Tag: Shivraj tangadagi

  • TB ಡ್ಯಾಮ್‌ ಪರಿಶೀಲನೆಗೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಆಗಮನ: ತಂಗಡಗಿ

    TB ಡ್ಯಾಮ್‌ ಪರಿಶೀಲನೆಗೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಆಗಮನ: ತಂಗಡಗಿ

    – 2.50 ಲಕ್ಷ ಕ್ಯುಸೆಕ್‌ ನೀರು ಹೊರಬಿಟ್ಟರೆ ಜನರಿಗೆ ಅಪಾಯ; ಸಚಿವರ ಆತಂಕ

    ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Reservoir) ಕ್ರಸ್ಟ್‌ಗೇಟ್‌ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ಒಳಹರಿವು ಹೆಚ್ಚಿರುವ ಕಾರಣ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಡರಾತ್ರಿಯೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivraj Tangadagi) ಜಲಾಶಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ ಬಂದು ವೀಕ್ಷಣೆ ಮಾಡಿದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. 20 ಫೀಟ್‌ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಏನಾಗಿದೆ ಅಂತ ಗೊತ್ತಾಗಲಿದೆ. ಹೀಗಾಗಿ ಡ್ಯಾಂ ನಲ್ಲಿರೋ ನೀರನ್ನು ಖಾಲಿ ಮಾಡೋ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ್ದಾರೆ.

    ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್‌ ತರಿಸಲಾಗುತ್ತಿದೆ. ನೀರಿನ ರಭಸ ಹೆಚ್ಚಾಗಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗಲ್ಲ. ಸದ್ಯ 1 ಲಕ್ಷ ಕ್ಯುಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯುಸೆಕ್‌ ನೀರು ಬಿಟ್ಟರು ಯಾರಿಗೂ ಯಾವುದೇ ತೊಂದರೆ ಆಗಲ್ಲ. 2.50 ಲಕ್ಷ ಕ್ಯುಸೆಕ್‌ ನೀರು ಹರಿದ್ರೆ ತೊಂದರೆ ಆಗುತ್ತದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಭಾನುವಾರ (ಆ.11) ಬೆಳಗ್ಗೆ ತಜ್ಞರ ತಂಡಗಳು ಡ್ಯಾಮ್‌ಗೆ ಆಗಮಿಸಿ ಪರಿಶೀಲನೆ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ.

    ಏನಾಗಿದೆ?
    ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ ಸಂಖ್ಯೆ 19ರ ಚೈನ್‌ಲಿಂಕ್ ಶನಿವಾರ (ಆ.10) ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಯುವಕರು ಏನಾದ್ರೂ ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡಿಯಬೇಕು: ಶಿವರಾಜ್‌ ತಂಗಡಗಿ

    ಯುವಕರು ಏನಾದ್ರೂ ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡಿಯಬೇಕು: ಶಿವರಾಜ್‌ ತಂಗಡಗಿ

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivraj Tangadagi) ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ (Congress) ಅಭ್ಯರ್ಥಿ ರಾಜಶೇಖರ್ ಹಿಟ್ನಾಳ (Rajashekar Hitnal) ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಯುವಕರು ಏನಾದರೂ ಮೋದಿ ಮೋದಿ ಅಂದರೆ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

     

    ಮೋದಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಯುವ ಜನರು ಉದ್ಯೋಗ ಕೇಳಿದರೆ ಪಕೋಡಾ ಮಾರಲು ಹೋಗಿ ಎನ್ನುತ್ತಾರೆ. ಈಗ ಮತ್ತೆ ಚುನಾವಣೆ ಬಂತು ಅಂತ ಬರುತ್ತಾರೆ. ಯುವಕರು ಮೋದಿ ಮೋದಿ ಅಂದರೆ ಅವರ ಕಪಾಳಕ್ಕೆ ಬಡಿಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ, ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಸ್ವಾಗತ ಮಾಡ್ತೀನಿ: ತೇಜಸ್ವಿಸೂರ್ಯ

  • ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ: ತಂಗಡಗಿ

    ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ: ತಂಗಡಗಿ

    – ಯತ್ನಾಳ್ ನಿಜವಾಗಿಯೂ ತಾಕತ್ತು ಇರುವ ಮನುಷ್ಯ

    ಕೊಪ್ಪಳ: ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ ಮತ್ತು ಕುಂಕುಮ ಹಾಗೆ ಇಟ್ಟಿದ್ದೇವೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸಂಸದರು ಮತ್ತು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನೆಡಸಿದರು.

    ಕೊಪ್ಪಳದ ಕನಕಗಿರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಇಂದು ಕಾಂಗ್ರೆಸ್ ಸದ್ಭಾವನ ಯಾತ್ರೆ ಆಯೋಜಿಸಲಾಗಿತ್ತು. ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದಿಂದ 14 ಕಿಮೀ ಪಾದಯಾತ್ರೆ ಮೂಲಕ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕನಕಗಿರಿವರೆಗೆ ಪಾದಯಾತ್ರೆ ಮಾಡಿದರು.

    ಈ ವೇಳೆ ಕೆಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ತಂಗಡಗಿ ಬಿಜೆಪಿ ಪಕ್ಷದ ಸಂಸದರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ನೆರೆ ಸಂತ್ರಸ್ತರಿಗೆ ಕೊಡಬೇಕಾದ ಪರಿಹಾರ ಇನ್ನೂ ಪೂರ್ತಿಯಾಗಿ ಕೇಂದ್ರ ಕೊಟ್ಟಿಲ್ಲ. ತಂಗಡಗಿ ಸೀರೆ, ಕುಂಕಮ ಕಳಿಸ್ತಾರೆ ಅಂತಾನೆ ಕೇಂದ್ರ 1200 ಕೋಟಿ ಅನುದಾನ ನೀಡಲಾಗಿದೆ. ಇನ್ನೂಳಿದ ಪರಿಹಾರಕ್ಕಾಗಿ 15 ದಿನ ಗಡುವು ನೀಡುತ್ತೇವೆ. ಕೂಡಲೇ ಸರ್ಕಾರ ಎರಡನೇ ಹಂತದ ಅನುದಾನ ನೀಡಬೇಕು. ಇಲ್ಲಾಂದರೆ ಸೀರೆ, ಕುಂಕಮ ಫಿಕ್ಸ್ ಎಂದು ವಾಗ್ದಾಳಿ ನೆಡಸಿದರು.

    ಉಪಚುನಾವಣೆ ನಂತರ ಬಿಜೆಪಿ ಜೊತೆಗೆ ಬಿಎಸ್‍ವೈ ಸರ್ಕಾರ ಪತನವಾಗಲಿದೆ. ಕನಕಗಿರಿಯಲ್ಲಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಗೆಲ್ಲುವಾಗ ಬಿಎಸ್‍ವೈ ಹೆಸರು ಹೇಳುತ್ತಿದ್ದರು. ಇವಾಗ ಯಡಿಯೂರಪ್ಪ ಗೆ ಬಿಜೆಪಿಯಲ್ಲಿ ಸಂಕಷ್ಟ ಇದೆ. ಬಸವರಾಜ್ ದಡೇಸೂಗುರು ಈ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಿ ಪಕ್ಷದಿಂದ ತೆಗೆದು ಹಾಕುತ್ತಾರೆ ಎಂದು ಬಿಜೆಪಿ ಶಾಸಕರಲ್ಲಿ ಭಯ ಕಾಡುತ್ತಿದೆ ಎಂದು ಹೇಳಿದರು.

    ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾಕತ್ತಿನ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಿಜವಾದ ಕಾಳಜಿ ಬಿಜೆಪಿಯಲ್ಲಿ ಯತ್ನಾಳ್‍ಗಿದೆ. ಯತ್ನಾಳ್ ನಿಜವಾಗಿ ತಾಕತ್ತು ಇರುವ ಮನುಷ್ಯ. ನೆರೆ ಪರಿಹಾರ ಕೇಳಿದರೆ ಕೇಂದ್ರ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಇಂತಹ ಸಾವಿರ ನೋಟಿಸ್ ಕೊಟ್ಟರು ಉ.ಕರ್ನಾಟಕ ಮಂದಿ ಜಗ್ಗಲ್ಲಾ ಎಂದು ಹೇಳಿ ಶಾಸಕ ಯತ್ನಾಳ್ ಪರ ತಂಗಡಗಿ ಬ್ಯಾಟಿಂಗ್ ಮಾಡಿದರು.

  • ಸಿದ್ದರಾಮಯ್ಯರ ಕೂದಲಿಗೆ ಈಶ್ವರಪ್ಪ ಸಮವಲ್ಲ: ತಂಗಡಗಿ ವಾಗ್ದಾಳಿ

    ಸಿದ್ದರಾಮಯ್ಯರ ಕೂದಲಿಗೆ ಈಶ್ವರಪ್ಪ ಸಮವಲ್ಲ: ತಂಗಡಗಿ ವಾಗ್ದಾಳಿ

    -ಬಕೆಟ್ ಹಿಡಿಯೋರಿಗೆ ಬಿಜೆಪಿಯಲ್ಲಿ ಟಿಕೆಟ್

    ಕೊಪ್ಪಳ: ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಮೆದುಳಿಗೂ ಹಾಗೂ ನಾಲಿಗೆಗೂ ಕನೆಕ್ಷನ್ ಇಲ್ಲ. ಸಿದ್ದರಾಮಯ್ಯ ಕೂದಲಿಗೆ ಅವರು ಸಮವಲ್ಲ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

    ಮುಖ್ಯಮಂತ್ರಿಗೆ ನೆಗೆದು ಬೀಳಲಿ ಎನ್ನುವ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ತಂಗಡಗಿ ಅವರು, ಸಿಎಂಗೆ ಈ ರೀತಿ ಹೇಳೋದು ಸರಿ ಅಲ್ಲ. ಈಶ್ವರಪ್ಪರನ್ನ ಬಿಜೆಪಿಯವರು ಹೇಗೆ ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಅನ್ನೋದು ತಿಳಿಯುತ್ತಿಲ್ಲ. ಅದೇನೋ ಒಂದು ಗಾದೆ ಇದೆಯಲ್ಲಾ, `ತಿಮ್ಮ ಸಾಯಲಿ ತಿಮ್ಮ ಸಾಯಲಿ ಅಂದರೆ ತಮ್ಮ ಸತ್ತನಂತೆ’ ಹಾಗಾಯ್ತು ಇವರ ವಿಚಾರ. ಈಶ್ವರಪ್ಪರ ಮಾತಿನಿಂದ ಪಕ್ಷಕ್ಕೆ ಎಫೆಕ್ಟ್ ಆಗತ್ತೆ. ಈಶ್ವರಪ್ಪನವರೂ ಮಾತನಾಡಬೇಕಾದರೆ ಅವರ ಸ್ಥಾನ ಮಾನ ನೋಡಿ ಮಾತನಾಡಬೇಕು. ಅವರ ಮೆದುಳಿಗೆ-ನಾಲಿಗೆಗೆ ಕನೆಕ್ಷನ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗೆದು ಬಿಳ್ತಾರೆ: ಈಶ್ವರಪ್ಪ

    ಹಾಗೆಯೇ ಸಿದ್ದರಾಮಯ್ಯ ಕುರುಬರ ನಾಯಕ ಅಲ್ಲ ಎಂದು ಹೇಳಿದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೂದಲಿಗೆ ಈಶ್ವರಪ್ಪ ಸಮವಲ್ಲ, ಸಿದ್ದರಾಮಯ್ಯರಂತಹ ಲೀಡರ್ ಪಡೆದುಕೊಂಡಿದ್ದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಸಿದ್ದರಾಮಯ್ಯ ಬ್ಯಾಕ್ವರ್ಡ್ ಲೀಡರ್ ಅಂತಾರೆ, ಆದ್ರೆ ಸಿದ್ದರಾಮಯ್ಯ ಬ್ಯಾಕ್ವರ್ಡ್ ಲೀಡರ್ ಅಲ್ಲ. ಎಲ್ಲ ಸಮುದಾಯದ ಲೀಡರ್. ಕುರುಬರ ಬಗ್ಗೆ ಮತಾಡೋಕೆ ಈಶ್ವರಪ್ಪರಿಗೆ ಹಕ್ಕಿಲ್ಲ. ಸಮುದಾಯದ ಬಗ್ಗೆ ಮಾತಾಡಬೇಕಾದ್ರೆ ಈಶ್ವರಪ್ಪ ಪಕ್ಷ ಬಿಟ್ಟು ಬರಬೇಕು. ತಮ್ಮ ಸ್ವಾರ್ಥಕ್ಕೆ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ಮಾತಾಡೋಕೆ ಈಶ್ವರಪ್ಪನವರಿಗೆ ಹಕ್ಕಿಲ್ಲ ಎಂದು ಕಿಡಿಕಾರಿದರು.

    ಅಷ್ಟೇ ಅಲ್ಲದೆ ಬಿಜೆಪಿಯಲ್ಲಿ ಬಕೆಟ್ ಹಿಡಿಯೋರಿಗೆ ಮಾತ್ರ ಟಿಕೆಟ್ ನೀಡಲಾಗುತ್ತೆ. ಬಿಜೆಪಿಯಲ್ಲಿ ಸಂವಿಧಾನಕ್ಕೆ ಬೆಂಕಿ ಹಚ್ತೀನಿ ಅನ್ನೋರಿಗೆ ಟಿಕೆಟ್ ಕೊಡ್ತಾರೆ. ಗಿಮಿಕ್ ಮಾಡೋದು, ಮೋಸ ಮಾಡೋದು, ಸುಳ್ಳ ಹೇಳೊದು ಬಿಜೆಪಿಯ ಕೆಲಸ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹರಿಹಾಯ್ದರು.

  • ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಕನಕಾಚಲಪತಿ ಅದ್ಧೂರಿ ಕಲ್ಯಾಣೋತ್ಸವ

    ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಕನಕಾಚಲಪತಿ ಅದ್ಧೂರಿ ಕಲ್ಯಾಣೋತ್ಸವ

    ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಎಂದು ಕರೆಯಲ್ಪಡುವ ಕನಕಾಚಲಪತಿ ಕಲ್ಯಾಣೋತ್ಸವ ಅದ್ಧೂರಿಯಾಗಿ ಕೊಪ್ಪಳದಲ್ಲಿ ನಡೆಯಿತು.

    ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ 14 ದಿನಗಳ ಕಾಲ ಉತ್ಸವ ನಡೆಯುತ್ತದೆ. ತಿರುಪತಿಯಲ್ಲಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ನಡೆಯುವಂತೆ ಕನಕಗಿರಿಯ ಶ್ರೀ ಕನಕಾಚಲನ ಕಲ್ಯಾಣವು ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಹೆಣ್ಣಿನ ಕಡೆಯಿಂದ ಶಾಸಕ ಶಿವರಾಜ್ ತಂಗಡಗಿ ಅವರ ಧರ್ಮಪತ್ನಿ ಶ್ರೀಮತಿ ವಿದ್ಯಾ ತಂಗಡಗಿ ಭಾಗವಹಿಸಿದ್ದರು.

    ಕನಕಾಚಲನ ವಿವಾಹ ಮಹೋತ್ಸವ ಶ್ರೀ ದೇವಿ ಹಾಗೂ ಭೂದೇವಿಯರೊಂದಿಗೆ ನಡೆದು ನಂತರದಲ್ಲಿ ಬೆಳಗಿನ ಜಾವ ಶ್ರೀ ಕನಕಾಚಲ ವಿವಾಹ ಮೆರವಣಿಗೆ ಗರುಡ ವಾಹನದಲ್ಲಿ ನಡೆಯುತ್ತದೆ. ಸಾವಿರಾರು ಭಕ್ತರು ದೀವಟಿಗೆಯಲ್ಲಿ ಕರ್ಪೂರ ಹಾಗೂ ಕೊಬ್ಬರಿ ದಹಿಸುತ್ತಾ, ಮೆರವಣಿಗೆಯಲ್ಲಿ ಗೋವಿಂದಾ.. ಗೋವಿಂದಾ.. ಎಂದು ಸ್ಮರಣೆ ಮಾಡುತ್ತಾ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಹನುಮಂತನ ದೇವಸ್ಥಾನಕ್ಕೆ ತೆರಳಿ ಮತ್ತೆ ಹಿಂದಿರುಗುತ್ತಾರೆ.

    ಈ ಕಲ್ಯಾಣೋತ್ಸವ ನಂತರ ನಡೆಯುವ ಗರುಡೋತ್ಸವ ನೋಡಲು ರಾಜ್ಯವಲ್ಲದೇ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಿಂದ ಮತ್ತು ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶ್ರೀಮಂತ ದೇವರು ಎಂದು ಹೆಸರು ಪಡೆದ ತಿರುಪತಿಗೆ ಹೋಗಲಾರದ ಭಕ್ತರು ಈ ಬಡವರ ತಿರುಪತಿಯೆಂದು ಹೆಸರಾದ ಕನಕಗಿರಿಗೆ ಬಂದು ತಮ್ಮ ದಾಸೋಹ ಸೇವೆಯನ್ನು ಸಲ್ಲಿಸುತ್ತಾರೆ.

    ಕಣ್ಣಿದ್ದವರು ಕನಕಗಿರಿ ನೋಡಬೇಕು. ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ನಾಣ್ಣುಡಿಯಂತೆ ಕನಕಗಿರಿಯೂ ಕೂಡಾ ಒಂದು ಅಪೂರ್ವ ಪುಣ್ಯ ಕ್ಷೇತ್ರವಾಗಿದ್ದು ಎರಡನೇಯ ತಿರುಪತಿಯೆಂತಲೂ ಈ ಕ್ಷೇತ್ರವನ್ನು ಕರೆಯುತ್ತಾರೆ.