Tag: shobitha dhulipala

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ಹೈದರಾಬಾದ್: ಕೆಲ ವರ್ಷಗಳ ಡೇಟಿಂಗ್ ಬಳಿಕ ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ನಟಿ ಶೋಭಿತಾ (Sobhita Dhulipala)  ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವೇಳೆ ಮಗನ ಮದುವೆ ಕಂಡು ತಂದೆ ನಾಗಾರ್ಜುನ (Nagarjuna Akkineni) ಭಾವುಕರಾಗಿದ್ದಾರೆ.

    ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ನಡೆದಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆ ನಡೆಸಿದ್ದಾರೆ.

    ಮಗನ ಮದುವೆ ಫೋಟೋ ಎಕ್ಸ್‌ನಲ್ಲಿ ಹಂಚಿಕೊಂಡು ನಾಗಾರ್ಜುನ ಭಾವುಕರಾಗಿದ್ದಾರೆ. ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು ಹಾಗೇ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವಿಬ್ಬರು ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಬರೆದು ಎಕ್ಸ್‌ನಲ್ಲಿ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದರು.

  • ನಾಗಚೈತನ್ಯ ಜೊತೆಗಿನ ಮದುವೆ ಸುದ್ದಿಗೆ ಮೌನ ಮುರಿದ ನಟಿ ಶೋಭಿತಾ

    ನಾಗಚೈತನ್ಯ ಜೊತೆಗಿನ ಮದುವೆ ಸುದ್ದಿಗೆ ಮೌನ ಮುರಿದ ನಟಿ ಶೋಭಿತಾ

    ಟಾಲಿವುಡ್ (Tollywood) ಅಂಗಳದಲ್ಲಿ ಸಮಂತಾ (Samantha) ಜೊತೆಗಿನ ಡಿವೋರ್ಸ್ (Divorce) ನಂತರ ಶೋಭಿತಾ ಹಾಗೂ ನಾಗಚೈತನ್ಯ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿತ್ತು. ಈಗ ನಟನ ಜೊತೆಗಿನ ಮದುವೆ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಟ ವಿಜಯ್ ಜೊತೆಗಿನ ಮದುವೆ ಬಗ್ಗೆ ಕೀರ್ತಿ ಸುರೇಶ್ ತಾಯಿ ಸ್ಪಷ್ಟನೆ

    ಸೌತ್‌ನಲ್ಲಿ `ಮಜಿಲಿ’ ಜೋಡಿ, ಸ್ಟಾರ್ ದಂಪತಿಗಳಾಗಿ ಗುರುತಿಸಿಕೊಂಡಿದ್ದರು. ದಾಂಪತ್ಯದಲ್ಲಿ ಬಿರುಕಾದ ಕಾರಣ ಸ್ಯಾಮ್ ಮತ್ತು ನಾಗ್ ಬೇರೆಯಾದರು. ಈ ಬೆನ್ನಲ್ಲೇ ನಟ ನಾಗಚೈತನ್ಯ, ಶೋಭಿತಾ (Shobitha) ಅವರನ್ನ ಪ್ರೀತಿಸುತ್ತಿದ್ದಾರೆ. ಇಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಸುದ್ದಿ ಎಲ್ಲಾ ಕಡೆ ವೈರಲ್ ಆಗಿತ್ತು.

    ಈಗ ಎಲ್ಲಾ ಊಹಾಪೋಹಗಳಿಗೂ ಶೋಭಿತಾ ಮೌನ ಮುರಿದಿದ್ದಾರೆ. ನಾನು ಈ ವದಂತಿಯ ಬಗ್ಗೆ ಕೇಳಿದ್ದೇನೆ. ನಾಗಚೈತನ್ಯ ಅವರು ನನ್ನ ಸೀನಿಯರ್. ಅವರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಆದರೆ ಅವರು ನನ್ನ ಜೊತೆ ಟಚ್‌ನಲ್ಲಿ ಇಲ್ಲಾ ಎಂದು ಹೇಳುವ ಮೂಲಕ ಮದುವೆ ಸುದ್ದಿಗೆ ಶೋಭಿತಾ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೋಭಿತಾ ಜೊತೆ ಸಮಂತಾ ಮಾಜಿ ಪತಿ ಡೇಟಿಂಗ್ ನಿಜಾನಾ? ಇಲ್ಲಿದೆ ಅಸಲಿ ವಿಷ್ಯ

    ಶೋಭಿತಾ ಜೊತೆ ಸಮಂತಾ ಮಾಜಿ ಪತಿ ಡೇಟಿಂಗ್ ನಿಜಾನಾ? ಇಲ್ಲಿದೆ ಅಸಲಿ ವಿಷ್ಯ

    ಮಂತಾ ಮಾಜಿ ಪತಿ ನಾಗಚೈತನ್ಯ(Nagachaitanya) ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ತಿಂಗಳುಗಳಿಂದ ಶೋಭಿತಾ (Shobitha) ಜೊತೆ ನಾಗಚೈತನ್ಯ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಡೇಟಿಂಗ್ ವಿಚಾರಕ್ಕೆ ಪುಷ್ಠಿ ನೀಡುವಂತಹ ಈ ಜೋಡಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಈ ವರ್ಷ ನಾಗ ಚೈತನ್ಯ ಸಿನಿಮಾ ವಿಚಾರಕ್ಕಿಂತ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಮಂತಾ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ನಾಗ್ ಇದೀಗ ಮತ್ತೆ ಪ್ರೀತಿ-ಪ್ರೇಮದ ವಿಚಾರಕ್ಕೆ ಸೌಂಡ್ ಮಾಡ್ತಿದ್ದಾರೆ. ನಾಗಚೈತನ್ಯ ಮತ್ತೋರ್ವ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ.

    ತೆಲುಗು ನಟಿ ಶೋಭಿತಾ ಜೊತೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ.ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಹರಿದಾಡುತ್ತಿದ್ದ ಸುದ್ದಿಗೆ ಪುಷ್ಠಿ ನೀಡುವಂತೆ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರ ಫೋಟೋ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಶೋಭಿತಾ ಮತ್ತು ನಾಗಚೈತನ್ಯ ಇಬ್ಬರೂ ಒಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರೂ ಉದ್ದ ಜಾಕೆಟ್ ಹಾಕಿ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ. ಅಂದಹಾಗೆ ಈ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ಫೋಟೋ ಫೇಕ್ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಇಬ್ಬರ ಡೇಟಿಂಗ್ ರೂಮರ್ ನಿಜ ಎಂದು ಹೇಳುತ್ತಿದ್ದಾರೆ. ಶೋಭಿತಾ ಕಾರಣಕ್ಕೆ ನಾಗಚೈತನ್ಯ ಸಮಂತಾ ಅವರಿಂದ ದೂರ ಆದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಮಂತಾ ಅವರಿಗೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಬೇಸರ ಹೊರಹೊಕುತ್ತಿದ್ದಾರೆ. ನಾಗ್ ಲೈಫ್‌ನಲ್ಲಿ ಶೋಭಿತಾ ಎಂಟ್ರಿಯಿಂದ ಎಲ್ಲವೂ ಬದಲಾಗಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಲಿವುಡ್‌ನತ್ತ ಮುಖ ಮಾಡಿದ ದಕ್ಷಿಣದ ಸ್ಟಾರ್ಸ್‌

    ಹಾಲಿವುಡ್‌ನತ್ತ ಮುಖ ಮಾಡಿದ ದಕ್ಷಿಣದ ಸ್ಟಾರ್ಸ್‌

    ಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬ ಮಾತು ಸತ್ಯ ಎಂಬುದನ್ನು ಈ ಸ್ಟಾರ್ಸ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಸದ್ಯ ತಾವು ಇರುವ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿರುವ ಕಲಾವಿದರಿಗೆ ಸಖತ್ ಡಿಮ್ಯಾಂಡ್ ಇರಬೇಕಾದರೆ ಪಕ್ಕದ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ದಕ್ಷಿಣದ ಸ್ಟಾರ್ಸ್ ಈಗ ಹಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    ಬಾಲಿವುಡ್ ರಾಧೆ ಆಲಿಯಾ ಭಟ್ ಇತ್ತೀಚೆಗಷ್ಟೇ ಹಾಲಿವುಡ್‌ನ `ಹಾರ್ಟ್ ಆಫ್ ಸ್ಟೋನ್’ ಸಿನಿಮಾದ ಚಿತ್ರೀಕರಣ ಮುಗಿಸಿ, ಮನೆಗೆ ಮರಳಿದ್ದರು. ಬೇಬಿ ಬಂಪ್ ಲುಕ್ ಮೂಲಕ ಸಖತ್ ವೈರಲ್ ಆಗಿದ್ದರು. ಸದ್ಯ ಹಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರ ಮುಗಿಸಿರುವ ಆಲಿಯಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳಿವೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್

    ಕಾಲಿವುಡ್ ರಂಗದಲ್ಲಿ ಹೆಸರುವಾಸಿಯಾಗಿರುವ ಧನುಷ್ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಧನುಷ್ ನಟನೆಯ ಚೊಚ್ಚಲ ಚಿತ್ರ ಇದೇ ಜುಲೈ 22ಕ್ಕೆ ತೆರೆಗೆ ಅಪ್ಪಳಿಸಲಿದೆ.

    `ವಿಕ್ರಾಂತ್ ರೋಣ’ ಬೆಡಗಿ ರಾ ರಾ ರಕ್ಕಮ್ಮ ಕೂಡ `ಟೆಲ್ ಇಟ್ ಲೈಕ್ ಎ ವುಮೆನ್’ ಎಂಬ ಹಾಲಿವುಡ್ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಈ ಚಿತ್ರವನ್ನು 8 ಮಹಿಳಾ ನಿರ್ದೇಶಕರು ನಿರ್ದೇಶನ ಮಾಡಿರೋದು ವಿಶೇಷ.

    `ದಿ ಫ್ಯಾಮಿಲಿ ಮೆನ್ 2′ ಮತ್ತು `ಪುಷ್ಪ’ ಸಕ್ಸಸ್ ನಂತರ `ಅರೆಂಜ್‌ಮೆಂಟ್ ಆಫ್ ಲವ್’ ಚಿತ್ರದ ಮೂಲಕ ಹಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಕೂಡ ಹಾಲಿವುಡ್‌ನ ಥ್ರಿಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. `ಮಂಕಿ ಮ್ಯಾನ್’ ಎಂಬ ಚಿತ್ರದಲ್ಲಿ ಶೋಭಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ನಟನೆಗೆ ಭಾಷೆಯ ಬೇಲಿಯಿಲ್ಲ ಅಂತಾ ಪ್ರೂವ್ ಮಾಡಿ, ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗ ಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]