Tag: shivlinga

  • ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಶ್ರೀನಗರ: ಭಾರೀ ಮಳೆಯಿಂದಾಗಿ ಇಂದು (ಶನಿವಾರ) ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು (Amarnath Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

    ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3,800 ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ. ಸುಮಾರು 4.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಕಳೆದ ವರ್ಷ ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ಆಗಸ್ಟ್ 19 ರವರೆಗೆ ಯಾತ್ರೆ ಮುಂದುವರಿಯಲಿದೆ. ಯಾತ್ರೆಯ ಮೊದಲ ವಾರದಲ್ಲಿ ದಾಖಲೆಯ 1.51 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದರು. ಆದರೆ ಸದ್ಯ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗಿದ ಕಾರಣ ಈಗಷ್ಟೇ ಬಂದಿರುವ ಯಾತ್ರಿಕರು ನಿರಾಶೆಗೊಂಡಿದ್ದಾರೆ.

    ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ತಾಪಮಾನದಿಂದಾಗಿ ಶಿವಲಿಂಗ ಕರಗುವ ಪ್ರಕ್ರಿಯೆಯು ವೇಗಗೊಂಡಿದೆ. 2008 ರ ನಂತರ ಯಾತ್ರೆಯ ಮೊದಲ 10 ದಿನಗಳಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    ಲಕ್ನೋ: ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ನಡೆಸಿದ ಸರ್ವೆ ವೇಳೆ ಪತ್ತೆಯಾದ ವಸ್ತು ಶಿವಲಿಂಗವೇ ಅಥವಾ ನೀರಿನ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ್ದ ಮನವಿಯ ತೀರ್ಪನ್ನು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ಮುಂದೂಡಿದೆ.

    ಪ್ರಕರಣ ತೀರ್ಪನ್ನು ಅಕ್ಟೋಬರ್ 11 ರಂದು ನೀಡಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಡಾ. ಎ.ಕೆ.ವಿಶ್ವೇಶ ಅವರು ಹೇಳಿದರು‌. ಮಸೀದಿ ಸಮಿತಿ ಪರ ವಕೀಲರು ಇಂದು ಆಕ್ಷೇಪ ವ್ಯಕ್ತಪಡಿಸಿದರು. ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು (Shivlinga) ಮೂಲ ಪ್ರಕರಣ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಶಿವಲಿಂಗ ರೂಪದ ಈ ಪಳಿಯುಳಿಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಕೋರಿಕೊಂಡರು. ಇದನ್ನೂ ಓದಿ: ರಾವಣನ ಪ್ರತಿಕೃತಿಯ ತಲೆಗಳು ಸುಟ್ಟುಹೋಗದಕ್ಕೆ ನೌಕರ ಅಮಾನತು

    Gyanvapi mosque, 

    ಇದಕ್ಕೆ ಒಪ್ಪಿಕೊಂಡ ನ್ಯಾಯಾಧೀಶರು ತೀರ್ಪಿನ ದಿನಾಂಕವನ್ನು ಮುಂದೂಡಿದರು. ಮಸೀದಿ ಸಮಿತಿಯ ವಕೀಲರ ವಾದ ಆಲಿಸಿದ ಬಳಿಕ ಕೋರ್ಟ್ ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಕ್ಟೋಬರ್ 11 ರೊಳಗೆ ಈ ಬಗ್ಗೆ ಮಸೀದಿಯ ಸಮಿತಿಯ ವಕೀಲರು ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಲಿದ್ದಾರೆ.

    ಇದೇ ವೇಳೆ ಕೋರ್ಟ್‌ನಲ್ಲಿದ್ದ ಹಿಂದೂ ಆರಾಧಕರ ಪರ ವಕೀಲ ವಿಷ್ಣು ಶಂಕರ್ ಜೈನ್, ಶಿವಲಿಂಗವು ಮೂಲ ಪ್ರಕರಣದ ಆಸ್ತಿಯ ಒಂದು ಭಾಗವಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908ರ ಆದೇಶ 26 ನಿಯಮ 10Aರ ಪ್ರಕಾರ, ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ (Gyanvapi Case) ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದರು. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR

    Live Tv
    [brid partner=56869869 player=32851 video=960834 autoplay=true]

  • ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಆಡಳಿತ ಮಂಡಳಿ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

    ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೀಡಿದ ಲಿಖಿತ ಆದೇಶದಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    GYANVAPI MOSQUE (1)

    ಹಲವು ಮಹತ್ವದ ಬೆಳವಣಿಗೆಯ ನಡುವೆ ವಾರಣಾಸಿ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ. ಈಗಾಗಲೇ ಸಮೀಕ್ಷಾ ತಂಡವು ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿರುವ ಸ್ಥಳವನ್ನು ಬಂದ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದೆ.

    ಕಳೆದ ವಾರ, ಮುಸ್ಲಿಂ ಮುಖಂಡ ಮನವಿಯಂತೆ ಸಮೀಕ್ಷೆ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ರವಾನಿಸಲು ಸುಪ್ರೀಂ ನಿರಾಕರಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

    Gyanvapi Masjid 1

    ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ವಾರಣಾಸಿ ಆಸ್ತಿ ವಿಚಾರವಾಗಿ ಸಮೀಕ್ಷೆಗೆ ಸಂಬಂಧಿಸಿದಂತೆ ನಾವು ಅರ್ಜಿ ಸಲ್ಲಿಸಿದ್ದೇವೆ. ಇದು (ಜ್ಞಾನವಾಪಿ) ಅನಾದಿ ಕಾಲದಿಂದಲೂ ಮಸೀದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.

  • ಶಿವಲಿಂಗ ವಿಚಾರವಾಗಿ ಆಳಂದದಲ್ಲಿ ಘರ್ಷಣೆ – ಲಾಠಿಚಾರ್ಜ್, ಬಿಗಿ ಬಂದೋಬಸ್ತ್

    ಶಿವಲಿಂಗ ವಿಚಾರವಾಗಿ ಆಳಂದದಲ್ಲಿ ಘರ್ಷಣೆ – ಲಾಠಿಚಾರ್ಜ್, ಬಿಗಿ ಬಂದೋಬಸ್ತ್

    ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ವಿಚಾರದ ಗಲಾಟೆ ವಿಕೋಪಕ್ಕೆ ಹೋಗಿದ್ದು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.

    ಶಿವಲಿಂಗದ ಶುದ್ಧೀಕರಣಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಆಂದೋಲಾದ ಶ್ರೀಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಿಂದ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಆದರೆ ಆಳಂದ ಚಲೋಗೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಕಲಬುರಗಿಗೆ ಬರುವಾಗ ಚೈತ್ರಾ ವಶಕ್ಕೆ – ಯಾದಗಿರಿ ಗಡಿ ದಾಟಿಸಿ ಬಿಟ್ಟ ಪೊಲೀಸರು

    ಶಿವರಾತ್ರಿ ಹಬ್ಬದಂದೇ ಮುಸ್ಲಿಮರ ಸಂದಲ್ ಮತ್ತು ಶಬ್‍ಏ ಬರಾತ್ ಇರುಗವುದರಿಂದ ಶಾಂತಿ ಭಂಗವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದಿಂದ ಆಳಂದ ಚಲೋಗೆ ಅನುಮತಿ ಸಿಕ್ಕಿರಲಿಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಕಲಬುರಗಿ ಜಿಲ್ಲೆಗೆ ಕಾಲಿಡುವಂತಿಲ್ಲ ಅಂತಾ ಜಿಲ್ಲಾಡಳಿತ ಆದೇಶಿಸಿತ್ತು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ದರ್ಗಾ ಪ್ರವೇಶಿಸಬಾರದು ಎಂದು ಯುವಕರ ಗುಂಪೊಂದು ನಿಷೇಧಾಜ್ಞೆ ನಡುವೆ ತಲ್ವಾರ್, ದೊಣ್ಣೆ ಪ್ರದರ್ಶಿಸಿತ್ತು. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿರಲಿಲ್ಲ. ತೀವ್ರ ಗದ್ದಲ, ಗಲಾಟೆ ನಡೆಸಿದ್ದಕ್ಕೆ ಪೊಲೀಸರು ಲಾಠಿಚಾರ್ಜ್ ನಡೆಸಿ ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

  • 9ನೇ ಶತಮಾನದ ಶಿವಲಿಂಗ ಉಜ್ಜಯಿನಿಯಲ್ಲಿ ಪತ್ತೆ

    9ನೇ ಶತಮಾನದ ಶಿವಲಿಂಗ ಉಜ್ಜಯಿನಿಯಲ್ಲಿ ಪತ್ತೆ

    ಭೋಪಾಲ್: ಉಜ್ಜಯಿನಿಯ ಮಹಾಕಾಲ್ ಮಂದಿರದ ಉತ್ಖನನದ ವೇಳೆ 9ನೇ ಶತಮಾನದ ಶಿವಲಿಂಗವೊಂದು ಪತ್ತೆಯಾಗಿದೆ.

    ಸ್ಥಳಕ್ಕಾಮಿಗಿಸಿ ಪುರಾತತ್ವ ಶಾಸ್ತ್ರ ಅಧಿಕಾರಿ ಧ್ರುವೇಂದ್ರ ಜೋಧಾ ದೇವಸ್ಥಾನದೊಳಗಿರುವ ಶಿವಲಿಂಗದಷ್ಟು ಎತ್ತರ ಅಂದ್ರೆ 5 ಅಡಿ ಎತ್ತರದ ಶಿವಲಿಂಗ ಇದಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

    ಈ ಶಿವಲಿಂಗವನ್ನು ಜಲಧಾರಿ ಎಂದು ಗುರುತಿಸಲಾಗಿದ್ದು, ಸುಮಾರು 9ನೇ ಶತಮಾನದ ಕಾಲದ್ದು ಎಂದು ಗುರುತಿಸಲಾಗಿದೆ. ಇದೇ ವೇಳೆ ಶಿವಲಿಂಗದ ಅಡಿಯಲ್ಲಿ ಇದ್ದ ಇಟ್ಟಿಗೆಗಳು ದೊರಕಿವೆ. ಈ ಇಟ್ಟಿಗೆಗಳು 5ನೇ ಶತಮಾನದವು ಎನ್ನಲಾಗಿದೆ.

    ಶಿವಲಿಂಗದ ಜೊತೆಗೆ ಸಣ್ಣದೊಂದು ವಿಷ್ಣುವಿನ ವಿಗ್ರಹ ಕೂಡ ಪತ್ತೆಯಾಗಿದ್ದು, ವಿಷ್ಣು ಚತುರ್ಭುಜ ಸ್ಥಾನಕ ಆಸನದಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ವಿಗ್ರಹ ಸುಮಾರು 10ನೇ ಶತಮಾನದ್ದಿರಬಹುದು ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಈ ಸ್ಥಳದಲ್ಲಿ ಕೆಲವು ಕೆತ್ತನೆಗಳು, ಮೂರ್ತಿ ಸಹ ಪತ್ತೆಯಾಗಿದ್ದವು ಎನ್ನಲಾಗಿದೆ.