ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದ ನಟ ಕಮಲ್ ಹಾಸನ್ (Kamal Haasan) ವಿಚಾರದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಶಿವಣ್ಣರನ್ನು (Shivanna) ಪ್ರಶ್ನಿಸಿದ್ದಕ್ಕೆ ಅವರು ಕೈಮುಗಿದಿದ್ದಾರೆ. ಇದನ್ನೂ ಓದಿ:ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್

ಇಂದು (ಮೇ 31) ‘ಕಣ್ಣಪ್ಪ’ ಚಿತ್ರದ ಪ್ರಚಾರಕ್ಕಾಗಿ ಮೋಹನ್ ಬಾಬು, ವಿಷ್ಣು ಮಂಚು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ಕಾರ್ಯಕ್ರಮಕ್ಕೆ ಶಿವಣ್ಣ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ಕಮಲ್ ಹಾಸನ್ ಕಾಂಟ್ರವರ್ಸಿ ಬಗ್ಗೆ ಕೇಳಿದ್ದಕ್ಕೆ ಕೈಮುಗಿದು ನಮಸ್ಕರಿಸುತ್ತಾ ತೆರಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿದೆ. ಇದನ್ನೂ ಓದಿ:ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ
ತಮಿಳು ನಟ ಮಾತಾಡಿರೋದರ ಬಗ್ಗೆ ತಪ್ಪು ಎಂದು ಎಲ್ಲೂ ಶಿವಣ್ಣ ಹೇಳುತ್ತಿಲ್ಲವಲ್ಲ ಎಂದು ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಇಷ್ಟೆಲ್ಲಾ ಆದ ಮೇಲೆಯೂ ಶಿವಣ್ಣ ಮೌನವಹಿಸಿರೋದ್ಯಾಕೆ? ಕಮಲ್ ಬಗ್ಗೆ ಕೇಳ್ತಿದ್ದಂತೆ ಕೈಮುಗಿದು ಹೋಗಿದ್ದು ಯಾಕೆ. ಹಾಗಾದ್ರೆ ಕಮಲ್ ಮಾಡಿದ್ದು ಸರಿ ಅಂತನಾ? ತಪ್ಪು ಅಂತನಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಶಿವಣ್ಣ ಉತ್ತರದ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿದೆ.
ಇದೆಲ್ಲದರ ನಡುವೆ ಹೇಳಿಕೆ ಬಗ್ಗೆ ನಾನು ಬದ್ಧನಾಗಿದ್ದೇನೆ ಎಂದ ಕಮಲ್‌ಗೆ ಕನ್ನಡಪರ ಸಂಘಟನೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಜೂನ್ 5ರಂದು ರಿಲೀಸ್‌ಗೆ ಸಜ್ಜಾಗಿರುವ ‘ಥಗ್ ಲೈಫ್’ ಚಿತ್ರವನ್ನು ರಾಜ್ಯದಲ್ಲಿ ಬ್ಯಾನ್ ಮಾಡಲಾಗುತ್ತಿದೆ.

ನಿನ್ನೆ (ಮೇ 30) ಮತ್ತೆ ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು. ಅಲ್ಲದೇ ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದಿದ್ದರು. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.


ಸುದ್ದಿಗೋಷ್ಠಿಯಲ್ಲಿ ಶಿವಣ್ಣ (Shivanna) ಮಾತನಾಡಿ, ‘ಕಣ್ಣಪ್ಪ’ ಚಿತ್ರ ಮಾಡಲು ಧೈರ್ಯ ಬೇಕು. ವಿಷ್ಣು ಮಂಚು ಅವರು ಭಕ್ತಿಯಿಂದ ಚಿತ್ರ ಮಾಡಿದ್ದಾರೆ. ಚಿತ್ರದ ಲುಕ್ ಅದ್ಭುತವಾಗಿ ಮೂಡಿ ಬಂದಿದೆ. ವಿಷ್ಣು ಈ ರೀತಿಯ ಸಿನಿಮಾ ಮಾಡಿದ್ದಕ್ಕೆ ಅವರ ಮೇಲಿನ ಗೌರವ ಹೆಚ್ಚಾಯ್ತು ಎಂದರು.
ಮೋಹನ್ ಬಾಬು ಈ ತರ ಸಿನಿಮಾ ಒಪ್ಪಿ ಮಾಡಿದ್ದು ಗ್ರೇಟ್. ಜನ ಈ ತರ ಸಿನಿಮಾ ನೋಡಬೇಕು. ಕಾಳಹಸ್ತಿ ಅಂದರೆ ಏನು ತಿಳಿದುಕೊಳ್ಳಬೇಕು. ನ್ಯೂಜಿಲ್ಯಾಂಡ್‌ಗೆ ತೆರಳಿ ಶೂಟಿಂಗ್ ಮಾಡಿದ್ದಾರೆ. ನಿರ್ದೇಶಕರು ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆ. 100% ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂದಿದ್ದಾರೆ. ಶಿವನ ಲೀಲೆ ಯಾವಾಗಲೂ ಕಾಪಾಡುತ್ತದೆ ಎಂದು ಚಿತ್ರತಂಡಕ್ಕೆ ನಟ ಭರವಸೆ ತುಂಬಿದರು.








ಕೆ.ಎಲ್ ರಾಹುಲ್ ಹೋಂ ಗ್ರೌಂಡ್ ವೈರಲ್ ವಿಡಿಯೋ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿ, ರಾಹುಲ್ ಕರ್ನಾಟಕದವರು. ಅವರು ಎಲ್ಲೇ ಆಡಿದ್ರು, ಕರ್ನಾಟಕದವರು ತಾನೇ ಎಂದಿದ್ದಾರೆ. ನನಗೆ ಅವರ ಬ್ಯಾಟಿಂಗ್ ತುಂಬಾ ಇಷ್ಟ. ಆವರು ಆಡಿದಾಗಲೆಲ್ಲಾ ಔಟೇ ಆಗಬಾರದು ಎಂದುಕೊಳ್ಳುತ್ತಿರುತ್ತೇನೆ. ವಿರಾಟ್ ಕೊಹ್ಲಿ ಚೆನ್ನಾಗಿ ಆಡ್ತಾರೆ. ಹಾಗೆಯೇ ರಾಹುಲ್ ಬ್ಯಾಟಿಂಗ್ ಸ್ಟೈಲ್ ನೋಡಿದಾಗ ಹೆಮ್ಮೆ ಎಂದೆನಿಸುತ್ತದೆ. ಯಾರ್ ಗೆದ್ರೂ ಕೂಡ ಕಪ್ ಇಂಡಿಯಾದಲ್ಲೇ ಇರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.















