದು ಸತ್ಯದ ಸಂಗತಿಯಾಗಿದ್ದು, ನೋವುಂಟು ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಅಜಯ್ ಅವರು ಶಾರ್ಟ್ಸ್​​ ಧರಿಸಿ ಮಹದೇವನ ಪೂಜೆ ನೆರವೇರಿಸಿರುವುದರಿಂದ ಪಾಪ ಬರುತ್ತದೆ. ಕನಿಷ್ಠ ಪಕ್ಷವಾದರೂ ಅವರು ದೇವರಿಗೆ ಗೌರವ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.

  • ಚಡ್ಡಿ ಹಾಕೊಂಡು ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ವ್ಯಕ್ತಿಯನ್ನ ಠಾಣೆಯಿಂದ ಹೊರಕಳಿಸಿದ ಪೊಲೀಸರು

    ಚಡ್ಡಿ ಹಾಕೊಂಡು ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ವ್ಯಕ್ತಿಯನ್ನ ಠಾಣೆಯಿಂದ ಹೊರಕಳಿಸಿದ ಪೊಲೀಸರು

    ಥಾಣೆ: ಶನಿವಾರ ಸಂಜೆ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿಯಾದ ಮಂಗೇಶ್ ದೇಸಲೆ ಪಾಸ್‍ಪೋರ್ಟ್ ವೆರಿಫಿಕೇಷನ್‍ಗಾಗಿ ಇಲ್ಲಿನ ಖಡಕ್‍ಪಾದಾ ಪೊಲೀಸ್ ಠಾಣೆಗೆ ಹೋಗಿದ್ರು. ಆದ್ರೆ ಅವರನ್ನ ಪೊಲೀಸರು ಠಾಣೆಯಿಂದ ಹೊರಗಟ್ಟಿದ್ರು ಎಂದು ಹೇಳಿದ್ದಾರೆ. ಅವರು ಮಾಡಿದ ಅಪರಾಧವಾದ್ರೂ ಏನು ಅಂದ್ರಾ? ಚಡ್ಡಿ ಹಾಕೊಂಡು ಠಾಣೆಗೆ ಹೋಗಿದ್ದು.

    ಈ ಬಗ್ಗೆ ಮಂಗೇಶ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ತಾನು ಹಾಕಿದ ಬಟ್ಟೆಗೆ ಪೊಲೀಸರು ಅವಮಾನ ಮಾಡಿದ್ರು ಎಂದಿದ್ದಾರೆ. ನಾನು ಚಡ್ಡಿ ಹಾಕಿದ್ದೆ. ಅದಕ್ಕೆ ಅವರು ನನ್ನ ಮೇಲೆ ಕೂಗಾಡಲು ಶುರು ಮಾಡಿದ್ರು. ಪೊಲೀಸ್ ಠಾಣೆಗೆ ಬರಲು ಇಂತದ್ದೇ ಬಟ್ಟೆ ತೊಡಬೇಕೆಂಬ ನಿಯಮವೇನಾದ್ರೂ ಇದೆಯಾ ಎಂದು ಕೇಳಿದೆ. ಅವರು ನನಗೆ ಯಾವ ನಿಯಮವನ್ನೂ ತೋರಿಸಲಿಲ್ಲ. ಆದ್ರೆ ಇದು ಭಾರತ, ಅಮೆರಿಕ ಅಲ್ಲ ಎಂದು ಹೇಳಿದ್ರು ಅಂತ ಫೇಸ್‍ಬುಕ್‍ನಲ್ಲಿ ಮಂಗೇಶ್ ಬರೆದುಕೊಂಡಿದ್ದಾರೆ. ಇದರ ಜೊತೆ ಎರಡು ವಿಡಿಯೋಗಳನ್ನೂ ಹಾಕಿದ್ದಾರೆ.

    ಮಂಗೇಶ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಮೊದಲನೇ ವಿಡಿಯೋದಲ್ಲಿ ಪೊಲೀಸರೊಬ್ಬರು ಮಂಗೇಶ್‍ಗೆ ಸರಿಯಾದ ಉಡುಪು ಧರಿಸಿ. ಠಾಣೆಗೆ ಮಹಿಳೆಯರು, ಮಕ್ಕಳು ಕೂಡ ಬರುತ್ತಾರೆ ಎಂದು ಹೇಳಿದ್ದಾರೆ.

    ತನ್ನನ್ನು ಪೊಲೀಸ್ ಠಾಣೆಯಿಂದ ಬಲವಂತವಾಗಿ ಹೊರಹಾಕಲಾಯ್ತು. ಕೇಸ್ ಹಾಕ್ತೀವೆಂದು ಬೆದರಿಸಿದ್ರು ಅಂತ ಮಂಗೇಶ್ ಹೇಳಿದ್ದಾರೆ.

    ವಿಡಿಯೋ ಬಗ್ಗೆ ವಿಚಾರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಬಾಳಾ ಸಹೇಬ್ ಕದಮ್, ಪೊಲೀಸ್ ಠಾಣೆಗೆ ಬರುವಾಗ ಸರಿಯಾದ ಬಟ್ಟೆ ಹಾಕಿಕೊಂಡು ಬರಲು ನಮ್ಮ ಅಧಿಕಾರಿಗಳು ಅವರಿಗೆ ಹೇಳಿದ್ದಾರಷ್ಟೆ. ಠಾಣೆಗೆ ಮಹಿಳೆಯರೂ ಬರುತ್ತಾರೆ. ಚಡ್ಡಿ ಚೆನ್ನಾಗಿ ಕಾಣೋದಿಲ್ಲ. ಅವರು ಎಂಜಿನಿಯರ್, ಅವರಿಗೆ ಒಳ್ಳೆ ನಡವಳಿಕೆ ಹಾಗೂ ಪೊಲೀಸ್ ಠಾಣೆಗೆ ಬರುವಾಗ ಹೇಗಿರಬೇಕು ಅನ್ನೋದು ತಿಳಿದಿರಬೇಕು ಎಂದು ಹೇಳಿದ್ದಾರೆ.

    ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ ಮಂಗೇಶ್ ಅವರ ವಿಡಿಯೋ 1700ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಮತ್ತೊಂದು ಕಡೆ ಸಾಕಷ್ಟು ಜನ ಮಂಗೇಶ್ ಅವರು ಪೊಲೀಸ್ ಠಾಣೆಗೆ ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಅವರನ್ನ ಟೀಕಿಸಿದ್ದಾರೆ.

    https://www.facebook.com/mangesh.desale/videos/pcb.10213002560631602/10213002511350370/?type=3&theater

    https://www.facebook.com/mangesh.desale/videos/pcb.10213002560631602/10213002486989761/?type=3&theater

  • ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಸಾಮಾನ್ಯವಾಗಿ ಮದುವೆ ಅಂತ ಅಂದಾಗ ಮದುಮಗಳು ದುಬಾರಿ ವೆಚ್ಚದ ಸಾರಿ ಅಥವಾ ಲೆಹೆಂಗಾ ಮುಂತಾದ ಬಟ್ಟೆಗಳನ್ನು ಕೊಂಡು ಹಾಕುವ ಮೂಲಕ ಮಿಂಚುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆಯ ದಿನ ಲೆಹೆಂಗಾ ಬ್ಲೌಸ್ ಹಾಕಿ ಸ್ಕರ್ಟ್ ಹಾಕೋ ಬದಲು ಶಾರ್ಟ್ಸ್ ಹಾಕುವ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ.

    ಆದ್ರೆ ಮದುವೆ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

    ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿರುವುದರಿಂದ ಇದೀಗ ಈಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದಾಳೆ.

    ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಅಪ್ಲೋಡ್ ಆದ ತಕ್ಷಣವೇ ಟಿಟ್ಟರಿಗರಲ್ಲಿ ಕೆಲವರು ಫನ್ನಿಯಾದ ಕಮೆಂಟ್ಸ್ ಗಳನ್ನು ಹಾಕಿದ್ದಾರೆ. ಕೆಲವರು ಈ ರೀತಿ ಚಡ್ಡಿ ಹಾಕಿ ಪೋಸು ಕೊಟ್ಟಿರೋದನ್ನು ಟೀಕಿಸಿದ್ದರೆ, ಇನ್ನು ಕೆಲವರು 15-20 ಕೆ.ಜಿ ತೂಕವಿರುವ ಲೆಹೆಂಗಾ ತೊಡುವ ಬದಲು ಚಡ್ಡಿ ಹಾಕುವ ಮೂಲಕ ಸಮಾಜದ ಸಂಪ್ರದಾಯದ ವಿರುದ್ಧ ಹೋಗಿರುವುದಕ್ಕೆ ಶ್ಲಾಘಿಸಿದ್ದಾರೆ.

    https://twitter.com/sagarcasm/status/869607318249287680?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/mailpp/status/869608616021467136?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/auntybharvi/status/869632068300525569?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/musical_sia/status/869525322479304706?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html