Tag: shivaraj singh chouhan

  • ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ – ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ

    ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ – ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ

    -ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಚರ್ಚೆ ನಡೆಸಿ, ಮನವಿ ಸಲ್ಲಿಕೆ
    -ಕೆಂಪು ಮೆಣಸಿನಕಾಯಿ ಬೆಲೆ ಕುಸಿತದಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ರೈತರು

    ನವದೆಹಲಿ: ಕೆಂಪು ಮೆಣಸಿನಕಾಯಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗಾಗಿ ಕರ್ನಾಟಕಕ್ಕೂ ಬೆಂಬಲ ಬೆಲೆ ಯೋಜನೆ ವಿಸ್ತರಿಸುವಂತೆ ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

    ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಜೊತೆಗೆ ರಾಜ್ಯದ ಕೆಂಪು ಮೆಣಸಿನಕಾಯಿ ಹಿತರಕ್ಷಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.

    ರಾಜ್ಯದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಗಾರರು ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಹಕರು ಕೇಳುವಂತಹ ಕನಿಷ್ಠ ಬೆಲೆಗೆ ಮಾರಾಟ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಗಾಗಿ ಇದಕ್ಕೆ ಪರಿಹಾರ ಮಾರ್ಗ ಕಲ್ಪಿಸಿ ಎಂದರು.

    ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ನೆರವು ಅಗತ್ಯ:
    ಕರ್ನಾಟಕದಲ್ಲಿ ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಬೆಲೆ ಕೊರತೆ ಪಾವತಿ ಯೋಜನೆ ಅನುಷ್ಠಾನ ಅತ್ಯಗತ್ಯವಾಗಿದೆ. ಮಾರುಕಟ್ಟೆಯಲ್ಲಿನ ತೀವ್ರ ಬೆಲೆ ಕುಸಿತದಿಂದಾಗಿ ಕರ್ನಾಟಕದ ಅನೇಕ ಕೆಂಪು ಮೆಣಸಿನಕಾಯಿ ರೈತರು ಗಂಭೀರ ಸಮಸ್ಯೆ, ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದು, ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.

    ಕರ್ನಾಟಕದ ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ರೈತರು ಕೆಂಪು ಮೆಣಸಿನಕಾಯಿ ಕೃಷಿಯನ್ನು ಅವಲಂಬಿಸಿದ್ದಾರೆ ಮತ್ತು ಕೆಂಪು ಮೆಣಸಿನಕಾಯಿ ಪ್ರಸ್ತುತ ಮಾರುಕಟ್ಟೆ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಅನೇಕ ರೈತರನ್ನು ಸಾಲದ ಬಿಕ್ಕಟ್ಟಿಗೆ ಸಿಲುಕಿಸಿದೆ. ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕ ರಾಜ್ಯಕ್ಕೆ ವಿಸ್ತರಿಸುವ ತುರ್ತು ಅವಶ್ಯಕತೆಯಿದ್ದು, ಈ ಮೂಲಕ ರಾಜ್ಯದ ರೈತರ ನೆರವಿಗೆ ಧಾವಿಸಿದೆ ಎಂದು ಒತ್ತಾಯಿಸಿದರು.

    ಕೃಷಿ ಸಚಿವರ ಭರವಸೆ: ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

     

  • 4 ಬಾರಿ ಸಿಎಂ, 6 ಬಾರಿ ಸಂಸದ – ಮಧ್ಯಪ್ರದೇಶದ ಮಾಮಾ ಈಗ ಕೇಂದ್ರ ಸಚಿವ

    4 ಬಾರಿ ಸಿಎಂ, 6 ಬಾರಿ ಸಂಸದ – ಮಧ್ಯಪ್ರದೇಶದ ಮಾಮಾ ಈಗ ಕೇಂದ್ರ ಸಚಿವ

    – ಇದೇ ಮೊದಲ ಬಾರಿ ಮೋದಿ ಕ್ಯಾಬಿನೆಟ್‌ ಪ್ರವೇಶಿಸಿದ ಶಿವರಾಜ್‌ ಸಿಂಗ್‌ ಚೌಹಾಣ್

    ನವದೆಹಲಿ: ಮಧ್ಯಪ್ರದೇಶದಲ್ಲಿ ‘ಮಾಮಾ’ ಎಂದೇ ಖ್ಯಾತರಾಗಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಈ ಬಾರಿಯ ಮೋದಿ ಸಂಪುಟದಲ್ಲಿ (Modi Cabinet) ಸಚಿವ ಸ್ಥಾನ ಪಡೆದಿದ್ದಾರೆ. 4 ಬಾರಿ ಸಿಎಂ ಹಾಗೂ 6 ಬಾರಿ ಸಂಸದರಾಗಿರುವ ಹೆಗ್ಗಳಿಕೆಯೂ ʻಮಾಮಾʼ ಹೆಸರಿನಲ್ಲಿದೆ.

    ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಇಂದು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. 1990ರಲ್ಲಿ ಬುಧ್ನಿಯಿಂದ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ. 90ರ ದಶಕದಲ್ಲಿ ಅಖಿಲ ಭಾರತ ಕೇಶರಿಯ ವಾಹಿನಿಯ ಸಂಚಾಲಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

    ಬಳಿಕ ಶಿವರಾಜ್ ಸಿಂಗ್ ಚೌಹಾಣ್ 1990 ರಲ್ಲಿ ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾದರು. ಮುಂದಿನ ವರ್ಷ 1991 ರಲ್ಲಿ, ಅವರು 10 ನೇ ಲೋಕಸಭೆಯ ಚುನಾವಣೆಯಲ್ಲಿ ವಿದಿಶಾದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ಸಂಸದರಾದರು. 1996ರಲ್ಲಿ ಅವರು 11 ನೇ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದರು. ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು. ನಂತರ, ಚೌಹಾಣ್‌ ಅವರು 1996 ರಿಂದ 1997 ರವರೆಗೆ ಮಧ್ಯಪ್ರದೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದರು.

    1998ರಲ್ಲಿ, ಅವರು ಸತತ ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರು ಮತ್ತು ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಉಪಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. 13ನೇ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಸಂಸತ್ತನ್ನು ತಲುಪಿದರು. ಇದೇ ವೇಳೆ ಅವರು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು 2000 ರಿಂದ 2003ರವರೆಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು.

    ಡಿಸೆಂಬರ್ 2003ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶವನ್ನು ಬಿಜೆಪಿ ಗೆದ್ದಾಗ, ಶಿವರಾಜ್ ಸಿಂಗ್ ಹಾಲಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ರಾಘೋಗಢದಿಂದ ಸ್ಪರ್ಧಿಸಿದರು. ಆದರೆ ಈ ಚುನಾವಣೆಯಲ್ಲಿ ʼಮಾಮಾʼ ಸೋತರು. ನಂತರ ಅವರು 2000 ರಿಂದ 2004 ರವರೆಗೆ ಸಂವಹನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾದರು ಮತ್ತು 2004 ರಲ್ಲಿ ಐದನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು 14 ನೇ ಲೋಕಸಭೆಯಲ್ಲಿ ಮತ್ತೊಮ್ಮೆ ಸಂಸದರಾದರು.

    ಹ್ಯಾಟ್ರಿಕ್ ಗೆಲುವಿನ ನಂತರ ಶಿವರಾಜ್ ಸಿಎಂ!
    ಆದರೆ, ಮುಂದಿನ ವರ್ಷ 2005ರಲ್ಲಿ ಅವರ ಅದೃಷ್ಟ ಖುಲಾಯಿತು. ಬಿಜೆಪಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು. ಇದಾದ ನಂತರ 2006ರಲ್ಲಿ ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಹಳೆಯ ಕ್ಷೇತ್ರದಿಂದ 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು.

    2008ರಲ್ಲಿ, ಚೌಹಾಣ್ ತಮ್ಮ ಬುಧ್ನಿ ಸ್ಥಾನವನ್ನು 41,000 ಕ್ಕಿಂತ ಹೆಚ್ಚು ಮತಗಳಿಂದ ಉಳಿಸಿಕೊಂಡರು. ಇದು ರಾಜ್ಯದಲ್ಲಿ ಬಿಜೆಪಿಯ ಸತತ ಎರಡನೇ ಗೆಲುವಿಗೆ ಕಾರಣವಾಯಿತು. 12 ಡಿಸೆಂಬರ್ 2008ರಂದು ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 8 ಡಿಸೆಂಬರ್ 2013ರಂದು ಚೌಹಾಣ್ ಮತ್ತೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು ಮತ್ತು ಮೂರನೇ ಬಾರಿಗೆ ಸಿಎಂ ಹುದ್ದೆಗೆ ಆಯ್ಕೆಯಾದರು.

    2018ರ ಡಿಸೆಂಬರ್ 12 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನು ಪಡೆಯಲು ವಿಫಲವಾದ ನಂತರ, ಚೌಹಾಣ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ನಂತರ ಅವರು ಮತ್ತೊಮ್ಮೆ 23 ಮಾರ್ಚ್ 2020 ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2023ರ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ಗೆಲುವು ಸಾಧಿಸಿದರೂ ಶಿವರಾಜ್ ಸಿಂಗ್ ಅವರನ್ನು ಬಿಜೆಪಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಬದಲಿಗೆ ಬಿಜೆಪಿ ಹೈಮಾಂಡ್‌ ಮೋಹನ್ ಯಾದವ್‌ಗೆ ಅವಕಾಶ ನೀಡಿತು.

    ಈ ಬಾರಿ ಗೆಲುವು, ದೆಹಲಿಗೆ ಬುಲಾವ್!
    ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡದೇ ಇದ್ದಾಗ ಕೇಂದ್ರ ನಾಯಕತ್ವವು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ದೆಹಲಿಗೆ ಕರೆಸಿ ಉನ್ನತ ಹುದ್ದೆ ನೀಡುತ್ತದೆ ಎಂಬ ಊಹಾಪೋಹವು ಪ್ರಾರಂಭವಾಯಿತು. ಚುನಾವಣೆ ಕಳೆದ ಬಳಿಕ ಹಾಗೇನೂ ಆಗಲಿಲ್ಲ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ವಿದಿಶಾದಿಂದ ಸ್ಪರ್ಧಿಸಿ 8,17,429 ಮತಗಳ ಅಂತರದಿಂದ ದೊಡ್ಡ ಗೆಲುವು ದಾಖಲಿಸಿದರು. ಇದು ಲೋಕಸಭೆ ಚುನಾವಣೆಯಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ 6ನೇ ಗೆಲುವು.

    ವಿದ್ಯಾಭ್ಯಾಸದಲ್ಲೂ ಶಿವರಾಜ್ ಸಿಂಗ್‌ಗೆ ಅಗ್ರಸ್ಥಾನ!
    ಶಿವರಾಜ್ ಸಿಂಗ್ ಅವರು ಭೋಪಾಲ್‌ನ ಬರ್ಕತುಲ್ಲಾ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರು ಎಂ.ಎ. (ಫಿಲಾಸಫಿ) ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಸೆಹೋರ್ ಜಿಲ್ಲೆಯ ಜೈಟ್ ಗ್ರಾಮದಲ್ಲಿ ಪ್ರೇಮ್ ಸಿಂಗ್ ಚೌಹಾಣ್ ಮತ್ತು ಸುಂದರ್ ಬಾಯಿ ಚೌಹಾಣ್ ದಂಪತಿಗೆ ಜನಿಸಿದರು. ಶಿವರಾಜ್ ಸಿಂಗ್‌ ಚೌಹಾಣ್ ರೈತ ಕುಟುಂಬದಿಂದ ಬಂದಿದ್ದು, ಕಿರಾರ್ ಸಮುದಾಯಕ್ಕೆ ಸೇರಿದವರು.‌ ಶಿವರಾಜ್ ಸಿಂಗ್ ಅವರ ಪತ್ನಿ ಸಾಧನಾ ಸಿಂಗ್ ಚೌಹಾಣ್. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

  • ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ: ಶಿವರಾಜ್‌ ಸಿಂಗ್‌ ಚೌಹಾಣ್

    ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ: ಶಿವರಾಜ್‌ ಸಿಂಗ್‌ ಚೌಹಾಣ್

    ಭೋಪಾಲ್:‌ ತನಗಾಗಿ ಏನನ್ನಾದರೂ ಕೇಳುವುದಕ್ಕಿಂತ ಸಾಯುವುದೇ ಲೇಸು, ಅದಕ್ಕಾಗಿ ನಾನು ದೆಹಲಿಗೆ ಹೋಗುವುದಿಲ್ಲ. ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivaraj Singh Chouhan) ಹೇಳಿದ್ದಾರೆ.

    ಇಂದು ತಮ್ಮ ವಿದಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಗದ್ಗದಿತರಾದರು. ಮೋಹನ್‌ ಯಾದವ್ ಅವರನ್ನು ಸಿಎಂ ಆಯ್ಕೆ ಮಾಡಿರುವ ಬಿಜೆಪಿಯ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.

    ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಮೂಲಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮಧ್ಯಪ್ರದೇಶವು ಹೊಸ ಛಾಪು ಮೂಡಿಸುತ್ತದೆ. ಇದಕ್ಕಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದರು.

    ಬಿಜೆಪಿ (BJP) ಹೈಕಮಾಂಡ್ ನಿರ್ಧಾರದಿಂದ ನನಗೆ ತೃಪ್ತಿಯಿದೆ. 2005 ರಲ್ಲಿ ನಾನು ಮುಖ್ಯಮಂತ್ರಿಯಾದೆ. ಉಮಾಭಾರತಿ ಅವರ ಕಠಿಣ ಪರಿಶ್ರಮದಿಂದ ಅಂದು ಸರ್ಕಾರ ರಚನೆಯಾಗಿತ್ತು. ನಾನು ಈಗ ನನಗಾಗಿ ಏನನ್ನಾದರೂ ಕೇಳುವುದಕ್ಕಿಂತ ಸಾಯುವುದೇ ಮೇಲು. ಇವತ್ತು ನಾನು ಇಲ್ಲಿಂದ ವಿದಾಯ ಹೇಳುತ್ತಿದ್ದೇನೆ. ನನ್ನ ಹೃದಯ ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ ಎಂದು ಹೇಳಿದರು.

    ಸಾರ್ವಜನಿಕರೊಂದಿಗಿನ ನನ್ನ ಸಂಬಂಧವು ಯಾವಾಗಲೂ ಚೆನ್ನಾಗಿ ಇರುತ್ತದೆ. ನಾನು ಈ ಬಾಂಧವ್ಯವನ್ನು ಕಟ್‌ ಮಾಡಲ್ಲ, ನನ್ನ ಉಸಿರಿರುವವರೆಗೂ  ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾನು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

    ಚೌಹಾಣ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಸೋಮವಾರ ಅವರ ಮಹಿಳಾ ಅಭಿಮಾನಿಗಳು ಭೇಟಿಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ನಿಮಗೆ ಮತ ನೀಡಿದ್ದೇವೆ, ನೀವು ರಾಜೀನಾಮೆ ನೀಡಬಾರದು ಎಂದು ಕಣ್ಣೀರು ಹಾಕಿದರು. ಈ ವೇಳೆ ಚೌಹಾಣ್‌ ಅವರು ಮಹಿಳಾ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

  • ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆ ಮುನ್ನ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ಮಾಡಿ ಪೆಟ್ಟು ತಿಂದಿದ್ದ ಬಿಜೆಪಿ (BJP) ಹೈಕಮಾಂಡ್ ಅಂತಹದೇ ತಪ್ಪನ್ನು ಮಧ್ಯಪ್ರದೇಶದಲ್ಲಿ (Madhyapradesh) ಮಾಡದಿರಲು ನಿರ್ಧರಿಸಿದೆ. ಈ ಹಿನ್ನೆಲೆ ಚುನಾವಣೆಗೂ ಎರಡು ತಿಂಗಳು ಮುನ್ನ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದೆ.

    ಹೈಕಮಾಂಡ್ ಅನುಮತಿ ಹಿನ್ನೆಲೆ ಮುಖ್ಯಮಂತ್ರಿ ಶಿವರಾಜ್ ಚವ್ಹಾಣ್ (Shivraj Singh Chouhan) ತಮ್ಮ ಸಚಿವ ಸಂಪುಟ (Cabinet of Ministers) ವಿಸ್ತರಣೆ ಮಾಡಿದ್ದಾರೆ. ಮೂವರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಶನಿವಾರ ನಡೆದ ಪ್ರಮಾಣ ವಚನ (Oath) ಸ್ವೀಕಾರ ಕಾರ್ಯಕ್ರಮದಲ್ಲಿ ಮೂವರು ಶಾಸಕರು ಮಂತ್ರಿಗಳಾಗಿ ಬಡ್ತಿ ಹೊಂದಿದ್ದರು. ಇದನ್ನೂ ಓದಿ: ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    ಮಾಜಿ ಸಚಿವ ಮತ್ತು ರೇವಾದಿಂದ ನಾಲ್ಕು ಬಾರಿ ಶಾಸಕರಾದ ರಾಜೇಂದ್ರ ಶುಕ್ಲಾ, ಬ್ರಾಹ್ಮಣ ನಾಯಕ ಗೌರಿಶಂಕರ್ ಬಿಸೆನ್, ಮಧ್ಯಪ್ರದೇಶ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ, ಮಹಾಕೋಶಲ್ ಪ್ರದೇಶದ ಬಾಲಘಾಟ್‌ನಿಂದ ಏಳು ಬಾರಿ ಶಾಸಕರಾಗಿರುವ ರಾಹುಲ್ ಲೋಧಿ ಅವರಿಗೆ ಪ್ರದೇಶ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ

    ಮೂವರು ಶಾಸಕರ ಸೇರ್ಪಡೆಯಿಂದ ಶಿವರಾಜ್ ಸಿಂಗ್ ಚವ್ಹಾಣ್ ಸಂಪುಟದಲ್ಲಿನ ಸಚಿವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ರಾಜೇಂದ್ರ ಶುಕ್ಲಾ ಸೇರ್ಪಡೆಯಿಂದ ವಿಂಧ್ ಪ್ರದೇಶದ ಮಂತ್ರಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಗೌರಿಶಂಕರ್ ಬಿಸೆನ್ ಸೇರ್ಪಡೆಯಿಂದ ಮಹಾಕೋಶಲ್ ಪ್ರದೇಶದಲ್ಲಿ ಸಚಿವರ ಸಂಖ್ಯೆ ಎರಡಕ್ಕೆ ಏರಿದ್ದು, ರಾಹುಲ್ ಲೋಧಿ ಸೇರ್ಪಡೆಯಿಂದ ಬಡ ಬುಂದೇಲ್‌ಖಂಡ್ ಪ್ರದೇಶದ ಮಂತ್ರಿಗಳ ಸಂಖ್ಯೆ ಐದಕ್ಕೆ ಏರಿದಂತಾಗಿದೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ರಾಹುಲ್ ಲೋಧಿ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕಿ ಉಮಾಭಾರತಿ ಅವರ ಸೋದರಳಿಯ, ಬಿಸೆನ್ ಮತ್ತು ಲೋಧಿ ಮಧ್ಯಪ್ರದೇಶದ ಜನಸಂಖ್ಯೆಯ 45 ಪ್ರತಿಶತಕ್ಕಿಂತ ಹೆಚ್ಚಿರುವ ಇತರ ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ್ದು, ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಚಾರ ಹೊಂದಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ನೀರು ಬಂದ್ – ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ

    ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸಚಿವ ಸಂಪುಟ ವಿಸ್ತರಣೆ ಮೂಲಕ ರಾಜ್ಯದಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮೀಕರಣವನ್ನು ಸರಿದೂಗಿಸಲು ಯತ್ನಿಸುತ್ತಿದ್ದು, ನವಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ (Assembly Election) ಮೇಲೆ ಕೇಂದ್ರೀಕರಿಸಿದೆ. ಇದನ್ನೂ ಓದಿ: ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ಭೋಪಾಲ್: ಅಂದುಕೊಂಡಂತೆ ದೇಶದಲ್ಲಿ ಹಿಂದಿ ಶಿಕ್ಷಣ (Hindi Education) ಜಾರಿಯಾಗುತ್ತಿದ್ದು ಭಾನುವಾರ (ಅ.16 ರಂದು) 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (Medical College) ಭಾಷಾಂತರಿಸಿದ ಎಂಬಿಬಿಎಸ್ (MBBS) ಪ್ರಥಮ ವರ್ಷದ ಹಿಂದಿ ಪುಸ್ತಕಗಳನ್ನು (Hindi TextBooks) ಬಿಡುಗಡೆಗೊಳಿಸಲಾಗುತ್ತಿದೆ.

    ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಎಂಬಿಬಿಎಸ್ (MBBS) ವಿಷಯಗಳಾದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರ ಹಿಂದಿ ಪುಸ್ತಕಗಳನ್ನು ಭೋಪಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಹಿಂದಿ ವೈದ್ಯಕೀಯ ಶಿಕ್ಷಣ ಆರಂಭವಾಗಲಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ

    ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan), ವೈದ್ಯಕೀಯ ಕೋರ್ಸ್ (Medical Course) ಅನ್ನು ಹಿಂದಿಯಲ್ಲಿ ಆರಂಭಿಸುವ ಮೂಲಕ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಹಿಂದಿಯಲ್ಲಿ (Hindi Language) ಕಲಿಯಲು ಹಾಗೂ ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್

    ಹಿಂದಿ ಮಾಧ್ಯಮದ ಶಿಕ್ಷಣದಿಂದಲೂ ಜೀವನದಲ್ಲಿ ಮುನ್ನಡೆಯಬಹುದು ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕು ಎಂಬುದು ಪ್ರಧಾನಿ ಮೋದಿ (Naredra Modi) ಅವರ ಸಂಕಲ್ಪ. ಅಂತೆಯೇ ಈ ವರ್ಷ ಸಂಘಟಿತವಾಗಿ ಹಿಂದಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ತಜ್ಞರ ಕಾರ್ಯಪಡೆ, 97 ವೈದ್ಯಕೀಯ ಕಾಲೇಜು ಶಿಕ್ಷಕರು ಹಾಗೂ ತಜ್ಞರು 5,568 ಗಂಟೆಗಳಿಗೂ ಅಧಿಕ ಕಾಲ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಇಂಗ್ಲಿಷ್ ಪುಸ್ತಕಗಳ ಜೊತೆಗೆ ಹಿಂದಿ ಪುಸ್ತಕಗಳೂ ಕಾಲೇಜಿನಲ್ಲಿ ಲಭ್ಯವಿರುತ್ತವೆ. ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲೇ ಉಳಿಯುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಹಿಂದಿಯಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿವರಾಜ್‍ಸಿಂಗ್ ಚೌಹಾಣ್‍ಗೆ ಮತ್ತೆ ಕೊರೊನಾ- ಮುಂದುವರಿದ ಆಸ್ಪತ್ರೆ ವಾಸ್ತವ್ಯ

    ಶಿವರಾಜ್‍ಸಿಂಗ್ ಚೌಹಾಣ್‍ಗೆ ಮತ್ತೆ ಕೊರೊನಾ- ಮುಂದುವರಿದ ಆಸ್ಪತ್ರೆ ವಾಸ್ತವ್ಯ

    ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಕೊರೊನಾ ಪಾಸಿಟಿವ್ ಬಂದಿದ್ದು, ಪರಿಣಾಮ ಅವರ ಆಸ್ಪತ್ರೆ ವಾಸ್ತವ್ಯ ಮುಂದುವರಿದಿದೆ.

    ಈ ಹಿಂದೆ ಕೊರೊನಾ ಪಾಸಿಟಿವ್ ಬಂದು ಸಿಎಂ ಅವರು ಜುಲೈ 25ರಿಂದ ಚಿರಾಯು ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತ್ತೆ ಅವರನ್ನು ಟೆಸ್ಟ್ ಗೆ ಒಳಪಡಿಸಿದಾಗ ಮತ್ತೆ ಪಾಸಿಟಿವ್ ಎಂದು ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವಂತಾಗಿದೆ.

    ಗೃಹ ಸಚಿವ ನರೊಟ್ಟಂ ಮಿಶ್ರಾ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿಗಳು ಆಸ್ಪತ್ರೆಗೆ ದಾಖಲಾಗಿ ಇಂದಿಗೆ 9 ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇಂದಿನ ವರದಿಯಲ್ಲೂ ಪಾಸಿಟಿವ್ ಎಂದು ಬಂದಿರುವುದರಿಂದ ಅವರು ಮತ್ತೆ ಆಸ್ಪತ್ರೆಯಲ್ಲಿಯೇ ಉಳಿಯಲಿದ್ದಾರೆ ಎಂದು ತಿಳಿಸಿದರು.

    ಭಾನುವಾರ ಟ್ವೀಟ್ ಮಾಡಿದ್ದ ಸಿಎಂ, ನಾನು ಆರೋಗ್ಯವಾಗಿದ್ದು, ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಒಂದು ವೇಳೆ ಈಗಿನ ಪರೀಕ್ಷೆಯಲ್ಲಿ ನೆಗೆಟಿವ್ ಅಂತ ಬಂದ್ರೆ ಆಸ್ಪತ್ರೆಯಂದ ಡಿಸ್ಚಾರ್ಜ್ ಆಗಲಿದ್ದೇನೆ ಎಂದು ಬರೆದುಕೊಂಡಿದ್ದರು.