Tag: shivaram

  • ಶೂಟಿಂಗ್‌ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು

    ಶೂಟಿಂಗ್‌ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು

    ಸ್ಯಾಂಡಲ್‌ವುಡ್‌ನ ‘ರಣಾಕ್ಷ’ (Ranaksha) ಸಿನಿಮಾದ ನಿರ್ಮಾಪಕ ಶಿವರಾಮ್ (Shivaram) ಮೇಲೆ ಎಫ್‌ಐಆರ್ ದಾಖಲಾಗಿದೆ. ಹೀರೋಯಿನ್ ಮಾಡ್ತೀನಿ ಅಂತ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಶಿವರಾಮ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    2023ರಲ್ಲಿ ‘ರಣಾಕ್ಷ’ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿರುತ್ತದೆ. ಈ ಚಿತ್ರಕ್ಕೆ ಪೂಜಾ ಅವರನ್ನು ಆಯ್ಕೆ ಮಾಡಿರುತ್ತಾರೆ. ಮಗಳ ಸಿನಿಮಾ ಶೂಟಿಂಗ್ ನೋಡಲು ಸೆಟ್ ಬಂದಿದ್ದ ತಾಯಿ ಸುನಂದಾಗೂ ಚಿತ್ರದ ನಿರ್ಮಾಪಕ ಶಿವರಾಮ್ ಪರಿಚಯವಾಗುತ್ತದೆ. ಹೀಗೆ ಶೂಟಿಂಗ್‌ಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದು ನಟಿಯ ತಾಯಿಯ ಬಳಿ 5 ಲಕ್ಷ ರೂ.ವನ್ನು ಶಿವರಾಮ್ ಪಡೆದಿರುತ್ತಾರೆ. ಆ ನಂತರ ಚಿತ್ರದ ಶೂಟಿಂಗ್ ಕೂಡ ನಡೆಸಿರುತ್ತಾರೆ. ಮುಂದೆ ಸಮಯಕ್ಕೆ ಸರಿಯಾಗಿ ಆ ಹಣವನ್ನು ಶಿವರಾಮ್ ಹಿಂದಿರುಗಿಸಿರುತ್ತಾರೆ.

    ಕೆಲವು ದಿನಗಳ ಬಳಿಕ ಮತ್ತೆ ನಟಿಯ ತಾಯಿಗೆ ಕರೆ ಮಾಡಿ ಇನ್ನೊಂದಿಷ್ಟು ಹಣ ಸಿಗಬಹುದಾ ಎಂದು ಕೇಳಿದ್ದಾರೆ. ಆ ಸಮಯದಲ್ಲಿ ನಗದು ಹಣವಿರದ ಕಾರಣ ತಮ್ಮ ಬಳಿಯಿದ್ದ 575 ಗ್ರಾಂ ಚಿನ್ನವನ್ನು ಶಿವರಾಮ್‌ಗೆ ನೀಡಿದ್ದಾರೆ. ಶ್ಯೂರಿಟಿಗಾಗಿ ಎರಡು ಚೆಕ್‌ಗಳನ್ನು ನಟಿಯ ತಾಯಿಗೆ ನೀಡಿದ್ದರು. ಆದರೆ ಚೆಕ್ ಅವಧಿ ಮುಗಿದಿದ್ದರೂ ಚಿನ್ನಾಭರಣ ನೀಡದೇ ನಿರ್ಮಾಪಕ ವರಸೆ ಬದಲಿಸಿದ್ದಾರೆ. ಈ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ವಿರುದ್ಧ ನಟಿಯ ತಾಯಿ ಸುನಂದಾ ಎಫ್‌ಐಆರ್ ದಾಖಲಿಸಿದ್ದಾರೆ.

  • ಸ್ಪಂದನಾ ನಿಧನ: 5ನೇ ದಿನದ ಕಾರ್ಯದಲ್ಲಿ ಕುಟುಂಬ

    ಸ್ಪಂದನಾ ನಿಧನ: 5ನೇ ದಿನದ ಕಾರ್ಯದಲ್ಲಿ ಕುಟುಂಬ

    ಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ನಿಧನದ 5ನೇ ದಿನದ ಕಾರ್ಯವನ್ನು ಅವರ ಕುಟುಂಬದವರು ಇಂದು ನೆರವೇರಿಸಲಿದ್ದಾರೆ.  ಮಲ್ಲೇಶ್ವರಂನಲ್ಲಿರುವ ಶಿವರಾಮ್ (Shivaram) ಮನೆಯಿಂದ ತೆರಳಲು ಕುಟುಂಬಸ್ಥರ ಸಿದ್ಧತೆ ನಡೆಸಿದ್ದು, ಹರಿಶ್ಚಂದ್ರ ಘಾಟ್ ನಲ್ಲಿರುವ ಅಸ್ಥಿ ಪಡೆದು ಶ್ರೀರಂಗ ಪಟ್ಟಣದಲ್ಲಿ ಕಾರ್ಯ ನೆರವೇರಿಸಲಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣ ತಲುಪಲಿರುವ ಸ್ಪಂದನಾ ಕುಟುಂಬ ಸದಸ್ಯರು, ಅಲ್ಲಿ ಅಸ್ಥಿ ಬಿಡುವ ಕಾರ್ಯವನ್ನು ನೆರವೇರಿಸಲಿದ್ದಾರೆ. ಶಿವರಾಮ್, ಶ್ರೀಮುರಳಿ, ಚಿನ್ನೇಗೌಡ, ವಿಜಯರಾಘವೇಂದ್ರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

    ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮನೆಯ ಬೆಳಕು ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 5ನೇ ದಿನದ ಕಾರ್ಯ, ಅಸ್ಥಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.

     

    ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್‌ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್‌ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ಮಾಡಿದೆ: ಶಿವರಾಮ್ ಗಂಭೀರ ಆರೋಪ

    ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ಮಾಡಿದೆ: ಶಿವರಾಮ್ ಗಂಭೀರ ಆರೋಪ

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‍ಎಸ್ ಸಂಚು ಮಾಡಿದೆ. ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮ್ ಅವರು ಆರೋಪಿಸಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‍ಎಸ್ ಸಂಚು ಮಾಡಿದೆ. ಅದರ ಟ್ರಯಲ್ ಗುರುವಾರ ಮಡಿಕೇರಿಯಲ್ಲಿ ನಡೆದಿದೆ. ಗಾಂಧೀಜಿಯ ರೀತಿ ಸಾರ್ವಜನಿಕರ ಮಧ್ಯೆಯೆ ಸಿದ್ದರಾಮಯ್ಯರನ್ನು ಕೊಲ್ಲಲು ಬಿಜೆಪಿ, ಆರ್‌ಎಸ್‍ಎಸ್ ಪ್ಲಾನ್ ಮಾಡಿದೆ. ಸಿದ್ದರಾಮಯ್ಯ ಹತ್ಯೆ ಮೂಲಕ ಹಿಂದುಳಿದ ವರ್ಗಗಳ ಮಹಾನ್ ನಾಯಕನ ಯುಗಾಂತ್ಯ ಮಾಡಲು ಬಿಜೆಪಿ ಸಂಚು ಮಾಡಿದೆ. ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊಡಗು ಎಸ್‍ಪಿಗೆ ಯಾವ ರೋಗ ಬಂದಿತ್ತು: ಸಿದ್ದರಾಮಯ್ಯ ವಾಗ್ದಾಳಿ

    ಮತ್ತೊಂದೆಡೆ ಯತೀಂದ್ರ, ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆಯಿದೆ. ಹಿಂದೂ ಸಂಘಟನೆಗಳಿಂದಲೇ ಬೆದರಿಕೆಗಳು ಬಂದಿವೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ತಂದೆಗೆ ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆಯಿದೆ: ಯತೀಂದ್ರ ಸಿದ್ದರಾಮಯ್ಯ

    ಗುರುವಾರ ಮಡಿಕೇರಿ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಹಿಂದೂ ಸಂಘಟನೆಯವರು ಮೊಟ್ಟೆ ಒಡೆದು ಅಗೌರವ ತೋರಿದ್ದರು. ಈ ಘಟನೆಗೆ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ಶಿವರಾಂ

    ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ಶಿವರಾಂ

    ಬೆಂಗಳೂರು: ನಿನ್ನೆ ನಿಧನರಾಗಿರುವ ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು.

    ಗುರುಸ್ವಾಮಿಯಾಗಿದ್ದ ಶಿವರಾಂಗೆ ಪಂಚಾಮೃತ ಅಭಿಷೇಕ ಮತ್ತು ಕೇಸರಿ ವಸ್ತ್ರ ಸಮರ್ಪಿಸಿ ಚಿತಾಗಾರಾದಲ್ಲಿ ಬ್ರಾಹ್ಮಣ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಲಾಯಿತು. ಈ ವೇಳೆ ಅಯ್ಯಪ್ಪ ಭಕ್ತರು ಭಜನೆ ಮಾಡಿ ಅಯ್ಯಪ್ಪನಿಗೆ ಇಷ್ಟವಾದ ಕರ್ಪೂರವನ್ನು ಸಮರ್ಪಿಸಿದರು. ಶಿವರಾಂ ಪುತ್ರರಾದ ಹಿರಿಯ ಮಗ ರವಿಶಂಕರ್‌ ಮತ್ತು ಲಕ್ಷ್ಮೀಶ್ ಅಗ್ನಿ ಸ್ಪರ್ಶ ಮಾಡಿದರು.  ಈ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಶಿವರಾಂ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಚಿತ್ರರಂಗದ ಹಲವು ಮಂದಿ ಹಿರಿಯ ನಟನ ದರ್ಶನ ಪಡೆದು ಕಂಬನಿ ಮಿಡಿದರು.ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದ ಶಿವರಾಂ ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ  ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ಬ್ರೈನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು.  ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದರು. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಬನಶಂಕರಿ ಚಿತಾಗಾರದಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಸಚಿವ ಆರ್. ಅಶೋಕ್ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

    ಶಿವರಾಂ ಅವರಿಗೆ 84 ವರ್ಷ ವಯಸ್ಸಾಗಿತ್ತು. ಆರು ದಶಕಗಳಿಂದ ಕನ್ನಡ ಸಿನಿಮಾ ರಂಗದ ನಂಟುಹೊಂದಿದ್ದಾರೆ. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಶಿವರಾಂ ನಾಯಕ ನಟರಾಗಿ, ಹಾಸ್ಯನಟ, ಪೋಷಕ ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದವರು. `ಶರಪಂಜರ’ ಶಿವರಾಂ ಎಂದೇ ಹೆಸರುವಾಸಿಯಾಗಿದ್ದರು `ಡ್ರೈವರ್ ಹನುಮಂತು’ ಸಿನಿಮಾದಲ್ಲಿ ನಾಯಕ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದರು. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಣಯರಾಜ ಶ್ರೀನಾಥ್ ಅವರ ಜೊತೆಯಲ್ಲಿ ನಟಿಸಿದ್ದರು.

  • ಬೆಳಗ್ಗೆ 10ರವರೆಗೆ  ಶಿವರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬೆಳಗ್ಗೆ 10ರವರೆಗೆ ಶಿವರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬೆಂಗಳೂರು: ನಿನ್ನೆ ನಮ್ಮನಗಲಿದ ಚಂದನವನದ ಶರಪಂಜರ ಶಿವರಾಂ ಅವರ ಪಾರ್ಥಿವ ಶರೀರವನ್ನು ಬನಶಂಕರಿ ನಿವಾಸದಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ ಬೆಳಗ್ಗೆ 7.30 ರಿಂದ ಬೆಳಗ್ಗೆ 10 ಗಂಟೆ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ನಂತರ ಬನಶಂಕರಿ ಚಿತಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದ ಅನುಸಾರ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶಿವರಾಮಣ್ಣನಿಗೆ ಪೊಲೀಸ್ ಗೌರವದ ವಿದಾಯ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

    ನಿನ್ನೆ ಬನಶಂಕರಿಯ ನಿವಾಸದಲ್ಲಿ ಚಿತ್ರರಂಗದ ಹಿರಿ-ಕಿರಿಯ ಕಲಾವಿದರೆಲ್ಲರೂ ಕೂಡ ಶಿವರಾಮಣ್ಣಗೆ ಅಂತಿಮ ನಮನ ಸಲ್ಲಿಸಿದ್ರು. ದ್ವಾರಕೀಶ್, ಶ್ರೀನಾಥ್, ಅನಂತನಾಗ್, ಜಗ್ಗೇಶ್, ನಿರ್ದೇಶಕ ಭಗವಾನ್, ಶಿವಣ್ಣ, ರಾಘಣ್ಣ, ದೇವರಾಜ್, ರಮೇಶ್ ಅರವಿಂದ್, ಪ್ರೇಮಾ, ಉಮಾಶ್ರೀ, ಗಿರಿಜಾ ಲೋಕೇಶ್, ಸುಂದರರಾಜ್, ಯೋಗರಾಜ್ ಭಟ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಶಿವರಾಮಣ್ಣನನ್ನು ಸ್ಮರಿಸಿ ಕಂಬನಿ ಮಿಡಿದ್ರು.

    ಕನ್ನಡಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡಿದ್ದ ಶಿವರಾಂ ಹಿರಿಯ ನಟನಾಗಿ ಮಾತ್ರವಲ್ಲ, ಸಿನಿಮಾ ಕುಟುಂಬಕ್ಕೆ ಹಿರಿಯರ ಸ್ಥಾನದಲ್ಲಿದ್ದು ನಿಜ ಪೋಷಕರೆನಿಸಿದ್ದರು. ಎಲ್ಲರ ಪಾಲಿಗೆ ಪ್ರೀತಿಯ ಶಿವರಾಮಣ್ಣ ಆಗಿದ್ದರು. ಇದೀಗ ಶಿವರಾಂ ಅಗಲಿಕೆಯಿಂದ ಕನ್ನಡ ಚಿತ್ರರಂಗ ಅಕ್ಷರಶಃ ಅನಾಥವಾಗಿದೆ. ವಿಷಾದದ ಕಡಲಲ್ಲಿ ಮುಳುಗಿದೆ. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಕರ್ನಾಟಕ-ತಮಿಳುನಾಡು ಗಡಿಭಾಗದ, ಬೆಂಗಳೂರಿನಿಂದ 60 ಕಿಲೋಮೀಟರ್ ದೂರದ ಚೂಡಸಂದ್ರದಲ್ಲಿ 1938ರ ಜನವರಿ 28ರಂದು ಜನಿಸಿದ ಶಿವರಾಂ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಅವರು ಸೇರಿದ್ದು ಬೆಂಗಳೂರು ಎಂಬ ಮಾಯನಗರಿಯನ್ನು. ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟರು. 1958ರಲ್ಲಿ ಮೊದಲ ಬಾರಿಗೆ ಬೆರೆತ ಜೀವ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಸುಮಾರು ಆರು ದಶಕಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಅವರು ನಿರ್ವಹಿಸದ ಪಾತ್ರವಿಲ್ಲ.

    ಗುರು ಶಿಷ್ಯರು, ಶರಪಂಜರ, ನಾಗರಾಹಾವು, ದೇವರಗುಡಿ, ಎಡಕಲ್ಲು ಗುಡ್ಡದ ಮೇಲೆ, ಚಲಿಸುವ ಮೋಡಗಳು, ಹಾಲುಜೇನು, ಹೊಂಬಿಸಲು, ಶುಭಮಂಗಳ.. ಉಪಾಸನೆ, ಡ್ರೈವರ್ ಹನುಮಂತು, ಬನಶಂಕರಿ.. ತಾಯಿ ಸಾಹೇಬ, ಅವರ ಸಿನಿಮಾಗಳ ಬಗ್ಗೆ ಹೇಳಲು ಒಂದೇ ಎರಡೇ ಸೇರಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗೃಹಭಂಗ, ಬದುಕು, ಚಕ್ರ, ಇತ್ತೀಚಿಗೆ ಬಂದ ಸತ್ಯ ಸೇರಿ ಧಾರವಾಹಿಗಳಿಗೂ ಜೀವ ತುಂಬಿದ್ದಾರೆ.

    ಕ್ಯಾಮೆರಾ ಸಹಾಯಕರಾಗಿ, ಸಹಾಯ ನಿರ್ದೇಶಕರಾಗಿ , ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಂದನವನದ ನಿಜ ಅರ್ಥದಲ್ಲಿ ಪೋಷಕರೆನಿಸಿದ್ದರು. ಹಿರಿಯನಟ ಶಿವರಾಂ ಅಭಿನಯದ ಕೊನೇ ಚಿತ್ರ ಆವರ್ತ. ಈ ಸಿನಿಮಾದಲ್ಲಿ ನರೇಂದ್ರನಾಥ ಬಲ್ಲಾಳ ಅನ್ನೊ ಪಾತ್ರದಲ್ಲಿ ಶಿವರಾಂ ಕಾಣಿಸಿಕೊಂಡಿದ್ದರು.

  • ಹಳೆ ತಲೆಮಾರಿನ ಕೊಂಡಿಯನ್ನು ಕಳೆದುಕೊಂಡೆವು – ನಟಿ ತಾರಾ

    ಹಳೆ ತಲೆಮಾರಿನ ಕೊಂಡಿಯನ್ನು ಕಳೆದುಕೊಂಡೆವು – ನಟಿ ತಾರಾ

    ಬೆಂಗಳೂರು: ಶಿವರಾಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಇವರಿಗೆ ಭಾರತೀಯ ಹಲವು ಭಾಷಾ ಚಿತ್ರರಂಗದ ಕಲಾವಿದರ ಪರಿಚಯ ತುಂಬಾ ಚೆನ್ನಾಗಿ ಇತ್ತು ಎಂದು ನಟಿ ತಾರಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಅವರೊಂದಿಗೆ ಭಜನೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಇವರು ಓರ್ವ ಅಯ್ಯಪ್ಪ ಸ್ವಾಮಿ ಅವರ ಮಹಾನ್ ದೈವ ಭಕ್ತರು ಆಗಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಇವರಿಗೆ ಸಿನಿಮಾ ರಂಗದ ಬಗ್ಗೆ ತಿಳಿಯದ ವಿಚಾರವಿಲ್ಲ. ನಟ ರಜನಿಕಾಂತ್, ಡಾ.ವಿಷ್ಣುವರ್ಧನ್, ಡಾ.ರಾಜ್‍ಕುಮಾರ್, ಚಲನಚಿತ್ರ ನಿದೇರ್ಶಕ ಪುಟ್ಟಣ್ಣಕಣಗಲ್, ನಟ ಕಲ್ಯಾಣ್‍ಕುಮಾರ್ ಇವರೊಡನೆ ಉತ್ತಮ ಒಡನಾಟವನ್ನು ಹೊಂದಿದ್ದರು ಹಾಗೂ ಈ ಎಲ್ಲಾ ವ್ಯಕ್ತಿಗಳ ಬಗ್ಗೆ ನನಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

    ಚಲನಚಿತ್ರರಂಗದ ಹಳೆ ತಲೆಮಾರಿನವರನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಚಂದನವನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ನಟಿ ತಾರಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

  • ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

    ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸ್ಯಾಂಡಲ್‍ವುಡ್‍ನ ‘ಶಿವರಾಮಣ್ಣ’ ಎಂದೇ ಖ್ಯಾತರಾಗಿದ್ದ ಶಿವರಾಂ ಇಂದು ನಿಧನ ಹೊಂದಿದ್ದಾರೆ.

    ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ಅಯ್ಯಪ್ಪ ಪೂಜೆ ಮಾಡುತ್ತಿದ್ದ ವೇಳೆ  ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು.  ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯಿಂದ ಬನಶಂಕರಿಗೆ ಮೃತದೇಹ ಕೊಂಡೊಯ್ಯಲು ಸಿದ್ದತೆ ನಡೆಸಲಾಗುತ್ತಿದೆ.  ಮನೆಯ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.

    ಶಿವರಾಂ ಅವರಿಗೆ 84 ವರ್ಷ ವಯಸ್ಸಾಗಿತ್ತು. ಆರು ದಶಕಗಳಿಂದ ಕನ್ನಡ ಸಿನಿಮಾ ರಂಗದ ನಂಟುಹೊಂದಿದ್ದಾರೆ. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಶಿವರಾಂ ನಾಯಕ ನಟರಾಗಿ, ಹಾಸ್ಯನಟ, ಪೋಷಕ ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದವರು. `ಶರಪಂಜರ’ ಶಿವರಾಂ ಎಂದೇ ಹೆಸರುವಾಸಿಯಾಗಿದ್ದರು `ಡ್ರೈವರ್ ಹನುಮಂತು’ ಸಿನಿಮಾದಲ್ಲಿ ನಾಯಕ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದರು. ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಣಯರಾಜ ಶ್ರೀನಾಥ್ ಅವರ ಜೊತೆಯಲ್ಲಿ ನಟಿಸಿದ್ದರು.

    ಶಿವರಾಂ ಅಯ್ಯಪ್ಪನ ಪರಮಭಕ್ತರಾಗಿದ್ದು, ಇವರು ಗುರುಸ್ವಾಮಿಯೂ ಆಗಿದ್ದರು. 48 ವರ್ಷಗಳಿಂದ ಶಬರಿಮಲೆಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ಇದೀಗ ಶಿವರಾಂ ಕನ್ನಡ ಸಿನಿಪ್ರಿಯರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದು, ಇವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಸಹಿತ ಹಲವು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

  • ಶಿವರಾಂ ಕೋಮಾದಲ್ಲಿದ್ದು ಮೆದುಳು, ಹೃದಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ: ವೈದ್ಯ ಭಾವುಕ

    ಶಿವರಾಂ ಕೋಮಾದಲ್ಲಿದ್ದು ಮೆದುಳು, ಹೃದಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ: ವೈದ್ಯ ಭಾವುಕ

    – ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿದೆ ಹಿರಿಯ ನಟನ ಆರೋಗ್ಯ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಿವರಾಂ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿರುವ ಕುರಿತಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ ಡಾ. ಮೋಹನ್, ಅವರ ಆರೋಗ್ಯ ಚೇತರಿಕೆಗಾಗಿ ನಾವು ಕಾಯುತ್ತಿದ್ದೆವು. ಆ ಆದರೆ ಅವರ ಬ್ರೈನ್‍ಗೆ ಅತಿ ಹೆಚ್ಚಿನ ಹಾನಿಯಾಗಿದೆ. ನಾನು ಶಿವರಾಂ ಅವರ ಸಂಬಂಧಿ ಮತ್ತು ಡಾಕ್ಟರ್ ಆಗಿ ಇವತ್ತು ನಿಮ್ಮ ಮುಂದೆ ಬಂದು ನಿಲ್ಲಲು ನನಗೆ ತುಂಬಾ ಕಷ್ಟವಾಗುತ್ತಿದೆ. ಮಿರಾಕಲ್ ಆಗುತ್ತದೆ ಎನ್ನುವ ಭಾವನೆ ನಮಗೆ ಕಮ್ಮಿಯಾಗುತ್ತಿದೆ. ನಾವು ಏನೇ ಮಾಡಿದರೂ ಅವರಿಗೆ ಹಿಂಸೆ ಆಗುತ್ತದೆ. ಕಿಡ್ನಿ, ಲಿವರ್ ವರ್ಕ್ ಆಗುತ್ತಿದೆ. ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬಾ ಸಮಯ ನಮ್ಮ ಜೊತೆಗೆ ಇರಲ್ಲ ಎಂದು ಹೇಳುತ್ತಾ ವೈದ್ಯರು ಭಾವುಕರಾಗಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ನಮಗೆ ಜೀವನಾಡಿಯಾಗಿದ್ದರು. ಒಬ್ಬ ರೋಗಿಗಿಂತ ನನಗೆ ಅಪ್ಪನ ಸ್ಥಾನದಲ್ಲಿ ಇದ್ದರು. ಅವರನ್ನು ನಾನು ಈ ಪರಿಸ್ಥಿತಿಯನ್ನು ನಾನು ಚಿಕಿತ್ಸೆ ಕೊಡಲು ತುಂಬಾ ಕಷ್ಟವಾಗುತ್ತಿದೆ. ಚಿಕಿತ್ಸೆ ನೀಡುತ್ತಿದ್ದೇವೆ, ಆದರೆ ಅವರು ಚಿಕಿತ್ಸೆಗೆ ಸ್ಪಂಧಿಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಅವರು ರಿಕವರಿ ಆಗುವ ಚಾನ್ಸ್ ತುಂಬಾ ಕಡಿಮೆ ಇದೆ. ಎಷು ದಿನ, ಎಷ್ಟು ಗಂಟೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ಅವರ ಕುಟುಂಬದವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ತುಂಬಾ ಹಿಂಸೆ ಮಾಡುವುದು ಬೇಡ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಕೊನೆ ಗಳಿಗೆವರೆಗೂ ಮಾಡಿ ಎಂದು ಹೇಳುತ್ತಿದ್ದಾರೆ. ಎಂಐಆರ್ ಮಾಡಲು ಆಗುತ್ತಿಲ್ಲ ಅವರನ್ನು ಬೇರೆ ಬೆಡ್‍ಗೆ ಶಿಫ್ಟ್ ಮಾಡಿದರೆ ಅವರ ಬಿಪಿಗೆ ಕಷ್ಟವಾಗುತ್ತದೆ ಎನ್ನುವ ಭಯವಿದೆ, ಕಂಡಿಶನ್ ಕ್ರಿಟಿಕಲ್ ಇದೆ ಎಂದು ಹೇಳಿದ್ದಾರೆ.

  • ದೇವರು ನಮಗೆ ಯಾಕೆ ಪದೇ ಪದೇ ನೋವು ಕೊಡುತ್ತಿದ್ದಾನೋ ಗೊತ್ತಿಲ್ಲ: ಶಿವರಾಜ್‍ಕುಮಾರ್

    ದೇವರು ನಮಗೆ ಯಾಕೆ ಪದೇ ಪದೇ ನೋವು ಕೊಡುತ್ತಿದ್ದಾನೋ ಗೊತ್ತಿಲ್ಲ: ಶಿವರಾಜ್‍ಕುಮಾರ್

    ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ. ಶಿವರಾಂ ಅವರ ಆರೋಗ್ಯ ವಿಚಾರಿಸಲು ನಟ ಶಿವರಾಜ್‍ಕುಮಾರ್ ಆಸ್ಪತ್ರೆ ಬಂದಿದ್ದರು. ಈ ವೇಳೆ ಅವರ ಜೊತೆಗೆ ಕಳೆದಿರುವ ಹಳೆಯ ನೆನಪುಗಳನ್ನು ಮೆಲಕು ಹಾಕಿ ಭಾವುಕರಾಗಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಫ್ಯಾಮಿಲಿಯ ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ನಮ್ಮ ಜೊತೆಗೆ ಇದ್ದರು. ದೇವರು ಕೈ ಬಿಡಲ್ಲ, ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಅವರು ಒಬ್ಬರು ಆಗಿದ್ದಾರೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

    ನಾವೆಲ್ಲ ಅಯಪ್ಪ ದೇವಸ್ಥಾನಕ್ಕೆ ಮೂರು ವರ್ಷಗಳ ಹಿಂದೆ ಹೋಗಿದ್ದೇವು. ಆಗ ಅವರಿಗೆ 81 ವರ್ಷ, ಆದರು ಯಾವುದೇ ಸಹಾಯವಿಲ್ಲದೆ ಬೆಟ್ಟ ಹತ್ತವರು, ಮನಸ್ಸು ಬಂದಗೆಲ್ಲಾ ಅಯಪ್ಪ ದೇವಸ್ಥಾನ ಕ್ಕೆ ಅವರು ಹೋಗುತ್ತಿದ್ದರು. ನಾವು ತಮ್ಮನ ಕಳೆದುಕೊಂಡ ನೋವುನಲ್ಲಿ ಇದ್ದೇವು, ದೇವರು ನಮಗೆ ಯಾಕೆ ಪದೇ ಪದೇ ಇತರ ನೋವು ಕೊಡುತ್ತಿದ್ದಾನೋ ಗೊತ್ತಿಲ್ಲ ಎಂದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

    ಅಯಪ್ಪನ ಪೂಜೆ ವೇಳೆ ಇತರ ಆಗಿದೆ ಅಂದ್ರೆ ದೇವರು ಅವರನ್ನ ಕೈ ಬಿಡಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ ಆಗುತ್ತದೆ. ಮತ್ತೆ ಅವರು ಗುಣಮುಖರಾಗಿ ಬರಬೇಕು ಅಂತ ನಮ್ಮಗೂ ಆಸೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

  • ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

    ನಟನ ಆರೋಗ್ಯದ ಕುರಿತು ಮಾಹಿತಿ ನೀಡಿರುವ ವೈದ್ಯರು, ಶಿವರಾಂ ಆರೊಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ. ಸದ್ಯ ನಿನ್ನೆ ಹೇಗಿದ್ರೋ ಇಂದೂ ಹಾಗೇ ಇದ್ದಾರೆ. ಹಾಗಾಗಿ ಇಂದು ನುರಿತ ವೈದ್ಯರು ಪರೀಕ್ಷೆ ಮಾಡಿ ನಂತರ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಕೋಮಾದಲ್ಲಿದ್ದು, ಶಿವರಾಮ್ ಅವರು ಬದುಕುಳಿದ್ರೆ ಮಿರಾಕಲ್ ಎಂದು ಹೇಳಿದ್ದಾರೆ.

    ಮನೆಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿದ್ದು ಬ್ರೈನ್ ಡ್ಯಾಮೇಜ್ ಆಗಿ ಶಿವರಾಂ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ನಟನ ಆರೊಗ್ಯ ವಿಚಾರಿಸಲು ಇಂದು ಕೂಡ ಹಲವು ಕಲಾವಿದರು ಆಗಮಿಸಲಿದ್ದಾರೆ.  ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ