Tag: Shivaraj Patil

  • ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್

    ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್

    ರಾಯಚೂರು: ಮೋದಿ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ರಾಯಚೂರು (Raichur) ನಗರ ಬಿಜೆಪಿ ಶಾಸಕ (BJP MLA) ಡಾ. ಶಿವರಾಜ್ ಪಾಟೀಲ್ (Shivaraj Patil) ಆಡಿಯೋ (Audio) ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಶಾಸಕರು ಮತ್ತೊಮ್ಮೆ ವಿವಾದಾತ್ಮಕ ಮಾತುಗಳ ಮೂಲಕ ಸುದ್ದಿಯಲ್ಲಿದ್ದಾರೆ.

    ಈಗ ಪ್ರಧಾನಿ ಮೋದಿ, ಶ್ರೀರಾಮುಲು ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿವೆ. ನಾನೇ ಮೋದಿ ನಾನೇ ದೇವರು. ಯಾವ ಮೋದಿ ಇಲ್ಲಾ ಪಾದಿ ಇಲ್ಲ. ನಾನು ಯಾರನ್ನೂ ಕೇರ್ ಮಾಡಲ್ಲ. ಸಿಂಗಲ್ ಮ್ಯಾನ್ ಆರ್ಮಿ ನಾನು. ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನೂ ಕೂಡ ನಾನು ಕೇರ್ ಮಾಡಲ್ಲ ಎಂದಿರುವ ಶಿವರಾಜ್ ಪಾಟೀಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಏಮ್ಸ್ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಜೊತೆ ಮಾತನಾಡಿದ್ದ 3 ನಿಮಿಷ 19 ಸೆಕೆಂಡುಗಳ ಆಡಿಯೋ ನಾಲ್ಕೂವರೆ ವರ್ಷದ ಬಳಿಕ ಈಗ ವೈರಲ್ ಆಗಿದೆ.

    ಸೋತರೂ ಚಿಂತೆಯಿಲ್ಲಾ, ಗೆದ್ದರೂ ಚಿಂತೆಯಿಲ್ಲಾ, ಎದ್ದರೂ ಚಿಂತೆಯಿಲ್ಲಾ, ಮಲ್ಕೊಂಡರೂ ಚಿಂತೆಯಿಲ್ಲಾ ನನಗೆ. ಚಿಂತೆಯಿಲ್ಲದಿರುವ ಮನುಷ್ಯ ನಾನು. ನಾನೇ ದೇವರು ಎಲ್ಲರೂ ನನ್ನ ಕಾಲಿಗೆ ನಮಸ್ಕಾರ ಮಾಡಬೇಕು. ನಾನು ಯಾರನ್ನೂ ಕೇರ್ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    ನನಗೆ ಯಾವ ರೈಟ್ ಇಲ್ಲಾ ಲೆಫ್ಟ್ ಇಲ್ಲಾ. ಸಿಂಗಲ್ ಮ್ಯಾನ್ ಆರ್ಮಿ ನಾನು. ನನ್ನ ಕೈ, ನನ್ನ ಕಾಲು, ಯಾವ ಮೋದಿ ಇಲ್ಲಾ, ಅವನ್ಯಾರು ಟ್ರಂಪ್ ಇಲ್ಲಾ. ಯಾವ ಬದನೆಕಾಯಿ ಸಹ ಕೇಳಂಗಿಲ್ಲ. ನಾನೇ ದೇವರು. ನಾನೇ ಎಲ್ಲಾ. ನಾನಿದ್ರೆ ಜಗತ್ತು. ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಬಗ್ಗೆ ನನ್ನ ಮುಂದೆ ಹೇಳಿದ್ರೆ ಹೇಗೆ ಎಂದು ಮಾತನಾಡಿದ್ದಾರೆ.

    ಆಡಿಯೋ ವೈರಲ್ ಆಗಿರುವುದು ಬಿಜೆಪಿ ಪಾಳಯದಲ್ಲಿ ಇರುಸುಮುರುಸಿಗೆ ಕಾರಣವಾಗಿದ್ದರೆ, ಸಾರ್ವಜನಿಕ ವಲಯದಲ್ಲಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

  • ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹ -ಶಾಸಕರು, ಹೋರಾಟಗಾರರ ನಡುವೆ ವಾಗ್ವಾದ

    ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹ -ಶಾಸಕರು, ಹೋರಾಟಗಾರರ ನಡುವೆ ವಾಗ್ವಾದ

    ರಾಯಚೂರು: ನಗರದಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ಹೋರಾಟಗಾರರು ಶಾಸಕ ಡಾ.ಶಿವರಾಜ್ ಪಾಟೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಏಮ್ಸ್ ಹೋರಾಟ ಸಮಿತಿ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್ ನಡುವೆ ವಾಗ್ವಾದ ನಡೆದಿದೆ.

    ರಾಯಚೂರು ಜಿಲ್ಲೆಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ಐಐಟಿಯನ್ನ ಧಾರವಾಡಕ್ಕೆ ನೀಡಲಾಯಿತು. ಪರ್ಯಾಯವಾಗಿ ಏಮ್ಸ್ ನಮ್ಮ ಜಿಲ್ಲೆಗೆ ನೀಡುವಂತೆ ಹೋರಾಟ ಸಮಿತಿ ಆಗ್ರಹಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಅಂತ ಹೋರಾಟಗಾರರು ಧಿಕ್ಕಾರವನ್ನು ಸಹ ಕೂಗಿದ್ದಾರೆ.  ಇದನ್ನೂ ಓದಿ:ದೇವಸ್ಥಾನ ಕೆಡವಿದರೆ ನಮಗೆ ಒಳ್ಳೆದಾಗಲ್ಲ- ಶೋಭಾ ಕರಂದ್ಲಾಜೆ

    ತಮ್ಮ ವಿರುದ್ಧ ಘೋಷಣೆ ಕೂಗಿದ್ದರಿಂದ ಸಿಟ್ಟಿಗೇರಿದ ಶಾಸಕರು ಜಿಲ್ಲೆಯಲ್ಲಿ ನಾನೊಬ್ಬನೇ ಶಾಸಕನಿಲ್ಲ. ಇನ್ನೂ ಆರು ಜನ ಶಾಸಕರಿದ್ದಾರೆ. ಅವರ ಕಚೇರಿ ಮುಂದೆಯೂ ಧರಣಿ ಮಾಡಿ. ಅಲ್ಲಿಯೂ ಘೋಷಣೆ ಕೂಗಿ, ನಿಮ್ಮ ಹೋರಾಟಕ್ಕೆ ಬೆಂಬಲಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇನ್ನುಳಿದ ಶಾಸಕರ ರಾಜೀನಾಮೆ ಪಡೆಯುವ ಶಕ್ತಿ ನಿಮಗಿದೆಯೇ ಅಂತ ಏರು ಧ್ವನಿಯಲ್ಲಿ ಹೋರಾಟಗಾರರ ಜೊತೆ ವಾಗ್ವಾದ ನಡೆಸಿದರು.  ಇದನ್ನೂ ಓದಿ:ಭಾರತ ಬಂದ್‍ಗೆ ಕರ್ನಾಟಕದಲ್ಲೂ ಸಂಪೂರ್ಣ ಬೆಂಬಲ: ಕುರುಬೂರು ಶಾಂತಕುಮಾರ್

  • ಪಕ್ಷದ ವಿರುದ್ದ ಯತ್ನಾಳ್ ಇನ್ನೊಮ್ಮೆ ಮಾತಾಡಿ ನೋಡಲಿ: ಶಾಸಕ ಶಿವರಾಜ್ ಪಾಟೀಲ್

    ಪಕ್ಷದ ವಿರುದ್ದ ಯತ್ನಾಳ್ ಇನ್ನೊಮ್ಮೆ ಮಾತಾಡಿ ನೋಡಲಿ: ಶಾಸಕ ಶಿವರಾಜ್ ಪಾಟೀಲ್

    ರಾಯಚೂರು: ಪದೇ ಪದೇ ಪಕ್ಷದ ವಿರುದ್ದ ಯತ್ನಾಳ್ ಯಾಕ್ ಮಾತಾಡ್ತಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಹೀಗೇ ಮಾತಾಡಲಿ ನೋಡೋಣ, ಏನ್ ಆಗುತ್ತೆ ಅಂತಾ ಗೊತ್ತಾಗುತ್ತೆ ಅಂತ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಶಾಸಕ ಡಾ.ಶಿವರಾಜ್ ಪಾಟೀಲ್, ನಮ್ಮದು ಶಿಸ್ತಿನ ಪಕ್ಷ, ಯತ್ನಾಳ್ ಸೀನಿಯರ್ ಲೀಡರ್ ಆಗಿದ್ರೂ ಈಗಾಗಲೇ ನೋಟೀಸ್ ಕೊಡಲಾಗಿದೆ. ಯತ್ನಾಳ್ ಮಾತಾಡಿದ್ರೆ ಏನೂ ಆಗಲ್ಲ. ವಿಜಯೇಂದ್ರ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡ್ತಿಲ್ಲ. ನಮಗೆ ವಿಜಯೇಂದ್ರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ವಿಜಯೇಂದ್ರನಿಂದ ಕೇವಲ ಯತ್ನಾಳ್ ಗೆ ಮಾತ್ರ ಸಮಸ್ಯೆ ಆಗಿದೆ ಅಂತ ಶಿವರಾಜ್ ಪಾಟೀಲ್ ಟಾಂಗ್ ನೀಡಿದರು.

    ಬಿಪಿಎಲ್ ಕಾರ್ಡಿಗೆ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಮಾನದಂಡ ಆಗಬಾರದು. ನಾನು ಆ ವಿಷಯವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಅದರ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಟಿವಿ ಹಾಗೂ ಬೈಕ್ ಲಕ್ಸುರಿ ಆಗಿ ಉಳಿದಿಲ್ಲ ಎಂದರು. ಮೊಬೈಲ್, ಟಿವಿ ಹಾಗೂ ಬೈಕ್ ನಮ್ಮ ದುಡಿಮೆಯ ಭಾಗವಾಗಿದೆ. ದುಡಿಮೆ ಮಾಡಲಿಕ್ಕೆ ಅವು ನಮ್ಮ ಸಲಿಕೆ, ಗುದ್ದಲಿಯಂತೆ ಆಗಿದೆ. ಹಾಗಾಗಿ ಈ ರೀತಿಯ ಮಾನದಂಡಗಳು ಸರಿ ಅಲ್ಲ. ಇದರ ಬಗ್ಗೆ ನನ್ನ ವಿರೋಧವಿದೆ ಅಂತ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.

  • ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಾಸಕರ ಭರ್ಜರಿ ಡ್ಯಾನ್ಸ್- ವಿಡಿಯೋ ನೋಡಿ

    ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಾಸಕರ ಭರ್ಜರಿ ಡ್ಯಾನ್ಸ್- ವಿಡಿಯೋ ನೋಡಿ

    ರಾಯಚೂರು: ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಮಾಲಾಧಾರಿಗಳ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.

    ಬುಧವಾರದಂದು ರಾಯಚೂರಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲಾಧಾರಿಗಳ ಶೋಭಾಯಾತ್ರೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರ ಜೊತೆ ಕುಣಿದು ಖುಷಿಪಟ್ಟಿದ್ದಾರೆ. ಶಿವರಾಜ್ ಪಾಟೀಲ್ ಅವರು ದೇವಾಲಯದಲ್ಲಿ ಕುಣಿದಿರೋ ವಿಡಿಯೋವನ್ನು ಸ್ಥಳದಲ್ಲಿದ್ದವರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಂದೆಡೆ ಶಾಸಕರ ನೃತ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನುಳಿದವರು ರಾಯಚೂರು ನಗರದ ಸಮಸ್ಯೆಗಳನ್ನ ನೋಡುವವರು ಯಾರು ಅಂತ ಪ್ರಶ್ನಿಸಿದ್ದಾರೆ. ಕಳೆದ ಒಂದು ವಾರದಿಂದ ಇಡೀ ರಾಯಚೂರು ನಗರಕ್ಕೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಆದ್ರೆ ಶಾಸಕರು ಮಾತ್ರ ಖುಷಿಯಿಂದ ಕುಣಿಯುತ್ತಿದ್ದಾರೆ ಅಂತ ಕೆಲವರು ಗರಂ ಆಗಿದ್ದಾರೆ.

    ಸಮಸ್ಯೆಗಳತ್ತ ಗಮನಹರಿಸುವ ಬದಲು ಡ್ಯಾನ್ಸ್ ಮಾಡಿದ ಶಾಸಕರ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

    https://www.youtube.com/watch?v=IRrUIdFUKOA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೀವ್ರ ಕುತೂಹಲ ಸೃಷ್ಟಿಸಿದೆ ಶಿವರಾಜ್ ಪಾಟೀಲ್, ಎಂ.ಬಿ ಪಾಟೀಲ್ ಭೇಟಿ!

    ತೀವ್ರ ಕುತೂಹಲ ಸೃಷ್ಟಿಸಿದೆ ಶಿವರಾಜ್ ಪಾಟೀಲ್, ಎಂ.ಬಿ ಪಾಟೀಲ್ ಭೇಟಿ!

    ಬೆಂಗಳೂರು: ನನ್ನ ಹಾಗೂ ಎಂ.ಬಿ ಪಾಟೀಲ್ ರ ಸಂಬಂಧ ಪಕ್ಷಗಳನ್ನು ಮೀರಿದ್ದು. ಚುನಾವಣೆಯಲ್ಲಿ ಗೆದ್ದ ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಅಂತ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.

    ಇಂದು ಸದಾಶಿವ ನಗರದಲ್ಲಿರೋ ಮಾಜಿ ಸಚಿವ ಎಂ.ಬಿ ಪಾಟೀಲ್ ಮನೆಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಪಾಟೀಲ್, ಮಂತ್ರಿ ಆಗಿದ್ದಾಗ ನಮ್ಮ ಭಾಗದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ಇದೊಂದು ಕರ್ಟಸಿ ಭೇಟಿ ಅಷ್ಟೆ. ಇದು ರಾಜಕೀಯ ಭೇಟಿಯಲ್ಲ. ಬಿಜೆಪಿಗೆ ಅಹ್ವಾನ ಮಾಡಲು ಬಂದಿಲ್ಲ. ಈಗಿನ ಕಾಂಗ್ರೆಸ್ ಗಲಾಟೆಗೂ ನನಗೂ ಸಂಬಂಧವಿಲ್ಲ ಅಂದ್ರು.

    ಇದೇ ವೇಳೆ ಎಂ.ಬಿ ಪಾಟೀಲ್ ಅವರ ಮನವೊಲಿಸಲು ಬಂದಿದ್ದೀರಾ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಯಾರ ಮನವೊಲಿಸಲು ಬಂದಿಲ್ಲ. ಅದಕ್ಕೆಲ್ಲ ಪಕ್ಷದಲ್ಲಿ ಹಿರಿಯರಿದ್ದಾರೆ. ಕೇವಲ ಸೌಜನ್ಯದ ಭೇಟಿ ಅಷ್ಟೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ರು.

    ಒಟ್ಟಿನಲ್ಲಿ ರಾಜಕೀಯ ಬೆಳವಣಿಗೆಗಳ ಮಧ್ಯೆ ರಾಯಚೂರು ನಗರದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್, ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿರುವುದು ಇದೀಗ ತೀವ್ರ ಕುತೂಹಲ ಸೃಷ್ಟಿಸಿದೆ.

    ಇತ್ತ ಸಚಿವ ಸ್ಥಾನ ಕೈ ತಪ್ಪಿದ್ರ ಬಗ್ಗೆ ನಾನು ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ಹೇಳಿದ್ದೆ. ಏನಾಯ್ತು ಅಂತ ಕೇಳಿದ್ರು ಅಷ್ಟೇ. ಆಮೇಲೆ ಫೋನ್ ಮಾಡ್ಲಿಲ್ಲ ಅಂತ ಮಾಜಿ ಸಚಿವ ಎಂಬಿ ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.

  • ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು: ಹಸಿರು ಬಣ್ಣದ ಪಾಚಿಗಟ್ಟಿದ ಕೊಳಚೆ ನೀರನ್ನ ಕನಿಷ್ಠ ಪ್ರಮಾಣದ ಶುದ್ಧೀಕರಣವನ್ನೂ ಮಾಡದೇ ನಗರ ಸಭೆ ಕೊಳಾಯಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ರಾಂಪುರ ಕೆರೆಯಿಂದ ನಗರಕ್ಕೆ ಹರಿಸುವ ನೀರನ್ನ ಶುದ್ದೀಕರಿಸುವ ಕನಿಷ್ಠ ಕೆಲಸವನ್ನೂ ನಗರಸಭೆ ಮಾಡುತ್ತಿಲ್ಲ. ಶುದ್ಧೀಕರಣ ಘಟಕ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಇಲ್ಲಿನ ಯಂತ್ರೋಪಕರಗಳು ತುಕ್ಕು ಹಿಡಿದಿದ್ದು ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕೆಲಸದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕೊಳಚೆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

    ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ, ತುಂಗಾಭದ್ರ ಎರಡು ನದಿಗಳಿದ್ದರೂ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವತಃ ವೈದ್ಯರಾಗಿದ್ದರೂ ಜನರಿಗೆ ಶುದ್ಧ ನೀರನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆಎತ್ತಿಕೊಳ್ಳುತ್ತಿವೆ.

    ಒಟ್ನಲ್ಲಿ ರಾಯಚೂರಿನ ಜನತೆ ನಿತ್ಯ ನರಕವನ್ನ ನೋಡುತ್ತಿದ್ದು, ಇದೇ ಸ್ವರ್ಗ ಅಂತ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾ ಬದುಕುತ್ತಿದ್ದಾರೆ. ಇಲ್ಲಿನ ಜನ ಇನ್ನೂ ಬದುಕಿದ್ದಾರೆ ಅಂತ ನಗರಸಭೆ ಹಾಗೂ ಜಿಲ್ಲಾಡಳಿತ ಮಲೀನವಾದ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿವೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಬೇಕಿದೆ.