Tag: ShivSena

  • ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    – ರಾಣಾ ಹಸ್ತಾಂತರ ಪ್ರಕ್ರಿಯೆ ಕಾಂಗ್ರೆಸ್‌ ಆಡಳಿತದಲ್ಲೇ ನಡೆದಿತ್ತು: ರಾವತ್‌
    – ಜನರ ಗಮನ ಬೇರೆಡೆ ಸೆಳೆಯುವ ಬಿಜೆಪಿ ಕುತಂತ್ರ: ಕನ್ಹಯ್ಯಾ

    ಪಾಟ್ನಾ: 2008ರ ಮುಂಬೈ ದಾಳಿಯ (Mumbai Attack) ಪ್ರಮುಖ ಸೂತ್ರಧಾರಿ ಲಷ್ಕರ್ ಉಗ್ರ ತಹವ್ವೂರ್‌ ರಾಣಾನನ್ನು (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ಈಗಾಗಲೇ ರಾಣಾನನ್ನ ಕೋರ್ಟ್‌ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದ್ದು, ಎನ್‌ಐಎ ಮುಂದಿನ ವಿಚಾರಣೆ ಕೈಗೊಂಡಿದೆ. ದೇಶದ ಹಲವು ಭಾಗಗಳಿಗೆ ರಾಣಾನನ್ನ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜಕೀಯ ಜಟಾಪಟಿಯೂ ನಡೆದಿದೆ.

    ರಾಣಾ ಹಸ್ತಾಂತರ ವಿಚಾರ ಕುರಿತು ಮಾತನಾಡಿರುವ ಶಿವಸೇನಾ (UTB) ಸಂಸದ ಸಂಜಯ್‌ ರಾವತ್‌ (Sanjay Rawat), ರಾಣಾನನ್ನ ತಕ್ಷಣವೇ ಗಲ್ಲಿಗೇರಿಸಬೇಕು. ಆದ್ರೆ ಬಿಹಾರ ಚುನಾವಣೆ (Bihar Election) ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಲ್ಲಿಗೇರಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೈಟೆಕ್‌ ವಿಮಾನ, ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಕ್ರೆಡಿಟ್‌ ತೆಗೆದುಕೊಳ್ಳುವ ಅಗತ್ಯವಿಲ್ಲ
    ರಾಣಾನನ್ನು ಭಾರತಕ್ಕೆ ಕರೆತರಲು 16 ವರ್ಷ ಬೇಕಾಯಿತು. ಆದ್ರೆ ಅವನನ್ನು ಹಸ್ತಾಂತರಿಸುವ ಪ್ರಕ್ರಿಯೆ ಕಾಂಗ್ರೆಸ್‌ ಆಡಳಿತದಲ್ಲೇ ಪ್ರಾರಂಭವಾಯಿತು. ಆದ್ದರಿಂದ ಅವನನ್ನು ಮರಳಿ ಕರೆತಂದ ಕ್ರೆಡಿಟ್‌ ದೇಶಕ್ಕೆ ಸಲ್ಲುತ್ತದೆ. ಯಾರೂ ವೈಯಕ್ತಿಕವಾಗಿ ಕ್ರೆಡಿಟ್‌ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲದೇ ತಹವ್ವೂರ್‌ ರಾಣಾ ಭಾರತಕ್ಕೆ ಹಸ್ತಾಂತರಿಸಲಾದ ಮೊದಲ ಆರೋಪಿಯಲ್ಲ. ಇದಕ್ಕೂ ಮುನ್ನ 1993ರ ಸರಣಿ ಸ್ಫೋಟದ ಆರೋಪಿ ಅಬು ಸಲೇಂನನ್ನು ಕೂಡ ಭಾರತಕ್ಕೆ ಹಸ್ತಾಂತರಿಸಲಾಗಿತ್ತು ಎಂದು ನುಡಿದಿದ್ದಾರೆ.  ಇದನ್ನೂ ಓದಿ:  18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ಇದೇ ವೇಳೆ ಕಾಂಗ್ರೆಸ್‌ ನಾಯಕ ಕನ್ಹಯ್ಯಾ ಕುಮಾರ್ ಮಾತನಾಡಿ, ತಹವ್ವೂರ್‌ ರಾಣಾ ಹಸ್ತಾಂತರ ರಾಜತಾಂತ್ರಿಕ ಯಶಸ್ಸಲ್ಲ. ಸಾರ್ವಜನಿಕ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿಯ ಕುತಂತ್ರವಾಗಿದೆ ಎಂದು ಲೇವಡಿ ಮಾಡಿದ್ದಾರೆ.  ಇದನ್ನೂ ಓದಿ: ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌

  • ಯಾರಾಗ್ತಾರೆ ʻಮಹಾʼ ಸಾರಥಿ? – ಇಂದು ಮೂರು ಕಡೆ ಪ್ರತ್ಯೇಕ ಸಭೆ, ನಾಳೆಯೇ ಸಿಎಂ ಆಯ್ಕೆ?

    ಯಾರಾಗ್ತಾರೆ ʻಮಹಾʼ ಸಾರಥಿ? – ಇಂದು ಮೂರು ಕಡೆ ಪ್ರತ್ಯೇಕ ಸಭೆ, ನಾಳೆಯೇ ಸಿಎಂ ಆಯ್ಕೆ?

    – ನ.26ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ?

    ಮುಂಬೈ: ಮಹಾರಾಷ್ಟ್ರದ (Maharashtra) 288 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದೆ. ಕಳೆದ 50 ವರ್ಷಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೇ ಮೊದಲ ಬಾರಿ ಇಂತಹ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಪ್ರಧಾನಿ ಮೋದಿ (PM Modi) ಬಣ್ಣಿಸಿದ್ದಾರೆ. ಇದೀಗ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ. ಜೊತೆಗೆ ಪ್ರಬಲ ಖಾತೆಗಳ ಹಂಚಿಕೆ ಯಾರ ತೆಕ್ಕೆಗೆ ಬೀಳಲಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

    ಈ ಬೆಳವಣಿಗೆಯ ನಡುವೆ ಮಹಾಯುತಿ (Mahayuti) ಮೈತ್ರಿ ಕೂಟದ ಪಕ್ಷಗಳು ಇಂದು (ಭಾನುವಾರ) ಪ್ರತ್ಯೇಕವಾಗಿ ಉನ್ನತ ಮಟ್ಟದ ಸಭೆಗಳನ್ನ ಕರೆದಿದೆ. ಮೈತ್ರಿಕೂಟದ ಎಲ್ಲ ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಿಎಂ ಹುದ್ದೆ ಸೇರಿದಂತೆ ಸಂಪುಟದ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ಮುಂಬೈನಲ್ಲಿರುವ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇತ್ತ ಏಕನಾಥ್ ಶಿಂಧೆ ಅವರು ಬಾಂದ್ರಾದಲ್ಲಿರುವ ಹೋಟೆಲ್‌ನಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರೊಂದಿಗೆ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಎನ್‌ಸಿಪಿ ಅಜಿತ್ ಪವಾರ್ ಬಣವು ಮುಂಬೈನ ಅವರ ಅಧಿಕೃತ ನಿವಾಸ ದೇವಗಿರಿ ಬಂಗಲೆಯಲ್ಲಿ ಸಭೆ ನಡೆಸುತ್ತಿದೆ. ಇಂದು ಪ್ರತ್ಯೇಕ ಸಭೆ ನಡೆಸಿದ ಬಳಿಕ ಸೋಮವಾರ (ನ.25) ಮಹಾಯುತಿಯ ಎಲ್ಲ ಶಾಸಕರು ಒಟ್ಟಾಗಿ ಸಭೆ ಸೇರಲಿದ್ದಾರೆ. ಅಲ್ಲಿಯೇ ಮುಂದಿನ ಸಿಎಂ ಯಾರು ಎಂಬುದು ನಿರ್ಧಾರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ 233 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಆದ್ರೆ ಘಟಾನುಘಟಿ ನಾಯಕರುಳ್ಳ ಮಹಾ ವಿಕಾಸ್‌ ಅಘಾಡಿ ಕೇವಲ 49 ಸ್ಥಾನ ಗೆದ್ದು, ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರು? – ದೇವೇಂದ್ರ ಫಡ್ನವಿಸ್‌ ಹೇಳಿದ್ದೇನು?

    ಫಡ್ನವಿಸ್‌ ಆಗ್ತಾರಾ ಸಿಎಂ?
    ಈಗಾಗಲೇ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್‌ ಶಾ ಮೈತ್ರಿಕೂಟದ ನಾಯಕರಿಗೆ ತಿಳಿಸಿದ್ದಾರೆಂದು ಫಡ್ನವಿಸ್‌ ಮಾಹಿತಿ ನೀಡಿದ್ದಾರೆ.

    2022 ರಲ್ಲಿ 40 ಶಾಸಕರೊಂದಿಗೆ ಏಕನಾಥ್‌ ಶಿಂಧೆ ಅವರು ಬಿಜೆಪಿ ಮನೆ ಬಾಗಿಲಿಗೆ ಹೋದರು. ಶಿವಸೇನೆಯ ವಿಭಜನೆಯಿಂದಾಗಿ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಪರಿಣಾಮ ಎಂವಿಎ ಸರ್ಕಾರ ಪತನಗೊಂಡಿತು. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ಮುಂದೆ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬರಲು ವೇದಿಕೆ ಸಜ್ಜಾಯಿತು. ಆಗ ಪಕ್ಷದಲ್ಲಿ ಅನುಭವಿ ವ್ಯಕ್ತಿಯಿದ್ದರೂ ಬಿಜೆಪಿ ಅಚ್ಚರಿ ಎಂಬಂತೆ ಏಕನಾಥ್‌ ಶಿಂಧೆ ಅವರನ್ನೇ ಮಹಾರಾಷ್ಟ್ರ ಸಿಎಂ ಮಾಡಿತು. ಇದರ ನಡುವೆ ಎನ್‌ಸಿಪಿ ಕೂಡ ಇಬ್ಭಾಗವಾಗಿ ಅಜಿತ್‌ ಪವಾರ್‌ ಬಣ ಬಿಜೆಪಿ ಜೊತೆ ಕೈಜೋಡಿಸಿತು.

    ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ್ದ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಪ್ರಬಲ ಮರಾಠ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಏಕನಾಥ್ ಶಿಂಧೆ ಮತ್ತು 81 ಪ್ರತಿಶತದಷ್ಟು ಪ್ರಭಾವಶಾಲಿ ಸ್ಟ್ರೈಕ್ ರೇಟ್ ಸಾಧಿಸಿದ ಅವರು ಉನ್ನತ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.

    ನ.26ರಂದು ಪ್ರಮಾಣ ವಚನ ಸ್ವೀಕಾರ:
    ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ನವೆಂಬರ್‌ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದೇವೇಂದ್ರ ಫಡ್ನವಿಸ್‌ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

  • ಕಾಂಗ್ರೆಸ್‌ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್‌ ದಿಯೋರಾ

    ಕಾಂಗ್ರೆಸ್‌ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್‌ ದಿಯೋರಾ

    ಮುಂಬೈ: ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್‌ (Congress) ತೊರೆದಿದ್ದ ಮಿಲಿಂದ್‌ ದಿಯೋರಾ (Milind Deora) ಅವರು ಇದೀಗ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.

    ಇಂದು ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಯ (Shiva Sena) ಕೈ ಹಿಡಿದಿದ್ದಾರೆ. ಶಿಂಧೆ ಅವರು ಹೂಗುಚ್ಚ ನೀಡಿ ಬಳಿಕ ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್‌ ಮಾಳವಿಯಾ ವ್ಯಂಗ್ಯ

    ಬೆಳಗ್ಗೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಎಕ್ಸ್‌ನಲ್ಲಿ ಮಿಲಿಂದ್‌ ದಿಯೋರಾ ಅವರು ಪಕ್ಷ ತೊರೆಯುವುದಾಗಿ ಘೊಷಣೆ ಮಾಡಿದ್ದರು. ಇದಾದ ಬಳಿಕ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಗೆ ಮಿಲಿಂದ್‌ ಅವರು ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ಮಧ್ಯಾಹ್ನದ ವೇಳೆಗೆ ಈ ಊಹಾಪೋಹಗಳು ಸರಿಯಾಗಿವೆ. ಶಿವಸೇನೆ ಸೇರುವುದಕ್ಕೂ ಮುನ್ನ ಮಿಲಿಂದ್‌ ಅವರು ತಮ್ಮ ಕುಟುಂಬದ ಜೊತೆಗೆ ದೇವರ ದರ್ಶನ ಪಡೆದಿದ್ದಾರೆ.

    ಮಿಲಿಂದ್‌ ಅವರು ಸದ್ಯ ಶಿವಸೈನಿಕರಾಗಿದ್ದಾರೆ. ಇಂದು ಬೆಳಗ್ಗೆಯೇ ಕಾಂಗ್ರೆಸ್ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ದಿಯೋರಾ ಅವರು ಶನಿವಾರದವರೆಗೂ ಕಾಂಗ್ರೆಸ್ ತೊರೆಯುವ ಸುದ್ದಿ ಕೇವಲ ವದಂತಿ ಎಂದು ಹೇಳಲಾಗಿತ್ತು. ಆದರೆ ಇಂದು ಕೈ ತೊರೆಯುವ ಬಗ್ಗೆ ಘೊಷಣೆ ಮಾಡಿದ್ದರು.

    ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ನಾನು ಎಲ್ಲಾ ನಾಯಕರು, ಸಹೋದ್ಯೋಗಿಗಳು ಹಾಗೂ ಕೃತಜ್ಞನಾಗಿದ್ದೇನೆ ಎಂದು ಮಿಲಿಂದ್‌ ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಶಿವಸೇನೆ ಸೇರುವ ಮೂಲಕ ಎಲ್ಲಾ ವದಂತಿಗಳಿಗೆ ತೆರ ಎಳೆದಿದ್ದಾರೆ.

  • ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?

    ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?

    ಮುಂಬೈ: ಶಿವಸೇನೆ (Shivsena) ಒಡೆದಂತೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ (NCP) ಒಡೆಯುತ್ತಾ ಎಂಬ ಅನುಮಾನ ಸೃಷ್ಟಿಯಾಗಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರು ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರದಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಬಿಜೆಪಿ ಜತೆ ಸೇರಲು 53 ಎನ್‌ಸಿಪಿ ಶಾಸಕರ ಪೈಕಿ 40 ಶಾಸಕರ ಸಹಿ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯ ನಡುವೆ ಅಜಿತ್‌ ಪವಾರ್‌ ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಪಿ ಲೋಗೋವನ್ನು ತೆಗೆದಿದ್ದು ಅಂತೆ-ಕಂತೆ ಸುದ್ದಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಜಿತ್‌ ಪವಾರ್‌, ಜೀವ ಇರುವವರೆಗೂ ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ಸೇರುತ್ತೇನೆ ಎನ್ನುವ ವರದಿಗಳಲ್ಲಿ ಸುಳ್ಳು. ನಾನು ಸೇರಿದಂತೆ ಎಲ್ಲಾ ಶಾಸಕರು ಎನ್‌ಸಿ‍ಪಿಯೊಂದಿಗೆ ಇದ್ದೇವೆ ಎಂದು ಅಜಿತ್ ಪವಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಅಜಿತ್‌ ಪವಾರ್‌ ನಮ್ಮ ಪಕ್ಷದಲ್ಲೇ ಇರುತ್ತಾರೆ. ಈ ಸುದ್ದಿಗಳು ಎಲ್ಲವೂ ಸುಳ್ಳು ಎಂದು ಎನ್‌ಸಿಪಿ ವರಿಷ್ಟ ಶರದ್‌ ಪವಾರ್‌ (Sharad Pawar) ಸ್ಪಷ್ಟಪಡಿಸಿದ್ದಾರೆ.

    ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ- ಬಿಜೆಪಿ ಮೈತ್ರಿಕೂಟ ಜಯಗಳಿಸಿತ್ತು. ನಂತರ ಶಿವಸೇನೆ ಮುಖ್ಯಸ್ಥ ಉದ್ದವ್‌ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದು ಬಿಜೆಪಿ ಜೊತೆ ಮೈತ್ರಿ ಕಡಿದು ಎನ್‌ಸಿಪಿ, ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ರಚಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಶಿವಸೇನೆ ನಾಯಕ ಏಕ್‌ನಾಥ್‌ ಶಿಂಧೆ ಜೊತೆ ಶಿವಸೇನೆ ಶಾಸಕರ ಕೈ ಜೋಡಿಸಿದ ಪರಿಣಾಮ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಏರಿತ್ತು.

  • ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಬೆಳಗಾವಿ: ಕರ್ನಾಟಕ ರಾಜ್ಯದ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ (Maharashtra Government) 54 ಕೋಟಿ ರೂ. ಬಿಡುಗಡೆಗೆ ಆದೇಶ ಹೊರಡಿಸಿದೆ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 20ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ. ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿದ ಜಾಗವೇ ಬೇಕು ಅಂತಾ ಅವರು ಬೆಳಗಾವಿ (Belagavi) ಆಯ್ಕೆ ಮಾಡಿಕೊಂಡಿದ್ದಾರೆ. ಯಾವ ವಿಚಾರ ಇಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರು ಅನ್ನೋದನ್ನ ತಿಳಿಸಲಿದ್ದಾರೆ. ಆ ಮೂಲಕ ನಮಗೆ ಶಕ್ತಿ ತುಂಬಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಲಿ – ಸ್ಥಳೀಯ ಕಾಂಗ್ರೆಸ್ ನಾಯಕರ ಮನವಿ

    ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡ್ತಿದ್ದೇವೆ. ಇವತ್ತು ನಮ್ಮ ನೆಲ, ಜಲ, ಭಾಷೆ, ಗಡಿ ಇವೆಲ್ಲ ನಿಗದಿಯಾಗಿದೆ. ನಾವೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಾಗಿ ಬದುಕುತ್ತಿದ್ದೇವೆ. ಗಡಿವಿವಾದ ಮಹಾಜನ್ ವರದಿಯಲ್ಲಿ ತೀರ್ಮಾನ ಆಗಿದೆ. ನಮ್ಮ ರಾಜ್ಯ ಈ ಭಾಗಕ್ಕೆ ಶಕ್ತಿ ಕೊಡಲು ಸುವರ್ಣಸೌಧ ಕಟ್ಟಿ ಈ ಭಾಗದ ಹಿತಕ್ಕಾಗಿ ಇಡೀ ರಾಜ್ಯದ ಶಾಸಕರು ಬಂದು ಇಲ್ಲಿಯ ಸಮಸ್ಯೆ ಚರ್ಚಿಸಿ ಪರಿಹಾರಕ್ಕೆ ಬಂದಿದ್ದೇವೆ. ಗಡಿ ಜಿಲ್ಲೆಯಲ್ಲಿ ಧರ್ಮ ಇರಲಿ, ಭಾಷೆ ಇರಲಿ ಯಾವುದೇ ತಾರತಮ್ಯ ಇಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಶಿವಸೇನೆ ಸರ್ಕಾರ ಇದ್ದು, ಕನ್ನಡಿಗರನ್ನು ಕೆಣಕಿ ಶಾಂತಿಭಂಗಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸೌಹಾರ್ದಯುತ ಕೆಲಸ ಮಾಡ್ತಿದ್ದೀವಿ. ಆದರೆ ಇವತ್ತು ಮಹಾರಾಷ್ಟ್ರ ಸರ್ಕಾರ ಇಲ್ಲಿಯ 800ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಕೊಡಲು ತೀರ್ಮಾನ ಮಾಡಿದೆ. 865 ಹಳ್ಳಿಗಳಿಗೆ 54 ಕೋಟಿ ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ. ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾನು ಸಿಎಂಗೆ ಹೇಳೋದಿಷ್ಟೆ. ನಮ್ಮ ರಾಜ್ಯದ ಸ್ವಾಭಿಮಾನವನ್ನ ನೀವು ಅಡ ಇಟ್ಟಿದ್ದೀರಿ. ನಿಮ್ಮ ಅಧಿಕಾರಕ್ಕಾಗಿ ಯಾರೂ ಬೇಕಾದರೂ ಇಲ್ಲಿ ಆಡಳಿತ ನಡೆಸಬಹುದು ಅಂದುಬಿಟ್ಟಿದ್ದೀರಿ. ಕೂಡಲೇ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನ ವಜಾ ಮಾಡಬೇಕು. ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಬೆಂಬಲ ಕೊಡುತ್ತಿದೆ. ಸಂವಿಧಾನದ ಆರ್ಟಿಕಲ್ 356 ಪ್ರಕಾರ ಮಹಾರಾಷ್ಟ್ರ ಸರ್ಕಾರವನ್ನೂ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸಹ ನಾವು ಪಂಜಾಬ್, ತಮಿಳುನಾಡು, ಕೇರಳಕ್ಕೆ ಹೋಗಿ ದರ್ಬಾರ್ ಮಾಡೋಕೆ ಆಗಲ್ಲ. ಏನಾದರೂ ಸಮಸ್ಯೆ ಇದ್ರೆ ನೀರು ಇಲ್ಲದಾಗ ನೀರು, ವಿದ್ಯುತ್ ಇಲ್ಲದಿದ್ದಾಗ ವಿದ್ಯುತ್ ಸೌಲಭ್ಯ ಕೊಡುವುದು ನಡೆದುಕೊಂಡು ಬಂದಿದೆ. ಆದ್ರೆ ಅವರ ಹಣ ತಂದು ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡೋದು ಖಂಡನೀಯ. 26 ಜನ ಲೋಕಸಭಾ ಸದಸ್ಯರು, ಈ ಭಾಗದಲ್ಲಿ 5-6 ಮಂದಿ ಸಚಿವರಿದ್ದಾರೆ. ಇವರೆಲ್ಲ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಿಲ್ಲ. ಅವರೆಲ್ಲ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಗಾಂಧಿನಗರ: ಗುಜರಾತಿನ ಮೋರ್ಬಿ (Gujarat Morbi Bridge) ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 100 ಮಂದಿ ನಾಪತ್ತೆಯಾಗಿದ್ದು, ತೀವ್ರ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ಪ್ರಧಾನಿ ಮೋದಿ (Narendra Modi) ತವರಿನಲ್ಲಿ ನಡೆದ ಭೀಕರ ದುರಂತವನ್ನು 2016ರ ಮಧ್ಯ ಕೋಲ್ಕತ್ತಾದಲ್ಲಿ ನಡೆದ ಮೇಲ್ಸೇತುವೆ (Flyover) ಕುಸಿತಕ್ಕೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    2016ರಲ್ಲಿ ಪಶ್ಚಿಮ ಬಂಗಾಳದ ಚುನಾವಣಾ (West Bengal Election) ಸಂದರ್ಭದಲ್ಲಿ ಕೋಲ್ಕತ್ತಾದ ವಿವೇಕಾನಂದ ನಗರದ ಮೇಲ್ಸೇತುವೆ ಕುಸಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಸೇತುವೆ ಕುಸಿದ ಬಳಿಕ ಇದು ದೇವರ ಕಾರ್ಯ. ಇದು ಮೋಸದ ಕೃತ್ಯ, ವಂಚನೆಯ ಪರಿಣಾಮ, ಚುನಾವಣೆಯ ಸಮಯದಲ್ಲೇ ಕುಸಿದು ಬಿದ್ದಿದೆ. ನೀವು ಯಾವ ರೀ ಸರ್ಕಾರ ನಡೆಸುತ್ತೀದ್ದೀರಿ. ಇದು ನಿಜವಾಗಿಯೂ ಜನರಿಗೆ ದೇವರು ಕೊಟ್ಟ ಸಂದೇಶವಾಗಿದೆ ಎಂದು ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನ ಟೀಕಿಸಿದ್ದರು.

    ಅವರು ಎಡಪಂಥೀಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಡ-ಬಲ ಹೇಗಾದರೂ ಇರಲಿ. ಮೊದಲು ಸಾಯುತ್ತಿರುವವರ ಬಗ್ಗೆ ಯೋಚಿಸಿ, ಸತ್ತವರನ್ನು ಗೌರವಿಸಿ ಎಂದು ಮೋದಿ ಕಿಡಿಕಾರಿದ್ದರು. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷದ ನಾಯಕರು ಪ್ರಧಾನಿ ಮೋದಿ ಅವರೇ ಇಂದು ನಿಮ್ಮ ತವರಿನಲ್ಲೇ ನಡೆದಿರುವ ಘಟನೆಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

    ಟಿಎಂಸಿ (TMC) ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಟ್ವೀಟ್ (Twitter) ಮಾಡಿದ್ದು, ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ನಿಂದಿಸಿದ್ದೀರಿ. ಈಗ ಗುಜರಾತ್‌ನಲ್ಲಿ ಹೊಸದಾಗಿ ನವೀಕರಿಸಿದ ಸೇತುವೆ ಕುಸಿತು 141 ಜನ ಸಾವನ್ನಪ್ಪಿದ್ದಾರೆ. ಮೋದಿ ಜೀ ಅವರೇ ಸತ್ತವರ ಬಗ್ಗೆ ಕೆಲವು ಹನಿ ಕಣ್ಣೀರು ಇರಲಿ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

    ಇನ್ನೂ 2016ರ ಘಟನೆಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಶಿವಸೇನಾ (Shivsena) ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi), ಪಶ್ಚಿಮ ಬಂಗಾಳದಲ್ಲಿ ಸೇತುವೆ ಕುಸಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದು ದೇವರ ಕಾರ್ಯ, ವಂಚನೆಯ ಕೃತ್ಯ ಎಂದು ಹೇಳಿದ್ದನ್ನು ಗುಜರಾತಿನ ಘಟನೆ ನೆನಪಿಸುತ್ತದೆ ಎಂದು ಬರೆದು, 2016 ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    2016ರ ಮಾರ್ಚ್ 31ರಂದು ಮಧ್ಯ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 30 ಜನರು ಸಾವನ್ನಪ್ಪಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದಿದ್ದರಿಂದ ಪ್ರತಿ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದವು.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

    ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

    ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ (Maharashtra Assembly Speaker) ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಹುಲ್ ನಾರ್ವೇಕರ್ (Rahul Narwekar) 164 ಮತಗಳನ್ನು ಪಡೆದರು.

    ರಾಹುಲ್ ನಾರ್ವೇಕರ್ ಯಾರು?: ರಾಹುಲ್ ನಾರ್ವೇಕರ್ ಮಹಾರಾಷ್ಟ್ರದ ಕೊಲಾಬಾ (Colaba) ವಿಧಾನಸಭಾ ಕ್ಷೇತ್ರದ ಶಾಸಕ. ರಾಜಕೀಯ ಕುಟುಂಬಕ್ಕೆ ಸೇರಿದ ವ್ಯಕ್ತಿ. ಮಹಾರಾಷ್ಟ್ರ ರಾಜಕೀಯದಲ್ಲಿ ಚಿರಪರಿಚಿತ ವ್ಯಕ್ತಿ. ವೃತ್ತಿಯಲ್ಲಿ ವಕೀಲರಾಗಿರುವ ರಾಹುಲ್ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

    ಈ ಹಿಂದೆ ಶಿವಸೇನೆ ಹಾಗೂ ಎನ್‍ಸಿಪಿ ಜೊತೆಗೂ ಗುರುತಿಸಿಕೊಂಡಿದ್ದರು. ಶಿವಸೇನೆ ಯೂತ್ ವಿಂಗ್‍ನ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು.  ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಯಕತ್ವ ಘೋಷಣೆ ವದಂತಿ – ಅಖಾಡಕ್ಕೆ ಇಳಿದ ಡಿಕೆಶಿ

    ಕೌಟುಂಬಿಕ ಹಿನ್ನೆಲೆ: ರಾಹುಲ್ ನಾರ್ವೇಕರ್ ತಂದೆ ಸುರೇಶ್ ನಾರ್ವೇಕರ್ ಕೌನ್ಸಿಲರ್ ಆಗಿದ್ದರು. 2014ರಲ್ಲಿ ರಾಹುಲ್ ಶಿವಸೇನೆ ಪಕ್ಷದಲ್ಲಿದ್ದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.

    ಮಹಾರಾಷ್ಟ್ರ ವಿಧಾನ ಪರಿಷತ್ ಸಭಾಪತಿ ರಾಮ್ ರಾಜೇ ನಾಯ್ಕ್ ನಿಂಬಾಳ್ಕರ್ ರಾಹುಲ್ ನಾರ್ವೇಕರ್ ಅವರ ಮಾವ. ಶಿವಸೇನೆ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಎನ್‍ಸಿಪಿ ಸೇರಿದ್ದರು. ಮಾವಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದರೂ ರಾಹುಲ್ ಚುನಾವಣೆಯಲ್ಲಿ ಸೋತರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಕಾಂಗ್ರೆಸ್ ನಾಯಕ ನಾನಾ ಪಟೋಲೆ 2021ರ ಫೆಬ್ರವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.

    Live Tv

  • ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

    ಇದು ಮಂಗಗಳ ನೃತ್ಯ – ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಬಗ್ಗೆ ಓವೈಸಿ ವ್ಯಂಗ್ಯ

    ಮುಂಬೈ: ಶಿವಸೇನೆ ನೇತೃತ್ವದ `ಮಹಾ’ ಸರ್ಕಾರದ ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಗಳ ನೃತ್ಯಕ್ಕೆ ಹೋಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇದು ತ್ರಿಪಕ್ಷೀಯ ರಾಜ್ಯ ಆಡಳಿತದ ಆಂತರಿಕ ವಿಷಯ. ಪ್ರಸ್ತುತ ಬೆಳವಣಿಗೆಯನ್ನು ನಮ್ಮ ಪಕ್ಷ ಗನನಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

    ನಾವು ಬಯಲಾಗುತ್ತಿರುವ ನಾಟಕದ ಮೇಲೆ ಕಣ್ಣಿಟ್ಟಿದ್ದೇವೆ. ಮಹಾ ವಿಕಾಸ್ ಅಘಾಡಿ ಈ ವಿಷಯದ ಬಗ್ಗೆ ಚರ್ಚಿಸಲಿ. ಕೋತಿಗಳು ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುವಂತೆ ವರ್ತಿಸುತ್ತವೆ. ಹಾಗೆಯೇ ಇದೂ ಕೋತಿಗಳ ನೃತ್ಯದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

    ಏಕನಾಥ್ ಶಿಂಧೆ ಸೇನೆ ಬಂಡಾಯದ ಸುನಾಮಿಯಿಂದ ತತ್ತರಿಸಿರುವ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನದಂಚು ತಲುಪಿದೆ. ಏನೆಲ್ಲಾ ಮಾಡಿದ್ರೂ ಬಂಡಾಯದ ಬಿಸಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಶಿವಸೇನೆ ತನ್ನ ಹುಟ್ಟುಗುಣ ಪ್ರದರ್ಶನಕ್ಕೆ ಮುಂದಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರ ವಿರುದ್ಧ ಬೀದಿ ಬಡಿದಾಟದ ಸುಳಿವು ಕೊಟ್ಟಿದೆ.

    ರೆಬೆಲ್ ಶಾಸಕರ ಕಚೇರಿಗಳನ್ನು ಶಿವಸೈನಿಕರು ಟಾರ್ಗೆಟ್ ಮಾಡಿ ದಾಂಧಲೆ ನಡೆಸಿದ್ದಾರೆ. ಉಲ್ಲಾಸ್‌ನಗರದಲ್ಲಿ ಕಲ್ಲು ತೂರಾಟ ಕೂಡ ನಡೆದಿದೆ. ಇದನ್ನು ಸಂಸದ ಸಂಜಯ್ ರಾವತ್ ಸಮರ್ಥಿಸಿದ್ದಾರೆ. ಸಿಎಂ ಉದ್ಧವ್‌ಗೆ ತೊಂದ್ರೆ ಕೊಡ್ತಿರುವ ನಂಬಿಕೆ ದ್ರೋಹಿಗಳು, ಬಂಡಾಯ ಶಾಸಕರೆಲ್ಲರಿಗೂ ಇದೇ ಕಾದಿದೆ. ಅವರ ಕಚೇರಿಗಳ ಮೇಲೆಯೂ ದಾಳಿ ನಡೆಯುತ್ತದೆ. ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.

    ಈ ಕ್ಷಣದವರೆಗೂ ನಮ್ಮ ಶಿವಸೈನಿಕರು ಸಹನೆಯಿಂದಲೇ ಇದ್ದಾರೆ. ಆದ್ರೆ ಸಮಯ ಕಳೆದಂತೆ ಅವರ ಸಹನೆ ನಶಿಸ್ತಾ ಇದೆ. ಅವರೇನಾದ್ರೂ ಬೀದಿಗೆ ಇಳಿದ್ರೆ ಬೀದಿಗಳು ಧಗಧಗಿಸಲಿವೆ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ರಾವತ್ ಗಟ್ಟಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗದ ಯುವಕರು ಮೃತಪಟ್ಟಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಬರಲೇ ಇಲ್ಲ: ಸುನೀಲ್ ಕುಮಾರ್

    ಇದಕ್ಕೆ ಪೂರಕ ಎಂಬಂತೆ ರೆಬೆಲ್ ಶಾಸಕರ ಕುಟುಂಬಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಉದ್ಧವ್ ಸರ್ಕಾರ ಬೆಳಗ್ಗೆ ಹಿಂಪಡೆದಿತ್ತು. ಆದರೆ ಇದಕ್ಕೆ ಶಿಂಧೆ ಸೇರಿ ಹಲವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮಹಾ ಸರ್ಕಾರ ಉಲ್ಟಾ ಹೊಡೆದಿದೆ. ಮುಂಬೈ ಮತ್ತು ಶಿಂಧೆ ಕೋಟೆ ಥಾಣೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಶಿಂಧೆ ನಿವಾಸಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ. ಓಸ್ಮಾನಾಬಾದ್, ರ‍್ಗಾರ್, ಔರಂಗಬಾದ್ ಸೇರಿ ಹಲವೆಡೆ ಶಿವಸೈನಿಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ.

    ಶಿಂಧೆ ಬೆಂಬಲಿಗರು ಕೂಡ ಬೀದಿಗೆ ಇಳಿದು ಸೆಡ್ಡು ಹೊಡೆದಿದ್ದಾರೆ. ನಾವೇನು ಕಡಿಮೆಯಲ್ಲ. ಶಿಂಧೆ ಸಾಬ್ ಹೇಳಿದ್ದಕ್ಕೆ ಸುಮ್ನಿದ್ದೀವಿ ಎಂದು ಸಂಸದ ಶ್ರೀಕಾಂತ್ ಶಿಂಧೆ ಹೇಳಿದ್ದಾರೆ.

    ಮಹಾ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡದಿದ್ರೆ ಕೇಂದ್ರ ಮಧ್ಯ ಪ್ರವೇಶಿಸುತ್ತೆ ಎಂದು ರೆಬೆಲ್ ಎಂಎಲ್‌ಎ ದೀಪಕ್ ಎಚ್ಚರಿಸಿದ್ದಾರೆ. ಇದನ್ನು ಗಮನಿಸಿದ್ರೆ ಅಘಾಡಿ ಸರ್ಕಾರವೇ ಅರಾಜಕತೆಗೆ ದಾರಿ ಮಾಡಿಕೊಡುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವಂತೆ ಸಂಸದೆ ನವನೀತ್ ಕೌರ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.

    Live Tv

  • ಬಂಡಾಯ ಶಾಸಕರು ಅವರಪ್ಪನ ಹೆಸರು ಬಳಸಿ ಚುನಾವಣೆ ಎದುರಿಸಲಿ – ಉದ್ಧವ್ ಠಾಕ್ರೆ ಕಿಡಿ

    ಬಂಡಾಯ ಶಾಸಕರು ಅವರಪ್ಪನ ಹೆಸರು ಬಳಸಿ ಚುನಾವಣೆ ಎದುರಿಸಲಿ – ಉದ್ಧವ್ ಠಾಕ್ರೆ ಕಿಡಿ

    ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಯಾವುದೇ ಶಾಸಕನಿಗೂ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಲು ಬಿಡುವುದಿಲ್ಲ. ಬಂಡಾಯ ಶಾಸಕರು ಅವರ ತಂದೆಯ ಹೆಸರಿನಲ್ಲೇ ಚುನಾವಣೆ ಎದುರಿಸಲಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

    ಮಹಾರಾಷ್ಟ್ರದ ರಾಜಕೀಯದಲ್ಲಿ ಹಲವು ತಿರುವು ಪಡೆದುಕೊಳ್ಳುತ್ತಿವೆ. ಈ ನಡುವೆ ಏಕನಾಥ್ ಶಿಂಧೆ ಬಣದಲ್ಲಿರುವ ಬಂಡಾಯ ಶಾಸಕರು ತಮ್ಮ ಗುಂಪಿಗೆ `ಶಿವಸೇನಾ ಬಾಳಾಸಾಹೇಬ್’ ಎಂದು ಹೆಸರಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಫೋಟೋ ಕಳುಹಿಸುವಂತೆ ಪ್ರಿಯಕರನ ಕಾಟ – ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

    ಇದಕ್ಕೆ ಸಂಬಂಧಿಸಿದಂತೆ ಇಂದಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಠಾಕ್ರೆ, ಚುನಾವಣೆಯಲ್ಲಿ ಗೆಲ್ಲಲು ನನ್ನ ತಂದೆಯ ಹೆಸರನ್ನು ಹೇಳಬೇಡಿ. ನಿಮ್ಮ ತಂದೆಯ ಹೆಸರನ್ನು ಬಳಸಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ್ದಾರೆ.

    ಚುನಾವಣೆಯಲ್ಲಿ ಮತ ಪಡೆಯಲು ಇಚ್ಛಿಸಿದರೆ ಈ ಶಾಸಕರು ಅವರವರ ತಂದೆಯ ಹೆಸರನ್ನು ಹೇಳಿಕೊಂಡು ಹೋಗಲಿ. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಶಿವಸೇನಾ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಕ್ಲಾಸ್‌ನಲ್ಲಿ ಹೋಂ ವರ್ಕ್ ಬದಲಿಗೆ ಅಶ್ಲೀಲ ವೀಡಿಯೋ ಕಳಿಸಿ ತಗಲಾಕ್ಕೊಂಡ 6ನೇ ಕ್ಲಾಸ್ ವಿದ್ಯಾರ್ಥಿ

    ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಂಡಾಯ ಶಾಸಕರ ವಿರುದ್ಧ ಕ್ರಮ, ಉದ್ಧವ್ ಠಾಕ್ರೆಗೆ ಅಧಿಕಾರ ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ. ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತ ಅನುಸರಣೆ, ಮಹಾರಾಷ್ಟ್ರದ ಏಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಸೇರಿದಂತೆ 6 ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

    Live Tv

  • ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್

    ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್

    ನವದೆಹಲಿ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿರಾಕರಿಸಿದ್ದಾರೆ.

    ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷದ ನಾಯಕರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದು ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

    ಸಭೆಯಲ್ಲಿ ನಾನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಏಕೆಂದರೆ ಸಕ್ರೀಯ ರಾಜಕಾರಣದ ಇನ್ನಿಂಗ್ಸ್ ಇನ್ನೂ ಇದೆ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬೆಂಬಲ

    ಎನ್‌ಸಿಪಿ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಮುಖ ಪ್ರಕ್ಷಗಳು ಒಮ್ಮತದ ನಿರ್ಧಾರ ಕೈಗೊಂಡಿದ್ದವು. ಇತ್ತೀಚೆಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು. ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಪವಾರ್ ಅವರನ್ನು ಭೇಟಿ ಮಾಡಿ, ಒಮ್ಮತದ ಅಭ್ಯರ್ಥಿಯಾಗಿ ಬೆಂಬಲಿಸುವ ಬಗ್ಗೆ ಚರ್ಚಿಸಿರುವುದಾಗಿಯೂ ಖರ್ಗೆ ಸ್ಪಷ್ಟಪಡಿಸಿದ್ದರು.

    ಅದಕ್ಕಾಗಿಯೇ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯೇತರ ಪಕ್ಷಗಳ ನಾಯಕರು ದೆಹಲಿಗೆ ಆಹ್ವಾನಿಸಿದ್ದರು. ಟಿಎಂಸಿ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಆರ್‌ಎಸ್‌ಪಿ, ಶಿವಸೇನಾ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್‌, ಡಿಎಂಕೆ, ಆರ್‌ಎಲ್‌ಡಿ, ಐಯುಎಂಎಲ್, ಜೆಎಂಎಂ ಸೇರಿದಂತೆ 17 ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

    Live Tv