Tag: Shobharaj

  • ಬಾಂಡ್ ರವಿ ಆದ ಪ್ರೀಮಿಯರ್ ಪದ್ಮಿನಿ ಹುಡುಗ ಪ್ರಮೋದ್

    ಬಾಂಡ್ ರವಿ ಆದ ಪ್ರೀಮಿಯರ್ ಪದ್ಮಿನಿ ಹುಡುಗ ಪ್ರಮೋದ್

    ತ್ನನ್ ಪ್ರಪಂಚ್, ಪ್ರಿಮಿಯರ್ ಪದ್ಮಿನಿ ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ಪ್ರಮೋದ್, ಈಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಯುಗಾದಿ ಹಬ್ಬದ ದಿನದಂದು ಆ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಬಾಂಡ್ ರವಿ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ : ಕಂಗನಾ ರಣಾವತ್ ಶೋನಲ್ಲಿ ಕರ್ಮ ಕರ್ಮ : ಶರ್ಟ್ ಬಿಚ್ಚಿತೀನಿ ಅಂದ ಮಾದಕ ನಟಿ ಪೂನಂ

    ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆ ನಿರ್ದೇಶಕರು ಪಾದಾರ್ಪಣೆ ಮಾಡುತ್ತಿದ್ದು, ನಿರ್ದೇಶಕರಾದ ಎಸ್.ಮಹೇಂದ್ರರ್, ಪ್ರಶಾಂತ್ ರಾಜ್ ಹಾಗೂ‌ ಕಾಂತಾ ಕನ್ನಹಳ್ಳಿ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್, ಕೋ ಡೈರೆಕ್ಟರ್ ಆಗಿ ಕಳೆದ ಹನ್ನೊಂದು ವರ್ಷಗಳಿಂದ ನಿರ್ದೇಶನದ ಅನುಭವ ಅರಿತಿರುವ ಹಿರಿಯೂರು ಮೂಲದ ಪ್ರಜ್ವಲ್. ಎಸ್.ಪಿ  ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ‌ ಇಳಿದಿದ್ದಾರೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಯುಗಾದಿ ಹಬ್ಬದಂದು ಬಾಂಡ್ ರವಿ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರತಿಭಾನ್ವಿತ ನಾಯಕ ನಟ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ನಾಯಕನಾಗಿ ಮಿಂಚಿದ್ದಾರೆ. ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟು ಖಡಕ್ ಲುಕ್ ನಲ್ಲಿ ಪ್ರಮೋದ್ ಮಿಂಚಿದ್ದಾರೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಅಂದಹಾಗೇ ಬಾಂಡ್ ರವಿ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು  ಸಂಕಲನ, ಸುನಿಲ್ ಮತ್ತು ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ

  • ‘ಹೌಲಾ ಹೌಲಾ’ ಈ ವಾರ ಬಿಡುಗಡೆ

    ‘ಹೌಲಾ ಹೌಲಾ’ ಈ ವಾರ ಬಿಡುಗಡೆ

    ಬೆಂಗಳೂರು: ಅಮ್ಮ ಅಕ್ಷರ ಆರ್ಟ್ಸ್ ಲಾಂಛನದಲ್ಲಿ ಸುಶೀಲ – ಡಾ. ರಮೇಶ್ ಚೌಧರಿ ನಿರ್ಮಿಸಿರುವ ‘ಹೌಲಾ ಹೌಲಾ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ.

    ಈ ಚಿತ್ರದ ಕಥೆ – ಚಿತ್ರಕಥೆ-ಸಂಭಾಷಣೆ -ನಿರ್ದೇಶನ – ಎಸ್.ಪಿ. ಪಾಟೀಲ್. (ಕಲಬುರ್ಗಿ), ಛಾಯಾಗ್ರಹಣ – ಸುರೇಶ್ ವರ್ಮ, ಸಂಗೀತ – ಶ್ಯಾಂ ಡಿ, ಸಂಕಲನ – ಜ್ಞಾನೇಶ್ವರ್, ಸಾಹಿತ್ಯ – ಕವಿರಾಜ್, ಕಲೆ- ಇಸ್ಮಾಯಿಲ್, ನೃತ್ಯ – ಮನು, ಸಹ ನಿರ್ದೇಶಕ – ಕುಮಾರ್, ನಿರ್ವಹಣೆ – ಸತೀಶ್ ಕುಮಾರ್, ರಾಯಚೂರು, ಕಲಬುರ್ಗಿ, ಬೆಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಟ ಡಾ.ವಿಷ್ಣುವರ್ಧನ್ ಅಭಿಮಾನಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕಥೆ ಇದು. ಡಾ. ವಿಷ್ಣುವಧನ್ ಅವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಚಿತ್ರವೊಂದರಲ್ಲಿ ತಿಳಿಸಿ, ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದರು. ಈ ಚಿತ್ರದ ಸಂಬಂಧ ಕೂಡ ವಿದ್ಯಾರ್ಥಿಗಳಿಗೆ ಹಾಗೂ ತಂದೆ ತಾಯಿಗಳಿಗೆ ಅನ್ವಯವಾಗುತ್ತದೆ.

    ತಾರಾಗಣದಲ್ಲಿ – ಆರತಿ ಕುಲಕರ್ಣಿ, ಶೋಭರಾಜ್, ಹನುಮಂತರಾಯ ಗೌಡ, ಅಮಿತ್, ವಿಜಯ್ ಚಂಡೂರ್, ಶಾಲಿನಿ, ಪೃಥ್ವಿ, ಮೇಘನ, ಮಂಜು, ಲಯೇಂದ್ರ, ದಿವ್ಯ, ರಿಷಿ, ಮುಂತಾದವರಿದ್ದಾರೆ. ಈ ಚಿತ್ರವು ಕನ್ನಡ ಚಿತ್ರ ಬಿಡುಗಡೆಯಾದ ನಂತರ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಇದೇ ಸಂಸ್ಥೆಯಿಂದ ತಯಾರಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

  • ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಪುಣ್ಯಾತ್ ಗಿತ್ತೀರ ಹಾಡು ಪಾಡು!

    ಬೆಂಗಳೂರು: ಸರಿಸುಮಾರು ಎರಡು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಪಾಸಿಬಲ್ ಸಿನಿಮಾವನ್ನು ನಿರ್ದೇಶಿಸಿದ್ದವರು ರಾಜ್ ಬಿ.ಎನ್. ಮತ್ತೆ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ `ಪುಣ್ಯಾತ್‍ಗಿತ್ತೀರು’. ಬೇರೆ ಬೇರೆ ಬಗೆಯ ವ್ಯಕ್ತಿತ್ವದ ನಾಲ್ವರು ಹುಡುಗಿಯರ ಬದುಕಿನ ಶೈಲಿಯನ್ನೇ ಕಥೆಯನ್ನಾಗಿಸಿರುವ ಈ ಚಿತ್ರದಲ್ಲಿ ಮಮತಾ ರಾವುತ್, ದಿವ್ಯಶ್ರೀ, ಸಂಭ್ರಮ ಹಾಗೂ ಐಶ್ವರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣಗೊಳಿಸಿಕೊಂಡಿರುವ ಚಿತ್ರತಂಡ ಈಗ ಸಿನಿಮಾವನ್ನು ಬಿಡುಗಡೆಯ ಹಂತಕ್ಕೆ ತಂದಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು. ಪುಣ್ಯಾತ್‍ಗಿತ್ತೀರು ಚಿತ್ರದಲ್ಲಿ ರಾಮಾನುಜಂ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳಿವೆ.

    ಸಾಮಾನ್ಯವಾಗಿ ಘಟುವಾಣಿ ಥರದ, ಧೈರ್ಯವಂತ ಹೆಂಗಸರನ್ನು ಪುಣ್ಯಾತ್ ಗಿತ್ತೀರು ಎಂದು ಕರೆಯುತ್ತಾರೆ. ಈ ಚಿತ್ರದಲ್ಲಿ ಕೂಡ ಅಂಥಾ ಡೇರ್ ಕ್ಯಾರೆಕ್ಟರ್ ಇರುವ ನಾಲ್ವರು ಹುಡುಗಿಯರ ಕಥೆ ಇರುವುದರಿಂದ ಚಿತ್ರಕ್ಕೆ ಈ ಹೆಸರಿಟ್ಟಿರುವುದಾಗಿ ನಿರ್ದೇಶಕ ರಾಜ್ ತಿಳಿಸಿದ್ದಾರೆ.

    ಈ ಚಿತ್ರದ ನಾಲ್ವರು ಹುಡುಗಿಯರು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರೆ. ಪಿಜಿಯಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ಹುಡುಗಿಯರು ಸದಾ ಜನರಿಗೆ ವಂಚನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಒಂದು ಘಟನೆ ನಡೆದಾಗ, ಅವರ ಗುಣದಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಒಳ್ಳೇ ಕೆಲಸ ಮಾಡುವಲ್ಲಿ ಸಫಲರಾಗುತ್ತಾರೆ. ಮೊದಲ ಭಾಗದಲ್ಲಿ ವೀಕ್ಷಕರಿಂದ ಬೈಸಿಕೊಳ್ಳುವ ಪಾತ್ರಗಳಿದ್ದು, ವಿರಾಮದ ನಂತರ ಎಲ್ಲರಿಗೂ ಅಚ್ಚುಮೆಚ್ಚಿನ ಮಹಿಳೆಯರಾಗುತ್ತಾರೆ.

    ಬೆಂಗಳೂರು, ಬಳ್ಳಾರಿ, ಕನಕಪುರ ಮುಂತಾದ ಕಡೆಗಳಲ್ಲಿ ಮೂವತ್ತು ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ರಾಜ್. ಬಿ.ಎನ್. ಅವರೇ ಚಿತ್ರದ ಕತೆ ಬರೆದು ನಿರ್ದೇಶನ ಮಾಡಿರೆ. ಮಮತಾ ರಾವುತ್ ಈ ಚಿತ್ರದಲ್ಲಿ ಆರ್ಟಿಸ್ಟ್ ಆರತಿ ಆಗಿ ಬಣ್ಣಹಚ್ಚಿದ್ದರೆ. ಹಿರಿಯ ನಟಿಯರ ಅಭಿನಯವನ್ನು ತೋರಿಸುವ ಪ್ರಯತ್ನ ಮಾಡಿದ್ದರೆ. ಅವಕಾಶಗಳು ಸಿಗದೆ ಗ ಬೇರೆ ಥರದ ಕೆಲಸ ಮಾಡಲು ನಿರ್ಧರಿಸಿದಾಗ ಇವರ ಪರಿಚಯವಾಗುತ್ತದೆ. ಮೀಟ್ರು ಮಂಜುಳ ಹೆಸರಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಅಭಿನಯಿಸಿದ್ದಾರೆ. ಬಾಯ್ಬಡ್ಕಿಯಾಗಿ ಹೆಸರು ಮಾಡಿರುವ ಐಶ್ವರ್ಯ ಮತ್ತು ಸದಾ ಸುಳ್ಳನ್ನು ಹೇಳುವ ಸಂಭ್ರಮ ಕೂಡ ಚಿತ್ರದಲ್ಲಿದ್ದು, ಈಕೆಯ ಸುಳ್ಳು ಕತೆಗೆ ತಿರುವು ಕೊಡುತ್ತದೆ, ಹಾಗೂ ಕೆಲವೊಮ್ಮೆ ಒಳ್ಳೆಯದೇ ಆಗುತ್ತದಂತೆ.

    ಚಿತ್ರದ ಉಳಿದ ತಾರಾಬಳಗದಲ್ಲಿ ಶೋಭರಾಜ, ಜಡೆನಾಗನ ಪಾತ್ರದಲ್ಲಿ ಟಗರು ಕಾಕ್ರೋಚ್ ಕುರಿರಂಗ, ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ ಅಭಿನಯಿಸಿದ್ದರೆ. ಚಿತ್ರದ ನಿರ್ಮಾಪಕ ಸತ್ಯನಾರಾಯಣ ಮನ್ನೆ ಮಾತನಾಡಿ ಒಂದು ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಿದ ತೃಪ್ತಿ ನನಗೆ ಇದೆ. ನಮ್ಮ ಚಿತ್ರ ಎಲ್ಲಾ ವರ್ಗದ ಜನರಿಗೂ, ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.