Tag: shivarame gowda

  • ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತೆ: ಶಿವರಾಮೇಗೌಡ ವಾಗ್ದಾಳಿ

    ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತೆ: ಶಿವರಾಮೇಗೌಡ ವಾಗ್ದಾಳಿ

    – ನಿಖಿಲ್ ಅಲ್ಲ ಕುಮಾರಸ್ವಾಮಿ ನಿಂತರೂ ಏನು ಮಾಡಕಾಗಲ್ಲ
    – ಯೋಗೇಶ್ವರ್ ಆಚೆ ಕಳುಹಿಸಲು ವಿಜಯೇಂದ್ರ, ಯಡಿಯೂರಪ್ಪ ಕಾರಣ ಎಂದ ಮಾಜಿ ಸಂಸದ

    ಮಂಡ್ಯ: ತಮ್ಮ ಕುಟುಂಬದವರನ್ನು ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತದೆ ಎಂದು ಮಾಜಿ ಸಂಸದ ಶಿವರಾಮೇಗೌಡ (Shivarame Gowda) ವಾಗ್ದಾಳಿ ನಡೆಸಿದರು.

    ಮಂಡ್ಯದ (Mandya) ನಾಗಮಂಗಲದಲ್ಲಿ ಮಾತನಾಡಿದ ಅವರು, ಡಾ.ಮಂಜುನಾಥ್ ಅಭ್ಯರ್ಥಿ ಮಾಡಲು ಯೋಗೇಶ್ವರ್ ಶ್ರಮವಹಿಸಿದರು. ಆದರೆ, ಚನ್ನಪಟ್ಟಣದಲ್ಲಿ ಯೋಗೇಶ್ವರ್‌ರನ್ನೇ ಬಲಿ ಪಡೆದಿದ್ದಾರೆ. ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತಾರೆ. ಚನ್ನಪಟ್ಟಣ ಜನ ದಡ್ಡರಲ್ಲ, ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿ ವಿಚಾರಣೆ; ಈಗ ಎ1 ಸಿದ್ದರಾಮಯ್ಯ ಸರದಿ – ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ

    ನಿಖಿಲ್ ಅಲ್ಲ ಕುಮಾರಸ್ವಾಮಿ ನಿಂತರೂ ಏನು ಮಾಡಲಾಗಲ್ಲ. ಯೋಗೇಶ್ವರ್ ಆಚೆ ಕಳುಹಿಸಲು ವಿಜಯೇಂದ್ರ, ಯಡಿಯೂರಪ್ಪ ಕಾರಣ. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ಯೋಗೇಶ್ವರ್ ಆಚೆ ಹೋದರು. ಪಾಪ ಈಗ ನಿಖಿಲ್‌ನನ್ನ ಚುನಾವಣಾ ಆಹುತಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕುಮಾರಸ್ವಾಮಿ 2 ಬಾರಿ ಲಾಟರಿಯಲ್ಲಿ ಸಿಎಂ ಆದವರು. ಕಳೆದ ಚುನಾವಣೆಯಲ್ಲಿ ಹೆಚ್‌ಡಿಕೆ ಗಾಡಿ ನಿಂತು ಹೋಗಿತ್ತು. ಪಾಪ ಮುಳುಗುವ ಹಡಗು ಎಂದು ಮಂಡ್ಯ ಜನರ ಕೈ ಹಿಡಿದರು. ಉನ್ನತ ಹುದ್ದೆಯಲ್ಲಿದ್ದು ಕುಮಾರಸ್ವಾಮಿ ಏನ್ ಮಾಡ್ತಿದ್ದಾರೆ. ಮಂಡ್ಯದಲ್ಲಿ 4 ದಿನ ಬೆಂಗಳೂರಲ್ಲಿ 4 ದಿನ ಇರ್ತಾರೆ. ದೇಶ-ವಿದೇಶ ಸುತ್ತಿ ಬೃಹತ್ ಕೈಗಾರಿಕಾಗಳ ಸ್ಥಾಪನೆ ಮಾಡಬೇಕಿತ್ತು. ಆದರೆ ರಾಜ್ಯಕ್ಕೆ ಬಂದಾಗಲೆಲ್ಲಾ ಮುಡಾ ಕೇಸು, ಡಿಕೆಶಿ ಮುಖ ಕೆರೆಯುವ ಕೆಲಸ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಕೈಗಾರಿಕಾ ತಂದು ಮಂಡ್ಯ ಜನರ ಋಣ ತೀರಿಸುವ ಕೆಲಸ ಕುಮಾರಸ್ವಾಮಿ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ – ಎರಡನೇ ದಿನವೂ ಭಕ್ತರ ದಂಡು

  • ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ

    ಎಸ್‌ಐಟಿ ಮೊದಲು ದೇವರಾಜೇಗೌಡನನ್ನು ಎಳೆದುಕೊಂಡು ಹೋಗ್ಬೇಕು: ಶಿವರಾಮೇಗೌಡ

    ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡ (Devarajegowda) ಆಡಿಯೋ ಬಾಂಬ್‌ಗೆ (Audio Bomb) ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (L. R. Shivarame Gowda) ಸ್ಪಷ್ಟನೆ ನೀಡಿದ್ದಾರೆ. ಡಿಸಿಎಂ ಡಿಕೆಶಿವಕುಮಾರ್‌ (DK Shivakumar) ಹತ್ತಿರ ಮಾತಾಡಿಸಿದ್ದು ನಿಜ ಅಂತ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಶೇಷ ತನಿಖಾ ತಂಡ(SIT) ಮೊದಲು ದೇವರಾಜೇಗೌಡನ ಎಳೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

    ಖಾಸಗಿ ಹೋಟೆಲ್‌ಗೆ ದೇವರಾಜೇಗೌಡ (Devarajegowda) ಬಂದಿದ್ದ. ವಿಶೇಷ ತನಿಖಾ ತಂಡದ ತನಿಖೆ ತಡೆಯಾಜ್ಞೆ ತರುತ್ತಾರೆ ಎಂದು ಹೇಳಿದ್ದ. ಅದಕ್ಕಾಗಿ ಶಿವಕುಮಾರ್‌ರನ್ನು ಭೇಟಿ ಮಾಡಿಸಿ ಅಂತ ಕೇಳಿಕೊಂಡ. ಆಗ ಡಿಕೆಶಿಗೆ ಫೋನ್ ಮಾಡಿ ಭೇಟಿಗೆ ಕೇಳಿದೆ. ಡಿಕೆಶಿ ನಿರಾಕರಿಸಿದರು. ನಾನೇ ಒತ್ತಾಯ ಮಾಡಿ ನೀವೊಬ್ಬರು ಡಿಸಿಎಂ ಆಗಿ ಭೇಟಿ ಮಾಡಿಲ್ಲ ಅಂದರೆ ಹೇಗೆ ಅಂತ ಕೇಳಿದೆ. ಆಗ ಅಲ್ಲಿಂದಲೇ ದೇವರಾಜೇಗೌಡಗೆ ಕಾಲ್ ಮಾಡಿ ಡಿಕೆಶಿಗೆ ಫೋನ್ ಕೊಟ್ಟೆ. ನಿನ್ನ ಬಳಿ ಏನಿದೆ ಅದನ್ನು ಎಸ್‌ಐಟಿಗೆ ಕೊಡಿ ಅಂತ ಡಿಕೆಶಿ ಹೇಳಿದ್ರು ಅಷ್ಟೇ ಎಂದರು. ಇದನ್ನೂ ಓದಿ: ಕನ್ನಡ ಪ್ರಸಿದ್ಧ ಕಿರುತೆರೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್: ಜ್ಯೋತಿ ರೈ ಹೇಳಿದ್ದೇನು?

     

    ದೇವರಾಜೇಗೌಡಗೆ ಕ್ಯಾಬಿನೆಟ್ ದರ್ಜೆಯ ಆಮಿಷ ನೀಡಿಲ್ಲ. ಆತ ಗ್ರಾಮ ಪಂಚಾಯತ್‌ ಸದಸ್ಯ ಆಗಲು ಲಾಯಕ್ ಇಲ್ಲ. ಅವನ ಮೈ ಎಲ್ಲಾ ಕ್ಯಾಮೆರಾ ರೀತಿಯಲ್ಲಿ ಮಾಡಿಕೊಂಡಿದ್ದಾನೆ. ಪೆನ್‌ಡ್ರೈವ್‌ ಹೆಸರು ಹೇಳಿಕೊಂಡು ದೇವರಾಜೇಗೌಡ 80 ಕೋಟಿ ರೂ.ವರೆಗೆ ಆಸ್ತಿ ಮಾಡಿಕೊಂಡಿದ್ದಾನೆ. 2 ತಿಂಗಳ ಕಾಲ್ ಲಿಸ್ಟ್ ತೆಗೆಸಿದ್ರೆ ಎಲ್ಲ ಸತ್ಯ ಹೊರಬರಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ನಾನು ಡಾರ್ಕ್ ಸ್ಕಿನ್ ಭಾರತೀಯ- ಸ್ಯಾಮ್‌ ಪಿತ್ರೋಡಾಗೆ ಅಣ್ಣಾಮಲೈ ತಿರುಗೇಟು

    ಡ್ರೈವರ್‌ ಕಾರ್ತಿಕ್ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಆಸ್ತಿ ವಿಚಾರವಾಗಿ ಭೇಟಿ ಮಾಡಿದ್ದ. ಅದನ್ನು ಬಿಟ್ಟರೆ ಮತ್ತೆ ಭೇಟಿಯಾಗಿಲ್ಲ. ದೇವರಾಜೇಗೌಡ ಬಿಟ್ಟಿರುವ ಆಡಿಯೋ ಕಟ್ ಮಾಡಿ ಬಿಟ್ಟಿದ್ದಾನೆ. ಅದನ್ನು ಪೂರ್ತಿ ಬಿಡುಗಡೆ ಮಾಡಲಿ. ಆರೋಪ ಸಾಬೀತು ಮಾಡಿದ್ರೆ ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಇದ್ದೇನೆ ಅಂತ ಶಿವರಾಮೇಗೌಡ ಸವಾಲ್ ಹಾಕಿದ್ದಾರೆ.

     

  • ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸ್ವಾಭಿಮಾನದ ಹೆಸರಿನಲ್ಲಿ ನನಗೆ ಮತ ನೀಡಿ ಎಂದು ಸೆರಗೊಡ್ಡಿ ಜೆಡಿಎಸ್‌‌ನ್ನು (JDS) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಮಣಿಸಿದ್ದರು. ಇದೀಗ ಇದೇ ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (Shivarame Gowda) ಮುಂದಾಗಿದ್ದಾರೆ. ಈ ಮೂಲಕ ಮಂಡ್ಯ (Mandya) ಜಿಲ್ಲೆಯಲ್ಲಿ ಮತ್ತೊಂದು ಸ್ವಾಭಿಮಾನದ ಕದನಕ್ಕೆ ರಂಗ ಸಿದ್ಧವಾಗುತ್ತಿದೆ.

    ಕಳೆದ ಲೋಕಸಭಾ ಚುನಾವಣೆಯ ವೇಳೆ ಇಡೀ ದೇಶದ ಕಣ್ಣು ಮಂಡ್ಯ ಜಿಲ್ಲೆಯ ಮೇಲೆ ಇತ್ತು. ಇದಕ್ಕೆ ಕಾರಣವಾಗಿದ್ದು ಜೆಡಿಎಸ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ ನಡುವಿನ ಫೈಟ್ ಆಗಿತ್ತು. ಈ ವೇಳೆ ಸ್ವಾಭಿಮಾನಿ ಕಹಳೆ ಊದಿದ್ದ ಸುಮಲತಾ ಅಂಬರೀಶ್ ಬಹಿರಂಗ ಸಭೆಯಲ್ಲಿ ಸ್ವಾಭಿಮಾನಿ ಮತದಾರರೇ ನನಗೆ ಮತ ನೀಡಿ ಗೆಲ್ಲಿಸಿ ಎಂದು ಭಾವುಕರಾಗಿ ಹೇಳಿದ್ದರು. ಇದಾದ ನಂತರ ಮಂಡ್ಯ ಜಿಲ್ಲೆಯ ಜನರು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಉಘೇ ಉಘೇ ಎಂದು ಗೆಲ್ಲಿಸುವ ಮೂಲಕ ಜೆಡಿಎಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಹಾದಿಯನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತುಳಿದಿದ್ದಾರೆ.

    ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ‌ ಪೈಕಿ ನಾಗಮಂಗಲ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರವಾಗಲಿದೆ. ಈ ಕ್ಷೇತ್ರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಜೆಡಿಎಸ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.‌ ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ ಬಳಿಕ ನಾಗಮಂಗಲ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವ ಶಿವರಾಮೇಗೌಡ, ಇದೀಗ ಸ್ವಾಭಿಮಾನದ ಹೆಸರ ಮೂಲಕ ಜನರ ಮುಂದೆ ಹೊಗುತ್ತಿದ್ದಾರೆ.

    ನಾಗಮಂಗಲ ಕ್ಷೇತ್ರದ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್.ಆರ್.ಎಸ್ ಸ್ವಾಭಿಮಾನಿ ಪರ್ವ ಎಂಬ ಕಾರ್ಯಕ್ರಮದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ನಾಗಮಂಗಲದ ರಣಕಣದಲ್ಲಿ ಜೆಡಿಎಸ್ ವಿರುದ್ಧ ಶಿವರಾಮೇಗೌಡ ಕಹಳೆ ಊದಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಪತ್ನಿ ಸ್ವಾಭಿಮಾನದಿಂದ ನಿಮ್ಮ ಬಳಿ ಮತ ಕೇಳಿದರು. ಆಗ ಯಾರನ್ನು ನೋಡದೇ ಸುಮಲತಾ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೀರಾ. ಈಗ ನಾನು ಸಹ ನಿಮ್ಮ ಮುಂದೆ ಟವಲ್‌ವೊಡ್ಡಿ ಭಿಕ್ಷೆ ಬೇಡುತ್ತಿದ್ದೇನೆ, ನನ್ನ ಗೆಲ್ಲಿಸಿ ಎಂದು ನಾಗಮಂಗಲದ ಕದಬಹಳ್ಳಿಯ ಸ್ವಾಭಿಮಾನಿ ಪರ್ವ ಕಾರ್ಯಕ್ರಮದಲ್ಲಿ‌ ಶಿವರಾಮೇಗೌಡ ಭಾವುಕರಾಗಿ ಹೇಳಿದ್ದಾರೆ.

    ಇದೇ ಸ್ವಾಭಿಮಾನಿ ಪರ್ವದಲ್ಲಿ ಒಂದು ಕಡೆ ನನ್ನ ಕೈ ಹಿಡಿಯಿರಿ ಎಂದು ಜನರ ಬಳಿ ಮನವಿ ಮಾಡಿರುವ ಶಿವರಾಮೇಗೌಡ ಇನ್ನೊಂದು ಕಡೆ ನನಗೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ 2018ರ ಮಂಡ್ಯ ಲೋಕಸಭಾ ಉಪಚುನಾವಣೆಗಾಗಿ ನನ್ನಿಂದ‌ 32 ಕೋಟಿ ರೂ. ಖರ್ಚು ಮಾಡಿಸಿದ್ದಾರೆ. ಆದರೆ ನನಗೆ 5 ತಿಂಗಳು ಮಾತ್ರ ಸಂಸದರನ್ನಾಗಿ ಮಾಡಿದರು. 5 ತಿಂಗಳಿಗೆ 32 ಕೋಟಿ‌ ಖರ್ಚು ಮಾಡಿಸಿ ನನ್ನ ಸಾಲಗಾರನನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು.

    ತಮ್ಮ ಮಗನನ್ನು ಸಂಸದನನಾಗಿ ಮಾಡವುದಾಗಿ ಹೇಳಿ ನನಗೆ ಮೋಸ ಮಾಡಿದರು. ನಾನು ಏನು ದ್ರೋಹ ಮಾಡಿದ್ದೆ ಕುಮಾರಸ್ವಾಮಿ ಅವರೇ ನಿಮಗೆ ಎಂದು ಜೆಡಿಎಸ್‌ನಲ್ಲಿ ತಮಗೆ ಅನ್ಯಾಯವಾಗಿದೆ. ನಾನು ಈ ಚುನಾವಣೆಯಲ್ಲಿ ಗೆದ್ದು ಅವರಿಗೆ ನಾನ್ಯಾರು ಎಂದು ತೋರಿಸುತ್ತೇನೆ ಎಂದು ಶಿವರಾಮೇಗೌಡ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ಒಟ್ಟಾರೆ ಎಂಪಿ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ಮೂಲಕ ಜೆಡಿಎಸ್‌ಗೆ ಪಾಠ ಕಲಿಸಿದರು. ಇದೀಗ ನಾಗಮಂಗಲದಲ್ಲಿ ಶಿವರಾಮೇಗೌಡ ಸ್ವಾಭಿಮಾನದ ಮೂಲಕ ದಳಪತಿಳಿಗೆ ಟಕ್ಕರ್‌ ನೀಲು ಮುಂದಾಗಿದ್ದು, ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಕಹಳೆ ಮುಳುವಾಗುತ್ತಾ ಎಂದು‌ ಕಾದುನೋಡಬೇಕಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್ ಶಾಸಕನ ವಿರುದ್ಧ ಶಿವರಾಮೇಗೌಡ 50% ಆರೋಪ!

    ಜೆಡಿಎಸ್ ಶಾಸಕನ ವಿರುದ್ಧ ಶಿವರಾಮೇಗೌಡ 50% ಆರೋಪ!

    ಮಂಡ್ಯ: ರಾಜ್ಯದಲ್ಲಿ ರಾಜ್ಯ ಸರ್ಕಾರ (State Government) 40% ತೆಗೆದುಕೊಳ್ಳುತ್ತಿದ್ರೆ, ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಸುರೇಶ್‍ಗೌಡ 50% ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (L. R Shivarame Gowda) ಗಂಭೀರ ಆರೋಪ ಮಾಡಿದ್ದಾರೆ.

    ನಾಗಮಂಗಲದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ (Tender) ನೀಡಲಾಗುತ್ತಿದೆ, ಕೋಟ್ಯಂತರ ರೂಪಾಯಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಆಗುತ್ತಿದೆ. ಶಾಸಕರು, ಅಧಿಕಾರಿಗಳು ಇದರಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. 20 ಲಕ್ಷ ಕೆಲಸ ಆಗಿಲ್ಲ, ಆದ್ರೆ ಒಂದು ಕೋಟಿ ಕಾಮಗಾರಿ ಬಿಲ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ

    ಪಿಡಬ್ಲುಡಿ, ಕೆ.ಆರ್.ಡಿ.ಎಲ್ ಸೇರಿದಂತೆ ಎಲ್ಲ ಇಲಾಖೆಯಲ್ಲಿಯು ಹಣ ಲೂಟಿ ಆಗುತ್ತಿದೆ. ನಮಗೆ ಇದರ ವಿರುದ್ಧ ಹೋರಾಡಲು ಯಾವುದೆ ಅಸ್ತ್ರ ಇರಲಿಲ್ಲ, ಈಗ ಲೋಕಾಯುಕ್ತ ಇದೆ. ತಕ್ಷಣದಲ್ಲಿಯೇ ಆ ಕುರಿತು ದೂರು ಕೊಡುತ್ತೇನೆ. ನಾಗಮಂಗಲ ಕ್ಷೇತ್ರದಲ್ಲಿ 50%ನ್ನು ಇಲ್ಲಿನ ಶಾಸಕರು ಪಡೆಯುತ್ತಿದ್ದಾರೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಧುಮಾದೇಗೌಡ 840, ಟೋಕನ್ ಗಿರಾಕಿ: ಶಿವರಾಮೇಗೌಡ ವಾಗ್ದಾಳಿ

    ಮಧುಮಾದೇಗೌಡ 840, ಟೋಕನ್ ಗಿರಾಕಿ: ಶಿವರಾಮೇಗೌಡ ವಾಗ್ದಾಳಿ

    ಮಂಡ್ಯ: ನನ್ನ ಅವನು 420 ಎಂದು ಕರೆದರೆ ಅವನನ್ನು ಮದ್ದೂರು ತಾಲೂಕಿನಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ ಎಂದು ಜಿ.ಮಾದೇಗೌಡ ಪುತ್ರ ಮಧುಮಾದೇಗೌಡ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ನಡೆಸಿದರು.

    ಭಾನುವಾರ ಎಲ್.ಆರ್. ಶಿವರಾಮೇಗೌಡ ಜೆಡಿಎಸ್ ಕಾರ್ಯಕರ್ತೆಯೊಂದಿಗೆ ಮಾತನಾಡುವ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಜಿ.ಮಾದೇಗೌಡ ವಿರುದ್ಧ ಶಿವರಾಮೇಗೌಡ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಧುಮಾದೇಗೌಡ ಶಿವರಾಮೇಗೌಡರನ್ನು 420 ಹಾಗೂ ಜೋಕರ್ ಎಂದು ಕರೆಯುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಆ ಹೇಳಿಕೆಗೆ ತಿರುಗೇಟು ಕೊಟ್ಟ ಶಿವರಾಮೇಗೌಡ, ಮಧುಮಾದೇಗೌಡರನ್ನು ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ ಎಂದು ಟೀಕಿಸಿದರು.

    ನಾನು ಮಾದೇಗೌಡರ ವಿರುದ್ಧ ಅವಹೇಳನವಾಗಿ ಏನು ಹೇಳಿಲ್ಲ, ಈ ಹಿಂದೆ ನನಗೆ ಮಾದೇಗೌಡರ ನಡುವೆ ನಡೆದ ಹೋರಾಟ ಘಟನಾವಳಿಯನ್ನು ಹೇಳಿದ್ದೇನೆ ಅಷ್ಟೇ. ಮಾದೇಗೌಡರ ಬಗ್ಗೆ ನನಗೆ ಗೌರವವಿದೆ. ಅದರ ಬಗ್ಗೆ ಯಾವುದೆ ಸಂದೇಹ ಬೇಡ. ನಾನು ಹೋರಾಟದಲ್ಲಿ ಮಾದೇಗೌಡರಿಗೆ ಹೆದರಿಕೊಂಡು ನಮ್ಮೂರಲ್ಲಿ ಕೂತಿಲ್ಲ, ಮಾದೇಗೌಡರ ವಿರುದ್ಧ ಗೆದ್ದು ಹೋರಾಟ ಮಾಡಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ನನ್ನ ಜೀವನದಲ್ಲಿ ಚುನಾವಣೆಗಳನ್ನು ಎದುರಿಸಿದ್ದೇನೆ. ಇದರಲ್ಲಿ ಅರ್ಧ ಚುನಾವಣೆಗಳನ್ನು ಗೆದ್ದಿದ್ದೇನೆ. ಮಧುಮಾದೇಗೌಡರ ರೀತಿ ದೊಡ್ಡ ವ್ಯಕ್ತಿತ್ವ ಇದ್ದವರ ಮಗ ನಾನಲ್ಲ, ಮಧುಮಾದೇಗೌಡ ಹೀಗಿದ್ದರೂ ಮದ್ದೂರು ತಾಲೂಕಿನಲ್ಲಿ ಮೇಲಕ್ಕೆ ಎದ್ದಿಲ್ಲ ಎಂದರು.

    ನನ್ನ 420 ಅಂತೀರಲ್ಲಾ 420 ಕೆಲಸ ಮಾಡಿದ್ದರೆ ದಾಖಲೆ ಸಹಿತ ಬನ್ನಿ, ನನ್ನ ವಿರುದ್ಧ ಆರೋಪ ಸುಳ್ಳಾದರೇ ನಿಮ್ಮನ್ನ 840 ಎನ್ನುತ್ತಾರೆ. ನನ್ನ ಸರ್ಕಸ್‍ನಲ್ಲಿ ಇರೋ ಜೋಕರ್ ಅಂದಿದ್ದೀರಾ, ಮಧುಮಾದೇಗೌಡರೇ ನಿಮ್ಮನ್ನು ಮದ್ದೂರು ತಾಲೂಕಿನಲ್ಲಿ ಟೋಕನ್ ಗಿರಾಕಿ ಎನ್ನುತ್ತಾರೆ. ಅವರ ಅಪ್ಪನ ಹೆಸರಿನಲ್ಲಿ ಟಿಕೆಟ್ ತಗೋತಾರೆ ಟೋಕನ್ ಹಾಕೋತಾರೆ ಎಂದು ಜನ ಹೇಳುತ್ತಾರೆ. ಎಂಎಲ್‍ಸಿ ಚುನಾವಣೆ ಒಂದರಲ್ಲಿ ನಾಮಿನೇಷನ್ ಆಗಿರೋದು ಬಿಟ್ಟರೇ ಎಲ್ಲೂ ಹೊರಗಡೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ನನ್ನ ಹೆಸರು ಶಿವರಾಮೇಗೌಡ ಅಷ್ಟೇ, ನೀವು ನಿಮ್ಮ ಅಪ್ಪನ ಹೆಸರು ಇಟ್ಟುಕೊಂಡಿದ್ದೀರಾ. ಹೀಗಿರುವಾಗ ನೀವು 4 ಬಾರಿ ಎಂಎಲ್‍ಎ ಆಗಬೇಕಿತ್ತು. ಆದರೆ ನೀವು ಮೇಲಕ್ಕೆ ಎದ್ದಿಲ್ಲ. ನಾಲಿಗೆ ಹರಿಬಿಡಬೇಡಿ, ಈ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ರಾಜಕಾರಣದಲ್ಲಿ ಇದೆಲ್ಲ ಬರುತ್ತದೇ ಇಲ್ಲಿಗೆ ನಿಲ್ಲಿಸೋಣಾ. ಇದನ್ನು ಬೆಳಸಬೇಕು ಅಂದರೆ ನಾನು ಅಡ್ಡಿ ಇಲ್ಲ, ಎಲ್ಲಾದಕ್ಕೂ ರೆಡಿ ಇದ್ದೇನೆ. 1999ರಲ್ಲಿ ಕಾಂಗ್ರೆಸ್‍ನಲ್ಲಿ ನಿಲ್ಲೋಕೆ ನಿಮ್ಮಪ್ಪ ಅವಕಾಶ ಕೊಟ್ಟಿದ್ದರೆ ಇಷ್ಟೊತ್ತಿಗೆ ಎರಡು ಬಾರಿ ಮಂತ್ರಿ ಆಗುತ್ತಿದ್ದೆ. ನನ್ನ ತೆಗೆದವನು ನಿಮ್ಮಪ್ಪ, ಇತಿಹಾಸ ಬೇಡಾ, ಸತ್ತವರ ಬಗ್ಗೆ ಇಷ್ಟೊಂದು ಮಾತನಾಡದುವುದು ಸರಿಯಲ್ಲ.ನಾನು ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುತ್ತೇನೆ, ನಾನಗೆ ಮಾದೇಗೌಡರ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದೇನೆ. ಆದರೆ ಹಳೆಯ ಸಂದರ್ಭವನ್ನು ಹೇಳಿದೆ ಅಷ್ಟೆ ಎಂದು ಹೇಳಿದರು. ಇದನ್ನೂ ಓದಿ:  ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

  • ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಮೈಸೂರು: ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್. ಅವನಿಗೆ ಬುದ್ಧಿ ಕಲಿಸಲು ನಮಗೆ ಗೊತ್ತಿದೆ ಎಂದು ದಿವಂಗತ ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂಬ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಡಿಯೋ ವಿಚಾರ ಸಂಬಂಧ ಮಧು ಪ್ರತಿಕ್ರಿಯಿಸಿದರು. ಮಂಡ್ಯ ಭಾಗದಲ್ಲಿ ಶಿವರಾಮೇಗೌಡನನ್ನು 420 ಶಿವರಾಮೇಗೌಡ ಅಂತಾ ಕರೆಯೋದು. ಶಿವರಾಮೇಗೌಡರಿಗೆ ಯಾವ ರೀತಿ ಬುದ್ಧಿ ಹೇಳಬೇಕೋ ಆ ರೀತಿಯೇ ನಾವು ಬುದ್ಧಿ ಹೇಳುತ್ತೇವೆ. ಅವರು ನಮ್ಮ ತಂದೆಯ ಕಾಲು ಹಿಡಿಯೋದನ್ನು ನಾನು ನೋಡಿದ್ದೇನೆ ಎಂದರು.

    ಶಿವರಾಮೇ ಗೌಡರಿಗೆ ಎದರುಗಡೆ ನಿಂತು ಮಾತಾಡುವ ಶಕ್ತಿಯೂ ಇರಲಿಲ್ಲ. 60 ಕೋಟಿ ಖರ್ಚು ಮಾಡಿದರೂ ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಲ್ಲ. 420 ಕೆಲಸ ಮಾಡುವ ಕಾರಣ ಜನ ಹೊಡೆಯುತ್ತಾರೆ ಎಂದು ಎಸ್ಕರ್ಟ್ ಹಾಕಿಕೊಂಡು ತಿರುಗಾಡುತ್ತಾನೆ. ಅವರಿಗೆ ಬುದ್ಧಿ ಕಲಿಸುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಶಿವರಾಮೇ ಗೌಡ ಆಡಿಯೋದಲ್ಲೇನಿದೆ..?
    ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೇಡೆ ಹರಿದಾಡುತ್ತಿದೆ. ಮಂಡ್ಯ ಲೋಕಸಭಾ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ. ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್‍ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್‍ಎ ಎಲೆಕ್ಷನ್‍ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: MLA ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್

  • ಕುಮಾರಸ್ವಾಮಿಯವರ ಜೀವನ ಚರಿತ್ರೆ ತೆರೆದ ಪುಸ್ತಕ: ಶಿವರಾಮೇಗೌಡ

    ಕುಮಾರಸ್ವಾಮಿಯವರ ಜೀವನ ಚರಿತ್ರೆ ತೆರೆದ ಪುಸ್ತಕ: ಶಿವರಾಮೇಗೌಡ

    – ಬಿಜೆಪಿಯವ್ರ ಜೀವನ ಚರಿತ್ರೆಯಿಂದ ದೊಡ್ಡ ಸಿನಿಮಾ ತೆಗೀಬೋದು

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಜೀವನ ಚರಿತ್ರೆ ತೆರೆದ ಪುಸ್ತಕ. ಆದರೆ ಬಿಜೆಪಿಯವರ ಜೀವನ ಚರಿತ್ರೆಯಿಂದ ದೊಡ್ಡ ಸಿನಿಮಾವನ್ನೇ ತೆಗೆಯಬಹುದು ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬಿಜೆಪಿಯಿಂದ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ವಿಚಾರ ಸಂಬಂಧ ಕಿಡಿಕಾರಿರುವ ಶಿವರಾಮೇಗೌಡ, ಕುಮಾರಸ್ವಾಮಿ ಅವರು ಏನ್ ಹೇಳಬೇಕು, ಏನ್ ಆಗಿದೆ ಅನ್ನೋದನ್ನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕರ ಜೀವನ ಚರಿತ್ರೆಯನ್ನು ದೊಡ್ಡ ಸಿನಿಮಾ ತೆಗೆಯಬಹುದು. ಬಿಜೆಪಿ ಅವರು ಇನ್ನೊಬ್ಬರಿಗೆ ಉಪದೇಶ ಮಾಡುವ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ಸರ್ಕಾರ ಇರುವುದರಿಂದ ಅವರ ವಾಸನೆ ಇನ್ನೂ ಬರ್ತಾ ಇಲ್ಲ. ಹೀಗಾಗಲೇ ಅವರದ್ದು ಸಾಕಷ್ಟು ಬಂದಿವೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲುವ ಸೂಚನೆ ಜಾಸ್ತಿ ಇದೆ. ಇದಕ್ಕಾಗಿ ಈ ರೀತಿಯ ಟೀಕೆಯನ್ನು ಬಿಜೆಪಿ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

    ಡಿಕೆಶಿ ಅವರು ಬಿಜೆಪಿ ಅವರು ಮೂಟೆಗಟ್ಟಲೆ ಹಣ ತಂದು ಹಂಚುತ್ತಿದ್ದಾರೆ ಅಂತಾ ಹೇಳಿದ್ದಾರೆ. ಅದೇ ರೀತಿ ಅವರು ದುಡ್ಡು ಹಂಚುತ್ತಿದ್ದಾರೆ. ಬಿಜೆಪಿ ಅವರಿಗೆ ರಾಜಮಾರ್ಗದಲ್ಲಿ ರಾಜಕಾರಣ ಮಾಡಿ ಅನುಭವವಿಲ್ಲ. ಅವರಿಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡಿ ಅಭ್ಯಾಸ. ಬೆಂಗಳೂರಿನಲ್ಲಿ ಒಬ್ಬರು ಹೇಳ್ತಾ ಇದ್ದರು, ನಾವು ದುಡ್ಡು ಕೊಟ್ಟು ಕೊಂಡಿಕೊಳ್ಳುತ್ತೇವೆ ಅಂತಾ. ಇದು ಬಿಜೆಪಿಯ ಸಂಸ್ಕೃತಿ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್

    ಆರ್‍ಎಸ್‍ಎಸ್ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇವರ ಬಂಡವಾಳ ಇಡೀ ರಾಷ್ಟ್ರಕ್ಕೆ ಗೊತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಎಲ್ಲರೂ ಕೆಟ್ಟವರು ಅಂತ ಹೇಳಲ್ಲ. ಅಲ್ಲಿ ಹೆಚ್ಚಿನ ಜನ ಕಣ್ಣಿಗೆ ಕಾಣಲ್ಲ. ಆರ್‍ಎಸ್‍ಎಸ್ ನಲ್ಲಿ ಇರುವಂತವರು ಮಾಡುವ ಭ್ರಷ್ಟಚಾರ ಇನ್ನೆಲ್ಲಿಯೂ ಇಲ್ಲ ಎಂದು ಮೊನ್ನೆ ಯಾರೋ ಒಬ್ಬರು ಶಾಸಕರು ಹೇಳಿದ್ದಾರೆ ಎಂಬುದನ್ನು ಇದೇ ವೇಳೆ ಪ್ರಸ್ತಾಪಿಸಿದರು. ಇದನ್ನೂ ಓದಿ: ನಾನು ಅಧಿಕಾರದ ಮದದಿಂದ ಮಾತನಾಡಿಲ್ಲ: ಕೆ. ಸುಧಾಕರ್

    ತುಮಕೂರಿನ ಬಿಜೆಪಿ ಮುಖಂಡ ಸುರೇಶಗೌಡ ಅದರ ಬಗ್ಗೆ ಮಾತನಾಡೋದನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ನೀಲಿ ಚಿತ್ರ ನೋಡುವವರು, ಭ್ರಷ್ಟಚಾರ ಮಾಡುವವರು ಇರಬಹುದು ಬಿಜೆಪಿಯಲ್ಲಿ ಇದ್ದಾರೆ. ಇವತ್ತು ಈ ದೇಶದಲ್ಲಿ ಹಣವಿಲ್ಲದೆ ಯಾವ ಕೆಲಸ ಹಾಕ್ತಿಲ್ಲ. ಭ್ರಷ್ಟಚಾರ ಮುಗಿಲು ಮುಟ್ಟಿದೆ ಎಂದು ಹೇಳುವ ಮೂಲಕ ಮಾಜಿ ಸಂಸದರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  • ಎಚ್‍ಡಿಡಿ ದಂಪತಿ ಗುಣಮುಖರಾಗಲೆಂದು ವಿಶೇಷ ಪೂಜೆ

    ಎಚ್‍ಡಿಡಿ ದಂಪತಿ ಗುಣಮುಖರಾಗಲೆಂದು ವಿಶೇಷ ಪೂಜೆ

    ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೊರೊನಾದಿಂದ ಬಳಲುತ್ತಿರುವ ಅವರ ಪತ್ನಿ ಚನ್ನಮ್ಮ ಗುಣಮುಖರಾಗಲೆಂದು ನಾಗಮಂಗಲದ ಶ್ರೀ ಸೌಮ್ಯಕೇಶವ ದೇವಸ್ಥಾನದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹಾಗೂ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಎದೆಯಲ್ಲಿ ಸಣ್ಣ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವೇಗೌಡ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ಚನ್ನಮ್ಮ ಅವರನ್ನು ಇಲ್ಲೇ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಶೀಘ್ರವಾಗಿ ಇಬ್ಬರು ಗುಣಮುಖರಾಗಿ ಬರಬೇಕೆಂದು ಎಲ್.ಆರ್.ಶಿವರಾಮೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡರು, ನಾವು ದೇವೇಗೌಡ ಅವರ ಆಶೀರ್ವಾದದಲ್ಲಿ ಬೆಳೆದವರು, ಅವರಿಂದ ನಾವು ಅಧಿಕಾರ ಅನುಭವಿಸಿದ್ದೇವೆ. ಈ ರಾಜ್ಯದಲ್ಲಿ ಆರೋಗ್ಯವನ್ನು ಲೆಕ್ಕಿಸದೇ ರೈತರ ಪರವಾಗಿ ಹೋರಾಟ ಮಾಡುವ ವ್ಯಕ್ತಿ ಎಂದರೆ ದೇವೇಗೌಡರು. ಹೀಗಾಗಿ ಅವರು ಹಾಗೂ ಅವರ ಧರ್ಮಪತ್ನಿ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.

  • ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    – ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡುತ್ತೇವೆ

    ಮಂಡ್ಯ: ರಾಜ್ಯದಲ್ಲಿ ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿದಿದೆ ಎಂದು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಸಿಡಿ ಕೇಸ್ ಸಹ ಹಳ್ಳ ಹಿಡಿಯುತ್ತದೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗುಡುಗಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡ, ಡ್ರಗ್ ಕೇಸ್‍ನಲ್ಲಿ ಬಿಲ ಅಗೆದು ಹಿಡಿಯುವ ಹಾಗೆ ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು. ಅದೇ ರೀತಿಯಲ್ಲಿ ಈ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಎಂದು ಅಂದುಕೊಂಡಿದ್ದರೆ ಇಷ್ಟೊತ್ತಿಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಆದರೆ ಇಲ್ಲಿಯವರಗೆ ಬಂಧಿಸುವ ಕೆಲಸ ಮಾತ್ರ ಆಗಿಲ್ಲ. ಮುಖ್ಯಮಂತ್ರಿಗಳು ಅತ್ಯಾಚಾರ ಆರೋಪಿಯನ್ನು ಉಪಚುನಾವಣೆಯ ಪ್ರಚಾರಕ್ಕೆ ಆಹ್ವಾನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಕೇಸ್‍ಗೆ ನ್ಯಾಯವಾದರೂ ಹೇಗೆ ಸಿಗುತ್ತದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ಒಂದು ವೇಳೆ ಎಸ್‍ಐಟಿ ಅಧಿಕಾರಿಗಳು ಈ ಕೇಸ್‍ನ್ನು ಹಳ್ಳ ಹಿಡಿಸಿದರೆ, ನಾವು ಕೋರ್ಟ್‍ನಲ್ಲಿ ಈ ಬಗ್ಗೆ ದೂರು ದಾಖಲು ಮಾಡಿ ಸಿಬಿಐ ತನಿಖೆ ಆಗುವಂತೆ ಹೋರಾಟ ಮಾಡುತ್ತೇವೆ. ಮುಂದೆ ಕುಮಾರಸ್ವಾಮಿ ಅವರ ಸರ್ಕಾರ ಬಂದಾಗ ಈ ಕೇಸ್‍ನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಅತ್ಯಾಚಾರಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಾಗಿತ್ತು. ಆದರೆ ಅವರು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಹೀಗೆ ಇರುವಾಗ ಈ ಕೇಸ್‍ನಲ್ಲಿ ಜಾರಕಿಹೊಳಿಗೆ ಕ್ಲೀನ್ ಚೀಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಯಾಪಟ್ಟರು.

  • ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. 2023ರ ಚುನಾವಣೆಗೆ ನಾಗಮಂಗಲ ಕ್ಷೇತ್ರದ ಟಿಕೆಟ್‍ಗಾಗಿ ಸಮರ ಆರಂಭವಾಗಿದ್ದು, ಹಾಲಿ ಶಾಸಕ, ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ನಾಗಮಂಗಲದಲ್ಲಿ ಎಲೆಕ್ಷನ್ ತಯಾರಿ ಆರಂಭಿಸಿರುವ ಶಿವರಾಮೇ ಗೌಡ, ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ ಎಂದು ಗುಡುಗಿದ್ದಾರೆ. ಈ ಮೂಲಕ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಂಸದರು ತೊಡೆತಟ್ಟಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ, ಈ ಬಾರಿ ನಾಗಮಂಗಲದಲ್ಲಿ ನಂದೇ ಆಟ. ಟಿಕೆಟ್ ತೆಗೆದುಕೊಂಡು ನೋಡಿದ್ದೀನಿ, ತೆಗೆದುಕೊಳ್ಳದೆಯೂ ನೋಡಿದ್ದೀನಿ. ಚುನಾವಣೆ ಸಿದ್ದತೆ ಪ್ರಾರಂಭ ಮಾಡಿದ್ದೇವೆ. ನಾವು ಎಷ್ಟೇ ಹಳಬರು ಇದ್ದರೂ ಜನ ಸಂಪರ್ಕದಲ್ಲೆ ಇರಬೇಕು. ಜೆಡಿಎಸ್ ನಲ್ಲಿದ್ದೇನೆ, ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ ಎಂದು ಶಿವರಾಮೇ ಗೌಡ ಹೇಳಿದ್ದಾರೆ.

    ಹಾಲಿ ಶಾಸಕ ಸುರೇಶ್ ಗೌಡರನ್ನ ಲೋಕಸಭೆಗೆ ಕಳಿಸೋಣ. ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡರು ಒಪ್ಪದಿದ್ರೇ ಜನರೇನು ದಡ್ಡರಾ..?, ನಮ್ಮ ನಾಯಕರು ದಡ್ಡರಾ..? ಸುರೇಶ್ ಗೌಡರಿಗೆ ಟಿಕೆಟ್ ಎಂದು ಎಚ್‍ಡಿಡಿ, ಎಚ್‍ಡಿಕೆ ಮಾತುಕೊಟ್ಟಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಹಾಲಿ ಶಾಸಕ ಸುರೇಶ್‍ಗೌಡಗೆ ಶಿವರಾಮೇಗೌಡ ಟಕ್ಕರ್ ಕೊಟ್ಟಿದ್ದಾರೆ.