Tag: Shivanna

  • ಕನ್ನಡದ ಸೂಪರ್‌ ಹಿಟ್‌ ಹಾಡು ಹಾಡಿದ ಶಿವಣ್ಣ

    ಕನ್ನಡದ ಸೂಪರ್‌ ಹಿಟ್‌ ಹಾಡು ಹಾಡಿದ ಶಿವಣ್ಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ತೆರೆಗೆ ಬರಲಿದೆ `ಓಂ’ ಸಿನಿಮಾ: ಚಿತ್ರದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ರು ಶಿವಣ್ಣ

    ಮತ್ತೆ ತೆರೆಗೆ ಬರಲಿದೆ `ಓಂ’ ಸಿನಿಮಾ: ಚಿತ್ರದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ರು ಶಿವಣ್ಣ

    ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ `ಓಂ’ ಸಿನಿಮಾ, ಸಿನಿ ದುನಿಯಾದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಇದೀಗ ಈ ಚಿತ್ರದ ಸೀಕ್ವೇಲ್ ಬಗ್ಗೆ ನಟ ಶಿವರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ.

    ಉಪೇಂದ್ರ ನಿರ್ದೇಶನದ `ಓಂ’ ಸಿನಿಮಾ 1995ರಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಈ ಚಿತ್ರದ ಮೂಲಕ ಶಿವಣ್ಣ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ್ದರು. ಈಗ `ಓಂ ಪಾರ್ಟ್ 2′ ಬರೋದರ ಬಗ್ಗೆ ಶಿವಣ್ಣ ಬಿಗ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ `ಓಂ 2’ಬರಲಿದೆ ಅಂತಾ ರಿವೀಲ್ ಮಾಡಲಿದ್ದಾರೆ. ಇದನ್ನೂ ಓದಿ:ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ: ಮುಂದಿನ ವರ್ಷ ಮದುವೆ ಫಿಕ್ಸ್

    ಶಿವಣ್ಣ ನಟನೆಯ `ಓಂ 2′ ಸಿನಿಮಾಗೆ ಚಿನ್ನಿ ಮಾಸ್ಟರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾ `ಓಂ’ ರಿಟರ್ನ್ ಅಂತಾ ಟೈಟಲ್ ಇಡುವ ಕುರಿತು ಚಿಂತಿಸಲಾಗುತ್ತಿದೆ. `ಓಂ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಹಾಗೆ, ಓಂ ರಿಟರ್ನ್ ಸೌಂಡ್ ಮಾಡುತ್ತಾ ಜತೆಗೆ ಚಿನ್ನಿ ಮಾಸ್ಟರ್ ಮತ್ತು ಶಿವಣ್ಣ ಡೆಡ್ಲಿ ಕಾಂಬಿನೇಷನ್ ವರ್ಕ್ ಆಗುತ್ತಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿ ಟೀ ಅಂಗಡಿಯಲ್ಲಿ ಚಹಾ ಕುಡಿದ ನಟ ಶಿವಣ್ಣ

    ಅಭಿಮಾನಿ ಟೀ ಅಂಗಡಿಯಲ್ಲಿ ಚಹಾ ಕುಡಿದ ನಟ ಶಿವಣ್ಣ

    ಭಿಮಾನಿಯೊಬ್ಬರ ಟೀ ಅಂಗಡಿಗೆ ಇಂದು ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದು, ಅಲ್ಲೇ ಚಹಾ ಕುಡಿದರು. ಈ ಮೂಲಕ ಅಭಿಮಾನಿಯ ಐದು ವರ್ಷದ ಕನಸು ಈಡೇರಿದಂತೆ ಆಗಿದೆ.

    ಕಳೆದ ಐದು ವರ್ಷದಿಂದ ಅಭಿಮಾನಿಯೊಬ್ಬ ಆತ ಮಾಡುವ ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಿಸಬೇಕು ಎಂಬ ಆಸೆ ಕೊನೆಗೂ ಈಡೇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಅವರ ಅಪ್ಪಟ್ಟ ಅಭಿಮಾನಿಯಾದ ಮಂಜು ಅವರ ಟೀ ಅಂಗಡಿಗೆ ಬಂದು ಚಹಾ ಕುಡಿದರು. ಇದನ್ನೂ ಓದಿ: ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ

    ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ ಟೀ ಅಂಗಡಿ ಇಟ್ಟುಕೊಂಡಿರುವ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. 2016ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಇನ್ನು ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    Live Tv
    [brid partner=56869869 player=32851 video=960834 autoplay=true]

  • ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ಚಂದನವನದ ಖ್ಯಾತ ನಿರೂಪಕಿ ಅನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ನಿರೂಪಣೆ ಮಾಡುವ ಖಾಸಗಿ ಶೋನಲ್ಲಿ ನಟ ಶಿವಣ್ಣ ಅನುಶ್ರೀಗೆ ವಿಶೇಷ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಈ ಕುರಿತು ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ನಟಿ ಅನುಶ್ರೀ ಪುನೀತ್ ಅವರ ಅಪ್ಪಟ ಅಭಿಮಾನಿ ಎಂಬ ವಿಚಾರ ಎಲ್ಲರಿಗೂ ಗೊತ್ತು. ಹಾಗೆಯೇ ನಟ ಶಿವಣ್ಣ ಮತ್ತು ಅವರ ಕುಟುಂಬದವರ ಜತೆ ಕೂಡ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದೀಗ ಶಿವಣ್ಣ ಅನುಶ್ರೀಗೆ ಜಾಕೆಟ್ ಗಿಫ್ಟ್ ಮಾಡಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಶೋನಲ್ಲಿ ನಡೆದಿರುವ ಘಟನೆಯೊಂದನ್ನು ನಟಿ ಶೇರ್ ಮಾಡಿ, ಶಿವಣ್ಣ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿರುವ ಅನುಶ್ರೀ, ಅದೇ ಶೋನಲ್ಲಿ ಶಿವಣ್ಣ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೋನಲ್ಲಿ ಸ್ಟೈಲೀಶ್ ಆಗಿ ಭಾಗವಹಿಸಿದ್ದ ಶಿವಣ್ಣ, ಚೆಂದದ ಜಾಕೆಟ್‌ವೊಂದನ್ನು ಧರಿಸಿದ್ದರು. ನಿರೂಪಣೆಯ ವೇಳೆ ನಿಮ್ಮ ಜಾಕೆಟ್ ಚೆನ್ನಾಗಿದೆ ಎಂದಿದ್ದಾರೆ. ಸರಿ ಕಣಮ್ಮ ಶೋ ಮುಗಿದ ಮೇಲೆ ನಿನಗೆ ಕೊಡ್ತೀನಿ ಎಂದಿದ್ದಾರೆ. ಈ ಮಾತನ್ನು ತಮಾಷೆಯಾಗಿ ಹೇಳಿದ್ದಾರೆ ಶಿವಣ್ಣ ಎಂದು ಭಾವಿಸಿದ್ದ ಅನುಶ್ರೀಗೆ ಅಚ್ಚರಿ ಕಾದಿತ್ತು. ಮಾತಿನಂತೆ ಶೋ ನಂತರ ಅನುಶ್ರೀಗೆ ಜಾಕೆಟ್ ಗಿಫ್ಟ್ ಮಾಡಿದ್ದಾರೆ.‌ ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ


    ಅನುಶ್ರೀಗೆ ಇಷ್ಟವಾದ ಜಾಕೆಟ್ ಮೇಲೆ ಶಿವರಾಜ್ ಕುಮಾರ್, ಪ್ರೀತಿಪೂರ್ವಕವಾಗಿ ಪ್ರೀತಿಯ ಗೆಳತಿ ಅನುಶ್ರೀಗೆ ಎಂದು ಬರೆದು ತಮ್ಮ ಜಾಕೆಟ್ ಅನ್ನು ತಾವೇ ಕೈಯಾರೆ ಅನುಶ್ರೀಗೆ ತೊಡಿಸಿದ್ದಾರೆ. ಇದರಿಂದ ಬಹಳ ಖುಷಿಯಾಗಿರುವ ಅನುಶ್ರೀ, ಶಿವಣ್ಣರ ಕೈಹಿಡಿದು ಧನ್ಯವಾದ ಅರ್ಪಿಸಿದ್ದಾರೆ. `ಇದು ಯಾವ ಜನ್ಮದ ಪುಣ್ಯ, ಕಳೆದ ವಾರ ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ, ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು, ನಾನು ಸುಮ್ನೆ ಹೇಳಿರ್ತಾರೆ ಅನ್ಕೊಂಡೆ, ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ, ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು’ ಎಂದು ಬರೆದುಕೊಂಡಿದ್ದಾರೆ. ಇನ್ನು ಅನುಶ್ರೀಯ ಖುಷಿ ನೋಡಿ ನೀವು ಎಷ್ಟು ಲಕ್ಕಿ ಎಂದು ಫ್ಯಾನ್ಸ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

    Live Tv

  • ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

    ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

    ಮೈಸೂರು: ಪ್ರತಿಯೊಂದು ಸಿನಿಮಾ ಬಿಡುಗಡೆಯಾದಾಗಲೂ ಅಪ್ಪು ಕರೆ ಮಾಡಿ ಸಿನಿಮಾ ಹೇಗಿತ್ತು ಎಂದು ಕೇಳುತ್ತಿದ್ದ. ಆದರೆ ಈ ಬಾರಿ ಜೇಮ್ಸ್ ಚಿತ್ರ ವೀಕ್ಷಿಸಿದ ಬಳಿಕ ಚಿತ್ರ ಹೇಗಿತ್ತು ಎಂದು ಕೇಳಲು ಅಪ್ಪುವಿನ ಕಾಲ್ ಬರಲ್ಲ. ಈ ವಿಷಯ ಮನಸ್ಸಿಗೆ ತುಂಬಾ ನೋವು ತರುತ್ತಿದೆ ಎಂದು ಪುನೀತ್ ರಾಜ್ ಕುಮಾರ್ ಅಣ್ಣ ನಟ ಶಿವ್ ರಾಜ್‌ಕುಮಾರ್ ಸುದ್ದಿಗೋಷ್ಟಿಯಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟರು.

    ಪುನೀತ್ ಅಭಿನಯದ ಸಿನಿಮಾ ಜೇಮ್ಸ್ ಬಿಡುಗಡೆ ಬಳಿಕ ಮಾತನಾಡಿದ ಶಿವಣ್ಣ ಅಪ್ಪು ಟ್ಯಾಲೆಂಟ್ ಬಗ್ಗೆ ಮಾತಾಡಲು ಸಾಧ್ಯವೇ ಇಲ್ಲ. ಅವನ ಪ್ರತಿಯೊಂದು ಸಿನಿಮಾವನ್ನೂ ನಾನು ಎಂಜಾಯ್ ಮಾಡಿಕೊಂಡು ನೋಡುತ್ತಿದ್ದೆ. ಆಕ್ಷನ್, ಆಕ್ಟಿಂಗ್ ಎಲ್ಲವನ್ನೂ ಆತ ಚಿಕ್ಕ ವಯಸ್ಸಿನಲ್ಲೇ ಮೀರಿ ಬೆಳೆದಿದ್ದ. ಈ ಮೂಲಕ ಎಲ್ಲರಿಗೂ ಹತ್ತಿರವಾದಾತ ನಮ್ಮೊಂದಿಗೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದರು. ಇದನ್ನೂ ಓದಿ: ನಾನು ಜೇಮ್ಸ್ ಸಿನಿಮಾ ನೋಡಲಾರೆ : ಅಶ್ವಿನಿ ಪುನೀತ್ ರಾಜ್ ಕುಮಾರ್

    ಪುನೀತ್ ಪುಟ್ಟ ಮಗುವಿದ್ದಾಗದಿಂದ ಹಿಡಿದು ದೊಡ್ಡವನಾಗುವವರೆಗೂ ನೋಡಿದ್ದೇನೆ. ಕೇವಲ ನಟನೆಯಲ್ಲಿ ಮಾತ್ರವಲ್ಲ. ನಿಜ ಜೀವನದಲ್ಲೂ ಆತನ ಹೃದಯ ಶುದ್ಧ, ನಿಷ್ಕಲ್ಮಶವಾಗಿತ್ತು. ಈ ವಿಷಯವನ್ನೇ ಎಲ್ಲರೂ ಮೆಚ್ಚಿರುವುದು ಎಂದರು.

    ಜೇಮ್ಸ್ ಚಿತ್ರವನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಅದರ ಹಿಂದಿನ ಶ್ರಮ ಮೇಕಿಂಗ್‌ನಲ್ಲಿಯೇ ತಿಳಿಯುತ್ತದೆ. ಇಂದು ಜೇಮ್ಸ್ ಚಿತ್ರವನ್ನು ಒಬ್ಬ ಅಭಿಮಾನಿಯಾಗಿ ನೋಡಿದ್ದೇನೆ, ಎಂಜಾಯ್ ಮಾಡಿದ್ದೇನೆ. ಆದರೆ ಅಲ್ಲಲ್ಲಿ ಅಪ್ಪು ಇಲ್ಲ ಎಂಬುದು ನೆನೆಪಿಗೆ ಬರುತ್ತಿತ್ತು, ಕಣ್ಣಲ್ಲಿ ನೀರು ತರುತ್ತಿತ್ತು. ಅಪ್ಪು ಇಲ್ಲದೇ ಈ ಸಿನಿಮಾ ತೆರೆ ಮೇಲೆ ಬಂದಿರುವುದು ತುಂಬಾ ದುಃಖದ ವಿಷಯ ಎಂದರು. ಇದನ್ನೂ ಓದಿ: 80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

    ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಹೊಂದಿದೆ ಎಂದರೆ ಹೆಮ್ಮೆ ಎನಿಸುತ್ತದೆ. ಒಂದು ಕಡೆ ದುಃಖ ಆದರೆ ಇನ್ನೊಂದು ಕಡೆ ಸಂತೋಷವೂ ಇದೆ. ಅಪ್ಪು ಅಭಿಮಾನಿಗಳ ಮನಸ್ಸಲ್ಲಿ ಬೆರೆತಿದ್ದಾನೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೂ ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು.

    ಅಪ್ಪು ಸಿನಿಮಾದಲ್ಲಿ ಹೇಳಿರುವುದು ಕೇವಲ ಡೈಲಾಗ್ ಅಲ್ಲ. ಅವನ ವ್ಯಕ್ತಿತ್ವದಂತೆಯೇ ಡೈಲಾಗ್‌ಗಳನ್ನು ಬರೆಯಲಾಗಿದೆ. ಅಪ್ಪು ಸಿನಿಮಾಗೆ ನಾನು ಧ್ವನಿ ಕೊಟ್ಟಿರುವುದು ನನ್ನ ಭಾಗ್ಯ. ನಾನು ಸಿನಿಮಾ ನೋಡುತ್ತಿರುವಾಗ ತೆರೆ ಮೇಲೆ ಕೇವಲ ಅಪ್ಪು ಕಾಣಿಸುತ್ತಿದ್ದ. ನನ್ನ ಧ್ವನಿ ಅಲ್ಲ. ಇದನ್ನು ಅಭಿಮಾನಿಗಳು ಇಷ್ಟ ಪಟ್ಟರೆ ಅಷ್ಟೇ ನನಗೆ ಸಂತೋಷ ಎಂದು ಭಾವುಕರಾದರು.

  • ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

    ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

    ಬೆಂಗಳೂರು: ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಹೀಗಾಗಿ ಯಾರೂ ಕೂಡ ಮನೆ ಬಳಿ ಬರಬೇಡಿ ಎಂದು ಸ್ಯಾಂಡಲ್‍ವುಡ್ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿರುವ ಶಿವಣ್ಣ ತಮ್ಮ ಅಭಿಮಾನಿಗಳಲ್ಲಿ ಕೋರಿಕೆಯೊಂದನ್ನು ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಕೊರೊನಾ ವೈರಸ್ ಕುರಿತು ಜಾಗೃತಿ ಕೂಡ ಮೂಡಿಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು

    ವೀಡಿಯೋದಲ್ಲಿ ಹೇಳಿದ್ದೇನು..?
    ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕಾಗಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 12ರಂದು ನನ್ನ ಹುಟ್ಟಿದ ದಿನ. ಕಾರಣಾಂತರಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಿಮಗೆಷ್ಟು ಬೇಜಾರಾಗುತ್ತೋ ಅಷ್ಟೇ ಬೇಜಾರು ನನಗೂ ಆಗುತ್ತೆ. ಸೋಶಿಯಲ್ ಮೀಡಿಯಾ ಮುಖಾಂತರ ವಿಶ್ ತಿಳಿಸಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ನನಗೆ ಯಾವಾಗಲೂ ಇರಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ದಯವಿಟ್ಟು ಎಲ್ಲರೂ ಕೊರೊನಾ ನಿಯಮಗಳನ್ನು ಪಾಲಿಸಿ. ಎಲ್ಲೇ ಹೋದರೂ ಮಾಸ್ಕ್ ಹಾಕಿಕೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೊರೊನಾ ಲಸಿಕೆ ಪಡೆದುಕೊಳ್ಳಿ. ಆದಷ್ಟು ಬೇಗ ಕೊರೊನಾ ಕಡಿಮೆಯಾಗಿ ನಾವೆಲ್ಲರೂ ಒಟ್ಟು ಸೇರುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿ ಶಿವಣ್ಣ ಹೇಳಿದ್ದಾರೆ.

  • ಚಿತ್ರೋದ್ಯಮದ ಗಣ್ಯರಿಂದ ಸಿಎಂ ಭೇಟಿ – ಮನವಿ ಸಲ್ಲಿಕೆ

    ಚಿತ್ರೋದ್ಯಮದ ಗಣ್ಯರಿಂದ ಸಿಎಂ ಭೇಟಿ – ಮನವಿ ಸಲ್ಲಿಕೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಇದನ್ನೂ ಓದಿ: ಚಿತ್ರರಂಗದ ಸಮಸ್ಯೆಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇವೆ: ಶಿವಣ್ಣ

    ಕೆಲದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಶಿವಣ್ಣ ಭೇಟಿ ಮಾಡಿದ್ದರು. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರ್ನಾಟಕ ಚಲನಚಿತ್ರೋದ್ಯಮದ ನಿಯೋಗದ ಸದಸ್ಯರು ಭೇಟಿ ಮಾಡಿ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಕೆಲ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು.

    ಇದೇ ವೇಳೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಚಿತ್ರೋದ್ಯಮಕ್ಕೆ ಆಗಿರುವ ನಷ್ಟದ ಬಗ್ಗೆ ಸಿಎಂ ಜೊತೆಗೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಜೊತೆಗೆ ಮನವಿ ಮಾಡೋದಕ್ಕೆ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಬಂದಿದ್ದರು. ಕಲಾವಿದರು ಸಾಥ್ ಕೊಟ್ಟಿದ್ದರು. ಸಿಎಂ ಕೂಡ ಸಂಬಂಧ ಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಡುವ ಮಾತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಕಲಾವಿದರಾದ ಶಿವರಾಜ್ ಕುಮಾರ್, ಯಶ್, ದುನಿಯಾ ವಿಜಯ್, ಸಾಧು ಕೋಕಿಲ, ತಾರಾ ಅನುರಾಧ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಕೆ.ಮಂಜು, ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ಉಪಸ್ಥಿತರಿದ್ದರು.

  • ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ – ಶಿವಣ್ಣ ಮನೆಯಲ್ಲಿ ಇಂದು ಸಭೆ

    ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ – ಶಿವಣ್ಣ ಮನೆಯಲ್ಲಿ ಇಂದು ಸಭೆ

    ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸ್ಯಾಂಡಲ್‍ವುಡ್‍ನ ಕಾರ್ಮಿಕರ ಬಗ್ಗೆ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಸಭೆ ನಡೆಯಲಿದೆ.

    ಶಿವಣ್ಣನ ಮನೆಯಲ್ಲೇ ಸಭೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸ್ಯಾಂಡಲ್‍ವುಡ್‍ನ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಅದರ ಸಂಸ್ಥೆಗಳು ಸಭೆಯಲ್ಲಿ ಭಾಗಿಯಾಗಲಿವೆ. ಇಂದು ಮಧ್ಯಾಹ್ನ ಸುಮಾರು 12:30ಕ್ಕೆ ನಾಗವಾರದ ಶಿವರಾಜ್ ಕುಮಾರ್ ಮನೆಯಲ್ಲಿ ಮಹತ್ವದ ಸಭೆ ನಡೆಯಲಿದೆ.

    ಕೊರೊನಾದಿಂದ ಕಳೆದ ನಾಲ್ಕು ತಿಂಗಳಿಂದ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇತ್ತ ಸರ್ಕಾರ ಎಲ್ಲಾ ವರ್ಗಕ್ಕೂ ಪ್ಯಾಕೇಜ್ ಘೋಷಿಸಿದೆ. ಆದರೆ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಫೋಷಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ಶಿವಣ್ಣನ ಮನೆಯಲ್ಲಿ ಸಭೆ ನಡೆದ ನಂತರ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡುವ ಸಾಧ್ಯತೆ ಇದೆ. ಸಭೆಯಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಚಿತ್ರಮಂದಿರದ ಮಾಲೀಕರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

  • ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ- ಅಭಿಮಾನಿಗಳಲ್ಲಿ ಶಿವಣ್ಣ ಮನವಿ

    ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ- ಅಭಿಮಾನಿಗಳಲ್ಲಿ ಶಿವಣ್ಣ ಮನವಿ

    ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಈಗಾಗಲೇ ಅನೇಕ ನಟರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇದೇ ತಿಂಗಳ 12ರಂದು ಶಿವಣ್ಣ ಅವರ ಹುಟ್ಟುಹಬ್ಬವಿದೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳು ಶಿವಣ್ಣ ಅವರ ಮುಂದೆ ಜಮಾಯಿಸುತ್ತಿದ್ದರು. ಹೂವಿನ ಹಾರ, ಕೇಕ್ ತಂದು ಸಂಭ್ರಮಿಸುತ್ತಿದ್ದರು. ಆದರೆ ಈ ಕೊರೊನಾದಿಂದ ಯಾವುದೇ ಸಂಭ್ರಮಕ್ಕೂ ಅವಕಾಶವಿಲ್ಲ. ಹೀಗಾಗಿ ಈ ಬಾರಿ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರಿಸಿದ್ದಾರೆ.

    ನಟ ಶಿವರಾಜ್‍ಕುಮಾರ್ ಈ ಬಗ್ಗೆ ಇನ್ಸ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. “ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ತಿಂಗಳು ನನ್ನ ಹುಟ್ಟುಹಬ್ಬವಿದೆ. ಆದರೆ ಆ ದಿನ ನಾನು ಮನೆಯಲ್ಲಿ ಇರಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ” ಎಂದು ತಿಳಿಸಿದ್ದಾರೆ.

    ಹುಟ್ಟುಹಬ್ಬದ ದಿನ ನೀವೆಲ್ಲರೂ ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ನನಗೂ ಅಷ್ಟೆ ನೋವಾಗುತ್ತೆ. ಆದರೆ ಈ ಹುಟ್ಟುಹಬ್ಬದಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ನನಗೆ ತುಂಬಾ ಮುಖ್ಯ. ಹೀಗಾಗಿ ನೀವೆಲ್ಲರೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

    “ಈ ಕೊರೊನಾ ಮುಗಿದ ಮೇಲೆ ನಾವೆಲ್ಲರೂ ಒಂದು ಕಡೆ ಭೇಟಿ ಮಾಡೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. ಮತ್ತೊಂದು ವಿಚಾರ ಯಾರೂ ಕೂಡ ಈ ಕೊರೊನಾಗೆ ಭಯಪಡುವಂತ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿ ಇರಬೇಕು. ಈ ಕೊರೊನಾ ಹೋಗಲು ಸಾಮಾಜಿಕ ಅಂತರ ಕಾಪಾಡಿ, ನಿಯಮಗಳನ್ನು ಪಾಲಿಸಿ. ನಮ್ಮೆಲ್ಲರನ್ನೂ ಕಾಪಾಡಲು ಆ ದೇವರು ಇದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ. ಧೈರ್ಯವಾಗಿರಿ, ಸುರಕ್ಷಿತವಾಗಿರಿ” ಎಂದು ಅಭಿಮಾನಿಗಳಿಗೆ ಶಿವಣ್ಣ ಧೈರ್ಯ ತುಂಬಿದರು.

    https://www.instagram.com/tv/CCK89X2HBPq/?igshid=o7dkk1jgk0gd

  • ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಶಿವಣ್ಣ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ: ದರ್ಶನ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದರೆ ನಾನು ಹಿಂದೆ ನಿಲ್ಲುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಗಾಂಧಿ ನಗರದಲ್ಲಿ ಸಖತ್ ಚರ್ಚೆ ಆಗುತ್ತಿದ್ದು ಇಂದು ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ನವ ನಟ ಧ್ರುವನ್ ಹಾಗೂ ಪ್ರಿಯಾ ವಾರಿಯರ್ ನಟನೆ ಇನ್ನೂ ಹೆಸರಿಡದ ಸಿನಿಮಾ ಪೂಜೆಗೆ ಇವರಿಬ್ಬರೂ ಒಟ್ಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಣ್ಣ, ಒಳ್ಳೆ ಕಥೆ ಸಿಕ್ಕರೆ ಖಂಡಿತಾ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

    ನಾನು ದರ್ಶನ್ ಯಾವಗಲೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇವೆ. ಸಿನಿಮಾ ಮಾಡಿದರೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು. ಆ ರೀತಿಯ ಕಥೆ ಬಂದರೆ ಖಂಡಿತಾ ಇಬ್ಬರು ಒಟ್ಟಿಗೆ ಮಾಡುತ್ತೇವೆ ಎಂದು ಹೇಳಿದರು.

    ಈ ವೇಳೆ ಶಿವಣ್ಣನ ಜೊತೆಯಲ್ಲೇ ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಶಿವಣ್ಣ ಸೀನಿಯರ್ ಅವರು ಲಾಂಗ್ ಹಿಡಿದರೆ ಮುಂದೆ ನಿಂತರೆ ನಾನು ಅವರ ಹಿಂದೆ ನಿಲ್ಲುತ್ತೇನೆ. ಇನ್ನೊಂದು ಹೇಳಬೇಕು ಎಂದರೆ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡೋ ಡೈರೆಕ್ಟರ್ ಯಾರೂ ಇಲ್ಲ. ಈ ರೀತಿಯ ಡೈರೆಕ್ಟರ್ ಇದ್ದರೆ ಅವರು ಕಥೆ ಮಾಡಿಕೊಂಡು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ಸ್‍ ಗಳ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿವಣ್ಣ, ಈ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಮಫ್ತಿ ಸಿನಿಮಾದಲ್ಲಿ ನಟಿಸಿದ್ದರು. ನಂತರ ಜೋಗಿ ಪ್ರೇಮ್ ನಿರ್ದೇಶನ ದಿ ವಿಲನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಟಿಸಿದ್ದರು.

    ದರ್ಶನ್ ಕೂಡ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಈ ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.