Tag: Shoaib M

  • ಪತ್ನಿ ಸಾನಿಯಾ ಜೊತೆಗಿನ ಫೋಟೋ ಶೇರ್- ತಪ್ಪಾಯ್ತು ಕ್ಯಾಪ್ಷನ್

    ಪತ್ನಿ ಸಾನಿಯಾ ಜೊತೆಗಿನ ಫೋಟೋ ಶೇರ್- ತಪ್ಪಾಯ್ತು ಕ್ಯಾಪ್ಷನ್

    – ನೆಟ್ಟಿಗರಿಂದ ಶೋಯೆಬ್ ಮಲೀಕ್ ಟ್ರೋಲ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲೀಕ್ ಪತ್ನಿ ಸಾನಿಯಾ ಮಿರ್ಜಾ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿಕೊಂಡಿದ್ದರು. ಆದ್ರೆ ಕ್ಯಾಪ್ಷನ್ ಬರೆಯುವ ವೇಳೆ ಮಲೀಕ್ ಎಡವಿದ್ದು, ನೆಟ್ಟಿಗರು ಟ್ರೊಲ್ ಮಾಡಲಾರಂಭಿಸಿದ್ದಾರೆ.

    ಶೋಯೆಬ್ ಮಲೀಕ್ ಮೊದಲು ಇನ್‍ಸ್ಟಾದಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಸಾನಿಯಾ ಮಿರ್ಜಾ ಹಂಚಿಕೊಂಡು ಪತಿ ನೀಡಿದ ಸರ್ಪ್ರೈಸ್ ಬಗ್ಗೆ ಕೆಲ ಸಾಲುಗಳನ್ನ ಬರೆದುಕೊಂಡಿದ್ದರು. ನಂತರ ಅದೇ ಫೋಟೋಗಳನ್ನ ಶೇರ್ ಮಾಡಿಕೊಂಡ ಮಲೀಕ್ ಪತ್ನಿ ಬರೆದು ಸಾಲುಗಳನ್ನ ಕಾಪಿ ಆ್ಯಂಡ್ ಪೇಸ್ಟ್ ಮಾಡಿರೋದು ಟ್ರೋಲ್ ಗೆ ಕಾರಣವಾಗಿದೆ.

    ಸಾನಿಯಾ ಮೆಸೇಜ್: ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ಇಂತಹ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರನ್ನು ಪಡೆದು ನಾನು ನಿಜಕೂ ಧನ್ಯ. ಅಮೇಜಿಂಗ್, ಸರ್ಪ್ರೈಸ್ ನೀಡಿದ ಪತಿ ಶೋಯೆಬ್ ಮಲೀಕ್ ಗೂ ಥ್ಯಾಂಕೂ ಎಂದು ಸಾನಿಯಾ ಬರೆದುಕೊಂಡಿದ್ದರು. ಜೊತೆಗೆ ಪತಿ ಮತ್ತು ಮಗುವಿನ ಜೊತೆಗಿನ ಮುದ್ದಾದ ಮೂರು ಫೋಟೋಗಳನ್ನ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು.

     

    View this post on Instagram

     

    A post shared by Shoaib Malik (@realshoaibmalik)

    ಕೆಲ ಸಮಯದ ಬಳಿಕ ರಿಪೋಸ್ಟ್ ಹ್ಯಾಶ್ ಟ್ಯಾಗ್ ಬಳಸಿ ಇದೇ ಫೋಟೋಗಳನ್ನು ಹಂಚಿಕೊಂಡ ಶೋಯೆಬ್ ಹಂಚಿಕೊಂಡಿದ್ದರು. ಆದ್ರೆ ಸಾನಿಯಾ ತಮಗೆ ವಿಶ್ ಮಾಡಿದವರಿಗೆ ಹೇಳಿದ ಧನ್ಯವಾದ ಸಾಲುಗಳನ್ನು ಹಾಗೇ ನಕಲು ಮಾಡಿದ್ದಾರೆ. ಕೆಲವರು ನೀವು ಯಾರಿಗೆ ಧನ್ಯವಾದ ಹೇಳುತ್ತೀರಿ? ಕೊನೆ ಪಕ್ಷ ಟ್ಯಾಗ್ ಮಾಡಿದ ನಿಮ್ಮ ಹೆಸರನ್ನಾದರೂ ಬದಲಿಸಬಹುದಿತ್ತು ಎಂದು ಸಲಹೆ ನೀಡಿದ್ದಾರೆ.

    https://twitter.com/izzah_adnan1/status/1328307321248821248

    ನವೆಂಬರ್ 15ರಂದು ಹುಟ್ಟುಹಬ್ಬ ಆಚರಿಸಿಕೊಂಡು ಟ್ರೆನ್ನಿಸ್ ತಾರೆ ಸಾನಿಯಾ ಮಿರ್ಜಾರಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಕ್ರಿಕೆಟಿಗ ಯುವರಾಜ್ ಸಿಂಗ್ ಮಿರ್ಚಿ ಮಾಮಿ ಎಂದು ವಿಶ್ ಮಾಡಿದ್ದು ವೈರಲ್ ಆಗಿದೆ. ಬರ್ತ್ ಡೇ ಹಿನ್ನೆಲೆ ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ, ಪಿಎಸ್‍ಎಲ್ ಪಂದ್ಯಗಳ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪತಿಗೆ ಉತ್ಸಾಹ ತುಂಬುತ್ತಿದ್ದಾರೆ.

     

    View this post on Instagram

     

    A post shared by Sania Mirza (@mirzasaniar)