Tag: Shivon Zillis

  • ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ವಾಷಿಂಗ್ಟನ್‌: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾ ಕಂಪನಿಯ ಮಾಲೀಕ, ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಅವರು ಕಂಪನಿಯ ಉದ್ಯೋಗಿಯೊಬ್ಬರಿಂದ ಅವಳಿ ಮಕ್ಕಳನ್ನು ಪಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಎಲೋನ್‌ ಮಸ್ಕ್ ಮಾಲೀಕತ್ವದ ಬ್ರೈನ್‌ ಚಿಪ್‌ ಸ್ಟಾರ್ಟಪ್ ನ್ಯೂರಾಲಿಂಕ್‌ನ ಉನ್ನತ ಹುದ್ದೆಯಲ್ಲಿರುವ 36 ವರ್ಷದ ಶಿವೋನ್ ಜಿಲಿಸ್ ಜತೆಗಿನ ಸಂಬಂಧದಿಂದ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳ ಹೆಸರನ್ನು ಬದಲಾವಣೆ ಮಾಡುವ ಸಂಬಂಧ ನ್ಯಾಯಾಲಯಕ್ಕೆ ಮಸ್ಕ್ ಮತ್ತು ಜಿಲಿಸ್ ಇಬ್ಬರೂ ತೆರಳಿದ್ದರಿಂದ ಈ ವಿಚಾರ ಈಗ ಬಹಿರಂಗವಾಗಿದೆ. ಅವಳಿ ಮಕ್ಕಳಿಂದಾಗಿ 51 ವರ್ಷದ ಮಸ್ಕ್‌ ಅವರು ಒಟ್ಟು 9 ಮಕ್ಕಳಿಗೆ ತಂದೆಯಾಗಿದ್ದಾರೆ.

    ಈ ಹಿಂದೆ ಕೆನಡಾದ ಗಾಯಕಿ ಗ್ರಿಮ್ಸ್ ಜತೆಗೆ ಇಬ್ಬರು ಮಕ್ಕಳನ್ನು ಮಸ್ಕ್‌ ಪಡೆದಿದ್ದಾರೆ. ಬಳಿಕ ಮಾಜಿ ಪತ್ನಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಜತೆಗಿನ ದಾಂಪತ್ಯದಲ್ಲಿ ಐದು ಮಕ್ಕಳನ್ನು ಪಡೆದಿದ್ದರು. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು

    ಶಿವೊನ್ ಜಿಲಿಸ್ ಅವರು 2017ರ ಮೇ ತಿಂಗಳಿನಲ್ಲಿ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿಗೆ ಸೇರಿದ್ದು, ನಂತರದಲ್ಲಿ ಟೆಸ್ಲಾದಲ್ಲಿ ಉನ್ನತ ಹುದ್ದೆಗೆ ಏರಿದ್ದರು.

    ಕೆನಡಾ ಮೂಲದ ಶಿವೋನ್‌ ಜಿಲಿಸ್‌ ಪ್ರಸ್ತುತ ನ್ಯೂರಲಿಂಕ್‌ನಲ್ಲಿ ಆಪರೇಷನ್‌ ಮತ್ತು ಸ್ಪೆಷಲ್‌ ಪ್ರೊಜೆಕ್ಟ್‌ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಸ್ಕ್‌ ಅವರ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಂಪನಿ OpenAI ಬೋರ್ಡ್‌ ಸದಸ್ಯರಾಗಿದ್ದಾರೆ.

    44 ಶತಕೋಟಿ ಡಾಲರ್‌ ಮೌಲ್ಯದ ಟ್ವಿಟ್ಟರ್‌ ಖರೀದಿಯ ಬಳಿಕ ಈ ಕಂಪನಿಯನ್ನು ಮುಂದೆ ಯಾರು ನೋಡಿಕೊಳ್ಳಬಹುದು ಎಂಬ ವಿಚಾರ ಚರ್ಚೆ ಆಗುತ್ತಿದ್ದಾಗ ಶಿವೋನ್ ಜಿಲಿಸ್ ಹೆಸರು ಮುನ್ನೆಲೆಗೆ ಬಂದಿತ್ತು.

    Live Tv
    [brid partner=56869869 player=32851 video=960834 autoplay=true]