Tag: shop keeper

  • ಗೃಹಬಂಧನದಲ್ಲಿದ್ದ ವ್ಯಕ್ತಿ ತನ್ನ ಶ್ವಾನದಿಂದ ಆಹಾರವನ್ನು ತರಿಸಿಕೊಂಡ

    ಗೃಹಬಂಧನದಲ್ಲಿದ್ದ ವ್ಯಕ್ತಿ ತನ್ನ ಶ್ವಾನದಿಂದ ಆಹಾರವನ್ನು ತರಿಸಿಕೊಂಡ

    – ಸರಿಯಾಗಿ ವಸ್ತುಗಳನ್ನು ಕೊಡಲಿಲ್ಲ ಎಂದ್ರೆ ಶ್ವಾನ ಕಚ್ಚುತ್ತೆಂದು ಪತ್ರ

    ವಾಷಿಂಗ್ಟನ್: ಗೃಹಬಂಧನದಲ್ಲಿದ್ದ ಮೆಕ್ಸಿಕೋದ ವ್ಯಕ್ತಿಯೊಬ್ಬ ತನ್ನ ಶ್ವಾನದ ಮೂಲಕ ಆಹಾರವನ್ನು ತರಿಸಿಕೊಂಡಿದ್ದಾನೆ.

    ಆಂಟೋನಿಯೊ ಮುನೊಜ್ ಎಂಬವನು ಮೂರನೇ ದಿನ ಮನೆಯಲ್ಲಿಯೇ ಇದ್ದನು. ಈ ವೇಳೆ ಆತನಿಗೆ ಚಿಟೋಸ್ ತಿನ್ನುವ ಆಸೆಯಾಗಿದೆ. ಮುನೊಜ್ ಮನೆಯಿಂದ ಹೊರಬಂದು ಚಿಟೋಸ್ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಆತ ತನ್ನ ಶ್ವಾನ ಚಿಹೋವಾ ಮೂಲಕ ಚಿಟೋಸ್ ತರಿಸಿಕೊಂಡಿದ್ದಾನೆ.

    ಮುನೋಜ್ ತನ್ನ ಶ್ವಾನದ ಮೇಲೆ ಚೀಟಿವೊಂದನ್ನು ಅಂಟಿಸಿದ್ದನು. ಆ ಚೀಟಿಯಲ್ಲಿ ವಸ್ತುಗಳ ಲಿಸ್ಟ್ ಅನ್ನು ಬರೆದಿದ್ದನು. ಜೊತೆಗೆ ಶ್ವಾನದ ಕಾಲರಿನಲ್ಲಿ(ಬೆಲ್ಟ್) 20 ಡಾಲರ್ ನೋಟ್ ಕೂಡ ಅಂಟಿಸಿದ್ದನು.

    ಚೀಟಿಯಲ್ಲಿ, ಹೆಲೋ ಮಿಸ್ಟರ್ ಶಾಪ್ ಕೀಪರ್, ದಯವಿಟ್ಟು ಚೀಟಿಯಲ್ಲಿ ಬರೆದಿರುವ ವಸ್ತುಗಳನ್ನು ನನ್ನ ಶ್ವಾನಗೆ ಕೊಡಿ. ಶ್ವಾನದ ಕಾಲರಿನಲ್ಲಿ 20 ಡಾಲರ್ ಇಟ್ಟಿದ್ದೇನೆ. ನೀವೇನಾದರೂ ಸರಿಯಾದ ವಸ್ತುಗಳನ್ನು ನೀಡಲಿಲ್ಲ ಎಂದರೆ ನನ್ನ ಶ್ವಾನ ನಿಮ್ಮನ್ನು ಕಚ್ಚುತ್ತದೆ ಎಂದು ಬರೆದಿದ್ದನು.

    ಅಂಗಡಿ ಮಾಲೀಕ ಚೀಟಿಯಲ್ಲಿ ಬರೆದಿದ್ದನು ಓದಿ ಆ ವಸ್ತುಗಳನ್ನು ಶ್ವಾನಗೆ ನೀಡಿದ್ದನು. ಮಾಲೀಕ ನೀಡಿದ ವಸ್ತುಗಳನ್ನು ಶ್ವಾನ ತೆಗೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿತು. ಸದ್ಯ ಮುನೋಜ್‍ನ ಈ ಐಡಿಯಾಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • 1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    ಆಗ್ರಾ: ಸಮೋಸಕ್ಕೆ 1 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಯೋರ್ವ ಗ್ರಾಹಕನ ಸಹೋದರನ ಮೈಮೇಲೆ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರದಂದು ಉತ್ತರಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಮಥುರಾ ನಿವಾಸಿ ಹೇಮರಾಜ್(26) ಹಾಗೂ ಆತನ ಸಹೋದರ ವಿಷ್ಣು(22) ಇಬ್ಬರ ಮೇಲು ಕಾದ ಎಣ್ಣೆ ಎರಚಲಾಗಿದೆ. ಕೇವಲ 1 ರೂ. ಹಣ ಕಡಿಮೆ ನೀಡಿದ್ದೇ ಅಂಗಡಿ ಮಾಲೀಕ ಸುರೇಶ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆಯಲು ಕಾರಣವಾಗಿದೆ.

    ರೆಟಿಯಾ ಮಾರುಕಟ್ಟೆಯಲ್ಲಿರುವ ಸ್ವೀಟ್ ಅಂಗಡಿಗೆ ಹೋಗಿ ವಿಷ್ಣು ಸಮೋಸಾ ಖರೀದಿಸಿದ್ದನು. ಈ ವೇಳೆ ಆತನ ಬಳಿಕ ಕೇವಲ ಐದು ರೂಪಾಯಿ ಇದ್ದ ಕಾರಣಕ್ಕೆ ಅಷ್ಟನ್ನೇ ಅಂಗಡಿ ಮಾಲೀಕನಿಗೆ ಯುವಕ ಕೊಟ್ಟಿದ್ದಾನೆ. ಆದರೆ ಸಮೋಸಕ್ಕೆ 6 ರೂ. ನೀನು 1 ರೂ. ಕಡಿಮೆ ಕೊಟ್ಟಿದ್ದೀಯಾ ಎಂದು ಮಾಲೀಕ ಯುವಕನ ಮೇಲೆ ಜಗಳಕ್ಕಿಳಿದಿದ್ದಾನೆ. ಬಳಿಕ ಜಗಳ ದೊಡ್ಡದಾಗಿ ಅಂಗಡಿ ಮಾಲೀಕ ಹಾಗೂ ಅವನ ಮಕ್ಕಳು ಯುವಕನನ್ನು ಬೈದು, ಮನ ಬಂದಂತೆ ಥಳಿಸಿದ್ದಾರೆ.

    ಈ ವೇಲೆ ಸಹೋದರನನ್ನು ರಕ್ಷಸಿಲು ಹೇಮರಾಜ್ ಬಂದು ಗಲಾಟೆ ನಿಲ್ಲುಸುವಂತೆ ಹೇಳಿದ್ದಾನೆ. ಆದರೆ ಸಿಟ್ಟಿನಲ್ಲಿದ್ದ ಮಾಲೀಕ ಮಾತ್ರ ಯಾರ ಮಾತನ್ನು ಕೇಳದೆ ಅವರಿಬ್ಬರ ಮೇಲೆ ಕಾದ ಎಣ್ಣೆಯನ್ನು ಎರಚಿ ಕ್ರೌರ್ಯ ಮೆರೆದಿದ್ದಾನೆ. ಪರಿಣಾಮ ಹೇಮರಾಜ್‍ಗೆ ಗಂಭೀರ ಗಾಯಗೊಂಡಿದ್ದು, ವಿಷ್ಣುಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರು ಸಹೋದರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರೋಪಿ ಸುರೇಶ್ ಮಾತ್ರ ನಾನೇನು ತಪ್ಪು ಮಾಡಿಲ್ಲ. ಸಮೋಸದ ಬಾಕಿ 1 ರೂಪಾಯಿ ಕೊಡಿ ಎಂದಿದ್ದಕ್ಕೆ ಸಹೋದರರು ನಮ್ಮ ಅಂಗಡಿಯನ್ನು ಧ್ವಂಸ ಮಾಡಿ, ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾನೆ.

    ಈ ಬಗ್ಗೆ ಈಗಾಗಲೇ ಪೊಲೀಸರು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]