Tag: shobhitha shivanna

  • ‘ಸಾಯಬೇಕು ಅಂದ್ರೆ ನೀನು ಸಾಯಿ’- ಶೋಭಿತಾ ಬರೆದ ಡೆತ್‌ನೋಟ್‌ನಲ್ಲಿ ಹೊಸ ಟ್ವಿಸ್ಟ್

    ‘ಸಾಯಬೇಕು ಅಂದ್ರೆ ನೀನು ಸಾಯಿ’- ಶೋಭಿತಾ ಬರೆದ ಡೆತ್‌ನೋಟ್‌ನಲ್ಲಿ ಹೊಸ ಟ್ವಿಸ್ಟ್

    ‘ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ (Shobhitha) ಡಿ.1ರಂದು ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದಾ ಪಾಸಿಟಿವಿಟಿಯಿಂದ ಇರುವ ವ್ಯಕ್ತಿ ಸೂಸೈಡ್ ಮಾಡಿಕೊಂಡಿರೋದು ಅನೇಕರಿಗೆ ಶಾಕ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್‌ನ ಗಚ್ಚಿಬೌಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಶೋಭಿತಾ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪೋಲಿಸರಿಗೆ ನಟಿ ಬರೆದ ಲೆಟರ್ ಸಿಕ್ಕಿದೆ. ಇದನ್ನೂ ಓದಿ:BBK 11: ಉಲ್ಟಾ ಹೊಡೆದ ಶೋಭಾ ಶೆಟ್ಟಿ- ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದ ನಟಿ

    ಪತಿ ಜೊತೆ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದ ಶೋಭಿತಾ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದು ಪೊಲೀಸರ ಕೈಗೆ ಸಿಕ್ಕಿದೆ. ಅದರಲ್ಲಿ ‘ನೀನು ಸಾಯಬಹುದು ಅಂದ್ರೆ ನೀನು ಸಾಯಿ’ ಎಂದು ಬರೆಯಲಾಗಿದೆ. ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ ಎಂದು ಬರೆಯಲಾಗಿದೆ. ಇದರ ಅರ್ಥಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟಿಯ ಮನೆಯ ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಾನಸಿಕ ಸಮಸ್ಯೆಯಿಂದ ಸೂಸೈಡ್ ಮಾಡಿಕೊಂಡಿರುವ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ? ಎಂಬುದನ್ನು ಕೂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮುಂದೆ ಪ್ರಕರಣದಲ್ಲಿ ಏನೆಲ್ಲಾ ತಿರುವು ಸಿಗಲಿದೆ ಕಾದುನೋಡಬೇಕಿದೆ.

    ಅಂದಹಾಗೆ, ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಡಿ 2023ರಲ್ಲಿ ಸುಧೀರ್ ರೆಡ್ಡಿರನ್ನು ಹಾಸನ ಮೂಲದ ಶೋಭಿತಾ ಮದುವೆಯಾಗಿದ್ದರು.

  • ಶೋಭಿತಾ ಸೂಸೈಡ್ ವಿಚಾರ ಕೇಳಿ ಶಾಕ್ ಆಯ್ತು: ನಟ ಹರ್ಷ ಗೌಡ ರಿಯಾಕ್ಷನ್

    ಶೋಭಿತಾ ಸೂಸೈಡ್ ವಿಚಾರ ಕೇಳಿ ಶಾಕ್ ಆಯ್ತು: ನಟ ಹರ್ಷ ಗೌಡ ರಿಯಾಕ್ಷನ್

    ‘ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಮೆಗೆ ಸಹನಟ ಹರ್ಷ ಗೌಡ (Harsha Gowda) ಪ್ರತಿಕ್ರಿಯೆ ನೀಡಿದ್ದಾರೆ. ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ಹೀಗ್ಯಾಕೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ ಎಂದು ಹರ್ಷ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ.

    ಬ್ರಹ್ಮಗಂಟು ಸೀರಿಯಲ್‌ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ (ಡಿ.1) ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.

    ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ ನಿರ್ಧಾರ ಯಾರು ಮಾಡಬಾರದು. ಏನೇ ಇದ್ದರು ಎದುರಿಸಬಹುದಾಗಿತ್ತು ಎಂದು ಶೋಭಿತಾ ಸೂಸೈಡ್ ಬಗ್ಗೆ ಹರ್ಷ ಮಾತನಾಡಿದ್ದಾರೆ. ಸಹನಟಿಯ ಆತ್ಮಹತ್ಯೆಗೆ ನಟ ಭಾವುಕರಾಗಿದ್ದಾರೆ.

    ಅಂದಹಾಗೆ, ಶೋಭಿತಾ 2 ವರ್ಷಗಳ ಹಿಂದೆ ಸುಧೀರ್‌ ರೆಡ್ಡಿ ಜೊತೆ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು. ನಿನ್ನೆ( ಡಿ.1) ನಟಿ ಆತ್ಮಹತ್ಮೆಗೆ ಶರಣಾಗಿದ್ದಾರೆ.

  • ಶೋಭಿತಾ ಸಾವಿನ ವಿಚಾರ ಅನುಮಾನಾಸ್ಪದವಾಗಿದೆ: ಚಂದು ಗೌಡ

    ಶೋಭಿತಾ ಸಾವಿನ ವಿಚಾರ ಅನುಮಾನಾಸ್ಪದವಾಗಿದೆ: ಚಂದು ಗೌಡ

    ಕಿರುತೆರೆ ನಟಿ ಶೋಭಿತಾ ಶಿವಣ್ಣ (Shobhitha Shivanna) ಅವರ ಇಂದು (ಡಿ.1) ಸೂಸೈಡ್ ಮಾಡಿಕೊಂಡಿದ್ದಾರೆ. ಗೀತಾ ಭಾರತಿ ಭಟ್ ಅವರು ಶೋಭಿತಾ ಕುರಿತು ಪ್ರತಿಕ್ರಿಯಿಸಿದ ಬೆನ್ನಲ್ಲೇ ನಟ ಚಂದು ಗೌಡ (Chandu Gowda) ಕೂಡ ‘ಪಬ್ಲಿಕ್ ಟಿವಿ’ಗೆ ರಿಯಾಕ್ಟ್ ಮಾಡಿದ್ದಾರೆ. ಅವರು ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಯಾರೊಂದಿಗೂ ಅವರು ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಿರಲಿಲ್ಲ ಎಂದು ಚಂದು ಮಾತನಾಡಿದ್ದಾರೆ.

    ನಾನು ಶೋಭಿತಾ ಜೊತೆ 2 ಸಿನಿಮಾ ಮಾಡಿದ್ದೇನೆ. ಬೆಳಗ್ಗೆ ಅವರ ಸಾವಿನ ಸುದ್ದಿ ಗೊತ್ತಾಯ್ತು. ಇನ್ನೂ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಜೀವನದಲ್ಲಿ ಅವರು ತುಂಬಾ ಕಷ್ಟ ನೋಡಿ ಬಂದಿದ್ದಾರೆ. ಕಷ್ಟಪಟ್ಟು ಒಂದು ಮನೆಯನ್ನು ಕಟ್ಟಿಸಿದರು ಶೋಭಿತಾ. ಆ ಮನೆಯಲ್ಲಿ ಅವರ ತಂದೆ ವಾಸ ಮಾಡಲಿಲ್ಲ ಎಂಬ ಬೇಜಾರು ಅವರಿಗಿತ್ತು. ಆ ವೇಳೆ ಅವರ ತಂದೆ ತೀರಿಕೊಂಡರು. ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್‌ ನಟಿ ಶೋಭಿತಾ

    ಅವರೊಂದಿಗೆ 2 ಸಿನಿಮಾ ಮಾಡಿದ್ದೀನಿ. ಜಾಕ್‌ಪಾಟ್ ಅನ್ನೋ ಸಿನಿಮಾ ಇನ್ನೂ ನಾಲ್ಕೈದು ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಅವರ ಜೀವನ ಚೆನ್ನಾಗಿಯೇ ಹೋಗುತ್ತಿತ್ತು. ಆದರೆ ಅವರು ಸೂಸೈಡ್ ಮಾಡಿಕೊಂಡಿರುವುದಕ್ಕೆ ಕಾರಣನೇ ಸಿಗುತ್ತಿಲ್ಲ. ಅವರ ಸಾವಿನ ವಿಚಾರ ಅನುಮಾನ ಬರೋ ಹಾಗಿದೆ. ಸುಮಾರು ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಮಾತನಾಡಿದ್ದಾರೆ.

    ಮದುವೆಯ ಬಳಿಕ ಅಷ್ಟೂ ಸಂಪರ್ಕ ಇರಲಿಲ್ಲ. ಅವರು ನನಗೆ 8 ವರ್ಷಗಳಿಂದ ಪರಿಚಯ, ಆದರೆ ಅವರ ಕಷ್ಟಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ದಿಢೀರ್ ಅಂತ ಯಾಕೆ ಈ ನಿರ್ಧಾರ ತೆಗೆದುಕೊಂಡರು ಗೊತ್ತಾಗುತ್ತಿಲ್ಲ ಎಂದು ಚಂದು ಗೌಡ ಭಾವುಕರಾಗಿದ್ದಾರೆ.

    ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಕಿರುತೆರೆ ನಟಿ ಶೋಭಿತಾ (35) ಹೈದರಾಬಾದ್‌ನಲ್ಲಿ ಇಂದು (ಡಿ.1) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ‘ಬ್ರಹ್ಮಗಂಟು’ ಸಹನಟಿ ಗೀತಾ (Geetha Bharathi Bhat) ಪ್ರತಿಕ್ರಿಯಿಸಿದ್ದಾರೆ. ‘ಬ್ರಹ್ಮಗಂಟು’ (Brahmagantu) ಸೀರಿಯಲ್‌ನಲ್ಲಿ ಶೋಭಿತಾ ಜೊತೆ ನಟಿಸಿದ ದಿನಗಳನ್ನು ಗೀತಾ ಸ್ಮರಿಸಿದ್ದಾರೆ.

    ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆ ಯಾರೋ ಸೀರಿಯಲ್ ಆರ್ಟಿಸ್ಟ್ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದರು. ಆದರೆ ಇವರ ಸುದ್ದಿ ಈ ತರಹ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬೋಕೆ ತುಂಬಾ ಕಷ್ಟ ಆಗುತ್ತಿದೆ ಎಂದು ನಟಿ ಗೀತಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಐಕಾನ್ ಸ್ಟಾರ್

    ಶೋಭಿತಾ ಮದುವೆಯಾದ್ಮೇಲೆ ನನ್ನ ಜೊತೆ ಸಂಪರ್ಕ ಇರಲಿಲ್ಲ. ನಾನು ಅವರನ್ನು ಕಡೆಯದಾಗಿ ಭೇಟಿ ಆಗಿದ್ದು, ಅವರ ಮದುವೆಗೂ ಮುಂಚೆ, ಆ ನಂತರ ಅವರು ಸಿಗಲಿಲ್ಲ. ಅವರಿಗೆ ಅದೇನು ಕಷ್ಟು ಇತ್ತು ಎಂಬುದು ಗೊತ್ತಿಲ್ಲ. ಅವರ ಕಷ್ಟ ಏನಿತ್ತು ಅವರು ಯಾರ ಹತ್ತಿರ ಆದ್ರೂ ಹೇಳಿಕೊಳ್ಳಬೇಕಿತ್ತು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

    ಅವರ ಕುಟುಂಬವನ್ನು ಶೋಭಿತಾ ನೋಡಿಕೊಳ್ಳುತ್ತಿದ್ದರು. ಅವರು ತುಂಬಾ ಸ್ವಾಭಿಮಾನಿಯಾಗಿದ್ದರು. ಅವರು ತುಂಬಾ ಸ್ಟ್ರಾಂಗ್ ವ್ಯಕ್ತಿ ಆಗಿದ್ದರು. ಅವರು ಈ ಮಟ್ಟಕ್ಕೆ ಕುಗ್ಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದರೆ ನಂಬೋಕೆ ಆಗುತ್ತಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

    ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್‌ ನಟಿ ಶೋಭಿತಾ

    ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್‌ ನಟಿ ಶೋಭಿತಾ

    ಬ್ರಹ್ಮಗಂಟು (Brahmagantu) ಸೀರಿಯಲ್‌ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ (ನ.30) ತಡರಾತ್ರಿ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ (Suicide) ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ:ರಿಲೀಸ್‌ಗೂ ಮುನ್ನ ದಾಖಲೆ ಬರೆದ ‘ಪುಷ್ಪ 2’- ಕೆಲವೇ ಗಂಟೆಗಳಲ್ಲಿ 55 ಸಾವಿರ ಟಿಕೆಟ್ ಸೋಲ್ಡ್ ಔಟ್

    2 ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್‌ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಶೋಭಿತಾ ಆತ್ಮಹತ್ಯೆಯ ಸುದ್ದಿ ಕೇಳಿ, ಕುಟುಂಬಸ್ಥರಿಗೆ ಶಾಕ್‌ ಕೊಟ್ಟಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.

    ಇನ್ನೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಟಿ ನಗು ನಗುತ್ತಾ ಇರೋ ಚೆಂದದ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಆ ನಂತರ ಈ ಘಟನೆ ಜರುಗಿದ್ದು, ಅವರ ಆತ್ಮಹತ್ಯೆಯ ಬಗ್ಗೆ ಕಾರಣ ತಿಳಿದು ಬಂದಿಲ್ಲ.

    ‘ಫಸ್ಟ್‌ ಡೇ ಫಸ್ಟ್‌ ಶೋ’ ಸಿನಿಮಾದಲ್ಲಿ ಶೋಭಿತಾ ನಟಿಸಿದ್ದರು. ಜನಪ್ರಿಯ ‘ಬ್ರಹ್ಮಗಂಟು’ ಸೀರಿಯಲ್‌ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿ ಕೆಲಸ ಮಾಡಿದ್ದರು.