Tag: Shivraj Thangadagi

  • ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಶಿವರಾಜ್ ತಂಗಡಗಿ

    ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಶಿವರಾಜ್ ತಂಗಡಗಿ

    – ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ
    – ಸಾಕ್ಷಿ ನಾವೇ ಕೊಡಬೇಕಾದ್ರೆ ನೀವು ಯಾಕೆ ಬೇಕು?

    ಕೊಪ್ಪಳ: ಜನವರಿ ಅಂತ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಹೋಗುತ್ತೆ ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಬಾಂಬ್ ಹಾಕಿದರು.

    ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ ಅಂತ್ಯಕ್ಕೆ ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಹೋಗುತ್ತೆ. ನಮಗೆ ಮಾಹಿತಿ ಇದೆ. ಬಹಳ ಸ್ಪಷ್ಟ ಮಾಹಿತಿಗಳು ನಮಗೆ ಬರ್ತಿವೆ. ನಿಶ್ಚಿತವಾಗಿ ಇನ್ನೂ ಒಂದೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗ್ತಾರೆ. ಈ ರಾಜ್ಯಕ್ಕೆ ಇನ್ನು ಇಬ್ಬರು ಮುಖ್ಯಮಂತ್ರಿ ಬರ್ತಾರೆ. ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ. ಬೊಮ್ಮಾಯಿ ಅವರನ್ನ ಬಿಟ್ಟು ಇನ್ನು ಒಬ್ಬರು ಸಿಂ ಆಗ್ತಾರೆ. ಅವರಿಗೆ ಸಿಂಗಲ್ ಆಗಿ ಆಳ್ವಿಕೆ ಮಾಡೋಕೆ ಬರಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಶ್ರೀಕಿಗೂ, ನನ್ನ ಮಗನಿಗೂ ಯಾವುದೇ ರೀತಿಯ ಸಂಬಂಧವಿಲ್ಲ: ರುದ್ರಪ್ಪ ಲಮಾಣಿ

    ಬಿಜೆಪಿ ಸರ್ಕಾರದಲ್ಲಿ ಹಿಂದೆ ಮೂರು ಜನ ಸಿಎಂ ಆಗಿದ್ದರು. ಈ ಬಾರಿ ನಾಲ್ವರು ಆಗಬಹುದು. ಅವರು ಆಡಳಿತ ಮಾಡೋಕೆ ಸಮರ್ಥರಿಲ್ಲ ಎಂದು ಆರೋಪಿಸಿದರು. ಬೀಟ್ ಕಾಯಿನ್ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತಾಡ್ತಾರೆ. ಬೀಟ್ ಕಾಯಿನ್ ವಿಚಾರದಲ್ಲಿ ಅನೇಕ ಚರ್ಚೆ ಆಗ್ತಿವೆ. ದೂರು ದಾಖಲಾಗಿದ್ದ ಪ್ರತಿ ಕೊಡಿ ಎಂದು ನಮ್ಮ ನಾಯಕರು ಕೇಳ್ತೀದಾರೆ. ಅದರ ಬಗ್ಗೆ ಹೆದರಿಕೆ ಇರೋದಕ್ಕೆ ಬಿಜೆಪಿ ಅವರು ಕೊಡ್ತಿಲ್ಲ ಎಂದು ವ್ಯಂಗ್ಯ ಮಾಡಿದರು.

    ಆರೋಪ ಮಾಡೋರು ಸಾಕ್ಷಿ ಕೊಡಬೇಕು ಅಂದ್ರೆ ಸರ್ಕಾರ ಯಾಕೆ ಬೇಕು? ಕಿತ್ತಕೊಂಡು ಹೋಗಲಿ. ಸಾಕ್ಷಿ ನಾವೇ ಕೊಡಬೇಕಾದ್ರೆ ನೀವು ಯಾಕೆ ಬೇಕು? ನಾವೇ ಬಂದು ಅಧಿಕಾರ ಮಾಡ್ತೀವಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಹುಲಿಯ ಫೇಕ್ ವೀಡಿಯೋ ವೈರಲ್- ಇಬ್ಬರ ಬಂಧನ

  • ಮೋದಿ, ಶಾ ಬಹಳ ದಿನ ಉಳಿಯಲ್ಲ: ತಂಗಡಗಿ

    ಮೋದಿ, ಶಾ ಬಹಳ ದಿನ ಉಳಿಯಲ್ಲ: ತಂಗಡಗಿ

    ಕೊಪ್ಪಳ: ಭಾವನಾತ್ಮಕವಾಗಿ ಮತ್ತು ಕೆರಳಿಸುವಂತ ರಾಜಕಾರಣ ಮಾಡುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಹಳ ದಿನ ರಾಜಕಾರಣದಲ್ಲಿ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ಅವರು, ಮೋದಿ ಶಾ ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಇಂಥವರು ಜಗತ್ತಿನಲ್ಲಿ ಬಹಳ ದಿನ ಬದುಕಿಲ್ಲ. ಇವರಿಗೂ ಅದೇ ಪರಸ್ಥಿತಿ ಬರುತ್ತದೆ. ಅದನ್ನು ನಮ್ಮ ಕಣ್ಣಾರೆ ನೋಡ್ತೀವಿ, ದೇಶದ ಜನ ಬಹಳ ಬುದ್ಧಿವಂತರಿದ್ದಾರೆ ಎಂದು ಕಿಡಿ ಕಾರಿದರು.

    ಭಾವನಾತ್ಮಕವಾಗಿ ರಾಜಕಾರಣ ಮಾಡುವವರಿಗೆ ಬಹಳ ದಿನ ಆಯುಷ್ಯ ಇಲ್ಲ. ಇದನ್ನು ಮೋದಿ, ಶಾ ಅರ್ಥ ಮಾಡಿಕೊಳ್ಳಬೇಕು ಎಂದು ತಂಗಡಗಿ ವಾಗ್ದಾಳಿ ನೆಡಸಿದರು.