Tag: shivaraj k.r pete

  • ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

    ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

    ರ್ವ ನಟ ಒಂದು ಬಗೆಯಲ್ಲಿ ಸದ್ದು ಮಾಡಿದರೆ, ಆತನಿಗಾಗಿ ಅಂಥಾದ್ದೇ ಪಾತ್ರ ಸೃಷ್ಟಿಸಿ ಸೀಮಿತ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆಯೋದೇ ಹೆಚ್ಚು. ಕನ್ನಡದಲ್ಲಿಯೂ ಕೂಡಾ ಅಂಥಾ ಒಂದಷ್ಟು ಉದಾಹರಣೆಗಳಿದ್ದಾವೆ. ಇದೆಲ್ಲದರಾಚೆಗೆ ಪ್ರತೀ ಕಲಾವಿದರೊಳಗೂ ಸಿನಿಮಾದಿಂದ ಸಿನಿಮಾಕ್ಕೆ ಚಹರೆ ಬದಲಿಸುವ, ಬೇರೆ ಬೇರೆ ಪಾತ್ರಗಳಿಗೆ ಒಡ್ಡಿಕೊಳ್ಳುವ ತುಡಿತವಿರುತ್ತದೆ. ಅದನ್ನು ನಿರ್ದೇಶಕರಾದವರು ಅರ್ಥ ಮಾಡಿಕೊಂಡುಬಿಟ್ಟರೆ ಪ್ರೇಕ್ಷಕರ ಪಾಲಿಗೆ ಅಚ್ಚರಿ ನಿಕ್ಕಿ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರುದ್ರ ಗರುಡ ಪುರಾಣ ಚಿತ್ರದ ನಿರ್ದೇಶಕ ನಂದೀಶ್ ಅಂಥಾದ್ದೊಂದು ಸೂಕ್ಷ್ಮ ನಡೆ ಅನುಸರಿಸಿದ್ದಾರೆ. ಅದರ ಫಲವಾಗಿಯೇ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿರುವ ಶಿವರಾಜ್ ಕೆ.ಆರ್ ಪೇಟೆ ಹೊಸ ಬಗೆಯ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ!

    ಶಿವರಾಜ್ ಕೆ.ಆರ್. ಪೇಟೆ (Shivaraj K R Pete) ಬಹುಮುಖ ಪ್ರತಿಭೆ. ಆದರೆ, ಅವರೊಳಗಿನ ನಟ ಹೊರಜಗತ್ತನ್ನು ಆವರಿಸಿಕೊಂಡಿದ್ದದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಆ ನಂತರದಲ್ಲಿ ತಮ್ಮಿಚ್ಚೆಯಂತೆಯೇ ಚಿತ್ರರಂಗಕ್ಕೆ ಆಗಮಿಸಿದ್ದ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಹಾಸ್ಯದಾಚೆಯ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ರುದ್ರ ಗರುಡ ಪುರಾಣದಲ್ಲಿಯೂ (Rudra Garuda Purana) ಅಂಥಾದ್ದೇ ಒಂದು ಮಹತ್ವದ ಪಾತ್ರ ಸಿಕ್ಕ ಖುಷಿ ಶಿವರಾಜ್ ಅವರಲ್ಲಿದೆ. ಈ ಪಾತ್ರದ ಗುಣ ಲಕ್ಷಣಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ಶಿವರಾಜ್ ಇಲ್ಲಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆಂಬ ಸಣ್ಣ ಸುಳಿವನ್ನಷ್ಟೇ ಜಾಹೀರು ಮಾಡಲಾಗಿದೆ. ಇದನ್ನೂ ಓದಿ: ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!

    ಶಿವರಾಜ್ ಕೆ.ಆರ್ ಪೇಟೆ ಬಣ್ಣದ ಲೋಕದತ್ತ ಬೆರಗಿಟ್ಟುಕೊಂಡು ಬೆಂಗಳೂರು ತಲುಪಿದ ಆರಂಭದಲ್ಲಿ ಜೊತೆಯಾಗಿದ್ದವರು ನಂದೀಶ್. ಅಂದಿನಿಂದ ಇಂದಿನವರೆಗೂ ಜೊತೆಯಾಗಿರೋ ನಂದೀಶ್ ಅವರಿಗೆ ತನ್ನ ಗೆಳೆಯನ ನಟನೆಯ ತಾಕತ್ತಿನ ಸ್ಪಷ್ಟ ಪರಿಚಯವಿತ್ತು. ಈ ಕಾರಣದಿಂದಲೇ ಅವರನ್ನು ಗಂಭೀರವಾದ, ಅತ್ಯಂತ ಮಹತ್ವದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸಿದ್ದಾರೆ. ಬಹುಶಃ ರುದ್ರ ಗರುಡ ಪುರಾಣದಲ್ಲಿನ ಶಿವರಾಜ್ ಕೆ.ಆರ್ ಪೇಟೆ ಗೆಟಪ್ಪು ಕಂಡು ಎಲ್ಲರೂ ಅಚ್ಚರಿಗೀಡಾಗೋದು ಖಾತರಿ. ಇದು ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿನಲ್ಲಿ ಬೇರೆಯದ್ದೇ ಖದರ್ ಹೊಂದಿರೋ ಪಾತ್ರವೆಂಬ ಖುಷಿಯೂ ಅವರಲ್ಲಿದೆ.

    ಸದಾ ಭಿನ್ನ ದಿಕ್ಕಿನಲ್ಲಿ ಆಲೋಚಿಸುತ್ತಾ, ಹೊಸಾ ಬಗೆಯ ಕಥೆ ಮುಟ್ಟುವ ಗುಣದವರು ನಂದೀಶ್. ಓರ್ವ ಜೊತೆಗಾರನಾಗಿ ನಂದೀಶ್ ಅವರ ಪ್ರತಿಭೆಯ ಅರಿವಿರುವ ಶಿವರಾಜ್ ಕೆ.ಆರ್ ಪೇಟೆ ಅವರಿಗೆ ಗೆಳೆಯನ ಚಿತ್ರದಲ್ಲಿ ಭಿನ್ನ ಪಾತ್ರವಾದ ಖುಷಿಯಿದೆ. ಈ ಹಿಂದೆ ದರ್ಶನ್ ನಟಿಸಿದ್ದ ರಾಬರ್ಟ್ ಚಿತ್ರದಲ್ಲಿಯೂ ಬೇರೆ ತೆರನಾದ ಪಾತ್ರ ಶಿವರಾಜ್ ಅವರಿಗೆ ಸಿಕ್ಕಿತ್ತು. ನಾನು ಮತ್ತು ಗುಂಡ ಚಿತ್ರದಲ್ಲಿಯೂ ಹಾಸ್ಯದ ಪರಿಧಿಯಾಚೆಗಿನ ಭಾವನಾತ್ಮಕ ಪಾತ್ರವಾಗಿ ಅವರು ಕಾಣಿಸಿಕೊಂಡಿದ್ದರು. ರುದ್ರ ಗರುಡ ಪುರಾಣದಲ್ಲಿಯಂತೂ ಎಲ್ಲರಿಗೂ ಆಶ್ಚರ್ಯವಾಗಬಲ್ಲ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಶಿವರಾಜ್ ಕೆ.ಆರ್ ಪೇಟೆ ದರ್ಶನವಾಗಲಿರೋದು ಪಕ್ಕಾ! ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರುದ್ರ ಗರುಡ ಪುರಾಣ ಎಲ್ಲ ವರ್ಗಗಳ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹಾರರ್ ಸಿನಿಮಾಗಳಿಗಾಗಿ ಹಾತೊರೆಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ ಹೊಸತನದೊಂದಿಗೆ ರೂಪುಗೊಂಡಿರುವ, ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡಿಕೊಳ್ಳುತ್ತೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರ ಗರುಡ ಪುರಾಣ ಜನವರಿ 24 ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

  • ‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ನ್ನಡದ ಹೆಸರಾಂತ ನಟ ನೀನಾಸಂ ಸತೀಶ್ ನಟನೆಯ ‘ಮ್ಯಾಟ್ನಿ’ ಸಿನಿಮಾದ ಕಲರ್ ಫುಲ್ ಎಣ್ಣೆ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಿತು. ರಂಗು ರಂಗಾದ ಸೆಟ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ನೀನಾಸಂ ಸತೀಶ್, ನಾಗಭೂಷಣ್ (Nagabhushan), ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದೊಂದು ಎಣ್ಣೆ ಸಾಂಗ್ ಆಗಿದ್ದು, ಸಿನಿಮಾದ ಪ್ರಮುಖ ಘಟ್ಟದಲ್ಲಿ ಈ ಹಾಡು ಬರಲಿದೆಯಂತೆ.

    ನೀನಾಸಂ ಸತೀಶ್ ನಟನೆಯ ಬಹುತೇಕ ಸಿನಿಮಾದ ಹಾಡುಗಳು ಹಿಟ್ ಆಗಿವೆ. ಇದೇ ಮ್ಯಾಟ್ನಿ ಸಿನಿಮಾದ ಹಾಡೊಂದು ಈ ಹಿಂದೆ ರಿಲೀಸ್ ಆಗಿದ್ದು, ಸಂಜೆ ಮೇಲೆ ಸುಮ್ನೆ ಹಂಗೆ ಹೆಸರಿನ ಗೀತೆಯೂ ಹಿಟ್ ಲಿಸ್ಟ್ ಗೆ ಸೇರ್ಪಡೆ ಆಗಿದೆ. ಹಾಗಾಗಿ ಎಣ್ಣೆ ಸಾಂಗ್ ಕೂಡ ಅದೇ ಸಾಲಿಗೆ ಸೇರಲಿದೆ ಎನ್ನುವ ನಿರೀಕ್ಷೆ ಹುಟ್ಟು ಹಾಕಿದೆ.

    ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ, ಅಯೋಗ್ಯ ಸಿನಿಮಾದ ‘ಏನಮ್ಮಿ ಏನಮ್ಮಿ’ ಹಾಡು 108 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ದಾಖಲೆ ಬರೆದಿತ್ತು. ಇದೀಗ ಮತ್ತೆ ಈ ಜೋಡಿಯ ‘ಸಂಜೆ ಮೇಲೆ ಸುಮ್ನೆ ಹಂಗೆ’ (Sanje Mele) ಹಾಡು ವೈರಲ್ ಆಗಿದೆ. ನಿನ್ನೆಯಷ್ಟೇ ರಿಲೀಸ್ ಆಗಿರುವ ‘ಮ್ಯಾಟ್ನಿ’ (Matinee) ಸಿನಿಮಾದ ಈ ಗೀತೆ ಕಡಿಮೆ ಅವಧಿಯಲ್ಲೇ 3.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ವೈರಲ್ ಆಗುತ್ತಿದೆ.

    ಪೂರ್ಣಚಂದ್ರ ತೇಜಸ್ವಿ (Purnachandra Tejaswi) ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಗೀತೆಗೆ ವಿಜಯ್ ಪ್ರಕಾಶ್ (Vijay Prakash) ದನಿಯಾಗಿದ್ದಾರೆ. ಇಡೀ ಹಾಡನ್ನು ಕಲರ್ ಫುಲ್ ಸೆಟ್ ನಲ್ಲಿ ಚಿತ್ರೀಕರಿಸಿದ್ದಾರೆ ನಿರ್ದೇಶಕ ಮನೋಹರ್. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸಖತ್ತಾಗಿ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಸತೀಶ್ ಮತ್ತು ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ಇರುವುದರಿಂದ ಹಾಡುಗಳು (Songs)ನಿರೀಕ್ಷೆ ಮೂಡಿಸಿದ್ದವು.

    ಏನಮ್ಮಿ ಏನಮ್ಮಿ ಅಂತ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ಜೋಡಿ ಸತೀಶ್ ನೀನಾಸಂ- ರಚಿತಾ ರಾಮ್ ಫೇರ್ ಮತ್ತೆ ಮ್ಯಾಟ್ನಿ ಸಿನಿಮಾದ ಮೂಲಕ ಒಂದಾಗಿದ್ದರಿಂದ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ  ಮನೋಹರ್ ಕಾಂಪಳ್ಳಿ ಕೂಡ ‘ಮ್ಯಾಟ್ನಿ’ ಸಿನಿಮಾವನ್ನು ತಯಾರಿಸಿದ್ದಾರೆ ಎನ್ನುವ ಮಾತಿದೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

    ‘ಮ್ಯಾಟ್ನಿ’ಯ ಟೀಸರ್ ಕಲರ್ ಫುಲ್ ಸೆಟ್, ಮನ ಸೆಳೆಯೋ ಬ್ಯಾಗ್ರೌಂಡ್ ಮ್ಯೂಸಿಕ್, ರಚ್ಚು ಲುಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡಿದ್ದರೆ, ಸತೀಶ್ ನೀನಾಸಂ ಪ್ರೇಮ ನಿವೇದನೆ, ಪ್ರೀತಿಯ ಸಾಲುಗಳು ಕಣ್ಮನ ಸೆಳೆದಿದ್ದವು.  ಮನೋಹರ್ ಕಾಂಪಲಿ ಇಬ್ಬರು ಸ್ಟಾರ್ ಜೋಡಿಗೆ ಸರಿ ಹೊಂದುವಂತಹ ಒಂದೊಳ್ಳೆ ಕಥೆ ಹೆಣೆದಿದ್ದು ನಿರ್ದೇಶಕನಾಗಿ ತಮ್ಮನ್ನು ಸಹ ಪ್ರೂವ್ ಮಾಡಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.

    ರೋಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಮ್ಯಾಟ್ನಿ ಚಿತ್ರದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲವರ್ ಬಾಯ್ ಅವತಾರವೆತ್ತಿದ್ದಾರೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸತೀಶ್ ಹಾಗೂ ರಚ್ಚು ಜೋಡಿ ಹಿಟ್ ನೀಡಿದ್ದು, `ಮ್ಯಾಟ್ನಿ’ ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆಯೂ ಹೆಚ್ಚಿದೆ.

    ಸದ್ಯ ಇದೊಂದು ಲವ್ ಸ್ಟೋರಿ ಎಂದಿರುವ ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.  ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಚಿತ್ರವನ್ನು ನಿರ್ಮಿಸಿದ್ದು, ಲೂಸಿಯ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಸಿನಿಮಾಟೋಗ್ರಫಿ. ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

     

    ಸತೀಶ್ ನೀನಾಸಂಗೆ(Satish Ninasum) ರಚಿತಾ ರಾಮ್ ಮಾತ್ರ ನಾಯಕಿಯಲ್ಲ, ಅದಿತಿ ಪ್ರಭುದೇವ (Aditi Prabhudeva) ಕೂಡ ನಟಿಸಿದ್ದಾರೆ. ರಚಿತಾ ರಾಮ್, ಅದಿತಿ ಪಾತ್ರಕ್ಕೂ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಮ್ಯಾಟ್ನಿ ಮೂಲಕ ಡಿಫರೆಂಟ್ ಆಗಿರೋ ಕಥೆ ಹೇಳೋದ್ದಕ್ಕೆ ಈ ಸ್ಟಾರ್ಸ್ ರೆಡಿಯಾಗಿದ್ದಾರೆ. ಮ್ಯಾಟ್ನಿ ಶೋ ಯಾವಾಗ ಎಂಬುದೇ ಈಗ ಪ್ರಶ್ನೆಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ತಂದೆ ನಿಧನ

    ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ತಂದೆ ನಿಧನ

    ಸ್ಯಾಂಡಲ್ ವುಡ್ ಮತ್ತು ಕಿರುತೆರೆಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ (Shivaraj K.R.Pete) ಅವರ ತಂದೆ ರಾಮೇಗೌಡ (80) (Ramegowda) ಅವರು ಇಂದು ಕೆ.ಆರ್ ಪೇಟೆ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ (Passed Away). ಕೆ.ಆರ್.ಪೇಟೆ ‌ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿದ್ದ ಅವರು ಡ್ರಾಮಾ ಮಾಸ್ಟರ್ ಆಗಿಯೂ ಪ್ರಸಿದ್ಧಿಯಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ಮೃತರು ಪತ್ನಿ ಸಾವಿತ್ರಮ್ಮ, ಚಿತ್ರನಟ ಕೆ.ಆರ್.ಪೇಟೆ ಶಿವರಾಜ್ (ಕಾಮಿಡಿ ಕಿಲಾಡಿಗಳು) ಸೇರಿದಂತೆ ನಾಲ್ಕು ಗಂಡು ಮಕ್ಕಳು ಮೂರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಜಿಲ್ಲೆಯಾದಾದ್ಯಂತ ಸಾಕಷ್ಟು ನಾಟಕಗಳಿಗೆ ಅವರ ನಿರ್ದೇಶನವಿದೆ. ಹಾಗಾಗಿ ಅನೇಕ ಶಿಷ್ಯರು ಕೂಡ ಆ ಜಿಲ್ಲೆಯಲ್ಲಿದ್ದಾರೆ.

     

    ಮೃತರ ಅಂತ್ಯಕ್ರಿಯೆಯು ನಾಳೆ (ಸೆಪ್ಟೆಂಬರ್ 1) ಶುಕ್ರವಾರ ಮಧ್ಯಾಹ್ನ 01 ಘಂಟೆಗೆ ಮೃತರ ಸ್ವಗ್ರಾಮ ರಾಜಘಟ್ಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತುಂಬಾ ಹೃದಯವಂತಿಕೆ ಹೊಂದಿದ್ರು, ಮಾತಾಡೋಕೆ ಆಗ್ತಿಲ್ಲ- ಮಾನ್ವಿತಾ, ಶಿವರಾಜ್ ಕಣ್ಣೀರು

    ತುಂಬಾ ಹೃದಯವಂತಿಕೆ ಹೊಂದಿದ್ರು, ಮಾತಾಡೋಕೆ ಆಗ್ತಿಲ್ಲ- ಮಾನ್ವಿತಾ, ಶಿವರಾಜ್ ಕಣ್ಣೀರು

    ಬೆಂಗಳೂರು: ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು. ಅವರಂತಹ ಸ್ನೇಹಿತರನ್ನೂ ನಾನು ನೋಡಿಯೇ ಇಲ್ಲ, ಈ ವಿಚಾರವನ್ನು ನಮಗೆ ನಂಬೋಕೆ ಆಗುತ್ತಿಲ್ಲ ಎಂದು ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಮತ್ತು ನಟಿ ಮಾನ್ವಿತಾ ಕಾಮತ್ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾನ್ವಿತಾ, ಚಿರಂಜೀವಿ ಸರ್ಜಾ ಅವರ ಅಗಲಿಕೆಯನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಈ ಸುದ್ದಿಯಿಂದ ನನಗೆ ಶಾಕ್ ಆಗಿದೆ. ಎಲ್ಲರೊಂದಿಗೆ ಬೆರೆಯುತ್ತಿದ್ದ ನಟ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾನ್ವಿತಾ ಕಾಮತ್ ಕಣ್ಣೀರು ಹಾಕಿದರು.

    ಇನ್ನೂ ಶಿವರಾಜ್ ಪೇಟೆ ಅವರು ಮಾತು ಶುರು ಮಾಡಿದಾಗಲೇ ಗಳಗಳನೇ ಅತ್ತಿದ್ದಾರೆ. ಈಗ ತಾನೇ ಬೆಳೆಯುತ್ತಿರುವ ಕಲಾವಿದರಿಗೂ ಸಹಾಯ ಮಾಡುತ್ತಿದ್ದರು. ಚಿತ್ರೀಕರಣ ವೇಳೆ ಅಜ್ಜಿ ಮನೆಯಿಂದ ಊಟ ಕಳುಹಿಸಿದ್ದಾರೆ ಬಾ ಒಟ್ಟಿಗೆ ಊಟ ಮಾಡೋಣ ಎಂದು ಕರೆದಿದ್ದರು. ತುಂಬಾ ಹೃದಯವಂತಿಕೆಯ ವ್ಯಕ್ತಿತ್ವ ಹೊಂದಿದ್ದರು. ಈಗ ಅವರ ಸಾವಿನ ಸುದ್ದಿಯನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದರು.

  • ರಾಗಿಮುದ್ದೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ ಕಾಮಿಡಿ ಕಿಲಾಡಿ

    ರಾಗಿಮುದ್ದೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ ಕಾಮಿಡಿ ಕಿಲಾಡಿ

    ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಶಿವರಾಜ್ ಕೆಆರ್ ಪೇಟೆ ಅವರು ಕೊರೊನಾ ಲಾಕ್‍ಡೌನ್ ಮಧ್ಯೆ ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಯಾರು ಮನೆಯಿಂದ ಹೊರೆಗೆ ಬರುತ್ತಿಲ್ಲ. ಅಂಗಡಿಗಳು ಎಲ್ಲವೂ ಮುಚ್ಚಿದೆ. ಈ ನಡುವೆ ಕೇಕ್ ಸಿಗದೆ ಇದ್ದರೂ ಇಂದು ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿರುವ ಶಿವರಾಜ್ ಅವರು, ಮನೆಯಲ್ಲೇ ಮಾಡಿದ ರಾಗಿಮುದ್ದೆ ಕೇಕ್ ಕಟ್ ಮಾಡಿ ಕುಟುಂಬದ ಜೊತೆ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ.

    ಲಾಕ್‍ಡೌನ್ ಮಧ್ಯೆ ಕುಟುಂಬದ ಜೊತೆ ಕಾಲಕಳೆಯುತ್ತಿರುವ ಶಿವರಾಜ್ ಕೆ.ಆರ್ ಪೇಟೆಯವರು, ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಮುದ್ದೆಯನ್ನು ಕೇಕ್ ರೀತಿ ಮಾಡಿ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಮಗ, ಹೆಂಡತಿ ಹಾಗೂ ಅಕ್ಕ, ಅಕ್ಕನ ಗಂಡ ಮತ್ತು ಮಗಳು ರಾಗಿಮುದ್ದೆ ಕೇಕ್ ಅನ್ನು ಬಸ್ಸಾರಿನ ಜೊತೆ ತಿಂದು ಖುಷಿಪಟ್ಟಿದ್ದಾರೆ.

    ಈ ವಿಡಿಯೋದಲ್ಲಿ ಮಾತನಾಡಿರುವ ಶಿವರಾಜ್ ಅವರು, ಈ ರೀತಿಯ ಹುಟ್ಟುಹಬ್ಬವನ್ನು ಯಾರೂ ಕೂಡ ಆಚರಣೆ ಮಾಡಿಕೊಂಡಿರುವುದಿಲ್ಲ. ಇದು ನಿಜವಾಗಿ ಕೇಕ್ ಅಲ್ಲ ಇದನ್ನು ರಾಗಿಮುದ್ದೆಯಿಂದ ಮಾಡಲಾಗಿದೆ. ರಾಗಿಮುದ್ದೆ ಕೇಕ್ ಮಾಡಿ ನನ್ನ ಹುಟ್ಟುಹಬ್ಬ ಮಾಡುತ್ತಿರುವ ನನ್ನ ಕುಟುಂಬದವರಿಗೂ ಮತ್ತು ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

    ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಮಾಡಿಕೊಂಡಿರುವ ಶಿವರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯವಾದ ಶಿವರಾಜ್, ಇಂದು ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ಪೋಷಕನಟ ಮತ್ತು ಹಾಸ್ಯನಟನಾಗಿ ಮಿಂಚುತ್ತಿದ್ದಾರೆ. ಜೊತೆಗೆ ನಾನು ಮತ್ತು ಗುಂಡ ಎಂಬ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.

    https://www.instagram.com/p/BpNGsQiApd9/

    ಶಿವರಾಜ್ ಕೆ.ಆರ್ ಪೇಟೆ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಅವರು, ಈಗ ದರ್ಶನ್ ಅಭಿನಯದ ರಾಬರ್ಟ್, ನಿಖಿಲ್ ಕುಮಾರ್ ಅಭಿನಯದ ಇನ್ನು ಹೆಸರಿಡದ ಸಿನಿಮಾ, ಬಂಪರ್, ಮದಗಜ ಮತ್ತು ಪುರುಸೊತ್ ರಾಮ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  • ಶಿವರಾಜ್ ಕೆ. ಆರ್ ಪೇಟೆ ಬೆಸ್ಟ್ ಫ್ರೆಂಡ್ ಗುಂಡ ಅಂತೆ!

    ಶಿವರಾಜ್ ಕೆ. ಆರ್ ಪೇಟೆ ಬೆಸ್ಟ್ ಫ್ರೆಂಡ್ ಗುಂಡ ಅಂತೆ!

    ನಾನು ಮತ್ತು ಗುಂಡ ಸ್ಯಾಂಡಲ್‍ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾವೊಂದು ಸಿದ್ಧವಾಗಿದೆ. ಫಸ್ಟ್ ಲುಕ್, ಟೀಸರ್ ನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೂಡ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆ ನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ನಾನು ಮತ್ತು ಗುಂಡ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ್ದಾನೆ. ಚಿತ್ರವನ್ನು ನೋಡಿ ಸೆನ್ಸಾರ್ ಮಂಡಳಿ ಮೆಚ್ಚಿಕೊಂಡಿದ್ದು ಆಗಿದೆ. ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ ನ ಜಾಕ್ ಮಂಜು ಅವರೇ ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ‘ನಾನು ಮತ್ತು ಗುಂಡ’ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ.

    ಅಂದಹಾಗೇ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷತೆಗಳನ್ನು ಹಂಚಿಕೊಳ್ಳಲಿದೆ. ಇದೇ 24 ರಂದು ತೆರೆ ಮೇಲೆ ನಾನು ಮತ್ತು ಗುಂಡನನ್ನು ಕರೆತರಲಿದ್ದಾರೆ. ಹಾಗೆಯೇ ಶಿವರಾಜ್ ಕೆ.ಆರ್ ಪೇಟೆಯ ಅಭಿನಯ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಇತ್ತೀಚಿನ ಹಾಸ್ಯ ನಟರಲ್ಲಿ ಒಬ್ಬರು. ಅವರ ಸಿನಿಮಾ ಎಂದಾಕ್ಷಣಾ ಮನಸಾರೆ ನಕ್ಕು, ಟೆನ್ಷನ್ ಫ್ರಿ ಆಗುತ್ತೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇದ್ದೆ ಇದೆ. ಹಾಗೆಯರೆ ಈ ಸಿನಿಮಾದಲ್ಲಿ ಸಿಂಬಾ ಎಂಬ ನಾಯಿಯೂ ಪಾತ್ರ ಮಾಡುತ್ತಿದ್ದು, ಮತ್ತಷ್ಟು ಕಾಮಿಡಿಯನ್ನು ಸಹಜವಾಗಿಯೇ ನಿರೀಕ್ಷಿಸುತ್ತಿದ್ದಾರೆ.

    ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.