Tag: Shobitha

  • ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

    ಮಾಜಿ ಪತ್ನಿ ಜೊತೆಗಿನ ಡಿವೋರ್ಸ್‌ ನಿರ್ಧಾರದ ಬಗ್ಗೆ ನಾಗಚೈತನ್ಯಗೆ ಇದ್ಯಾ ಬೇಸರ?

    ಟಾಲಿವುಡ್‌ನ ಬೆಸ್ಟ್ ಜೋಡಿ ಎಂದೇ ಖ್ಯಾತಿ ಗಳಿಸಿದ್ದ ಸಮಂತಾ- ನಾಗ್‌ಚೈತನ್ಯ (Nagachaitanya) ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಶಾಕ್ ನೀಡಿದ್ದರು. ಡಿವೋರ್ಸ್ ಪಡೆದು ಒಂದು ವರ್ಷ ಕಳೆದರೂ ತವರ ಬಗ್ಗೆ ಗಾಸಿಪ್ ಹಬ್ಬೋದು ಮಾತ್ರ ಕಮ್ಮಿಯಾಗಿಲ್ಲ. ಇದೀಗ ಸಮಂತಾ (Samantha) ಜೊತೆಗಿನ ಡಿವೋರ್ಸ್ (Divorce) ನಿರ್ಧಾರದ ಬಗ್ಗೆ ಬೇಸರವಿದ್ಯಾ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    ಸ್ಯಾಮ್- ನಾಗ್ ಅವರ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳತ್ತ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಸಿನಿಮಾ- ಹೊಸ ಮನೆ ಶುಭಾರಂಭ, ಶೋಭಿತಾ ಜೊತೆ ಡೇಟಿಂಗ್ ಅಂತಾ ಸುದ್ದಿಯಲ್ಲಿದ್ದಾರೆ. ಸಮಂತಾ ಬಾಲಿವುಡ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ನಟ ನಾಗಚೈತನ್ಯ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಿಮ್ಮ ಜೀವನದ ಯಾವ ನಿರ್ಧಾರದ ಬಗ್ಗೆ ವಿಷಾದವಿದೆ (Regret) ಎಂದು ಕೇಳಲಾಗಿದೆ.

    ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲವೂ ಒಂದು ರೀತಿಯ ಪಾಠ ಎಂದು ಹೇಳಿದ್ದಾರೆ. ನಾಗ್ ಉತ್ತರಕ್ಕೆ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ. ಸಮಂತಾ ಜೊತೆಗಿನ ಡಿವೋರ್ಸ್ಗೆ ವಿಷಾದವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

  • ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ

    ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ

    ಮಾಜಿ ದಂಪತಿ ಸಮಂತಾ- ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಪಡೆದು ಒಂದೂವರೆ ವರ್ಷವಾಗಿದ್ದರೂ ಕೂಡ ಯಾವ ವಿಚಾರಕ್ಕೆ ಇಬ್ಬರು ಡಿವೋರ್ಸ್ ಪಡೆದಿದ್ದಾರೆ ಎಂಬುದು ಇದುವರೆಗೂ ರಿವೀಲ್ ಆಗಿಲ್ಲ. ಸದ್ಯ ತಮ್ಮ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ- ಶೋಭಿತಾ (Sobhitha) ಡೇಟಿಂಗ್ ಬಗ್ಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿ ಸ್ವತಃ ಸಮಂತಾ(Samantha) ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ನಟಿ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿರುವ ವಿಚಾರ ಅಂದರೆ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಸುದ್ದಿ, ಡಿವೋರ್ಸ್ ಆದ ಕೆಲವೇ ತಿಂಗಳುಗಳಿಗೆ ಎಂಗೇಜ್ ಆದ್ರಾ ಅಂತಾ ನೆಟ್ಟಿಗರು ನಟನ ಮೇಲೆ ಕಿಡಿಕಾರುತ್ತಿದ್ದರೆ, ಸಮಂತಾ ಮಾಜಿ ಪತಿ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

    ಯಾರು ಯಾರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರ ಜೊತೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಸಮಂತಾ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಸಮಂತಾ ಕಣ್ಣಿಗೆ ಬಿದ್ದಿದೆ. ಇದನ್ನು ನಾನು ಹೇಳಲೇ ಇಲ್ಲ ಎಂದು ನಟಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಸೌತ್ ನಟಿ ಸಮಂತಾ ಸದ್ಯ ‘ಶಾಕುಂತಲಂ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಏ.14ಕ್ಕೆ ಸಿನಿಮಾ ತೆರೆಗೆ ಬರಲಿದೆ. `ಯಶೋದ’ ಬಳಿಕ ಶಾಕುಂತಲೆಯಾಗಿ ಸಮಂತಾ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

  • ಮಾಜಿ ಪತಿ ನಾಗಚೈತನ್ಯ- ಶೋಭಿತಾ ಡೇಟಿಂಗ್ ಬಗ್ಗೆ ಮೌನ ಮುರಿದ ಸಮಂತಾ

    ಮಾಜಿ ಪತಿ ನಾಗಚೈತನ್ಯ- ಶೋಭಿತಾ ಡೇಟಿಂಗ್ ಬಗ್ಗೆ ಮೌನ ಮುರಿದ ಸಮಂತಾ

    ಸೌತ್ ಚಿತ್ರ ಜಗತ್ತಿನ ಪ್ರತಿಭಾನ್ವಿತ ನಟಿ ಸಮಂತಾ (Samantha), ಸದ್ಯ ಶಾಕುಂತಲೆಯಾಗಿ ಬರಲು ರೆಡಿಯಾಗಿದ್ದಾರೆ. `ಶಾಕುಂತಲಂ’ ಚಿತ್ರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಜಿ ಪತಿ ನಾಗ ಚೈತನ್ಯ- ಶೋಭಿತಾ (Shobitha) ಅವರ ಡೇಟಿಂಗ್ ಬಗ್ಗೆ ಸ್ಯಾಮ್ ಮಾತನಾಡಿದ್ದಾರೆ.

    `ಯಶೋದ’ (Yashoda) ಸೂಪರ್ ಸಕ್ಸಸ್ ನಂತರ Shakuntalam ಚಿತ್ರ ರಿಲೀಸ್‌ಗೆ ರೆಡಿಯಿದೆ. ಏ.14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ದೇವ್ ಮೋಹನ್ ಜೊತೆ ಸಮಂತಾ ಶಾಕುಂತಲೆಯಾಗಿ ಮಿಂಚಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಸಮಂತಾ, ಯಾರು ಯಾರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರ ಜೊತೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಸಮಂತಾ ಹೇಳಿದ್ದಾರೆ.

    ಯಾರ್ ಜೊತೆಯಾದ್ರು ಸಂಬಂಧ ಇಟ್ಕೊಳ್ಳಿ ನನಗೆ ಬೇಕಿಲ್ಲ. ಆ ಹುಡುಗಿಯಾದ್ರು ಖುಷಿಯಾಗಿರಬೇಕು ಎಂದು ಸಮಂತಾ ನೀಡಿರುವ ಹೇಳಿಕೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

  • ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ ಅಧಿಕಾರಿಯಾಗಿ ಹೋಗಿದ್ದೇನೆ: ತಹಶೀಲ್ದಾರ್ ಶೋಭಿತ

    ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ ಅಧಿಕಾರಿಯಾಗಿ ಹೋಗಿದ್ದೇನೆ: ತಹಶೀಲ್ದಾರ್ ಶೋಭಿತ

    – ಮಸೀದಿಯಲ್ಲಿ ಇದ್ದ 10 ಜನರ ಮೇಲೆ ಕೇಸ್, ಮುಖಂಡರಿಗೆ ವಾರ್ನಿಂಗ್

    ಕೋಲಾರ: ಲಾಕ್‍ಡೌನ್ ನಡುವೆ ಮಸೀದಿಯಲ್ಲಿ ನಮಾಜ್ ಸಲ್ಲಿಸಲು ಹೋಗಿದ್ದ 10 ಮಂದಿಯನ್ನು ವಶಕ್ಕೆ ಪಡೆದು ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಕೋಲಾರ ತಹಶೀಲ್ದಾರ್ ಶೋಭಿತ ಅವರು ಹೇಳಿದ್ದಾರೆ.

    ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ನನಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಬಗ್ಗೆ ದೂರು ನೀಡಿದರು. ಆ ಸಮಯದಲ್ಲಿ ನಾನು ಕೂಡ ರೌಂಡ್ಸ್ ನಲ್ಲಿ ಇದ್ದೆ. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 10 ಮಂದಿ ಮಸೀದಿಯೊಳಗೆ ನಮಾಜ್ ಮಾಡುತ್ತಿರುವುದು ಕಂಡು ಬಂತು ಎಂದು ಹೇಳಿದ್ದಾರೆ.

    ನಮ್ಮ ಕೋಲಾರ ಗ್ರೀನ್ ಝೋನ್ ಅಲ್ಲಿ ಇರುವ ಕಾರಣ ನಮ್ಮ ಜನರಿಗೆ ಸ್ವಲ್ಪ ಗಂಭೀರತೆ ಕಡಿಮೆಯಾಗಿದೆ. ಹೀಗಾಗಿ ಆ ಮಸೀದಿ ನಗರದ ಮಧ್ಯಭಾಗದಲ್ಲಿ ಇದ್ದು ಅದರ ಸುತ್ತಮುತ್ತಾ ಬಟ್ಟೆ ಅಂಗಡಿಯಂತಹ ಕೆಲ ಶಾಪ್‍ಗಳು ಇವೆ. ಇಲ್ಲಿನ ಕೆಲ ಯುವಕರು ರಜೆ ಇರುವ ಕಾರಣ ನಮಾಜ್ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಾಗ ಅವರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿ, ಮಸೀದಿ ಮುಖಂಡರಿಗೂ ಎಚ್ಚರಿಕೆ ನೀಡಿದ್ದೇವೆ ಎಂದು ಶೋಭಿತ ತಿಳಿಸಿದರು.

    ಕೊರೊನಾ ತಡೆಯಲು ನಮ್ಮ ತಾಲೂಕಿನ ಎಲ್ಲ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ನಾನು ಕೂಡ ಪರಿಶೀಲನೆ ಹೋಗುತ್ತೇನೆ. ಅದರೂ ಜನರು ನಮಗೆ ತಿಳಿಯದ ಹಾಗೇ ಈ ರೀತಿ ಮಾಡುತ್ತಾರೆ. ನಾವು ಎಷ್ಟೇ ಹೇಳಿದರು ಅದೂ ಜನರ ಮನಸ್ಸಿನಲ್ಲಿ ಬರಬೇಕು. ಅವರನ್ನು ಅವರು ಮೊದಲು ರಕ್ಷಣೆ ಮಾಡಿಕೊಳ್ಳಬೇಕು. ನಾವು ಏನೇ ಹೇಳಿದರು ಜನರು ತಮಗೆ ತಾವೇ ತಿಳಿದುಕೊಳ್ಳಬೇಕು ಎಂದು ಶೋಭಿತ ಅಭಿಪ್ರಾಯ ವ್ಯಕ್ತಪಡಿಸಿದರು.

    ಇದೇ ವೇಳೆ ಮಹಿಳೆಯಾಗಿ ಮಸೀದಿಗೆ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ನಾನು ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ. ಆದರೆ ಓರ್ವ ಅಧಿಕಾರಿಯಾಗಿ ನಾನು ಮಸೀದಿಯೊಳಗೆ ಹೋದೆ. ನನಗೆ ವೈಯಕ್ತಿಕವಾಗಿ ಯಾವುದೇ ಧರ್ಮದ ನಂಬಿಕೆಯನ್ನು ಘಾಸಿಗೊಳಿಸುವ ಉದ್ದೇಶವಿಲ್ಲ. ನನಗೆ ನಮ್ಮ ಜಿಲ್ಲೆ ಗ್ರೀನ್ ಝೋನ್ ಅಲ್ಲಿ ಇದೆ. ಅದು ಹಾಗೇ ಮುಂದುವರಿಯಬೇಕು ಅದು ನನ್ನ ಉದ್ದೇಶ. ಮಸೀದಿಯವರು ಮಹಿಳೆಯಾಗಿ ಒಳಗೆ ಹೋಗಿದಕ್ಕೆ ಪರವಾಗಿಲ್ಲ ಏನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ ಎಂದು ಶೋಭಿತ ತಿಳಿಸಿದ್ದಾರೆ.

    ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ತೆರಳಿದ್ದ ತಹಶೀಲ್ದಾರ್ ಶೋಭಿತ, ಲಾಕ್‍ಡೌನ್ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಜೊತೆಗೆ ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು, ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು? ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರು.