Tag: shobha

  • ಅಪಘಾತದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ನಟಿ ದುರ್ಮರಣ

    ಅಪಘಾತದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ನಟಿ ದುರ್ಮರಣ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಶೋಭಾ ಎಮ್.ವಿ ಅವರು ಬುಧವಾರ ಮೃತಪಟ್ಟಿದ್ದಾರೆ.

    ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಶೋಭಾ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಟಿ ಶೋಭಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಿರುತೆರೆಯ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಮೃತ ಶೋಭಾ ಅವರು ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

    ಮೃತ ಶೋಭಾ ಅವರು ನೈಜ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದರು. ನಿಜ ಜೀವನದಲ್ಲೂ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದು, ಮಗಳು ಜಾನಕಿ ಧಾರಾವಾಹಿ ಸೇರಿದಂತೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶೋಭಾ ಅವರ ನಿಧನಕ್ಕೆ ‘ಮಗಳು ಜಾನಕಿ’ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

     

    ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆಗೊಳಿಸಿದೆ” ಎಂದು ದುಃಖದಿಂದ ಸಂತಾಪ ಸೂಚಿಸಿದ್ದಾರೆ.

    ಅಪಘಾತ ಹೇಗಾಯ್ತು?
    ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

  • 40 ವರ್ಷಗಳಿಂದ ಗರ್ಭಿಣಿಯರಿಗೆ ಸಹಾಯಹಸ್ತ ಚಾಚ್ತಿದ್ದಾರೆ ವಿಜಯಪುರದ ಉದ್ಯಮಿ ರಾಧಾಬಾಯಿ

    40 ವರ್ಷಗಳಿಂದ ಗರ್ಭಿಣಿಯರಿಗೆ ಸಹಾಯಹಸ್ತ ಚಾಚ್ತಿದ್ದಾರೆ ವಿಜಯಪುರದ ಉದ್ಯಮಿ ರಾಧಾಬಾಯಿ

    ವಿಜಯಪುರ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಮಧ್ಯರಾತ್ರಿ ಕೊಡೆ ಹಿಡೀತಾನೆ ಅನ್ನೋ ಗಾದೆಯಿದೆ. ಆದರೆ, ವಿಜಯಪುರದ ಪಬ್ಲಿಕ್ ಹೀರೋ ರಾಧಾಬಾಯಿ ಅವರು ಇದಕ್ಕೆ ವಿರೋಧವಾಗಿದ್ದಾರೆ. ಪತಿಯ ಆಸೆಯಂತೆ ಸುಮಾರು 40 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯ ಗರ್ಭಿಣಿಯರಿಗೆ ಚಿಕ್ಕ ಸೇವೆ ಮಾಡುತ್ತಿದ್ದಾರೆ.

    ಹೌದು. ಜಿಲ್ಲೆಯ ಪ್ರತಿಷ್ಠಿತ ಹತ್ತಿ ಉದ್ಯಮಿಯಾಗಿರುವ 80 ವರ್ಷದ ರಾಧಾಬಾಯಿ ಅವರ ಮೊಮ್ಮಕ್ಕಳು ಕೂತು ತಿಂದರೂ ಖಾಲಿ ಆಗದಷ್ಟು ಆಸ್ತಿ ಇದೆ. ಆದರೆ ಜನಸಾಮಾನ್ಯರಿಗೆ ಸಹಾಯ ಹಸ್ತ ಚಾಚಿದ್ದಾರೆ. ಪತಿ ಕಿಶನ್‍ಲಾಲ ಅವರು 1980ರಲ್ಲಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಖುದ್ದು ತಾವೇ ತೆರಳಿ 2 ಗ್ಲಾಸ್ ಅಕ್ಕಿ, 5 ರೂ. ನೀಡಿ ಸಹಾಯ ಮಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಅದೆಷ್ಟೇ ಗರ್ಭಿಣಿಯರು ದಾಖಲಾಗಿದ್ದರೂ ಅವರಿಗೆಲ್ಲ 15 ದಿನಕ್ಕೊಮ್ಮೆ ಈ ರೀತಿ ಸಹಾಯ ಮಾಡುತ್ತಿದ್ದರು. 1985ರಲ್ಲಿ ಅವರು ನಿಧನರಾದ ಮೇಲೆ ಈ ಕಾಯಕವನ್ನ ಪತ್ನಿ ರಾಧಾಬಾಯಿ ಮುಂದುವರಿಸಿದ್ದಾರೆ.

    ಯಾರೊಬ್ಬರ ಆಸರೆ ಇಲ್ಲದೆ ನಡೆಯಲು ಬರಲ್ಲ. ಆದರೂ, ಮಗ ಅಥವಾ ವಾಹನ ಚಾಲಕರ ಸಹಾಯ ಪಡೆದು 15 ದಿನಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಮಹದಾಸೆಯನ್ನು ಪೂರೈಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಅಕ್ಕಿ ಹೊತ್ತು ತಂದು ಕೊಡಲಾಗದ ಕಾರಣ, ಗರ್ಭಣಿಯರಿಗೆ 20 ರೂ. ಹಾಗೂ 2 ಬಿಸ್ಕೆಟ್ ಪ್ಯಾಕ್ ಕೊಡುತ್ತಿದ್ದಾರೆ ಎಂದು ಗರ್ಭಿಣಿ ಶೋಭಾ ಹೇಳಿದ್ದಾರೆ.

    ಒಟ್ಟಿನಲ್ಲಿ ಪತಿಯ ಆಸೆಯನ್ನು 40 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರೋ ರಾಧಾಬಾಯಿ ಅವರು ಗರ್ಭಿಣಿಯರಿಗೆ ಸಹಾಯ ಹಸ್ತ ಚಾಚುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.