Tag: Shivaratri special

  • ಶಿವರಾತ್ರಿ ಸ್ಪೆಷಲ್- ಫ್ರೂಟ್ ಸಲಾಡ್ ಮಾಡುವ ಸರಳ ವಿಧಾನ

    ಶಿವರಾತ್ರಿ ಸ್ಪೆಷಲ್- ಫ್ರೂಟ್ ಸಲಾಡ್ ಮಾಡುವ ಸರಳ ವಿಧಾನ

    ಶುಕ್ರವಾರ ಶಿವರಾತ್ರಿ ಆಚರಣೆಗೆ ಸಿದ್ಧತೆಗಳು ಮನೆಯಲ್ಲಿ ಆರಂಭಗೊಂಡಿರುತ್ತವೆ. ಶಿವರಾತ್ರಿ ಅಂದ್ರೆ ಉಪವಾಸ ವ್ರತ ಆಚರಣೆ ಇದ್ದೇ ಇರುತ್ತದೆ. ಕಳೆದ ಕೆಲ ದಿನಗಳಿಂದಲೂ ಬಿಸಿಲು ಹೆಚ್ಚಾಗ್ತಾನೆ ಇದೆ. ಹಾಗಾಗಿ ಉಪವಾಸ ವ್ರತ ಆಚರಣೆ ಸ್ವಲ್ಪ ಕಷ್ಟವಾಗಬಹುದು. ಶಿವನ ಭಕ್ತರಿಗೆ ಈ ಉಪವಾಸ ವ್ರತ ಆಚರಣೆಯಲ್ಲಿ ನೆಮ್ಮದಿಯ ಭಾವ ಇರುತ್ತದೆ. ಆದ್ರೂ ಉಪವಾಸದ ಬಳಿಕ ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶಿವರಾತ್ರಿಗಾಗಿ ವಿಶೇಷ ಫ್ರೂಟ್ ಸಲಾಡ್ ಮಾಡಿ ಹಬ್ಬವನ್ನು ಆರೋಗ್ಯಕರವಾಗಿ ಆಚರಿಸಿ.

    ಬೇಕಾಗುವ ಪದಾರ್ಥಗಳು
    * ಸೀಬೆ ಹಣ್ಣು
    * ಅನಾನಸ್
    * ದಾಳಿಂಬೆ
    * ಸ್ವೀಟ್ ಕಾರ್ನ್
    * ಆಪಲ್
    * ಪೆಪ್ಪರ್ ಪೌಡರ್
    * ಉಪ್ಪು
    * ನಿಂಬೆ ಹಣ್ಣಿನ ರಸ
    * ಕಾಯಿ ತುರಿ

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿದ ಸೀಬೆಹಣ್ಣು, ಸಣ್ಣಗೆ ಹೆಚ್ಚಿದ ಅನಾನಸ್(ಪೈನಾಪಲ್), ಸಣ್ಣಗೆ ಹೆಚ್ಚಿದ ಆಪಲ್, ಸ್ವೀಟ್ ಕಾರ್ನ್, ದಾಳಿಂಬೆಯನ್ನು ಸೇರಿಸಿ ಮಿಕ್ಸ್ ಮಾಡಿ.
    * ಈಗ ಮಿಶ್ರಣಕ್ಕೆ ಪೆಪ್ಪರ್ ಪೌಡರ್, ಉಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ.
    * ಬಳಿಕ ಸರ್ವ್ ಮಾಡುವಾಗ ಕಾಯಿ ತುರಿ ಸೇರಿಸಿ ಸರ್ವ್ ಮಾಡಿ..
    (ಬೇಕಿದ್ದಲ್ಲಿ ಇದಕ್ಕೆ ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಬಹುದು)

  • ಶಿವರಾತ್ರಿ ವಿಶೇಷ: 1008 ಲಿಂಗಗಳಿಂದ ಮಾಡಿದ್ದ ಶಿವಲಿಂಗ

    ಶಿವರಾತ್ರಿ ವಿಶೇಷ: 1008 ಲಿಂಗಗಳಿಂದ ಮಾಡಿದ್ದ ಶಿವಲಿಂಗ

    ಬೆಂಗಳೂರು: ನಾಡಿನ ಎಲ್ಲ ಭಕ್ತವೃಂದ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

    ಶಿವರಾತ್ರಿಯಂದು ಈಶ್ವರನ ಧ್ಯಾನ ಮಾಡುತ್ತಾ, ಉಪವಾಸ, ಜಾಗರಣೆ ಮಾಡಿ ಶಿವನನ್ನು ಸ್ಮರಿಸುವ ಪ್ರಯುಕ್ತ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ಬೆಂಗಳೂರಿನ ಗಿರಿನಗರದಲ್ಲಿರುವ ವಾಸವೀ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ 8 ಅಡಿಯ ಶಿವನ ಲಿಂಗವನ್ನ ಪ್ರತಿಷ್ಠಾಪಿಸಲಾಗಿತ್ತು. ಈ ಲಿಂಗದ ವಿಶೇಷವೆನೆಂದೆರೆ ಇದನ್ನು ಸಣ್ಣ ಸಣ್ಣ 1008 ಲಿಂಗಗಳಿಂದ ಮಾಡಿದ್ದ ಶಿವನ ಲಿಂಗವಾಗಿದೆ. ಈ ವಿಶೇಷ ಲಿಂಗ ನೋಡಲು ತುಂಬಾ ಸುಂದರವಾಗಿ ಕಾಣುತ್ತಿತ್ತು. ಅಷ್ಟೇ ಅಲ್ಲದೇ  ದೇವಾಲಯದ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

    ಮಂಗಳವಾರ ಸಂಜೆ 6 ಗಂಟೆಯಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಯಿತು. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.

    ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.