Tag: shopkeeper

  • ಸ್ಮಾರ್ಟ್‍ಫೋನ್ ಖರೀದಿಸಿದ್ರೆ ಬಿಯರ್ ಫ್ರೀ – ಆಫರ್ ನೀಡಿದ್ದ ಅಂಗಡಿ ಮಾಲೀಕ ಅರೆಸ್ಟ್

    ಸ್ಮಾರ್ಟ್‍ಫೋನ್ ಖರೀದಿಸಿದ್ರೆ ಬಿಯರ್ ಫ್ರೀ – ಆಫರ್ ನೀಡಿದ್ದ ಅಂಗಡಿ ಮಾಲೀಕ ಅರೆಸ್ಟ್

    ಲಕ್ನೋ: ಸ್ಮಾರ್ಟ್‍ಫೋನ್ (Smartphones) ಖರೀದಿಸಿದರೆ 2 ಬಿಯರ್ (Beer) ಟಿನ್‍ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ ಅಂಗಡಿ ಮಾಲೀಕನನ್ನು (Shopkeeper) ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ (Uttar Pradesh) ಚೌರಿ ರಸ್ತೆಯಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಬಂಧಿತ (Arrest) ವ್ಯಕ್ತಿ. ಈತ ಸ್ಮಾರ್ಟ್‍ಫೋರ್ನ್ ಖರಿದಿಸುವವರಿಗೆ 2 ಟಿನ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ. ಅಷ್ಟೇ ಅಲ್ಲದೇ ಈ ಬಗ್ಗೆ ಪೋಸ್ಟರ್, ಕರಪತ್ರ ಹಾಗೂ ಪ್ರಕಟಣೆಗಳನ್ನು ಹಾಕಿ ಪ್ರಚಾರ ಮಾಡಿದ್ದನು.

    ಪ್ರಚಾರದ ಸುದ್ದಿ ಹರಡುತ್ತಿದ್ದಂತೆ ಅಂಗಡಿಯ ಮುಂದೆ ಜನರು ಸಾಲುಗಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದನ್ನೂ ಓದಿ: 5ರ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ನಗ್ನವಾಗಿಸಿದ್ದನ್ನು ನೋಡಿ ಕಾಮುಕನನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

    ಸಾರ್ವಜನಿಕರ ಶಾಂತಿ ಕದಡುತ್ತಿರುವ ಕಾರಣಕ್ಕಾಗಿ ಉತ್ತರ ಪ್ರದೇಶ ಪೊಲೀಸರು ರಾಜೇಶ್ ಮೌರ್ಯನನ್ನು ಬಂಧಿಸಿದ್ದಾರೆ. ಜೊತೆಗೆ ರಾಜೇಶ್ ಮೌರ್ಯನ ಅಂಗಡಿಯನ್ನು ಸೀಲ್ ಮಾಡಲಾಗಿದೆ. ಇದನ್ನೂ ಓದಿ: ಸಿಬಿಐ ಬೆನ್ನಲ್ಲೇ ಇಡಿ ಸಂಕಷ್ಟ – ತಿಹಾರ್ ಜೈಲಿನಲ್ಲಿ Manish Sisodia ವಿಚಾರಣೆ

  • ಕೊರೊನಾಗೆ ಗೆಳೆಯ ಬಲಿ – ಸ್ನೇಹಿತನ ಮಡದಿಯನ್ನ ಮದುವೆಯಾದ ಯುವಕ

    ಕೊರೊನಾಗೆ ಗೆಳೆಯ ಬಲಿ – ಸ್ನೇಹಿತನ ಮಡದಿಯನ್ನ ಮದುವೆಯಾದ ಯುವಕ

    ಚಾಮರಾಜನಗರ: ಧರ್ಮ, ಜಾತಿ, ವಯಸ್ಸು, ಸಂಬಂಧ ಮೀರಿದ ಬಂಧವೊಂದಿದ್ದರೆ ಅದು ಗೆಳೆತನ. ಇದಕ್ಕೆ ನಿದರ್ಶನದಂತೆ ಅಪರೂಪ ಹಾಗೂ ಮಾದರಿ ಮದುವೆಯೊಂದು ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ ಪತಿ ಕಳೆದುಕೊಂಡು ಕಂಗಾಲಾಗಿದ್ದ ಗೆಳೆಯನ ಪತ್ನಿಯನ್ನು ವಿವಾಹವಾಗಿದ್ದಾನೆ. ಜ.27ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

    ಕೊರೊನಾದಿಂದ ಪತಿ ಸಾವು!
    ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‍ಕುಮಾರ್(41) ಮತ್ತು ಹನೂರು ಪಟ್ಟಣದ ಅಂಬಿಕಾ(30) 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಚೇತನ್‍ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್‍ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

    ಪತಿಯ ಸಾವಿನಿಂದ ಕಂಗೆಟ್ಟ ಅಂಬಿಕಾ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಚೇತನ್‍ಕುಮಾರ್ ಗೆಳೆಯ, ಎಂ.ಲೋಕೇಶ್ ಅವರು ಅಂಬಿಕಾಗೆ ಸಾಂತ್ವನ ಹೇಳಿ, ತನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಿರ್ಧರಿಸಿದರು. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    ತನ್ನ ಗೆಳೆಯನ ಪತ್ನಿಯನ್ನು ಮದುವೆಯಾಗಲು ನಿರ್ಧರಿಸಿ, ಅಂಬಿಕಾ ತಂದೆ, ತಾಯಿಯ ಬಳಿ ಹಾಗೂ ಚೇತನ್‍ಕುಮಾರ್ ತಂದೆ, ತಾಯಿಯ ಬಳಿ ವಿಷಯ ಪ್ರಸ್ತಾಪಿಸಿದ್ದಾರೆ. ಅವರೆಲ್ಲರ ಮನವೊಲಿಕೆಯ ಬಳಿಕ ಅಂಬಿಕಾ ಮದುವೆಗೆ ಒಪ್ಪಿದರು. ಎಲ್ಲರ ಒಪ್ಪಿಗೆ ಪಡೆದು ಲೋಕೇಶ್ ಅವರು ಅಂಬಿಕಾ ಅವರನ್ನು ಪುನರ್ ವಿವಾಹವಾಗುವ ಮೂಲಕ ಮಾದರಿಯಾಗಿ ಗೆಳೆಯನ ಕುಟುಂಬಕ್ಕೆ ಆಸರೆಯಾಗಿದ್ದಾರೆ.

  • ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ತಿರುವನಂತಪುರ: ಕೇಕ್ ಪೀಸ್ ಕದ್ದ ಅಂತ ಆರೋಪಿಸಿ 14 ವರ್ಷದ ಬಾಲಕನಿಗೆ ಅಂಗಡಿ ಮಾಲೀಕನೊಬ್ಬ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.

    ಈ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರ ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಥಳಿತಕ್ಕೊಳಗಾದ ಬಾಲಕನನ್ನು ಅರ್ಜುನ್(ಹೆಸರು ಬದಲಾಯಿಸಲಾಗಿದೆ) ಎಂದುದು ಗುರುತಿಸಲಾಗಿದೆ.

    ಏನಿದು ಘಟನೆ?: ಕುಲಕ್ಕಡ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರೋ ಅರ್ಜುನ್ ಮತ್ತು ಆತನ ಗೆಳೆಯರು ತಂಪು ಪಾನೀಯ ಕುಡಿಯಲೆಂದು ಶಾಲೆಯ ಹತ್ತಿರವಿರೋ ಶಶಿಧರನ್ ಎಂಬಾತನ ಅಂಗಡಿಗೆ ಸಂಜೆ ಸುಮಾರು 4.30ರ ವೇಳೆ ಬಂದಿದ್ದರುನೀ ವೇಳೆ ಬಾಲಕ ಕೇಕ್ ಕದ್ದ ಅಂತ ಅಂಗಡಿ ಮಾಲೀಕ ಬಲಕನನ್ನು ಥಳಿಸಿದ್ದಾನೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆ ಕುರಿತು ಅರ್ಜುನ್ ತಾಯಿ ಸಾವಿತ್ರಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ತಾಯಿ ಕರೆ ಮಾಡಿ ಅರ್ಜುನ್ ಶಾಲೆಯಿಂದ ಇನ್ನೂ ಬಂದಿಲ್ಲ. ಅಲ್ಲದೇ ಅಂಗಡಿ ಮಾಲೀಕ ಅರ್ಜುನ್ ಜೊತೆ ಅಮಾನುಷವಾಗಿ ನಡೆದುಕೊಂಡಿರುವ ಬಗ್ಗೆ ಆತನ ಗೆಳೆಯರು ಹೇಳಿರುವುದಾಗಿ ತಿಳಿಸಿದ್ರು. ಇದರಿಂದ ಗಾಬರಿಗೊಂಡ ನಾನು ಕೂಡಲೇ ಸ್ಥಳೀಯ ಅಂಗಡಿಗಳಿಗೆ ತೆರಳಿ ಹುಡುಕಾಡಿದೆ. ಆದ್ರೆ ಅರ್ಜುನ್ ಎಲ್ಲೂ ಕಾಣಿಸಿಲ್ಲ. ತಕ್ಷಣವೇ ಮಗನನ್ನು ವಿಚಾರಿಸಿಕೊಂಡು ಬರಲೆಂದು ಅಲ್ಲಿಂದ ಶಾಲೆಗೆ ತೆರಳಿದೆ. ಸುಮಾರು 1 ಗಂಟೆಗೂ ಅಧಿಕ ಸಮಯ ಅರ್ಜುನ್ ಅಂಗಡಿಯಲ್ಲಿರುವುದನ್ನು ಗಮನಿಸಿದ್ದ ಶಿಕ್ಷಕಿ ಮತ್ತು ನಾನು ಅರ್ಜುನ್ ನನ್ನು ಕರೆದು ಮಾತನಾಡಿಸಿದಾಗ ಈ ವಿಚಾರ ಬೆಳಕಿಗೆ ಬಂತು ಅಂದ್ರು.

    ಅರ್ಜುನ್ ಕೈ ತಾಗಿ ಅಂಗಡಿಯಲ್ಲಿ ಕೇಕ್ ಪೀಸ್ ಒಂದು ಕೆಳಗೆ ಬಿದ್ದಿದೆ. ಅಂತೆಯೇ ಆತನ ಗೆಳೆಯರು ತಂಪು ಪಾನೀಯ ಕುಡಿದು ಅಲ್ಲಿಂದ ತೆರಳಿದ್ದಾರೆ. ಗೆಳೆಯರು ಹಿಂದಿರುಗುತ್ತಿದ್ದಾರೆ ಅಂತ ತಿಳಿದ ಅರ್ಜುನ್ ಕೆಳಗೆ ಬಿದ್ದ ಕೇಕ್ ಪೀಸ್ ಅನ್ನು ಕೌಂಟರ್ ಮೇಲಿಟ್ಟು ಅಲ್ಲಿಂದ ಗೆಳೆಯರ ಹಿಂದೆ ಓಡಿದ್ದಾನೆ. ತನ್ನ ಮಗ ಓಡಿದ್ದನ್ನು ಗಮನಿಸಿದ ಅಂಗಡಿ ಮಾಲೀಕ ಆತನನ್ನು ಮತ್ತೆ ಹಿಂದಕ್ಕೆ ಕರೆದು ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಮಗನ ಎರಡೂ ಕಿವಿಗಳಲ್ಲೂ ರಕ್ತ ಬರುತ್ತಿರುವುದನ್ನು ಕಂಡು ದಂಗಾದೆ. ಅಲ್ಲದೇ ಅರ್ಜುನ್ ಕುತ್ತಿಗೆಯ ಸುತ್ತ ಗಾಯದ ಬರೆಗಳಿದ್ದು, ತಲೆಗೆ ಕೂಡ ಗಾಯಗಳಾಗಿತ್ತು. ಆತನ ಬ್ಯಾಗನ್ನು ಕೂಡ ಅಂಗಡಿಯವನು ಬಿಸಾಡಿದ್ದಾನೆ. ಅಲ್ಲದೇ ಆತನ ಶರ್ಟ್ ಕಾಲರ್ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಂಗಡಿ ಮಾಲೀಕ ಶಶಿಧರನನ್ನು ಶುಕ್ರವಾರ ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 341, 323 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಆರೋಪಿ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.