Tag: Shivraj Patil

  • ವಿಜಯೇಂದ್ರ‌ ಮುಂದಿನ‌ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್

    ವಿಜಯೇಂದ್ರ‌ ಮುಂದಿನ‌ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್

    ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ರಾಯಚೂರು ನಗರ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ್ ಪಾಟೀಲ್ (Shivraj Patil) ಹಾಡಿಹೊಗಳಿದ ವಿಡಿಯೋ ವೈರಲ್ ಆಗಿದೆ.

    ಲೋಕಸಭಾ ಚುನಾವಣೆ (MP Elections) ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸದ ವೇಳೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೊಗಳಿದ್ದ ಡಾ.ಶಿವರಾಜ್ ಪಾಟೀಲ್ ಹೇಳಿಕೆ ಈಗ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

    ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಬೇಕು ಎಂಬ ಕಾರಣಕ್ಕೆ ಅಶೋಕ ಚಕ್ರವರ್ತಿಯಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ವಿಜಯೇಂದ್ರ ತಿರುಗಾಡುತ್ತಿದ್ದಾರೆ. ಈ ರಾಜ್ಯ ಕಂಡಂತ ಅತ್ಯಂತ ಕಿರಿಯ, ಮುತ್ಸದಿ ರಾಜಕಾರಣಿ ವಿಜಯೇಂದ್ರ ಎಂದು ವೇದಿಕೆ ಮೇಲೆ ಶಾಸಕ ಶಿವರಾಜ್ ಪಾಟೀಲ್ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ.. ಭಕ್ತರಿಗೆ ಈಗಲೇ ಪ್ರವೇಶವಿಲ್ಲ: ವಕೀಲ ಸೋಹನ್‌ ಲಾಲ್‌ ಆರ್ಯ

  • ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    ನವದೆಹಲಿ: ಜಿಹಾದ್ (Jihad) ಪರಿಕಲ್ಪನೆ ಕೇವಲ ಇಸ್ಲಾಂ (Islam) ಧರ್ಮದಲ್ಲಿ ಮಾತ್ರವಲ್ಲ, ಭಗವದ್ಗೀತೆ (Bhagavad Gita) ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ (Christianity) ಇದೆ. ಶ್ರೀಕೃಷ್ಣನೂ (Lord Krishna) ಅರ್ಜುನನಿಗೆ (Arjun) ಜಿಹಾದ್ ಬೋಧಿಸಿದ್ದಾನೆ ಎಂದು ಕಾಂಗ್ರೆಸ್‌ನ (Congress) ಹಿರಿಯ ನಾಯಕ ಶಿವರಾಜ್ ಪಾಟೀಲ್ (Shivraj Patil) ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದ ವೇಳೆ ಮಾತನಾಡಿದ ಶಿವರಾಜ್ ಪಾಟೀಲ್, ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ವೇಳೆ ಜಿಹಾದ್ ಪರಿಕಲ್ಪನೆ ಹುಟ್ಟಿಕೊಳ್ಳುತ್ತದೆ. ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಆದರೆ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲೂ ಇದೆ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಹೇಳಿದ್ದಾರೆ.

    ಜನರಿಗೆ ಎಲ್ಲವನ್ನೂ ವಿವರಿಸಿದ ಬಳಿಕವೂ ಅರ್ಥವಾಗುವುದಿಲ್ಲ. ಬದಲಿಗೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಈ ವೇಳೆ ನಿಮ್ಮಿಂದ ಓಡಿ ಹೋಗಲು ಸಾಧ್ಯವಿಲ್ಲ. ಇದನ್ನು ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ತಪ್ಪು ಎಂದೂ ಹೇಳಲೂ ಸಾಧ್ಯವಿಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಜನರಿಗೆ ಅರ್ಥ ಮಾಡಿಸುವಂತಹ ಪರಿಕಲ್ಪನೆ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – 4 ತಿಂಗಳು ಹಿಂದೆ ಬಿದ್ದ ನಮ್ಮ ಮೆಟ್ರೋ ಕಾಮಗಾರಿ

    ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಎಎಪಿಯಲ್ಲಿ ಗೋಪಾಲ್ ಇಟಾಲಿಯಾ, ಹಾಗೂ ರಾಜೇಂದ್ರ ಪಾಲ್ ಬಳಿಕ ಇದೀಗ ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆ ನೀಡುವ ಮೂಲಕ ಹಿಂದೂ ದ್ವೇಷ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

    Live Tv
    [brid partner=56869869 player=32851 video=960834 autoplay=true]

  • ಶಿವರಾಜ್ ಪಾಟೀಲ್‌ರಿಂದ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ: ರವಿ ಬೋಸರಾಜು ಆರೋಪ

    ಶಿವರಾಜ್ ಪಾಟೀಲ್‌ರಿಂದ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ: ರವಿ ಬೋಸರಾಜು ಆರೋಪ

    ರಾಯಚೂರು: ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್‌ರಿಂದ ಇಲ್ಲಿನ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಗಂಭೀರ ಆರೋಪ ಮಾಡಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯಂತಹ ಪ್ರಕರಣಗಳು ರಾಯಚೂರಿನಲ್ಲಿಯೂ ನಡೆಯುವ ಆತಂಕವಿದೆ. ಕಾಮಗಾರಿ ಪರ್ಸೆಂಟೇಜ್ ಕಮಿಷನ್ ಹಾವಳಿ ರಾಯಚೂರಲ್ಲೂ ತಾಂಡವವಾಡುತ್ತಿದೆ. ಶಿವರಾಜ್ ಪಾಟೀಲ್ 40 ರಿಂದ 50 ಪರ್ಸೆಂಟೇಜ್ ಕೇಳುತ್ತಿದ್ದಾರೆ. ಲಾಭದಾಯಕ ಕಾಮಗಾರಿಗಳು ಶಾಸಕರ ಸಹೋದರರೇ ಮಾಡುತ್ತಿದ್ದಾರೆ. ಅಪೆಂಡೆಕ್ಸ್ ಸಿ ನಾನ್ ಪ್ಲಾನ್ಡ್ ಎಕ್ಸ್ಪೆಂಡಿಚರ್ ಅಡಿ ಬಿಜೆಪಿ ಕಾರ್ಯಕರ್ತರಿಗೆ, ಗುತ್ತಿಗೆದಾರರಿಗೆ ಕೆಲಸ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನೈತಿಕ ಸ್ಥೈರ್ಯ ಕುಗ್ಗಿಸೋದು ಕಾಂಗ್ರೆಸ್ ಕನಸು: ಕೆಜಿ ಬೋಪಯ್ಯ

    ಅನುದಾನವೇ ಇಲ್ಲದ ಕೆಲಸ ಮಾಡುವ ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಶಾಸಕರ ಹಿಂದೆ ಅಲೆದಾಡುವಂತಾಗಿದೆ. ಬಿಲ್ ನಿಲ್ಲಿಸಿ ಅವರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಂತೆ ಇಲ್ಲೂ ಅನಾಹುತಗಳಾಗುವ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

    ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿಯೂ ಶಾಸಕರು ಹಲವರಿಗೆ 3-4 ಕೋಟಿ ರೂ.ಯ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ರಾಯಚೂರು ನಗರಾಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾಮಗಾರಿ ಎಲ್ಲಿ ನಡೆದಿವೆ ಎಂಬುವುದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಈ ಹಿಂದೆ ನೇರವಾಗಿ ಆರೋಪ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅವರ ತಪ್ಪು ಒಪ್ಪಿಕೊಂಡಂತೆ ಕಾಣುತ್ತಿದೆ ಎಂದು ರವಿ ಬೋಸರಾಜು ಆರೋಪಿಸಿದ್ದಾರೆ.

  • ಅಂಗವಿಕಲ ಜಿಮ್ ಪಟು ಬಾಳಲ್ಲಿ ಬೆಳಕು

    ಅಂಗವಿಕಲ ಜಿಮ್ ಪಟು ಬಾಳಲ್ಲಿ ಬೆಳಕು

    ರಾಯಚೂರು: ಜಿಲ್ಲೆಯ ರಾಂಪೂರದ ಅಂಗವಿಕಲ ಜಿಮ್ ಪಟು ವೆಂಕಟೇಶ್ ತನ್ನ ಕಾಲ ಮೇಲೆ ತಾನು ನಿಲ್ಲಲು ಪರದಾಡುತ್ತಿದ್ದರು. ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ವೆಂಕಟೇಶ್ ಜಿಮ್ ಮುಂದುವರೆಸಲು ಹಾಗೂ ಉದ್ಯೋಗವಿಲ್ಲದೆ ಕಟ್ಟಿಗೆ ಕಡಿದು ಜೀವನ ಸಾಗಿಸುತ್ತಿದ್ದರು.

    ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ವೆಂಕಟೇಶ್‍ಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಈಗ ವೆಂಕಟೇಶ್ ಗಣೇಶನ ಮೂರ್ತಿಗಳನ್ನ ಮಾಡಿ ತನ್ನ ಜೀವನ ಸಾಗಿಸುತ್ತಿದ್ದಾರೆ. ಸ್ನೇಹಿತರೊಂದಿಗೆ ಪಾರ್ಟನರ್ ಶಿಪ್ ನಲ್ಲಿ ಗಣೇಶನ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ.

    ಗಣೇಶ ಮೂರ್ತಿಗಳ ಆರ್ಡರ್‍ಗಳು ಸಿಗುತ್ತಿದ್ದು, ತನ್ನ ಜೀವನ ಕಟ್ಟಿಕೊಂಡಿದ್ದಾರೆ. ಪರಿಶಿಷ್ಠ ವರ್ಗದ ಅಂಗವಿಕಲರಿಗೆ ಮೀಸಲಾದ ಅನುದಾನದ ಪಟ್ಟಿಯಲ್ಲೂ ವೆಂಕಟೇಶ್ ಆಯ್ಕೆಯಾಗಿದ್ದು, ಸದ್ಯದಲ್ಲೆ ವೆಂಕಟೇಶ್ ಬ್ಯಾಂಕ್ ಅಕೌಂಟಿಗೆ 50 ಸಾವಿರ ಹಣ ಜಮಾ ಆಗಲಿದೆ.

  • ಸಾಮೂಹಿಕ ವಿವಾಹದಲ್ಲಿ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ವರನಿಗೆ ಶಾಸಕರಿಂದ ಚಿಕಿತ್ಸೆ

    ಸಾಮೂಹಿಕ ವಿವಾಹದಲ್ಲಿ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ವರನಿಗೆ ಶಾಸಕರಿಂದ ಚಿಕಿತ್ಸೆ

    ರಾಯಚೂರು: ಇಂದು ರಾಯಚೂರಿನ ಬೋಳಮಾನದೊಡ್ಡಿಯಲ್ಲಿ ನಡೆದ ಸಾಮೂಹಿಕ ವಿವಾಹ ನಡೆಯುವ ವೇಳೆ ವರನೊಬ್ಬ ಬಿಸಿಲಿನ ತಾಪಕ್ಕೆ ಕುಸಿದು ಬೀಳುವ ಮೂಲಕ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

    ಬೋಳಮಾನದೊಡ್ಡಿ ಗ್ರಾಮದಲ್ಲಿ ವೆಂಕಟರಮಣ ದೇವಾಲಯದಲ್ಲಿ ನವರತ್ನ ಯುವಕ ಸಂಘ ಆಯೋಜಿಸಿದ್ದ 60 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಯಚೂರು ನಗರ ಶಾಸಕ ವೈದ್ಯ ಡಾ.ಶಿವರಾಜ್ ಪಾಟೀಲ್ ಕೂಡಲೇ ಕುಸಿದು ಬಿದ್ದ ವರ ಶಿವಕುಮಾರ್‍ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದರು. ಸದ್ಯ ಶಿವಕುಮಾರ್ ಚೇತರಿಸಿಕೊಂಡಿದ್ದಾರೆ.

    ವಿವಿಧ ಜಾತಿ ಧರ್ಮಕ್ಕೆ ಸೇರಿದ ಜೋಡಿಗಳ ಮದುವೆಯನ್ನ ಸರಳ ಹಾಗೂ ಸುಂದರವಾಗಿ ಆಯೋಜಿಸಲಾಗಿತ್ತು. ಸಾಮೂಹಿಕ ವಿವಾಹದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟ ಜೋಡಿಗೆ ಸರ್ಕಾರದ ಅನುದಾನ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಯಚೂರಿನ ಕಿಲ್ಲೆ ಬೃಹನ್‍ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ, ಮಾಜಿ ಶಾಸಕ ಎ.ಪಾಪಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.