Tag: Shivaprasad Joshi

  • ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಪಣಜಿ: ಕರ್ನಾಟಕದ ವಿರುದ್ಧ ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆ ಈಗ ರಾಷ್ಟ್ರಗೀತೆ ವಿಚಾರದಲ್ಲಿ ಕ್ಯಾತೆ ತೆಗೆದಿದೆ. ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಶಿವಪ್ರಸಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಗೋವಾದ ಜನ ತುಂಬಾ ದೇಶಭಕ್ತರು. ಅಲ್ಲಿ ತುಂಬಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಆದ್ರೆ ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡವುದು ಹೇಗೆ ಎನ್ನುವುದೇ ಗೊತ್ತಿಲ್ಲ. ನಮ್ಮ ರಾಷ್ಟ್ರಪಿತ ಯಾರು ಎಂಬುದು ಅವರಿಗೆ ಮೊದಲೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಮಹಾದಾಯಿ ನೀರು ಹಂಚಿಕೆಯ ಸಂಬಂಧಿಸಿದಂತೆ ಗೋವಾ-ಕರ್ನಾಟಕ ನಡುವಿನ ವಿವಾದದ ಹಿನ್ನೆಲೆಯ ಸಂದರ್ಭದಲ್ಲಿ ಶಿವಪ್ರಸಾದ್ ಜೋಶಿ ಈ ಮಾತನ್ನು ಹೇಳಿದ್ದಾರೆ.

    ಮುತಾಲಿಕ್ ಬಗ್ಗೆ ಮೆಚ್ಚುಗೆ:
    ಕರ್ನಾಟಕದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಮುತಾಲಿಕ್ ಅವರನ್ನು ಮಹಿಳೆಯರ ರಕ್ಷಕ. ಮುತಾಲಿಕ್ ಅವರು ಕರ್ನಾಟಕದಲ್ಲಿ ಅಪಾರ ಕೆಲಸ ಮಾಡಿರುವ ಬಗ್ಗೆ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2009ರಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪಬ್‍ಗೆ ಹೋಗಿ ಅಲ್ಲಿಯ ಸಹೋದರಿಯರಿಗೆ ಇದು ನಮ್ಮ ಸಂಸ್ಕೃತಿ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಯುವತಿಯ ಪೋಷಕರ ತಂದೆ-ತಾಯಿ ಅವರೇ ಬಂದು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಅವರಿಗೆ ಧನ್ಯವಾದ ಹೇಳಿದ್ದರು. ಪಬ್‍ಗಳು ನಿಷೇಧಿಸಬೇಕು ಎಂದು ಶಿವಸೇನೆ ಹೇಳುತ್ತಿಲ್ಲ. ಆದ್ರೆ ತಡರಾತ್ರಿಗಳಲ್ಲೂ ಪಬ್‍ಗಳು ತರೆದಿರುವುದಕ್ಕೆ ವಿರೋಧವಿದೆ ಎಂದು ಶಿವಪ್ರಸಾದ್ ಜೋಶಿ ಹೇಳಿದರು.