Tag: Shoot out

  • ಅಮೆರಿಕದ ಚರ್ಚ್ ಮೇಲೆ ಶೂಟೌಟ್ – ಗನ್‌ನಲ್ಲಿ ಬರೆದಿತ್ತು Nuke India

    ಅಮೆರಿಕದ ಚರ್ಚ್ ಮೇಲೆ ಶೂಟೌಟ್ – ಗನ್‌ನಲ್ಲಿ ಬರೆದಿತ್ತು Nuke India

    ವಾಷಿಂಗ್ಟನ್: ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಆ.27ರಂದು ನಡೆದಿದ್ದ ಶೂಟೌಟ್‌ಗೆ ಬಳಸಿದ್ದ ಗನ್ ಮೇಲೆ “Kill Donald Trump” “Nuke India” ಎಂದು ಬರೆದಿರುವುದು ಕಂಡುಬಂದಿದೆ.

    ಶೂಟರ್‌ನ್ನು ರಾಬಿನ್ ವೆಸ್ಟ್‌ಮನ್‌ (23) ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ.ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣಾ ಕಣದಿಂದ ಹಿಂದೆ ಸರಿದ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ

    ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಬಳಸಿ ಗುಂಡಿನ ದಾಳಿ ನಡೆಸಿದ್ದು, ಈ ಬಂದೂಕುಗಳ ಮೇಲೆ “Kill Donald Trump” “Nuke India” ಎಂದು ಬರೆದಿರುವುದು ಪತ್ತೆಯಾಗಿದೆ. ಈ ಕುರಿತು ರಾಬಿನ್ ಡಬ್ಲ್ಯೂ ಎಂಬ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಆದರೆ ಸದ್ಯ ವಿಡಿಯೋಗಳನ್ನು ತೆಗೆದುಹಾಕಲಾಗಿದೆ.

    10 ನಿಮಿಷಗಳ ವಿಡಿಯೋದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಲೋಡ್ ಮಾಡಲಾಗಿದ್ದ ಗನ್‌ಗಳನ್ನು ತೋರಿಸಲಾಗಿತ್ತು. Kill Donald Trump”, “Kill Trump Now”, “Israel must fall”, “Burn Israel”  ಎಂದು ಗನ್ ಮೇಲೆ ಬರೆಯಲಾಗಿತ್ತು. ಇನ್ನೊಂದು ಬಂದೂಕಿನ ಮೇಲೆ “ನ್ಯೂಕ್ ಇಂಡಿಯಾ” ಎಂದು ಬರೆದಿರುವುದು ಕಂಡುಬಂದಿದೆ.

    ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ವೆಸ್ಟ್ಮನ್ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದು, ಆಕೆ ಯಾವುದೇ ಅಪರಾಧದ ಹಿನ್ನೆಲೆಯನ್ನು ಹೊಂದಿಲ್ಲ ಮತ್ತು ಏಕಾಂಗಿಯಾಗಿ ಇದೆಲ್ಲವನ್ನು ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

    ಬುಧವಾರ (ಆ.27) ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯ ಚರ್ಚ್ ಮೇಲೆ ಗುಂಡಿನ ದಾಳಿ ನಡೆಸಿದ್ದಳು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸ್ವಲ್ಪ ಸಮಯದ ನಂತರ ಆಕೆ ಪಾರ್ಕಿಂಗ್‌ವೊಂದರಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾಳೆ.

    ಇನ್ನೂ ಕೋರ್ಟ್ ದಾಖಲೆಗಳ ಪ್ರಕಾರ, 2020ರಲ್ಲಿ ರಾಬರ್ಟ್ ಎಂಬ ಹೆಸರನ್ನು ವೆಸ್ಟ್‌ಮನ್‌ ಎಂದು ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಬೆಂಗಳೂರು | 2 ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿ ಆತ್ಮಹತ್ಯೆ – ಪತಿ ಅರೆಸ್ಟ್

  • ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಬಂದೂಕುದಾರಿ ಸೇರಿ ಐವರು ಸಾವು

    ನ್ಯೂಯಾರ್ಕ್‌ನ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಬಂದೂಕುದಾರಿ ಸೇರಿ ಐವರು ಸಾವು

    ವಾಷಿಂಗ್ಟನ್‌: ನ್ಯೂಯಾರ್ಕ್‌ನ (New York) ಗಗನಚುಂಬಿ ಕಟ್ಟಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ, ಶಂಕಿತ ದಾಳಿಕೋರ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ನ್ಯೂಯಾರ್ಕ್‌ನ ಕೇಂದ್ರ ಮ್ಯಾನ್‌ಹ್ಯಾಟನ್‌ನಲ್ಲಿ (Midtown Manhattan) ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್‌ ಅಧಿಕಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದರು. ಆ ಬಳಿಕ ಬಂಧೂಕುದಾರಿ ಸ್ವಯಂ ಹಾನಿಯಿಂದ ಸಾವನ್ನಪ್ಪಿದ್ದಾನೆ. ಬಂಧೂಕುಧಾರಿಯನ್ನ ನೆವಾಡಾದ ಶೇನ್ ಟಮುರಾ (27) ಎಂದು ಗುರುತಿಸಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಮ್ಮಿ – ನಿಮಿಷಾ ಪ್ರಿಯಾ ಬಿಡುಗಡೆಗೆ ಮನವಿ ಮಾಡಲು ಯೆಮನ್‍ಗೆ ಬಂದ ಪುತ್ರಿ

    ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ ಪಟ್ಟಣವು NFL ಪ್ರಧಾನ ಕಚೇರಿ ಮತ್ತು ಹೆಡ್ಜ್ ಫಂಡ್, ಬ್ಲಾಕ್‌ಸ್ಟೋನ್ ಸೇರಿದಂತೆ ಹಲವಾರು ಪ್ರಮುಖ ಹಣಕಾಸು ಸಂಸ್ಥೆಗಳ ಕಚೇರಿಗಳನ್ನು ಹೊಂದಿರುವ ಸ್ಥಳವಾಗಿದೆ. ಅಲ್ಲದೇ ಪ್ರಮುಖ ಐಷಾರಾಮಿ ಹೋಟೆಲ್‌ಗಳೂ ಇಲ್ಲಿವೆ. ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 6:30ರ ಸುಮಾರಿಗೆ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಅಂಬುಲೆನ್ಸ್‌ ಹಾಗೂ ಭದ್ರತಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಇದನ್ನೂ ಓದಿ: ಬ್ಯಾಂಕಾಕ್ ಫುಡ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿಗೆ 6 ಬಲಿ

    ಇನ್ನೂ ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

  • ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

    ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

    – ದುಷ್ಕರ್ಮಿ ಹಿಟ್‌ಲಿಸ್ಟ್‌ನಲ್ಲಿ ಇನ್ನಷ್ಟು ರಾಜಕಾರಣಿಗಳ ಹೆಸರು ಬಹಿರಂಗ

    ವಾಷಿಂಗ್ಟನ್:‌ ಅಮೆರಿಕದಲ್ಲಿ ಸಂಸದ ಜಾನ್‌ ಹಾಫ್‌ಮನ್‌ (John Hoffman) ಹಾಗೂ ಡೆಮಾಕ್ರಟಿಕ್ ಶಾಸಕಿ ಮೆಲಿಸ್ಸಾ ಹಾರ್ಟ್‌ಮನ್ (Melissa Hortman) ಮನೆಯೊಳಗೆ ಒಂದೇ ದಿನ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಯೊಬ್ಬ ನಡೆಸಿದ ದಾಳಿಯಲ್ಲಿ ಮೆಲಿಸ್ಸಾ ಮತ್ತು ಅವರ ಪತಿ ಸಾವನ್ನಪ್ಪಿದ್ದಾರೆ ಎಂದು ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಖಚಿತಪಡಿಸಿದ್ದಾರೆ. ಓರ್ವ ಸಂಸದ ಜಾನ್ ಹಾಫ್‌ಮನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಿನ್ನಿಯಾಪೋಲಿಸ್‌ನ ಉಪನಗರ ಚಾಂಪ್ಲಿನ್‌ನಲ್ಲಿರುವ ಜಾನ್ ಹಾಫ್‌ಮನ್ ಮತ್ತು ಬ್ರೂಕ್ಲಿನ್ ಪಾರ್ಕ್‌ನಲ್ಲಿರುವ ಮೆಲಿಸ್ಸಾ ಹಾರ್ಟ್‌ಮನ್ ಅವರ ನಿವಾಸದಲ್ಲೇ ಗುಂಡಿನ ದಾಳಿ ನಡೆದಿದ್ದು, ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ. ಸ್ಥಳೀಯ ಅಧಿಕಾರಿಗಳು ಇದನ್ನು ಉದ್ದೇಶಿತ ದಾಳಿ ಎಂದು ಕರೆದಿದ್ದಾರೆ. ಬ್ರೂಕ್ಲಿನ್‌ ಮತ್ತು ಚಾಪಿಲನ್‌ ಮಿನ್ನಿಯಾಪೋಲಿಸ್ ಪ್ರಮುಖ ಉಪನಗರಗಳು.

    ಪ್ರಾಥಮಿಕ ತನಿಖೆ ಪ್ರಕಾರ.. ದುಷ್ಕರ್ಮಿಯು ತನ್ನನ್ನು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡಿದ್ದ. ಪೊಲೀಸ್‌ ಡ್ರೆಸ್‌ನಲ್ಲೇ ಸುತ್ತಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ದಾಳಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

    ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್, ದೇಶದಲ್ಲಿ ಎಲ್ಲ ರೀತಿಯ ರಾಜಕೀಯ ಹಿಂಸಾಚಾರದ ವಿರುದ್ಧ ನಾವು ನಿಲ್ಲಬೇಕು. ಇದಕ್ಕೆ ಕಾರಣರಾದವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

    ಹಿಟ್‌ಲಿಸ್ಟ್‌ನಲ್ಲಿ ಹಲವು ಜನಪ್ರತಿನಿಧಿಗಳ ಹೆಸರು ಬಹಿರಂಗ
    ಈ ನಡುವೆ ಮಿನ್ನೇಸೋಟ ಪೊಲೀಸ್‌ ಮುಖ್ಯಸ್ಥರು ಶಂಕಿತನ ಕಾರಿನಲ್ಲಿದ್ದ ಪ್ಲ್ಯಾನಿಂಗ್‌ ಹಿಟ್‌ಲಿಸ್ಟ್‌ನ್ನು ಪತ್ತೆಹಚ್ಚಿದ್ದಾರೆ. ಈ ಲಿಸ್ಟ್‌ನಲ್ಲಿ ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳ ಹೆಸರು ಇರುವುದು ಕಂಡುಬಂದಿದೆ. ಸಂಭಾವ್ಯ ದಾಳಿ ನಡೆಸಲು ದುಷ್ಕರ್ಮಿ ಹೆಸರು ಪಟ್ಟಿ ಮಾಡಿರುವುದು ಗೊತ್ತಾಗಿದೆ.

    ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು ಹಿನ್ನೆಲೆ ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿ ಒಬ್ಬನೇ ಇದ್ದಾನಾ ಅಥವಾ ಅವನ ಹಿಂದೆ ಬೇರೊಂದು ಗ್ಯಾಂಗ್‌ ಇದೆಯೇ ಎಂಬೆಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಶಂಕಿತನ ಹಿಟ್‌ಲಿಸ್ಟ್ ಆಧರಿಸಿ ಸಂಭಾವ್ಯ ದಾಳಿಯ ಹೆಸರುಗಳಿರುವ ಎಲ್ಲ ಸಂಸದರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

    ಸ್ಥಳೀಯ ಆಡಳಿತ ಸಂಸ್ಥೆಗಳು ಎಫ್‌ಬಿಐ ಮತ್ತು ಇತರ ಫೆಡರಲ್ ಸಂಸ್ಥೆಗಳು ಈ ಕುರಿತು ಜಂಟಿಯಾಗಿ ತನಿಖೆ ನಡೆಸುತ್ತಿವೆ.

  • ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌

    ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌

    ವಾಷಿಂಗ್ಟನ್‌: ಅಮೆರಿಕದಲ್ಲಿ (USA) ನಡೆದ ಭೀಕರ ಗುಂಡಿನ ದಾಳಿಗೆ (Shoot out) ಭಾರತೀಯ ಮೂಲದ ಅಪ್ಪ ಮಗಳು ಬಲಿಯಾಗಿದ್ದಾರೆ.

    24 ವರ್ಷದ ಭಾರತೀಯ ಮಹಿಳೆ ಮತ್ತು ಆಕೆಯ 56 ವರ್ಷದ ತಂದೆಯನ್ನು ಅಮೆರಿಕದ ವರ್ಜೀನಿಯಾದಲ್ಲಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಯೊಂದರಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕೋಮಾಕ್ ಕೌಂಟಿಯಲ್ಲಿ (Accomack County) ಅಂಗಡಿ ತೆರೆದ ಕೆಲವೇ ಸಮಯದ ಬಳಿಕ ಗುಂಡಿನ ದಾಳಿ ನಡೆದಿದೆ.

    ಪ್ರದೀಪ್ ಪಟೇಲ್ (56), ಊರ್ಮಿ (24) ಹತ್ಯೆಯಾದ ತಂದೆ ಮಗಳು. ಶೂಟರ್‌ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಬಂಧಿತ ಆರೋಪಿ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

    ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಮದ್ಯ ಖರೀದಿಸಲು ಅಪ್ಪ-ಮಗಳಿದ್ದ ಅಂಗಡಿಗೆ ಬಂದಿದ್ದರು. ಈ ವೇಳೆ ರಾತ್ರಿ ಅಂಗಡಿ ಏಕೆ ಮುಚ್ಚಲಾಗುತ್ತು ಎಂದು ಕೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ಜೋರಾಗಿದ್ದು, ಆರೋಪಿ ಗುಂಡು ಹಾರಿಸಿದ್ದಾನೆ. ತಂದೆ ಪ್ರದೀಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗಳು ಊರ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

    ಪ್ರದೀಪ್‌ ಪಟೇಲ್‌, ಪತ್ನಿ ಹಂಸಾಬೆನ್‌, ಮಗಳು ಊರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರು. 6 ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದರು. ಪ್ರದೀಪ್‌ ತನ್ನ ಸಂಬಂಧಿ ಪರೇಶ್‌ ಪಟೇಲ್‌ ಮಾಲೀಕತ್ವದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

    ಸದ್ಯ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಸಬ್‌ಸ್ಟೇಷನ್‌ನಲ್ಲಿ ಅಗ್ನಿ ಅನಾಹುತ – ಲಂಡನ್‌ ಹೀಥ್ರೂ ವಿಮಾನ ನಿಲ್ದಾಣ ದಿನಪೂರ್ತಿ ಬಂದ್‌

  • ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ಜಾಕ್ಸನ್: ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಅಕ್ಕ- ತಮ್ಮ ಜಗಳವಾಡಿಕೊಂಡಿದ್ದು, ಕೊನೆಗೆ ತಮ್ಮ ಅಕ್ಕನ ತಲೆಗೆ ಗುಂಡು ಹಾರಿಸಿರೋ ಆಘಾತಕಾರಿ ಘಟನೆ ಶನಿವಾರದಂದು ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ನಡೆದಿದೆ.

    ಗುಂಡೇಟು ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆಂದು ಇಲ್ಲಿನ ಮನ್ರೋ ಕೌಂಟಿಯ ಅಧಿಕಾರಿ ಸೆಸಿಲ್ ಕಂಟ್ರೆಲ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ವಿಡಿಯೋ ಗೇಮ್ ಕಂಟ್ರೋಲರ್ ತನ್ನ ಕೈಗೆ ಕೊಡಲಿಲ್ಲವೆಂದು 9 ವರ್ಷದ ಬಾಲಕ ತನ್ನ 13 ವರ್ಷದ ಅಕ್ಕ ಡಿಜೋನೇಗೆ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಕೂಡಲೇ ಆಕೆಯನ್ನ ಮೆಂಫಿಸ್ ಟೆನ್ನೀಸೀಯ ಲೀ ಬೋನ್‍ಹರ್ಸ್ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಬಾಲಕಿ ಬದುಕುಳಿಯಲಿಲ್ಲ ಎಂದು ಅವರು ತಿಳಿಸಿದ್ದಾರೆ.

    ಘಟನೆ ನಡೆದ ವೇಳೆ ಮಕ್ಕಳ ತಾಯಿ ಮತ್ತೊಂದು ರೂಮಿನಲ್ಲಿ ಇತರೆ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಬಾಲಕನಿಗೆ ಗನ್ ಸಿಕ್ಕಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

  • ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

    ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

    ಚಂಡೀಗಢ: ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ರನ್ನು ಗುಂಡಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.

    ರಿತು ಛಾಬ್ರಾ ಎಂಬವರು ಕೊಲೆಯಾದ ಪ್ರಿನ್ಸಿಪಾಲ್. ಯಮುನಾ ನಗರದ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 11.30ರ ವೇಳೆಯಲ್ಲಿ ನೇರ ಪ್ರಿನ್ಸಿಪಾಲರ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿದ್ಯಾರ್ಥಿ ಗುಂಡು ಹಾರಿಸಿದ್ದರಿಂದ 3 ಬುಲೆಟ್‍ಗಳು ತಾಗಿ ಗಂಭೀರವಾಗಿ ಗಾಯಗೊಂಡ ಛಾಬ್ರಾ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಬಳಿಕ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಶಾಲೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ಎಸ್‍ಪಿ ರಾಜೇಶ್ ಕಲಿಯಾ ತಿಳಿಸಿದ್ದಾರೆ.

    ಪ್ರಿನ್ಸಿಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಹಾಜರಾತಿ ಕಡಿಮೆ ಹೊಂದಿದ್ದ. ಅಲ್ಲದೇ ತರಗತಿಯ ಇತರೆ ವಿದ್ಯಾರ್ಥಿಗಳ ಜೊತೆ ಜಗಳವಾಡುತ್ತಿದ್ದ ಕಾರಣ ಆತನನ್ನು 15 ದಿನಗಳ ಹಿಂದೆ ಪ್ರಿನ್ಸಿಪಾಲರು ಶಾಲೆಯಿಂದ ಅಮಾನತು ಮಾಡಿದ್ದರು ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ಹಿಂದೆ ಗುರಗಾಂವ್ ನ ರಯಾನ್ ಇಂಟರ್‍ನ್ಯಾಷನಲ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿ 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ.

  • ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

    ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

    ಚಂಡೀಗಢ: ಹಿಂದೂ ಸಂಘರ್ಷ ಸೇನೆ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆ ಪಂಜಾಬ್‍ನ ಅಮೃತ್‍ಸರ್‍ನಲ್ಲಿ ಸೋಮವಾರದಂದು ನಡೆದಿದೆ.

    ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಮುಖ್ಯಸ್ಥರಾದ ವಿಪಿನ್ ಕುಮಾರ್ ಕೊಲೆಯಾದ ವ್ಯಕ್ತಿ. ಇಲ್ಲಿನ ಭರತ್‍ನಗರದ ಮಾರ್ಕೆಟ್‍ನಲ್ಲಿ ಹಾಡಹಗಲೇ ಕೊಲೆ ನಡೆದಿದ್ದು, ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕುಮಾರ್ ಅವರು ಬೈಕ್‍ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಿದ್ದಾಗ ಏಕಾಏಕಿ ಗುಂಡೇಟು ಬಿದ್ದಿದೆ. ಕೂಡಲೇ ಕುಮಾರ್ ಕೆಳಗೆ ಬಿದ್ದಿದ್ದಾರೆ. ಕುಮಾರ್ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿಹೋಗಿದ್ದಾರೆ. ನಂತರ ಇಬ್ಬರು ದುಷ್ಕರ್ಮಿಗಳು ಬಂದು ಕುಮಾರ್ ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದ್ದಾರೆ. ಆರೋಪಿಗಳು ಕುಮಾರ್ ಅವರ ಮೇಲೆ ಸುಮಾರು 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

    ಘಟನೆಯ ಬಳಿಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕುಮಾರ್ ಅವರು ಹಿಂದೂ ಸಂಘರ್ಷ ಸೇನೆಯ ಮುಖಂಡರು ಮಾತ್ರವಲ್ಲದೆ ಬಡವರಿಗೆ ಆಹಾರ ನೀಡೋ ಕೆಲಸ ಮಾಡುವ ಜೈ ಶಂಕರ್ ವೆಲ್ಫೇರ್ ಸಸೈಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    https://www.youtube.com/watch?v=OVyek18dW_s

  • ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

    ಗಾಯಕಿ ಮೇಲೆ 6 ಬಾರಿ ಗುಂಡು ಹಾರಿಸಿ ಹತ್ಯೆ

    ಚಂಡೀಗಢ: ಹರಿಯಾಣದ ಗಾಯಕಿಯೊಬ್ಬರು ಪಾಣಿಪತ್‍ನಿಂದ ದೆಹಲಿಗೆ ಬರುವ ವೇಳೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    22 ವರ್ಷದ ಹರ್ಷಿತಾ ದಹಿಯಾ ಗುಂಡಿನ ದಾಳಿಗೆ ಬಲಿಯಾದ ಗಾಯಕಿ. ಹರ್ಷಿತಾ ಮೇಲೆ 6 ಬಾರಿ ಕತ್ತಿಗೆ ಹಾಗೂ ಹಣೆಗೆ ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.

    ಹರಿಯಾಣದ ಪಾಣಿಪತ್‍ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಯ ನರೇಲಾದಲ್ಲಿನ ಮನೆಗೆ ಹಿಂದಿರುಗುವಾಗ ಯುವತಿ ಮೇಲೆ ಗುಂಡಿನ ದಾಳಿ ನಡೆದಿದೆ. ಮಂಗಳವಾರ ಸಂಜೆ 4 ಗಂಟೆ ವೇಳೆಯಲ್ಲಿ ಯುವತಿಯ ಕಾರನ್ನು ಇಬ್ಬರು ವ್ಯಕ್ತಿಗಳು ಓವರ್ ಟೇಕ್ ಮಾಡಿ ಚಾಮರಾರಾ ಗ್ರಾಮದ ಬಳಿ ಅಡ್ಡಗಟ್ಟಿದ್ರು ಎಂದು ಹಿರಿಯ ಪೊಲೀಸ್ ಅಧಿಕಾರಿ ದೇಶ್ ರಾಜ್ ಹೇಳಿದ್ದಾರೆ.

    ಕಾರನ್ನು ಓವರ್ ಟೇಕ್ ಮಾಡಿದ ಬಳಿಕ ಇಬ್ಬರು ಅಪರಿಚಿತ ವ್ಯಕ್ತಿಗಳು ಹರ್ಷಿತಾ ಅವರ ಇಬ್ಬರು ಸಹಾಯಕರು ಹಾಗೂ ಕಾರು ಚಾಲಕನನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ರು. ನಂತರ ಹರ್ಷಿತಾ ಕಾರಿನೊಳಗೆ ಇದ್ದಾಗಲೇ ಆಕೆಯ ಮೇಲೆ 7 ಸುತ್ತು ಗುಂಡು ಹಾರಿಸಿದ್ದಾರೆ. 6 ಗುಂಡುಗಳು ಆಕೆಯ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಾಳಿಯ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಹರ್ಷಿತಾ ದಹಿಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ವಿಡಿಯೋವೊಂದನ್ನ ಹಾಕಿದ್ದರು. ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಆದ್ರೆ ಅದಕ್ಕೆಲ್ಲಾ ನಾನು ಹೆದರಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದರು. ಆದ್ರೆ ಜೀವಬೆದರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ಸಿಕಿಲ್ಲ ಎಂದು ವರದಿಯಾಗಿದೆ.

    ಸದ್ಯಕ್ಕೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಣಿಪತ್ ಆಸ್ಪತ್ರೆಗೆ ಕಳಿಸಲಾಗಿದೆ.

  • ಗೌರಿ ಲಂಕೇಶ್ ಹತ್ಯೆ- ರವೀಂದ್ರ ಕಲಾಕ್ಷೇತ್ರದಲ್ಲಿಂದು ಅಂತಿಮ ದರ್ಶನ

    ಗೌರಿ ಲಂಕೇಶ್ ಹತ್ಯೆ- ರವೀಂದ್ರ ಕಲಾಕ್ಷೇತ್ರದಲ್ಲಿಂದು ಅಂತಿಮ ದರ್ಶನ

    ಬೆಂಗಳೂರು: ಮಂಗಳವಾರ ರಾತ್ರಿ ಹೋರಾಟಗಾರ್ತಿ, ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ನಡೆದಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

    ಮರಣೋತ್ತರ ಪರೀಕ್ಷೆಯ ಬಳಿಕ ಅಂದರೆ 10 ಗಂಟೆಯ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಸಿಸಿಟಿವಿಯಲ್ಲಿ ಗೌರಿ ಅವರ ಹತ್ಯೆಯ ಸಂಪೂರ್ಣ ಚಿತ್ರಣ ಸೆರೆಯಾಗಿದ್ದು, ಆರೋಪಿಗಳ ಚಹರೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಮಂಗಳವಾರ ರಾತ್ರಿ ಗಾಂಧಿ ಬಜಾರ್ ಕಚೇರಿಯಿಂದ ಫಾಲೋ ಮಾಡಿದ ಆಗಂತುಕರು ಗೌರಿ ಅವರು ಮನೆಯ ಒಳಗಡೆ ಹೋಗುವಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಗೊಳಗಾದ ಗೌರಿ ಲಂಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    https://www.youtube.com/watch?v=E5KklglYg8o

  • ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಫರೀದ್‍ಕೋಟ್: ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ.

    ಸ್ಥಳೀಯ ಉದ್ಯಮಿಯಾದ ರವೀಂದರ್ ಪಪ್ಪು ಕೊಚ್ಚರ್ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ ಸುಮಾರು 3ಗಂಟೆ ವೇಳೆಯಲ್ಲಿ ರವೀಂದರ್ ಅವರನ್ನ ಅವರ ಮಿಲ್ ಹೊರಗಡೆ ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಫರೀದ್‍ಕೋಟ್ ಜಿಲ್ಲೆಯ ಜೈತೋ ನಗರದ ಸ್ಥಳೀಯ ಗ್ಯಾಂಗ್‍ವೊಂದರ ಸದಸ್ಯ ಎನ್ನಲಾಗಿದೆ.

    ರವೀಂದರ್ ಅವರು ಮಿಲ್‍ನ ಗೇಟ್ ಹೊರಗಡೆ ಕಾರ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರ್ ಬಂದಿದೆ. ಕೂಡಲೇ ವ್ಯಕ್ತಿಯೊಬ್ಬ ಕಾರಿನಿಂದ ಕೆಳಗಿಳಿದು ಡ್ರೈವರ್ ಸೀಟ್‍ನ ಕಿಟಕಿ ಮೂಲಕವೇ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ವ್ಯಕ್ತಿ ಸತ್ತಿದ್ದಾರೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ 5ನೇ ಬಾರಿಗೆ ಗುಂಡು ಹಾರಿಸಿ ಕಾರ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರವೀದರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಲೆ ಹಾಗೂ ಕತ್ತಿನ ಭಾಗಕ್ಕೆ ಗುಂಡು ತಗುಲಿದ್ದವು ಎಂದು ಪೊಲೀಸರು ಹೇಳಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ದಾಳಿಕೋರ ವ್ಯಕ್ತಿಯ ಕಾರಿನಲ್ಲಿ ಇಬ್ಬರು ಇದ್ದರು. ಒಬ್ಬ ಚಾಲಕನ ಸೀಟ್‍ನಲ್ಲಿ ಕುಳಿತಿದ್ದ. ಮತ್ತೊಬ್ಬ ಕಾರಿನಿಂದ ಕೆಳಗಿಳಿದು ಬಂದು ಗುಂಡು ಹಾರಿಸಿದ್ದಾನೆ. ವಾಹನದ ಗುರುತು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಫರೀದ್‍ಕೋಟ್‍ನ ಎಸ್‍ಎಸ್‍ಪಿ ನಾನಕ್ ಸಿಂಗ್ ಹೇಳಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದೇ ವರ್ಷ ಫೆಬ್ರವರಿಯಲ್ಲಿ ಮೂವರು ಗ್ಯಾಂಗ್‍ಸ್ಟರ್‍ಗಳು ಮಿಲ್ ಹೊರಗಡೆ ಗಾಳಿಯಲ್ಲಿ ಗುಂಡು ಹಾರಿಸಿ, ರವೀಂದರ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರವೀಂದರ್ ಅವರು ಆ ಗ್ಯಾಂಗ್‍ಸ್ಟರ್‍ಗಳಿಗೆ ಸುಲಿಗೆ ಹಣ ನೀಡಲು ನಿರಾಕರಿಸಿದ್ರು. ಅವರ ಪ್ರಾಣಕ್ಕೆ ಅಪಾಯವಿದ್ದಿದ್ದರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂವರನ್ನ ಬಂಧಿಸಲಾಗಿತ್ತು. ಒಂದು ವಾರದ ನಂತರ ಮೊಗಾದಲ್ಲಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಇದೇ ತಂಡ ಮತ್ತೆ ದಾಳಿ ನಡೆಸಿರಬಹುದು ಎನ್ನಲಾಗಿದೆ.

    ರವೀಂದರ್ ಅವರ ಪ್ರಾಣಕ್ಕೆ ಅಪಾಯವಿದ್ದರೂ ಸೂಕ್ತ ಭದ್ರತೆ ಒದಗಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಘಟನೆಯ ನಂತರವೂ ನಮ್ಮ ಅಣ್ಣನಿಗೆ ಪೊಲೀಸ್ ಭದ್ರತೆ ಯಾಕೆ ನೀಡಲಿಲ್ಲ? ಅವರಿಗಾದ ಗತಿ ನೋಡಿ ನಮಗೂ ಜೀವಭಯವಾಗುತ್ತಿದೆ ಎಂದು ಮೃತ ರವೀಂದರ್ ಅವರ ಸಹೋದರ ನರೇಂದರ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.