Tag: Shloka Mehta

  • ಬಾಲರಾಮನ ಪ್ರಾಣಪ್ರತಿಷ್ಠೆ ಸಂಪನ್ನ – ಅಯೋಧ್ಯೆಯಲ್ಲಿ ಅಂಬಾನಿ ಕುಟುಂಬ ಸಂಭ್ರಮ

    ಬಾಲರಾಮನ ಪ್ರಾಣಪ್ರತಿಷ್ಠೆ ಸಂಪನ್ನ – ಅಯೋಧ್ಯೆಯಲ್ಲಿ ಅಂಬಾನಿ ಕುಟುಂಬ ಸಂಭ್ರಮ

    ಅಯೋಧ್ಯೆ (ಉತ್ತರ ಪ್ರದೇಶ): ಬಾಲರಾಮನ ಪ್ರಾಣಪ್ರತಿಷ್ಠೆ (Ram lalla Pran Pratishtha) ಸಂಪನ್ನಗೊಂಡಿದ್ದು, ಬರೋಬ್ಬರಿ 500 ವರ್ಷಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ.

    ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್‌ ಮುಹೂರ್ತದಲ್ಲಿ (ಅಭಿಜಿತ್‌ʼ ಅಂದ್ರೆ ʼವಿಜಯಶಾಲಿʼ ಎಂದರ್ಥ) ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿದೆ. ಈ ವೇಳೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಸಿಎಂ ಯೋಗಿ ಆದಿತ್ಯನಾಥ್‌, ಗುಜರಾತ್‌ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ

    ದೇಶದ ಮೂಲೆ ಮೂಲೆಗಳಿಂದ ಸುಮಾರು 8 ಸಾವಿರಕ್ಕೂ ಅಧಿಕ ಗಣ್ಯರನ್ನ ಆಹ್ವಾನಿಸಲಾಗಿತ್ತು. ಅಂತೆಯೇ ಮುಕೇಶ್‌ ಅಂಬಾನಿ ಕುಟುಂಬಸ್ಥರು ಸಹ ಈ ಸಂಪನ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು. ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಕುಟುಂಬ ಸಮೇತರಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಸರಯೂ ನದಿ ತಟದಲ್ಲಿ ವಿಶೇಷ ದೈವಿಕ ಅನುಭವ ಹಂಚಿಕೊಂಡ ಪಿ.ಟಿ ಉಷಾ

    ಪ್ರಾಣಪ್ರತಿಷ್ಠೆ ನೇರವೇರುತ್ತಿದ್ದ ಸಮಯಕ್ಕೆ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್‌ಗಳು ಅಯೋಧ್ಯೆಯ ಶ್ರೀ ರಾಮಮಂದಿರ ಆವರಣದಲ್ಲಿ ಹಾಗೂ ರಾಮಮಂದಿರದ ಮೇಲ್ಭಾಗದಲ್ಲಿ ಪುಷ್ಪಾರ್ಚನೆ ಸಲ್ಲಿಸಿದವು. ಈ ವೇಳೆ ರಾಮಭಕ್ತರಿಂದ ʻಜೈ ಶ್ರೀರಾಮ್‌ʼ ಉದ್ಘೋಷಗಳು ಕೇಳಿಬಂದಿತು. ಸಾವಿರಾರು ಭಕ್ತರಿಂದ ರಾಮನಾಮ ಝೇಂಕಾರ ಇದಕ್ಕೆ ಸಾಕ್ಷಿಯಾಯಿತು. ಇದನ್ನೂ ಓದಿ: ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು: ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್‌ ಯೋಗಿರಾಜ್‌ ಮಾತು

    ಪ್ರಾಣಪ್ರತಿಷ್ಠಾಪನೆ ನೆರವೇರುವ ಸಮಯಕ್ಕೆ ದೇಶಾದ್ಯಂತ ರಾಮನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇಶಾದ್ಯಂತ ವಿವಿಧೆಡೆ ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ನೇರಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್‌ ಖಾತೆಯಲ್ಲೂ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು. ಇದನ್ನೂ ಓದಿ: ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ? 

  • ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ ತಮ್ಮ ಬಾಲ್ಯ ಸ್ನೇಹಿತೆ, ವಜ್ರ ವ್ಯಾಪಾರಿಯಾಗಿರುವ ರುಸ್ಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾರನ್ನು ಮಾರ್ಚ್ 9ರಂದು ವಿವಾಹವಾಗಿದ್ದಾರೆ. ಆದ್ದರಿಂದ ತಮ್ಮ ಪ್ರೀತಿಯ ಸೊಸೆಗೆ ನೀತಾ ಅಂಬಾನಿ ಬರೋಬ್ಬರಿ 300 ಕೋಟಿ ರೂ. ಬೆಲೆಬಾಳುವ ವಜ್ರದ ಹಾರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಹೌದು, ಸದ್ಯ ನೀತಾ ಅಂಬಾನಿ ತಮ್ಮ ಸೊಸೆ ಶ್ಲೋಕಾ ಅವರಿಗೆ ನೀಡಿರುವ ಈ ದುಬಾರಿ ಗಿಫ್ಟ್ ವಿಷಯ ಕೇಳಿದವರು ಒಂದು ಕ್ಷಣ ಅಚ್ಚರಿಪಡುತ್ತಾರೆ. ಮಗ ಆಕಾಶ್ ಕೈ ಹಿಡಿದು ಬಂದಿರುವ ಶ್ಲೋಕಾಗೆ ನೀತಾ ಅವರು ಸಖತ್ ದುಬಾರಿ ವಜ್ರದ ಹಾರ ಕೊಟ್ಟು ಸಪ್ರ್ರೈಸ್ ನೀಡಿದ್ದಾರೆ.

    ಅತ್ತೆಯ ಒಡವೆಗಳನ್ನು ಸೊಸೆಗೆ ನೀಡುವುದು ಅಂಬಾನಿ ಕುಟುಂಬದ ಸಂಪ್ರದಾಯವಾಗಿದೆ. ಆದರಿಂದ ನೀತಾ ಅಂಬಾನಿಯ ಅತ್ತೆ ತಮಗೆ ನೀಡಿದ್ದ ಒಡವೆಗಳನ್ನು ತಮ್ಮ ಸೊಸೆ ಶ್ಲೋಕಾರಿಗೆ ನೀಡಲು ನಿರ್ಧರಿಸಿದ್ದರು. ಆದರೆ ಆಕಾಶ್ ಹಾಗೂ ಶ್ಲೋಕಾ ಅವರ ಮದುವೆಯ ಬಳಿಕ ಸಂಪ್ರದಾಯದ ಪ್ರಕಾರ ಪರಂಪರೆಯಿಂದ ಬಂದ ಚಿನ್ನದ ಹಾರನ್ನು ಸೊಸೆಗೆ ನೀಡುವ ಬದಲಿಗೆ ದುಬಾರಿ ವಜ್ರದ ಹಾರವನ್ನು ನೀಡಿದ್ದಾರೆ.

    ಅಷ್ಟೇ ಅಲ್ಲದೆ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ತಮ್ಮ ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆ ಉಡುಗೊರೆಯಾಗಿ ಒಂದು ಐಶಾರಾಮಿ ಬಂಗಲೆಯನ್ನು ನೀಡಿದ್ದಾರೆ.

    ಅಕಾಶ್ ಶ್ಲೋಕಾ ಐಶಾರಾಮಿ ವಿವಾಹದಲ್ಲಿ ಬಾಲಿವುಡ್‍ನ ಸ್ಟಾರ್ ನಟ-ನಟಿಯರಿಂದ ಹಿಡಿದು ಹೆಸರಾಂತ ರಾಜಕಾರಿಗಳು, ಉದ್ಯಮಿಗಳು, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಗಣ್ಯರು ಭಾಗಿಯಾಗಿದ್ದರು. ಈ ಮೂಲಕ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರ ಮದುವೆ ಸಮಾರಂಭ ದುಬಾರಿ ಉಡುಗೊರೆ ಹಾಗೂ ಹೆಸರಾಂತ ಗಣ್ಯರಿಂದ ಇನ್ನಷ್ಟು ಅದ್ದೂರಿಯಾಗಿ ನೆರವೇರಿತ್ತು.

  • ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

    ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

    ಮುಂಬೈ: ಭಾರತದ ಖ್ಯಾತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರ ನಿಶ್ಚಿತಾರ್ಥ ಜೂನ್ 30 ರಂದು ನಿಗದಿಯಾಗಿದೆ.

    ಭಾರತದ ರೋಸಿ ಬ್ಲೂ ಡೈಮಂಡ್ ಕಂಪನಿಯ ಮುಖ್ಯಸ್ಥರಾದ ರಸೆಲ್ ಮೆಹ್ತಾ ಮಗಳು ಶ್ಲೋಕಾರ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಂಟಿಲಾದಲ್ಲಿರುವ ಅಂಬಾನಿಯವರ ನಿವಾಸದಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಈ ನವ ಜೋಡಿಯು ಫೋಟೋ ಶೂಟ್ ನಡೆಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

    ಮಾರ್ಚ್ 24ರಂದು ಮುಕೇಶ್ ಅಂಬಾನಿ ಹಾಗೂ ಅಜ್ಜಿ ಕೋಕಿಲಬೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆಕಾಶ್‍ರವರು ಶ್ಲೋಕಾ ಮೆಹ್ತಾಗೆ ಪ್ರೇಮ ನಿವೇದನೆ ಮಾಡಿದ್ದರು.

    ಮುಕೇಶ್ ಅಂಬಾನಿ ಮತ್ತು ರಸ್ಸೆಲ್ ಮೆಹ್ತಾ ಇಬ್ಬರು ಹಳೆಯ ಸ್ನೇಹಿತರಾಗಿದ್ದು, ಈ ಮದುವೆಯಿಂದ ಮುಂಬೈ ಖ್ಯಾತ ಕುಟುಂಬಗಳು ಒಂದಾಗಿವೆ. ಮುಕೇಶ್ ಮತ್ತು ನೀತಾ ಅಂಬಾನಿಯ ಮೂವರು ಮಕ್ಕಳಲ್ಲಿ ಆಕಾಶ್ ಮೊದಲನೇ ಮಗನಾಗಿದ್ದಾನೆ. ತಂಗಿ ಇಶಾ ಮತ್ತು ತಮ್ಮ ಅನಂತ್ ಆಗಿದ್ದಾರೆ. ಸದ್ಯ ಇವರು ಜಿಯೋದ ಪ್ರಮುಖ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


    ಅಕಾಶ್ ಹಾಗೂ ಶ್ಲೋಕಾ ಇಬ್ಬರು ಬಾಲ್ಯದಿಂದಲೂ ಸ್ನೇಹ ಹೊಂದಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಅಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ. ಇದನ್ನು ಓದಿ: ವಜ್ರ ಉದ್ಯಮಿಯ ಮಗಳನ್ನು ವರಿಸಲಿದ್ದಾರೆ ಮುಕೇಶ್ ಅಂಬಾನಿ ಪುತ್ರ – ಫೋಟೋಗಳಲ್ಲಿ ನೋಡಿ

    ರಸೆಲ್ ಮೆಹ್ತಾ ಅವರಿಗೆ ಮೊನಾ, ಶ್ಲೋಕ ಮೆಹ್ತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಶ್ಲೋಕ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 2014ರಿಂದ ರೋಸಿ ಬ್ಲೂ ಫೌಂಡೇಶನ್‍ನ ನಿರ್ದೇಶಕಿಯಾಗಿ ಶ್ಲೋಕ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    https://www.instagram.com/p/Bjm-gGMlsOV/?utm_source=ig_embed