Tag: shortcircuit

  • ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 3 ಮಕ್ಕಳು ಸೇರಿ 7 ಜನ ಸಜೀವ ದಹನ

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 3 ಮಕ್ಕಳು ಸೇರಿ 7 ಜನ ಸಜೀವ ದಹನ

    – ನೆಲಮಹಡಿಯಲ್ಲಿದ್ದ ಇಬ್ಬರು ಪಾರು

    ಮುಂಬೈ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit)  ಅಂಗಡಿಗೆ ಬೆಂಕಿ ತಗುಲಿ ಒಂದೇ ಕುಟುಂಬದ 7 ಜನರು ಸಜೀವ ದಹನಗೊಂಡಿರುವ ಘಟನೆ ಮುಂಬೈನ (Mumbai) ಸಿದ್ದಾರ್ಥ ಕಾಲೋನಿಯ ಕೆಎನ್ ಗಾಯಕ್ವಾಡ್ ಮಾರ್ಗದಲ್ಲಿದ್ದ ಚೇಂಬೂರ್ ಅಂಗಡಿಯಲ್ಲಿ ನಡೆದಿದೆ.

    ಮೃತ ಏಳು ಜನರ ಪೈಕಿ ಮೂವರು ಮಕ್ಕಳಿದ್ದು, ಒಂದೇ ಕುಟುಂಬದವರು. ಮೃತರನ್ನು ಪ್ರೆಸಿ ಗುಪ್ತಾ (6), ಮಂಜು ಗುಪ್ತಾ (30), ಅನಿತಾ ಧರಮದೇವ್ ಗುಪ್ತಾ (39), ಪ್ರೇಮ ಚೇಡಿರಾಮ್ ಗುಪ್ತಾ (30), ನರೇಂದ್ರ ಗುಪ್ತಾ (10), ವಿಧಿ ಚೇಡಿರಾಮ್ ಗುಪ್ತಾ (15), ಗೀತಾದೇವಿ ಧರಮ್‌ದೇವ್ ಗುಪ್ತಾ (60) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:

    ಭಾನುವಾರ ನಸುಕಿನ ಜಾವ 5.20ರ ಸುಮಾರಿಗೆ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 7 ಜನರು ಸಜೀವ ದಹನಗೊಂಡಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು (BMMC) ತಿಳಿಸಿದ್ದಾರೆ.

    ವಲಯ ಡಿಸಿಪಿ ಹೇಮರಾಜ್ ಸಿಂಗ್ ರಜಪೂತ್ (DCP Hemraj Singh Rajaput) ಮಾತನಾಡಿ, ಬೆಳಿಗ್ಗೆ 6 ರ ಸುಮಾರಿಗೆ ಕರೆಯೊಂದು ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ ಕಟ್ಟಡದ ಎರಡು ಮಹಡಿಯಲ್ಲಿ ವಾಸಿಸುತ್ತಿದ್ದ ಕುಟುಂಬದ 7 ಜನರು ಸಾವನ್ನಪ್ಪಿದ್ದು, ನೆಲಮಹಡಿಯಲ್ಲಿದ್ದ 2 ಪಾರಾಗಿದ್ದಾರೆ. ಸದ್ಯ ನಮ್ಮ ತಂಡ ಹಾಗೂ ಅಗ್ನಿಶಾಮಕ ದಳವು (Fire Brigade) ತನಿಖೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿದರು.

    ಅಂಗಡಿಯ ಬಳಿ ಅಳವಡಿಸಿದ್ದ ವಿದ್ಯುತ್ ವೈರ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. 3 ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೋಲಿಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಪಕ್ಕದ ಮನೆಗೆ ಬೆಂಕಿ ಆವರಿಸಿಕೊಂಡಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:

  • 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    ರಾಮನಗರ: ಪ್ರವಾಸಿಗರನ್ನು ಕರೆತಂದಿದ್ದ ಬಸ್ಸೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿಗೆ ಆಹುತಿಯಾಗಿರುವ ಘಟನೆ ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟ್ ಬಳಿ ಖಾಸಗಿ ಒಡೆತನದ ಎಸ್.ಆರ್.ಎಸ್ ಮಾಲೀಕತ್ವದ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.

    ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಬಳಿಕ ಬಸ್ಸಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿದ್ದು ಕ್ಷಣಾರ್ಧಲ್ಲಿಯೆ ಬಸ್ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳದ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟಿಗೆ ಪ್ರವಾಸಿಗರು ಬಂದಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿಗೆ ಬೆಂಕಿ ಆವರಿಸಿ ಹೊತ್ತಿ ಉರಿಯುತ್ತಿರುವ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಪ್ರಕರಣ – ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ

    ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ ಪ್ರಕರಣ – ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ

    ಬೆಂಗಳೂರು: ನಗರದ ಬಾರ್ ಅಂಡ್ ರೆಸ್ಟೋರೆಂಟ್‍ವೊಂದರಲ್ಲಿ ಇಂದು ಬೆಳಗ್ಗಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಕೈಲಾಶ್ ಬಾರ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂಥ ಘಟನೆ ನಡೆಯಬಾರದು. ಇದರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಬಾಗಿಲ ಹತ್ತಿರ ಯುಪಿಎಸ್ ಇದೆ. ಅದರಿಂದಲೇ ಬೆಂಕಿ ಬಂದಿರೋ ಸಾಧ್ಯತೆಯಿದೆ. ತನಿಖೆ ನಡೆದ ನಂತರ ಏನು ಎಂಬುದು ಗೊತ್ತಾಗುತ್ತೆ ಅಂತ ಹೇಳಿದ್ದಾರೆ.

    ಇನ್ನು ಘಟನಾ ಸ್ಥಳಕ್ಕೆ ಗೃಹಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರ್‍ನಲ್ಲಿ ಕೆಲಸ ಮಾಡುವಾಗ ಸುರಕ್ಷಾ ಕ್ರಮ ಅಳವಡಿಕೆ ಕಡ್ಡಾಯ. ಅಬಕಾರಿ ಇಲಾಖೆ, ಪಾಲಿಕೆ ಇದನ್ನೆಲ್ಲಾ ಗಮನಿಸುತ್ತದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 15 ದಿನಗಳೊಳಗಾಗಿ ಉತ್ತರ ನೀಡುವಂತೆ ನೋಟೀಸ್ ನೀಡಲಾಗಿದೆ.

    ಎಫ್‍ಎಸ್‍ಎಲ್, ವಿದ್ಯುತ್ ಪರಿವೀಕ್ಷಣಾ ತಂಡ ಮತ್ತು ಅಗ್ನಿಶಾಮಕ ಅಧಿಕಾರಿಗಳಿಂದ ಕೈಲಾಶ್ ಬಾರ್ ಪರಿಶೀಲನೆ ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಹುಡುಕಾಟ ನಡೆಸಲಾಗಿದೆ. ಇನ್ನು ಸುಟ್ಟು ಕರಕಲಾದ ಐವರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಮೃತ ಯುವಕರ ಆಕ್ರಂದನ ಮುಗಿಲುಮುಟ್ಟಿದೆ.

    ಏನಿದು ಘಟನೆ?: ಮುಂಬೈ ರೀತಿಯಲ್ಲೇ ನಗರದ ಕೈಲಾಶ್ ಬಾರ್ ನಲ್ಲಿ ಇಂದು ಬೆಳಗಿನ ಜಾವ ಸುಮಾರು 2.30ಕ್ಕೆ ನಡೆದ ದುರಂತದಲ್ಲಿ ಕೆಲಸದ ಬಳಿಕ ನಿದ್ರೆ ಜಾರಿದ್ದ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು. ಮೃತರನ್ನು ತುಮಕೂರು ಮೂಲದ ಸ್ವಾಮಿ(23), ಪ್ರಸಾದ್(20), ಮಹೇಶ್ (35), ಹಾಸನದ ಮಂಜುನಾಥ್ ( 45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ.

    ಕೆಲಸದ ಬಳಿಕ ಅಲ್ಲಿಯ ನೌಕರರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಸಜೀವ ದಹನಗೊಂಡಿದ್ದಾರೆ. ಬಾರ್ ಕಟ್ಟಡ ಸುಮಾರು 20 ರಿಂದ 30 ವರ್ಷಗಳ ಹಳೆಯದು ಎಂದು ತಿಳಿದು ಬಂದಿದೆ. ಹಾಗಾಗಿ ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರ ಇಲ್ಲದ ಕಾರಣ ಐವರು ಸಜೀವ ದಹನವಾಗಿದ್ದಾರೆ. ಮೊದಲಿಗೆ ಕಟ್ಟಡದ ಸಾಕಷ್ಟು ವೈರ್‍ಗಳಿರುವ ಜಂಕ್ಷನ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

    https://www.youtube.com/watch?v=q1xbVb4mm4I

  • ಭಾರೀ ಅಗ್ನಿ ಅವಘಡದಿಂದ ಬೆಂಗ್ಳೂರಿನ 4 ಅಂತಸ್ತಿನ ಗಾರ್ಮೆಂಟ್ಸ್ ಧಗಧಗ

    ಭಾರೀ ಅಗ್ನಿ ಅವಘಡದಿಂದ ಬೆಂಗ್ಳೂರಿನ 4 ಅಂತಸ್ತಿನ ಗಾರ್ಮೆಂಟ್ಸ್ ಧಗಧಗ

    ಬೆಂಗಳೂರು: ನಗರದ ಕೋಣನಕುಂಟೆ ಕ್ರಾಸ್ ಬಳಿಯ ಗಾರ್ಮೆಂಟ್ಸ್ ನಲ್ಲಿ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಮೆಟ್ರೋ ಹಿಂಭಾಗದಲ್ಲಿರುವ ಲೊವೆಬಲ್ ಲಾಂಜರಿ ಗಾರ್ಮೆಂಟ್ಸ್ ನಲ್ಲಿ ಶಾರ್ಟ್ ಸರ್ಕ್ಯೂ ಟ್‍ನಿಂದ ಬೆಂಕಿಹೊತ್ತಿಕೊಂಡು ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತ್ತು.

    ಸುಮಾರು 300ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿರುವ ಈ ಗಾರ್ಮೆಂಟ್ಸ್ ನಲ್ಲಿ ಬೆಂಕಿಹೊತ್ತಿಕೊಂಡಾಗ ಅದೃಷ್ಟವಶಾತ್ ಯಾರು ಇಲ್ಲದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಆದ್ರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

    ಸ್ಥಳಕ್ಕೆ ಧಾವಿಸಿದ 14ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಅಶೋಕ್ ರೆಡ್ಡಿ ಎಂಬವ್ರಿಗೆ ಈ ಗಾರ್ಮೆಂಟ್ಸ್ ಸೇರಿದೆ ಅಂತ ತಿಳಿದುಬಂದಿದೆ.

    https://www.youtube.com/watch?v=DJtNliKAIns&feature=youtu.be