Tag: Shoonya

  • ಹೆಡ್ ಬುಷ್ ಡೈರೆಕ್ಟರ್ ಇದೀಗ ಹೀರೋ

    ಹೆಡ್ ಬುಷ್ ಡೈರೆಕ್ಟರ್ ಇದೀಗ ಹೀರೋ

    ಹೆಡ್ ಬುಷ್ ಮತ್ತು ರೋಸಿ ಸಿನಿಮಾಗಳ ಸೂತ್ರಧಾರ ಶೂನ್ಯ ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಸದ್ಯ ಲೂಸ್ ಮಾದ ಯೋಗಿ 50ನೇ ಚಿತ್ರ ರೋಸಿ ನಿರ್ದೇಶನದಲ್ಲಿ ಬ್ಯುಸಿಯಾಗಿ ಅವರು ಈ ಮಧ್ಯೆ ‘ಲಾರ್ಡ್ ಗಾಗಾ’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ನಿರ್ದೇಶನ ಪಕ್ಕಕ್ಕಿಟ್ಟು ಶೂನ್ಯ ಲಾರ್ಡ್ ಗಾಗಾ ಮೂಲಕ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.

    ಶೂನ್ಯ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾಗೆ ಲಾರ್ಡ್ ಗಾಗಾ ಎಂಬ ವಿಭಿನ್ನ ಶೀರ್ಷಿಕೆ  ಇಡಲಾಗಿದೆ. ಪ್ರೇಮಿಗಳ ದಿನವಾದ ಇಂದು ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಈ ಹಿಂದೆ ಗಿಲ್ಕಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವೈಕೆ ಲಾರ್ಡ್ ಗಾಗಾ ಸಿನಿಮಾ ಮೂಲಕ ಹೊಸಬಗೆ ಹರವಿಡೋದಿಕ್ಕೆ ಹೊರಟ್ಟಿದ್ದಾರೆ.

    ಲಾರ್ಡ್ ಗಾಗಾ ಸಿನಿಮಾಗೆ ಶೂನ್ಯ ಬರೀ ಪಾತ್ರಧಾರ ಅಷ್ಟೇ ಅಲ್ಲ. ನಿರ್ಮಾಪಕರು ಕೂಡ. ತಮ್ಮ ಗೆಳೆಯ ಮುಖಿ ಜೊತೆಗೂಡಿ ತಮ್ಮದೇ ಝೀರೋ ಗ್ರಾವಿಟಿ ಫಿಲ್ಮಂ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಈ ನಿರ್ಮಾಣ ಸಂಸ್ಥೆಯಡಿ ಲಾರ್ಡ್ ಗಾಗಾ ಚಿತ್ರವನ್ನು ಮುಖಿ ಮತ್ತು ಶೂನ್ಯ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ.

    ಒಂದಷ್ಟು ಸಿನಿಮೋತ್ಸಾಹಿಗಳೇ ಸೇರಿ ತಯಾರಿಸುತ್ತಿರುವ ಲಾರ್ಡ್ ಗಾಗಾ ಸಿನಿಮಾಗೆ ಯುವ ಪ್ರತಿಭೆ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ ಮಾಡಲಿದ್ದು, ಜೀವನ್ ಕ್ಯಾಮೆರಾ ಹಿಡಿಯಲಿದ್ದಾರೆ. ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಶುರುವಾಗ್ತಿದ್ದು, ಉಡುಪಿ, ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ದುನಿಯಾ (Duniya) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಯೋಗಿ ಅಲಿಯಾಸ್ ಲೂಸ್ ಮಾದ ಯೋಗಿ (Loose Mada Yogi) ಈವರೆಗೂ ಬರೋಬ್ಬರಿ ಐವತ್ತು ಸಿನಿಮಾ ಪೂರೈಸಿದ್ದಾರೆ. ಅವರ ಐವತ್ತನೇ ಚಿತ್ರಕ್ಕೆ ‘ರೋಜಿ’ (Rosie) ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ (Dolly Dhananjay) ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

    ಹೆಡ್ ಬುಷ್ ಚಿತ್ರದ ನಂತರ ಶೂನ್ಯ (Shoonya ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ನನ್ನ ಆತ್ಮೀಯ ಗೆಳೆಯ. ‘ರೋಜಿ’  ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ ಹೆಡ್ ಬುಷ್ ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.

    ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.

    ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ ರೋಜಿಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ ರೋಜಿ.  ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ.  ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.