Tag: shopping mall

  • ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು

    ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ – 50 ಮಂದಿ ಸಾವು

    ಬಾಗ್ದಾದ್: ಪೂರ್ವ ಇರಾಕ್‌ನ (Iraq) ಕುಟ್ ನಗರದ (Kut City) ಶಾಪಿಂಗ್ ಮಾಲ್‌ವೊಂದರಲ್ಲಿ (Shopping Mall) ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಲ್‌ನಲ್ಲಿ ಬೆಂಕಿ (Fire Accident) ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಸಿಟ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ. ಇದನ್ನೂ ಓದಿ: ನೆಟ್‌ವರ್ಕ್ ಸಮಸ್ಯೆ ನಿವಾರಣೆ – ಇನ್ಮುಂದೆ ಮೆಟ್ರೋ ಮಾರ್ಗಗಳಲ್ಲಿ ವೈಫೈ

    ಪ್ರಾಂತ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸುವಂತೆ ಘೋಷಿಸಲಾಗಿದೆ. ಅಲ್ಲದೇ ಕಟ್ಟಡ ಮತ್ತು ಮಾಲ್ ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಗರ್ವನರ್ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ಮಂದಿಗೆ ನೋಟಿಸ್‌: ವಾಣಿಜ್ಯ ತೆರಿಗೆ ಇಲಾಖೆ

  • ಸೂಪರ್ ಮಾರ್ಟ್‌ನಲ್ಲಿ ಖರೀದಿಸಿ, ಬಳಿಕ ಬಿಲ್ ಕಟ್ಟು ಅಂದ್ರೆ ಚಾಕು ತೋರಿಸಿ ಎಸ್ಕೇಪ್

    ಸೂಪರ್ ಮಾರ್ಟ್‌ನಲ್ಲಿ ಖರೀದಿಸಿ, ಬಳಿಕ ಬಿಲ್ ಕಟ್ಟು ಅಂದ್ರೆ ಚಾಕು ತೋರಿಸಿ ಎಸ್ಕೇಪ್

    ಬೆಂಗಳೂರು: ರೌಡಿಶೀಟರ್‌ನೋರ್ವ ಸೂಪರ್ ಮಾರ್ಟ್‌ಗೆ ಬಂದು ಬೇಕಾದ್ದನ್ನು ಖರೀದಿಸಿ, ಬಳಿಕ ಬಿಲ್ ಕಟ್ಟು ಎಂದಿದ್ದಕ್ಕೆ ಚಾಕು ತೋರಿಸಿ ಎಸ್ಕೇಪ್ ಆಗಿರುವ ಘಟನೆ ರಿಚ್ಮಂಡ್ ಟೌನ್ ಬಳಿ ನಡೆದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಾರಾಕಾಸ್ತ್ರ ಹಿಡಿದು ದರ್ಪ ತೋರಿದ ರೌಡಿಶೀಟರ್ ಇಮ್ರಾನ್ ಅಲಿಯಾಸ್ ಗೋಲಿ ಇಮ್ರಾನ್ ಬಂಧಿತ ಆರೋಪಿ.ಇದನ್ನೂ ಓದಿ: ನವದೆಹಲಿಯಲ್ಲಿ MSTC ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಹೆಚ್‌ಡಿ ಕುಮಾರಸ್ವಾಮಿ

    ಕಳೆದ ಶನಿವಾರ ರಿಚ್ಮಂಡ್ ಟೌನ್ ಬಳಿಯ ಶಾಪಿಂಗ್ ಮಾಲ್ ಒಂದಕ್ಕೆ ಹೋಗಿದ್ದಾನೆ. ಸಭ್ಯಸ್ಥನಂತೆ ಒಳಗೆ ಹೋಗಿ ಬೇಕಾದ ಸಾಮಾನುಗಳನ್ನು ಬ್ಯಾಗ್‌ಗೆ ತುಂಬಿಕೊAಡಿದ್ದಾನೆ. ಬಳಿಕ ಕ್ಯಾಶ್ ಕೌಂಟರ್ ಬಳಿಕ ಹಣ ಕೊಡದೇ ಹಾಗೇ ಹೊರಹೋಗಲು ಮುಂದಾಗಿದ್ದಾನೆ. ಆಗ ಅಲ್ಲಿನ ಸಿಬ್ಬಂದಿ ಆತನನ್ನು ತಡೆದು ಹಣ ಕೊಡುವಂತೆ ತಿಳಿಸಿದ್ದಾರೆ. ಈ ವೇಳೆ ತನ್ನ ಬಳಿಯಿದ್ದ ಚಾಕು ತೆಗದು ಹಲ್ಲೆಗೆ ಮುಂದಾಗಿದ್ದು, ಪ್ರಾಣ ಉಳಿದರೆ ಸಾಕು ಎಂದು ಮಾಲೀಕರು ಮುಂದಾಗಿದ್ದಾರೆ.

    ಆರೋಪಿ ಅಲ್ಲಿಂದ ಹೋದ ಬಳಿಕ ಮಾಲೀಕರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಎರಡು ದಿನದ ಬಳಿಕ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಅಶೋಕ ನಗರ ಠಾಣೆಯ ಬಿ ಪಟ್ಟಿ ರೌಡಿಶೀಟರ್ ಆಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಶಾಪಿಂಗ್‌ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!

  • ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

    ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

    ಮಾಸ್ಕೋ: ರಾಷ್ಯಾದ ರಾಜಧಾನಿ ಪಶ್ಚಿಮ ಮಾಸ್ಕೋ (Western Moscow) ನಗರದಲ್ಲಿರುವ ಶಾಪಿಂಗ್ ಮಾಲ್  (Shopping Mall)  ಒಂದರಲ್ಲಿ ಬಿಸಿನೀರಿನ ಪೈಪ್ (Hot Water Pipe Burst) ಒಡೆದು ನಾಲ್ವರು ಸಾವನ್ನಪ್ಪಿ , 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಈ ಸಂಬಂಧ ಅಲ್ಲಿನ ಮೇಯರ್ ಮೇಯರ್ ಸೆರ್ಗೆಯ್ ಸೊಬಯಾನಿನ್ ಪ್ರತಿಕ್ರಿಯಿಸಿ, ಗಾಯಗೊಂಡವರಲ್ಲಿ ಕೆಲವರು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ತುರ್ತು ಸೇವೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸ್ಥಳದಲ್ಲಿ ಯಾವುದೇ ಅಮೋನಿಯಾ ಸೋರಿಕೆಯಾಗಿಲ್ಲ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಅವೈಡ್ ಮಾಡ್ತಿದ್ದ ಲವ್ವರ್ ಮನೆಗೆ ಹೋಗಿ ಗಲಾಟೆ ಮಾಡಿ ಚಾಕು ಹಾಕಿದ್ಳು!

    ವ್ರೆಮೆನಾ ಗೋಡಾ (Vremena Goda) (ದಿ ಸೀಸನ್ಸ್) ಎಂದು ಕರೆಯಲ್ಪಡುವ ಈ ಮಾಲ್ 2007 ರಲ್ಲಿ ಪ್ರಾರಂಭವಾಗಿದೆ. ಇದರಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಕಂಪಾಲಾ: ಹೊಸ ವರ್ಷ (New Year) ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವನ್ನಪ್ಪಿದ ಘಟನೆ ಉಗಾಂಡಾದ ಶಾಪಿಂಗ್ ಮಾಲ್‍ನಲ್ಲಿ (Shopping Mall) ನಡೆದಿದೆ.

    ಉಗಾಂಡಾದ (Uganda) ಕಂಪಾಲಾದ ಫ್ರೀಡಂ ಸಿಟಿ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಆಚರಣೆಗಾಗಿ ಈ ಮಾಲ್‍ಗೆ ಜನರು ಸೇರಿದ್ದರು. ಈ ವೇಳೆ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.

    ಇದರಿಂದಾಗಿ ಮಾಲ್‌ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಪರಿಣಾಮವಾಗಿ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಜನರಿಗೆ ಗಾಯಗಳಾಗಿದೆ. ಈ ಬಗ್ಗೆ ಉಗಾಂಡಾ ಪೊಲೀಸ್ ಫೋರ್ಸ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಟ್ವೀಟ್‍ನಲ್ಲಿ ಏನಿದೆ?: ಫ್ರೀಡಂ ಸಿಟಿ ಮಾಲ್ ನಮಸುಬಾದಲ್ಲಿ ಹೊಸ ವರ್ಷದಂದು ಸಂಭವಿಸಿದ ಘಟನೆಯಲ್ಲಿ ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    Live Tv
    [brid partner=56869869 player=32851 video=960834 autoplay=true]

  • ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಕೋಲ್ಕತ್ತಾ: ಕಾಲೇಜು ಯುವತಿಯೊಬ್ಬಳು (Teen) ಮಾಲ್‌ವೊಂದರಲ್ಲಿ (Mall) ಚಾಕಲೇಟ್ (Chocolate) ಕದ್ದಿರುವ ವೀಡಿಯೋ ವೈರಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ (West Bengal) ಅಲಿಪುರ್‌ದವಾರ್ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಯುವತಿ ಜೈಗಾಂವ್‌ನ ಶಾಪಿಂಗ್ ಮಾಲ್‌ನಲ್ಲಿ ಚಾಕಲೇಟ್ ಕದ್ದಿದ್ದಾಳೆ. ಯುವತಿಯ ಗಮನಕ್ಕೆ ಬಾರದಂತೆ ಅದರ ವೀಡಿಯೋವನ್ನು ಅಲ್ಲಿ ಕೆಲಸ ಮಾಡುವವರು ಚಿತ್ರೀಕರಿಸಿದ್ದಾರೆ. ಯುವತಿ ಚಾಕಲೇಟ್ ಕದ್ದ ಬಳಿಕ ಅಂಗಡಿ ಮಾಲೀಕರ ಕೈಯಲ್ಲಿ ಆಕೆ ಸಿಕ್ಕಿ ಬಿದ್ದಿದ್ದಾಳೆ. ಈ ವೇಳೆ ಆಕೆ ಕ್ಷಮೆಯನ್ನೂ ಕೇಳಿದ್ದಾಳೆ.

    ಬಳಿಕ ಆಕೆ ಚಾಕಲೇಟ್ ಕದ್ದಿರುವ ವೀಡಿಯೋವನ್ನು ಚಿತ್ರೀಕರಿಸಿರುವ ವಿಚಾರ ತಿಳಿದು, ಅದನ್ನು ಎಲ್ಲಿಯೂ ಹಂಚಿಕೊಳ್ಳದAತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಬಳಿಕ ವೀಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಈ ಬಗ್ಗೆ ಕಂಬನಿ ಹಾಕಿರುವ ಯುವತಿಯ ಕುಟುಂಬ, ಆಕೆ ತಪ್ಪು ಮಾಡಿದ್ದಾಳೆ ನಿಜ. ಆದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಅವಳು ಚಾಕಲೇಟ್‌ಗೆ ಪಾವತಿಯನ್ನೂ ಮಾಡಿದ್ದಾಳೆ. ಇದಾದ ಬಳಿಕವೂ ಆಕೆಯನ್ನು ನಿಂದಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆಕೆಯ ವೀಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆಯ ಬಳಿಕ ಆಕೆ ತುಂಬಾ ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ವೀಡಿಯೋವನ್ನು ಏಕೆ ವೈರಲ್ ಮಾಡಬೇಕಿತ್ತು? ಆತ್ಮಹತ್ಯೆ ಮಾಡಿಕೊಂಡಿರುವ ಮಗಳನ್ನು ಮತ್ತೆ ಬದುಕಿಸಲು ಸಾಧ್ಯವೆ? ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಘಟನೆಯ ಬಳಿಕ ಕ್ರೋಧಗೊಂಡ ಜನರು ಸೋಮವಾರ ಶಾಪಿಂಗ್ ಮಾಲ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ಬಗ್ಗೆ ಶಾಪಿಂಗ್ ಮಾಲ್‌ನ ಅಧಿಕಾರಿಗಳೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    Live Tv
    [brid partner=56869869 player=32851 video=960834 autoplay=true]

  • ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್ ಓಪನ್

    ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್ ಓಪನ್

    – ಮಾರ್ಗಸೂಚಿಯಲ್ಲಿ ಏನಿದೆ..?

    ಬೆಂಗಳೂರು: ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

    ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿಂದ ಶಾಪಿಂಗ್ ಮಾಲ್‍ಗಳನ್ನು ಕ್ಲೋಸ್ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದರೂ ಕೆಲ ಸಡಿಲಿಕೆಗಳನ್ನು ಮಾಡಲಾಗುತ್ತಿದೆ. ಇದರ ನಡುವೆ ಈಗ ಕಂಟೈನ್ಮೆಂಟ್ ಝೋನ್‍ಗಳಲ್ಲದೇ ಇರುವಂತಹ ಪ್ರದೇಶಗಳಲ್ಲಿನ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.

    ಈ ಹಿಂದೆಯೇ ಜೂನ್ 8ರಿಂದ ಮಾಲ್‍ಗಳನ್ನು ಓಪನ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಅಂತೆಯೇ ಸರ್ಕಾರ ಈ ತೀರ್ಮಾನ ಮಾಡಿದ್ದು, 65 ವರ್ಷದೊಳಗಿನ ವೃದ್ಧರು ಹಾಗೂ 10 ವರ್ಷದೊಳಗಿನ ಮಕ್ಕಳು ಮಾಲ್‍ಗಳಿಗೆ ಪ್ರವೇಶಿಸುವಂತಿಲ್ಲ. ಜೊತೆಗೆ ಪ್ರತಿಯೊಬ್ಬರೂ ಕೂಡ 6 ಅಡಿಯಷ್ಟು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಬೇಕು ಎಂಬ ಷರತ್ತು ವಿಧಿಸಿದೆ.

    ಮಾಲ್‍ಗಳಿಗೆ ಮಾರ್ಗಸೂಚಿ
    ಮಾಲ್ ಪ್ರವೇಶಿಸುವ ಅಂಗಡಿಗಳ ನೌಕರರು, ಮಾಲ್ ಕೆಲಸಗಾರರು, ಗ್ರಾಹಕರು, ಸಿಬ್ಬಂದಿಗೆ ಫೇಸ್ ಮಾಸ್ಕ್ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ನಿಯಮ ಪಾಲಿಸಲು ಸಿಬ್ಬಂದಿ ನೇಮಿಸಬೇಕು. ವೃದ್ಧ ನೌಕಕರು, ಗರ್ಭಿಣಿ ಕೆಲಸಗಾರು ಕೆಲಸಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಜೊತೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಪಾರ್ಕಿಂಗ್ ಮತ್ತು ಮಾಲ್ ಆವರಣದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಭಾಯಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿಲಾಗಿದೆ.

    ಪಾರ್ಕಿಂಗ್ ಸಿಬ್ಬಂದಿಗೆ ಮಾಸ್ಕ್, ಗ್ಲವ್ಸ್ ಬಳಕೆ ಕಡ್ಡಾಯವಾಗಿರಬೇಕು. ಮಾಲ್ ಒಳಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸೀಮಿತ ಜನರ ಪ್ರವೇಶಕ್ಕೆ ಆದ್ಯತೆ ನೀಡಬಹುದು. ಎಸ್ಕಲೇಟರ್‍ನಲ್ಲಿ ಒಂದು ಮೆಟ್ಟಿಲು ನಡುವೆ ಅಂತರ ಕಾಪಾಡಿಕೊಳ್ಳಬೇಕು. ಎಸಿ ಅವಶ್ಯಕ ಇದ್ದರೆ 24-30 ಡಿಗ್ರಿ ಬಳಕೆ ಮಾಡಬಹುದು, ಇಲ್ಲದಿದ್ದರೆ ನೈಸರ್ಗಿಕ ಗಾಳಿಗೆ ಒತ್ತು ನೀಡಬೇಕು. ದೊಡ್ಡ ಪ್ರಮಾಣ ಜನ ಸೇರಿ ಪಾರ್ಟಿ ಸಭೆ ಮಾಡುವಂತಿಲ್ಲ. ಮಾಲ್‍ನಲ್ಲಿ ಬಳಕೆಯಾದ ಎಲ್ಲ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.

    ಶೌಚಾಲಯಗಳನ್ನು ಆಗ್ಗಾಗ್ಗೆ ಸ್ವಚ್ಛ ಮಾಡಬೇಕು. ಫುಡ್ ಕೋರ್ಟ್ ನಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಲ್‍ನಲ್ಲಿರಿವ ರೆಸ್ಟೋರೆಂಟ್ ನಲ್ಲಿ ಶೇ.50 ಸಾರ್ಮಥ್ಯಕ್ಕೆ ಅವಕಾಶ ನೀಡಬೇಕು. ಜೊತೆಗೆ ಕೂರುವಾಗ ಅಂತರವಿರಬೇಕು. ಪ್ರತಿ ಗ್ರಾಹಕರು ಬದಲಾದ ಮೇಲೆ ಟೇಬಲ್ ಸ್ಯಾನಿಟೈಜ್ ಮಾಡಬೇಕು. ಕಿಚನ್‍ನಲ್ಲೂ ಅಂತರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಮಾಲ್‍ನಲ್ಲಿರುವ ಗೇಮಿಂಗ್ ಸೆಂಟರ್, ಮಕ್ಕಳ ಆಟದ ಪ್ರದೇಶ, ಸಿನಿಮಾ ಮಂದಿರ ಬಂದ್ ಆಗಬೇಕು. ಒಂದು ವೇಳೆ ಮಾಲ್‍ನಲ್ಲಿ ಸೋಂಕು ಪತ್ತೆಯಾದರೆ ಸೋಂಕಿತ ಓಡಾಡಿದ ಪ್ರದೇಶ ಐಸೋಲೇಟ್ ಮಾಡಬೇಕು. ಜೊತೆಗೆ ಹತ್ತಿರದ ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು ಎಂದು ಮಾರ್ಗ ಸೂಚಿಯಲ್ಲಿ ವಿವರಿಸಲಾಗಿದೆ.

  • ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡ್ತಿದ್ರೆ ಹುಷಾರ್!

    ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡ್ತಿದ್ರೆ ಹುಷಾರ್!

    ಬೆಂಗಳೂರು: ಮಾಲ್ ಗಳಲ್ಲಿ ಶಾಪಿಂಗ್ ಮುಗಿದ ಮೇಲೆ ಮೊಬೈಲ್ ನಂಬರ್, ಇ ಮೇಲ್ ಐಡಿ ಕೊಡೋದು ಸರ್ವೇ ಸಾಮಾನ್ಯ. ಹಾಗಾದರೆ ನೀವು ಈ ಸುದ್ದಿ ಓದಲೇಬೇಕು.

    ಡಿಸ್ಕೌಂಟ್ ಆಫರ್ ಇದ್ದಾಗ ಮೆಸೇಜ್ ಕಳಿಸ್ತೀವಿ ನಂಬರ್ ಕೊಟ್ಟು ಹೋಗಿ ಸರ್, ನಂಬರ್ ಕೊಡಿ ಮೇಡಮ್ ಅಂದರೆ ಇನ್ಮುಂದೆ ಹುಷಾರಾಗಿರಿ. ಯಾಕಂದ್ರೆ ನೀವು ಕೊಡುವ ನಂಬರ್ ಸೈಬರ್ ಕ್ರೈಂ ಗೆ ದಾರಿ ಕೊಟ್ಟ ಹಾಗೆ. ನೀವು ಮಾಲ್ ಗಳಲ್ಲಿ ಕೊಟ್ಟ ನಂಬರ್ ಪಡೆಯುವ ಸೈಬರ್ ವಂಚಕರು, ಡಿಫರೆಂಟ್ ರೀಸನ್ ಹೇಳಿ ನಿಮ್ಮ ಅಕೌಂಟ್ ನಲ್ಲಿರೊ ಹಣ ಲಪಟಾಯಿಸೋದು ಗ್ಯಾರೆಂಟಿ.

    ಹೀಗಾಗಿ ಇನ್ಮುಂದೆ ಶಾಪಿಂಗ್ ಮಾಲ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡ್ಕೊಂಡಿದ್ದಾರೆ. ಮಾಲ್ ಗಳಲ್ಲಿ ನಂಬರ್ ಕೇಳಿದರೆ ಕೊಡಬೇಡಿ ನಿಮ್ಮ ಡೇಟಾ ಸೇಲ್ ಆಗುತ್ತೆ. ಸೈಬರ್ ವಂಚನೆಗೆ ಬಾಗಿಲು ನೀವೇ ತೆರೆದಂತಾಗುತ್ತೆ ಎಂದು ಕಮೀಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ಯಾವುದೇ ಸ್ಥಳಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡೊ ಮುನ್ನ ಸಾವಿರ ಬಾರಿ ಯೋಚಿಸಿ.

  • ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು ಕಾರ್ಟ್‍ಗಳ ನಡುವೆ ಸಿಲುಕಿಕೊಂಡಿದ್ದ ಹಾವನ್ನು ನೋಡಿ ಸಿಬ್ಬಂದಿ ಮೊದಲು ಭಯಗೊಂಡು ಕೂಗಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಹಾವನ್ನು ನೋಡಿ ಗಾಬರಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ.

    ಈ ಬಗ್ಗೆ ಯುಎಸ್‍ನ ಈಶಾನ್ಯ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದು ಹಾವಿನ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದೆ. ಶನಿವಾರದಂದು ಇಲಾಖೆ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವರೆಗೆ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಶೇರ್ ಹಾಗೂ ಲೈಕ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಮಾತನಾಡಿ, ಸ್ಥಳದಲ್ಲಿ ತುಂಬಾ ಮಳೆ ಬಂದ ಕಾರಣಕ್ಕೆ ಅದರಿಂದ ರಕ್ಷಣೆಗಾಗಿ ಹಾವು ಸೂಪರ್ ಮಾರ್ಕೆಟ್ ಒಳಗೆ ಬಂದಿದೆ. ಈ ವೇಳೆ ಶಾಪಿಂಗ್ ಕಾರ್ಟ್‍ನಲ್ಲಿ ಸೇರಿಕೊಂಡಿರಬಹುದು ಎಂದು ಊಹಿಸಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2017ರಲ್ಲಿ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್‍ನಲ್ಲಿ ಫ್ರೀಜ್ಡ್ ನಲ್ಲಿ ಇರಿಸಿದ್ದ ಮೊಸರು ತೆಗೆದುಕೊಳ್ಳುವ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು.

    https://www.facebook.com/NortheastPD/posts/1024911421052498

  • ಮಾಜಿ ಪತಿ ಈ ಒಂದು ಮಾತು ಹೇಳಿದ್ದಕ್ಕೆ ಮಾಲ್‍ನಲ್ಲೆ ಬಟ್ಟೆ ಕಳಚಿ ಬೆತ್ತಲಾದ ಮಹಿಳೆ!

    ಮಾಜಿ ಪತಿ ಈ ಒಂದು ಮಾತು ಹೇಳಿದ್ದಕ್ಕೆ ಮಾಲ್‍ನಲ್ಲೆ ಬಟ್ಟೆ ಕಳಚಿ ಬೆತ್ತಲಾದ ಮಹಿಳೆ!

    ಬೀಜಿಂಗ್: ಮಾಜಿ ಪತಿಯೊಂದಿಗೆ ವಾಗ್ವಾದ ನಡೆದು ಮಹಿಳೆ ತನ್ನ ಬಟ್ಟೆಗಳನ್ನ ಕಳಚಿ ಬೆತ್ತಲಾದ ವಿಚಿತ್ರ ಘಟನೆ ಚೀನಾದ ಜಿಯಾಂಗ್ಸು ನಲ್ಲಿ ನಡೆದಿದೆ.

    ಜಿಯಾಂಗ್ಸುನಲ್ಲಿ ವುಕ್ಸಿಯ ಮಾಲ್‍ನಲ್ಲಿ ಮಹಿಳೆ ಹಾಗೂ ಆಕೆಯ ಮಾಜಿ ಪತಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಇಬ್ಬರ ಮಧ್ಯೆ ಶಾಪಿಂಗ್ ಮಾಲ್‍ ನಲ್ಲೆ ವಾಗ್ವಾದ ನಡೆದಿದೆ. ಇದೇ ವೇಳೆ ಮಾಜಿ ಪತಿ, ನೀನು ಬಳಸುತ್ತಿರುವ ಮೊಬೈಲ್ ಫೋನ್ ನಾನು ಕೊಡಿಸಿದ್ದು ಎಂದು ಹೇಳಿದ್ದಾನೆ. ಆಗ ಕುಪಿತಗೊಂಡ ಮಹಿಳೆ ಮೊಬೈಲ್ ಫೋನನ್ನು ನೆಲದ ಮೇಲೆ ಎಸೆದಿದ್ದಾಳೆ.

    ಇಷ್ಟಕ್ಕೆ ಸುಮ್ಮನಾಗದ ಮಾಜಿ ಪತಿರಾಯ ನೀನು ಹಾಕಿರುವ ಬಟ್ಟೆ ನನ್ನ ಹಣದಿಂದ ಖರೀದಿಸಿರುವುದು ಎಂದು ಛೇಡಿಸಿದ್ದಾನೆ. ಆಗ ಕೋಪಗೊಂಡ ಮಹಿಳೆ ಎಲ್ಲರ ಎದುರೇ ಮಾಲ್‍ನಲ್ಲೆ ಬಟ್ಟೆಯನ್ನೆಲ್ಲ ಬಿಚ್ಚಿ ನಿರ್ವಸ್ತ್ರಳಾಗಿದ್ದಾಳೆ. ಮಾಜಿ ಪತ್ನಿಯ ವರ್ತನೆ ಕಂಡು ದಂಗಾದ ಆತ ಆಕೆಯನ್ನು ತಡೆಯಲು ಯತ್ನಿಸಿದನಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

    ತದನಂತರ ಮಹಿಳೆ ಪೂರ್ಣ ನಗ್ನಳಾಗಿ ನಿಂತುರುವುದನ್ನ ಕಾಣಬಹುದು. ಕೊನೆಗೆ ಅಲ್ಲಿದ್ದ ಕೆಲವರು ಆ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=QZ1uG7sTDT0