Tag: shoelace

  • ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ಪನರ್ ಬಳಸದೇ ಬಿಯರ್ ಬಾಟಲ್‍ನನ್ನು ಹೇಗೆ ತೆಗೆಯಬೇಕೆಂಬುವುದನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತೋರಿಸಿದ್ದಾನೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಹಲ್ಲಿನ ಸಹಾಯದಿಂದ ಅಥವಾ ಮೇಜಿನ ತುದಿಯ ಭಾಗದಿಂದ ಬಿಯರ್ ಬಾಟಲ್‍ನ ಮುಚ್ಚಳವನ್ನು ತೆರೆಯುವುದನ್ನು ನೋಡಿರುತ್ತೇವೆ. ಆದರೆ ಈ ವ್ಯಕ್ತಿ ತನ್ನ ಶೂ ಲೇಸ್‍ನನ್ನು ಬಳಸಿಕೊಂಡು ಬಿಯರ್ ಬಾಟಲ್ ಮುಚ್ಚಳವನ್ನು ಓಪನ್ ಮಾಡಿದ್ದಾನೆ. ಬಿಯರ್ ಪ್ರಿಯರು ಬಾಟಲ್ ಮುಚ್ಚಳ ತೆಗೆಯಲು ಈ ಟ್ರಿಕ್ಸ್‍ನನ್ನು ಬಳಸಬಹುದಾಗಿದೆ. ಈ ವೀಡಿಯೋವನ್ನು ‘ಹೋಲ್ಡ್ ಮೈ ಬಿಯರ್’ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇಚ್ಛಾ ಶಕ್ತಿ ಹೊಂದಿದ್ದರೆ, ಒಂದು ದಾರಿ ಇರುತ್ತದೆ’ ಎಂದು ಕ್ಯಾಪ್ಷನ್ ಬರೆಯಲಾಗಿದೆ.

    ವೀಡಿಯೋದಲ್ಲಿ ವ್ಯಕ್ತಿ ಮೇಜಿನ ಮೇಲೆ ಕಾಲು ಇರಿಸಿಕೊಂಡು, ಶೂ ಲೇಸ್‍ನನ್ನು ಬಿಯರ್ ಬಾಟಲ್ ಸುತ್ತಲೂ ಸುತ್ತುತ್ತಾನೆ. ಬಳಿಕ ಜೋರಾಗಿ ಶೂ ಲೇಸ್‍ನನ್ನು ಮೇಲಕ್ಕೆ ಎಳೆಯುತ್ತಾನೆ. ಆಗ ಬಾಟಲ್ ಕ್ಯಾಪ್ ಓಪನ್ ಆಗುತ್ತದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 37,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಲವು ನೆಟ್ಟಿಗರು ಕಾಮೆಂಟ್ ನೀಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.