Tag: Shivanna

  • ಶಿವಣ್ಣ ಕೇಳಿದ ಒಂದು ಪ್ರಶ್ನೆಗೆ ಕಣ್ಣೀರಿಟ್ಟ ತರುಣ್ ಸುಧೀರ್

    ಶಿವಣ್ಣ ಕೇಳಿದ ಒಂದು ಪ್ರಶ್ನೆಗೆ ಕಣ್ಣೀರಿಟ್ಟ ತರುಣ್ ಸುಧೀರ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಹಿರಿಯ ಖಳ ನಟ ಅವರ ಸುಧೀರ್ ಮಗ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಕಣ್ಣೀರಿಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಎರಡನೇ ಸಂಚಿಕೆ ಭಾನುವಾರ ಪ್ರಸಾರವಾಗಿದೆ. ಈ ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು. ಶರಣ್, ಚಿಕ್ಕಣ್ಣ, ತರುಣ್ ಸುಧೀರ್ ಅವರ ಸಂಚಿಕೆ ತುಂಬ ನಗು ಇತ್ತು. ಆದರೆ ಕೊನೆಯ ಸುತ್ತಿನಲ್ಲಿ ಶಿವಣ್ಣನ ಒಂದು ಪ್ರಶ್ನೆಗೆ ಉತ್ತರಿಸುತ್ತ ತರುಣ್ ಸುಧೀರ್ ಕಣ್ಣೀರು ಹಾಕಿದ್ದಾರೆ.

    ಕಾರ್ಯಕ್ರಮದಲ್ಲಿ `ನಿಮ್ಮ ಜೀವನದ ದೊಡ್ಡ ಮಿಸ್ಟೇಕ್ ಏನು?’ ಎಂದು ಶಿವಣ್ಣ ಅತಿಥಿಯಾಗಿ ಬಂದಿದ್ದ ತರುಣ್ ಸುಧೀರ್‍ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ಆ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದ ತರುಣ್ ಭಾವುಕರಾಗಿ, “ನಮ್ಮ ತಂದೆ ಇರಬೇಕಾದರೆ ಅವರ ಬೆಲೆ ನಮಗೆ ಗೊತ್ತಿರಲಿಲ್ಲ” ಎಂದು ಹೇಳಿ ಮುಂದೆ ಏನು ಮಾತನಾಡಲಾಗದೆ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.

    “ನಮಗೆ ಅವರು ತುಂಬ ಹತ್ತಿರ ಆದವರು. ನಾನು ಅವರ ಜೊತೆಗೆ ಸಿನಿಮಾ ಸಹ ಮಾಡಿದ್ದೇನೆ. ಅಪ್ಪಾಜಿಗೆ ಅವರು ಆಪ್ತರಾಗಿದ್ದರು. ಯಾವಾಗಲೂ ಊಟ ಮಾಡುವಾಗ ಅವರನ್ನು ಕರೆಯುತ್ತಿದ್ದರು. ಅವರು ಈಗ ಇದ್ದಿದ್ದರೆ ನಿಮ್ಮನ್ನು ನೋಡಿ ತುಂಬ ಖುಷಿ ಪಡುತ್ತಿದ್ದರು” ಎಂದು ತರುಣ್ ರನ್ನು ಶಿವಣ್ಣ ಸಮಾಧಾನ ಮಾಡಿದ್ದಾರೆ. ಈ ವೇಳೆ ಶಿವಣ್ಣ ನಮ್ಮ ಹುಡುಗಾಟದಲ್ಲಿ ಏನೋ ಮಾಡಿರುತ್ತೇವೆ. ನಮಗೂ ಹಾಗೆ ಆಗಿದೆ. ಆದರೆ ಬರುತ್ತಾ ಬುರತ್ತಾ ಅವರ ಬೆಲೆ ಗೊತ್ತಾಯಿತು ಎಂದು ಹೇಳಿ ತಮ್ಮ ತಂದೆ ರಾಜ್ ಕುಮಾರ್ ಅವರನ್ನು ನೆನೆದರು.

    “ನೀವು ಸಾಯುವುದಕ್ಕೂ ಮುಂಚೆ ಏನನ್ನು ಸಾಧಿಸಬೇಕು?” ಎಂದು ಶಿವಣ್ಣ ಮತ್ತೆ ಒಂದು ಪ್ರಶ್ನೆ ಕೇಳಿದ್ದಾರೆ. ಆಗ ತರುಣ್ ಸಿನಿಮಾ ಬಗ್ಗೆ ಅಲ್ಲ. ವೈಯಕ್ತಿಕವಾಗಿ ಅಂದರೆ ನನಗೆ ಒಂದೇ ಒಂದು ಆಸೆ ಇದೆ. ನಾನು ಇರುವಷ್ಟು ದಿನ ಯಾವುದೇ ಕಷ್ಟ ಆಗದಂತೆ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಖ್ಯಾತ ಖಳ ನಟ ಸುಧೀರ್ ಅವರ ಮಗನಾಗಿರುವ ತರುಣ್ ಸುಧೀರ್ ಇಂದು ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಇಬ್ಬರು ಮಕ್ಕಳಾದ ತರುಣ್ ಸುಧೀರ್ ಮತ್ತು ನಂದಕಿಶೋರ್ ಅಪ್ಪನ ಹೆಸರನ್ನು ಉಳಿಸಿದ್ದಾರೆ. ಆದರೆ ತಂದೆ ಇದ್ದಾಗ ಅವರ ಬೆಲೆ ನಮಗೆ ತಿಳಿಯಲಿಲ್ಲ ಎನ್ನುವ ನೋವು ತರುಣ್ ಅವರಿಗೆ ಇಂದಿಗೂ ಕಾಡುತ್ತಿದೆ.

  • ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಮೈಸೂರು: ಸ್ಯಾಂಡಲ್ ವುಡ್ ನಟ ಕಮ್ ಕೆಪಿಜೆಪಿ ಸ್ಥಾಪಕ ಉಪೇಂದ್ರ ಇಂದು ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಪ್ರಜಾಕೀಯ ಪಕ್ಷದ ಸಂಘಟನೆ ಕುರಿತು ಮಾತನಾಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ನಮ್ಮದು ಥ್ರಿಲ್ಲರ್ ಸಿನಿಮಾನು ಅಲ್ಲ. ಇದೊಂದು ಟ್ರುಥ್ ಫುಲ್ ಸಿನಿಮಾ. ಅರ್ಥ ಆಗದೆ ಇರೋರಿಗೆ ಇದು ಹಾರರ್ ಸಿನಿಮಾ ಅಂತ ತನ್ನದೇ ಶೈಲಿಯಲ್ಲಿ ಡೈಲಾಗ್ ಹೊಡೆದ್ರು.

    ನಾನೂ ಮತ ಹಾಕಿ ಅಂತ ಬೀಕ್ಷೆ ಬೇಡುತ್ತಿಲ್ಲ. ನಾನೂ ದೇಶ ಸೇವೆ ಮಾಡಲು ಬಂದಿದ್ದೇನೆ. ನೀವೂ ಗೆಲ್ಲಿಸಬೇಕು ಹೊರತು ನಾನೂ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ನಾನೂ ಗೆಲ್ಲುತ್ತೇನೆ ಎನ್ನುತ್ತಿಲ್ಲ ನಿಮ್ಮ ಗೆಲುವು ಎನ್ನುತ್ತಿದ್ದೇನೆ. ನನಗೆ ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರು ಯದುವಂಶ ಮಹಾರಾಜ ಯದುವೀರ್ ಕೂಡ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಹೆಸರು ಹೇಳುವೆ. ಈವರೆಗೂ ಯಾವ ನಟರು ನನ್ನ ಪಾರ್ಟಿಗೆ ಸೇರುವುದಾಗಿ ಹೇಳಿಲ್ಲ. ಆದ್ರೆ ನಟ ಶಿವಣ್ಣ, ಯಶ್ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಅಂತ ಅವರು ಹೇಳಿದ್ರು.

    ರಾಜಕಾರಣ ಅಂದ್ರೆ ಹಿಂಗೆ ಇದೆ ಅಂತ ನಂಬಿ ಬಿಟ್ಟಿದ್ದೇವೆ. ಅದನ್ನ ಬದಲಾವಣೆ ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ. ಅದಕ್ಕಾಗಿ ಕೆಪಿಜೆಪಿ ಪಕ್ಷ ಕ್ಯಾಶ್‍ಲೆಶ್ ಪಾರ್ಟಿ ಹುಟ್ಟುಹಾಕಿದ್ದೇವೆ. ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ನಾವು ಪಾರ್ಟಿ ಆರಂಭಿಸಿದಾಗ ಕೇವಲ 10% ಜನರಿಗೆ ಗೊತ್ತಾಗಿತ್ತು. ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ತಲುಪಿದೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ. ವೆಬ್‍ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು ಅಂತ ಹೇಳಿದ್ರು.

    ನಾವು ಕ್ಷೇತ್ರವಾರು ಮೈಕ್ರೋ ಪ್ಲಾನ್ ಮಾಡಬೇಕು ಎಂದಿದ್ದೇವೆ. ಹೇಗೆ ಸರ್ಕಾರ ನಡೆಸಬೇಕು.? ಅದು ಸಂಪೂರ್ಣ ಪಾರದರ್ಶಕತೆ ಇರಬೇಕು. ಮೊದಲ ಹೆಜ್ಜೆಯೆ ನಾವು ಸರಿಯಾಗಿ ಇಡಬೇಕು. ನಾನು ನಾಯಕ ಆಗುತ್ತೇನೆ ಅಂತ ನಮ್ಮ ಪಕ್ಷಕ್ಕೆ ಬರಬೇಡಿ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಬನ್ನಿ. ಇಲ್ಲವಾದ್ರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಅಂತ ತನ್ನ ಪಕ್ಷಕ್ಕೆ ಆಗಮಿಸುವವರಿಗೆ ಷರತ್ತು ಹಾಕಿದ್ರು.

    ಇದನ್ನೂ ಓದಿ; ಉಪೇಂದ್ರ ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ

    ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆ ರೀತಿ ಆಯೋಗದಲ್ಲಿ ದೂರು ದಾಖಲಾದ್ರೆ ಕಾನೂನು ಹೋರಾಟ ಮಾಡುತ್ತೇನೆ. ನಾನೇನು ಹಣದ ವಿಚಾರವಾಗಿ ತಪ್ಪಾಗಿ ಮಾತನಾಡಿಲ್ಲ. ನೀವು ನನ್ನನ್ನ ಪ್ರಶ್ನೆ ಮಾಡಿದ್ರೆ ಹಾಗಂತ ನಿಮ್ಮ ಮೇಲೆ ಕೇಸ್ ಹಾಕಲು ಸಾಧ್ಯವೇ ಅಂತ ಉಪ್ಪಿ ಪತ್ರಕರ್ತರಿಗೆ ಪ್ರಶ್ನೆ ಹಾಕಿದ್ರು.

  • ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾ- ಪ್ರೇಕ್ಷಕರನ್ನು ಮನರಂಜಿಸಲು ಮಫ್ತಿ, ಗೌಡ್ರು ಹೋಟೆಲ್ ರೆಡಿ!

    ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾ- ಪ್ರೇಕ್ಷಕರನ್ನು ಮನರಂಜಿಸಲು ಮಫ್ತಿ, ಗೌಡ್ರು ಹೋಟೆಲ್ ರೆಡಿ!

    ಬೆಂಗಳೂರು: ವರ್ಷದ ಕೊನೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರನ್ನ ಮೋಡಿ ಮಾಡಲು ಬರುತ್ತಿವೆ. ಅದರಲ್ಲೂ ಈ ವಾರ ತೆರೆಕಾಣುತ್ತಿರುವ ಎರಡು ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾದು ಕುಳಿತ್ತಿದ್ದರು.

    2017ರ ಕೊನೆಯ ತಿಂಗಳಲ್ಲಿ ಸ್ಯಾಂಡಲ್‍ವುಡ್ ಮಸ್ತ್ ಮನೋರಂಜನೆ ನೀಡಲು ಸಜ್ಜಾಗಿದ್ದು, ಈ ವಾರ `ಮಫ್ತಿ’, `ಗೌಡ್ರು ಹೋಟೆಲ್’, `ಮಂತ್ರಂ’, `ಡ್ರೀಮ್ ಗರ್ಲ್’ ಸಿನಿಮಾಗಳು ತೆರೆಕಂಡಿವೆ.

    ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಮಫ್ತಿ ರಾಜ್ಯಾದ್ಯಂತ ಸುಮಾರು 400ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಪ್ರದರ್ಶನಗೊಳ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಶ್ರೀಮುರುಳಿ ಅಭಿನಯಿಸಿರುವ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಹವಾ ಎಬ್ಬಿಸಿದೆ. ಮಫ್ತಿ ಮೂಲಕ ನರ್ತನ್ ತಮ್ಮ ಮೊದಲ ಸಿನಿಮಾದಲ್ಲೇ ನಿರ್ದೇಶನದ ಕೌಶಲ್ಯ ತೋರಿಸಿದ್ದಾರೆ. ಖ್ಯಾತ ನಿರ್ಮಾಪಕ ಜೋಡಿ ಜಯಣ್ಣ, ಭೋಗೇಂದ್ರ ನಿರ್ಮಾಣದೊಂದಿಗೆ ಕುಂದಾಪುರದ ಸಕಲಕಲಾವಲ್ಲಭ ರವಿ ಬಸ್ರೂರ್ ಅವರ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ.

    ಮತ್ತೊಂದು ಸಿನಿಮಾ `ಗೌಡ್ರು ಹೋಟೆಲ್’ ತೆರೆ ಕಂಡಿದ್ದು, ಮಾಲಿವುಡ್‍ನಲ್ಲಿ ಸೂಪರ್ ಹಿಟ್ ಆಗಿದ್ದ `ಉಸ್ತಾದ್ ಹೋಟೆಲ್’ ಸಿನಿಮಾವನ್ನು ಕನ್ನಡಕ್ಕೆ `ಗೌಡ್ರು ಹೋಟೆಲ್’ ಹೆಸರಿನಲ್ಲಿ ಖ್ಯಾತ ನಿರ್ದೇಶಕ ಪಿ.ಕುಮಾರ್ ತಂದಿದ್ದಾರೆ. ಎಮಿನೆಂಟ್ ಮೂವೀ ಮೇಕರ್ಸ್ ನಿರ್ಮಾಣದಲ್ಲಿ `ಗೌಡ್ರು ಹೋಟೆಲ್’ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಕಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ಹಾಡುಗಳಿಗೆ ತಂತಿ ಮೀಟಿದ್ದಾರೆ. ಈ ಸಿನಿಮಾ ಒಂದು ತಾತ-ಮೊಮ್ಮಗನ ಬಾಂಧವ್ಯದ ಕಥೆಯಾಗಿದ್ದು, ಪ್ರಕಾಶ್ ರೈ ತಾತನಾಗಿ, ಲಂಡನ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಮೊಮ್ಮಗನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಮೊಮ್ಮಗನಾಗಿ ಕ್ಯಾಮೆರಾ ಎದುರಿಸಿದ್ದು, ರಚನ್‍ಗೆ ಜೋಡಿಯಾಗಿ ನಟಿ ವೇದಿಕಾ ಸಾಥ್ ನೀಡಿದ್ದಾರೆ.

    ಮೂರನೇ ಸಿನಿಮಾ `ಡ್ರೀಮ್ ಗರ್ಲ್’. ರಿಂಗ್ ರೋಡ್ ಶುಭ ಸಿನಿಮಾದ ನಂತರ ಪಟ್ರೆ ಅಜಿತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಲಕ್ಷಣ್ ನಾಯಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಡ್ರೀಮ್ ಗರ್ಲ್’ ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿದೆ.

    ನಾಲ್ಕನೇ ಸಿನಿಮಾ `ಮಂತ್ರಂ’. ಟ್ರೇಲರ್‍ನಿಂದಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ ಸಿನಿಮಾ ಇದಾಗಿದ್ದು, ನೈಜ ಘಟನೆಯ ಆಧಾರವಿಟ್ಟುಕೊಂಡು ಕಥೆಯನ್ನು ಎಣೆಯಲಾಗಿದೆ. ಎಸ್.ಎಸ್. ಸಜ್ಜನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಣಿಶೆಟ್ಟಿ ಹಾಗೂ ಪಲ್ಲವಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಷೀದ್ ಖಾನ್ ಸಂಗೀತ ನಿರ್ದೇಶನ ಮಾಡಿದ್ದು, ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

     

     

  • `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಒಟ್ಟಾಗಿ ಅಭಿನಯಿಸುತ್ತಿರುವ `ದಿ ವಿಲನ್’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ.

    ಇಷ್ಟು ದಿನ ಕಿಚ್ಚನ ಪಾತ್ರವನ್ನು ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ಶಿವಣ್ಣ ಅವರ ಪಾತ್ರದ ಶೂಟಿಂಗ್ ಅನ್ನು ಭರದಿಂದಲೇ ಮಾಡುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಶಿವಣ್ಣ ಅವರ ಸಾಹಸ ದೃಶ್ಯಗಳನ್ನು ಚಿತ್ರಿಕರಣ ಮಾಡಿ ಮುಗಿಸಿದೆ. ಈಗ ಬ್ಯಾಂಕಾಕ್‍ನಲ್ಲಿ ಶಿವಣ್ಣ ಅವರ ಕಾರ್ ಚೇಸಿಂಗ್ ದೃಶ್ಯವನ್ನು ಚಿತ್ರೀಕರಣವನ್ನು ಮಾಡಿ ಮುಗಿಸಿದೆ.

    ಶೂಟಿಂಗ್ ಮುಗಿಸಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದು, ಚಿತ್ರತಂಡದೊಂದಿಗೆ ಸೇರಿ ಅಪರೂಪದ ಕ್ಷಣಗಳನ್ನು ಕಳಿಯುತ್ತಿದ್ದಾರೆ. ಕಾರ್ ಚೇಸಿಂಗ್ ಶೂಟಿಂಗ್‍ನಲ್ಲಿ ಚಿತ್ರತಂಡ ಶಿವಣ್ಣ ಅವರನ್ನು ರಸ್ತೆಯ ಮಧ್ಯೆದಲ್ಲಿ ಓಡಾಡುವ ಕಾರು, ಲಾರಿಗಳ ಮೇಲೆ ಜಂಪ್ ಮಾಡಿಸಿ ಫೈಟಿಂಗ್ ಮಾಡಿಸುತ್ತಿದ್ದಾರೆ. ಅವರ ಈ ಫೈಟಿಂಗ್ ನೋಡಿದರೆ ಸಿನಿಮಾದಲ್ಲಿ ಶಿವಣ್ಣ ತಮ್ಮ ಹವವನ್ನು ಸೃಷ್ಟಿಸಿದ್ದಾರೆ ಎನಿಸುತ್ತದೆ.

    ಶಿವಣ್ಣ ಅವರ ಸಾಹಸ ದೃಶ್ಯಗಳಿಗೆ ನಿರ್ದೇಶಕ ರವಿವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ತಕ್ಕಂತೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್‍ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮುಂದಿನ ವರ್ಷ ಫೆ. 14 ರಂದು ತೆರೆಗೆ ಬರುವ ಸಾಧ್ಯತೆಗಳಿವೆ.

     

  • ‘ದಿ ವಿಲನ್’ ನಂತ್ರ ಮತ್ತೆ ಒಂದಾಗಲಿದ್ದಾರೆ ಶಿವಣ್ಣ-ಪ್ರೇಮ್

    ‘ದಿ ವಿಲನ್’ ನಂತ್ರ ಮತ್ತೆ ಒಂದಾಗಲಿದ್ದಾರೆ ಶಿವಣ್ಣ-ಪ್ರೇಮ್

    ಬೆಂಗಳೂರು: ಪ್ರೇಮ್ ನಿರ್ದೇಶನದ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಈ ನಡುವೆ ಶಿವಣ್ಣ ಮುಂದೆ ನಾನು ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

    “ಮುಂದೆ ನಾವು ಜಂಗಮ ಸಿನಿಮಾಗಾಗಿ ಮತ್ತೆ ಸೇರೋಣ. ಅದು ನನಗೆ ತುಂಬಾ ನಿರೀಕ್ಷಿತ ಚಿತ್ರ. ಸೋ, ದಿ ವಿಲನ್ ನಂತರ ಒಟ್ಟಿಗೆ ಜಂಗಮ ಸಿನಿಮಾ ಮಾಡೋಣ” ಎಂದು ಶಿವಣ್ಣ ಹೇಳಿದ್ದಾರೆ. ಈ ಹಿಂದೆ ಶಿವಣ್ಣ ಮತ್ತು ಪ್ರೇಮ್ ಕಾಂಬಿನೇಷನ್ ನಲ್ಲಿ ಜೋಗಿ, ಜೋಗಯ್ಯ ಚಿತ್ರಗಳು ಬಂದಿವೆ. ದಿ-ವಿಲನ್ ಸಿನಿಮಾ ಚಿತ್ರೀಕರಣವಾಗುತ್ತಿದೆ.

    ಇದನ್ನೂ ಓದಿ: ಕಿಚ್ಚ ಸುದೀಪ್ – ಶಿವಣ್ಣನ ಕಿಲ್ಲರ್ ‘ದಿ ವಿಲನ್’ ಲುಕ್ ನೋಡಿ!

    https://www.youtube.com/watch?v=2dxaunNSKfQ

    https://www.youtube.com/watch?time_continue=10&v=pjabMChe2sU

  • ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

    ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ದಿ-ವಿಲನ್ ಚಿತ್ರತಂಡದೊಂದಿಗೆ ಲಂಡನ್‍ನಲ್ಲಿ ಬಿಡುಬಿಟ್ಟಿದ್ದಾರೆ.

    ತಮ್ಮ ಶೂಟಿಂಗ್‍ನ ಬಿಡುವಿನ ಸಮಯದಲ್ಲಿ ಪಾರಿವಾಳಗಳಿಗೆ ಕಾಳು ತಿನ್ನಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯದಲ್ಲಿ ಸಖತ್ ವೈರಲ್ ಆಗಿದೆ.

    ಲಂಡನ್‍ನ ಡನ್‍ನ ಟವರ್ ಬಿಡ್ಜ್ ನ ಬಳಿ ಬಂದು ಕುಳಿತುಕೊಂಡು ಪಾರಿವಾಳಗಳಿಗೆ ಶಿವಣ್ಣ ಕಾಳು ಹಾಕಿದಿದ್ದಾರೆ. ಶೂಟಿಂಗ್‍ನಲ್ಲಿ ಕಿಚ್ಚ ಸುದೀಪ್, ಆ್ಯಮಿ ಜಾಕ್ಸನ್ ಅವರು ದಿ-ವಿಲನ್ ಚಿತ್ರತಂಡದೊಟ್ಟಿಗೆ ಇದ್ದಾರೆ.

    https://youtu.be/2dxaunNSKfQ