Tag: shivasena

  • ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೆ ಬಿರುಗಾಳಿ – ಬಿಜೆಪಿ ಸೇರಲಿದ್ದಾರಾ ಶಿಂಧೆ ಬಣದ 22 ಶಾಸಕರು?

    ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೆ ಬಿರುಗಾಳಿ – ಬಿಜೆಪಿ ಸೇರಲಿದ್ದಾರಾ ಶಿಂಧೆ ಬಣದ 22 ಶಾಸಕರು?

    ಮುಂಬೈ: ಮಹಾಮೈತ್ರಿ ತೊರೆದು ಏಕನಾಥ್ ಶಿಂಧೆ (Eknath Shinde) ನೇತೃತ್ವದಲ್ಲಿ ಬಿಜೆಪಿ (BJP) ಜೊತೆಗೆ ಗುರುತಿಸಿಕೊಂಡಿದ್ದ 40 ಬಂಡಾಯ ಶಿವಸೇನೆ ಶಾಸಕರ ಪೈಕಿ 22 ಮಂದಿ ಶಾಸಕರು ಶೀಘ್ರದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾ ಪತ್ರಿಕೆ ವರದಿ ಮಾಡಿದೆ.

    ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಲ್ಲಿ ಶುರುವಾಗಿರುವ ಬಂಡಾಯದ ಬಗ್ಗೆ ವರದಿ ಮಾಡಿರುವ ಅದು, ಶಿವಸೇನೆ (ShivaSena) ಶಾಸಕರನ್ನು ಬಿಜೆಪಿ ಸೇರಿಸಲು ಏಕನಾಥ್ ಶಿಂಧೆ ಮಾಡಿದ ತಾತ್ಕಾಲಿಕ ವ್ಯವಸ್ಥೆ ಎಂದು ಆರೋಪಿಸಿದೆ. ಅಲ್ಲದೇ ಅವರ ಮುಖ್ಯಮಂತ್ರಿ ಪದವಿ ಯಾವಾಗ ಬೇಕಾದ್ರು ತೆರವಾಗಬಹುದು ಎಂದು ಭವಿಷ್ಯ ನುಡಿದಿದೆ.

    ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿಂಧೆ ಅವರ ಗುಂಪಿನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಆದರೆ ಬಿಜೆಪಿ ಅದನ್ನು ತಪ್ಪಿಸಿದೆ. ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಮತ್ತು ಸರಪಂಚ್ ಚುನಾವಣೆಯಲ್ಲಿ ಶಿಂಧೆ ಬಣದ ಯಶಸ್ಸು ಸುಳ್ಳು, ಶಿಂಧೆ ಗುಂಪಿನ ಕನಿಷ್ಠ 22 ಶಾಸಕರು ಅಸಮಾಧಾನಗೊಂಡಿದ್ದು, ಬಹುಪಾಲು ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಹೇಳಿದೆ.

    ಏಕನಾಥ್ ಶಿಂಧೆ ಮೂಲ ಶಿವಸೇನೆ ಮತ್ತು ಮಹಾರಾಷ್ಟ್ರಕ್ಕೆ (Maharashtra) ದೊಡ್ಡ ಹಾನಿಯನ್ನುಂಟುಮಾಡಿದ್ದಾರೆ. ರಾಜ್ಯವು ಅವರನ್ನು ಕ್ಷಮಿಸುವುದಿಲ್ಲ. ಬಿಜೆಪಿ ತಮ್ಮ ಲಾಭಕ್ಕಾಗಿ ಶಿಂಧೆ ಅವರನ್ನು ಬಳಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ತೆಗೆದುಕೊಳ್ಳುತ್ತಿದ್ದಾರೆ ಮತ್ತು ಸಿಎಂ ಶಿಂಧೆ ಆ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 3 ವರ್ಷದಲ್ಲಿ ಬಿಜೆಪಿ ಸಾಂಗತ್ಯ ತೊರೆದ 3 ಪ್ರಬಲ ಪ್ರಾದೇಶಿಕ ಪಕ್ಷಗಳು

    3 ವರ್ಷದಲ್ಲಿ ಬಿಜೆಪಿ ಸಾಂಗತ್ಯ ತೊರೆದ 3 ಪ್ರಬಲ ಪ್ರಾದೇಶಿಕ ಪಕ್ಷಗಳು

    ನವದೆಹಲಿ: ಜೆಡಿಯು ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದ್ದಾರೆ. ಈ ಮೂಲಕ 3 ವರ್ಷದಲ್ಲಿ ಮೂರು ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಸಾಂಗತ್ಯವನ್ನು ತೊರೆದು ಹೊರಬಂದಿವೆ.

    3 ಕೃಷಿ ಕಾನೂನು ಜಾರಿ ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಪಂಜಾಬ್‍ನ ಪ್ರಮುಖ ಪ್ರಾದೇಶಿಕ ಪಕ್ಷ ಅಕಾಲಿ ದಳ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿತ್ತು. ಕೃಷಿ ಕಾನೂನುಗಳನ್ನು ರದ್ದು ಮಾಡಲು ಅಕಾಲಿದಳ ನಾಯಕರು ಒತ್ತಾಯಿಸಿದ್ದರು. ಆದರೆ ಆರಂಭದಲ್ಲಿ ಕಾನೂನು ವಾಪಸ್ ಪಡೆಯಲು ಹಿಂದೇಟು ಹಾಕಿದ ಹಿನ್ನೆಲೆ ಅಕಾಲಿದಳ ಬಿಜೆಪಿ ಜೊತೆಗಿನ ಮೈತ್ರಿ ಕಡಿದು ಹಾಕಿತ್ತು.

    ಇನ್ನು ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಕಡಿದು ಕಾಂಗ್ರೆಸ್ ಎನ್‍ಸಿಪಿ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರಬಲ ಮೈತ್ರಿ ಹೊಂದಿದ್ದವು. ಆದರೆ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿ ಸಿಎಂ ಹುದ್ದೆ ನೀಡಲು ಒಪ್ಪದ ಬಿಜೆಪಿ ಮೈತ್ರಿಯಿಂದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೊರ ಬಂದಿದ್ದರು.

    ಇನ್ನು ಜೆಡಿಯು ಬಿಹಾರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬಂದಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಜೆಡಿಯುವನ್ನು ಇಬ್ಭಾಗಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ನಿತೀಶ್ ಕುಮಾರ್ ಪಕ್ಷದ ಉಳಿವಿಗಾಗಿ ಎನ್‍ಡಿಎ ಒಕ್ಕೂಟದಿಂದ ದೂರವಾಗಿದ್ದಾರೆ. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ

    bjP

    ಲೋಕಸಭೆ ಚುನಾವಣೆ 2 ವರ್ಷ ಬಾಕಿ ಇರುವಾಗ ಈ ಮೂರು ಪ್ರಬಲ ಪ್ರಾದೇಶಿಕ ಪಕ್ಷಗಳು ಎನ್‍ಡಿಎ ಒಕ್ಕೂಟ ತೊರೆದಿರುವುದು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಏನಾಗಬಹುದು ಎಂಬ ವಿಶ್ಲೇಷಣೆ ಆರಂಭವಾಗಿದೆ. ವಿಶೇಷವಾಗಿ ಮಹಾರಾಷ್ಟ್ರ, ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಬಿಜೆಪಿ ಹೆಚ್ಚು ಪ್ರಬಲವಾಗಿತ್ತು. ಈ ಪಕ್ಷಗಳ ಬಿಜೆಪಿ ದೊಸ್ತಿ ಮುರಿದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಲಾಭವಾಗುತ್ತಾ, ನಷ್ಟವಾಗುತ್ತಾ ಎಂಬ ಪ್ರಶ್ನೆಗೆ ಲೋಕಸಭಾ ಚುನಾವಣೆ ಉತ್ತರ ನೀಡಲಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಕೊರೊನಾ – ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಪಾಸಿಟಿವ್

    Live Tv
    [brid partner=56869869 player=32851 video=960834 autoplay=true]

  • ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್

    ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್

    ಮುಂಬೈ: ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಶಿವಸೇನೆ ಸಂಸದ ಸಂಜಯ್ ರಾವತ್ ಅವರನ್ನು ಕೋರ್ಟ್ ಆ.4ರವರೆಗೆ ಜಾರಿ ನಿರ್ದೇಶನಾಲಯ(ಇಡಿ)ದ ಕಸ್ಟಡಿಗೆ ನೀಡಿದೆ.

    ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ ರಾವತ್ ಅವರನ್ನು ಬಂಧಿಸಲಾಗಿತ್ತು. ಸಂಜಯ್ ರಾವತ್ ಅವರನ್ನು 8 ದಿನಗಳ ಕಸ್ಟಡಿಗೆ ನೀಡುವಂತೆ ಇಡಿ ನ್ಯಾಯಾಲಯವನ್ನು ಕೋರಿತ್ತು. ಅಷ್ಟೇ ಅಲ್ಲದೇ ರಾವತ್ ಸಾಕ್ಷ್ಯಾಧಾರಗಳನ್ನು ತಿರುಚುತ್ತಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಹಲವಾರು ನಿರ್ಣಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದೆ.

    8 ದಿನ ಕಸ್ಟಡಿಗೆ ಕೋರಿದ್ದ ಇಡಿ: ಆದರೆ ಇಡಿ ಪರ ವಾದಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರು ಇಡಿ ಸಂಜಯ್ ರಾವತ್ ಅವರನ್ನು ವಿಚಾರಣೆ ನಡೆಸಲು 8 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ರಾವತ್ ಪರ ವಾದಿಸಿದ್ದ ವಕೀಲ ಅಶೋಕ್ ಮುಂಡರಗಿ ಅವರು, ಸಂಜಯ್ ರಾವತ್ ಅವರು ಹೃದ್ರೋಗಿಯಾಗಿದ್ದು, ಆರೋಗ್ಯದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 8 ದಿನಗಳ ಕಸ್ಟಡಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 10 ಜನ ಸಜೀವ ದಹನ

    ಈ ಹಿನ್ನೆಲೆಯಲ್ಲಿ ವಿಶೇಷ ಪಿಎಂಎಲ್‍ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ರಾವತ್ ಅವರನ್ನು ಮೂರು ದಿನಗಳ ಕಸ್ಟಡಿಗೆ ಕಳುಹಿಸಲು ಆದೇಶಿಸಿದೆ. ಅಷ್ಟೇ ಅಲ್ಲದೇ ಮನೆಯಿಂದ ಊಟ ಹಾಗೂ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡಿದೆ.

    ಏನಿದು ಪ್ರಕರಣ?: ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು. ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‍ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‍ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ 4 ದಿನ ಆರೆಂಜ್ ಅಲರ್ಟ್ – ಹೊಸಕೋಟೆ, ಸಂಪಾಜೆಯಲ್ಲಿ ಭಾರೀ ಮಳೆ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಮುಂಬೈ: ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಭಾನುವಾರ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ.

    ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು. ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾದರು.

    ಈ ಬಗ್ಗೆ ಉಪಸಭಾಪತಿ ನರಹರಿ ಜಿರ್ವಾಲ್ ಮಾತನಾಡಿ, ಶಿಂಧೆ ಬಣ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ಜಯ ದಾಖಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ

    ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಶನಿವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿವಸೇನೆಯಿಂದ ಉಚ್ಚಾಟಿಸಿದ್ದರು.

    ಶಿವಸೇನೆ ಪಕ್ಷದ ಅಧ್ಯಕ್ಷನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ ಎಂದು ಠಾಕ್ರೆ ಅವರು ಬಂಡಾಯ ಸೇನೆಯ ಶಾಸಕರ ಬಣದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ.

    ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿಂಧೆ ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

    Live Tv

  • ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ಗುವಾಹಟಿ: ಶಿವಸೇನೆಯ ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ಅವರು ನಾಳೆ ಮುಂಬೈಗೆ ಬರುವುದಾಗಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಗುವಾಹಟಿ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಕಳೆದ ಒಂದು ವಾರದಿಂದ ನಗರದ ಪಂಚತಾರಾ ಹೋಟೆಲ್‍ನಲ್ಲಿ ತಂಗಿರುವ ಶಿಂಧೆ ಹಾಗೂ ಕೆಲವು ಬಂಡಾಯ ಶಾಸಕರೊಂದಿಗೆ ಗುವಾಹಟಿಯ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗಾಗಿ ನಾಳೆ ಮುಂಬೈಗೆ ತೆರಳಲಿದ್ದೇನೆ. ಬಾಳಾ ಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

    ಕಳೆದೆರಡು ವಾರಗಳಿಂದ ನಡೆಯುತ್ತಿದ್ದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಕ್ಕೆ ಕೊನೆಗೂ ತೆರೆಬಿದ್ದಿದೆ. ನಿನ್ನೆ ರಾತ್ರಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಭೇಟಿಯಾಗಿದ್ದರು. ರಾಜ್ಯದಲ್ಲಿ ರಾಜಕೀಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು 39 ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದಾರೆ.

    ಒಂಭತ್ತು ಮಂದಿ ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿದ್ದು, ತಾವು ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿಶ್ವಾಸಮತ ಯಾಚನೆ ಮಾಡಲು ನಿರ್ದೇಶಿಸುವಂತೆ ಗವರ್ನರ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಬಂಡಾಯ ಶಾಸಕರು ಮುಂಬೈಗೆ ಬರಲಿದ್ದಾರೆ.

    ನಿನ್ನೆ ದೆಹಲಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಜೊತೆ ಫಡ್ನವಿಸ್ ಸಭೆ ಬಳಿಕ ಮಹತ್ವದ ಬೆಳವಣಿಗೆಗಳು ನಡೆದಿದೆ. ಪಕ್ಷೇತರ ಶಾಸಕರ ಇಮೇಲ್ ಮತ್ತು ಬಿಜೆಪಿ ನಾಯಕರ ಮನವಿ ಹಿನ್ನೆಲೆ ಅಧಿಕೃತವಾಗಿ ರಾಜ್ಯಪಾಲರು ಅಖಾಡಕ್ಕೆ ಇಳಿಯಲಿದ್ದು, ಸಿಎಂ ಉದ್ದವ್ ಠಾಕ್ರೆಗೆ ಶೀಘ್ರವೇ ಬಹುಮತ ಸಾಬೀತು ಮಾಡುವಂತೆ ಸೂಚನೆ ನೀಡಲಿದ್ದಾರೆ. ರಾಜ್ಯಪಾಲರು ವಿಶ್ವಾಸಮತ ಸಾಬೀತಿಗೆ ತಿಳಿಸಿದರೆ ಠಾಕ್ರೆ ಸರ್ಕಾರ ಬಹುತೇಕ ಪತನವಾಗುತ ಸಾಧ್ಯತೆ ಇದೆ.

    Live Tv

  • ಸೇಡಿಗಾಗಿ ರೆಬೆಲ್ ಶಾಸಕರ ಕುಟುಂಬದ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ- ಶಿಂಧೆ ಆರೋಪ

    ಸೇಡಿಗಾಗಿ ರೆಬೆಲ್ ಶಾಸಕರ ಕುಟುಂಬದ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ- ಶಿಂಧೆ ಆರೋಪ

    ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ರೆಬೆಲ್ ಶಾಸಕರ ಕುಟಂಬದ ಭದ್ರತೆಯನ್ನು ಹಿಂಪಡೆದಿದೆ ಎಂದು ಶಾಸಕ ಏಕನಾಥ್ ಶಿಂಧೆ ಆರೋಪಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಠಾಕ್ರೆ, ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಜನೀಶ್ ಸೇಠ್ ಮತ್ತು ಎಲ್ಲಾ ಪೊಲೀಸ್ ಕಮಿಷನರ್‌ಗಳಿಗೆ ಬರೆದ ಪತ್ರವನ್ನು ಹಾಕಿದ್ದಾರೆ. ಜೊತೆಗೆ ಶಾಸಕರ ಕುಟುಂಬ ಸದಸ್ಯರಿಗೆ ನೀಡಿದ್ದ ಭದ್ರತಾ ರಕ್ಷಣೆಯನ್ನು ದುರುದ್ದೇಶಪೂರ್ವಕವಾಗಿ ಹಿಂಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ನಾವು ಪ್ರಸ್ತುತ ಶಾಸಕರಾಗಿದ್ದರು ಕೂಡ, ನಮ್ಮ ನಿವಾಸದಲ್ಲಿ ಹಾಗೂ ನಮ್ಮ ಕುಟುಂಬ ಸದಸ್ಯರಿಗೆ ನೀಡಿದ್ದ ಭದ್ರತೆಯನ್ನು ಕಾನೂನು ಬಾಹಿರವಾಗಿ ಹಿಂಪಡೆಯಲಾಗಿದೆ. ಈ ನಡೆಯಿಂದ ನಮ್ಮ ಸಂಕಲ್ಪವನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಎನ್‍ಸಿಪಿ ಮತ್ತು ಕಾಂಗ್ರೆಸ್‍ನ ಗೂಂಡಾಗಳನ್ನು ಒಳಗೊಂಡಿರುವ ಎಂವಿಎ ಸರ್ಕಾರವನ್ನು ಉಳಿಸಿಕೊಳ್ಳಲು ಮತ್ತೊಂದು ಪ್ರಯತ್ನವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಎಂವಿಎ ಮೈತ್ರಿಕೂಟದ ಘಟಕ ಪಕ್ಷಗಳು ಶಾಸಕರ ವಿರುದ್ಧ ಹಿಂಸಾಚಾರ ನಡೆಸಲು ತಮ್ಮ ಕಾರ್ಯಕರ್ತರನ್ನು ಪ್ರಚೋದಿಸುತ್ತಿವೆ. ಈ ರೀತಿ ಶಾಸಕರ ಕುಟುಂಬ ಸದಸ್ಯರಿಗೆ ಯಾವುದೇ ತೊಂದರೆಯಾದರೆ ಅದಕ್ಕೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಮತ್ತು ಶಿವಸೇನಾ ಸಂಸದ ಸಂಜಯ್ ರಾವತ್ ಸೇರಿದಂತೆ ಮಹಾ ವಿಕಾಸ್ ಅಘಾಡಿಯ ಉನ್ನತ ನಾಯಕರು ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

    Uddhav Thackeray

    ಈ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಅಂತಹ ಈ ಆದೇಶ ಹೊರಡಿಸಿಲ್ಲ. ಯಾವುದೇ ಶಾಸಕರ ಭದ್ರತೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಯಾಗಲಿ ಅಥವಾ ಗೃಹ ಇಲಾಖೆಯಾಗಲಿ ಆದೇಶ ನೀಡಿಲ್ಲ. ಟ್ವಿಟ್ಟರ್ ಮೂಲಕ ಹೊರಿಸಲಾಗುತ್ತಿರುವ ಆರೋಪಗಳು ಸುಳ್ಳು ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ಮಂತ್ರಿ ಗ್ರೂಪ್‌ ಎಂಡಿ ಸುಶೀಲ್ ಪಾಂಡುರಂಗ್ ಅರೆಸ್ಟ್‌

    ಶಿಂಧೆ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ರಾವತ್, ನೀವು ಶಾಸಕರಾಗಿದ್ದೀರಿ, ಆದ್ದರಿಂದ ನಿಮಗೆ ಭದ್ರತೆಯನ್ನು ಒದಗಿಸಲಾಗಿದೆ. ನಿಮ್ಮ ಕುಟುಂಬ ಸದಸ್ಯರಿಗೆ ಅದೇ ರೀತಿ ಒದಗಿಸಲಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರ ಕಾಲಾವಕಾಶ ಕೇಳಿದೆ – ಸಿಎಂ ನಿವಾಸದೆದುರಿನ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ: ಜಯಮೃತ್ಯುಂಜಯ ಸ್ವಾಮೀಜಿ

    Live Tv

  • ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

    ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಬಣಕ್ಕೆ ಹೋಗುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಇಂದು ಮತ್ತೆ ನಾಲ್ವರು ಶಾಸಕರು ಶಿಂಧೆ ಬಣ ಸೇರಿದ್ದಾರೆ.

    ಇಂತಹ ಹೊತ್ತಿನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟçದ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಆತಿಥ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಮಮತಾ ಬ್ಯಾನರ್ಜಿ ಹೇಳಿಕೆ ಹೊರಬಿದ್ದಿದೆ. ರಾಜ್ಯವು ಪ್ರವಾಹದಿಂದ ತತ್ತರಿಸುತ್ತಿರುವ ಸಮಯದಲ್ಲಿ ಈ ಶಾಸಕರು ಅಸ್ಸಾಂನಲ್ಲಿ ಏಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

    ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬೆಳವಣಿಗೆ ಶಿವಸೇನೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಶಾಸಕರು ಮೈತ್ರಿ ಕಡಿದುಕೊಳ್ಳುವಂತೆ ಬಂಡಾಯ ಎದ್ದಿದ್ದಾರೆ.

    ಸದ್ಯ ಬಂಡಾಯ ಎದ್ದಿರುವ 42 ಶಾಸಕರು ಶಿಂಧೆ ಜೊತೆ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ. ಇವರ ಪೈಕಿ 34 ಶಿವಸೇನಾ ಶಾಸಕರು ಹಾಗೂ 8 ಪಕ್ಷೇತರರು ಇದ್ದಾರೆ. ಇಂದೂ ಸಹ 7 ಮಂದಿ ಶಿಂಧೆ ಬಣ ಸೇರಿದ್ದು ಶಿವಸೇನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಅವರು, ಪ್ರವಾಹಪೀಡಿತ ಅಸ್ಸಾಂಗೆ ಶಾಸಕರನ್ನೇಕೆ ಕಳುಹಿಸಲಾಗುತ್ತಿದೆ? ಮಹಾರಾಷ್ಟ್ರ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಉತ್ತಮ ಆತಿಥ್ಯ ನೀಡುತ್ತೇವೆ ಎಂದು ಹೇಳಿದ್ದಾರೆ.

    Live Tv

  • 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

    24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

    ಮುಂಬೈ: ಬಂಡಾಯ ಶಾಸಕರು 24 ಗಂಟೆಯೊಗಳಗೆ ಹಿಂದಿರುಗುವುದಾದರೆ ಶಿವಸೇನೆ ಮೈತ್ರಿಯಿಂದ ಹೊರಬರಲು ಸಿದ್ಧ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಶಾಸಕರು ಬಯಸಿದರೆ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‍ಸಿಪಿ ಪಕ್ಷದೊಂದಿಗೆ ಹಂಚಿಕೊಂಡಿರುವ ಮೈತ್ರಿಯಾದ ಎಂವಿಎಯಿಂದ ಹೊರಬರುತ್ತದೆ. ಆದರೆ ಅವರು 24 ಗಂಟೆಗಳಲ್ಲಿ ಮುಂಬೈಗೆ ಹಿಂದಿರುಗಬೇಕು ಎಂದರು.

    ನಿಜವಾದ ಶಿವ ಸೈನಿಕರೆಂದು ಹೇಳುತ್ತಿರುವ ನೀವು, ಪಕ್ಷ ತೊರೆಯುವುದಿಲ್ಲ ಎಂದಿರುವಿರಿ. 24 ಗಂಟೆಗಳಲ್ಲಿ ನೀವು ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವುದಾದರೆ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಟ್ವಿಟ್ಟರ್ ಮತ್ತು ವಾಟ್ಸಪ್‍ನಲ್ಲಿ ಪತ್ರಗಳನ್ನು ಬರೆಯಬೇಡಿ ಎಂದರು. ಇದನ್ನೂ ಓದಿ: ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ

    ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆ ದೂರಿದೆ. ಶಿವಸೇನೆಯ ಒಟ್ಟು 42 ಬಂಡಾಯ ಶಾಸಕರು ಶಿಂಧೆ ಅವರೊಂದಿಗೆ ಇದ್ದಾರೆ. ಇವರಲ್ಲಿ ಶಿವಸೇನೆಯ 34 ಶಾಸಕರು ಮತ್ತು 7 ಪಕ್ಷೇತರರು ಸೇರಿದ್ದಾರೆ. ಇದನ್ನೂ ಓದಿ: 2.5 ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ, ಗೇಟ್‌ ಬಳಿ ಕಾಯಬೇಕಿತ್ತು: ಠಾಕ್ರೆಗೆ ಬಂಡಾಯ ಶಾಸಕನ ಪತ್ರ

    Live Tv

  • ಶಿಂಧೆ ಮಾಡಿದ್ದು ಸರಿಯಲ್ಲ, ಎಂದಿಗೂ ಶಿವಸೇನೆ ವಿಭಜನೆಯಾಗಲ್ಲ- ಸಿಎಂ ನಿವಾಸದ ಎದುರು ಕಾರ್ಯಕರ್ತರು ಕಣ್ಣೀರು

    ಶಿಂಧೆ ಮಾಡಿದ್ದು ಸರಿಯಲ್ಲ, ಎಂದಿಗೂ ಶಿವಸೇನೆ ವಿಭಜನೆಯಾಗಲ್ಲ- ಸಿಎಂ ನಿವಾಸದ ಎದುರು ಕಾರ್ಯಕರ್ತರು ಕಣ್ಣೀರು

    ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸದ ಮುಂದೆ ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ.

    ಶಿವಸೇನೆ ಎಂದಿಗೂ ವಿಭಜನೆಯಾಗುವುದಿಲ್ಲ. ನಾವು ಉದ್ಧವ್ ಠಾಕ್ರೆ ಪರ ನಿಂತಿದ್ದೇವೆ. ಏಕನಾಥ್ ಶಿಂಧೆ ಮಾಡಿದ್ದು ಸರಿಯಲ್ಲ ಎಂದು ಶಿವಸೇನೆ ಕಾರ್ಯಕರ್ತರೊಬ್ಬರು ಭಾವುಕರಾಗಿದ್ದಾರೆ. ಇತ್ತ ಶಿವಸೇನೆಯ ಮುಖಂಡ ಸಂಜಯ್ ರಾವತ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಉದ್ಧವ್ ಠಾಕ್ರೆ ಅವರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.

    ಶಿವಸೇನೆಯ ರೆಬೆಲ್ ಶಾಸಕ ಏಕನಾಥ್ ಶಿಂಧೆ ತಮ್ಮ ಶಾಸಕರ ಜೊತೆ ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲೊಂದರಲ್ಲಿ ಇದ್ದಾರೆ. ಈಗಾಗಲೇ ಅಲ್ಲಿರುವ ಶಾಸಕರ ಜೊತೆ ಇದೀಗ ಮತ್ತೆ ನಾಲ್ವರು ಶಾಸಕರು ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಬೊಮ್ಮಾಯಿಗೆ ನಿರ್ಧಾರ ತೆಗೆದುಕೊಳ್ಳೋ ಧೈರ್ಯವಿಲ್ಲ: ಮುಖ್ಯಮಂತ್ರಿ ಚಂದ್ರು

    ಒಟ್ಟಿನಲ್ಲಿ ಶಿವಸೇನಾ ಶಾಸಕ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿರುವುದು ಮಹಾರಾಷ್ಟ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿ ಸರ್ಕಾರಕ್ಕೆ ಇದೀಗ ಸಂಕಷ್ಟ ಬಂದಿದ್ದು, ಈ ಹಿನ್ನೆಲೆ ನಿನ್ನೆಯಿಂದ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಂಜಯ್ ರಾವತ್ ಟ್ವೀಟ್ ಮಾಡಿ, ವಿಧಾನಸಭೆ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಪಯಣ ಎಂದು ಬರೆದಿದ್ದರು. ಈ ಮೂಲಕ ಶಾಸಕಾಂಗ ಸಭೆಯನ್ನು ವಿಸರ್ಜಿಸುವ ಬಗ್ಗೆ ಸುಳಿವು ಕೊಟ್ಟಿದ್ದರು.

    ಅಲ್ಲದೆ ಸಿಎಂ ಉದ್ಧವ್ ಠಾಕ್ರೆ ಕೂಡ ರಾಜೀನಾಮೆಯ ಸುಳಿವು ಕೊಟ್ಟಿದ್ದರು. ಸಿಎಂ ಹುದ್ದೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಪ್ರೀತಿಯೇ ನಿಜವಾದ ಆಸ್ತಿ. ಕಳೆದ 2 ವರ್ಷಗಳಲ್ಲಿ ಜನರಿಂದ ಅಪಾರ ಪ್ರೀತಿಯನ್ನು ಪಡೆಯುವ ಭಾಗ್ಯ ನನಗಿದೆ. ಇದು ಸಂಖ್ಯೆಗಳ ಬಗ್ಗೆ ಅಲ್ಲ. ಒಬ್ಬ ಶಾಸಕನಾದರೂ ನನ್ನ ವಿರುದ್ಧ ಇದ್ದರೆ ಅದು ನನಗೆ ನಾಚಿಕೆಗೇಡಿನ ಸಂಗತಿ. ಇದರಿಂದಾಗಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದಿದ್ದರು.

    Live Tv

  • ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್

    ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್

    ಮುಂಬೈ: ಶಿವಸೇನೆಯು ಈಗಲೂ ಬಾಳ್ ಠಾಕ್ರೆ ಅವರ ತತ್ವದ ಮೇಲೆ ನಡೆಯುತ್ತಿದೆ. ಇದರಿಂದಾಗಿ ಪಕ್ಷಕ್ಕೆ ಯಾರೂ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ ಎಂದು ಸಂಸದ ಸಂಜಯ್ ರಾವತ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈಗಲೂ ಬಾಳ್ ಠಾಕ್ರೆ ಅವರ ತತ್ವಗಳ ಮೇಲೆಯೇ ನಡೆಯುತ್ತಿದ್ದೇವೆ. ಬಾಳಾ ಸಾಹೇಬರು ಧ್ವನಿವರ್ಧಕಗಳಲ್ಲಿ ಮತ್ತು ರಸ್ತೆಯಲ್ಲಿ ನಮಾಜ್ ಮಾಡುವ ವಿರುದ್ಧ ನಿಲುವನ್ನು ತೆಗೆದುಕೊಂಡಿದ್ದರು. ಅಧಿಕಾರಕ್ಕೆ ಬಂದ ನಂತರ ಅದನ್ನು ಕಾರ್ಯರೂಪಕ್ಕೆ ತಂದರು. ಯಾರೂ ಶಿವಸೇನೆಗೆ ಹಿಂದುತ್ವವನ್ನು ಕಲಿಸಬಾರದು. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಕಾನೂನು ಪ್ರಕಾರ ನಡೆಯುತ್ತಿದೆಯೇ ಹೊರತು ಯಾರದ್ದೂ ಅಲ್ಲ ಎಂದರು.

    ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರವಿದೆ. ರಾಜ್ಯದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರವಿದ್ದರೂ ಅದನ್ನು ಉದ್ಧವ್ ಠಾಕ್ರೆ ನೇತೃತ್ವ ವಹಿಸಿದ್ದಾರೆ. ಅವರು ಬಾಳ್ ಠಾಕ್ರೆ ಅವರ ಪುತ್ರರಾಗಿದ್ದಾರೆ. ಆದ್ದರಿಂದ, ಅವರು ನಮಾಜ್ ಸಮಯದಲ್ಲಿ ರಸ್ತೆಗಳಲ್ಲಿ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ಅಕ್ರಮ ಧ್ವನಿವರ್ಧಕಗಳ ಬಗ್ಗೆ ಸಲಹೆಯನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ಹೇಳಿದರು.

    ಸುಳ್ಳು ಹಿಂದುತ್ವದ ಮುಖವನ್ನು ಇಟ್ಟುಕೊಂಡು ಶಿವಸೇನೆ ವಿರುದ್ಧ ಪಿತೂರಿ ಮಾಡುವವರನ್ನು ಜನರು ಗುರುತಿಸುವುದಿಲ್ಲ ಎಂದು ಬಿಜೆಪಿ ಹಾಗೂ ಎಂಎನ್‍ಎಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ – ಮಾಜಿ ಸಿಎಂ ಪುತ್ರನ ವಿರುದ್ಧ ದೂರು

    ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕಗಳು ನಿಯಮವನ್ನು ಉಲ್ಲಂಘಿಸಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ತೆಗೆದುಕೊಂಡಿದೆ. ಹಾಗಾದರೂ ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಅದನ್ನು ಸರ್ಕಾರ ನಿಭಾಯಿಸಲು ಸಮರ್ಥವಾಗಿದೆ ಎಂದು ತಿಳಿಸಿದರು.

    loud speaker

    ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರ ಹಳೆಯ ವೀಡಿಯೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಬಾಳ್ ಠಾಕ್ರೆ ನಮ್ಮ ಪಕ್ಷವು ಅಧಿಕಾರಕ್ಕೆ ಬಂದ ದಿನ ರಸೆತಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಲಾಗುವುದು ಹಾಗೂ ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭ್ರಷ್ಟ, ಸುಲಿಗೆ ಸರ್ಕಾರಕ್ಕೆ ಜನ ಛೀ, ಥೂ ಅಂತ ಉಗಿಯುತ್ತಿದ್ದಾರೆ: ಸಿದ್ದರಾಮಯ್ಯ