Tag: shivanagowda nayaka

  • ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಕೊಪ್ಪಳ: ಇಷ್ಟು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ (Congress) ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಈಗ ಕಾಂಗ್ರೆಸ್‌ಗೆ 75-80 ಸ್ಥಾನ ಬಂದರೆ ನನ್ನ ಬೆರಳನ್ನೇ ಕತ್ತರಿಸಿ ಕೊಡುತ್ತೇನೆ ಎಂದು ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ (Shivanagowda Nayaka) ಹೇಳಿದ್ದಾರೆ.

    ಕೊಪ್ಪಳದ (Koppal) ಕುಷ್ಟಗಿಯಲ್ಲಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಷ್ಟು ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡಿದರೆ ಈಗ ಆಧುನಿಕ ಅಂಬೇಡ್ಕರ್ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಎಸ್‌ಸಿ (SC), ಎಸ್‌ಟಿ (ST) ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್

    ಬಸವರಾಜ ಬೊಮ್ಮಾಯಿ ಅವರಿಗೆ ಎಸ್‌ಸಿ, ಎಸ್‌ಟಿ ಅವರ ಬಗ್ಗೆ ಅಪಾರ ಕಾಳಜಿ ಇದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ರಾಜಾಹುಲಿಗಳು ಇದ್ದಂತೆ. ಯಡಿಯೂರಪ್ಪನವರು ಮಹಾರಾಜಾಹುಲಿಯಾದರೆ, ಬೊಮ್ಮಾಯಿ ಅವರು ರಾಜಾಹುಲಿ ಎಂದರು. ಇದನ್ನೂ ಓದಿ: ಅಂಬೇಡ್ಕರ್, ಸಂವಿಧಾನ ನೆನೆದು ಭಾವುಕರಾದ ಕಾಗೇರಿ

    Live Tv
    [brid partner=56869869 player=32851 video=960834 autoplay=true]

  • ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳ್ಬೇಡಿ – ಬಿಜೆಪಿ ಶಾಸಕ ಶಿವನಗೌಡ ನಾಯಕ ದರ್ಪ

    ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳ್ಬೇಡಿ – ಬಿಜೆಪಿ ಶಾಸಕ ಶಿವನಗೌಡ ನಾಯಕ ದರ್ಪ

    ರಾಯಚೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಕುರಿತಂತೆ ಪ್ರಶ್ನಿಸಿದಾಗ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ಮಾಧ್ಯಮದವರ ಮೇಲೆಯೇ ದರ್ಪ ತೋರಿದ್ದಾರೆ.

    ರಾಯಚೂರಿನ ದೇವದುರ್ಗದ ವೀರಗೋಟದಲ್ಲಿ ಸದನದಿಂದ ಹೊರಬಂದ ವಿಚಾರದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವ ಸ್ಥಳ ಇದಲ್ಲ. ಹುಚ್ಚು ಹುಚ್ಚಾಗಿ ಪ್ರಶ್ನೆ ಕೇಳಬೇಡಿ. ಯಡಿಯೂರಪ್ಪನವರ ಬಗ್ಗೆ, ಆಡಿಯೋ ಬಗ್ಗೆ ನೀವು ಏನೇ ಕೇಳಿದರೂ ಪ್ರತಿಕ್ರಿಯೆ ನೀಡಲ್ಲ. ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಬಗ್ಗೆ ಕೇಳಿ ಮಾತನಾಡುತ್ತೇನೆ ಎಂದು ಕಿಡಿಕಾರಿದ್ದಾರೆ.

    ಜಿಲ್ಲೆಯ ನಡೆಯುತ್ತಿರುವ ಬಹುದೊಡ್ಡ ಲಿಂಗಪೂಜೆ ಕಾರ್ಯಕ್ರಮ ಇದಾಗಿದೆ. ಇಡೀ ನಾಡಿನ ಜನರು ಸೇರಿ ಮಾಡುವಂತಹ ಕಾರ್ಯಕ್ರಮವಾಗಿದೆ. ಇದೂ ಒಂದು ತಾಲೂಕು ಮತ್ತು ಜಿಲ್ಲೆಗೆ ಸೀಮಿತವಾದ ಕಾರ್ಯಕ್ರಮವಲ್ಲ, ನಾನು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಕಾರ್ಯಕ್ರಮದ ತಯಾರಿ ನಿರಂತರವಾಗಿ ನಡೆದಿದೆ. ಇಡೀ ದೇಶದಲ್ಲಿ ದಾಖಲೆ ಮಾಡುವ ಕಾರ್ಯಕ್ರಮವಾಗಿದೆ ಎಂದರು.

    ಸದನ ಬಿಟ್ಟು ದೇವದುರ್ಗಕ್ಕೆ ಮರಳಿರುವ ಶಾಸಕ ಶಿವನಗೌಡ ನಾಯಕ, ರಾಯಚೂರಿನ ದೇವದುರ್ಗ ಪ್ರವಾಸಿಮಂದಿರದಲ್ಲಿ ಶಿವನಗೌಡ ಇಂದು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳನ್ನ ಐಬಿಗೆ ಕರೆಸಿಕೊಂಡು ಕ್ಷೇತ್ರದ ಕೆಲಸದಲ್ಲಿ ಶಾಸಕರು ತೊಡಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv