Tag: shoping

  • ಶಾಪಿಂಗ್‍ಗೆ ಕರ್ಕೊಂಡು ಹೋಗಿಲ್ಲವೆಂದು ಗೆಳೆಯನಿಗೇ ಚಾಕು ಇರಿದ!

    ಶಾಪಿಂಗ್‍ಗೆ ಕರ್ಕೊಂಡು ಹೋಗಿಲ್ಲವೆಂದು ಗೆಳೆಯನಿಗೇ ಚಾಕು ಇರಿದ!

    ನವದೆಹಲಿ: ಶಾಪಿಂಗ್‍ಗೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ತನ್ನ ಗೆಳೆಯನನ್ನೇ ಕೊಲೆಗೈದಿರುವ ಘಟನೆ ದೆಹಲಿಯ ವಾಯುವ್ಯ ಭಾಗದ ಜಹಂಗೀರ್ ಪುರಿಯಲ್ಲಿ ಗುರುವಾರ ನಡೆದಿದೆ.

    18 ವರ್ಷದ ದೀಪಕ್ ಮೃತ ದುರ್ದೈವಿ. ಆರೋಪಿಯನ್ನು 19 ವರ್ಷದ ಯೋಗೇಶ್ ಎಂದು ಗುರುತಿಸಲಾಗಿದೆ. ದೀಪಕ್ ಹಾಗೂ ಯೋಗೇಶ್ ಇಬ್ಬರು ಸ್ನೇಹಿತರು. ದೀಪಕ್ ಬುಧವಾರದಂದು ತನ್ನ ಕುಟುಂಬದೊಡನೆ ಸಮಯ ಕಳೆಯಲು ನಿರ್ಧರಿಸಿದ್ದ. ಹೀಗಾಗಿ ಯೋಗೇಶ್‍ನನ್ನು ತನ್ನ ಜೊತೆ ಬೈಕ್ ನಲ್ಲಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಯೋಗೇಶ್ ದೀಪಕ್‍ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಕಂಟ್ರೋಲ್ ರೂಂನಿಂದ ನಮಗೆ ರಾತ್ರಿ 12.15 ಗಂಟೆ ಸುಮಾರಿಗೆ ವಿಷಯ ತಿಳಿಯಿತು. ದೀಪಕ್‍ನನ್ನು ಬಾಬು ಜಗ್‍ಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಿದ್ದಾಗ ಆತ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂತು. ನಂತರ ಪ್ರಾಥಮಿಕ ತನಿಖೆಯಿಂದ ದೀಪಕ್‍ನ ಸ್ನೇಹಿತ ಯೋಗೇಶ್ ಆತನನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ದೊರಕಿತು. ತಕ್ಷಣ ಆರೋಪಿಯನ್ನು ಭಿಲಾಸ್ವಾ ಡೈರಿ ಬಳಿ ಇರುವ ಆತನ ಸಂಬಂಧಿಕರ ಮನೆಯಿಂದ ಬಂಧಿಸಲಾಯ್ತು ಎಂದು ವಾಯುವ್ಯ ವಲಯದ ಪೊಲೀಸ್ ಉಪ ಆಯುಕ್ತರಾದ ಅಸ್ಲಾಂ ಖಾನ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews